Tag: ತಾಲೂಕು

  • ಯಾದಗಿರಿ: ಕೆಂಭಾವಿ ಪಟ್ಟಣವನ್ನ ತಾಲೂಕು ಕೇಂದ್ರವಾಗಿ ಘೋಷಣೆ ಮಾಡದ್ದನ್ನು ಖಂಡಿಸಿ ಬಂದ್

    ಯಾದಗಿರಿ: ಕೆಂಭಾವಿ ಪಟ್ಟಣವನ್ನ ತಾಲೂಕು ಕೇಂದ್ರವಾಗಿ ಘೋಷಣೆ ಮಾಡದ್ದನ್ನು ಖಂಡಿಸಿ ಬಂದ್

    ಯಾದಗಿರಿ: ಸಿಎಂ ಸಿದ್ದರಾಮಯ್ಯ ಬುಧವಾರ ಮಂಡಿಸಿದ ಬಜೆಟ್‍ನಲ್ಲಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪಟ್ಟಣವನ್ನು ತಾಲೂಕು ಕೇಂದ್ರವೆಂದು ಘೋಷಣೆ ಮಾಡದಿರುವದನ್ನು ಖಂಡಿಸಿ ಇಂದು ಕೆಂಭಾವಿ ಪುರಸಭೆ ಸದಸ್ಯರು ಹಾಗೂ ವಿವಿಧ ಸಂಘಟನೆ ಮುಖಂಡರು ಹಾಗೂ ಪಟ್ಟಣದ ನಿವಾಸಿಗಳು ಕೆಂಭಾವಿ ಪಟ್ಟಣದಲ್ಲಿ ಬಂದ್ ಆಚರಿಸಿದ್ದಾರೆ.

    ಬೆಳಗ್ಗೆಯಿಂದಲೇ ಕೆಂಭಾವಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನಾ ನಿರತರು ಟೈರ್‍ಗೆ ಬೆಂಕಿ ಹಚ್ಚಿ ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೆಂಭಾವಿ ಪಟ್ಟಣ ಬಂದ್‍ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿದ್ದು, ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಪ್ರತಿಭಟನಾಕಾರರು ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿರುವುದರಿಂದ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡು ಪ್ರಯಾಣಿಕರು ತೊಂದರೆ ಅನುಭವಿಸಿದ್ರು.

    ಸಾಮೂಹಿಕ ರಾಜೀನಾಮೆ: ಕೆಂಭಾವಿ ಪಟ್ಟಣವನ್ನು ತಾಲೂಕು ಕೇಂದ್ರವೆಂದು ಘೋಷಣೆ ಮಾಡದಿರುವುಕ್ಕೆ ಶುಕ್ರವಾರದಂದು ಪುರಸಭೆಯ 23 ಸದಸ್ಯರು ಪಕ್ಷಭೇದ ಮರೆತು ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಸದಸ್ಯರ ಸಾಮೂಹಿಕ ರಾಜೀನಾಮೆ ನಂತರ ಇಂದು ಕೆಂಭಾವಿ ಪಟ್ಟಣ ಬಂದ್ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ ಕೆಂಭಾವಿಯನ್ನು ತಾಲೂಕು ಕೇಂದ್ರವೆಂದು ಘೋಷಣೆ ಮಾಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

    ಸಿದ್ದರಾಮಯ್ಯನವರು ಬಜೆಟ್ ಮಂಡನೆ ವೇಳೆ ಕೆಂಭಾವಿ ಪಟ್ಟಣವನ್ನು ಹೊರತುಪಡಿಸಿ ಜಿಲ್ಲೆಯ ವಡಗೇರಾ, ಗುರುಮಠಕಲ್, ಹುಣಸಗಿ ಹೋಬಳಿ ಕೇಂದ್ರಗಳನ್ನು ತಾಲೂಕು ಕೇಂದ್ರವೆಂದು ಘೋಷಣೆ ಮಾಡಿದ್ದಾರೆ.

  • 49 ಹೊಸ ತಾಲೂಕು ರಚನೆ: ಪೂರ್ಣ ಪಟ್ಟಿ ಇಲ್ಲಿದೆ

    49 ಹೊಸ ತಾಲೂಕು ರಚನೆ: ಪೂರ್ಣ ಪಟ್ಟಿ ಇಲ್ಲಿದೆ

    ಬೆಂಗಳೂರು: ಸಿಎಂ ಸಿದ್ದರಾಮಯ್ಯನವರು 21 ಜಿಲ್ಲೆಗಳಲ್ಲಿ 49 ಹೊಸ ತಾಲೂಕುಗಳನ್ನು ಪ್ರಕಟಿಸಿದ್ದಾರೆ. ಹೊಸ ತಾಲೂಕುಗಳ ವಿವರವನ್ನು ಇಲ್ಲಿ ನೀಡಲಾಗಿದೆ.

    ಬಾಗಲಕೋಟೆ – ಗುಳೇದ ಗುಡ್ಡ, ರಬಕವಿ, ಬನಹಟ್ಟಿ, ಇಳಕಲ್
    ಬೆಳಗಾವಿ – ನಿಪ್ಪಾಣಿ, ಮೂಡಲಗಿ, ಕಾಗವಾಡ
    ಚಾಮರಾಜನಗರ – ಹನೂರು
    ದಾವಣಗೆರೆ – ನ್ಯಾಮತಿ

    ಬೀದರ್ – ಚಿಟಗುಪ್ಪ, ಹುಲಸೂರು, ಕಮಲಾನಗರ
    ಬಳ್ಳಾರಿ – ಕುರುಗೋಡು, ಕೊಟ್ಟೂರು, ಕಂಪ್ಲಿ
    ಧಾರವಾಡ – ಅಣ್ಣಿಗೇರಿ, ಅಳ್ನಾವರ, ಹುಬ್ಬಳ್ಳಿ ನಗರ
    ಗದಗ – ಗಜೇಂದ್ರಗಡ, ಲಕ್ಷ್ಮೇಶ್ವರ

    ಕಲಬುರಗಿ – ಕಾಳಗಿ, ಕಮಲಾಪುರ, ಯಡ್ರಾವಿ, ಶಹಾಭಾಗ್
    ಯಾದಗಿರಿ – ಹುಣಸಗಿ, ವಡಗೆರ, ಗುರುಮಿಟ್ಕಲ್
    ಕೊಪ್ಪಳ – ಕುಕನೂರು, ಕನಕಗಿರಿ, ಕಾರಟಗಿ
    ರಾಯಚೂರು – ಮಸ್ಕಿ, ಸಿರಾವರ

    ಉಡುಪಿ – ಬ್ರಹ್ಮಾವರ, ಕಾಪು, ಬೈಂದೂರು
    ದಕ್ಷಿಣ ಕನ್ನಡ – ಮೂಡಬಿದರೆ, ಕಡಬ
    ಬೆಂಗಳೂರು ನಗರ – ಯಲಹಂಕ
    ವಿಜಯಪುರ – ಬಬಲೇಶ್ವರ, ನಿಡಗುಂದಿ, ತಿಕೋಟ, ದೇವರಹಿಪ್ಪರಗಿ, ತಾಳಿಕೋಟೆ, ಚಡಚಣ, ಕೋಲ್ಹಾರ
    ಹಾವೇರಿ – ರಟ್ಟಿಹಳ್ಳಿ

    ಮೈಸೂರು – ಸರಗೂರು
    ಚಿಕ್ಕಮಗಳೂರು – ಅಜ್ಜಂಪುರ
    ಉತ್ತರ ಕನ್ನಡ – ದಾಂಡೇಲಿ
    ಕೋಲಾರ – ಕೆಜಿಎಫ್