Tag: ತಾರಾ

  • ನನ್ನ ಜೊತೆ ಅರ್ಜುನ್ ಸರ್ಜಾ ಕೆಟ್ಟದಾಗಿ ನಡೆದುಕೊಂಡಿಲ್ಲ: ನಟಿ ತಾರಾ

    ನನ್ನ ಜೊತೆ ಅರ್ಜುನ್ ಸರ್ಜಾ ಕೆಟ್ಟದಾಗಿ ನಡೆದುಕೊಂಡಿಲ್ಲ: ನಟಿ ತಾರಾ

    ಬೆಂಗಳೂರು: ನಟಿ ಶೃತಿ ಹರಿಹರನ್ ಮೀಟೂ ಆರೋಪ ಮಾಡಿದ ಕೂಡಲೇ ಅನೇಕ ನಟಿಯರು ಅವರ ಬೆಂಬಲಕ್ಕೆ ನಿಂತಿದ್ದರೂ, ಆದರೆ ಈಗ ಸ್ಯಾಂಡಲ್‍ವುಡ್ ಹಿರಿಯ ನಟಿ ತಾರಾ ಅವರು ಅರ್ಜುನ್ ಸರ್ಜಾ ಮೇಲೆ ಬಂದಿರುವ ಮೀಟೂ ಆರೋಪಕ್ಕೆ ಪ್ರತಿಕ್ರಿಯಿಸಿದ್ದಾರೆ.

    ನಟಿ ತಾರಾ ಅವರು ಅರ್ಜುನ್ ಸರ್ಜಾ ಪರ ವಿಡಿಯೋ ಮೂಲಕ ಮಾತನಾಡಿ ನಮ್ಮ ಅಭಿಪ್ರಾಯವನ್ನು ಹೇಳಿಕೊಂಡಿದ್ದಾರೆ. “ಈಗಾಗಲೇ ಮೀಟೂ ಎಂಬುದು ಕನ್ನಡ ಅಲ್ಲದೇ ಭಾರತೀಯ ಸಿನಿಮಾರಂಗದಲ್ಲಿ ಮಹತ್ವವನ್ನು ಪಡೆದುಕೊಂಡಿದೆ. ಇದೊಂದು ಹೆಣ್ಣು ಮಗಳಿಗೆ ಶಕ್ತಿಯಾಗಿ, ಧೈರ್ಯವಾಗಿ ಸಹಕಾರಿಯಾಗಿದೆ. ನಾನು ಒಬ್ಬ ಹೆಣ್ಣು ಮಗಳಾಗಿ, ನನಗೆ ಇದರ ಬಗ್ಗೆ ಗೌರವಿದೆ” ಎಂದ್ರು.

    ಹಿರಿಯ ಕಲಾವಿದ ನಟ ಅರ್ಜುನ್ ಸರ್ಜಾ ಅವರ ಬಗ್ಗೆ ಶೃತಿ ಹರಿಹರನ್ ಮಾತನಾಡಿದ್ದಾರೆ. ಅದರ ಬಗ್ಗೆ ನನ್ನ ಅಭಿಪ್ರಾಯವೆಂದರೆ, ನಾನು ಅರ್ಜುನ್ ಸರ್ಜಾ ಜೊತೆ ಕೆಲಸ ಮಾಡಿದ್ದೇನೆ. ಅವರ ಕುಟುಂಬದ ಪರಿಚಯ ಬಹಳಷ್ಟಿದೆ. ಸರ್ಜಾ ಅವರು ನಿಜವಾಗಿಯೂ ಒಳ್ಳೆಯ ಸಹನಟ. ಸರ್ಜಾ ಸಂಭಾವಿತ ಕುಟುಂಬದಿಂದ ಬಂದವರು. ನನಗೆ ಯಾವುದೇ ರೀತಿಯಾಗಿ ಅವರು ನನ್ನ ಜೊತೆ ಕೆಟ್ಟದಾಗಿ ನಡೆದುಕೊಂಡ ಅನುಭವ ಆಗಿಲ್ಲ ಎಂದು ಹೇಳಿದ್ದಾರೆ.

    ಶೃತಿ ಹರಿಹರನ್ ಹೇಳುತ್ತಿರುವುದು ಸುಳ್ಳು ಅಂತಲೂ ಹೇಳುತ್ತಿಲ್ಲ. ಯಾಕೆಂದರೆ ಅವರಿಗಾದ ಅನುಭವದ ಬಗ್ಗೆ ಅವರು ಹೇಳಿಕೊಂಡಿದ್ದಾರೆ. ಅವರ ಬಗ್ಗೆ ನಾನು ಅಭಿಪ್ರಾಯ ಕೊಡುವುದಕ್ಕೆ ಆಗಲ್ಲ. ನಾನು ಏನು ಹೇಳಲು ಇಷ್ಟನೂ ಪಡುವುದಿಲ್ಲ. ಅವರ ಹೇಳಿಕೆ, ಅಭಿಪ್ರಾಯದ ಬಗ್ಗೆ ಅವರನ್ನೇ ಕೇಳಿ ಉತ್ತರ ಪಡೆದುಕೊಳ್ಳುವುದು ಸರಿ ಎಂಬುದು ನನ್ನ ಭಾವನೆಯಾಗಿದೆ ಎಂದು ಹೇಳಿದ್ದಾರೆ.

    ಕನ್ನಡ ಚಿತ್ರರಂಗ ಅನ್ನುವುದು ನಮ್ಮ ಮನೆ, ಇಲ್ಲಿ ಎಲ್ಲ ಹೆಣ್ಣು ಮಕ್ಕಳಿಗೂ ಒಳ್ಳೆಯದು ಆಗಲಿ. ನಮ್ಮ ಮನೆಯಲ್ಲಿ ಎಲ್ಲರೂ ಹೀಗೇ ಅಣ್ಣ-ತಮ್ಮಂದಿರಾಗಿ, ಅಕ್ಕ-ತಂಗಿಯರಾಗಿ ಇರುತ್ತೇವೋ ಹಾಗೆಯೇ ಸಿನಿಮಾರಂಗದಲ್ಲೂ ಒಂದು ಕುಟುಂಬದ ಸದಸ್ಯರಂತೆ ಇರಬೇಕು ಅನ್ನೋದು ನನ್ನ ಭಾವನೆ ಎಂದು ತಾರಾ ಅವರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • BIG EXCLUSIVE- ವಿಧಾನಸಭೆ ಮೊಗಸಾಲೆಯಲ್ಲೇ ಬರ್ತ್ ಡೇ ಆಚರಣೆ!

    BIG EXCLUSIVE- ವಿಧಾನಸಭೆ ಮೊಗಸಾಲೆಯಲ್ಲೇ ಬರ್ತ್ ಡೇ ಆಚರಣೆ!

    ಬೆಂಗಳೂರು: ವಿಧಾನಸಭೆ ಕಾರ್ಯದರ್ಶಿ ಮೂರ್ತಿ ಅವರು  ಮೊಗಸಾಲೆಯಲ್ಲಿಯೇ ಕೇಕ್ ಕತ್ತರಿಸಿ  ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ.

    ಪವಿತ್ರ ಸ್ಥಳದಲ್ಲಿ ಜುಲೈ 17ರಂದು ನಡೆದ ಈ ಬರ್ತ್ ಡೇ ಪಾರ್ಟಿಯಲ್ಲಿ ಚಿತ್ರನಟಿ ಕಮ್ ಮೇಲ್ಮನೆ ಸದಸ್ಯೆ ತಾರಾ ಸೇರಿ ಹಲವರು ಭಾಗಿಯಾಗಿದ್ದರು. ಪಾರ್ಟಿಯಲ್ಲಿದ್ದ ಅರ್ಧದಷ್ಟು ಮಂದಿ ವಿಧಾನಸೌಧ ಸಿಬ್ಬಂದಿಯೇ ಅಲ್ಲ ಎನ್ನಲಾಗಿದೆ.

    ಪಾಸ್ ಇಲ್ಲದೇ ಇವರೆಲ್ಲ ನಿರ್ಬಂಧಿತ ಸ್ಥಳಕ್ಕೆ ಹೇಗೆ ಪ್ರವೇಶ ಪಡೆದ್ರು? ವಿಧಾನಸಭೆ ಸಭಾಂಗಣದ ಮೊಗಸಾಲೆಯಲ್ಲಿ ಬರ್ತ್‍ಡೇ ಪಾರ್ಟಿ ಮಾಡಬಹುದಾ? ನಿರ್ಬಂಧಿತ ಸ್ಥಳದಲ್ಲಿ ಬರ್ತ್ ಡೇ ಪಾರ್ಟಿಗೆ ಅನುಮತಿ ಕೊಟ್ಟಿದ್ದು ಯಾರು? ಎಲ್ಲರಿಗೂ ಇದೇ ರೀತಿ ಪಾರ್ಟಿಗೆ ಅವಕಾಶ ಕೊಡುತ್ತೀರಾ? ಸ್ಪೀಕರ್ ರಮೇಶ್ ಕುಮಾರ್ ಸಾಹೇಬರೇ ಇದು ಸರೀನಾ? ಅನ್ನೋ ಹಲವಾರು ಪ್ರಶ್ನೆಗಳು ಇದೀಗ ಜನಸಾಮಾನ್ಯರಲ್ಲಿ ಮೂಡಿದೆ.

  • ಯಾದಗಿರಿಯಲ್ಲಿ ಬಿಜೆಪಿ ಪರ ಪ್ರಚಾರ ಮಾಡಲಿದ್ದಾರೆ ಕಿಚ್ಚ ಸುದೀಪ್!

    ಯಾದಗಿರಿಯಲ್ಲಿ ಬಿಜೆಪಿ ಪರ ಪ್ರಚಾರ ಮಾಡಲಿದ್ದಾರೆ ಕಿಚ್ಚ ಸುದೀಪ್!

    ಯಾದಗಿರಿ: ಗಿರಿಗಳ ನಾಡು ಯಾದಗಿರಿ ಜಿಲ್ಲೆಯಲ್ಲಿ ಚುನಾವಣೆಯ ಕಾವು ಹೆಚ್ಚಾಗುತ್ತಿದ್ದಂತೆಯೇ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ನಾನಾ ರೀತಿಯಲ್ಲಿ ಪ್ರಚಾರದ ಕಸರತ್ತು ನಡೆಸುತ್ತಿದ್ದಾರೆ.

    ಯಾದಗಿರಿ ಜಿಲ್ಲೆಯ ಸುರಪುರ ಮತಕ್ಷೇತ್ರವೆಂದರೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಜಿದ್ದಾಜಿದ್ದಿಯ ಪ್ರತಿಷ್ಠೆಯ ರಣರಂಗವಾಗಿ ಮಾರ್ಪಟ್ಟಿದೆ. ಇದೀಗ ಬಿಜೆಪಿ ಅಭ್ಯರ್ಥಿ ಮಾಜಿ ಸಚಿವ ನರಸಿಂಹ ನಾಯಕ ಪರ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಚಿತ್ರನಟಿ ತಾರಾ ಸುರಪುರನ ಕಕ್ಕೇರಾ, ಹುಣಸಗಿ, ಕೊಡೆಕಲ್, ಸುರಪುರ ವಿವಿಧ ಕಡೆ ರೋಡ್ ಶೋ ಮಾಡುವ ಮೂಲಕ ಮತದಾರರ ಗಮನ ಸೆಳೆಯಲು ಮುಂದಾಗಿದ್ದಾರೆ.

    ಸುರಪುರ ಮತಕ್ಷೇತ್ರದಲ್ಲಿ ವಾಲ್ಮಿಕಿ ಸಮಾಜದ ಸುಮಾರು 65 ಸಾವಿರ ಮತಗಳಿವೆ. ಕಿಚ್ಚ ಸುದೀಪ್ ರೋಡ್ ಶೋ ಮಾಡಿದರೆ ಬಿಜೆಪಿಗೆ ಮತಗಳ ವರದಾನವಾಗುವ ಸಾಧ್ಯತೆಗಳಿವೆ. ಇತ್ತೀಚೆಗೆ ಸುರಪುರ ಕಾಂಗ್ರೆಸ್ ಅಭ್ಯರ್ಥಿ ರಾಜವೆಂಕಟಪ್ಪ ನಾಯಕ್ ಪರ ಸಿಎಂ ಸಿದ್ದರಾಮಯ್ಯ ಹಾಗೂ ಸಿಎಂ. ಇಬ್ರಾಹಿಂ ಅವರು ಸುರಪುರನ ಕಕ್ಕೇರಾ ಪಟ್ಟಣದಲ್ಲಿ ಪ್ರಚಾರ ಮಾಡಲಾಗಿತ್ತು.

    ಆದರೆ ಇದೀಗ ಬಿಸಿಲಿನ ತಾಪ ಹೆಚ್ಚಾದಂತೆ ಬಿಸಿಲು ನಾಡು ಯಾದಗಿರಿಯಲ್ಲಿ ಕಿಚ್ಚ ಸುದೀಪ್ ಪ್ರಚಾರದ ಕಾವು ಬಿಜೆಪಿಗೆ ಯಾವ ರೀತಿ ವರ್ಕೌಟ್ ಆಗುತ್ತೆ ಎನ್ನುವುದು ಕಾದು ನೋಡಬೇಕು.

  • 13 ವರ್ಷದ ನಂತ್ರ ಮತ್ತೊಮ್ಮೆ ರಾಷ್ಟ್ರಪ್ರಶಸ್ತಿ ಸಿಕ್ಕಿದ್ದು ಸಂತಸ ತಂದಿದೆ: ತಾರಾ

    13 ವರ್ಷದ ನಂತ್ರ ಮತ್ತೊಮ್ಮೆ ರಾಷ್ಟ್ರಪ್ರಶಸ್ತಿ ಸಿಕ್ಕಿದ್ದು ಸಂತಸ ತಂದಿದೆ: ತಾರಾ

    ಬೆಂಗಳೂರು: 65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, ನಟಿ ತಾರಾ ಅಭಿನಯದ ‘ಹೆಬ್ಬೆಟ್ಟು ರಾಮಕ್ಕ’ ಚಿತ್ರಕ್ಕೆ ಅತ್ಯುತ್ತಮ ಕನ್ನಡ ಪ್ರಾದೇಶಿಕ ಚಿತ್ರ ಪ್ರಶಸ್ತಿ ಸಿಕ್ಕಿದೆ. ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಸಿಕ್ಕಿರೋದಕ್ಕೆ ನಟಿ ತಾರಾ ಸಂತಸ ವ್ಯಕ್ತಪಡಿಸಿದ್ದಾರೆ.

    ಬೆಂಗಳೂರಿನಲ್ಲಿ ಮಾತನಾಡಿದ ನಟಿ ತಾರಾ, ರಾಷ್ಟ್ರ ಪ್ರಶಸ್ತಿ ಸಿಕ್ಕಿದ್ದು ನನಗೆ ಖುಷಿ ತಂದಿದೆ. ನಾನು ನಟಿಸಿದ ಸಾಕಷ್ಟು ಚಿತ್ರಗಳಿಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ. ಈಗ ಇದು ಕೂಡ ಸೇರ್ಪಡೆ ಆಗಿದೆ. ಹಿಂದೆ ಹಸೀನಾ ಚಿತ್ರಕ್ಕೆ ನನಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು. ಈಗ 13 ವರ್ಷದ ನಂತರ ನಾನು ಅಭಿನಯಿಸಿದ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಸಿಕ್ಕಿರುವುದು ಖುಷಿಯಾಗಿದೆ ಎಂದು ಹೇಳಿದರು.

    ಇಂದು 11.30ಕ್ಕೆ ನವದೆಹಲಿಯ ಶಾಸ್ತ್ರಿ ಭವನದಲ್ಲಿ ಶೇಖರ್ ಕಪೂರ್ ಸಾರಥ್ಯದ 10 ಜನರ ತಂಡದ ಭಾರತೀಯ ಚಿತ್ರರಂಗದ ವಿವಿಧ ಭಾಷೆಯ ಚಿತ್ರಗಳಿಗೆ ಪ್ರಶಸ್ತಿಯನ್ನು ಘೋಷಿಸಿದರು. ‘ಹೆಬ್ಬೆಟ್ಟು ರಾಮಕ್ಕ’ ಚಿತ್ರದಲ್ಲಿ ನಟಿ ತಾರಾ ಜೊತೆ ಡೈನಾಮಿಕ್ ಸ್ಟಾರ್ ದೇವರಾಜ್ ಕೂಡ ನಟಿಸಿದ್ದಾರೆ. ಈ ಚಿತ್ರವನ್ನು ಎನ್.ಆರ್ ನಂಜೇಗೌಡ ನಿರ್ದೇಶನ ಮಾಡಿದ್ದಾರೆ.

    ಹೆಬ್ಬೆಟ್ಟು ರಾಮಕ್ಕ ಚಿತ್ರ ಮಹಿಳಾ ಪ್ರಧಾನ ಚಿತ್ರವಾಗಿದ್ದು, ಬೆಂಗಳೂರು ಹಾಗೂ ಚನ್ನಪಟ್ಟಣದಲ್ಲಿ ಶೂಟಿಂಗ್ ಮಾಡಲಾಗಿತ್ತು. ಈ ಚಿತ್ರಕ್ಕೆ ಎಸ್.ಎ ಪುಟ್ಟರಾಜು ನಿರ್ಮಿಸಿದ್ದರು. ಈ ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡಿದ್ದು, ಬಿ. ಸತೀಶ್ ಕ್ಯಾಮೆರಾಮೆನ್ ಆಗಿ ಕಾರ್ಯ ನಿರ್ವಹಿಸಿದ್ದರು. ನಟಿ ತಾರಾ ಅಭಿನಯದ ‘ಹೆಬ್ಬೆಟ್ಟು ರಾಮಕ್ಕ’ ಚಿತ್ರಕ್ಕೆ ಅತ್ಯುತ್ತಮ ಕನ್ನಡ ಪ್ರಾದೇಶಿಕ ಚಿತ್ರ ಎಂದು ಪ್ರಶಸ್ತಿ ನೀಡಲಾಗಿದೆ.

  • ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ: ಕನ್ನಡದ ಹೆಬ್ಬೆಟ್ಟು ರಾಮಕ್ಕ, ಬಾಹುಬಲಿಗೆ ಹಲವು ಪ್ರಶಸ್ತಿ

    ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ: ಕನ್ನಡದ ಹೆಬ್ಬೆಟ್ಟು ರಾಮಕ್ಕ, ಬಾಹುಬಲಿಗೆ ಹಲವು ಪ್ರಶಸ್ತಿ

    ನವದೆಹಲಿ: 65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, ನಟಿ ತಾರಾ ಅಭಿನಯದ ‘ಹೆಬ್ಬೆಟ್ಟು ರಾಮಕ್ಕ’ ಚಿತ್ರಕ್ಕೆ ಅತ್ಯುತ್ತಮ ಕನ್ನಡ ಪ್ರಾದೇಶಿಕ ಚಿತ್ರ ಪ್ರಶಸ್ತಿ ಸಿಕ್ಕಿದೆ.

    ಇಂದು 11.30ಕ್ಕೆ ನವದೆಹಲಿಯ ಶಾಸ್ತ್ರಿ ಭವನದಲ್ಲಿ ಶೇಖರ್ ಕಪೂರ್ ಸಾರಥ್ಯದ 10 ಜನರ ತಂಡದ ಭಾರತೀಯ ಚಿತ್ರರಂಗದ ವಿವಿಧ ಭಾಷೆಯ ಚಿತ್ರಗಳಿಗೆ ಪ್ರಶಸ್ತಿಯನ್ನು ಘೋಷಿಸಿದರು. ‘ಹೆಬ್ಬೆಟ್ಟು ರಾಮಕ್ಕ’ ಚಿತ್ರದಲ್ಲಿ ನಟಿ ತಾರಾ ಜೊತೆ ಡೈನಾಮಿಕ್ ಸ್ಟಾರ್ ದೇವರಾಜ್ ಕೂಡ ನಟಿಸಿದ್ದಾರೆ. ಈ ಚಿತ್ರವನ್ನು ಎನ್.ಆರ್ ನಂಜೇಗೌಡ ನಿರ್ದೇಶನ ಮಾಡಿದ್ದಾರೆ.

    ಹೆಬ್ಬೆಟ್ಟು ರಾಮಕ್ಕ ಚಿತ್ರ ಮಹಿಳಾ ಪ್ರಧಾನ ಚಿತ್ರವಾಗಿದ್ದು, ಬೆಂಗಳೂರು ಹಾಗೂ ಚನ್ನಪಟ್ಟಣದಲ್ಲಿ ಶೂಟಿಂಗ್ ಮಾಡಲಾಗಿತ್ತು. ಈ ಚಿತ್ರಕ್ಕೆ ಎಸ್.ಎ ಪುಟ್ಟರಾಜು ನಿರ್ಮಿಸಿದ್ದರು. ಈ ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡಿದ್ದು, ಬಿ. ಸತೀಶ್ ಕ್ಯಾಮೆರಾಮೆನ್ ಆಗಿ ಕಾರ್ಯ ನಿರ್ವಹಿಸಿದ್ದರು.

    ‘ಪಡ್ಡಾಯಿ’ ಚಿತ್ರಕ್ಕೆ ಅತ್ಯುತ್ತಮ ತುಳು ಸಿನಿಮಾ ಪ್ರಶಸ್ತಿ ಲಭಿಸಿದೆ. ‘ಮಾಮ್’ ಚಿತ್ರದಲ್ಲಿ ನಟಿಸಿದ ದಿವಂಗತ ಶ್ರೀದೇವಿ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ದೊರೆತಿದೆ. ಬೆಂಗಾಲಿ ನಟ ರಿದ್ಧಿ ಸೆನ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

    ಖ್ಯಾತ ತೆಲಗು ಡೈರೆಕ್ಟರ್ ಎಸ್.ಎಸ್ ರಾಜಮೌಳಿ ಬೆಸ್ಟ್ ಆ್ಯಕ್ಷನ್ ಡೈರೆಕ್ಷನ್ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಈ ಬಾರಿ ಬಾಹುಬಲಿ ಚಿತ್ರತಂಡ ಹಲವು ಪ್ರಶಸ್ತಿ ಸಿಕ್ಕಿದೆ. ಬೆಸ್ಟ್ ಸೌಂಡ್ ಎಫೆಕ್ಟ್ ಚಿತ್ರ ಹಾಗೂ ಬೆಸ್ಟ್ ಎಂಟರ್‍ಟೈನ್ಮೆಂಟ್ ಸಿನಿಮಾ ಬಾಹುಬಲಿ-2ಗೆ ಲಭಿಸಿದೆ. ನಟಿ ತಾರಾ ಅಭಿನಯದ ‘ಹೆಬ್ಬೆಟ್ಟು ರಾಮಕ್ಕ’ ಚಿತ್ರಕ್ಕೆ ಅತ್ಯುತ್ತಮ ಕನ್ನಡ ಪ್ರಾದೇಶಿಕ ಚಿತ್ರ ಎಂದು ಪ್ರಶಸ್ತಿ ನೀಡಲಾಗಿದೆ.

    ಉಳಿದ ಸಿನಿಮಾಗಳ ಪ್ರಶಸ್ತಿ ಕೆಳಗಿನ ಸಾಲಿನಂತಿದೆ

    ಅತ್ಯುತ್ತಮ ಆ್ಯಕ್ಷನ್ ಡೈರೆಕ್ಷನ್- ಎಸ್.ಎಸ್.ರಾಜಮೌಳಿ (ಬಾಹುಬಲಿ-2)
    ಅತ್ಯುತ್ತಮ ತುಳು ಸಿನಿಮಾ- ಪಡ್ಡಾಯಿ
    ಅತ್ಯುತ್ತಮ ಬ್ಯಾಗ್ರೌಂಡ್ ಸಿನಿಮಾ –ಎಆರ್ ರೆಹೆಮಾನ್ (ಮಾಮ್)
    ಅತ್ಯುತ್ತಮ ಮ್ಯೂಸಿಕ್ ಡೈರೆಕ್ಷನ್ – ಎಆರ್ ರೆಹೆಮಾನ್ (ಕಾಟ್ರುವೆಲೈಯಾಡಿ)
    ಅತ್ಯುತ್ತಮ ಸೌಂಡ್ ಎಫೆಕ್ಟ್ ಬಾಹುಬಲಿ-2
    ಅತ್ಯುತ್ತಮ ಡೈರೆಕ್ಟರ್ – ನಾಗರಾಜ್ ಮಂಜುಳೆ (ದಿ ಸೈಲೆನ್ಸ್ ಹಾಗೂ ಸೈರಾಟ್ ಸಿನಿಮಾ ನಿರ್ದೇಶಕ)
    ಅತ್ಯುತ್ತಮ ಸರ್ಪೋಟಿಂಗ್ ಆ್ಯಕ್ಟರ್ – ಫೈಸಲ್
    ಅತ್ಯುತ್ತಮ ಫೀಮೇಲ್ ಸಿಂಗರ್ – ಷಾಶಾ ತ್ರಿಪಾಠಿ (ಕಾಟ್ರು ವೆಲ್ಯಾಡಿ – ವಾಣ)
    ಪಾಲ್ಕೆ ಅವಾರ್ಡ್ – ವಿನೋದ್ ಖನ್ಹಾ
    ಅತ್ಯುತ್ತಮ ನಟಿ- ಶ್ರೀದೇವಿ (ಮಾಮ್ ಚಿತ್ರ)
    ಅತ್ಯುತ್ತಮ ನಟ – ರಿದ್ಧಿ ಸೆನ್ (ನಾಗರ್‍ಕಿರ್ತನ – ಬೆಂಗಾಳಿ ಮೂವಿ)
    ಅತ್ಯುತ್ತಮ ಎಂಟರ್‍ಟೈನ್ಮೆಂಟ್ ಸಿನಿಮಾ – ಬಾಹುಬಲಿ-2
    ಅತ್ಯುತ್ತಮ ಸಿನಿಮಾ – ವಿಲೇಜ್ ರಾಕ್‍ಸ್ಟಾರ್
    ಅತ್ಯುತ್ತಮ ಅಂಡ್ವೆಂಚರ್ ಫಿಲ್ಮ್ – ಬೆಂಗಾಳಿ ಭಾಷೆಯ ಲಡ್ಕಾ ಚಲೇ ರಿಕ್ಷಾವಾಲೆ

    ಮೇ ತಿಂಗಳು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನೆರವೇರಲಿದೆ ಎಂದು ಹೇಳಲಾಗಿದೆ.