Tag: ತಾಲಿಬಾನ್

  • ಹಿಜಬ್ ಧರಿಸದಿದ್ದರೆ ಮಹಿಳೆಯರು ಪ್ರಾಣಿಗಳಂತೆ ಕಾಣ್ತಾರೆ: ತಾಲಿಬಾನ್

    ಹಿಜಬ್ ಧರಿಸದಿದ್ದರೆ ಮಹಿಳೆಯರು ಪ್ರಾಣಿಗಳಂತೆ ಕಾಣ್ತಾರೆ: ತಾಲಿಬಾನ್

    ಕಾಬೂಲ್: ತಮ್ಮ ದೇಹವನ್ನು ಸಂಪೂರ್ಣವಾಗಿ ಮುಚ್ಚುವ ಇಸ್ಲಾಮಿಕ್ ಹಿಜಬ್ ಧರಿಸದ ಮುಸ್ಲಿಂ ಮಹಿಳೆಯರು ಪ್ರಾಣಿಗಳಂತೆ ಕಾಣಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ತಾಲಿಬಾನ್‍ನ ಧಾರ್ಮಿಕ  ಪೊಲೀಸರು ದಕ್ಷಿಣ ಅಫ್ಘಾನಿಸ್ತಾನದ ಕಂದಹಾರ್ ನಗರದಾದ್ಯಂತ ಪೋಸ್ಟರ್‌ಗಳನ್ನು ಹಾಕಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಕಳೆದ ವರ್ಷ ಆಗಸ್ಟ್‌ನಲ್ಲಿ ಆಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ಬಳಿಕ, ಅಫ್ಘಾನ್ ಮಹಿಳೆಯರ ಮೇಲೆ ತಾಲಿಬಾನ್ ಕಠಿಣ ನಿರ್ಬಂಧಗಳನ್ನು ಹೇರಿದೆ. ಮೇ ತಿಂಗಳಲ್ಲಿ ತಾಲಿಬಾನ್ ಮುಖ್ಯಸ್ಥ ಹಿಬತುಲ್ಲಾ ಅಖುಂಡ್ಜಾದಾ, ಮಹಿಳೆಯರು ಮನೆಯಲ್ಲಿಯೇ ಇರಬೇಕು. ಒಂದು ವೇಳೆ ಮನೆಯಿಂದ ಹೊರಗೆ ಹೋಗಬೇಕಾದರೆ, ತಮ್ಮ ಮುಖ ಸೇರಿದಂತೆ ದೇಹವನ್ನು ಸಂಪೂರ್ಣವಾಗಿ ಮುಚ್ಚುವ ಹಿಜಬ್ ಧರಿಸಿ ಹೋಗಬೇಕು ಎಂದು ಆದೇಶ ಹೊರಡಿಸಿದ್ದರು. ಇದನ್ನೂ ಓದಿ: ‘ಅಗ್ನಿಪಥ್’ ವಿರೋಧ- ಮತ್ತೇ ಪ್ಯಾಸೆಂಜರ್ ರೈಲಿನ 2 ಬೋಗಿಗೆ ಬೆಂಕಿ

    ಇದೀಗ ತಾಲಿಬಾನ್‍ನ ಸಚಿವಾಲಯವು ಇಸ್ಲಾಂ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸುವ ಮೂಲಕ ಕಂದಹಾರ್ ನಗರದಾದ್ಯಂತ ಪೋಸ್ಟರ್‌ಗಳನ್ನು ಹಾಕಿದೆ. ಪೋಸ್ಟರ್‌ನಲ್ಲಿ ಮಹಿಳೆಯರ ದೇಹವನ್ನು ತಲೆಯಿಂದ ಕಾಲಿನವರೆಗೂ ಮುಚ್ಚಲ್ಪಡುವ ಬುರ್ಖಾಗಳ ಫೋಟೋಗಳನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಚನ್ನಕೇಶವ ದೇವಾಲಯಕ್ಕೆ ಭೇಟಿ ನೀಡಿದ ರಾಜ್ಯಪಾಲ ಗೆಹ್ಲೋಟ್

    ಪೋಸ್ಟರ್ ಕೆಳಗಡೆ ಹಿಜಬ್ ಧರಿಸದ ಮುಸ್ಲಿಂ ಮಹಿಳೆಯರು ಪ್ರಾಣಿಗಳಂತೆ ಕಾಣಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಬರೆಯಲಾಗಿದೆ. ಈ ಪೋಸ್ಟರ್‌ಗಳನ್ನು ಅನೇಕ ಕೆಫೆಗಳು, ಅಂಗಡಿಗಳ ಮೇಲೆ ಮತ್ತು ತಾಲಿಬಾನ್‍ನ ವಾಸ್ತವಿಕ ಶಕ್ತಿ ಕೇಂದ್ರವಾದ ಕಂದಹಾರ್‌ನಾದ್ಯಂತ ಜಾಹೀರಾತು ಹೋರ್ಡಿಂಗ್‍ಗಳ ಮೇಲೆ ಹಾಕಲಾಗಿದೆ.

    Live Tv

  • ಅಫ್ಘಾನಿಸ್ತಾನಲ್ಲಿ ಭಾರತ – ತಾಲಿಬಾನ್ ಆಡಳಿತದ ಜೊತೆ ಮೊದಲ ಮಾತುಕತೆ

    ಅಫ್ಘಾನಿಸ್ತಾನಲ್ಲಿ ಭಾರತ – ತಾಲಿಬಾನ್ ಆಡಳಿತದ ಜೊತೆ ಮೊದಲ ಮಾತುಕತೆ

    ಕಾಬೂಲ್: ಅಫ್ಘಾನಿಸ್ತಾನವನ್ನು ಕಳೆದ ವರ್ಷ ಆಗಸ್ಟ್‌ನಲ್ಲಿ ತಾಲಿಬಾನ್ ವಶಪಡಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಭಾರತದ ನಿಯೋಗ ಹಾಗೂ ತಾಲಿಬಾನ್ ಶುಕ್ರವಾರ ಭೇಟಿಯಾಗಿವೆ.

    ಅಫ್ಘಾನಿಸ್ತಾನದಲ್ಲಿ ಹಳೆ ಸರ್ಕಾರ ಪತನಗೊಂಡು ತಾಲಿಬಾನ್ ಹಿಡಿತ ಸಾಧಿಸಿದ ಸಂದರ್ಭ ಭಾರತೀಯ ಮಿಷನ್ ಸಿಬ್ಬಂದಿ ಅಲ್ಲಿಂದ ಭಾರತಕ್ಕೆ ಹಿಂತಿರುಗಿದ್ದರು.

    ಇಂದು ಹಿರಿಯ ರಾಜತಾಂತ್ರಿಕ ಜೆಪಿ ಸಿಂಗ್ ನೇತೃತ್ವದ ತಂಡ ಕಾಬೂಲ್‌ನಲ್ಲಿ ಹಿರಿಯ ತಾಲಿಬಾನ್ ನಾಯಕ ಅಮೀರ್ ಖಾನ್ ಮೊಟ್ಟಕಿ ಅವರನ್ನು ಭೇಟಿಯಾದರು. ಮೂಲಭೂತ ಅಗತ್ಯಗಳಿಗಾಗಿ ಹೆಣಗಾಡುತ್ತಿದ್ದ ಅಫ್ಘಾನಿಸ್ತಾನದ ಜನರಿಗೆ ಭಾರತ ನೀಡುವ ಮಾನವೀಯ ನೆರವಿನ ಬಗ್ಗೆ ಚರ್ಚೆ ನಡೆದಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ತಿಳಿಸಿದ್ದಾರೆ. ಇದನ್ನೂ ಓದಿ: ಅಮೆರಿಕದಲ್ಲಿ 2 ಪ್ರತ್ಯೇಕ ಸ್ಥಳಗಳಲ್ಲಿ ಗುಂಡಿನ ದಾಳಿ- ಮೂವರು ಸಾವು

    ಭಾರತ ತನ್ನ ಸ್ಥಗಿತಗೊಳಿಸಿದ ಯೋಜನೆಗಳನ್ನು ಪುನರಾರಂಭಿಸಲು, ರಾಜತಾಂತ್ರಿಕ ಉಪಸ್ಥಿತಿಯನ್ನು ಮತ್ತೆ ಸಕ್ರಿಯಗೊಳಿಸಲು ಹಾಗೂ ಅಫ್ಘಾನಿಸ್ತಾನದ ಜನರಿಗೆ, ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ರೋಗಿಗಳಿಗೆ ಸೇವೆಗಳನ್ನು ನೀಡಲು ಬಯಸುತ್ತದೆ. ವ್ಯಾಪಾರದಲ್ಲಿಯೂ ಅಫ್ಘಾನಿಸ್ತಾನದೊಂದಿಗೆ ಕೆಲಸ ಮಾಡಲು ತಾಲಿಬಾನ್ ಭಾರತವನ್ನು ಕೇಳಿಕೊಂಡಿದೆ ಎಂದು ಹೇಳಿದರು.

    ಅಫ್ಘಾನಿಸ್ತಾನದಲ್ಲಿ ಹದಗೆಡುತ್ತಿದ್ದ ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಆಗಸ್ಟ್ 15 ರ ಬಳಿಕ ಭಾರತ ಮೂಲದ ಅಧಿಕಾರಿಗಳನ್ನು ಮರಳಿ ಕರೆತರಲು ನಿರ್ಧರಿಸಲಾಯಿತು. ಆದರೂ ಸ್ಥಳೀಯ ಸಿಬ್ಬಂದಿ ಕಾರ್ಯನಿರ್ವಹಿಸುವುದನ್ನು ಮುಂದುವರೆಸಿ, ಅಲ್ಲಿನ ಸರಿಯಾದ ನಿರ್ವಹಣೆ ಬಗ್ಗೆ ಮಾಹಿತಿ ನೀಡುತ್ತಿದ್ದರು ಎಂದು ಬಾಗ್ಚಿ ತಿಳಿಸಿದರು. ಇದನ್ನೂ ಓದಿ: ತಿಂಗಳ ಅಂತ್ಯದಲ್ಲಿ ಸೌದಿಗೆ ಭೇಟಿ ನೀಡಲಿದ್ದಾರೆ ಬೈಡನ್

    ಅಫ್ಘಾನಿಸ್ತಾನದಲ್ಲಿ ಭಾರತದ ನೆರವಿನ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿರುವ ಹಲವಾರು ಸ್ಥಳಗಳಿಗೆ ಭೇಟಿ ನೀಡಲು ಭಾರತೀಯ ತಂಡ ಪ್ರಯತ್ನಿಸಲಿದೆ. ಆದರೆ ತಂಡದ ಸಂಯೋಜನೆ, ಪ್ರವಾಸದ ಅವಧಿ, ಭೇಟಿ ನೀಡಬೇಕಾದ ಸ್ಥಳಗಳು ಮತ್ತು ನಿಗದಿತ ಸಭೆಗಳ ವಿವರಗಳನ್ನು ನೀಡಿಲ್ಲ.

  • ಅಫ್ಘಾನ್ ಮಹಿಳೆಯರ ಮೇಲೆ ಕಠಿಣ ಕ್ರಮ – ವಿಶ್ವಸಂಸ್ಥೆಯ ಕರೆಗೆ ಕ್ಯಾರೇ ಅನ್ನದ ತಾಲಿಬಾನ್

    ಅಫ್ಘಾನ್ ಮಹಿಳೆಯರ ಮೇಲೆ ಕಠಿಣ ಕ್ರಮ – ವಿಶ್ವಸಂಸ್ಥೆಯ ಕರೆಗೆ ಕ್ಯಾರೇ ಅನ್ನದ ತಾಲಿಬಾನ್

    ವಾಷಿಂಗ್ಟನ್: ಅಫ್ಘಾನಿಸ್ತಾನದ ಮಹಿಳೆಯರ ಮೇಲೆ ತಾಲಿಬಾನ್ ವಿಧಿಸುತ್ತಿರುವ ಕಠಿಣ ನಿಯಮಗಳನ್ನು ತೆಗೆದು ಹಾಕಬೇಕೆಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ(ಯುಎನ್‌ಎಸ್‌ಸಿ) ಕರೆಯನ್ನು ತಾಲಿಬನ್ ತಿರಸ್ಕರಿಸಿದೆ

    ಅಫ್ಘಾನಿಸ್ತಾನದ ಮಹಿಳೆಯರ ಮೇಲೆ ತಾಲಿಬಾನ್ ವಿಧಿಸುತ್ತಿರುವ ಕಟ್ಟುನಿಟ್ಟಿನ ಕ್ರಮಗಳಿಗೆ ಯುಎನ್‌ಎಸ್‌ಸಿ ಕಳವಳ ವ್ಯಕ್ತಪಡಿಸಿದ್ದು, ಇದನ್ನು ತಾಲಿಬಾನ್‌ನ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿರಸ್ಕರಿಸಿದೆ ಎಂದು ವರದಿಯಾಗಿದೆ.

    ಅಫ್ಘಾನಿಸ್ತಾನದ ಜನರು ಪ್ರಧಾನವಾಗಿ ಮುಸ್ಲಿಮರಾಗಿರುವುದರಿಂದ ನಮ್ಮ ಸರ್ಕಾರ ಇಸ್ಲಾಮಿಕ್ ಹಿಜಬ್ ಅನ್ನು ಸಮಾಜದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಆಚರಣೆಗಳಿಗೆ ಅನುಗುಣವಾಗಿ ಪರಿಗಣಿಸುತ್ತದೆ ಎಂದು ತಾಲಿಬಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಅಬ್ದುಲ್ ಕಹರ್ ಬಾಲ್ಖಿ ಹೇಳಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದಿಂದ ಬಂದ ಶೇ.87 ಮಂದಿಗೆ ಭಾರತದ ಪೌರತ್ವ

    ಇತ್ತೀಚೆಗೆ ಭದ್ರತಾ ಮಂಡಳಿ ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಹಾಗೂ ಹೆಣ್ಣು ಮಕ್ಕಳ ಮೂಲಭೂತ ಹಕ್ಕುಗಳನ್ನು ನಿರ್ಬಂಧಿಸುವ ನೀತಿಗಳನ್ನು ತಕ್ಷಣವೇ ತೆಗೆದುಹಾಕುವಂತೆ ತಾಲಿಬಾನ್‌ಗೆ ಸೂಚಿಸಿತ್ತು.

    ಅಫ್ಘಾನ್ ಮಹಿಳೆಯರ ಶಿಕ್ಷಣ, ಉದ್ಯೋಗ, ಚಳುವಳಿಯ ಸ್ವಾತಂತ್ರ್ಯ ಹಾಗೂ ಸಾರ್ವಜನಿಕ ಜೀವನದಲ್ಲಿ ಮಹಿಳೆಯರ ಭಾಗವಹಿಸುವಿಕೆಯ ಮೇಲೆ ತಾಲಿಬಾನ್ ವಿಧಿಸಿರುವ ನಿರ್ಬಂಧಗಳನ್ನು ಅನುಸರಿಸಿ ಅಲ್ಲಿನ ಹುಡುಗಿಯರು ಹಾಗೂ ಮಹಿಳೆಯರ ಬಗ್ಗೆ ಆಳವಾಗಿ ಕಳವಳ ವ್ಯಕ್ತಪಡಿಸಿರುವುದಾಗಿ ತಿಳಿಸಿತ್ತು. ಇದನ್ನೂ ಓದಿ: 1991ರ ಕಾಯಿದೆ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಮತ್ತೊಂದು ಅರ್ಜಿ

    ಇತ್ತೀಚೆಗೆ ತಾಲಿಬಾನ್ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೇರಿದ ನಿರ್ಬಂಧ, ಕಟ್ಟುನಿಟ್ಟಿನ ಹಿಜಬ್ ಜಾರಿ ಹಾಗೂ ರಾಜಕೀಯರಂಗದಿಂದ ಮಹಿಳೆಯರನ್ನು ದೂರ ಉಳಿಸಿದ ಸಂದರ್ಭದಲ್ಲಿ ಭದ್ರತಾ ಮಂಡಳಿ ತಕ್ಷಣವೇ ವಿದ್ಯಾರ್ಥಿನಿಯರಿಗೆ ಶಾಲೆಗಳನ್ನು ತೆರೆಯಲು ಸೂಚನೆ ನೀಡಿತ್ತು.

  • ಅಫ್ಘಾನಿಸ್ತಾನದ ವಿಮಾನ ಕಾರ್ಯಾಚರಣೆಗೆ ಯುಎಇ ಜೊತೆ ತಾಲಿಬಾನ್ ಒಪ್ಪಂದ

    ಅಫ್ಘಾನಿಸ್ತಾನದ ವಿಮಾನ ಕಾರ್ಯಾಚರಣೆಗೆ ಯುಎಇ ಜೊತೆ ತಾಲಿಬಾನ್ ಒಪ್ಪಂದ

    ಕಾಬೂಲ್: ಅಫ್ಘಾನಿಸ್ತಾನದಲ್ಲಿ ವಿಮಾನ ಕಾರ್ಯಾಚರಣೆ ಹಾಗೂ ವಿಮಾನ ನಿಲ್ದಾಣ ನಿರ್ವಹಣೆ ಕುರಿತು ತಾಲಿಬಾನ್, ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ)ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.

    ತಾಲಿಬಾನ್ ಯುಎಇ, ಟರ್ಕಿ ಹಾಗೂ ಕತಾರ್‌ನೊಂದಿಗೆ ಈ ಬಗ್ಗೆ ಮಾತುಕತೆ ನಡೆಸಿದ್ದು, ಮಂಗಳವಾರ ಒಪ್ಪಂದಕ್ಕೆ ಸಹಿ ಹಾಕಿದೆ.

    ತಾಲಿಬಾನ್‌ನ ಸಾರಿಗೆ ಮತ್ತು ನಾಗರಿಕ ವಿಮಾನಯಾನದ ಉಪ ಮಂತ್ರಿ ಗುಲಾಮ್ ಜೈಲಾನಿ ವಫಾ ಅವರು ಮೊದಲ ಉಪ ಪ್ರಧಾನಮಂತ್ರಿ ಮುಲ್ಲಾ ಅಬ್ದುಲ್ ಘನಿ ಬರಾದರ್ ಅವರ ಸಮ್ಮುಖದಲ್ಲಿ ಮಂಗಳವಾರ ಜಿಎಎಸಿ ನಿಗಮದ ಪ್ರತಿನಿಧಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದರು. ಇದನ್ನೂ ಓದಿ: ಹೆಚ್‍ಡಿಕೆ ಮನೆಯಲ್ಲಿನ ದೇವಸ್ಥಾನ ಪುಡಿ ಮಾಡಿದ್ರೆ ಸುಮ್ಮನಿರುತ್ತಿದ್ದರಾ?- ಈಶ್ವರಪ್ಪ

    ಒಪ್ಪಂದಕ್ಕೆ ಸಹಿ ಹಾಕುವ ವೇಳೆ ಮಾತನಾಡಿದ ಮುಲ್ಲಾ ಬರದಾರ್, ದೇಶದ ಭದ್ರತೆ ಬಲವಾಗಿದೆ ಹಾಗೂ ಇಸ್ಲಾಮಿಕ್ ಎಮಿರೇಟ್ಸ್, ವಿದೇಶಿ ಹೂಡಿಕೆದಾರರೊಂದಿಗೆ ಕೆಲಸ ಮಾಡಲು ಸಿದ್ಧವಾಗಿದೆ. ಎಲ್ಲಾ ವಿದೇಶೀ ವಿಮಾನಯಾನ ಸಂಸ್ಥೆಗಳು ಅಫ್ಘಾನಿಸ್ತಾನಕ್ಕೆ ಸುರಕ್ಷಿತವಾಗಿ ಹಾಗೂ ವಿಶ್ವಾಸಾರ್ಹವಾಗಿ ಹಾರಾಟ ಪ್ರಾರಂಭಿಸಬಹುದು ಎಂದು ಭರವಸೆ ನಿಡಿದರು. ಇದನ್ನೂ ಓದಿ: ಮಹಾರಾಷ್ಟ್ರ ಸಚಿವ ಅನಿಲ್ ಪರಬ್ ಮನೆ, ಕಚೇರಿ ಮೇಲೆ ಇಡಿ ದಾಳಿ

    ಆಗಸ್ಟ್ 2021ರಲ್ಲಿ ತಾಲಿಬಾನ್ ಅಫ್ಘಾನಿಸ್ತಾನವನ್ನು ಸ್ವಾಧೀನಪಡಿಸಿಕೊಂಡಿತು ಹಾಗೂ ಹಿಂದಿನ ಸರ್ಕಾರ ಪತನವಾಯಿತು. 2021ರ ಡಿಸೆಂಬರ್‌ನಲ್ಲಿ ಟರ್ಕಿಶ್ ಹಾಗೂ ಕತಾರಿ ಕಂಪನಿಗಳು ಕಾಬೂಲ್ ವಿಮಾನ ನಿಲ್ದಾಣವನ್ನು ನಿರ್ವಹಿಸಲು ಜ್ಞಾಪಕ ಪತ್ರಕ್ಕೆ ಸಹಿ ಹಾಕಿದವು. ಅಫ್ಘಾನಿಸ್ತಾನದಲ್ಲಿ ತೀವ್ರ ಆರ್ಥಿಕ ಪರಿಸ್ಥಿತಿ ಇರುವುದರಿಂದ ಈಗಲೂ ಬಾಲ್ಖ್, ಹೆರಾತ್, ಕಂದಹಾರ್ ಹಾಗೂ ಖೋಸ್ಟ್ ನಗರಗಳ ವಿಮಾನ ನಿಲ್ದಾಣಗಳು ಕಾರ್ಯನಿರ್ವಹಿಸಲು ಹೆಣಗಾಡುತ್ತಿವೆ.

  • ದೂರದರ್ಶನ ನಿರೂಪಕಿಯರೇ, ಮುಖ ಮುಚ್ಚಿ ನಿರೂಪಣೆ ಮಾಡಿ: ತಾಲಿಬಾನ್

    ದೂರದರ್ಶನ ನಿರೂಪಕಿಯರೇ, ಮುಖ ಮುಚ್ಚಿ ನಿರೂಪಣೆ ಮಾಡಿ: ತಾಲಿಬಾನ್

    ಕಾಬೂಲ್: ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ದಿನೇ ದಿನೇ ಮಹಿಳೆಯರ ಸ್ವತಂತ್ರ್ಯವನ್ನು ಕಸಿದುಕೊಳ್ಳುತ್ತಲೇ ಇದೆ. ಚಾಲನಾ ಪರವಾನಗಿ ಕಸಿದುಕೊಂಡಾಯ್ತು, ಪುರುಷರೊಂದಿಗೆ ಉದ್ಯಾನವನ, ಉಪಹಾರಗೃಹಕ್ಕೆ ಹೋಗುವುದನ್ನೂ ನಿಷೇಧಿಸಿತು. ಇದೀಗ ದೂರದರ್ಶನಗಳಲ್ಲಿ ಕೆಲಸ ಮಾಡುವ ನಿರೂಪಕಿಯರಿಗೂ ತಮ್ಮ ಮುಖವನ್ನು ಸಂಪೂರ್ಣವಾಗಿ ಮುಚ್ಚಿಕೊಳ್ಳುವಂತೆ ಆದೇಶಿಸಿದೆ.

    ದೂರದರ್ಶನ, ಸುದ್ದಿ ವಾಹಿನಿಗಳಲ್ಲಿ ಮಹಿಳಾ ನಿರೂಪಕಿಯರು ಸುದ್ದಿ ಪ್ರಸಾರ ಮಾಡುವ ಸಂದರ್ಭ ತಮ್ಮ ಮುಖವನ್ನು ಮುಚ್ಚಿಕೊಳ್ಳುವಂತೆ ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ದೂರದರ್ಶನ ಅಧಿಕಾರಿಗಳನ್ನು ಕೇಳಿದ್ದಾರೆ ಎಂದು ಗುರುವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಸೆಕ್ಸ್‌ನಿಂದಲೂ ಹರಡಬಹುದು ಮಂಕಿಪಾಕ್ಸ್- ತಜ್ಞರಿಂದ ಎಚ್ಚರಿಕೆ

    ಕೆಲವು ದಿನಗಳ ಹಿಂದೆ ತಾಲಿಬಾನ್ ಅಫ್ಘಾನಿಸ್ತಾನದ ಎಲ್ಲಾ ಮಹಿಳೆಯರೂ ಅಡಿಯಿಂದ ಮುಡಿ ವರೆಗೆ ತಮ್ಮ ದೇಹವನ್ನು ಮುಚ್ಚಿಕೊಳ್ಳಬೇಕಾಗಿ ಆದೇಶ ನೀಡಿತ್ತು. ಇದೀಗ ಸುದ್ದಿ ನಿರೂಪಕಿಯರಿಗೂ ಮುಖ ಮುಚ್ಚಿಕೊಳ್ಳುವಂತೆ ಹೇಳಿದ್ದು, ಮೇ 21ರ ಒಳಗಾಗಿ ಎಲ್ಲಾ ನಿರೂಪಕಿಯರೂ ಈ ನಿಯಮವನ್ನು ಪಾಲಿಸಬೇಕಾಗಿ ಗಡುವು ನೀಡಿದೆ. ಇದನ್ನೂ ಓದಿ: ರಾಜ್ಯದಲ್ಲಿ 124 ಮಂದಿಗೆ ಕೊರೊನಾ -159 ಮಂದಿ ಡಿಸ್ಚಾರ್ಜ್

    ತಾಲಿಬಾನ್ ಮತ್ತೆ ಈ ಹಿಂದೆ ವಿಧಿಸುತ್ತಿದ್ದ ಕಠಿಣ ಕ್ರಮಗಳನ್ನು ಮುಂದುವರಿಸಲಾರಂಭಿಸಿದೆ. ತಾಲಿಬಾನ್‌ನ ಈ ಕಠಿಣ ನಿಯಮಗಳಿಂದ ಅಫ್ಘಾನಿಸ್ತಾನ ಮಾತ್ರವಲ್ಲದೇ ವಿದೇಶಗಳಲ್ಲೂ ಜನರು ಕೆಂಗಣ್ಣು ತೋರಿದ್ದಾರೆ. ಮುಖ್ಯವಾಗಿ ಮಹಿಳೆಯರ ಸ್ವತಂತ್ರ್ಯವನ್ನು ಕಿವುಚಿ ಹಾಕುತ್ತಿರುವ ತಾಲಿಬಾನ್ ಬಗ್ಗೆ ಎಲ್ಲೆಲ್ಲೂ ಟೀಕೆಗಳು ಗ್ರಾಸವಾಗುತ್ತಿವೆ.

  • ಪುರುಷ-ಮಹಿಳೆ ರೆಸ್ಟೋರೆಂಟ್‌ನಲ್ಲಿ ಒಟ್ಟಿಗೆ ಕುಳಿತು ಊಟ ಮಾಡುವಂತಿಲ್ಲ, ಪಾರ್ಕ್‌ಗೆ ಹೋಗುವಂತಿಲ್ಲ: ತಾಲಿಬಾನ್‌

    ಪುರುಷ-ಮಹಿಳೆ ರೆಸ್ಟೋರೆಂಟ್‌ನಲ್ಲಿ ಒಟ್ಟಿಗೆ ಕುಳಿತು ಊಟ ಮಾಡುವಂತಿಲ್ಲ, ಪಾರ್ಕ್‌ಗೆ ಹೋಗುವಂತಿಲ್ಲ: ತಾಲಿಬಾನ್‌

    ಕಾಬೂಲ್‌: ಪಶ್ಚಿಮ ಆಫ್ಘಾನಿಸ್ತಾನದ ಹೆರಾತ್‌ ನಗರದಲ್ಲಿ ಪುರುಷರು ಮತ್ತು ಮಹಿಳೆಯರು ಒಟ್ಟಿಗೆ ಕುಳಿತು ಊಟ ಮಾಡುವುದು ಹಾಗೂ ಉದ್ಯಾನಗಳಿಗೆ ಭೇಟಿ ನೀಡುವುದನ್ನು ತಾಲಿಬಾನ್‌ ನಿಷೇಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಆಫ್ಘಾನಿಸ್ತಾನವು ಸಂಪ್ರದಾಯವಾದಿ ಮತ್ತು ಪಿತೃಪ್ರಭುತ್ವದ ರಾಷ್ಟ್ರವಾಗಿದೆ. ಆದರೆ ರೆಸ್ಟೋರೆಂಟ್‌ಗಳಲ್ಲಿ ಪುರುಷರು ಮತ್ತು ಮಹಿಳೆಯರು ಒಟ್ಟಿಗೆ ಕುಳಿತು ಊಟ ಮಾಡುವುದನ್ನು ಸಾಮಾನ್ಯ ಎನ್ನುವಂತಾಗಿದೆ. ಮುಖ್ಯವಾಗಿ ಆಫ್ಘಾನ್‌ ಮಾನದಂಡಗಳನ್ನು ಮೀರಿ ಉದಾರವಾದಿ ನಗರ ಎನಿಸಿರುವ ಹೆರಾತ್‌ನಲ್ಲಿ ಇಂತಹ ದೃಶ್ಯಗಳು ಸಾಮಾನ್ಯವಾಗಿದೆ. ಇಲ್ಲೂ ಸಹ ತಾಲಿಬಾನ್‌ ಕಠಿಣ ನಿಯಮಗಳನ್ನು ವಿಧಿಸಿದೆ. ಇದನ್ನೂ ಓದಿ: ಮಹಿಳೆಯರ ಮೇಲೆ ತಾಲಿಬಾನ್ ವಿಧಿಸುತ್ತಿರುವ ನಿರ್ಬಂಧ ಖಂಡಿಸಿದ G7

    ಆಗಸ್ಟ್‌ನಲ್ಲಿ ಆಫ್ಘಾನಿಸ್ತಾನದಲ್ಲಿ ಅಧಿಕಾರಕ್ಕೆ ಮರಳಿದ ನಂತರ ತಾಲಿಬಾನ್‌, ಪುರುಷರು ಮತ್ತು ಮಹಿಳೆಯರನ್ನು ಪ್ರತ್ಯೇಕಿಸುವ ನಿರ್ಬಂಧಗಳನ್ನು ವಿಧಿಸುತ್ತಿದೆ.

    ಹೆರಾತ್‌ನಲ್ಲಿ ಸದ್ಗುಣ ಪ್ರಚಾರ ಮತ್ತು ದುರಾಚಾರ ತಡೆಗಟ್ಟುವಿಕೆ ಸಚಿವಾಲಯದ ತಾಲಿಬಾನ್ ಅಧಿಕಾರಿ ರಿಯಾಜುಲ್ಲಾ ಸೀರತ್, ರೆಸ್ಟೋರೆಂಟ್‌ಗಳಲ್ಲಿ ಪುರುಷರು ಮತ್ತು ಮಹಿಳೆಯರನ್ನು ಪ್ರತ್ಯೇಕಿಸುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಈ ನಿಯಮ ಕೇವಲ ಪುರುಷ ಮತ್ತು ಮಹಿಳೆಯರಿಗಷ್ಟೇ ಅಲ್ಲ, ಗಂಡ-ಹೆಂಡತಿಗೂ ಅನ್ವಯವಾಗಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹೆಣ್ಣುಮಕ್ಕಳಿಗೆ ಶಿಕ್ಷಣ ನಿಷೇಧಿಸಿ ತನ್ನ ಪುತ್ರಿಯರನ್ನು ಶಾಲೆಗೆ ಸೇರಿಸಿದ ತಾಲಿಬಾನ್‌ ವಕ್ತಾರ

    ಹೆರಾತ್ ರೆಸ್ಟೋರೆಂಟ್‌ನಲ್ಲಿ ಪ್ರತ್ಯೇಕವಾಗಿ ಕುಳಿತುಕೊಳ್ಳುವಂತೆ ನನಗೆ ಮತ್ತು ನನ್ನ ಪತಿಗೆ ಮ್ಯಾನೇಜರ್‌ ಹೇಳಿದ್ದರು ಎಂದು ಹೆಸರು ಹೇಳಲಿಚ್ಛಿಸದ ಮಹಿಳೆಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

    ರೆಸ್ಟೋರೆಂಟ್‌ ಮಾಲೀಕ ಸಫೀವುಲ್ಲಾ ಅವರು ತಾಲಿಬಾನ್‌ ಕಠಿಣ ನಿಯಮ ವಿಧಿಸಿರುವುದನ್ನು ಖಚಿತಪಡಿಸಿದ್ದಾರೆ. ನಾವು ಆದೇಶವನ್ನು ಅನುಸರಿಸಬೇಕು. ಆದರೆ ಇದು ನಮ್ಮ ವ್ಯವಹಾರದ ಮೇಲೆ ಬಹಳ ಋಣಾತ್ಮಕ ಪರಿಣಾಮ ಬೀರುತ್ತದೆ ಎಂದು ಸಫೀವುಲ್ಲಾ ತಿಳಿಸಿದ್ದಾರೆ.

  • ಮಹಿಳೆಯರ ಮೇಲೆ ತಾಲಿಬಾನ್ ವಿಧಿಸುತ್ತಿರುವ ನಿರ್ಬಂಧ ಖಂಡಿಸಿದ G7

    ಮಹಿಳೆಯರ ಮೇಲೆ ತಾಲಿಬಾನ್ ವಿಧಿಸುತ್ತಿರುವ ನಿರ್ಬಂಧ ಖಂಡಿಸಿದ G7

    ಬರ್ಲಿನ್: ತಾಲಿಬಾನ್ ಸರ್ಕಾರ ಅಫ್ಘಾನ್‍ನಲ್ಲಿರುವ ಮಹಿಳೆಯರ ಮೇಲೆ ನಿರ್ಬಂಧಗಳನ್ನು ಹೆಚ್ಚು ವಿಧಿಸುತ್ತಿರುವುದನ್ನು ಏಳು ಕೈಗಾರಿಕೀಕರಣಗೊಂಡ ರಾಷ್ಟ್ರಗಳು(G7) ಖಂಡಿಸಿದೆ.

    ಮಹಿಳೆಯರು ಮತ್ತು ಹುಡುಗಿಯರ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಲು ತುರ್ತಾಗಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಾವು ತಾಲಿಬಾನ್‍ಗೆ ಕರೆ ನೀಡುತ್ತೇವೆ ಎಂದು ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಬ್ರಿಟನ್ ಮತ್ತು ಯುನೈಟೆಡ್ ಸ್ಟೇಟ್ಸ್‍ನ ವಿದೇಶಾಂಗ ಮಂತ್ರಿಗಳು ಗುರುವಾರ ತಿಳಿಸಿದ್ದಾರೆ. ಇದನ್ನೂ ಓದಿ: ಜಮ್ಮು-ಕಾಶ್ಮಿರದಲ್ಲಿ ಕಾಶ್ಮೀರಿ ಪಂಡಿತರ ಹತ್ಯೆ ಮುಂದುವರಿಯುತ್ತಿದೆ: ಒಮರ್ ಅಬ್ದುಲ್ಲಾ 

    ಸಮಾಜದಲ್ಲಿ ಸಂಪೂರ್ಣವಾಗಿ, ಸಮಾನವಾಗಿ ಭಾಗವಹಿಸಲು ಎಲ್ಲರಿಗೂ ಅವಕಾಶವಿದೆ. ಆ ಹಕ್ಕು ಮತ್ತು ಸಾಮರ್ಥ್ಯವನ್ನು ತೀವ್ರವಾಗಿ ಮಿತಿಗೊಳಿಸುವುದು ಮತ್ತು ನಿರ್ಬಂಧಿತ ಕ್ರಮಗಳನ್ನು ಹೇರುವುದನ್ನು ನಾವು ಖಂಡಿಸುತ್ತೇವೆ. ಮಹಿಳೆಯರು ಮತ್ತು ಹುಡುಗಿಯರ ಹಕ್ಕುಗಳನ್ನು ನಿರ್ಬಂಧಿಸುವ ಮೂಲಕ, ತಾಲಿಬಾನ್ ಅಂತರರಾಷ್ಟ್ರೀಯ ಸಮುದಾಯದಿಂದ ತಮ್ಮನ್ನು ಮತ್ತಷ್ಟು ಪ್ರತ್ಯೇಕಿಸಿಕೊಳ್ಳುತ್ತಿದೆ ಎಂದು ವಿರೋಧ ವ್ಯಕ್ತಪಡಿಸಿದರು.

    G7 Condemns Taliban Over Growing Restrictions On Afghan Women

    1996 ರಿಂದ 2001 ರ ಸಮಯದಲ್ಲಿ ತಾಲಿಬಾನ್ ಮಾನವ ಹಕ್ಕುಗಳನ್ನು ಉಲ್ಲಂಘಿಸಿ ಹಲವು ಕೃತ್ಯಗಳನ್ನು ಮಾಡಿತ್ತು. ಆದರೆ ಕಳೆದ ವರ್ಷ ತಾಲಿಬಾನ್ ಮತ್ತೆ ಅಧಿಕಾರವನ್ನು ವಶಪಡಿಸಿಕೊಳ್ಳಬೇಕಾದರೆ ನಾವು ಮಾನವ ಹಕ್ಕುಗಳನ್ನು ಯಾವುದೇ ಕಾರಣಕ್ಕೂ ಉಲ್ಲಂಘಿಸುವುದಿಲ್ಲ. ಶಾಂತಿಯಿಂದ ಆಡಳಿತ ನಡೆಸುತ್ತೇವೆ ಎಂದು ಭರವಸೆಯನ್ನು ಕೊಟ್ಟಿತ್ತು. ಇದನ್ನೂ ಓದಿ: ನಡು ರಸ್ತೆಯಲ್ಲಿ ಉಪನ್ಯಾಸಕನ ಬರ್ಬರ ಹತ್ಯೆ

    ಆದರೂ ಸಹ ತಾಲಿಬಾನ್ ಅಫ್ಘನ್ ಪ್ರಜೆಗಳ ಹಕ್ಕುಗಳನ್ನು ಹೆಚ್ಚು ನಿರ್ಬಂಧಿಸಿದೆ. ಅದರಲ್ಲಿಯೂ ವಿಶೇಷವಾಗಿ ಹುಡುಗಿಯರು ಮತ್ತು ಮಹಿಳೆಯರು ಮಾಧ್ಯಮಿಕ ಶಾಲೆಗಳಿಗೆ ಮತ್ತು ಅನೇಕ ಸರ್ಕಾರಿ ಉದ್ಯೋಗಗಳಿಗೆ ಬರುವುದನ್ನು ತಡೆಯಲಾಗಿದೆ. ಈ ಹಿನ್ನೆಲೆ G7 ರಾಷ್ಟ್ರ ತಾಲಿಬಾನ್ ಸರ್ಕಾರದ ನಡವಳಿಕೆಯನ್ನು ತೀವ್ರವಾಗಿ ಖಂಡಿಸುತ್ತಿದೆ.

  • ಹೆಣ್ಣುಮಕ್ಕಳಿಗೆ ಶಿಕ್ಷಣ ನಿಷೇಧಿಸಿ ತನ್ನ ಪುತ್ರಿಯರನ್ನು ಶಾಲೆಗೆ ಸೇರಿಸಿದ ತಾಲಿಬಾನ್‌ ವಕ್ತಾರ

    ಹೆಣ್ಣುಮಕ್ಕಳಿಗೆ ಶಿಕ್ಷಣ ನಿಷೇಧಿಸಿ ತನ್ನ ಪುತ್ರಿಯರನ್ನು ಶಾಲೆಗೆ ಸೇರಿಸಿದ ತಾಲಿಬಾನ್‌ ವಕ್ತಾರ

    ಕಾಬೂಲ್: ಆಫ್ಘಾನಿಸ್ತಾನದಲ್ಲಿ ಹೆಣ್ಣುಮಕ್ಕಳಿಗೆ ಶಿಕ್ಷಣ ನಿಷೇಧಿಸಿರುವ ಹೊತ್ತಿನಲ್ಲೇ ತಾಲಿಬಾನ್‌ ವಕ್ತಾರ ತನ್ನ ಪುತ್ರಿಯರನ್ನು ಶಾಲೆಗೆ ಸೇರಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

    ತಾಲಿಬಾನ್‌ ವಕ್ತಾರ ಸುಹೇಲ್ ಶಾಹೀನ್ ತನ್ನ ಪುತ್ರಿಯರನ್ನು ಶಾಲೆಗೆ ಸೇರಿಸಿದ್ದಾರೆ. ಈ ಕುರಿತು ಟಿವಿ ಸಂದರ್ಶನದಲ್ಲಿ ಮಾಹಿತಿ ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ: ಶ್ರೀಲಂಕಾದಲ್ಲಿ ಹೊಸ ಸರ್ಕಾರ ರಚನೆಗೆ ವಿಪಕ್ಷ ನಾಯಕ ಒಪ್ಪಿಗೆ

    ಅವರು ಹಿಜಾಬ್‌ಗೆ ಆದ್ಯತೆ ನೀಡುತ್ತಾರೆ. ನಾವು ನಮ್ಮ ಜನರನ್ನು ನಿರಾಕರಿಸಿಲ್ಲ ಎಂದು ಶಾಹೀನ್‌ ಸಂದರ್ಶನದಲ್ಲಿ ಅಭಿಪ್ರಾಯಪಟ್ಟಿದ್ದಾರೆ. ದೂರದರ್ಶನ ವರದಿಗಾರರೊಬ್ಬರು ಸಂದರ್ಶನದ ವೀಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

    ಇದಕ್ಕೆ ಅನೇಕರು ಟೀಕೆ ಹಾಗೂ ವ್ಯಂಗ್ಯಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಸುಹೇಲ್ ಶಾಹೀನ್ ಅವರದ್ದು ಬೂಟಾಟಿಕೆ ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ. ನಿಜಕ್ಕೂ ಇದು ಬೂಟಾಟಿಕೆ. ತಾಲಿಬಾನ್‌ಗಳು ತಮ್ಮ ಮಕ್ಕಳಿಗೆ ಶಾಲೆಗೆ ಹೋಗಲು ಅವಕಾಶ ಮಾಡಿಕೊಡುತ್ತಾರೆ. ಆದರೆ ಇತರರಿಗೆ ಶಿಕ್ಷಣವನ್ನು ನಿಷೇಧಿಸುತ್ತಾರೆ ಎಂದು ಮತ್ತೊಬ್ಬರು ಕಾಮೆಂಟ್‌ ಮಾಡಿ ಟೀಕಿಸಿದ್ದಾರೆ. ಇದನ್ನೂ ಓದಿ: ಉತ್ತರ ಕೊರಿಯಾದಲ್ಲಿ ಮೊದಲ ಬಾರಿಗೆ ಕೊರೊನಾ ಪ್ರಕರಣ ಪತ್ತೆ- ಕಟ್ಟುನಿಟ್ಟಿನ ಲಾಕ್‌ಡೌನ್‌ ಘೋಷಣೆ

    ಈ ವ್ಯಕ್ತಿಯ ಹೆಣ್ಣುಮಕ್ಕಳು ಹಿಜಬ್‌ಗೆ ಆದ್ಯತೆ ನೀಡಿ ಶಿಕ್ಷಣವನ್ನು ಪಡೆಯುತ್ತಾರೆ. ಈ ವ್ಯಕ್ತಿಯ ಒಬ್ಬ ಮಗಳು ಕತಾರಿ ಫುಟ್ಬಾಲ್ ತಂಡದಲ್ಲಿ ಆಡುತ್ತಾಳೆ. ಈ ವ್ಯಕ್ತಿಯ ಇನ್ನೊಬ್ಬ ಮಗಳಿಗೆ ಕತಾರಿ ಬಾಯ್‌ಫ್ರೆಂಡ್ ಇದ್ದಾನೆ. ಆಫ್ಘನ್ ಹುಡುಗಿಯರೂ ಹಿಜಬ್‌ಗೆ ಆದ್ಯತೆ ನೀಡುತ್ತಾರೆ. ಆದರೆ 6 ನೇ ತರಗತಿಯ ನಂತರ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಅವರು ಕ್ರೀಡೆಗಳಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂದು ಇನ್ನೊಬ್ಬರು ಕುಟುಕಿದ್ದಾರೆ.

  • ಹಿಜಬ್‌ ಆದೇಶಕ್ಕೆ ಅಮೆರಿಕ ಕಳವಳ – ಅಂತಾರಾಷ್ಟ್ರೀಯ ಸಂಬಂಧ ಹದಗೆಡುತ್ತೆ ಎಂದ ಯುಎಸ್‌

    ಹಿಜಬ್‌ ಆದೇಶಕ್ಕೆ ಅಮೆರಿಕ ಕಳವಳ – ಅಂತಾರಾಷ್ಟ್ರೀಯ ಸಂಬಂಧ ಹದಗೆಡುತ್ತೆ ಎಂದ ಯುಎಸ್‌

    ವಾಷಿಂಗ್ಟನ್‌: ಆಫ್ಘಾನ್‌ ಮಹಿಳೆಯರು ಹಿಜಬ್‌ ಧರಿಸುವ ಕುರಿತು ತಾಲಿಬಾನ್‌ ಹೊರಡಿಸಿರುವ ಆದೇಶಕ್ಕೆ ಅಮೆರಿಕ ಕಳವಳ ವ್ಯಕ್ತಪಡಿಸಿದೆ. ಮಹಿಳೆಯರ ಹಕ್ಕಿನ ವಿಚಾರವಾಗಿ ತಾಲಿಬಾನ್‌ ತೆಗೆದುಕೊಂಡಿರುವ ನಿರ್ಧಾರವು, ಅಂತಾರಾಷ್ಟ್ರೀಯ ಸಮುದಾಯದೊಂದಿಗಿನ ಅವರ ಸಂಬಂಧದ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಅಮೆರಿಕ ಎಚ್ಚರಿಸಿದೆ.

    ಆಫ್ಘಾನಿಸ್ತಾನದ ಮಹಿಳೆಯರು ತಲೆಯಿಂದ ಕಾಲಿನವರೆಗೂ ಮುಚ್ಚುವಂತೆ ಹಿಜಬ್‌ ಧರಿಸಬೇಕೆಂದು ತಾಲಿಬಾನ್‌ ಹೊರಡಿಸಿರುವ ಆದೇಶವು ಮಹಿಳೆಯರ ಹಕ್ಕಿನ ಉಲ್ಲಂಘನೆ ಎಂದು ಆಫ್ಘಾನಿಸ್ತಾನದ ಯುನೈಟೆಡ್ ಸ್ಟೇಟ್ಸ್ ವಿಶೇಷ ಪ್ರತಿನಿಧಿ ಥಾಮಸ್ ವೆಸ್ಟ್ ಹೇಳಿದ್ದಾರೆ. ಇದನ್ನೂ ಓದಿ: 1945 ರಲ್ಲಿದ್ದಂತೆ, ವಿಜಯವು ನಮ್ಮದಾಗಿರುತ್ತದೆ: ಪುಟಿನ್ ಪ್ರತಿಜ್ಞೆ

    ಮಹಿಳೆಯರು ಮತ್ತು ಹೆಣ್ಣುಮಕ್ಕಳ ಹಕ್ಕುಗಳನ್ನು ನಿರ್ಬಂಧಿಸುವ ತಾಲಿಬಾನ್‌ನ ಇತ್ತೀಚಿನ ನೀತಿಗಳ ಬಗ್ಗೆ ವಿರೋಧ ವ್ಯಕ್ತಪಡಿಸಲು ನಾವು ಆಫ್ಘನ್ನರು ಮತ್ತು ಪ್ರಪಂಚದ ಸಹೋದ್ಯೋಗಿಗಳೊಂದಿಗೆ ಒಂದಾಗುತ್ತೇವೆ ಎಂದು ಥಾಮಸ್‌ ಟ್ವೀಟ್‌ ಮಾಡಿದ್ದಾರೆ.

    ಶಿಕ್ಷಣ ಮತ್ತು ಕೆಲಸಕ್ಕೆ ಹೆಣ್ಣುಮಕ್ಕಳ ಪ್ರವೇಶದ ಮೇಲಿನ ನಿರಂತರ ನಿಷೇಧ, ಚಟುವಟಿಕೆಯ ಸ್ವಾತಂತ್ರ್ಯದ ಮೇಲಿನ ನಿರ್ಬಂಧ ಮತ್ತು ಶಾಂತಿಯುತ ಪ್ರತಿಭಟನಾಕಾರರನ್ನು ಗುರಿಯಾಗಿಸುವುದು ಸೇರಿದಂತೆ ತಾಲಿಬಾನ್‌ನ ಆಕ್ಷೇಪಾರ್ಹ ನಡೆಗೆ ಅಮೆರಿಕ ಟೀಕೆ ವ್ಯಕ್ತಪಡಿಸಿದೆ. ಇದನ್ನೂ ಓದಿ: ಉಕ್ರೇನ್ ಬಿಕ್ಕಟ್ಟು- ಶಾಲೆಯ ಮೇಲೆ ರಷ್ಯಾ ಬಾಂಬ್ ದಾಳಿ, 60 ಮಂದಿ ಸಾವು

    ಮಹಿಳೆಯರ ಬಗೆಗಿನ ತಾಲಿಬಾನ್‌ನ ನೀತಿಗಳು ಮಾನವ ಹಕ್ಕುಗಳಿಗೆ ಅಪಚಾರವಾಗಿದೆ. ಇದರಿಂದ ಅಂತಾರಾಷ್ಟ್ರೀಯ ಸಮುದಾಯದೊಂದಿಗಿನ ತಾಲಿಬಾನ್ ಸಂಬಂಧಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ತಿಳಿಸಿದ್ದಾರೆ.

    ಆಫ್ಘಾನಿಸ್ತಾನದ ಮಹಿಳೆಯರು ಸಾರ್ವಜನಿಕ ಸ್ಥಳಗಳಲ್ಲಿ ತಲೆಯಿಂದ ಕಾಲಿನವರೆಗೂ ಮುಚ್ಚಿಕೊಳ್ಳುವಂತೆ ಬುರ್ಕಾವನ್ನು ಧರಿಸುವಂತೆ ಆದೇಶ ಹೊರಡಿಸಿದೆ. ನಿಯಮ ಉಲ್ಲಂಘಿಸಿದರೆ ಕುಟುಂಬದ ಪುರುಷ ಸದಸ್ಯನನ್ನು ಮೂರು ದಿನಗಳ ಕಾಲ ಜೈಲಿನಲ್ಲಿಡಲಾಗುವುದು ಎಂದು ತಾಲಿಬಾನ್‌ ಪರಿಶೀಲಿಸಿತ್ತು. ಇದನ್ನೂ ಓದಿ: ತಲೆಯಿಂದ ಕಾಲಿನವರೆಗೆ ದೇಹ ಮುಚ್ಚಿಕೊಳ್ಳಿ – ಅಫ್ಘಾನ್ ಮಹಿಳೆಯರಿಗೆ ತಾಲಿಬಾನ್ ಆದೇಶ

    ತಾಲಿಬಾನ್‌ ತೀರ್ಪಿನ ಪ್ರಕಾರ, ಮಹಿಳೆ ಹಿಜಬ್ ಧರಿಸದಿದ್ದರೆ, ಮೊದಲು ಆಕೆಯ ಪೋಷಕರಿಗೆ ಎಚ್ಚರಿಕೆ ನೀಡಲಾಗುತ್ತದೆ. ಆಕೆ ಮತ್ತೆ ತಪ್ಪಿತಸ್ಥಳೆಂದು ಸಾಬೀತಾದರೆ ಆಕೆಯ ಮನೆಯ ಪುರುಷ ಸದಸ್ಯನನ್ನು ಕರೆಸಿ ಸಲಹೆ ನೀಡಲಾಗುವುದು. ಈ ತಪ್ಪು ಪುನರಾವರ್ತನೆಯಾದರೆ ಪುರುಷ ಸದಸ್ಯನನ್ನು ಮೂರು ದಿನಗಳವರೆಗೆ ಜೈಲಿನಲ್ಲಿಡಲಾಗುತ್ತದೆ ಎಂದು ಎಚ್ಚರಿಸಿತ್ತು.

  • ತಲೆಯಿಂದ ಕಾಲಿನವರೆಗೆ ದೇಹ ಮುಚ್ಚಿಕೊಳ್ಳಿ – ಅಫ್ಘಾನ್ ಮಹಿಳೆಯರಿಗೆ ತಾಲಿಬಾನ್ ಆದೇಶ

    ಕಾಬೂಲ್: ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತ ಶನಿವಾರ ಎಲ್ಲಾ ಅಫ್ಘಾನ್ ಮಹಿಳೆಯರಿಗೆ ಸಾರ್ವಜನಿಕವಾಗಿ ತಲೆಯಿಂದ ಕಾಲಿನವರೆಗೂ ಸಂಪೂರ್ಣ ಉಡುಪುಗಳನ್ನು ಧರಿಸಲು ಆದೇಶಿಸಿದೆ.

    ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಅಫ್ಘಾನಿಸ್ತಾನದ ಸರ್ಕಾರ ಪತನವಾಗಿ ತಾಲಿಬಾನ್ ಆಡಳಿತಕ್ಕೆ ಬಂತು. ಅಂದಿನಿಂದ ಅಲ್ಲಿನ ನಾಗರಿಕರಿಗೆ, ಮುಖ್ಯವಾಗಿ ಮಹಿಳೆಯರನ್ನು ಗುರಿಯಾಗಿಸಿಕೊಂಡಿರುವ ತಾಲಿಬಾನ್ ಜನರ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತಿದೆ. ಇದನ್ನೂ ಓದಿ: 21 ವರ್ಷಗಳಿಂದ ಪತ್ನಿ ಶವದೊಂದಿಗಿದ್ದ ವೃದ್ಧನಿಂದ ಕೊನೆಗೂ ಅಂತ್ಯಕ್ರಿಯೆ!

    ತಾಲಿಬಾನ್ ಇತ್ತೀಚೆಗೆ ಹೊರಡಿಸಿರುವ ಆದೇಶಗಳಲ್ಲಿ ಮುಖ್ಯವಾಗಿ ಮಹಿಳೆಯರ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟು ಮಾಡುತ್ತಿದೆ. ಇತ್ತೀಚೆಗೆ ತಾಲಿಬಾನ್ ಮಹಿಳೆಯರಿಗೆ ಒಂಟಿಯಾಗಿ ಪ್ರಯಾಣಿಸುವುದನ್ನು ನಿಷೇಧಿಸಿತ್ತು. ಆದರೆ ಈ ಕಾನೂನಿಗೆ ಪ್ರಜೆಗಳು ವಿರೋಧ ವ್ಯಕ್ತಪಡಿಸಿದ್ದು, ಬಳಿಕ ಮೌನವಾಗಿ ಕಾನೂನನ್ನು ನಿರ್ಲಕ್ಷಿಸಲಾಗಿದೆ. ಇದನ್ನೂ ಓದಿ: ಉಕ್ರೇನ್‌ಗೆ ಬ್ರಿಟನ್‌ನಿಂದ ಮತ್ತೆ 12 ಸಾವಿರ ಕೋಟಿ ಮಿಲಿಟರಿ ನೆರವು

    ತಾಲಿಬಾನ್‌ನ ಇತ್ತೀಚೆಗೆ ಕಾಬೂಲ್ ಹಾಗೂ ಇತರ ಪ್ರಾಂತ್ಯಗಳಲ್ಲಿ ಮಹಿಳೆಯರಿಗೆ ಡ್ರೈವಿಂಗ್ ಲೈಸೆನ್ಸ್(ವಾಹನ ಪರವಾನಗಿ) ನೀಡುವುದನ್ನೂ ನಿಲ್ಲಿಸಿದೆ. ಅಫ್ಘಾನಿಸ್ತಾನದಲ್ಲಿ ಆಹಾರ ಹಾಗೂ ಅಗತ್ಯ ವಸ್ತುಗಳ ಸರಬರಾಜಿನ ತೀವ್ರ ಕೊರತೆ ಉಂಟಾಗಿದೆ. ದೇಶ ವಿನಾಶಕಾರಿ ಮಾನವೀಯ ಬಿಕ್ಕಟ್ಟನ್ನು ಎದುರಿಸುತ್ತಿರುವ ನಡುವೆಯೂ ಹಲವಾರು ನಿಷೇಧಗಳನ್ನು ಹೇರುತ್ತಿದೆ.