Tag: ತಾರಾ ಅನುರಾಧಾ

  • ಕೇರಳದ ಅನಂತ ಪದ್ಮನಾಭ ದೇವಸ್ಥಾನಕ್ಕೆ ಭೇಟಿ ನೀಡಿದ ತಾರಾ

    ಕೇರಳದ ಅನಂತ ಪದ್ಮನಾಭ ದೇವಸ್ಥಾನಕ್ಕೆ ಭೇಟಿ ನೀಡಿದ ತಾರಾ

    ನ್ನಡದ ಹಿರಿಯ ನಟಿ ತಾರಾ (Thara Anooradha) ಅವರಿಗೆ ಇಂದು (ಮಾ.4) ಹುಟ್ಟುಹಬ್ಬವಾಗಿದ್ದು, ಈ ಹಿನ್ನೆಲೆ ಕೇರಳದ ಅನಂತ ಪದ್ಮನಾಭ ದೇವಸ್ಥಾನಕ್ಕೆ (Anantha Padmanabha Temple) ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ:ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ನಲ್ಲಿ IPS ಅಧಿಕಾರಿ ಪುತ್ರಿ, ನಟಿ ರನ್ಯಾ ಬಂಧನ

    ನಟಿ ತಾರಾ ಅವರು ಸಿನಿಮಾ ಕೆಲಸಗಳಿಗೆ ಬ್ರೇಕ್ ನೀಡಿ, ಹುಟ್ಟುಹಬ್ಬದ ಪ್ರಯುಕ್ತ ಕೇರಳದ ಅನಂತ ಪದ್ಮನಾಭ್ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಪತಿ ಹಾಗೂ ಮಗನೊಂದಿಗೆ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

    ಅಂದಹಾಗೆ, ಇತ್ತೀಚೆಗೆ ನಟಿ ಬೆಂಗಳೂರಿನ ಹೊಸ ಮನೆ ಗೃಹಪ್ರವೇಶ ಮಾಡಿದರು. ಈ ಸಂಭ್ರಮಕ್ಕೆ ಸ್ಯಾಂಡಲ್‌ವುಡ್ ನಟ, ನಟಿಯರು ಸಾಕ್ಷಿಯಾದರು.

  • ಪುಟ್ಟ ಚಿರಂಜೀವಿ ಬರ್ತಿದ್ದಾನೆ: ತಾರಾ

    ಪುಟ್ಟ ಚಿರಂಜೀವಿ ಬರ್ತಿದ್ದಾನೆ: ತಾರಾ

    -ಬಿಕ್ಕಿ ಬಿಕ್ಕಿ ಅತ್ತ ನಟಿ

    ಬೆಂಗಳೂರು: ಪುಟ್ಟ ಚಿರಂಜೀವಿ ಬರುತ್ತಿದ್ದಾನೆ ಎಂದು ಹಿರಿಯ ನಟಿ ತಾರಾ ಅನುರಾಧಾ ಹೇಳಿದ್ದಾರೆ.

    ಚಿರಂಜೀವಿ ಸಾವಿನ ವಿಷಯ ತಿಳಿದು ಆಸ್ಪತ್ರೆ ಬಳಿ ಓಡೋಡಿ ಬಂದ ತಾರಾ ಮಾಧ್ಯಮಗಳ ಜೊತೆ ಮಾತನಾಡಿದರು. ಮೊದಲು ಸುಳ್ಳು ಸುದ್ದಿ ಅಂತಾ ತಿಳಿದೆ. ನಂತರ ಸುಳ್ಳು ಸುದ್ದಿ ಆಗಲಿ ಅಂತಾ ಅಂದುಕೊಂಡು ಆಸ್ಪತ್ರೆಗೆ ಬಂದೆ. ಆದ್ರೆ ಚಿರು ಹೃದಯಾಘಾತದಿಂದ ಸಾವನ್ನಪ್ಪಿರೋದು ಖಚಿತವಾಯ್ತು. ಚಿರು ಕುಟುಂಬಕ್ಕೆ ದೇವರು ದುಃಖ ಬರಿಸೋ ಶಕ್ತಿ ನೀಡಲಿ ಎಂದು ಕಣ್ಣೀರು ಹಾಕಿದರು.

    ಇದೇ ವೇಳೆ ಮೇಘಾನಾ ರಾಜ್ ತಾಯಿ ಆಗ್ತಿದ್ದಾರೆ. ಪುಟ್ಟ ಚಿರಂಜೀವಿ ಬರುತ್ತಿದ್ದಾನೆ ಎಂಬ ವಿಷಯವನ್ನು ತಿಳಿಸಿದರು. ಹಿರಿಯ ನಟ ಸುಂದರ್ ರಾಜ್ ಮತ್ತು ಪ್ರಮೀಳಾ ಜೋಷಾಯಿ ದಂಪತಿಯ ಪುತ್ರಿಯಾಗಿರೋ ಮೇಘನಾ ಮತ್ತು ಚಿರಂಜೀವಿ ಪ್ರೀತಿಸಿ ಕುಟುಂಬದ ಒಪ್ಪಿಗೆ ಪಡೆದು ಮದುವೆ ಆಗಿದ್ದರು.

    മേഘ്‌നാ രാജിന്റെ ഭര്‍ത്താവും ...

  • ವಿಧಾನ ಪರಿಷತ್‌ನಲ್ಲಿ ತಾರಾ ಆನಂದಭಾಷ್ಪ: ಭಾವುಕರಾದ ಶಾಣಪ್ಪ

    ವಿಧಾನ ಪರಿಷತ್‌ನಲ್ಲಿ ತಾರಾ ಆನಂದಭಾಷ್ಪ: ಭಾವುಕರಾದ ಶಾಣಪ್ಪ

    ಬೆಂಗಳೂರು: ವಿಧಾನ ಪರಿಷತ್ ಬಿಜೆಪಿ ಸದಸ್ಯರಾದ ಕೆ.ಬಿ.ಶಾಣಪ್ಪ ಹಾಗೂ ತಾರಾ ಅನುರಾಧಾ ಅವರ ಅವಧಿ ಮುಕ್ತಾಯವಾಗಲಿದ್ದು, ವಿದಾಯ ಭಾಷಣ ಮಾಡಿದ ಅವರು ಭಾವುಕರಾಗಿ, ಆನಂದ ಭಾಷ್ಪ ಸುರಿಸಿದರು.

    ಆಗಸ್ಟ್ 9ರಂದು ಪರಿಷತ್ ಸದಸ್ಯರಾದ ಶಾಣಪ್ಪ ಹಾಗೂ ತಾರಾ ಅವರ ಅವಧಿ ಮುಗಿಯಲಿದೆ. ಶಾಣಪ್ಪ ಅವರು ತಮ್ಮ ರಾಜಕೀಯ ಜೀವನದ ಹಲವು ಘಟನೆ ವಿವರಿಸಿ ಹಾಸ್ಯದ ಹೊಳೆ ಹರಿಸಿದರು. ಭಾಷಣ ಮುಗಿಯುತ್ತಿದ್ದಂತೆ ಏನನ್ನೋ ಕಳೆದುಕೊಂಡವರಂತೆ ಕುಳಿತು ಬಿಟ್ಟರು.

    ಇತ್ತ ಗದ್ಗದಿತರಾಗಿಯೇ ಮಾತನಾಡಿದ ತಾರಾ ಅನುರಾಧಾ ಅವರು, ಮತ್ತೇ ಪಕ್ಷ ಅವಕಾಶ ಕೊಟ್ಟರೆ ಸದನಕ್ಕೆ ಬರುವೆ ಎಂದು ಆಸೆ ವ್ಯಕ್ತಪಡಿಸಿ, ಆಸನದಲ್ಲಿ ಕುಳಿತು ಆನಂದಭಾಷ್ಪ ಸುರಿಸಿದರು.