Tag: ತಾರಿಣಿ

  • ‘ತಾರಿಣಿ’ಗೆ ಮತ್ತೊಂದು ಪ್ರಶಸ್ತಿ ಗೌರವ: ಬೆಸ್ಟ್ ನಟಿ ಪ್ರಶಸ್ತಿ ಪಡೆದ ಮಮತಾ

    ‘ತಾರಿಣಿ’ಗೆ ಮತ್ತೊಂದು ಪ್ರಶಸ್ತಿ ಗೌರವ: ಬೆಸ್ಟ್ ನಟಿ ಪ್ರಶಸ್ತಿ ಪಡೆದ ಮಮತಾ

    ಪ್ರತಿಷ್ಠಿತ ಚಿತ್ರೋತ್ಸವಗಳಲ್ಲಿ ಒಂದಾದ ‘ರಾಜಸ್ಥಾನ್ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್’ ನಲ್ಲಿ ‘ತಾರಿಣಿ’ (Tarini) ಚಿತ್ರದ ಅಭಿನಯಕ್ಕೆ  ಮಮತಾ ರಾಹುತ್ (Mamata Rahut) ಗೆ ಅತ್ಯುತ್ತಮ ನಟಿ ಪ್ರಶಸ್ತಿ ಬಂದರೇ ಮತ್ತೊಂದು ‘ಬೆಸ್ಟ್ ಕ್ರಿಟಿಕ್ಸ್ ಅವಾರ್ಡ್’ ಕೂಡ ಬಂದಿದೆ. ಒಟ್ಟು ಎರಡು ಪ್ರಶಸ್ತಿಗಳನ್ನು ತಾರಿಣಿ ಚಿತ್ರ ತನ್ನ ಮುಡಿಗೇರಿಸಿಕೊಂಡಿದೆ. ಸಿದ್ದು ಪೂರ್ಣಚಂದ್ರ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರ ಹಲವು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಆಯ್ಕೆಯಾಗಿ ಪ್ರದರ್ಶನಗೊಂಡು ಪ್ರಶಸ್ತಿಗಳಿಸುತ್ತಿದೆ. ಶ್ರೀ ಗಜನಿ ಪ್ರೊಡಕ್ಷನ್ಸ್ ಬ್ಯಾನರ್ ನ ಅಡಿಯಲ್ಲಿ ನಿರ್ಮಾಣವಾದ ಈ ಚಿತ್ರಕ್ಕೆ ಡಾ. ಸುರೇಶ್ ಕೋಟ್ಯಾನ್ ಚಿತ್ರಾಪು ಬಂಡವಾಳ ಹೂಡಿ ಒಂದು ಮುಖ್ಯ ಪಾತ್ರದಲ್ಲೂ ಅಭಿನಯಿಸಿದ್ದಾರೆ.

    ರಾಜಸ್ಥಾನ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಮಮತಾ ರಾಹುತ್ ಗೆ ಅತ್ಯುತ್ತಮ ನಟಿ ಪ್ರಶಸ್ತಿ ಬಂದಿರುವುದು ಇಡೀ ತಂಡಕ್ಕೆ ಖುಷಿ ತಂದಿದೆ, ಗರ್ಭಿಣಿಯೊಬ್ಬಳ ಕಥೆಯಾಧಾರಿತ ಈ ಸಿನಿಮಾಗೆ  ಮಮತಾ ರಾಹುತ್ ಕೂಡ ನೈಜ ಗರ್ಭಿಣಿಯಾಗಿ ಮನೋಜ್ಞವಾಗಿ ಅಭಿನಯಿದ್ದಾರೆ ಎಂದು ನಿರ್ದೇಶಕರು ಸಂತಸ ವ್ಯಕ್ತಪಡಿಸಿದ್ದಾರೆ. ಅವರಿಗೆ  ಕೆಲವೊಂದು ಸಂದರ್ಭಗಳಲ್ಲಿ ಕಷ್ಟ ಎನಿಸಿದರೂ ಅದನ್ನು ಯಾರ ಬಳಿಯೂ ಹೇಳಿಕೊಳ್ಳದೆ ಚಿತ್ರೀಕರಣ ಮಾಡಲು ಸಂಪೂರ್ಣ ಸಹಕಾರ ನೀಡಿ, ದೃಶ್ಯ ಕಟ್ಟುವಲ್ಲಿ ಧೈರ್ಯ ತೋರಿದರು. ಅವರು ಗರ್ಭಿಣಿಯಾದ 7ನೇ ತಿಂಗಳಿಂದ ಚಿತ್ರೀಕರಣ ಪ್ರಾರಂಭಿಸಿ ಒಂಬತ್ತನೇ ತಿಂಗಳು ತುಂಬಿದಾಗಲೂ ಚಿತ್ರೀಕರಣ ಮಾಡುತ್ತಲೇ ಇದ್ದೆವು. ಮಗು ಹುಟ್ಟುವ ಸನ್ನಿವೇಶಗಳನ್ನು ಚಿತ್ರೀಕರಿಸುವಾಗ ಅವರದೇ ಮಗುವನ್ನು ಚಿತ್ರಿಸಿಕೊಂಡಿದ್ದು ಮಾತ್ರ ಬೆಸ್ಟ್ ಮೆಮೊರಿ. ನೈಜತೆಗೆ ಒತ್ತು ನೀಡುವುದು ಮುಖ್ಯ ಉದ್ದೇಶವಾಗಿದ್ದರಿಂದ ಎಲ್ಲವೂ ಅದ್ಭುತ ಎನಿಸಲು ಸಹಕಾರಿಯಾಗಿದೆ ಎಂದು ನಿರ್ದೇಶಕರು ಸ್ಮರಿಸಿದ್ದಾರೆ.

    ಅಯೋಧ್ಯ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಅತ್ಯುತ್ತಮ ಸಾಮಾಜಿಕ ಚಿತ್ರ ಪ್ರಶಸ್ತಿ, ಲಂಡನ್ ಇಂಡಿಪೆಂಡೆಂಟ್ ಫಿಲ್ಮ್ ಅವಾರ್ಡ್, ಬಾಲಿವುಡ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್, ಇಂಡೋಗ್ಮಾ ಫೆಸ್ಟಿವಲ್  ಅವಾರ್ಡ್, ಫ್ರಾನ್ಸ್ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್, ಗೋಲ್ಡನ್ ಜ್ಯೂರಿ  ಫಿಲ್ಮ್ ಫೆಸ್ಟಿವಲ್ ಅವಾರ್ಡ್, ಉತ್ತರ ಪ್ರದೇಶದ ಗ್ಲೋಬಲ್ ತಾಜ್ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್, ಮೊಕ್ಖೋ ಇಂಟರ್ನ್ಯಾಷನಲ್ ಫಿಲ್ಮ್ ಅವಾರ್ಡ್, ಮಧ್ಯಪ್ರದೇಶದ ವಿಂಧ್ಯ  ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್, ಮುಂಬೈ ಇಂಡಿಪೆಂಡೆಂಟ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್, ನ್ಯೂಯಾರ್ಕ್ ಫಿಲ್ಮ್ ಅವಾರ್ಡ್ ಇನ್ನೂ ಮುಂತಾದ ಚಲನಚಿತ್ರಗಳಲ್ಲಿ ಪ್ರದರ್ಶನಗೊಂಡು ತಾರಿಣಿ ಚಿತ್ರ ಪ್ರಶಸ್ತಿಗೆ ಭಾಜನವಾಗುತ್ತಿದೆ.

    ಕರ್ನಾಟಕದ ಕೆಲವು ಭಾಗದಲ್ಲಿ ‘ಹೆಣ್ಣು ಭ್ರೂಣ ಹತ್ಯೆ’ ಕುರಿತಾದ ವಿಷಯಗಳು ಎಲ್ಲಾ ಕಡೆ ಪ್ರಚಲಿತವಾಗಿ ಕರುಳ ಬಳ್ಳಿಗೆ ಕೊಳ್ಳಿ ಇಡುವ ಕೆಲಸಗಳು ನಿರಂತರವಾಗಿ ನಡೆದು ಈಗ ಅದು ಬಹಿರಂಗವಾಗಿದ್ದು ಎಲ್ಲರಿಗು  ಕಣ್ಣೀರು ಬರಿಸುವ ಸುದ್ದಿಯಾಗಿ ಹೊರಹೊಮ್ಮಿತ್ತು. ನಾವು ಇದೇ ವಿಷಯವನ್ನು ಕೇಂದ್ರೀಕರಿಸಿ ಸರ್ಕಾರದ ಮತ್ತು ಸ್ವಸ್ತ ನಾಗರೀಕ ಸಮಾಜದ ಪ್ರತಿನಿಧಿಯಾಗಿ ಭವಿಷ್ಯದ ಹಿತಚಿಂತನೆಯಿಂದ ಈ ಕಥೆಯನ್ನು ಸಿದ್ದಪಡಿಸಿದ್ದೇವೆ,  ಖಂಡಿತ ಇದೊಂದು ಉತ್ತಮ ಚಿತ್ರವಾಗಿ ಎಲ್ಲರ ಗಮನಸೆಳೆದು ಯಶಸ್ವಿಯಾಗುತ್ತದೆ. ಇಂತಹ ವಿಭಿನ್ನ ಪ್ರಯತ್ನಕ್ಕೆ ಕನ್ನಡಿಗರು ಯಾವತ್ತೂ ಕೈಜೋಡಿಸುತ್ತಾರೆ ಎಂಬ ನಿರೀಕ್ಷೆಯಲ್ಲಿ ಚಿತ್ರತಂಡವಿದೆ.

    ನಾಯಕನಾಗಿ ರೋಹಿತ್ ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚಿ ಅಭಿನಯಿಸಿದ್ದಾರೆ. ಮುಖ್ಯಪಾತ್ರದಲ್ಲಿ ಭವಾನಿ ಪ್ರಕಾಶ್, ಸುಧಾ ಪ್ರಸನ್ನ, ವಿಜಯಲಕ್ಷ್ಮಿ, ಪ್ರಮಿಳಾ ಸುಬ್ರಹ್ಮಣ್ಯ, ಸನ್ನಿ, ಶೀಬಾ, ದೀಪಿಕಾ  ಗೌಡ, ಕವಿತ ಕಂಬಾರ್, ಮಟಿಲ್ಢಾ ಡಿಸೋಜಾ,ತೇಜಸ್ವಿನಿ, ಅರ್ಚನ ಗಾಯಕ್ವಾಡ್, ಮಂಜು ನಂಜನಗೂಡು, ರಘು ಸಮರ್ಥ್, ಪ್ರಿನ್ಸ್ ಜಿತಿನ್ ಕೋಟ್ಯಾನ್, ಬೇಬಿ ರಿಧಿ, ಬೇಬಿ ನಿಶಿತಾ,ಚೈತ್ರ, ಶ್ವೇತ ಮುಂತಾದವರು ಅಭಿನಯಿಸಿದ್ದಾರೆ.  ಈ ಚಿತ್ರಕ್ಕೆ ಅನಂತ್ ಆರ್ಯನ್ ಸಂಗೀತ ಸಂಯೋಜಿದರೆ, ದೀಪಕ್ ಸಂಕಲನ ಮಾಡಿದ್ದಾರೆ, ಕಲೆ  ಬಸವರಾಜ್ ಆಚಾರ್ಯ, ಡಿ.ಐ ಕೆಲಸವನ್ನು ನಿಖಿಲ್ ಕಾರಿಯಪ್ಪ ನಿರ್ವಹಿಸಿದ್ದಾರೆ.

  • ‘ತಾರಿಣಿ’ಗೆ ಅಯೋಧ್ಯ ಚಿತ್ರೋತ್ಸವ ಪ್ರಶಸ್ತಿ

    ‘ತಾರಿಣಿ’ಗೆ ಅಯೋಧ್ಯ ಚಿತ್ರೋತ್ಸವ ಪ್ರಶಸ್ತಿ

    ಯೋಧ್ಯದಲ್ಲಿ ನಡೆಯುವ ಪ್ರತಿಷ್ಟಿತ ಅಯೋಧ್ಯ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಲ್ಲಿ ‘ತಾರಿಣಿ’ (Tarini) ಚಿತ್ರ ಸ್ಪರ್ಧಾತ್ಮಕ ವಿಭಾಗದಲ್ಲಿ ಪ್ರದರ್ಶನಗೊಂಡು ಅತ್ಯುತ್ತಮ ಸಾಮಾಜಿಕ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ. ಈಗಾಗಲೇ ಈ ಚಿತ್ರ ಹಲವಾರು ಚಲನಚಿತ್ರೋತ್ಸವಗಳಲ್ಲಿ ಭಾಗವಹಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಶ್ರೀ ಗಜನಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ಡಾ. ಸುರೇಶ್ ಕೋಟ್ಯಾನ್ ಚಿತ್ರಾಪು ಒಂದು ಪ್ರಮುಖ ಪಾತ್ರದಲ್ಲಿ ಅಭಿನಯಿಸಿ ಬಂಡವಾಳವನ್ನೂ ಹೂಡಿದ್ದಾರೆ. ಕಥೆ, ಚಿತ್ರಕಥೆ , ಸಂಭಾಷಣೆ ಬರೆದು ಸಿದ್ದು ಪೂರ್ಣಚಂದ್ರ ನಿರ್ದೇಶನ ಮಾಡಿದ್ದಾರೆ.

    ಈ ಕಥೆ ಗರ್ಭಿಣಿ ಹೆಂಗಸಿನ ಕಥೆಯಾಧಾರಿತ ಚಿತ್ರವಾಗಿರುವುದರಿಂದ ನಾಯಕಿ ಮಮತಾ ರಾಹುತ್ ಗರ್ಭಿಣಿ ಪಾತ್ರಕ್ಕೆ ನೈಜ ಗರ್ಭಿಣಿಯಾಗೇ ಮನೋಜ್ಞವಾಗಿ ಅಭಿನಯಿಸಿದ್ದಾರೆ.   ಆಗಷ್ಟೇ ಹುಟ್ಟಿದ ಮಮತಾ ರಾಹುತ್ ಮಗುವಿನ ದೃಶ್ಯಗಳೂ ‘ತಾರಿಣಿ’ ಚಿತ್ರದಲ್ಲಿರುವುದು ವಿಶೇಷ ಎಂದು ನಿರ್ದೇಶಕರು ತಿಳಿಸಿದ್ದಾರೆ. ಈಗಾಗಲೇ ಲಂಡನ್ ಇಂಡಿಪೆಂಡೆಂಟ್‌ ಫಿಲ್ಮ್‌ ಅವಾರ್ಡ್ಸ್, ಗ್ಲೋಬಲ್ ತಾಜ್ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್, ಮೋಕ್ಖೊ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್, ಇಂಡೋಗ್ಮಾ ಫಿಲ್ಮ್ ಫೆಸ್ಟಿವಲ್, ಮುಂಬೈ ಇಂಡಿಪೆಂಡೆಂಟ್ ಫಿಲ್ಮ್ ಫೆಸ್ಟಿವಲ್, ಬಾಲಿವುಡ್ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ನಲ್ಲಿ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಜೊತೆಗೆ ಆಂಧ್ರಪ್ರದೇಶದಲ್ಲಿ ನಡೆಯುವ ವಿಂಧ್ಯಾ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್, ರಾಜಸ್ಥಾನ್ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಲ್ಲೂ ಈ ಚಿತ್ರ ಆಯ್ಕೆಯಾಗಿ ಮುಂದಿನ ವಾರ ಪ್ರದರ್ಶನಕ್ಕೆ ರೆಡಿಯಾಗಿದೆ. ಫ್ರಾನ್ಸ್ ನ ಗೋಲ್ಡ್ ಫ್ಲಾಷ್ ಇಂಟರ್‌ನ್ಯಾಷನಲ್ ಫೆಸ್ಟಿವಲ್ ನಲ್ಲಿ ಅಫಿಷಿಯಲ್ ಸೆಲೆಕ್ಷನ್ ಆಗಿದೆ. ಉಳಿದಂತೆ ಇನ್ನೂ ಹಲವಾರು ಚಿತ್ರೋತ್ಸವಗಳಿಗೆ ತಾರಿಣಿ ಚಿತ್ರವನ್ನು ಕಳುಹಿಸಲಾಗಿದೆ ಎಲ್ಲಾ ಕಡೆಯಲ್ಲೂ ಪ್ರದರ್ಶನಗೊಂಡು ಪ್ರಶಸ್ತಿ ಗೆಲ್ಲುವ ನಂಬಿಕೆ ಇದೆ ಎಂದು ನಿರ್ದೇಶಕ ಸಿದ್ದು ಪೂರ್ಣಚಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಈಗೊಂದು ತಿಂಗಳಿಂದಲೂ ನಮ್ಮ ಕರ್ನಾಟಕದಲ್ಲಿ ‘ಹೆಣ್ಣು ಭ್ರೂಣ ಹತ್ಯೆ’ ಕುರಿತಾದ ವಿಷಯಗಳು ಎಲ್ಲಾಕಡೆ ಪ್ರಚಲಿತವಾಗಿ ಕರುಳ ಬಳ್ಳಿಗೆ ಕೊಳ್ಳಿ ಇಡುವ ಕೆಲಸಗಳು ನಿರಂತರವಾಗಿ ನಡೆದು ಈಗ ಅದು ಬಹಿರಂಗವಾಗಿದ್ದು ಎಲ್ಲರಿಗು ಕೋಪ ಮತ್ತು ಕಣ್ಣೀರು ಬರಿಸುವ ಸುದ್ದಿಯಾಗಿ ಹೊರಹೊಮ್ಮಿತ್ತು. ನಾವು ಇದೇ ವಿಷಯವನ್ನು ಕೇಂದ್ರೀಕರಿಸಿ ಸರ್ಕಾರದ ಮತ್ತು ಸ್ವಸ್ತ ನಾಗರೀಕ ಸಮಾಜದ ಪ್ರತಿನಿಧಿಯಾಗಿ ಭವಿಷ್ಯದ ಹಿತಚಿಂತನೆಯಿಂದ ಈ ಕಥೆಯನ್ನು ಸಿದ್ದಪಡಿಸಿದ್ದೇವೆ,  ಖಂಡಿತ ಇದೊಂದು ಉತ್ತಮ ಚಿತ್ರವಾಗಿ ಎಲ್ಲರ ಗಮನಸೆಳೆದು ಯಶಸ್ವಿಯಾಗುತ್ತದೆ. ಇಂತಹ ವಿಭಿನ್ನ ಪ್ರಯತ್ನಕ್ಕೆ ಕನ್ನಡಿಗರು ಯಾವತ್ತೂ ಕೈಜೋಡಿಸುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದೆ ಚಿತ್ರತಂಡ.

    ನಾಯಕನಾಗಿ ರೋಹಿತ್ ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚಿ ಅಭಿನಯಿಸಿದ್ದಾರೆ. ಮುಖ್ಯಪಾತ್ರದಲ್ಲಿ ಭವಾನಿ ಪ್ರಕಾಶ್, ಸುಧಾ ಪ್ರಸನ್ನ, ವಿಜಯಲಕ್ಷ್ಮಿ, ಪ್ರಮಿಳಾ ಸುಬ್ರಹ್ಮಣ್ಯ, ಸನ್ನಿ, ಶೀಬಾ, ದೀಪಿಕಾ  ಗೌಡ, ಕವಿತ ಕಂಬಾರ್, ಮಟಿಲ್ಢಾ ಡಿಸೋಜಾ,ತೇಜಸ್ವಿನಿ, ಅರ್ಚನ ಗಾಯಕ್ವಾಡ್, ಮಂಜು ನಂಜನಗೂಡು, ರಘು ಸಮರ್ಥ್, ಪ್ರಿನ್ಸ್ ಜಿತಿನ್ ಕೋಟ್ಯಾನ್, ಬೇಬಿ ರಿಧಿ, ಬೇಬಿ ನಿಶಿತಾ,ಚೈತ್ರ, ಶ್ವೇತ ಮುಂತಾದವರು ಅಭಿನಯಿಸಿದ್ದಾರೆ.  ಈ ಚಿತ್ರಕ್ಕೆಅನಂತ್ ಆರ್ಯನ್ ಸಂಗೀತ ಸಂಯೋಜಿದರೆ, ದೀಪಕ್ ಸಂಕಲನ, ಕಲೆ  ಬಸವರಾಜ್ ಆಚಾರ್ಯ, ಡಿ.ಐ ಕೆಲಸವನ್ನು ನಿಖಿಲ್ ಕಾರಿಯಪ್ಪ ನಿರ್ವಹಿಸಿದ್ದಾರೆ.

  • ರಾಜಸ್ಥಾನ ಚಲನಚಿತ್ರೋತ್ಸವಕ್ಕೆ ‘ತಾರಿಣಿ’ ಆಯ್ಕೆ

    ರಾಜಸ್ಥಾನ ಚಲನಚಿತ್ರೋತ್ಸವಕ್ಕೆ ‘ತಾರಿಣಿ’ ಆಯ್ಕೆ

    ವಿಭಿನ್ನ ಕಥೆಗಳ ಸಿನಿಮಾಗಳನ್ನು ನಿರ್ದೇಶಿಸಿ ಪ್ರಸಿದ್ದಿ ಪಡೆದಿರುವ ನಿರ್ದೇಶಕ ‘ಸಿದ್ದು ಪೂರ್ಣಚಂದ್ರ’ ಮತ್ತೊಂದು ಅಂತಹದ್ದೇ ಕಥೆ ಚಿತ್ರಕಥೆ  ಬರೆದು ನಿರ್ದೇಶಿಸಿರುವ ಚಿತ್ರ ತಾರಿಣಿ (Tarini).  ಪ್ರತಿಷ್ಟಿತ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲೊಂದಾದ (Chirotsava) “ರಾಜಸ್ಥಾನ್ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್” ಗೆ ಈ ಸಿನಿಮಾ ಆಯ್ಕೆಯಾಗಿದೆ.

    ಜನವರಿ ತಿಂಗಳಲ್ಲಿ ರಾಜಸ್ಥಾನದ ಜೈಪುರ್ ನಲ್ಲಿ ತಾರಿಣಿ ಚಿತ್ರ ಪ್ರದರ್ಶನವಿದೆ. ದೇಶದ ವಿವಿಧ ಭಾಗಗಳಿಂದ ಬರುವ ಚಿತ್ರ ಪ್ರೇಮಿಗಳು ಈ ಚಿತ್ರವನ್ನು ಕಣ್ತುಂಬಿಕೊಳ್ಳುವರು ಎಂದು ಚಿತ್ರದ ನಿರ್ದೇಶಕ ಸಿದ್ದು ಪೂರ್ಣಚಂದ್ರ  (Siddu Poornchandra) ಮಾಹಿತಿ ನೀಡಿದ್ದಾರೆ.

    ಶ್ರೀ ಗಜನಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ಸುರೇಶ್ ಕೋಟ್ಯಾನ್ ಚಿತ್ರಾಪು ಬಂಡವಾಳ ಹೂಡಿದ್ದಾರೆ. ಜೊತೆಗೆ  ಒಂದು ಮುಖ್ಯಪಾತ್ರದಲ್ಲೂ ಅಭಿನಯಿಸಿದ್ದಾರೆ. ಗರ್ಭಿಣಿ ಮಹಿಳೆ ಕುರಿತಾದ ಕಥಾ ಸಾರಾಂಶ ಹೊಂದಿರುವ ತಾರಿಣಿ ಚಿತ್ರದಲ್ಲಿ ನಿಜವಾಗಿಯೂ ಪ್ರಗ್ನೆಂಟ್ ಆಗಿಯೇ ಮಮತಾ ರಾಹುತ್ ಅಭಿನಯಿಸಿದ್ದಾರೆ. ಆಗಷ್ಟೇ ಹುಟ್ಟಿದ ಮಮತಾ ರಾಹುತ್ (Mamata Rahut) ಅವರ ಮಗುವಿನ ದೃಶ್ಯಗಳೂ ‘ತಾರಿಣಿ’ ಚಿತ್ರದಲ್ಲಿರುವುದು ವಿಶೇಷ.

     

    ಈಗಾಗಲೇ ಅನೇಕ ಚಿತ್ರೋತ್ಸವಗಳಿಗೂ ಈ ಚಿತ್ರವನ್ನು  ಕಳುಹಿಸಲಾಗಿದೆ ಎಲ್ಲಾ ಕಡೆಯೂ ಪ್ರದರ್ಶನಗೊಂಡು ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಿದೆ ಎಂದು ನಿರ್ದೇಶಕರು ಆತ್ಮವಿಶ್ವಾಸ ತೋರಿದರು.

  • ‘ತಾರಿಣಿ’ ಸಿನಿಮಾದ ಗರ್ಭಿಣಿಯ ಪಾತ್ರಕ್ಕಾಗಿ ನಟಿ ಮಮತ ಮಾಡಿದ್ದೇನು?

    ‘ತಾರಿಣಿ’ ಸಿನಿಮಾದ ಗರ್ಭಿಣಿಯ ಪಾತ್ರಕ್ಕಾಗಿ ನಟಿ ಮಮತ ಮಾಡಿದ್ದೇನು?

    ಮತ ರಾಹುತ್ (Mamata Rahut) ನಾಯಕಿಯಾಗಿ ನಟಿಸಿರುವ, ಸಿದ್ದು ಪೂರ್ಣಚಂದ್ರ (Siddu Poornchandra) ನಿರ್ದೇಶನದ ‘ತಾರಿಣಿ’ (Tarini)  ಚಿತ್ರ ಗರ್ಭಿಣಿಯ ಕುರಿತಾದ ಕಥಾಹಂದರ ಹೊಂದಿದೆ.  ಈ ಚಿತ್ರದ ಫಸ್ಟ್ ಲುಕ್ (First Look) ಇತ್ತೀಚೆಗೆ ಬಿಡುಗಡೆಯಾಯಿತು. ಸಾಹಿತಿ, ಹೋರಾಟಗಾರ್ತಿ ಬಿ.ಟಿ.ಲಲಿತಾ ನಾಯಕ್ ಸೇರಿದಂತೆ ಹಲವು ಗಣ್ಯರು ತಾರಿಣಿ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದರು. ನಂತರ ಚಿತ್ರತಂಡದ ಸದಸ್ಯರು ಹೆಚ್ಚಿನ ಮಾಹಿತಿ ನೀಡಿದರು.

    ತಾರಿಣಿ ಗರ್ಭಿಣಿ ಹೆಣ್ಣಿನ ಕಥೆಯನ್ನು ಹೊಂದಿರುವ ಚಿತ್ರ ಎಂದು ಮಾತು ಆರಂಭಿಸಿದ ನಿರ್ದೇಶಕ ಸಿದ್ದು ಪೂರ್ಣಚಂದ್ರ, ಈ ಚಿತ್ರದ ವಿಶೇಷವೆಂದರೆ, ನಾಯಕಿ ಮಮತ ರಾಹುತ್ ಅವರು ಗರ್ಭಿಣಿ ಇರುವಾಗಲೇ ಈ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಗರ್ಭಿಣಿ ಕುರಿತಾದ ಚಿತ್ರದಲ್ಲಿ ನಿಜವಾದ ಗರ್ಭಿಣಿಯೇ ನಟಿಸಿದ್ದಾರೆ. ಮಗು ಆದ ನಂತರವೂ ಅಭಿನಯಿಸಿದ್ದಾರೆ. ಅವರಿಗೆ ಅನಂತ ಧನ್ಯವಾದ. ಹೆಣ್ಣು ಭ್ರೂಣ ಹತ್ಯೆ ಮಾಡಬೇಡಿ ಎಂಬ ಉತ್ತಮ ಸಂದೇಶವಿರುವ ಈ ಚಿತ್ರವನ್ನು ಮಮತ ರಾಹುತ್ ಅವರ ಪತಿ ಸುರೇಶ್ ಕೊಟ್ಯಾನ್ ಚಿತ್ರಾಪು ಅವರು ಶ್ರೀಗಜನಿ ಪ್ರೊಡಕ್ಷನ್ಸ್ ಲಾಂಛನದಲ್ಲಿ  ನಿರ್ಮಿಸಿದ್ದಾರೆ. ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ನೋಡಿ ಹಾರೈಸಿ ಎಂದರು.

    ನಾನು ಏಳು ತಿಂಗಳ ಗರ್ಭಿಣಿ ಇದ್ದಾಗ ಈ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಂಡೆ. ಕೆಲವು ದಿನಗಳ ಚಿತ್ರೀಕರಣ ನಂತರ ನನಗೆ ಅವಧಿಗೂ ಕೆಲವು ದಿನಗಳ ಮುಂಚೆಯೇ ಹೆರಿಗೆ ಆಯಿತು. ಆನಂತರ ಕೂಡ ನಾನು ಚಿತ್ರೀಕರಣದಲ್ಲಿ ಭಾಗಿಯಾದೆ. ನನ್ನ ಮಗು ಕೂಡ ಈ ಚಿತ್ರದಲ್ಲಿ ಅಭಿನಯಿಸಿದೆ. ಇಂದು ನಾನು ನಿಮ್ಮೆಲ್ಲರಿಗೂ ನನ್ನ ಮಗುವನ್ನು ಪರಿಚಯಿಸುತ್ತಿದ್ದೇನೆ. ನಮ್ಮ ಮೊದಲ ನಿರ್ಮಾಣದ ಚಿತ್ರವಾಗಿರುವುದರಿಂದ ಹೆಚ್ಚಿನ ಜವಾಬ್ದಾರಿ ನನ್ನ ಮೇಲಿತ್ತು. ಚಿತ್ರ ಚೆನ್ನಾಗಿ ಬಂದಿದೆ. ಇಡೀ ತಂಡಕ್ಕೆ ಧನ್ಯವಾದ ಎಂದರು ನಾಯಕಿ ಮಮತ ರಾಹುತ್. ಇದನ್ನೂ ಓದಿ:ತಲಕಾವೇರಿಗೆ ವಿಶೇಷ ಪೂಜೆ ಸಲ್ಲಿಸಿದ ಅಭಿಷೇಕ್, ಅವಿವಾ ದಂಪತಿ

    ನಮ್ಮ ಮೊದಲ ನಿರ್ಮಾಣದ ಚಿತ್ರವಿದು. ಒಳ್ಳೆಯ ಕಥೆ ನೀಡಿರುವ ನಿರ್ದೇಶಕರಿಗೆ,   ಆ ಕಥೆಗೆ ಜೀವ ತುಂಬಿರುವ ಕಲಾವಿದರಿಗೆ ಹಾಗೂ ತಂತ್ರಜ್ಞರಿಗೆ ನನ್ನ ಧನ್ಯವಾದ. ಸಮಾಜಕ್ಕೆ ಈ ಚಿತ್ರ ಉತ್ತಮ ಸಂದೇಶ ಕೊಡಲಿದೆ ಎಂದರು ನಿರ್ಮಾಪಕ ಸುರೇಶ್ ಕೊಟ್ಯಾನ್ ಚಿತ್ರಾಪು.  ಚಿತ್ರದ ನಾಯಕ ರೋಹಿತ್ ಸೇರಿದಂತೆ ಅನೇಕ ಕಲಾವಿದರು ಹಾಗೂ ತಂತ್ರಜ್ಞರು ತಾರಿಣಿ ಚಿತ್ರದ ಕುರಿತು ಮಾತನಾಡಿದರು.

    ತಾರಿಣಿಯಾಗಿ ಮಮತ ರಾಹುತ್ ನಟಿಸಿದ್ದು, ನಾಯಕನಾಗಿ ರೋಹಿತ್ ಅಭಿನಯಿಸಿದ್ದಾರೆ. ಭವಾನಿ ಪ್ರಕಾಶ್, ಸುಧಾ ಪ್ರಸನ್ನ, ಸುರೇಶ್ ಚಿತ್ರಾಪು, ಪ್ರಮಿಳಾ ಸುಬ್ರಹ್ಮಣ್ಯಂ, ವಿಜಯಲಕ್ಷ್ಮಿ, ದೀಪಿಕಾಗೌಡ, ಸನ್ನಿ, ತೇಜಸ್ವಿನಿ, ಕವಿತ ಕಂಬಾರ್, ಬೇಬಿ ನಿಶಿತಾ, ಬೇಬಿ ರಿಧಿ, ಪ್ರಿನ್ಸ್ ಜಿತಿನ್  ಕೋಟ್ಯಾನ್, ಮಟಿಲ್ಡಾ ಡಿಸೋಜ, ಅರ್ಚನ ಗಾಯಕ್ವಾಡ್, ಶೀಬಾ ಮೂರ್ತಿ, ಶ್ವೇತಾ, ಚೈತ್ರ, ಮಂಜು ನಂಜನಗೂಡು, ರಘು ಸಮರ್ಥ್  ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗಂಡು ಮಗುವಿಗೆ ಜನ್ಮ ನೀಡಿದ ನಟಿ, ಡೆಲಿವರಿ ಆಗ್ತಿದ್ದಂತೆ ಶೂಟಿಂಗ್ ಹಾಜರಾದ ಮಮತಾ

    ಗಂಡು ಮಗುವಿಗೆ ಜನ್ಮ ನೀಡಿದ ನಟಿ, ಡೆಲಿವರಿ ಆಗ್ತಿದ್ದಂತೆ ಶೂಟಿಂಗ್ ಹಾಜರಾದ ಮಮತಾ

    ಸ್ಯಾಂಡಲ್‌ವುಡ್ (Sandalwood) ನಟಿ ಮಮತಾ ರಾಹುತ್ (Mamatha Rahuth) ಅವರು ಜುಲೈ 4ರಂದು ಗಂಡು ಮಗುವಿಗೆ ನೀಡಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಮಮತಾ ಅವರ ಡೆಲಿವರಿ ಆಗಿದ್ದು, ಗಂಡು ಮಗುವಿಗೆ (Baby Boy) ಜನ್ಮ ನೀಡುತ್ತಿದ್ದಂತೆ ರೆಸ್ಟ್ ಮಾಡದೇ ತಮ್ಮ ಮುಂಬರುವ ಸಿನಿಮಾದ ಚಿತ್ರೀಕರಣದಲ್ಲಿ ನಟಿ ಪಾಲ್ಗೊಂಡಿದ್ದಾರೆ. ಸದ್ಯ ನಟಿ ವೀಡಿಯೋ ಮೂಲಕ ಈ ಸುದ್ದಿಯನ್ನ ತಿಳಿಸಿದ್ದಾರೆ.

    ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಬೆಳ್ಳಿತೆರೆಯಲ್ಲಿ ಮಿಂಚಿದ ನಟಿ ಮಮತಾ ರಾಹುತ್ ಅವರು ಕಳೆದ ವರ್ಷ ಮೇ 11ರಂದು ಡಾಕ್ಟರ್ ಸುರೇಶ್ (Dr. Suresh) ಜೊತೆ ಬೆಂಗಳೂರಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದೀಗ ಮುದ್ದು ಮಗನಿಗೆ ಜನ್ಮ ನೀಡುವ ಮೂಲಕ ಹೊಸ ಅತಿಥಿಯ ಆಗಮನವಾಗಿದೆ. ಇದನ್ನೂ ಓದಿ:ಶಿವಣ್ಣನಿಗೆ ಸಿಎಂ, ಡಿಸಿಎಂ ಸೇರಿದಂತೆ ಹಲವು ಗಣ್ಯರ ಶುಭ ಹಾರೈಕೆ

    ಎಲ್ಲರಿಗೂ ನಮಸ್ಕಾರ ನಾನು ನಿಮ್ಮ ಮಮತಾ, ಸೋಷಿಯಲ್ ಮೀಡಿಯಾದಲ್ಲಿ ನನ್ನ ಪ್ರೆಗ್ನೆನ್ಸಿ ವಿಡಿಯೋಗಳನ್ನು ನೀವು ನೋಡುತ್ತಾ ಇದ್ದೀರಿ ಇವತ್ತು ನನಗೆ ಡೆಲಿವರಿ ಆಗಿದೆ ನನ್ನ ಮಗು ಜೊತೆ ನನ್ನ ಫ್ಯಾಮಿಲಿ ಜೊತೆ ವೀಡಿಯೋ ನೋಡುತ್ತಿದ್ದೀರ. ನಿನ್ನೆ ಸಂಜೆ ನನಗೆ ನಾರ್ಮಲ್ ಡೆಲಿವರಿ ಆಗಿದೆ ಅದು ಸರ್ಕಾರಿ ಆಸ್ಪತ್ರೆಯಲ್ಲಿ. ಯಾವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೂ ಕಡಿಮೆ ಇಲ್ಲ ನಮ್ಮ ಸರ್ಕಾರಿ ಆಸ್ಪತ್ರೆಗಳು, ತುಂಬಾ ಕ್ಲೀನ್ ಆಗಿದೆ ಅಗತ್ಯ ಇರುವ ಎಲ್ಲಾ ವಸ್ತುಗಳನ್ನು ಇಟ್ಟುಕೊಂಡಿದ್ದಾರೆ ವೈದ್ಯರು ಮತ್ತು ಸಿಬ್ಬಂದಿಗಳು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಡಾ.ಸವಿತಾ ಮತ್ತು ಅವರ ಟೀಂ ತುಂಬಾ ಕ್ರಿಟಿಕಲ್ ಆಗಿರುವ ಕೇಸ್‌ಗಳನ್ನು ಸುಲಭವಾಗಿ ಹ್ಯಾಂಡಲ್ ಮಾಡಿ ನಾರ್ಮಲ್ ಮಾಡಿಸುತ್ತಾರೆ. ತುಂಬಾ ಟ್ರೈ ಮಾಡಿ ನನಗೆ ನಾರ್ಮಲ್ ಡೆಲಿವರಿ ಮಾಡಿಸಿದರು ಎಂದು ನಟಿ ಮಾತನಾಡಿದ್ದಾರೆ.

    ಮಗುವಿಗೆ ಜನ್ಮ ನೀಡಿದ ದಿನವೇ ಮಮತಾ ರಾಹುತ್ (Mamatha Rahuth) ತಾರಿಣಿ (Tharini) ಸಿನಿಮಾ ಚಿತ್ರೀಕರಣಲ್ಲಿ ಭಾಗಿಯಾಗಿದ್ದಾರೆ. ಆಸ್ಪತ್ರೆಯಲ್ಲಿ ಮಗು ಹುಟ್ಟಿದ ದಿನವೇ ಮೊದಲ ಶಾಟ್ ತೆಗೆದಿದ್ದಾರೆ ಮೇಕಪ್ ಇಲ್ಲದೆ ಮಮತಾ ನೈಜವಾಗಿಯೇ ಕಾಣಿಸಿಕೊಂಡಿದ್ದಾರೆ. ಡೆಲಿವರಿ ನಂತರ ನನ್ನ ಮೊದಲ ಫೋಟೋಗಳಿದು. ತಾರಿಣಿ (Tharini Film) ಸಿನಿಮಾ ಚಿತ್ರೀಕರಣ ನಡೆಯುತ್ತಿದೆ ಎಂದು ನಟಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇನ್ನೂ ಮದುವೆಯ ನಂತರ ನಟನೆಯ ಜೊತೆ ನಿರ್ಮಾಣ ಮಾಡುತ್ತಿದ್ದಾರೆ ಮಮತಾ. ಸದ್ಯದಲ್ಲೇ ತೆರೆಗೆ ಬರಲಿದೆ ತಾರಿಣಿ ಸಿನಿಮಾ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತಾರಿಣಿಯಾದ ಮಮತಾ ರಾಹುತ್ : ಇದು ಮಹಿಳಾ ಪ್ರಧಾನ ಸಿನಿಮಾ

    ತಾರಿಣಿಯಾದ ಮಮತಾ ರಾಹುತ್ : ಇದು ಮಹಿಳಾ ಪ್ರಧಾನ ಸಿನಿಮಾ

    ಮತಾ ರಾಹುತ್ (Mamata Rahut) ನಾಯಕಿಯಾಗಿ ನಟಿಸುತ್ತಿರುವ, ಸಿದ್ದು ಪೂರ್ಣಚಂದ್ರ ನಿರ್ದೇಶನದ  ‘ತಾರಿಣಿ’ (Tarini)  ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಶ್ರೀ ನಾಗಬ್ರಹ್ಮ ದೇವಸ್ಥಾನದಲ್ಲಿ ನೆರವೇರಿತು. ಶ್ರೀಗಜನಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸುರೇಶ್ ಕೊಟ್ಯಾನ್ ಚಿತ್ರಾಪು ಅವರು ನಿರ್ಮಿಸುತ್ತಿರುವ ಈ ಚಿತ್ರದ ಮೊದಲ ಸನ್ನಿವೇಶಕ್ಕೆ ಗಂಡಸಿ ಸದಾನಂದಸ್ವಾಮಿ ಆರಂಭಫಲಕ ತೋರಿದರು. ನಟ ಪ್ರಣಯಮೂರ್ತಿ ಕ್ಯಾಮೆರಾ ಚಾಲನೆ ಮಾಡಿದರು.

    ತಾರಿಣಿ ಮಹಿಳಾ ಪ್ರಧಾನ ಚಿತ್ರವಾಗಿದೆ. ಹಲವು ಪ್ರಶಸ್ತಿಗಳನ್ನು ಗಳಿಸಿ, ರಾಷ್ಟ್ರ ಹಾಗೂ ರಾಜ್ಯಮಟ್ಟದಲ್ಲಿ ಖ್ಯಾತಿ ಗಳಿಸಿದ್ದ ‘ದಾರಿ ಯಾವುದಯ್ಯ ವೈಕುಂಠಕೆ’ ಚಿತ್ರ ಸೇರಿದಂತೆ ಅನೇಕ ಸದಭಿರುಚಿ ಚಿತ್ರಗಳನ್ನು ನಿರ್ದೇಶಿಸಿರುವ ಸಿದ್ದು ಪೂರ್ಣಚಂದ್ರ (Siddu Poornchandra) ತಾರಿಣಿ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ನಿರ್ದೇಶಕರೆ ಬರೆದಿದ್ದಾರೆ. ರಾಜು ಹೆಮ್ಮಿಗೆಪುರ ಛಾಯಾಗ್ರಹಣ, ದೀಪಕ್ ಸಿ.ಎಸ್ ಸಂಕಲನ, ಬಸವರಾಜ್ ಆಚಾರ್ಯ ಕಲಾ ನಿರ್ದೇಶನ, ನಾಗರತ್ನ ಕೆ.ಹೆಚ್ ವಸ್ತ್ರಾಲಂಕಾರ ಹಾಗೂ ಎಸ್  ರಘುನಾಥ್ ರಾವ್ ಅವರ ಸ್ಥಿರಚಿತ್ರಣ ಈ ಚಿತ್ರಕ್ಕಿದೆ. ಇದನ್ನೂ ಓದಿ:ಸಲ್ಮಾನ್ ಖಾನ್ ನಂಬರ್ ಬ್ಲಾಕ್ ಮಾಡಿದ್ದರಂತೆ ಸಿದ್ಧಾರ್ಥ್ ಶುಕ್ಲಾ ಪ್ರೇಯಸಿ!

    ಈಗಾಗಲೇ ಚಿತ್ರೀಕರಣ ಆರಂಭವಾಗಿದ್ದು, ಬೆಂಗಳೂರಿನಲ್ಲೇ ಹೆಚ್ಚಿನ ಚಿತ್ರೀಕರಣ ನಡೆಯಲಿದೆ. ತಾರಿಣಿಯಾಗಿ ಮಮತಾ ರಾಹುತ್ ನಟಿಸುತ್ತಿದ್ದು, ನಾಯಕನಾಗಿ ರೋಹಿತ್ (Rohit) ಅಭಿನಯಿಸುತ್ತಿದ್ದಾರೆ. ಭವಾನಿ ಪ್ರಕಾಶ್, ಸುಧಾ ಪ್ರಸನ್ನ, ಸುರೇಶ್ ಚಿತ್ರಾಪು, ಪ್ರಮಿಳಾ ಸುಬ್ರಹ್ಮಣ್ಯಂ, ವಿಜಯಲಕ್ಷ್ಮಿ, ದೀಪಿಕಾಗೌಡ, ಸನ್ನಿ, ಕುಮಾರ ಬೇಂದ್ರೆ, ತೇಜಸ್ವಿನಿ, ರಾಜು ಕಲ್ಕುಣಿ, ಶ್ರೀಸಾಯಿ ಮಂಜು, ಸುಚಿತ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.