Tag: ತಾಳಿ

  • ತಾಳಿ ಕಟ್ಟುವಾಗ್ಲೇ ಕೈ ಅಡ್ಡ ಹಿಡಿದ ವಧು- ಮುರಿದು ಬಿದ್ದ ಮದ್ವೆಯ ವೀಡಿಯೋ ವೈರಲ್

    ತಾಳಿ ಕಟ್ಟುವಾಗ್ಲೇ ಕೈ ಅಡ್ಡ ಹಿಡಿದ ವಧು- ಮುರಿದು ಬಿದ್ದ ಮದ್ವೆಯ ವೀಡಿಯೋ ವೈರಲ್

    ಚಿತ್ರದುರ್ಗ: ಹೆಣ್ಣು ನೋಡುವಲ್ಲಿಂದ ಹಿಡಿದು ಇನ್ನೇನು ತಾಳಿ ಕಟ್ಟುವವರೆಗಿನ ಎಲ್ಲಾ ಶಾಸ್ತ್ರ, ಸಿದ್ಧತೆಗಳು ನಡೆದ ಬಳಿಕ ಮಂಟಪದಲ್ಲಿಯೇ ಕೆಲವೊಂದು ಮದುವೆಗಳು ಮುರಿದುಬಿದ್ದ ಪ್ರಸಂಗಗಳನ್ನು ನಾವು ನೋಡಿದ್ದೇವೆ, ಕೇಳಿದ್ದೇವೆ. ಇದೀಗ ಕೋಟೆನಾಡು ಚಿತ್ರದುರ್ಗದಲ್ಲಿ (Chitradurga) ಅಂಥದ್ದೇ ಘಟನೆಯೊಂದು ನಡೆದಿದೆ.

    ಹೌದು. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ (Hosadurga Taluku) ಚಿಕ್ಕಬ್ಯಾಲದಕೆರೆ ಗ್ರಾಮದಲ್ಲಿ ತಾಳಿ ಕಟ್ಟಿಸಿಕೊಳ್ಳಲು ವಧು ನಿರಾಕರಿಸಿದ ಹಿನ್ನೆಲೆಯಲ್ಲಿ ಮದುವೆ ಕ್ಯಾನ್ಸಲ್ (Marriage Cancel) ಆಗಿದೆ. ವರ ತಾಳಿಕಟ್ಟುವಾಗ ವಧು ತಾಳಿಗೆ ಕೈ ಅಡ್ಡ ಹಿಡಿದು ತಡೆದ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

    ನಡೆದಿದ್ದೇನು..?: ಚಿಕ್ಕಬ್ಯಾಲದಕೆರೆ ಗ್ರಾಮದ ಮಂಜುನಾಥ್ ಹಾಗೂ ಚಳ್ಳಕೆರೆ ತಾಲೂಕಿನ ತಿಪ್ಪರೆಡ್ಡಿಹಳ್ಳಿಯ ಐಶ್ವರ್ಯಾ ಜೊತೆ ವಿವಾಹ ಫಿಕ್ಸ್ ಆಗಿತ್ತು. ಆದರೆ ಗುರುವಾರ ಬೆಳಗ್ಗೆ ಗ್ರಾಮದ ಭೈರವೇಶ್ವರ ಕಲ್ಯಾಣ ಮಂಟಪದಲ್ಲಿ ಮದುವೆಯ ಮುಹೂರ್ತ ನಡೆಯುವ ವೇಳೆ ವರನಿಗೆ ವಧು ಶಾಕ್ ನೀಡಿದ್ದಾಳೆ. ವರ ತಾಳಿಕಟ್ಟುವ ವೇಳೆ ಮಂಜುನಾಥ್ ನನಗೆ ಇಷ್ಟ ಇಲ್ಲವೆಂದು ಹೇಳಿದ್ದಾಳೆ. ಯುವತಿ ನಡೆಗೆ ಯುವಕನ ಸಂಬಂಧಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಆಗ ಯುವತಿ ಮನೆಯವರು ಹಾಗೂ ಯುವಕನ ಕುಟುಂಬಸ್ಥರ ನಡುವೆ ವಾಗ್ವಾದ ನಡೆದಿದೆ. ಇದನ್ನೂ ಓದಿ: 4 ಲಕ್ಷ ರೂ.ಗೆ ತಾಯಿಯಿಂದ್ಲೇ ಮಗಳ ಮಾರಾಟ – ಖರೀದಿಸಿ ಮದ್ವೆಯಾದ ವ್ಯಕ್ತಿಯಿಂದ ಅನೈತಿಕ ಚಟುವಟಿಕೆಗೆ ಒತ್ತಾಯ

    ಈ ವೇಳೆ ಎರಡು ಕಡೆಯ ಸಂಬಂಧಿಗಳು ವಧುವಿನ ಮನವೊಲಿಸಲು ಯತ್ನಿಸಿದ್ರು ಕೂಡ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಮದುವೆ ಮುರಿದುಬಿದ್ದಿದೆ. ಮದುವೆಗೆ ಆಗಮಿಸಿದ ಜನರು, ಸಂಬಂಧಿಗಳು ವಧುಗೆ ಹಿಡಿಶಾಪ ಹಾಕಿದ್ದಾರೆ. ವರನ ಕನಸು ನುಚ್ಚು ನೂರು ಮಾಡಿದಳು. ಮೊದಲೇ ತಿಳಿಸಿದ್ರೆ ಸಮಸ್ಯೆ ಎದುರಾಗ್ತಿರಲಿಲ್ಲ ಅಂತ ಹಿಡಿಶಾಪ ಹಾಕಿದ್ದಾರೆ.

    ಮದುವೆ ನಿರಾಕರಣೆಗೆ ಈವರೆಗೆ ಕಾರಣ ತಿಳಿದುಬಂದಿಲ್ಲ. ಆದರೆ ಕುಟುಂಬಸ್ಥರ ಒತ್ತಾಯದ ಮೇರೆಗೆ ಮದುವೆಗೆ ಯುವತಿ ಸಮ್ಮತಿಸಿದ್ದು, ಆಕೆ ತಾಳಿಕಟ್ಟುವ ವೇಳೆ ಧೈರ್ಯ ಮಾಡಿ ವಿವಾಹ ನಿರಾಕರಿಸಿದ್ದಾಳೆಂಬ ಮಾತುಗಳು ಕೇಳಿಬಂದಿವೆ. ಸದ್ಯ ಪ್ರಕರಣ ಶ್ರೀರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಹಾರ ಬದಲಾಯಿಸಿಕೊಂಡ ಆದ್ರೆ ತಾಳಿ ಮಾತ್ರ ಮದುಮಗಳ ಅಕ್ಕನಿಗೆ ಕಟ್ಟಿದ!

    ಹಾರ ಬದಲಾಯಿಸಿಕೊಂಡ ಆದ್ರೆ ತಾಳಿ ಮಾತ್ರ ಮದುಮಗಳ ಅಕ್ಕನಿಗೆ ಕಟ್ಟಿದ!

    ಪಾಟ್ನಾ: ಮದುವೆ ಮಂಟಪದಲ್ಲಿ ವರನೊಬ್ಬ ಹಾರ ಬದಲಾಯಿಸಿಕೊಂಡು ಬಳಿಕ ತಾಳಿ ಮಾತ್ರ ಮದುಮಗಳ ಸಹೋದರಿಗೆ ಕಟ್ಟಿದ (Marriage Twist) ವಿಲಕ್ಷಣ ಘಟನೆಯೊಂದು ಬಿಹಾರ (Bihar) ದ ಸರನ್ ಜಿಲ್ಲೆಯಲ್ಲಿ ನಡೆದಿದೆ.

    ಛಪ್ರಾ ನಿವಾಸಿ ರಾಜೇಶ್ ಕುಮಾರ್ ಗೆ ಗೆಳತಿ ಪುತುಲ್ ಎಂಬಾಕೆಯ ಸಹೋದರಿ ರಿಂಕು ಕುಮಾರಿ ಎಂಬಾಕೆಯ ಜೊತೆ ಮದುವೆ ನಿಶ್ಚಯವಾಗಿತ್ತು. ಅಂತೆಯೇ ಮದುವೆಗೆ ಎಲ್ಲಾ ತಯಾರಿಗಳು, ಸಂಪ್ರದಾಯಗಳು ನಡೆಯುತ್ತಿದ್ದವು. ಅಲ್ಲದೆ ಇನ್ನೇನು ಹಾರ ಬದಲಾಯಿಸಿಕೊಂಡು ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ಗೆಳತಿ ಪುತುಲ್ ನಿಂದ ಕರೆ ಬಂದಿದೆ. ಆದರೆ ಈ ಕರೆಯು ಬೆದರಿಕೆ ಕರೆಯಾಗಿತ್ತು.

    ಹೌದು. ನೀನು ಆಕೆಯನ್ನು ಮದುವೆಯಾದರೆ ನಾನು ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದಳು. ಇದನ್ನು ಕೆಳಿದ ವರ ಕೂಡಲೇ ಮದುವೆ ನಿಲ್ಲಿಸಿದ್ದು, ಸ್ಥಳದಿಂದ ತೆರಳಿದ್ದಾನೆ. ವರನ ಈ ನಡೆ ಕಂಡು ಮದುವೆಗೆ ಆಗಮಿಸಿದವರಿಗೆ ಶಾಕ್ ನೀಡಿತ್ತು. ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ ರಾಜೇಶ್ ಸ್ಪಷ್ಟನೆ ನೀಡಿದ್ದಾನೆ. ಛಾಪ್ರಾದಲ್ಲಿ ನಾನು ಹಾಗೂ ಪುತುಲ್ ಆಗಾಗ ಭೇಟಿಯಾಗುತ್ತಿದ್ದೆವು. ನಾನು ಆಕೆಯನ್ನು ಪ್ರೀತಿ(Love) ಸುತ್ತಿದ್ದೆ ಎಂದು ತನ್ನ ಕುಟುಂಬಕ್ಕೆ ಬಹಿರಂಗಪಡಿಸಿದನು. ಇದನ್ನೂ ಓದಿ: ಚುನಾವಣಾ ಅಧಿಕಾರಿಗಳಿಂದ ರಾಜ್ಯಾದ್ಯಂತ 145 ಕೋಟಿ ರೂ. ನಗದು ಜಪ್ತಿ – ಯಾವ ಜಿಲ್ಲೆಯಲ್ಲಿ ಎಷ್ಟು ಸೀಜ್?

    ಇತ್ತ ರಿಂಕು ಜೊತೆ ಮದುವೆ ಫಿಕ್ಸ್ ಆಗುತ್ತಿದ್ದಂತೆಯೇ ಪುತುಲ್ ವಿಚಲಿತಗೊಂಡಿದ್ದಾಳೆ. ಹೀಗಾಗಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಳು ಎಂದು ಕೂಡ ತಿಳಿಸಿದ್ದಾನೆ. ರಾಜೇಶ್ ಈ ರೀತಿ ಹೇಳುತ್ತಿದ್ದಂತೆಯೇ ಎರಡೂ ಕುಟುಂಬಗಳ ನಡುವೆ ಮಾತಿಗೆ ಮಾತು ಬೆಳೆದಿದೆ. ಜಗಳ ಜೋರಾಗುತ್ತಿದ್ದಂತೆಯೇ ಮದುವೆಗೆ ಆಗಮಿಸಿದ ಕೆಲ ಸಂಬಂಧಿಕರು ಕೂಡಲೇ ಪೊಲೀಸರಿಗೆ ಮಾಹಿತಿ ರವಾನಿಸಿ ಸ್ಥಳಕ್ಕೆ ಕರೆಸುವ ಮೂಲಕ ಪರಿಸ್ಥಿತಿ ತಿಳಿಗೊಳಿಸಲು ಮನವಿ ಮಾಡಿದ್ದಾರೆ.

    ಅಂತೆಯೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಎರಡೂ ಕುಟುಂಬಗಳನ್ನು ಕುಳಿತುಕೊಳ್ಳಿಸಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ರಾಜೇಶ್, ನನಗೆ ರಿಂಕು ಜೊತೆ ಮದುವೆ ಫಿಕ್ಸ್ ಆಗುವ ಮುಂಚೆಯೇ ಆಕೆಯ ಸಹೋದರಿಯಾಗಿರುವ ಪುತುಲ್ ಪರಿಚಯ ಎಂದು ಹೇಳಿದ್ದಾನೆ. ಮಾತುಕತೆಯ ಬಳಿಕ ರಾಜೇಶ್, ರಿಂಕು ಬದಲು ಪುತುಲ್ ಗೆ ತಾಳಿ ಕಟ್ಟಿದ್ದಾನೆ. ಈ ಮೂಲಕ ಪ್ರಕರಣ ಸುಖಾಂತ್ಯ ಕಂಡಿತ್ತು.

  • ನನ್ನ ಮೂರ್ತಿ ಬಿಟ್ಟು ನನ್ನ ಕುತ್ತಿಗೆಗೆ ಬೇರೆ ಯಾರೂ ತಾಳಿ ಕಟ್ಟಬಾರದು- ಯುವತಿಯ ಹರಕೆ

    ನನ್ನ ಮೂರ್ತಿ ಬಿಟ್ಟು ನನ್ನ ಕುತ್ತಿಗೆಗೆ ಬೇರೆ ಯಾರೂ ತಾಳಿ ಕಟ್ಟಬಾರದು- ಯುವತಿಯ ಹರಕೆ

    ಚಾಮರಾಜನಗರ: ನನ್ನ ಮೂರ್ತಿ ಬಿಟ್ಟು ನನ್ನ ಕುತ್ತಿಗೆಗೆ ಬೇರೆ ಯಾರೂ ತಾಳಿ ಕಟ್ಟಬಾರಾದು ಯುವತಿಯೊಬ್ಬಳು ದೇವರಿಗೆ ಹರಕೆ ಹೊತ್ತ ಪ್ರಸಂಗ ನಡೆದಿದೆ.

    ಚಾಮರಾಜನಗರ ತಾಲೂಕಿನ ಮುಕ್ಕಡಹಳ್ಳಿಯ ಮಾಯಮ್ಮ ದೇವಮ್ಮ (Mayamma Devamma) ದೇವತೆಗೆ ಪ್ರೇಮಿಯೊಬ್ಬಳ ಹರಕೆ ಇದಾಗಿದೆ. ಯುವತಿ (Young Girl Letter) ತನ್ನ ಹರಕೆಯನ್ನು ಚೀಟಿಯೊಂದರಲ್ಲಿ ಬರೆದು ಹುಂಡಿಗೆ ಹಾಕಿದ್ದಾಳೆ. ಇದನ್ನೂ ಓದಿ: 3ನೇ ಮದುವೆಯಾದ್ರೂ 2ನೇ ಗಂಡನೊಂದಿಗೆ ಸಂಬಂಧ- ರೊಚ್ಚಿಗೆದ್ದು ಪತ್ನಿಯನ್ನೇ ಕೊಲೆಗೈದ ಮೂರನೇ ಪತಿ

    ಪ್ರೇಮಿಯ ಈ ಚೀಟಿ ಹುಂಡಿ ಎಣಿಕೆ ಸಂದರ್ಭದಲ್ಲಿ ಸಿಕ್ಕಿದೆ. ದೇವರೇ ನನಗೆ ಹೆಣ್ಣನ್ನು ಕರುಣಿಸು ಎಂದು ಬರೆದಿದ್ದ ಪತ್ರ ಮೊನ್ನೆ ಚಾಮರಾಜನಗರದ ಚಾಮರಾಜೇಶ್ವರನ ಹುಂಡಿಯಲ್ಲಿ ಸಿಕ್ಕಿತ್ತು. ಇದೀಗ ಮುಕ್ಕಡಹಳ್ಳಿ ಮಾಯಮ್ಮದೇವಮ್ಮ ದೇವಸ್ಥಾನದ ಹುಂಡಿಯಲ್ಲಿ ಮತ್ತೊಂದು ರೀತಿಯ ಪತ್ರ ದೊರೆತಿದ್ದು, ಗಮನಸೆಳೆದಿದೆ.

    Live Tv
    [brid partner=56869869 player=32851 video=960834 autoplay=true]

  • ವರನ ಎದುರೇ ಲವ್ವರ್‌ಗೆ ಕರೆ ಮಾಡಿದ ಹುಡುಗಿ – ತಾಳಿ ಕಿತ್ತುಕೊಂಡು ಶಾಕ್ ಕೊಟ್ಟ ಪ್ರಿಯತಮ

    ವರನ ಎದುರೇ ಲವ್ವರ್‌ಗೆ ಕರೆ ಮಾಡಿದ ಹುಡುಗಿ – ತಾಳಿ ಕಿತ್ತುಕೊಂಡು ಶಾಕ್ ಕೊಟ್ಟ ಪ್ರಿಯತಮ

    ಚೆನ್ನೈ: ತಾನು ಪ್ರೀತಿಸಿದ ಹುಡುಗಿ ಬೇರೊಬ್ಬ ವ್ಯಕ್ತಿಯನ್ನು ಮದುವೆಯಾಗುತ್ತಿರುವುದನ್ನು ತಡೆಯಲು 24 ವರ್ಷದ ಯುವಕ ವರನ(Groom) ಕೈ ತಾಳಿಯನ್ನು (Mangalsutra) ಕಿತ್ತುಕೊಂಡು ಪ್ರಿಯತಮೆ ಕೊರಳಿಗೆ ಕಟ್ಟಲು ಯತ್ನಿಸಿದ್ದಾನೆ.

    ಚೆನ್ನೈನ ಐಷಾರಾಮಿ ಹೋಟೆಲ್‍ನಲ್ಲಿ ಕೆಲಸ ಮಾಡುತ್ತಿದ್ದ ಯುವಕ ಮತ್ತು ಯುವತಿ ಇಬ್ಬರೂ ಪ್ರೀತಿಸುತ್ತಿದ್ದರು. ಆದರೆ ಈ ಮದುವೆ ನಿಲ್ಲಿಸಿ ತನ್ನನ್ನು ಹೇಗಾದರೂ ಕರೆದುಕೊಂಡು ಹೋಗುವಂತೆ ಯುವತಿ ತನ್ನ ಪ್ರಿಯಕರನಿಗೆ ಮೊಬೈಲ್(Mobile) ಮೂಲಕ ಸಂದೇಶ ಕಳುಹಿಸಿದ್ದಳು. ಹೀಗಾಗಿ ಬೆಳಗ್ಗೆಯೇ ಮದುವೆ(Marriage) ಮನೆಗೆ ಎಂಟ್ರಿ ಕೊಟ್ಟ ಯುವಕ ವರ ತನ್ನ ಪ್ರಿಯತಮೆಗೆ ಕಟ್ಟಲು ಮುಂದಾಗುತ್ತಿದ್ದಂತೆ ವೇದಿಕೆ ಏರಿ ತಾಳಿಯನ್ನು (Thali) ಕಿತ್ತುಕೊಂಡಿದ್ದಾನೆ. ನಂತರ ಆಕೆಯ ಕುತ್ತಿಗೆಗೆ ಕಟ್ಟಲು ಪ್ರಯತ್ನಿಸಿದ್ದಾನೆ. ಆದರೆ ಈ ವೇಳೆ ಅಲ್ಲಿದ್ದ ಜನರು ಆತನನ್ನು ತಡೆದು ಹಿಗ್ಗಾಮುಗ್ಗ ಥಳಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ಸಿನವರಿಗೆ ತಾಕತ್, ಧಮ್ ಇದ್ದರೇ ನಮ್ಮನ್ನು ತಡೆಯಲಿ: ಬೊಮ್ಮಾಯಿ ಸವಾಲು

    ಶುಕ್ರವಾರ ಬೆಳಗ್ಗೆ ಚೆನ್ನೈನ(Chennai) ಮದುವೆ ಮಂಟಪದಲ್ಲಿ ಈ ಘಟನೆ ನಡೆದಿದ್ದು, ಘಟನೆ ಬಳಿಕ ಪೊಲೀಸರಿಗೆ (Police) ಕರೆ ಮಾಡಿ ಮಾಹಿತಿ ನೀಡಲಾಗಿದೆ. ನಂತರ ತನಿಖೆ ಆರಂಭಿಸಿದ ಪೊಲೀಸರಿಗೆ ಯುವಕ ಮತ್ತು ಯುವತಿ ಪ್ರೀತಿ ಮಾಡುತ್ತಿದ್ದು, ಹುಡುಗಿ ಕುಟುಂಬಸ್ಥರ ಒತ್ತಾಯದ ಮೇರೆಗೆ ಮದುವೆಯಾಗಲು ಮುಂದಾಗಿದ್ದಾಳೆ. ಹೀಗಾಗಿ ಪ್ರಿಯಕರ (Lover) ಮದುವೆ ಮಂಟಪಕ್ಕೆ ಬಂದಿದ್ದಾನೆ ಎಂಬ ವಿಚಾರ ತಿಳಿದು ಬಂದಿದೆ. ಇದನ್ನೂ ಓದಿ: ಹಿರಿಯ ಅಧಿಕಾರಿಯಿಂದ ಅವಮಾನವಾಗಿದೆ – ಠಾಣೆಯೊಳಗೆ ಗುಂಡು ಹಾರಿಸಿಕೊಂಡು ಪೊಲೀಸ್‌ ಆತ್ಮಹತ್ಯೆ

    ಇದರಿಂದಾಗಿ ವರನ ಕುಟುಂಬಸ್ಥರು ಮತ್ತು ಹುಡುಗಿ ಮನೆಯವರ ನಡುವೆ ಜಗಳವಾಗಿ ಮದುವೆ ರದ್ದುಗೊಳಿಸಲಾಯಿತು. ಇದೀಗ ಕಲ್ಯಾಣ ಮಂಟಪಕ್ಕೆ ಒಳನುಗ್ಗಿದ ಯುವಕನ ಮನೆಯವರು ಮತ್ತು ಹುಡುಗಿಯ ಮನೆಯವರ ನಡುವೆ ಮದುವೆ ಮಾಡಲು ಮಾತುಕತೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮದುವೆ ಮನೆಯಲ್ಲಿ ಕರಿಮಣಿ ಪೋಣಿಸಿದ ಶಾಸಕ ರೇಣುಕಾಚಾರ್ಯ

    ಮದುವೆ ಮನೆಯಲ್ಲಿ ಕರಿಮಣಿ ಪೋಣಿಸಿದ ಶಾಸಕ ರೇಣುಕಾಚಾರ್ಯ

    ದಾವಣಗೆರೆ: ಒಂದಲ್ಲ ಒಂದು ವಿನೂತನ ಕೆಲಸ ಮಾಡಿ ಸುದ್ದಿಯಾಗುತ್ತಿರುವ ಸಿಎಂ ರಾಜಕೀಯ ಕಾರ್ಯದರ್ಶಿವ, ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ ಇದೀಗ ಮದುವೆ ಮನೆಯಲ್ಲಿ ಕರಿಮಣಿ ಪೋಣಿಸುವ ಮೂಲಕ ಸುದ್ದಿಯಾಗಿದ್ದಾರೆ.

    ಹೌದು. ಮಾಸಡಿ ಗ್ರಾಮದ ಮಾಜಿ ಗ್ರಾಮಪಂಚಾಯಿತಿ ಅಧ್ಯಕ್ಷರ ಸಹೋದರ ಬಸವರಾಜ್ ಅವರ ಮದುವೆ ನಿಗದಿಯಾಗಿತ್ತು. ಅಂತೆಯೇ ತರಗನಹಳ್ಳಿ ಗ್ರಾಮದ ಬಸವೇಶ್ವರ ಸಮುದಾಯ ಭವನದಲ್ಲಿ ಮದುವೆ ಕಾರ್ಯಕ್ರಮ ಇತ್ತು. ಈ ಕಾರ್ಯಕ್ರಮದಲ್ಲಿ ಶಾಸಕರು ಭಾಗಿಯಾಗಿದ್ದರು.

    ಈ ವೇಳೆ ಕರಿಮಣಿ ಪೋಣಿಸುವ ಮೂಲಕ ನವ ಜೋಡಿಗೆ ಶಾಸಕರು ಶುಭ ಕೋರಿದ್ದಾರೆ. ಇದನ್ನೂ ಓದಿ: ಹೊರಗುತ್ತಿಗೆ ನೇಮಕಾತಿಯಲ್ಲಿ ಇನ್ಮುಂದೆ 33% ಮಹಿಳೆಯರಿಗೆ ಮೀಸಲು

     

  • ಮದುವೆದಿನ ವಧುನಿಂದ ತಾಳಿ ಕಟ್ಟಿಸಿಕೊಂಡ ವರ- ಟ್ರೋಲ್ ಮಾಡಿದ ನೆಟ್ಟಿಗರು

    ಮದುವೆದಿನ ವಧುನಿಂದ ತಾಳಿ ಕಟ್ಟಿಸಿಕೊಂಡ ವರ- ಟ್ರೋಲ್ ಮಾಡಿದ ನೆಟ್ಟಿಗರು

    ಮಂಗಲಸೂತ್ರ ಅಥವಾ ತಾಳಿಯನ್ನು ವರ, ವಧುವಿಗೆ ಕಟ್ಟುವುದು ಸಂಪ್ರದಾಯ, ಆದರೆ ಆದರೆ ಈ ಜೋಡಿ ಮಂಗಲಸೂತ್ರವನ್ನೂ ಪರಸ್ಪರ ಕಟ್ಟಿಕೊಂಡಿದ್ದಾರೆ. ವಧು ಮಾತ್ರವಲ್ಲ ವರನಿಗೂ ಮಂಗಳಸೂತ್ರ ಧಾರಣೆಯಾಗಿದೆ. ವರ ವಧುವಿಗೆ ತಾಳಿ ಕಟ್ಟಿದ್ದಾನೆ ಹಾಗೇ ವರನಿಗೆ ವಧು ತಾಳಿ ಕಟ್ಟಿದ್ದಾರೆ.

    ಹುಡುಗಿ ಮಾತ್ರ ಯಾಕೆ ಮಂಗಲಸೂತ್ರವನ್ನು ಕಟ್ಟಿಕೊಳ್ಳಬೇಕು ಎಂಬುದು ವರನ ವಾದವಾಗಿದೆ. ಸೀರೆನೂ ಉಟ್ಕೋಬಹುದಿತ್ತಲ್ಲ ಎಂಬುದು ನೆಟ್ಟಿಗರು ಈ ಮದುವೆಯ ಕುರಿತಾಗಿ ವ್ಯಂಗ್ಯ ಮಾಡಿದ್ದಾರೆ.

    ವರನ ಹೆಸರು ಸಾರ್ದೂಲ್ ಕದಮ್, ವಧು ತನುಜಾ ನಾನ್ಯಾಕೆ ಮಂಗಲಸೂತ್ರ ಕಟ್ಟಿಸಿಕೊಂಡೆ ಎಂಬುದನ್ನು ಶಾರ್ದೂಲ್ ಕದಮ್ ಹ್ಯೂಮನ್ ಆಫ್ ಬಾಂಬೆ ಎಂಬ ಫೋಟೋ ಬ್ಲಾಗ್ ಜತೆ ಹಂಚಿಕೊಂಡಿದ್ದಾರೆ. ಹಾಗೇ ಇವರ ಮದುವೆಯ ಕತೆ ಕೇಳುತ್ತಿದ್ದಂತೆ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.

    ತನುಜಾ ಮತ್ತು ಶಾರ್ದೂಲ್ ಇಬ್ಬರೂ ಒಂದೇ ಕಾಲೇಜಿನಲ್ಲಿ ಓದಿದವರಾಗಿದ್ದರೂ ಅವರ ಲವ್ ಸ್ಟೋರಿ ಶುರುವಾಗಿದ್ದು, ಸ್ನಾತಕೋತ್ತರ ಪದವಿ ಮುಗಿದು ನಾಲ್ಕು ವರ್ಷಗಳ ಬಳಿಕ. ತನುಜಾ ಇನ್‍ಸ್ಟಾಗ್ರಾಂನಲ್ಲಿ ಹಿಮೇಶ್ ರಶ್ಮಿಯಾ ಅವರ ಒಂದು ಹಾಡನ್ನು ಶೇರ್ ಮಾಡಿಕೊಂಡಿದ್ದರು. ಅದಕ್ಕೆ TORTURE ಎಂದು ಕ್ಯಾಪ್ಷನ್ ಬರೆದಿದ್ದು. ನಾನು ಅದಕ್ಕೆ MAHA TORTURE ಎಂದು ಪ್ರತಿಕ್ರಿಯೆ ನೀಡಿದ್ದೆ. ಅಲ್ಲಿಂದ ಮತ್ತೆ ನಮ್ಮಿಬ್ಬರ ನಡುವೆ ಮಾತುಕತೆ ಶುರುವಾಯಿತು ಎಂದು ಶಾರ್ದೂಲ್ ತಿಳಿಸಿದ್ದಾರೆ. ಅಲ್ಲಿಂದ ಮಾತುಕತೆ ಶುರುವಾಗಿ ಒಮ್ಮೆ ಇಬ್ಬರೂ ಭೇಟಿಯಾಗಿದ್ದೆವು ಹಾಗೇ ಇಬ್ಬರೂ ಟೀ ಕುಡಿಯುತ್ತ ಮಹಿಳಾವಾದದ ಬಗ್ಗೆ ಮಾತನಾಡುತ್ತಿದ್ದೆವು. ಆಗ ನಾನೊಬ್ಬ ಕಟ್ಟಾ ಸ್ತ್ರೀಸಮಾನತಾವಾದಿ ಎಂದು ಹೇಳಿದೆ. ನಾನು ಹೀಗೆ ಹೇಳುತ್ತೇನೆ ಎಂದು ಆಕೆ ನಿರೀಕ್ಷೆ ಮಾಡಿರಲಿಲ್ಲ ಎಂಬುದು ಅವಳ ನೋಟದಲ್ಲೇ ಗೊತ್ತಾಗುತ್ತಿತ್ತು ಎಂದು ಶಾರ್ದೂಲ್ ಅಂದಿನ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

    ಹಾಗೇ ಒಂದು ವರ್ಷ ಡೇಟಿಂಗ್ ಮಾಡಿದ ಶಾರ್ದೂಲ್ ಮತ್ತು ತನುಜಾ ನಂತರ ಮದುವೆಯಾಗಲು ತೀರ್ಮಾನಿಸುತ್ತಾರೆ. 2020ರ ಸೆಪ್ಟೆಂಬರ್ ನಲ್ಲಿ ಮದುವೆಯ ಬಗ್ಗೆ ಮಾತುಕತೆ ಶುರು ಮಾಡುತ್ತಾರೆ. ಈ ವೇಳೆ ಶಾರ್ದೂಲ್ ತಮ್ಮ ಇಂಗಿತವನ್ನು ವ್ಯಕ್ತಪಡಿಸುತ್ತಾರೆ. ಮದುವೆಯಲ್ಲಿ ಯಾಕೆ ಸ್ತ್ರೀ ಮಾತ್ರ ಮಂಗಲಸೂತ್ರ ಕಟ್ಟಿಸಿಕೊಳ್ಳಬೇಕು. ನಮ್ಮ ಮದುವೆಯಲ್ಲಿ ಹಾಗಾಗುವುದು ಬೇಡ. ನನಗೆ ನೀನೂ ಕೂಡ ತಾಳಿ ಕಟ್ಟಬೇಕು ಎಂದು ತನುಜಾ ಬಳಿ ಹೇಳಿಕೊಳ್ಳುತ್ತಾರೆ.

    ಕೊನೆಗೂ ಮದುವೆಯಲ್ಲಿ ಇಬ್ಬರೂ ಮಂಗಲಸೂತ್ರವನ್ನು ಧರಿಸಿಕೊಳ್ಳುತ್ತಾರೆ. ಇವರ ಮದುವೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರಂತೂ ಸಿಕ್ಕಾಪಟೆ ಟ್ರೋಲ್ ಮಾಡಿದ್ದಾರೆ. ಸೀರೆ ಉಟ್ಟೇ ಕುಳಿದುಕೊಳ್ಳಬೇಕಾಗಿತ್ತು ಎಂದು ಹೇಳಿದ್ದಾರೆ. ಆದರೆ ಅದ್ಯಾವುದಕ್ಕೂ ಈ ಜೋಡಿ ತಲೆ ಕೆಡಿಸಿಕೊಂಡಿಲ್ಲ. ಇವತ್ತಿಗೂ ಟ್ರೋಲ್ ಆಗುತ್ತಿದ್ದೇವೆ. ಅದೇನೂ ಸಮಸ್ಯೆಯಿಲ್ಲ. ನನಗೆ ಹೆಣ್ಣುಮಕ್ಕಳ ಮನಸು ಅರ್ಥವಾಗುತ್ತದೆ. ಅವರ ಭಾವನೆಯನ್ನು ನಾನು ಗೌರವಿಸುತ್ತೇನೆ ಎಂದು ಶಾರ್ದೂಲ್ ಹೇಳಿದ್ದಾರೆ. ಇವರ ಮದುವೆಯಾಗಿ ನಾಲ್ಕು ತಿಂಗಳಾಗಿದ್ದು, ಅಂದು ತನುಜಾ ಕೈಯ್ಯಲಿ ಕಟ್ಟಿಸಿಕೊಂಡ ತಾಳಿಯನ್ನು ಇಂದಿಗೂ ಶಾರ್ದೂಲ್ ತೆಗೆದಿಲ್ಲ. ಈ ಅಪರೂಪದ ಮದುವೆ ಕುರಿತಾಗಿ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.

  • ಅವಳೊಂದಿಗೆ ಬೇಜಾರಾದಾಗ, ಅಪ್ರಾಪ್ತೆಗೆ ತಾಳಿಕಟ್ಟಿದ- ಕಾಮಾಂಧನ ಮದ್ವೆ ಕಹಾನಿ

    ಅವಳೊಂದಿಗೆ ಬೇಜಾರಾದಾಗ, ಅಪ್ರಾಪ್ತೆಗೆ ತಾಳಿಕಟ್ಟಿದ- ಕಾಮಾಂಧನ ಮದ್ವೆ ಕಹಾನಿ

    – ಯುವಕನ ಬೆಂಬಲಕ್ಕೆ ನಿಂತ್ರಾ ಶಾಸಕ ವೆಂಕಟರಮಣಪ್ಪ?

    ತುಮಕೂರು: ಆತ ಈಗಿನ್ನೂ 21 ವರ್ಷದ ಚಿಗುರು ಮೀಸೆಯ ಯುವಕ. ಆತನ ವಯಸ್ಸು ಚಿಕ್ಕದಾದರೂ ಚಪಲತನಕ್ಕೇನು ಕಡಿಮೆ ಇಲ್ಲ. ಅಪ್ರಾಪ್ತೆ ಮೇಲೆ ಅತ್ಯಾಚಾರ ಮಾಡಿದ ತಪ್ಪಿಗೆ ಆಕೆಯೊಂದಿಗೆ ಮದುವೆಯಾದ. ಒಂದಿಷ್ಟು ದಿನ ಕಳೆದ ಬಳಿಕ ಇನ್ನೊಬ್ಬಳು ಅಪ್ರಾಯ್ತೆಯೊಂದಿಗೆ ಲವ್ವಿಡವ್ವಿ ಶುರುವಿಟ್ಟುಕೊಂಡು ಆಕೆಗೂ ತಾಳಿಕಟ್ಟಿದ್ದಾನೆ.

    ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ನಾಗಲಾಪುರದ ಮಂಜುನಾಥ್ ಅಪ್ರಾಪ್ತೆಯರೊಂದಿಗೆ ಮನಸ್ಸೋ ಇಚ್ಛೆ ವರ್ತಿಸುತ್ತಿದ್ದನು. ಒಂದಲ್ಲಾ, ಇಬ್ಬರು ಅಪ್ರಾಪ್ತೆಯರನ್ನು ಮದುವೆಯಾಗಿ ಈಗ ಜೈಲು ಕಂಬಿ ಎಣಿಸುತ್ತಿದ್ದಾನೆ.

    ಇದೇ ತಾಲೂಕಿನ ದೊಡ್ಡಹಳ್ಳಿಯ ಅಪ್ರಾಪ್ತೆಯ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಆಕೆ ಮೇಲೆ ನಿರಂತರ ಅತ್ಯಾಚಾರ ನಡೆಸಿದ್ದಾನೆ. ಬಾಲಕಿ ಮನೆಯವರಿಗೆ ಈ ವಿಚಾರ ಗೊತ್ತಾದಾಗ ಆಕೆಯೊಂದಿಗೆ ಮದುವೆಯಾಗುತ್ತೇನೆ ಎಂದು ಅಪ್ರಾಪ್ತೆಯೊಂದಿಗೆ ಮದುವೆಯೂ ಆದ. 2018ರ ಡಿಸೆಂಬರ್ 27 ರಂದು ಶಾಸ್ತ್ರೋಕ್ತವಾಗಿ ಬಾಲಕಿಗೆ ತಾಳಿಕಟ್ಟಿದ್ದಾನೆ. ಸಾಲದ್ದಕ್ಕೆ 1 ಲಕ್ಷ ರೂ. ಪಲ್ಸರ್ ಬೈಕನ್ನೂ ವರದಕ್ಷಿಣೆಯಾಗಿ ತೆಗೆದುಕೊಂಡಿದ್ದಾನೆ. ಮದುವೆಯಾದ 8 ತಿಂಗಳ ಬಳಿಕ ರಾಗ ಬದಲಿಸಿದ ಈ ಚಪಲಚನ್ನಿಗರಾಯ ಮತ್ತೊಬ್ಬಳು ಅಪ್ರಾಪ್ತೆಯನ್ನು ತನ್ನ ಪ್ರೇಮಪಾಶಕ್ಕೆ ಬೀಳಿಸಿಕೊಂಡಿದ್ದಾನೆ.

    ದೊಡ್ಡಹಳ್ಳಿಯ ಬಾಲಕಿಯೊಂದಿಗೆ ಮದುವೆಯಾದ ಈ ಭೂಪ ಗೊತ್ತಿಲ್ಲದೇ ನಾಗಲಾಪುರದ ಬಾಲಕಿಯೊಂದಿಗೆ ಲವ್ವಿಡವ್ವಿ ಶುರುವಿಟ್ಟುಕೊಂಡಿದ್ದ. ತಾನು ಮದುವೆಯಾಗಿದ್ದೇನೆ ಅನ್ನೋದನ್ನು ಮರೆತ ಈ ಕಾಮಾಂಧ ಆ ಬಾಲಕಿಯೊಂದಿಗೂ ಸಂಬಂಧವಿಟ್ಟುಕೊಂಡ. ಸಿನಿಮಾ, ಪಾರ್ಕ್ ಸುತ್ತಾಡಿ ಜೊತೆಯಲ್ಲಿ ಪಾನಿಪೂರಿನೂ ತಿಂದಿದ್ದಾರೆ. ಅಲ್ಲದೆ ಆ ಬಾಲಕಿಯೊಂದಿಗೆ ಅಶ್ಲೀಲ ಎನ್ನುವ ರೀತಿ ಸೆಲ್ಫಿ ತೆಗೆಸಿಕೊಂಡಿದ್ದಾನೆ. ಮಂಜುನಾಥನ ಈ ಮಹಿಮೆ ಯಾರಿಗೂ ತಿಳಿದಿರಲಿಲ್ಲ. ಕೊನೆಗೊಂದು ದಿನ ಬಾಲಕಿಯೊಂದಿಗೆ ಓಡಿ ಮದುವೆಯಾಗಿದ್ದಾಗಲೇ ಗೊತ್ತಾಗಿದ್ದು. ಈಗ ಮೊದಲ ಪತ್ನಿಯನ್ನು ತನ್ನ ಮನೆಯಿಂದ ಹೊರಹಾಕಿದ್ದಾನೆ. ಎರಡನೇ ಪತ್ನಿಯೊಂದಿಗೆ ಮನೆಯಲ್ಲಿ ಸಂಸಾರ ಹೂಡಿದ್ದಾನಂತೆ. ಆರೋಪಿ ಮಂಜುನಾಥ್‍ನ ಬೆಂಬಲಕ್ಕೆ ಮಾಜಿ ಸಚಿವ ಹಾಲಿ ಶಾಸಕ ವೆಂಕಟರಮಣಪ್ಪ ನಿಂತಿದ್ದಾರೆ ಎಂದು ಬಾಲಕಿ ಪೋಷಕರು ಆರೋಪಿಸುತ್ತಾರೆ.

    ಮೊದಲ ಬಾಲಕಿ ಪೋಷಕರು ವೈ.ಎನ್ ಹೊಸಕೋಟೆ ಪೊಲೀಸರಿಗೆ ದೂರುಕೊಟ್ಟಿದ್ದರಿಂದ ಮಂಜುನಾಥ್ ಅರೆಸ್ಟ್ ಆಗಿದ್ದಾನೆ. ತನ್ನ ಗಂಡ ತನ್ನೊಂದಿಗೆ ಸಂಸಾರ ಮಾಡೋದಾದ್ರೆ ಜೈಲಿನಿಂದ ಹೊರಕ್ಕೆ ಬರಲಿ, ಇಲ್ಲಾಂದ್ರೆ ಜೈಲಿನಲ್ಲಿಯೇ ಕೊಳೆಯಲಿ ಎನ್ನುತ್ತಾಳೆ. ಈತನ ಮಹಿಮೆ ಇಷ್ಟಕ್ಕೆ ಮುಗಿಯುವುದಿಲ್ಲ. ಆಂಧ್ರದಲ್ಲೂ ಎರಡು ಅತ್ಯಾಚಾರ ಕೇಸ್ ಇವನ ಮೇಲಿದೆಯಂತೆ ಅಷ್ಟರ ಮಟ್ಟಿಗೆ ಈತ ಚಿಕ್ಕವಯಸ್ಸಿನಲ್ಲೇ ದಾರಿತಪ್ಪಿದ್ದಾನೆ.

  • ವರನಿಗೆ ತಾಳಿ ಕೊಡೋ ಬದಲು ಕಟ್ಟಿಯೇ ಬಿಟ್ಟ ವಧು

    ವರನಿಗೆ ತಾಳಿ ಕೊಡೋ ಬದಲು ಕಟ್ಟಿಯೇ ಬಿಟ್ಟ ವಧು

    – ಪುರೋಹಿತರು, ಕುಟುಂಬಸ್ಥರು ಕಕ್ಕಾಬಿಕ್ಕಿ

    ಮಂಡ್ಯ: ಜೀವನದಲ್ಲಿ ಕೆಲವೊಮ್ಮೆ ಗೊಂದಲಗಳು ಹೆಚ್ಚಾಗುತ್ತದೆ. ಹೀಗೆ ಗೊಂದಲಕ್ಕೀಡಾಗಿ ಮದುವೆ ಮನೆಯಲ್ಲಿ ವಧು, ವರನ ಕೊರಳಿಗೆ ತಾಳಿ ಕಟ್ಟಿದ ಘಟನೆ ಮಂಡ್ಯದಲ್ಲಿ ನಡೆದಿದ್ದು, ಈ ವಿಡಿಯೋ ಫುಲ್ ವೈರಲ್ ಆಗಿದೆ.

    ಮಂಡ್ಯದ ಮದುವೆಯಲ್ಲಿ ಪುರೋಹಿತರು ತಾಳಿಯನ್ನು ಹಿಡಿದು ಮಂತ್ರ ಪಠಿಸಿ ಹೆಣ್ಣಿನ ಕೈಗೆ ಕೊಡುತ್ತಾರೆ. ಅದನ್ನು ಆಕೆ ಪತಿಯ ಕೈಗೆ ಕೊಡಬೇಕಿತ್ತು. ಆದರೆ ಆಕೆ ಕನ್‍ಫ್ಯೂಸ್ ಆಗಿ ಅರಶಿಣದ ತಾಳಿಯನ್ನು ವರನಿಗೆ ನೀಡದೆ ತಾನೇ ಆತನ ಕೊರಳಿಗೆ ಕಟ್ಟಿದ್ದಾಳೆ.

    ಕೊನೆಗೆ ಎಚ್ಚೆತ್ತ ಪುರೋಹಿತರು “ನೀನಲ್ಲಮ್ಮ ತಾಳಿ ಕಟ್ಟೋದು” ಎಂದು ಹೇಳಿ ವರನ ಕೊರಳಿನ ತಾಳಿ ಬಿಚ್ಚಿಸಿ ವಧುವಿನ ಕೊರಳಿಗೆ ಕಟ್ಟೋದಕ್ಕೆ ವರನಿಗೆ ಹೇಳಿದ್ದಾರೆ. ಈ ದೃಶ್ಯ ಕಂಡು ನೆರೆದಿದ್ದ ಇಡೀ ಕುಟುಂಬ ಒಂದು ಕ್ಷಣ ನಗೆಗಡಲಲ್ಲಿ ತೇಲಿದ್ದು ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

  • ಗಟ್ಟಿಮೇಳದ ವೇಳೆ ತಾಳಿ ನಾಪತ್ತೆ – ತಾಳಿ ಇಲ್ಲದೆ ವಧು ವರರು ಗಲಿಬಿಲಿ

    ಗಟ್ಟಿಮೇಳದ ವೇಳೆ ತಾಳಿ ನಾಪತ್ತೆ – ತಾಳಿ ಇಲ್ಲದೆ ವಧು ವರರು ಗಲಿಬಿಲಿ

    ಬೆಂಗಳೂರು: ಸಾಮೂಹಿಕ ವಿವಾಹ ನೆರವೇರುತ್ತಿದ್ದ ಸಂದರ್ಭದಲ್ಲಿ ಗಟ್ಟಿಮೇಳದ ವೇಳೆ ತಾಳಿ ನಾಪತ್ತೆಯಾಗಿ, ವಧು-ವರರು ಗಲಿಬಿಲಿಯಾದ ಘಟನೆ ನೆಲಮಂಗಲ ಸಮೀಪದ ಕಾಚೋಹಳ್ಳಿ ಕಲ್ಯಾಣ ಮಂಟಪದಲ್ಲಿ ಇಂದು ನಡೆದಿದೆ.

    ಪಟ್ಟನಾಯಕನಹಳ್ಳಿ ನಂಜಾವದೂತ ಸ್ವಾಮೀಜಿ ನೇತೃತ್ವದಲ್ಲಿ ಸಾಮೂಹಿಕ ವಿವಾಹ ಶುಭಕಾರ್ಯ ನಡೆಯುತ್ತಿತ್ತು. ಈ ಶುಭಸಮಾರಂಭದಲ್ಲಿ ಅಡಮಾರನಹಳ್ಳಿ ಗ್ರಾಮಸ್ಥರು 15 ಜೋಡಿಗಳ ಮದುವೆ ಮಾಡಿಸುತ್ತಿದ್ದರು. ಆದರೆ ಈ ಖುಷಿ ನಡುವೆ ಕಳ್ಳನೊಬ್ಬ ತಾಳಿಯನ್ನೇ ಕದ್ದು ಪರಾರಿ ಆಗಿದ್ದಾನೆ.

    ಕಳೆದ ನಾಲ್ಕು ವರ್ಷದಿಂದ ಗ್ರಾಮಸ್ಥರು ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದಾರೆ. ಆದರೆ ಹಿಂದೆಂದು ಈ ರೀತಿ ಆಗಿರಲಿಲ್ಲ. ಆದರೆ ಮದುವೆ ಸಮಾರಂಭದಲ್ಲಿ ಎಲ್ಲರೂ ಬ್ಯುಸಿಯಾಗಿರುವಾಗ ಕ್ಷಣಾರ್ಧದಲ್ಲಿ ತಾಳಿ ಕದ್ದು ಕಲ್ಯಾಣ ಮಂಟಪದಿಂದ ಕಳ್ಳ ನಾಪತ್ತೆಯಾಗಿದ್ದಾನೆ. ಚಾಲಕಿ ಕಳ್ಳ ತನ್ನ ಕೈಚಳಕ ತೋರಿದ್ದು, ಶುಭ ಸಮಾರಂಭದಲ್ಲಿ ಹೀಗಾಯ್ತಲ್ಲಾ ಎಂದು ಕುಟುಂಬಸ್ಥರು ಹಾಗೂ ಸ್ಥಳದಲ್ಲಿದ್ದವರು ತಳಮಳಗೊಂಡಿದ್ದಾರೆ.

    ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

  • ವಧುವೇ ವರನಿಗೆ ತಾಳಿ ಕಟ್ಟುವ ವಿಶೇಷ ಆಚರಣೆ!

    ವಧುವೇ ವರನಿಗೆ ತಾಳಿ ಕಟ್ಟುವ ವಿಶೇಷ ಆಚರಣೆ!

    -ಪುಷ್ಪವೃಷ್ಟಿ ಹಾಕಿ ಹಿರಿಯರಿಂದ ಆಶೀರ್ವಾದ

    ವಿಜಯಪುರ: ವರ ವಧುವಿಗೆ ತಾಳಿಕಟ್ಟೋದು ಕಾಮನ್. ಆದ್ರೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದಲ್ಲಿ ವಧುವೇ ವರನಿಗೆ ತಾಳಿ ಕಟ್ಟುವ ಮೂಲಕ ಡಿಫರೆಂಟಾಗಿ ಮದುವೆಯಾಗಿದ್ದಾರೆ.

    ಹೌದು, ಸಾಮಾನ್ಯವಾಗಿ ವರ ವಧುವಿಗೆ ತಾಳಿ ಕಟ್ಟುತ್ತಾನೆ. ಆದ್ರೆ ನಾಲತವಾಡ ಪಟ್ಟಣದಲ್ಲಿ ಹಿರಿಯರು ವಧುವಿನಿಂದಲೇ ವರನಿಗೆ ಮಾಂಗಲ್ಯಧಾರಣೆ ಮಾಡಿಸಿದ್ದಾರೆ. ಈ ಭಾಗದಲ್ಲಿ ಇದೊಂದು ವಿಶಿಷ್ಠ ಮದುವೆ ಆಚರಣೆಯಾಗಿದೆ. ಸೋಮವಾರದಂದು ನಾಲತವಾಡ ಪಟ್ಟಣದಲ್ಲಿ ಎರಡು ಜೋಡಿಗಳು ವಿಶೇಷವಾಗಿ ಮದುವೆಯಾಗಿದ್ದಾರೆ. ಪ್ರಭುರಾಜ್ ಜೊತೆ ಅಂಕಿತಾ ಹಾಗೂ ಅಮಿತ್ ಜೊತೆ ಪ್ರಿಯಾ ಎನ್ನುವ ಎರಡು ಜೊಡಿಯ ಮದುವೆ ಆಗಿದ್ದು, ಇಲ್ಲಿ ಇಬ್ಬರು ವರರಿಗೆ ವಧುಗಳೇ ತಾಳಿ ಕಟ್ಟಿದ್ದು ವಿಶೇಷವಾಗಿತ್ತು.

    ತಾಳಿಯ ಜೊತೆ ರುದ್ರಾಕ್ಷಿ ಪೋಣಿಸಿ(ಜೋಡಿಸಿ) ತಾಳಿ ಕಟ್ಟುವ ಮೂಲಕ 12ನೇ ಶತಮಾನದ ಕಲ್ಯಾಣ ಕ್ರಾಂತಿಗೆ ನಾಂದಿ ಹಾಡಲಾಯಿತು. ಅಪ್ಪಟ ಬಸವ ಧರ್ಮದ ತತ್ವದ ಅಡಿಯಲ್ಲಿ ನಡೆದ ಮದುವೆ ಇದಾಗಿದ್ದು, ಶುಭ ಮುಹೂರ್ತ ನೋಡದೆ ಮದುವೆ ಮಾಡಿಸಲಾಗಿದೆ. ವಧು-ವರರಿಗೆ ಅಕ್ಷತೆ ಬದಲು ಪುಷ್ಪವೃಷ್ಟಿ ಹಾಕಿ ಹಿರಿಯರು ಆಶೀರ್ವಾದ ಮಾಡಿದ್ದಾರೆ.

    ಈ ಮದುವೆಯಲ್ಲಿ ಇನ್ನೊಂದು ವಿಶೇಷವೇನೆಂದರೆ, ಮದುವೆಗೆ ಬಂದವರಿಗೆ ಬಸವಣ್ಣನವರ ಕುರಿತಾದ ವಚನಸುಧೆ, ವಚನವರ್ಷ ಪುಸ್ತಕಗಳ ವಿತರಣೆ ಮಾಡಲಾಯಿತು. ಜಾತ್ಯಾತೀತ ನಿಲುವಿನ ಬಸವ ಧರ್ಮದ ಮದುವೆ ಇದಾಗಿತ್ತು, ಇಳಕಲ್ಲದ ಗುರುಮಹಾಂತೇಶ್ವ ಸ್ವಾಮೀಜಿ, ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಶರಣರು, ಲಿಂಗಸೂರಿನ ವಿಜಯ ಮಹಾಂತೇಶ ಮಠದ ಸಿದ್ಧಲಿಂಗ ಶ್ರೀಗಳು ಸೇರಿದಂತೆ ಅನೇಕ ಗಣ್ಯರು ಮದುವೆ ಸಮಾರಂಭದಲ್ಲಿ ಭಾಗವಹಿಸಿ ನವ ವಧು-ವರರಿಗೆ ಆಶೀರ್ವದಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv