Tag: ತಾಲಿಬಾನ್

  • ಇನ್ಮುಂದೆ ಅಫ್ಘಾನ್‌ ವಿದ್ಯಾರ್ಥಿನಿಯರಿಗೆ ವಿಶ್ವವಿದ್ಯಾನಿಲಯ ಶಿಕ್ಷಣಕ್ಕೂ ಅವಕಾಶವಿಲ್ಲ

    ಇನ್ಮುಂದೆ ಅಫ್ಘಾನ್‌ ವಿದ್ಯಾರ್ಥಿನಿಯರಿಗೆ ವಿಶ್ವವಿದ್ಯಾನಿಲಯ ಶಿಕ್ಷಣಕ್ಕೂ ಅವಕಾಶವಿಲ್ಲ

    ಕಾಬೂಲ್: ಅಫ್ಘಾನಿಸ್ತಾನದ (Afghanistan) ವಿಶ್ವವಿದ್ಯಾನಿಲಯಕ್ಕೆ (University Education) ವಿದ್ಯಾರ್ಥಿನಿಯರಿಗೆ ಪ್ರವೇಶವನ್ನು ತಾಲಿಬಾನ್ (Taliban) ಸರ್ಕಾರ ನಿಷೇಧಿಸಿದೆ.

    ಕಳೆದ ವರ್ಷ ಅಧಿಕಾರವನ್ನು ವಶಪಡಿಸಿಕೊಂಡಾಗ ಮೃದುವಾದ ಆಡಳಿತವನ್ನು ಭರವಸೆ ನೀಡಿದ್ದರೂ, ವಿದ್ಯಾರ್ಥಿನಿಯರಿಗೆ ಎಲ್ಲಾ ರೀತಿಯ ನಿರ್ಬಂಧಗಳನ್ನು ಹೆಚ್ಚಿಸಿದೆ. ಇದೀಗ ಎಲ್ಲಾ ಸರ್ಕಾರಿ ಮತ್ತು ಖಾಸಗಿ ವಿಶ್ವವಿದ್ಯಾಲಯಗಳಿಗೆ ಉನ್ನತ ಶಿಕ್ಷಣ ಸಚಿವ ನೇದಾ ಮೊಹಮ್ಮದ್ ನದೀಮ್ ಆದೇಶ ಪತ್ರವನ್ನು ನೀಡಿದ್ದು, ಅದರಲ್ಲಿ ಮುಂದಿನ ಸೂಚನೆ ಬರುವವರೆಗೆ ವಿದ್ಯಾರ್ಥಿನಿಯರ ಶಿಕ್ಷಣವನ್ನು ಅಮಾನತುಗೊಳಿಸಬೇಕು. ಈ ಆದೇಶ ತಕ್ಷಣವೇ ಜಾರಿಗೆ ತರಬೇಕು ಎಂದು ತಿಳಿಸಿದೆ.

    ಈ ಆದೇಶಕ್ಕೆ ಅಮೆರಿಕ ಖಂಡಿಸಿದ್ದು, ಅಫ್ಘಾನಿಸ್ತಾನದಲ್ಲಿರುವ ಎಲ್ಲರ ಹಕ್ಕುಗಳನ್ನು ಗೌರವಿಸುವವರೆಗೆ ತಾಲಿಬಾನ್ ಅಂತಾರಾಷ್ಟ್ರೀಯ ಸಮುದಾಯದ ಕಾನೂನುಬದ್ಧ ಸದಸ್ಯತ್ವಕ್ಕೆ ನಿರೀಕ್ಷಿಸಲಾಗುವುದಿಲ್ಲ. ಈ ನಿರ್ಧಾರವು ತಾಲಿಬಾನ್‍ಗೆ ತೊಂದರೆಯನ್ನು ಉಂಟು ಮಾಡುತ್ತದೆ ಎಂದು ತಿಳಿಸಿದೆ. ಇದನ್ನೂ ಓದಿ: ಭೈರಿದೇವರಕೊಪ್ಪ ದರ್ಗಾ ತೆರವು ಕಾರ್ಯಾಚರಣೆ ಆರಂಭ

    ತಾಲಿಬಾನ್‍ನಿಂದ ಅಫ್ಘಾನಿಸ್ತಾನವನ್ನು ಸ್ವಾಧೀನಪಡಿಸಿಕೊಂಡ ನಂತರ, ವಿಶ್ವವಿದ್ಯಾನಿಲಯಗಳು ವಿದ್ಯಾರ್ಥಿನಿಯರಿಗೆ ಹಾಗೂ ಪುರುಷರಿಗೆಂದೇ ಬೇರೆ ತರಗತಿಗಳು ಸೇರಿದಂತೆ ಹೊಸ ನಿಯಮಗಳನ್ನು ಜಾರಿಗೆ ತಂದಿತ್ತು. ಅಷ್ಟೇ ಅಲ್ಲದೇ ವಿದ್ಯಾರ್ಥಿನಿಯರಿಗೆ ಶಿಕ್ಷಣ ನೀಡಲು ಮಹಿಳಾ ಪ್ರಾಧ್ಯಾಪಕರಿಗೆ ಹಾಗೂ ವೃದ್ಧರಿಗೆ ಮಾತ್ರ ಕಲಿಸಲು ಅನುಮತಿ ನೀಡಲಾಗಿತ್ತು. ಅಷ್ಟೇ ಅಲ್ಲದೇ ಈ ಹಿಂದೆ ಎಲ್ಲ ನಾಗರಿಕ ಸೇವೆಯಿಂದ ಮಹಿಳೆಯರನ್ನು ವಜಾ ಗೊಳಿಸಿತ್ತು. ಇದನ್ನೂ ಓದಿ: ಜವಾಬ್ದಾರಿ ತೆಗೆದುಕೊಳ್ಳೋ ಮೂರ್ಖ ಸಿಕ್ಕ ತಕ್ಷಣ ಸಿಇಒ ಹುದ್ದೆಯಿಂದ ಕೆಳಗಿಯುತ್ತೇನೆ: ಮಸ್ಕ್

    Live Tv
    [brid partner=56869869 player=32851 video=960834 autoplay=true]

  • ಪಾಕಿಸ್ತಾನದ ಪೊಲೀಸ್ ಠಾಣೆ ವಶ – ಹಲವರನ್ನು ಒತ್ತೆಯಾಳಾಗಿಸಿಕೊಂಡ ತಾಲಿಬಾನ್

    ಪಾಕಿಸ್ತಾನದ ಪೊಲೀಸ್ ಠಾಣೆ ವಶ – ಹಲವರನ್ನು ಒತ್ತೆಯಾಳಾಗಿಸಿಕೊಂಡ ತಾಲಿಬಾನ್

    ಇಸ್ಲಾಮಾಬಾದ್: ತಾಲಿಬಾನ್ (Taliban) ಉಗ್ರರು (Terrorists) ಭಾನುವಾರ ಪಾಕಿಸ್ತಾನದ (Pakistan) ವಾಯುವ್ಯ ಪ್ರದೇಶದ ಖೈಬರ್ ಪಖ್ತುಂಖ್ವಾದಲ್ಲಿ ಪೊಲೀಸ್ ಠಾಣೆಯನ್ನು (Police Station) ವಶಪಡಿಸಿಕೊಂಡಿದ್ದಾರೆ ಮಾತ್ರವಲ್ಲದೇ ಹಲವಾರು ಭದ್ರತಾ ಸಿಬ್ಬಂದಿಯನ್ನು ಒತ್ತೆಯಾಳನ್ನಾಗಿ (Hostages) ಮಾಡಿಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

    ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (TTP) ಉಗ್ರರು ಪ್ರದೇಶದ ಬನ್ನು ಕಂಟೋನ್ಮೆಂಟ್ ಅನ್ನು ನುಸುಳಿ, ಜೈಲಿನಲ್ಲಿದ್ದ ಭಯೋತ್ಪಾದಕರನ್ನು ಬಿಡುಗಡೆ ಮಾಡಿದ್ದಾರೆ. ಬಳಿಕ ಕಾಂಪೌಂಡ್‌ನ ಒಂದು ಭಾಗವನ್ನು ವಶಕ್ಕೆ ಪಡೆದು, ಭಯೋತ್ಪಾದನಾ ನಿಗ್ರಹ ಇಲಾಖೆಗೆ (CTD) ಸೇರಿದ ಭದ್ರತಾ ಸಿಬ್ಬಂದಿಯನ್ನು ಒತ್ತೆಯಾಳನ್ನಾಗಿ ಇಟ್ಟುಕೊಂಡಿದ್ದಾರೆ ಎಂದು ಪಾಕಿಸ್ತಾನದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಭಯೋತ್ಪಾದಕರು ಹೊರಗಿನಿಂದ ದಾಳಿ ಮಾಡಿದ್ದಾರೋ ಅಥವಾ ಒಳಗಡೆ ಸಿಬ್ಬಂದಿಯಿಂದ ಶಸ್ತ್ರಾಸ್ತ್ರಗಳನ್ನು ಕಸಿದುಕೊಂಡಿದ್ದಾರೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಘಟನೆ ಬೆಳಕಿಗೆ ಬಂದ ತಕ್ಷಣ ಪಾಕಿಸ್ತಾನದ ಸೇನಾ ಪಡೆಯನ್ನು ನಿಯೋಜನೆ ಮಾಡಲಾಗಿದ್ದು, ಭದ್ರತಾ ಪಡೆಗಳಿಂದ ಕಾಂಪೌಂಡ್ ಅನ್ನು ಸುತ್ತುವರಿಯಲಾಗಿದೆ. ಇದನ್ನೂ ಓದಿ: ಬಿಹಾರದ ಕಳ್ಳಾಭಟ್ಟಿ ದುರಂತ – 70ಕ್ಕೇರಿದ ಸಾವಿನ ಸಂಖ್ಯೆ, ಕಳ್ಳಸಾಗಾಟ ಮಾಡುತ್ತಿದ್ದವನ ಬಂಧನ

    ತಾಲಿಬಾನ್ ಬಿಡುಗಡೆ ಮಾಡಿದ ವೀಡಿಯೋದಲ್ಲಿ ಪಾಕಿಸ್ತಾನದ 8 ಪೊಲೀಸ್ ಸಿಬ್ಬಂದಿಯನ್ನು ಸೆರೆಯಲ್ಲಿಟ್ಟಿರುವುದು ಕಂಡುಬಂದಿದೆ. ಅವರ ಬಿಡುಗಡೆಗೆ ತಮ್ಮನ್ನು ವಿಮಾನದ ಮೂಲಕ ಸುರಕ್ಷಿತವಾಗಿ ಅಫ್ಘಾನಿಸ್ತಾನಕ್ಕೆ ದಾರಿಯನ್ನು ಮಾಡಿಕೊಡಬೇಕಾಗಿ ಕೇಳಿಕೊಂಡಿದ್ದಾರೆ ಎನ್ನಲಾಗಿದೆ.

    ಈ ಘಟನೆಗೂ ಮುನ್ನ ಭಾನುವಾರ ಮುಂಜಾನೆ ವಜಿರಿಸ್ತಾನ್ ಬುಡಕಟ್ಟು ಜಿಲ್ಲೆಯ ಗಡಿ ಪ್ರದೇಶದಲ್ಲಿರುವ ಲಕ್ಕಿ ಮಾರ್ವಾಟ್‌ನಲ್ಲಿರುವ ಪೊಲೀಸ್ ಠಾಣೆಯ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ನಾಲ್ವರು ಪೊಲೀಸರು ಸಾವನ್ನಪ್ಪಿದ್ದು, ಅನೇಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ದಟ್ಟ ಮಂಜಿನಿಂದ ಕಾಣದಂತಾದ ರಸ್ತೆ – ಸರಣಿ ಅಪಘಾತದಿಂದಾಗಿ 22 ವಾಹನಗಳು ಜಖಂ

    Live Tv
    [brid partner=56869869 player=32851 video=960834 autoplay=true]

  • ಕಾಬೂಲ್‌ನಲ್ಲಿ ಚೀನೀಯರ ಅತಿಥಿ ಗೃಹದ ಬಳಿ ಭಾರೀ ಸ್ಫೋಟ, ಗುಂಡಿನ ದಾಳಿ

    ಕಾಬೂಲ್‌ನಲ್ಲಿ ಚೀನೀಯರ ಅತಿಥಿ ಗೃಹದ ಬಳಿ ಭಾರೀ ಸ್ಫೋಟ, ಗುಂಡಿನ ದಾಳಿ

    ಕಾಬೂಲ್: ಅಫ್ಘಾನಿಸ್ತಾನದ (Afghanistan) ರಾಜಧಾನಿ ಕಾಬೂಲ್‌ನಲ್ಲಿರುವ (Kabul) ಚೀನೀಯರ ವಸತಿ ಗೃಹದ (China Guest House) ಬಳಿ ಭಾರೀ ಸ್ಫೋಟ (Blast) ಹಾಗೂ ಗುಂಡಿನ ದಾಳಿ (Firing) ನಡೆದಿರುವುದಾಗಿ ವರದಿಯಾಗಿದೆ.

    ಕಾಬೂಲ್‌ನ ಶಹರ್-ಇ ನಾವ್ ಪ್ರದೇಶದಲ್ಲಿ ಚೀನಾದ ಅತಿಥಿ ಗೃಹದ ಬಳಿ ಭಾರೀ ಸ್ಫೋಟ ಹಾಗೂ ಗುಂಡಿನ ದಾಳಿ ನಡೆದಿರುವುದಾಗಿ ನಿವಾಸಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ತಿಳಿಸಿದ್ದಾರೆ. ಆದರೆ ಭದ್ರತಾ ಅಧಿಕಾರಿಗಳು ಈ ಘಟನೆಯ ಬಗ್ಗೆ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.

    ವರದಿಗಳ ಪ್ರಕಾರ ತಾಲಿಬಾನ್ ಅಪ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಚೀನಾದ ವ್ಯಾಪಾರಸ್ಥರು ಕಾಬೂಲ್‌ನ ಜನಪ್ರಿಯ ಲಾಂಹನ್ ಹೋಟೆಲ್‌ಗೆ ತೆರಳುತ್ತಾರೆ. ಇಂದು ಹೋಟೆಲ್‌ಗೆ ಹಲವು ದಾಳಿಕೋರರು ನುಗ್ಗಿದ್ದು, ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: 3 ತಿಂಗಳು ಕಾಲೇಜಲ್ಲಿ ವಿದ್ಯಾರ್ಥಿನಿಯಂತೆ ನಟಿಸಿ ರ‍್ಯಾಗಿಂಗ್ ಪ್ರಕರಣವನ್ನು ಭೇದಿಸಿದ ಮಹಿಳಾ ಪೇದೆ

    ಒಂದು ದಿನದ ಹಿಂದೆಯಷ್ಟೇ ಅಫ್ಘಾನಿಸ್ತಾನದ ಸ್ಪಿನ್ ಬೋಲ್ಡಾಕ್‌ನಲ್ಲಿ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದರು. 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ಪ್ರದೇಶ ಅಫ್ಘಾನಿಸ್ತಾನದ ದಕ್ಷಿಣ ಕಂದಹಾರ್ ಪಾಂತ್ಯದಲ್ಲಿರುವ ಪಾಕಿಸ್ತಾನದ ಗಡಿ ಪ್ರದೇಶವಾಗಿದೆ.

    ಕಳೆದ ವರ್ಷ ಆಗಸ್ಟ್‌ನಲ್ಲಿ ಅಧಿಕಾರಕ್ಕೆ ಬಂದ ನಂತರ ತಾಲಿಬಾನ್ ರಾಷ್ಟ್ರೀಯ ಭದ್ರತೆಯನ್ನು ಸುಧಾರಿಸಿದ್ದೇವೆ ಎಂದು ಹೇಳಿಕೊಂಡಿದೆ. ಆದರೆ ಅಫ್ಘಾನಿಸ್ತಾನ ತಾಲಿಬಾನ್ ವಶವಾದ ಬಳಿಕ ಹಲವಾರು ಬಾಂಬ್ ಸ್ಫೋಟಗಳು ಮತ್ತು ದಾಳಿಗಳು ನಡೆದಿರುವುದು ವರದಿಯಾಗಿವೆ. ಇದನ್ನೂ ಓದಿ: ನರ್ಸಿಂಗ್ ಕಾಲೇಜಿನಲ್ಲಿ ಮಾಸ್ ಕಾಪಿ – 10 ಸಾವಿರ ವಸೂಲಿ ಮಾಡಿ ಪರೀಕ್ಷೆಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ

    Live Tv
    [brid partner=56869869 player=32851 video=960834 autoplay=true]

  • ಕೊಲೆ ಆರೋಪಿಯನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಿದ ತಾಲಿಬಾನ್‌

    ಕೊಲೆ ಆರೋಪಿಯನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಿದ ತಾಲಿಬಾನ್‌

    ಕಾಬುಲ್: ಪಶ್ಚಿಮ ಅಫ್ಘಾನಿಸ್ತಾನದಲ್ಲಿ (Afghanistan) ಕೊಲೆ ಆರೋಪಿಯನ್ನು ತಾಲಿಬಾನ್‌ ಸಾರ್ವಜನಿಕವಾಗಿ ಗಲ್ಲಿಗೇರಿಸಿದೆ. ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ಕೊಲೆ ಆರೋಪಿಯನ್ನು ಗಲ್ಲಿಗೇರಿಸಲಾಗಿದೆ.

    ಪಶ್ಚಿಮ ಫರಾಹ್ ಪ್ರಾಂತ್ಯದಲ್ಲಿ 2017 ರಲ್ಲಿ ಮತ್ತೊಬ್ಬ ವ್ಯಕ್ತಿಯನ್ನು ಇರಿದು ಕೊಂದ ಆರೋಪವನ್ನು ಈತ ಹೊಂದಿದ್ದ ಎಂದು ತಾಲಿಬಾನ್ (Taliban) ವಕ್ತಾರ ಜಬಿಹುಲ್ಲಾ ಮುಜಾಹಿದ್ ಹೇಳಿದ್ದಾರೆ. ಇದನ್ನೂ ಓದಿ: ತೆರಿಗೆ ವಂಚನೆ ಪ್ರಕರಣದಲ್ಲಿ ಟ್ರಂಪ್ ಕುಟುಂಬದ ಸಂಸ್ಥೆಗೆ ದಂಡ

    ಈ ಪ್ರಕರಣವನ್ನು ಮೂರು ನ್ಯಾಯಾಲಯಗಳು ತನಿಖೆ ಮಾಡಿವೆ. ದಕ್ಷಿಣ ಕಂದಹಾರ್ ಪ್ರಾಂತ್ಯದಲ್ಲಿ ನೆಲೆಸಿರುವ ತಂಡದ ಅತ್ಯುನ್ನತ ಆಧ್ಯಾತ್ಮಿಕ ನಾಯಕರಿಂದ ಶಿಕ್ಷೆಯನ್ನು ಅಧಿಕೃತಗೊಳಿಸಲಾಗಿದೆ ಎಂದು ಮುಜಾಹಿದ್ ಹೇಳಿದ್ದಾರೆ. ಆದರೆ ವ್ಯಕ್ತಿಯನ್ನು ಹೇಗೆ ಗಲ್ಲಿಗೇರಿಸಲಾಯಿತು ಎಂದು ಅವರು ಹೇಳಿಲ್ಲ.

    10ಕ್ಕೂ ಹೆಚ್ಚು ಹಿರಿಯ ತಾಲಿಬಾನ್ ಅಧಿಕಾರಿಗಳು ಮರಣದಂಡನೆ ಶಿಕ್ಷೆ ಸಂದರ್ಭದಲ್ಲಿ ಹಾಜರಾಗಿದ್ದರು. ಹಂಗಾಮಿ ಆಂತರಿಕ ಸಚಿವ ಸಿರಾಜುದ್ದೀನ್ ಹಕ್ಕಾನಿ, ಮತ್ತು ಹಾಲಿ ಉಪ ಪ್ರಧಾನಿ ಅಬ್ದುಲ್ ಘನಿ ಬರಾದಾರ್, ದೇಶದ ಮುಖ್ಯ ನ್ಯಾಯಮೂರ್ತಿ, ಹಂಗಾಮಿ ವಿದೇಶಾಂಗ ಮಂತ್ರಿ ಮತ್ತು ಹಾಲಿ ಶಿಕ್ಷಣ ಸಚಿವರು ಇದ್ದರು. ಇದನ್ನೂ ಓದಿ: ವಿದ್ಯಾರ್ಥಿನಿಯರಿಗೆ ವರ್ಷವಿಡೀ ಶಾಲೆಗೆ ಹೋಗಲು ನಿರ್ಬಂಧಿಸಿದ ತಾಲಿಬಾನ್ ಪರೀಕ್ಷೆ ಬರೆಯಲು ಅನುಮತಿ

    ತಾಲಿಬಾನ್‌ನ ಆಧ್ಯಾತ್ಮಿಕ ನಾಯಕ, ನ್ಯಾಯಾಧೀಶರನ್ನು ಭೇಟಿಯಾಗಿ ಷರಿಯಾ ಕಾನೂನಿಗೆ ಅನುಗುಣವಾಗಿ ಶಿಕ್ಷೆಯನ್ನು ನೀಡಬೇಕು ಎಂದು ಹೇಳಿದ್ದರು. 1996-2001ರ ಸಂದರ್ಭದಲ್ಲಿ ತಾಲಿಬಾನ್ ಆಡಳಿತದಲ್ಲಿ ಕಲ್ಲೆಸೆತದ ಮೂಲಕ ಮರಣದಂಡನೆ ನೀಡಲಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • ವಿದ್ಯಾರ್ಥಿನಿಯರಿಗೆ ವರ್ಷವಿಡೀ ಶಾಲೆಗೆ ಹೋಗಲು ನಿರ್ಬಂಧಿಸಿದ ತಾಲಿಬಾನ್ ಪರೀಕ್ಷೆ ಬರೆಯಲು ಅನುಮತಿ

    ಕಾಬೂಲ್: ಕಳೆದ ವರ್ಷ ಅಫ್ಘಾನಿಸ್ತಾನವನ್ನು (Afghanistan) ವಶಪಡಿಸಿಕೊಂಡ ತಾಲಿಬಾನ್ (Taliban) 1 ವರ್ಷಕ್ಕಿಂತಲೂ ಹೆಚ್ಚು ಕಾಲ ಹೆಣ್ಣುಮಕ್ಕಳಿಗೆ (Girls) ಪ್ರೌಢಶಾಲೆಗೆ (High School) ಹೋಗಲು ನಿರ್ಬಂಧಿಸಿದ್ದು, ಇದೀಗ ಈ ವಾರ ನಡೆಯಲಿರುವ ಪ್ರೌಢಶಾಲಾ ಪರೀಕ್ಷೆಯನ್ನು (Exam)  ಬರೆಯಲು ಹೆಣ್ಣುಮಕ್ಕಳಿಗೂ ಅನುಮತಿ ನೀಡಿದೆ.

    ಅಫ್ಘಾನಿಸ್ತಾನದ 34 ಪ್ರಾಂತ್ಯಗಳ ಪೈಕಿ 31 ಪ್ರಾಂತ್ಯಗಳಿಗೆ ತಾಲಿಬಾನ್‌ನ ನಿರ್ಧಾರ ಅನ್ವಯಿಸುತ್ತದೆ. ಪ್ರೌಢಶಾಲಾ ಪರೀಕ್ಷೆ ಬುಧವಾರದಿಂದ ಪ್ರಾರಂಭವಾಗಲಿದೆ. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಪರೀಕ್ಷೆ ನಡೆಯಲಿದೆ. ಪರೀಕ್ಷೆಯನ್ನು ವಿದ್ಯಾರ್ಥಿನಿಯರು ಕೂಡಾ ಬರೆಯಲು ಅನುಮತಿಸಲಾಗುವುದು ಎಂದು ಕಾಬೂಲ್ ಶಿಕ್ಷಣ ಇಲಾಖೆಯ ಮುಖ್ಯಸ್ಥ ಎಹ್ಸಾನುಲ್ಲಾ ಕಿತಾಬ್ ತಿಳಿಸಿದ್ದಾರೆ.

    ವರದಿಗಳ ಪ್ರಕಾರ ಬುಧವಾರ ನಡೆಯಲಿರುವ ಪರೀಕ್ಷೆಗೆ ಡ್ರೆಸ್ ಕೋಡ್ ನೀಡಲಾಗಿದೆ. ವಿದ್ಯಾರ್ಥಿನಿಯರು ಹಾಗೂ ಶಿಕ್ಷಕಿಯರು ಕಡ್ಡಾಯವಾಗಿ ಹಿಜಬ್ ಅಥವಾ ಸ್ಕಾರ್ಫ್ ಅನ್ನು ಧರಿಸಬೇಕು. ಪರೀಕ್ಷೆಯಲ್ಲಿ ಸೆಲ್‌ಫೋನ್ ಬಳಕೆ ನಿಷೇಧಿಸಲಾಗಿದೆ. ಬುಧವಾರ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿನಿಯರಿಗೆ ಚಳಿಗಾಲದ ರಜೆಯ ಬಳಿಕ ಮಾರ್ಚ್ ಮಧ್ಯದ ವೇಳೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು ಎಂದು ತಿಳಿಸಿದೆ. ಇದನ್ನೂ ಓದಿ: ಮೆಜೆಸ್ಟಿಕ್‌ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಅಗ್ನಿ ಅವಘಡ

    ತಾಲಿಬಾನ್ ಕಳೆದ ವರ್ಷ ಆಗಸ್ಟ್ನಲ್ಲಿ ಅಫ್ಘಾನಿಸ್ತಾನವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡ ಬಳಿಕ ಮಹಿಳೆಯರ ಹಕ್ಕುಗಳನ್ನು ಒಂದೊಂದಾಗಿಯೇ ಹಿಂತೆಗೆದುಕೊಂಡಿತು. ಪ್ರೈಮರಿ ಹಾಗೂ ಪ್ರೌಢಶಾಲೆಗೆ ಹೆಣ್ಣುಮಕ್ಕಳು ಹೋಗುವುದನ್ನು ನಿರ್ಬಂಧಿಸಲಾಯಿತು. ಹಲವು ಉದ್ಯೋಗಗಳಿಂದಲೂ ಮಹಿಳೆಯರನ್ನು ಹೊರಗಿಡಲಾಯಿತು. ಉದ್ಯಾನವನ, ಜಿಮ್‌ಗಳಲ್ಲೂ ಮಹಿಳೆಯರನ್ನು ನಿಷೇಧಿಸಲಾಯಿತು. ಮಾತ್ರವಲ್ಲದೇ ಮಹಿಳೆಯರು ಸಾರ್ವಜನಿಕ ಪ್ರದೇಶಗಳಲ್ಲಿ ಅಡಿಯಿಂದ ಮುಡಿಯವರೆಗೆ ಸಂಪೂರ್ಣವಾಗಿ ಬಟ್ಟೆ ಧರಿಸುವಂತೆ ಆದೇಶಿಸಿದೆ. ಇದನ್ನೂ ಓದಿ: ಕಲಾಪದ ವೇಳೆ ಫೇಸ್‌ಬುಕ್ ಲೈವ್ ಮಾಡಿದ ಶಾಸಕ ವಿಧಾನ ಸಭೆಯಿಂದ ಅಮಾನತು

    Live Tv
    [brid partner=56869869 player=32851 video=960834 autoplay=true]

  • ಅಫ್ಘಾನಿಸ್ತಾನದ ಮದರಸಾದಲ್ಲಿ ಬಾಂಬ್ ಸ್ಫೋಟ – 19 ಸಾವು, 24 ಮಂದಿಗೆ ಗಾಯ

    ಅಫ್ಘಾನಿಸ್ತಾನದ ಮದರಸಾದಲ್ಲಿ ಬಾಂಬ್ ಸ್ಫೋಟ – 19 ಸಾವು, 24 ಮಂದಿಗೆ ಗಾಯ

    ಕಾಬೂಲ್: ಅಫ್ಘಾನಿಸ್ತಾನದ (Afghanistan) ಉತ್ತರ ನಗರವಾದ ಐಬಕ್‌ನಲ್ಲಿರುವ (Aybak) ಮದರಸಾದಲ್ಲಿ (Madrasa) ಬುಧವಾರ ಸ್ಫೋಟ (Blast) ಉಂಟಾಗಿದ್ದು, ಘಟನೆಯಲ್ಲಿ ವಿದ್ಯಾರ್ಥಿಗಳು ಸೇರಿದಂತೆ 19 ಜನರು ಸಾವನ್ನಪ್ಪಿದ್ದಾರೆ ಮತ್ತು 24 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

    ಕಳೆದ ವರ್ಷ ಆಗಸ್ಟ್‌ನಲ್ಲಿ ತಾಲಿಬಾನ್ (Taliban) ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬಳಿಕ ಅಲ್ಲಿ ನಾಗರಿಕರನ್ನು ಗುರಿಯಾಗಿಸಿಕೊಂಡು ಸಾಕಷ್ಟು ಬಾರಿ ಸ್ಫೋಟಗಳು ಹಾಗೂ ದಾಳಿಗಳನ್ನು ನಡೆಸಲಾಗಿದೆ.

    ನಿನ್ನೆ ರಾಜಧಾನಿ ಕಾಬೂಲ್‌ನ ಉತ್ತರಕ್ಕೆ ಸುಮಾರು 200 ಕಿ.ಮೀ (130 ಮೈಲು) ದೂರದಲ್ಲಿರುವ ಐಬಕ್‌ನಲ್ಲಿರುವ ಮದರಸಾದಲ್ಲಿ ಬಾಂಬ್ ಸ್ಫೋಟಗೊಂಡಿದೆ. ಮೃತರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳು ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಯುದ್ಧದಲ್ಲಿ ಐಸಿಸ್ ನಾಯಕ ಖುರಾಶಿ ಸಾವು

    ಇಸ್ಲಾಮಿಕ್ ಧಾರ್ಮಿಕ ಶಾಲೆ ಅಲ್ ಜಿಹಾದ್ ಮದರಸಾದಲ್ಲಿ ಸ್ಫೋಟ ಸಂಭವಿಸಿರುವುದಾಗಿ ಅಲ್ಲಿನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಅಪಘಾತದಿಂದಾದ ಪ್ರಾಣಹಾನಿಯ ಅಂಕಿಅಂಶವನ್ನು ಸ್ಪಷ್ಟವಾಗಿ ನೀಡಲಾಗಿಲ್ಲ.

    ಹೆಚ್ಚಿನ ಸಮಯಗಳಲ್ಲಿ ಅಪಘಾತದ ಅಂಕಿಅಂಶವನ್ನು ತಾಲಿಬಾನ್ ಕಡಿಮೆ ಮಾಡುತ್ತದೆ. ನಿನ್ನೆಯ ಘಟನೆಯಲ್ಲಿ 10 ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಹಲವರಿಗೆ ಗಾಯಗಳಾಗಿವೆ ಎಂದು ತಾಲಿಬಾನ್ ತಿಳಿಸಿದೆ. ಆದರೆ ಆಸ್ಪತ್ರೆಯಲ್ಲಿ 19 ಜನರು ಸಾವನ್ನಪ್ಪಿರುವುದು ದೃಢಪಡಿಸಲಾಗಿದೆ. ಇದನ್ನೂ ಓದಿ: ಗುಜರಾತ್‍ನಲ್ಲಿ ಇಂದು ಮೊದಲ ಹಂತದ ಮತದಾನ – ತವರು ರಾಜ್ಯದಲ್ಲಿ ಮೋದಿ, ಶಾ ಜೋಡಿಗೆ ಅಗ್ನಿ ಪರೀಕ್ಷೆ

    Live Tv
    [brid partner=56869869 player=32851 video=960834 autoplay=true]

  • ಬುರ್ಖಾ ಹಾಕಿಲ್ಲ ಅಂತ ಅಫ್ಘನ್ ವಿವಿ ಹೊರಗಡೆ ವಿದ್ಯಾರ್ಥಿನಿಯರ ಮೇಲೆ ತಾಲಿಬಾನ್ ದಾಳಿ

    ಬುರ್ಖಾ ಹಾಕಿಲ್ಲ ಅಂತ ಅಫ್ಘನ್ ವಿವಿ ಹೊರಗಡೆ ವಿದ್ಯಾರ್ಥಿನಿಯರ ಮೇಲೆ ತಾಲಿಬಾನ್ ದಾಳಿ

    ಕಾಬೂಲ್: ವಿದ್ಯಾರ್ಥಿನಿಯರು (Students) ಬುರ್ಖಾ (Burkha) ಧರಿಸಿಲ್ಲ ಅಂತ ಅಫ್ಘಾನಿಸ್ತಾನದ (Afghanistan) ವಿಶ್ವವಿದ್ಯಾಲಯಕ್ಕೆ (University) ಪ್ರವೇಶ ನೀಡದ ತಾಲಿಬಾನ್ (Taliban) ವಿರುದ್ಧ ಪ್ರತಿಭಟನೆ ಪ್ರಾರಂಭಿಸಿದ್ದಾರೆ. ಈ ವೇಳೆ ತಾಲಿಬಾನ್ ಅಧಿಕಾರಿಯೊಬ್ಬರು ವಿದ್ಯಾರ್ಥಿನಿಯರಿಗೆ ಥಳಿಸಿರುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.

    ವರದಿಗಳ ಪ್ರಕಾರ ಈ ಘಟನೆ ಈಶಾನ್ಯ ಅಫ್ಘಾನಿಸ್ತಾನದ ಬಡಾಕ್ಷನ್ ವಿಶ್ವವಿದ್ಯಾಲಯದ ಗೇಟ್ ಹೊರಗಡೆ ಭಾನುವಾರ ನಡೆದಿದೆ. ವೈರಲ್ ಆಗಿರುವ ವೀಡಿಯೋದಲ್ಲಿ ಹಲವು ವಿದ್ಯಾರ್ಥಿನಿಯರು ವಿವಿ ಪ್ರವೇಶಕ್ಕಾಗಿ ಗೇಟ್ ಹೊರಗಡೆ ಕಾದು ನಿಂತಿದ್ದಾರೆ. ಈ ವೇಳೆ ತಾಲಿಬಾನ್‌ನ ಸರ್ಕಾರಿ ಅಧಿಕಾರಿಯೊಬ್ಬರು ವಿದ್ಯಾರ್ಥಿಗಳನ್ನು ಸ್ಥಳದಿಂದ ಚದುರಿಸಲು ಚಾಟಿ ಬೀಸಿರುವುದು ಕಂಡುಬಂದಿದೆ. ಇದನ್ನೂ ಓದಿ: ಚಿತ್ರದುರ್ಗ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿಗೆ ಹನಿಟ್ರ್ಯಾಪ್ ಯತ್ನ!

    ಕಳೆದ ವರ್ಷ ಆಗಸ್ಟ್‌ನಲ್ಲಿ ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಅಲ್ಲಿನ ಮಹಿಳೆಯರ ಚಲನೆ, ವಾಕ್, ಅಭಿವ್ಯಕ್ತಿ, ಕೆಲಸದ ಅವಕಾಶಗಳು ಹಾಗೂ ಉಡುಪಿನ ಸ್ವಾತಂತ್ರ‍್ಯದ ಮೇಲೆ ತೀವ್ರ ನಿರ್ಬಂಧಗಳನ್ನು ಹಾಕಿದೆ. 6ನೇ ತರಗತಿಯಿಂದ ಹುಡುಗಿಯರು ಶಾಲೆಗೆ ಹೋಗುವುದನ್ನು ತಡೆಹಿಡಿಯಲಾಗಿದೆ. ಇದನ್ನೂ ಓದಿ: ವೈಫೈ ಪಾಸ್‍ವರ್ಡ್ ಹಂಚಿಕೊಳ್ಳದ್ದಕ್ಕೆ ನಡೆಯಿತು ಯುವಕನ ಭೀಕರ ಕೊಲೆ

    ತಾಲಿಬಾನ್ ಮಹಿಳೆಯರಿಗೆ ಸಾರ್ವಜನಿಕವಾಗಿ ಸರಿಯಾದ ಉಡುಪುಗಳನ್ನು ಧರಿಸಲು ಸೂಚಿಸಿದೆ. ನಿಖಾಬ್ (ಕಣ್ಣು ಹೊರತುಪಡಿಸಿ, ತಲೆ ಮತ್ತು ಮುಖವನ್ನು ಮುಚ್ಚುವ ಮುಸುಕು) ಅಥವಾ ಬುರ್ಖಾವನ್ನು ಮಹಿಳೆಯರು ಸಾರ್ವಜನಿಕ ಪ್ರದೇಶಗಳಲ್ಲಿ ಕಡ್ಡಾಯವಾಗಿ ಧರಿಸಬೇಕಿದೆ. ಆದರೆ ಈ ಆದೇಶದ ವಿರುದ್ಧ ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿರುವುದಾಗಿ ವರದಿಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ದಲಿತ ಯುವಕನ ಮುಖಕ್ಕೆ ಮಸಿ ಬಳಿದು, ಕಂಬಕ್ಕೆ ಕಟ್ಟಿ ಥಳಿತ – ಇಬ್ಬರು ಅರೆಸ್ಟ್

    ದಲಿತ ಯುವಕನ ಮುಖಕ್ಕೆ ಮಸಿ ಬಳಿದು, ಕಂಬಕ್ಕೆ ಕಟ್ಟಿ ಥಳಿತ – ಇಬ್ಬರು ಅರೆಸ್ಟ್

    ಲಕ್ನೋ: ಕಳ್ಳತನ ಆರೋಪದ ಮೇಲೆ ದಲಿತ ಯುವಕನೊಬ್ಬನನ್ನು (Dalit Boy) ಥಳಿಸಿರುವ ಅಮಾನವೀಯ ಘಟನೆ ಉತ್ತರಪ್ರದೇಶದ (Uttar Pradesh) ಬ್ರಹ್ರೈಚ್‌ನಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.

    ಕಳ್ಳತನದ ಆರೋಪದ ಮೇಲೆ ದಲಿತ ಯುವಕನನ್ನು ಹಿಡಿದು ಕಂಬಕ್ಕೆ ಕಟ್ಟಿ ಥಳಿಸಲಾಗಿದೆ. ಅಷ್ಟೇ ಅಲ್ಲದೇ ಮುಖಕ್ಕೆ ಮಸಿ ಬಳಿದು ಗ್ರಾಮದಲ್ಲಿ ಸುತ್ತಾಡಿಸಿದ್ದಾರೆ. ಅರ್ಧ ಮೀಸೆ ಕತ್ತರಿಸಿ ವೀಡಿಯೋ ಮಾಡಿದ್ದಾರೆ. ಸದ್ಯ ಈ ದೃಶ್ಯ ಜಾಲತಾಣದಲ್ಲಿ (Social Media) ಹರಿದಾಡುತ್ತಿದ್ದು, ಭಾರೀ ಆಕ್ರೋಶ ವ್ಯಕ್ತವಾಗಿದೆ. ಇದನ್ನೂ ಓದಿ: Made In India `ಅಗ್ನಿ ಪ್ರೈಮ್‌ʼ ಕ್ಷಿಪಣಿ ಪರೀಕ್ಷೆ ಯಶಸ್ವಿ- ದಾಳಿ ಸಾಮರ್ಥ್ಯ ಎಷ್ಟು?

    ಬಹ್ರೈಚ್‌ನ ಹಾರ್ಡಿ ಪೊಲೀಸ್ ಠಾಣಾ (Police Station) ವ್ಯಾಪ್ತಿಯ ಹಿಂದೂ ಸಿಂಗ್ ಗ್ರಾಮದ ಮಜ್ರಾ ಬರ್ಕತಾನ್‌ನಲ್ಲಿ ಘಟನೆ ನಡೆದಿದೆ. ದಲಿತ ಯುವಕನೊಬ್ಬ ಶಾಲೆಯ ಶೌಚಾಲಯದ ಸೀಟನ್ನು ಕದ್ದಿದ್ದು, ಕೆಲವರ ಕೈಗೆ ಸಿಕ್ಕಿಬಿದ್ದಿದ್ದಾನೆ. ಇದನ್ನು ಕಂಡ ಸ್ಥಳೀಯರು ಸ್ಥಳದಲ್ಲೇ ಶಿಕ್ಷೆ ವಿಧಿಸಲು ಮುಂದಾಗಿ, ಮಾರಣಾಂತಿಂಕ ಹಲ್ಲೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ (FIR) ದಾಖಲಿಸಿ ಬಂಧಿಸಲಾಗಿದೆ ಎಂದು ಹೆಚ್ಚುವರಿ ಎಸ್ಪಿ ಅಶೋಕ್ ಕುಮಾರ್ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವಿವಾಹಿತನೊಂದಿಗೆ ಓಡಿ ಹೋಗಿದ್ದಕ್ಕೆ ಕಲ್ಲೆಸೆದು ಕೊಲ್ಲುವ ಶಿಕ್ಷೆ – ತಾನೇ ನೇಣಿಗೆ ಶರಣಾದ ಅಫ್ಘಾನ್ ಮಹಿಳೆ

    ವಿವಾಹಿತನೊಂದಿಗೆ ಓಡಿ ಹೋಗಿದ್ದಕ್ಕೆ ಕಲ್ಲೆಸೆದು ಕೊಲ್ಲುವ ಶಿಕ್ಷೆ – ತಾನೇ ನೇಣಿಗೆ ಶರಣಾದ ಅಫ್ಘಾನ್ ಮಹಿಳೆ

    ಕಾಬೂಲ್: ವಿವಾಹಿತ ವ್ಯಕ್ತಿಯೊಂದಿಗೆ ಮಹಿಳೆಯೊಬ್ಬಳು (Woman) ಓಡಿ ಹೋಗಿದ್ದಕ್ಕೆ ಅಫ್ಘಾನಿಸ್ತಾನದ (Afghanistan) ತಾಲಿಬಾನ್ (Taliban) ಸರ್ಕಾರ ಮಹಿಳೆಗೆ ಸಾರ್ವಜನಿಕವಾಗಿ ಕಲ್ಲು ಹೊಡೆದು ಕೊಲ್ಲುವ ಶಿಕ್ಷೆ ವಿಧಿಸಿತ್ತು. ಆದರೆ ಮಹಿಳೆ ಆ ಶಿಕ್ಷೆಯಿಂದ ಅವಮಾನವನ್ನು ಎದುರಿಸುವ ಬದಲು ತಾನೇ ನೇಣಿಗೆ ಶರಣಾಗಿದ್ದಾಳೆ.

    ಘಟನೆ ಅಫ್ಘಾನಿಸ್ತಾನದ ಘೋರ್ ಪ್ರಾಂತ್ಯದಲ್ಲಿ ನಡೆದಿದ್ದು, ಸ್ಥಳೀಯವಾಗಿ ಯಾವುದೇ ಮಹಿಳಾ ಕಾರಾಗೃಹ (Women’s Prison) ಇಲ್ಲ ಎಂಬ ಕಾರಣಕ್ಕೆ ವಿವಾಹಿತ ಪುರುಷನೊಂದಿಗೆ ಓಡಿ ಹೋಗಿದ್ದ ಮಹಿಳೆಗೆ ಸಾರ್ವಜನಿಕವಾಗಿ ಕಲ್ಲು ಹೊಡೆದು ಕೊಲ್ಲುವ ಶಿಕ್ಷೆಯನ್ನು ತಾಲಿಬಾನ್ ಸರ್ಕಾರ ವಿಧಿಸಿತ್ತು.

    ಮಹಿಳೆಯೊಂದಿಗೆ ಮನೆಯಿಂದ ಓಡಿ ಹೋಗಿದ್ದ ವಿವಾಹಿತ ವ್ಯಕ್ತಿಯನ್ನು ಕಳೆದ ಗುರುವಾರವೇ ಗಲ್ಲಿಗೇರಿಸಲಾಗಿತ್ತು. ಬಳಿಕ ಮಹಿಳೆಗೆ ಕಲ್ಲು ಹೊಡೆದು ಸಾಯಿಸುವ ಶಿಕ್ಷೆ ವಿಧಿಸಿದ್ದರಿಂದ ಆಕೆ ಅವಮಾನವನ್ನು ಎದುರಿಸಲು ಹಿಂದೇಟು ಹಾಕಿ, ತಾನೇ ತನ್ನ ಸ್ಕಾರ್ಫ್‌ನಿಂದ ಕುಣಿಕೆ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಒಂದಕ್ಕಿಂತ ಹೆಚ್ಚು ನಾಯಿ ಸಾಕುವಂತಿಲ್ಲ – ಗಾಜಿಯಾಬಾದ್‌ನಲ್ಲಿ ಮೂರು ತಳಿಯ ನಾಯಿಗಳು ಬ್ಯಾನ್

    ಕಳೆದ ವರ್ಷ ಆಗಸ್ಟ್‌ನಲ್ಲಿ ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬಳಿಕ ಅಲ್ಲಿ ಮಹಿಳೆಯರ ಸ್ವಾತಂತ್ರ್ಯ ಮೊಟಕುಗೊಳ್ಳುತ್ತಲೇ ಬಂದಿದೆ. ಹೆಣ್ಣು ಮಕ್ಕಳು 6ನೇ ತರಗತಿಯ ಬಳಿಕ ವಿದ್ಯಾಭ್ಯಾಸ ಮಾಡುವುದನ್ನು ನಿಷೇಧಿಸಿದೆ. ಮಹಿಳೆಯರು ಹಾಗೂ ಹುಡುಗಿಯರು ಶಿಕ್ಷಣ, ಕೆಲಸ, ಸಾರ್ವಜನಿಕವಾಗಿ ಭಾಗವಹಿಸುವಿಕೆ, ಆರೋಗ್ಯದ ಮೂಲಭೂತ ಹಕ್ಕುಗಳಿಂದ ವಂಚಿತರಾಗಿದ್ದಾರೆ. ಇದನ್ನೂ ಓದಿ: ಕೊಹ್ಲಿ ಮ್ಯಾಜಿಕ್‌ ಫೀಲ್ಡಿಂಗ್‌, ಶಮಿ ಮಾರಕ ಬೌಲಿಂಗ್‌ – ಭಾರತಕ್ಕೆ 6 ರನ್‌ಗಳ ರೋಚಕ ಜಯ

    Live Tv
    [brid partner=56869869 player=32851 video=960834 autoplay=true]

  • ಕಾಬೂಲ್‌ ಶಿಕ್ಷಣ ಕೇಂದ್ರದಲ್ಲಿ ಬಾಂಬ್‌ ಸ್ಫೋಟ – 19 ಮಂದಿ ದುರ್ಮರಣ

    ಕಾಬೂಲ್‌ ಶಿಕ್ಷಣ ಕೇಂದ್ರದಲ್ಲಿ ಬಾಂಬ್‌ ಸ್ಫೋಟ – 19 ಮಂದಿ ದುರ್ಮರಣ

    ಕಾಬೂಲ್‌: ಅಫ್ಘಾನಿಸ್ತಾನದ (Afghanistan) ಕಾಬೂಲ್‌ನಲ್ಲಿ (Kabul) ಶುಕ್ರವಾರ ಬೆಳಗ್ಗೆ ಶಿಕ್ಷಣ ಕೇಂದ್ರವೊಂದರಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ 19 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.

    ಭಾರತೀಯ ಕಾಲಮಾನ ಬೆಳಗ್ಗೆ 7:30ಕ್ಕೆ ಕಾಜ್ ಶಿಕ್ಷಣ ಕೇಂದ್ರದಲ್ಲಿ ಸ್ಫೋಟ ಸಂಭವಿಸಿದೆ ಎಂದು ಕಾಬೂಲ್ ಪೊಲೀಸ್ ವಕ್ತಾರ ಖಾಲಿದ್ ಜದ್ರಾನ್ ತಿಳಿಸಿದ್ದಾರೆ. ಇದನ್ನೂ ಓದಿ: ನಿದ್ದೆಗೆ ಜಾರಿದ್ದ ವೇಳೆ ಮುಖದ ಮೇಲೆ ಮಲ ವಿಸರ್ಜಿಸಿದ ಶ್ವಾನ- ಮಹಿಳೆ ಆಸ್ಪತ್ರೆಗೆ ದಾಖಲು

    ದುರದೃಷ್ಟವಶಾತ್ ಸ್ಫೋಟವು ಮಾನವ ಸಾವು-ನೋವುಗಳಿಗೆ ಕಾರಣವಾಗಿದೆ. ಘಟನಾ ಸ್ಥಳಕ್ಕೆ ಭದ್ರತಾ ಪಡೆಗಳು ತೆರಳಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ ಎಂದು ಜದ್ರಾನ್‌ ಹೇಳಿದ್ದಾರೆ.

    ಹಜಾರಾ ನೆರೆಹೊರೆಯಲ್ಲಿರುವ ಕಾಜ್ ಶೈಕ್ಷಣಿಕ ಕೇಂದ್ರವನ್ನು ಗುರಿಯಾಗಿಸಿಕೊಂಡು ಆತ್ಮಾಹುತಿ ಬಾಂಬರ್‌, ವಿದ್ಯಾರ್ಥಿಗಳ ನಡುವೆ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ ಎಂದು ಟ್ವಿಟರ್ ಪೋಸ್ಟ್‌ನಲ್ಲಿ ಎನ್‌ಜಿಒ ಆಫ್ಘನ್ ಪೀಸ್ ವಾಚ್ ತಿಳಿಸಿದೆ. ಇದನ್ನೂ ಓದಿ: ಹಿಜಬ್‌ ವಿರುದ್ಧ ಪ್ರತಿಭಟನೆ – ವೇದಿಕೆಯಲ್ಲೇ ಕೂದಲು ಕತ್ತರಿಸಿದ ಟರ್ಕಿ ಗಾಯಕಿ

    ಕಾಬೂಲ್‌ನ ವಜೀರ್ ಅಕ್ಬರ್ ಖಾನ್ ಪ್ರದೇಶದ ಬಳಿ ಸ್ಫೋಟ ಸಂಭವಿಸಿದ ಕೆಲವು ದಿನಗಳ ನಂತರ ಮತ್ತೊಂದು ಬಾಂಬ್‌ ಸ್ಫೋಟ ನಡೆದಿದೆ. ಕಾಬೂಲ್‌ನಲ್ಲಿರುವ ರಷ್ಯಾದ ರಾಯಭಾರ ಕಚೇರಿಯ ಹೊರಗೆ ಇತ್ತೀಚೆಗೆ ನಡೆದ ಸ್ಫೋಟವನ್ನು ಜಾಗತಿಕ ಮಟ್ಟದಲ್ಲಿ ತೀವ್ರವಾಗಿ ಖಂಡಿಸಲಾಯಿತು.

    ಅಮೆರಿಕ ತನ್ನ ಸೈನ್ಯವನ್ನು ವಾಪಸ್‌ ಕರೆಸಿಕೊಂಡ ನಂತರ ಅಫ್ಘಾನಿಸ್ತಾನವನ್ನು ತಾಲಿಬಾನ್‌ (Taliban) ವಶಪಡಿಸಿಕೊಂಡಿತು. ಅಫ್ಘಾನ್‌ನಲ್ಲಿ ತಾಲಿಬಾನ್‌ ಆಡಳಿತವು ಒಂದು ವರ್ಷ ಪೂರೈಸಿದೆ. ಈ ಅವಧಿಯಲ್ಲಿ ದೇಶದಲ್ಲಿ ಸರಣಿ ಸ್ಫೋಟಗಳು ಸಂಭವಿಸುತ್ತಿವೆ.

    Live Tv
    [brid partner=56869869 player=32851 video=960834 autoplay=true]