ಕಾಬೂಲ್: ಶುಕ್ರವಾರದ ನಮಾಜ್ ಬಳಿಕ ತಾಲಿಬಾನಿಗಳು ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚನೆ ಮಾಡಲಿದ್ದಾರೆ ಎಂಬುದರ ಬಗ್ಗೆ ವರದಿಯಾಗಿದೆ. ಪ್ರಾರ್ಥನೆ ಬಳಿಕ ಸರ್ಕಾರ ರಚನೆಗೆ ಘೋಷಣೆ ಮಾಡುವ ಸಾಧ್ಯತೆಗಳಿವೆ.
ಆಗಸ್ಟ್ 15ರಂದು ರಾಜಧಾನಿ ಕಾಬೂಲ್ ಪ್ರವೇಶಿಸಿದ ತಾಲಿಬಾನಿಗಳು ಇಡೀ ದೇಶವನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಇತ್ತ ಆಗಸ್ಟ್ 31ರಂದು ಅಮೆರಿಕ ಸೇನೆ ಹಿಂದಿರುಗುತ್ತಿದ್ದಂತೆ ಸ್ವಾತಂತ್ರ್ಯಯ ಆಚರಿಸಿದ್ದರು. ಇದೇ ವೇಳೆ ಜನರಿಗೆ ದೇಶ ತೊರೆಯದಂತೆ ಸಹ ಮನವಿ ಮಾಡಿಕೊಂಡಿದ್ದರು. ದೇಶದಲ್ಲಿ ಶಾಂತಿ ಕಾಪಾಡೋದರ ಜೊತೆ ಎಲ್ಲರಿಗೂ ಭದ್ರತೆ ನೀಡಲಾಗುವುದು ಎಂದು ಭರವಸೆ ನೀಡಿದ್ದರು. ಇದನ್ನೂ ಓದಿ: ಲೀಕ್ ಆಯ್ತು ಜೋ ಬೈಡನ್- ಅಶ್ರಫ್ ಘನಿ ಫೋನ್ ಸಂಭಾಷಣೆ
ಅಮೆರಿಕ ಸೇನೆ ಹಿಂದಿರುಗುತ್ತಿದ್ದಂತೆ ಕಾಬೂಲ್ ವಿಮಾನನಿಲ್ದಾಣದಿಂದ ನಡೆಯುತ್ತಿದ್ದ ಏರ್ ಲಿಫ್ಟ್ ಸ್ಥಗಿತಗೊಳಿಸಲಾಗಿದೆ. ಏರ್ ಲಿಫ್ಟ್ ನಿಂತಿದ್ರೂ ವಿಮಾನ ನಿಲ್ದಾಣದ ಇಕ್ಕೆಲ ರಸ್ತೆಗಳಲ್ಲಿ ಗಂಟುಮೂಟೆಗಳ ಜೊತೆ ದೇಶ ತೊರೆಯಲು ಕಾಯುತ್ತಿದ್ದಾರೆ. ಇತ್ತ ವಿದೇಶಿ ಪ್ರಜೆಗಳನ್ನು ಸುರಕ್ಷಿತವಾಗಿ ಅವರ ದೇಶಕ್ಕೆ ಕಳುಹಿಸಲಾಗುವುದು ಎಂದು ತಾಲಿಬಾನಿಗಳು ಹೇಳುತ್ತಿದ್ದಾರೆ. ಇದನ್ನೂ ಓದಿ:ಅಫ್ಘಾನ್‍ನಲ್ಲಿ ತಾಲಿಬಾನ್ ಸರ್ಕಾರ – ಹೇಗಿರಲಿದೆ ಆಡಳಿತ ವ್ಯವಸ್ಥೆ?
ವಾಷಿಂಗ್ಟನ್: ಯುದ್ಧದ ಸಮಯದಲ್ಲಿ ತಮಗೆ ಸಹಾಯ ಮಾಡಿದ್ದ ಅಫ್ಘನ್ನರಿಗೆ ಆಶ್ರಯ ನೀಡೋದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಘೋಷಣೆ ಮಾಡಿದ್ದಾರೆ.
ಅಫ್ಘಾನಿಸ್ತಾನದ ಸ್ಥಿತಿ ದಿನದಿಂದ ದಿನಕ್ಕೆ ನರಕ ರೂಪ ಪಡೆದುಕೊಳ್ಳುತ್ತಿದ್ದು, ತಾಲಿಬಾನಿಗಳು ತಾವು ರಕ್ತಪಿಪಾಸುಗಳು ಎಂಬುದನ್ನು ಸಾಬೀತು ಮಾಡುತ್ತಿದ್ದಾರೆ. ಈ ಎಲ್ಲ ಬೆಳವಣಿಗೆಗೆ ಅಮೆರಿಕದ ತೆಗೆದುಕೊಂಡ ನಿರ್ಧಾರವೇ ಕಾರಣ ಎಂದು ಆರೋಪಗಳು ಕೇಳಿ ಬಂದಿವೆ. ಇದೀಗ ಅಮೆರಿಕ ಅಧ್ಯಕ್ಷ ಜೋ ಬೈಡನ್ ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ.
ಅಮೆರಿಕದಲ್ಲಿ ಆಶ್ರಯ:
ಅಮೆರಿಕ ಅಫ್ಘನ್ನರಿಗೆ ಆಶ್ರಯ ನೀಡಲು ನಿರ್ಧರಿಸಿದೆ. ಯುದ್ಧದ ಸಮಯದಲ್ಲಿ ತಮಗೆ ನೆರವು ನೀಡಿದವರಿಗೆ ಆಶ್ರಯ ನೀಡಲಾಗುತ್ತದೆ. ಒಮ್ಮೆ ಸ್ಕ್ರೀನಿಂಗ್ ಮತ್ತು ಔಪಚಾರಿಕ ಮಾತುಕತೆಗಳು ಅಂತಿಮವಾಗಬೇಕಿದೆ. ನಾವು ಅಫ್ಘನ್ನರನ್ನು ಅಮೆರಿಕಾಗೆ ಸ್ವಾಗತಿಸುತ್ತೇವೆ. ನಾವು ಇರೋದು ಹೀಗೆ. ಇದುವೇ ಅಮೆರಿಕ ಎಂದು ಜೋ ಬೈಡನ್ ಟ್ವೀಟ್ ಮೂಲಕ ತಿಳಿಸಿದ್ದಾರೆ. ಇದನ್ನೂ ಓದಿ: 6 ಲಕ್ಷ ಕೋಟಿ ಸಂಗ್ರಹ ಗುರಿ – ಖಾಸಗಿಯವರಿಗೆ ಸಿಗಲಿದೆ ರೈಲು, ರಸ್ತೆ, ಗಣಿ
ತಾಲಿಬಾನಿ ವಕ್ತಾರ ಸೋಹೆಲ್ ಶಾಹಿನ್ ಎಂಬಾತ ಕತಾರ್ ನಲ್ಲಿ ಕುಳಿತು ಹೇಳಿಕೆ ನೀಡಿದ್ದಾನೆ. ಒಂದು ವೇಳೆ ಅಮೆರಿಕ ತನ್ನ ಸೇನೆಯನ್ನ ಹಿಂಪಡೆಯಲು ವಿಳಂಬ ನೀತಿ ತೋರಿದ್ರೆ ಅದರ ಪರಿಣಾಮ ಮುಂದಿನ ದಿನಗಳಲ್ಲಿ ಎದುರಿಸಬೇಕಾಗುತ್ತದೆ. ನಾವು ನಿಮಗೆ ಆಗಸ್ಟ್ 31ರವರೆಗೆ ನಿಮ್ಮ ಸೇನೆ ಕರೆಸಿಕೊಳ್ಳಲು ಸಮಯ ನೀಡಿದ್ದೇವೆ ಎಂದು ಹೇಳಿದ್ದಾನೆ. ಇತ್ತ ಅಮೆರಿಕ ತನ್ನ ರಾಯಭಾರಿ ಕಚೇರಿಯನ್ನು ಮುಚ್ಚದಿರಲು ನಿರ್ಧರಿಸಿದೆ. ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ವಿದೇಶಿಗರಿಗೆ ರಕ್ಷಣೆ ನೀಡುವ ಭರವಸೆಯನ್ನು ನೀಡಿದೆ. ಸದ್ಯ ಅಫ್ಘಾನಿಸ್ತಾನದಲ್ಲಿ ಸುಮಾರು 6 ಸಾವಿರ ಅಮೆರಿಕ ಸೈನಿಕರಿದ್ದಾರೆ. ಇದನ್ನೂ ಓದಿ: ತಾಲಿಬಾನಿಗಳ ಮೇಲೆ ಗುಂಡಿನ ಮಳೆ – ನಾರ್ಥರ್ನ್ ಅಲಯನ್ಸ್‌ಗೆ ತಜಕಿಸ್ತಾನ ಬೆಂಬಲ
Once screened and cleared, we will welcome Afghans who helped us in the war effort to their new home in the United States of America.
Because that's who we are. That's what America is.
ತಾಲಿಬಾನಿಗಳಿಗೆ ಬೈಡನ್ ಎಚ್ಚರಿಕೆ:
ನಾವು 20 ವರ್ಷ ಅಫ್ಘಾನಿಸ್ತಾನದ ಜೊತೆ ಕೆಲಸ ಮಾಡಿದ್ದೇವೆ. ಸದ್ಯ ಕಾಬೂಲ್ ನಲ್ಲಿ ಅಮೆರಿಕದ 6 ಸಾವಿರ ಸೈನಿಕರಿದ್ದಾರೆ. ಒಂದು ವೇಳೆ ಅಮೆರಿಕ ಸೇನೆಯ ಮೇಲೆ ತಾಲಿಬಾನಿಗಳು ದಾಳಿ ನಡೆಸಿದ್ರೆ ಪ್ರತ್ಯುತ್ತರ ನೀಡುತ್ತೇವೆ. ಅಫ್ಘಾನಿಸ್ತಾನದ ಕುರಿತು ಮುಂದಿನ ವಾರದಲ್ಲಿ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗವುದು ಎಂದು ಎಚ್ಚರಿಕೆ ನೀಡಿದ್ದರು. ಇದನ್ನೂ ಓದಿ:ಪಂಜಶೀರ್ ವಶಕ್ಕೆ ಮುಂದಾಗಿದ್ದ 300 ತಾಲಿಬಾನಿಗಳು ಮಟಾಷ್!
ನವದೆಹಲಿ: ತಾಲಿಬಾನಿಗಳನ್ನು ಆರ್‍ಎಸ್‍ಎಸ್ ಮತ್ತು ಬಜರಂಗದಳಕ್ಕೆ ಹೋಲಿಕೆ ಮಾಡಿ ಕವಿ ಮುನ್ವರ್ ರಾಣಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಅಫ್ಘಾನಿಸ್ತಾನಕ್ಕಿಂತ ಭಾರತದಲ್ಲಿಯೇ ಹೆಚ್ಚು ಕ್ರೂರತೆ ಇದೆ. ತಾಲಿಬಾನಿಗಳು ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿರುವ ವಿಚಾರ ಅಫ್ಘಾನಿಸ್ತಾನದ ಆಂತರಿಕ ವಿಚಾರ. ತಾಲಿಬಾನಿ ಅಥವಾ ಅಫ್ಘಾನಿಗಳು ಯಾರೇ ಇರಲಿ, ಅವರೆಲ್ಲರೂ ಒಂದೇ. ಅದೇ ರೀತಿಯಲ್ಲಿ ಭಾರತದಲ್ಲಿಯ ಬಿಜೆಪಿ, ಆರ್‍ಎಸ್‍ಎಸ್ ಮತ್ತು ಬಜರಂಗದಳ ಸಹ ಒಂದೇ ಆಗಿವೆ. ಸಾವಿರ ವರ್ಷಗಳ ಇತಿಹಾಸದ ಪುಟಗಳನ್ನ ತೆಗೆದುನೋಡಿದ್ರೆ ಅಫ್ಘಾನಿಗಳು ಹಿಂದೂಸ್ತಾನಕ್ಕೆ ಎಂದೂ ದ್ರೋಹ ಮಾಡಿಲ್ಲ ಎಂದು ಹೇಳಿದ್ದಾರೆ.
ಅಫ್ಘಾನಿಸ್ತಾನದ ವಿಷಯವನ್ನು ಭಾರತದಲ್ಲಿ ಚರ್ಚೆ ನಡೆಸುವ ಅವಶ್ಯಕತೆ ಇಲ್ಲ. ಮುಂದೊಂದು ದಿನ ತಾಲಿಬಾನಿಗಳ ಹಿಂದೂಸ್ತಾನದ ಸಹಾಯ ಕೇಳುತ್ತಾರೆ ಮತ್ತು ಭಾರತ ಅವರಿಗೆ ನೆರವು ನೀಡುವ ಸಮಯ ಬರಲಿದೆ. ಭಾರತದ ಮಾಫಿಯಾ ಬಳಿ ತಾಲಿಬಾನಿಗಳಿಗಿಂತ ಹೆಚ್ಚಿನ ಶಸ್ತ್ರಾಸ್ತ್ರಗಳಿವೆ. ತಾಲಿಬಾನಿಗಳು ಶಸ್ತ್ರಾಸ್ತ್ರಗಳನ್ನು ಕಸಿದುಕೊಂಡ್ರೆ, ನಮ್ಮಲ್ಲಿ ಮಾಫಿಯಾಗಳನ್ನ ಖರೀದಿಸಲಾಗುತ್ತದೆ ಎಂದಿದ್ದಾರೆ.
ಔರಂಗಜೇಬ್ ಆಡಳಿತಾವಧಿಯಲ್ಲಿ ಭಾರತ ಅಫ್ಘಾನಿಸ್ತಾನದ ಭಾಗವಾಗಿತ್ತು. ಇಂದು ಮೊಘಲ್ ಚಕ್ರವರ್ತಿಗಳಿದಿದ್ರೆ ಭಾರತ ಸಹ ಅಫ್ಘಾನಿಸ್ತಾನದ ಭಾಗವಾಗಿರುತ್ತಿತ್ತು. ಬ್ರಿಟಿಷರ ಆಳ್ವಿಕೆ ಬಂದಾಗ ಅಫ್ಘಾನರು ಅವರನ್ನ ಮರಕ್ಕೆ ನೇತು ಹಾಕಲು ಆರಂಭಿಸಿದರು. ಹಾಗಾಗಿ ಭಾರತ ಮತ್ತು ಅಫ್ಘಾನಿಸ್ತಾನವನ್ನು ಇಬ್ಭಾಗ ಮಾಡಲಾಯ್ತು.
ಮೋದಿ ಸರ್ಕಾರ ಅಫ್ಘಾನಿಸ್ತಾನದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಸಂಸತ್ ಭವನ, ರಸ್ತೆ ನಿರ್ಮಿಸಿರೋದನ್ನು ಯಾರೂ ಅಲ್ಲಗಳೆಯುತ್ತಿಲ್ಲ. ತಾಲಿಬಾನಿ ಅಥವಾ ಇನ್ನಾರೇ ಬರಲಿ ಭಾರತದಿಂದ ಅಫ್ಘಾನಿಸ್ತಾನಕ್ಕೆ ಒಳ್ಳೆಯದು ಆಗಿದೆಯೇ ಹೊರತು ಕೆಟ್ಟದ್ದು ಆಗಿಲ್ಲ ಎಂಬ ವಿಷಯವನ್ನು ಅಫ್ಘನ್ನರು ಒಪ್ಪಿಕೊಳ್ಳಬೇಕು ಎಂದು ಮೋದಿ ಸರ್ಕಾರದ ಕೆಲಸಗಳಿಗೆ ಮೆಚ್ಚುಗೆ ಸೂಚಿಸಿದರು. ಇದನ್ನೂ ಓದಿ: ಮಹಿಳೆಯರು ಕೆಲಸ ಮಾಡಬಹುದು, ಮುಸ್ಲಿಂ ಕಾನೂನುಗಳ ವ್ಯಾಪ್ತಿಯಲ್ಲಷ್ಟೇ: ತಾಲಿಬಾನ್
ತಾಲಿಬಾನಿಗಳು ಸ್ವಾತಂತ್ರ್ಯ ಸೇನಾನಿ ಅಂದ ಮುಖಂಡ:
ತಾಲಿಬಾನಿಗಳ ಬಗ್ಗೆ ಮೊದಲಿಗೆ ಸಮಾಜವಾದಿ ಪಕ್ಷದ ಸಂಸದ ಶಫಿಕುರ್ ರಹಮಾನ್ ಬರ್ಖ್ ಒಲವು ವ್ಯಕ್ತಪಡಿಸಿದ್ದಾರೆ. ತಾಲಿಬಾನಿಗಳನ್ನು ಸ್ವಾತಂತ್ರ್ಯ ಸೇನಾನಿಗಳು ಅಂದಿದ್ದಾರೆ. ಬ್ರಿಟಿಷ್ ಆಡಳಿತದಲ್ಲಿ ಭಾರತೀಯರು ಕೂಡ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದರು. ಅದೇ ರೀತಿ ತಾಲಿಬಾನಿಗಳು ಅಫ್ಘಾನಿಸ್ತಾನದ ಸ್ವಾತಂತ್ರ್ಯಕ್ಕೆ ಹೋರಾಡಿದ್ದಾರೆ ಎಂದು ಹೇಳಿರುವುದು ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: ತಾಲಿಬಾನ್ ಉಗ್ರರ ಸರ್ಕಾರಕ್ಕೆ ಪಾಕಿಸ್ತಾನ, ಚೀನಾ, ಇರಾನ್ ಬೆಂಬಲ
ತಾಲಿಬಾನಿಗಳನ್ನು ಭಾರತೀಯ ಸ್ವಾತಂತ್ರ್ಯ ಹೋರಾಟಗಾರರಿಗೆ ಹೋಲಿಸಿರೋ ಉತ್ತರ ಪ್ರದೇಶದ ಸಂಭಾಲ್ ಕ್ಷೇತ್ರದ ಎಂಪಿ ಬರ್ಖ್ ವಿರುದ್ಧ ದೇಶದ್ರೋಹ ಕೇಸ್ ದಾಖಲಾಗಿದೆ. ಎರಡನೇಯದಾಗಿ ಎಂಐಎಂ ಅಧ್ಯಕ್ಷ ಸಂಸದ ಅಸಾದುದ್ದೀನ್ ಓವೈಸಿ ಕೂಡ ತಾಲಿಬಾನಿ ಪ್ರೇಮ ಮೆರೆದಿದ್ದಾರೆ. ಭಾರತ ಅಫ್ಘಾನ್‍ನಲ್ಲಿ ಭಾರೀ ಹೂಡಿಕೆ ಮಾಡಿದೆ. ಭಾರತದ ಹೂಡಿಕೆ ವ್ಯರ್ಥವಾಗಬಾರದು. ತಾಲಿಬಾನ್ ಜೊತೆಗೆ ಭಾರತ ಔಪಚಾರಿಕ ಅಥವಾ ಅನೌಪಚಾರಿಕ ಚರ್ಚೆ ನಡೆಸಲಿ. ಭಾರತದ ಬಗ್ಗೆ ತಾಲಿಬಾನಿಗಳಿಗೆ ಉತ್ತಮ ಅಭಿಪ್ರಾಯ ಇದೆ ಎಮದು ತಿಳಿಸಿದ್ದಾರೆ. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ – ಭಾರತಕ್ಕೆ ಇರುವ ಸವಾಲುಗಳೇನು?
ಮತ್ತೊಂದೆಡೆ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಕೂಡ ತಾಲಿಬಾನ್‍ಗೆ ಕೊಂಡಾಡಿದೆ. ತಾಲಿಬಾನಿಗಳು ಅಹಿಂಸಾತ್ಮಕವಾಗಿ ಅಭೂತಪೂರ್ವವಾಗಿ ಅಧಿಕಾರ ಪಡೆದಿದ್ದಾರೆ ಅಂತ ಮೌಲಾನಾ ಸಜ್ಜದ್ ನೋಮಾನಿ ಹೇಳಿದ್ದಾರೆ. ಆದರೆ ಇದು ನೋಮಾನಿ ವೈಯಕ್ತಿಕ ಹೇಳಿಕೆ ಅಂತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಅಂತರ ಕಾಯ್ದುಕೊಂಡಿದೆ. ಇದನ್ನೂ ಓದಿ: ಪ್ರತಿಭಟನಾಕಾರರ ಮೇಲೆ ತಾಲಿಬಾನಿಗಳಿಂದ ಗುಂಡಿನ ದಾಳಿ
ಕಾಬೂಲ್: ತಾಲಿಬಾನಿಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ನಡೆಸಲಾಗಿದ್ದು, ಇದರ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅಫ್ಘಾನಿಸ್ತಾನ ಉಳಿಯಬೇಕೆಂದು ಆಗ್ರಹಿಸಿ ಫ್ರಂಟ್ ನಾರ್ದನ್ ಅಲೈನ್ಸ್ ಸಂಘಟನೆ ತಾಲಿಬಾನಿಗಳ ವಿರುದ್ಧ ಘೋಷಣೆ ಕೂಗುತ್ತಾ ರಸ್ತೆಗೆ ಇಳಿದಿದ್ದರು. ತಾಲಿಬಾನಿಗಳ ಸರ್ಪಗಾವಲು ಹಾಕಿದ್ರೂ ಅಫ್ಘನಿಸ್ತಾನದ ಧ್ವಜ ಹಾರಿಸಲಾಯ್ತು.
ಅಫ್ಘಾನಿಸ್ತಾನದ ರಾಜಕಾರಣಿ ದಿ.ಅಹ್ಮದ್ ಶಾ ಮಸೂದ್ ಪತ್ರನ ಮನವಿ ಮೇರೆ ಅಲ್ಲಿಯ ಸೈನಿಕರು ಪಂಜಶೀರ್ ತಲುಪುತ್ತಿದ್ದಾರೆ. ಜಲಾಲಾಬಾದ್ ನಲ್ಲಿಯೂ ಕೆಲ ಜನರು ಅಫ್ಘಾನಿಸ್ತಾನದ ಧ್ವಜ ಹಾರಿಸುವ ಮೂಲಕ ತಾಲಿಬಾನಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈ ವೇಳೆ ಬಂದ ತಾಲಿಬಾನಿಗಳು ಧ್ವಜ ತೆಗೆಯಲು ಬಂದಾಗ ಜನ ವಿರೋಧಿಸಿದ್ದಕ್ಕೆ ಗುಂಡಿನ ದಾಳಿ ನಡೆಸಿದರು. ಈ ಗುಂಡಿನ ದಾಳಿಯಲ್ಲಿ ಓರ್ವ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.
ಸದ್ಯ ಇರುವ ಧ್ವಜವನ್ನ ಬದಲಿಸಬಾರದು. ಇದನ್ನೇ ರಾಷ್ಟ್ರೀಯ ಧ್ವಜ ಎಂದು ಪರಿಗಣಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಪಾಕಿಸ್ತಾನದ ಗಡಿ ಭಾಗದಲ್ಲಿರುವ ಅಫ್ಘಾನಿಗಳು ಸಹ ಧ್ವಜ ಹಾರಿಸುವ ಮೂಲಕ ತಾಲಿಬಾನಿಗಳ ನಡೆಯನ್ನು ಖಂಡಿಸಿದ್ದರು.
ಭಾರತಕ್ಕೆ ಇರುವ ಸವಾಲುಗಳು:
ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಆಡಳಿತ ಆರಂಭಗೊಂಡಿದ್ದು ಪಾಕಿಸ್ತಾನ-ಅಫ್ಘಾನ್ ಗಡಿಯಲ್ಲಿ ಭಯೋತ್ಪಾದಕ ಸಂಘಟನೆಗಳು ಸಕ್ರಿಯವಾಗಿದೆ. ಲಷ್ಕರ್ ಇ ತೋಯ್ಬಾ, ಇಂಡಿಯನ್ ಮುಜಾಹಿದ್ದೀನ್ ಇನ್ನಷ್ಟು ಕೃತ್ಯಗಳಿಗೆ ಯತ್ನಿಸಬಹುದು.
ತಾಲಿಬಾನಿಗಳ ಕೈವಶ ಬಳಿಕ ಅಫ್ಘಾನ್ ಬಗ್ಗೆ ಚೀನಾ ಆಸಕ್ತಿ ಹೆಚ್ಚಿಸಿಕೊಂಡಿದೆ. ಈಗಾಗಲೇ ತಾಲಿಬಾನ್ ಪರ ಸಾಫ್ಟ್ ಕಾರ್ನರ್ ತೋರಿಸಿರುವ ಚೀನಾ ರೈಲು, ಬೆಲ್ಟ್-ರೋಡ್ ಯೋಜನೆಗಳನ್ನು ಅಫ್ಘಾನಿಸ್ತಾನಕ್ಕೂ ವಿಸ್ತರಿಸುವ ಮೂಲಕ ಪ್ರಭಾವ ಬೀರಬಹುದು. ದಕ್ಷಿಣ ಏಷ್ಯಾದಲ್ಲಿ ಚೀನಾದ ಕುತಂತ್ರಗಳಿಗೆ ಅಫ್ಘಾನಿಸ್ತಾನವೂ ವೇದಿಕೆ ಆಗಬಹುದು. ಇದನ್ನೂ ಓದಿ: ತಾಲಿಬಾನ್ ಉಗ್ರರಿಗಾಗಿ ಕಾಯುತ್ತಿದ್ದೇನೆ, ನನ್ನನ್ನು ಕೊಲ್ಲುತ್ತಾರೆ: ಅಫ್ಘಾನಿಸ್ತಾನದ ಮಹಿಳಾ ಮೇಯರ್