Tag: ತಾರಾ

  • ತಾರಾ ಮನೆಯ ಗೃಹಪ್ರವೇಶ ಸಂಭ್ರಮದಲ್ಲಿ ಸೆಲೆಬ್ರಿಟಿಗಳ ದಂಡು

    ತಾರಾ ಮನೆಯ ಗೃಹಪ್ರವೇಶ ಸಂಭ್ರಮದಲ್ಲಿ ಸೆಲೆಬ್ರಿಟಿಗಳ ದಂಡು

    ಹಿರಿಯ ನಟಿ ತಾರಾ ಅನುರಾಧಾ (Tara Anuradha) ಅವರು ಕನಸಿನ ಮನೆಗೆ (House Warming) ಕಾಲಿಟ್ಟಿದ್ದಾರೆ. ನಟಿಯ ಮನೆಯ ಗೃಹಪ್ರವೇಶ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್ (Sandalwood) ಕಲಾವಿದರು ಭಾಗವಹಿಸಿ ಶುಭಕೋರಿದ್ದಾರೆ. ಇದನ್ನೂ ಓದಿ:‘ಅಮರನ್’ ಸಕ್ಸಸ್ ಬಳಿಕ ಹೊಸ ಪ್ರಾಜೆಕ್ಟ್ ಒಪ್ಪಿಕೊಂಡ ಸಾಯಿ ಪಲ್ಲವಿ

    ಬೆಂಗಳೂರಿನಲ್ಲಿ ನಟಿ ಲಕ್ಷುರಿ ಮನೆಯನ್ನು ಕಟ್ಟಿಸಿದ್ದಾರೆ. ಈ ಸಂಭ್ರಮದಲ್ಲಿ ನಟಿ ಮಾಲಾಶ್ರೀ, ಸೋನು ಗೌಡ, ಭಾವನಾ ರಾವ್, ಅಂಜಲಿ, ಸುಧಾ ಬೆಳವಾಡಿ, ಶ್ರುತಿ, ಪೂಜಾ ಗಾಂಧಿ, ಪದ್ಮಾವಾಸಂತಿ, ಸುಧಾರಾಣಿ, ಭಾರತಿ ವಿಷ್ಣುವರ್ಧನ್, ಅನುಪ್ರಭಾಕರ್, ಕಾರುಣ್ಯ ರಾಮ್, ವೀಣಾ ಸುಂದರ್, ಗುರುಕಿರಣ್ ಪತ್ನಿ, ಮಾಳವಿಕಾ, ಅಶ್ವಿನಿ ಪುನೀತ್‌ರಾಜ್‌ಕುಮಾರ್, ಪ್ರಿಯಾಂಕಾ ಉಪೇಂದ್ರ ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ.

    ಭಾವನಾ ರಾವ್ ಮತ್ತು ಸುಧಾರಾಣಿ ಪುತ್ರಿ ಜೊತೆಯಾಗಿ ಕುಣಿದು ಕುಪ್ಪಳಿಸಿದ್ದಾರೆ. ವಿವಿಧ ಹಾಡುಗಳಿಗೆ ಅವರು ಡ್ಯಾನ್ಸ್ ಮಾಡಿದ್ದಾರೆ.

    ಈ ಸಂಭ್ರಮದಲ್ಲಿ ಮತ್ತೊಂದು ಹೈಲೆಟ್ ಅಂದರೆ ತಾರಾ ಜೊತೆ ಸುಧಾರಾಣಿ ಹೆಜ್ಜೆ ಹಾಕಿರೋದು. ಬಳಿಕ ಮಾಲಾಶ್ರೀ, ಕಾರುಣ್ಯ ಸೇರಿದಂತೆ ಡ್ಯಾನ್ಸ್ ಮಾಡುತ್ತ ಎಂಜಾಯ್ ಮಾಡಿರುವ ತುಣುಕು ಅಭಿಮಾನಿಗಳ ಗಮನ ಸೆಳೆದಿದೆ.

    ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿರುವ ತಾರಾ ಕನಸಿನ ಮನೆಗೆ ಕಾಲಿಟಿರೋದಕ್ಕೆ ಫ್ಯಾನ್ಸ್ ಶುಭಕೋರಿದ್ದಾರೆ.

  • ಸುದೀಪ್ ತಾಯಿ ಅಂತಿಮ ದರ್ಶನಕ್ಕೆ ಬಂದ ಶಿವಣ್ಣ, ತಾರಾ, ಡಾಲಿ

    ಸುದೀಪ್ ತಾಯಿ ಅಂತಿಮ ದರ್ಶನಕ್ಕೆ ಬಂದ ಶಿವಣ್ಣ, ತಾರಾ, ಡಾಲಿ

    ಟ ಸುದೀಪ್ (Sudeep) ಅವರ ತಾಯಿಯ (Mother) ಅಂತಿಮ ದರ್ಶನ ಪಡೆಯಲು ಶಿವರಾಜ್‌ಕುಮಾರ್ (Shivarajkumar) ದಂಪತಿ, ನಟಿ ತಾರಾ ಡಾಲಿ ಧನಂಜಯ (Daali Dhananjay) ಸೇರಿದಂತೆ ಅನೇಕರು ನಟನ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಇದನ್ನೂ ಓದಿ: ಸುದೀಪ್‌ಗೆ ಮಾತೃ ವಿಯೋಗ- ಶ್ರದ್ಧಾಂಜಲಿ ಸಲ್ಲಿಸಿದ ದುನಿಯಾ ವಿಜಯ್

    ಸುದೀಪ್ ತಾಯಿಯ ಅಂತಿಮ ದರ್ಶನ ಪಡೆದ ಬಳಿಕ ದುಃಖದಲ್ಲಿರುವ ಸುದೀಪ್‌ರನ್ನು ಶಿವಣ್ಣ ಸಂತೈಸಿದ್ದಾರೆ. ಈ ವೇಳೆ, ಹಿರಿಯ ನಟಿ ತಾರಾ, ನಟ ಡಾಲಿ, ತರುಣ್ ಸುದೀರ್, ಅಭಿಮನ್ಯು ಕಾಶಿನಾಥ್, ಇಂದ್ರಜೀತ್ ಲಂಕೇಶ್, ರಕ್ಷಿತಾ ಪ್ರೇಮ್‌ ದಂಪತಿ ಸೇರಿದಂತೆ ಅನೇಕರು ನಟನ ಮನೆಗೆ ಆಗಮಿಸಿದ್ದಾರೆ. ಸುದೀಪ್ ತಾಯಿಯ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

    ಅಂದಹಾಗೆ, ನ್ಯುಮೋನಿಯದಿಂದ ಬಳಲುತ್ತಿದ್ದ ಸುದೀಪ್ ತಾಯಿ ಇಂದು (ಅ.20) ಬೆಳಗ್ಗೆ ವಿಧಿವಶರಾಗಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ.

  • ಬಿಗ್ ಬಾಸ್ ಮನೆಗೆ ಯಾರೆಲ್ಲ ಗೆಸ್ಟ್ ಬಂದಿದ್ದು? ಕಂಪ್ಲೀಟ್ ಸ್ಟೋರಿ

    ಬಿಗ್ ಬಾಸ್ ಮನೆಗೆ ಯಾರೆಲ್ಲ ಗೆಸ್ಟ್ ಬಂದಿದ್ದು? ಕಂಪ್ಲೀಟ್ ಸ್ಟೋರಿ

    ಬಿಗ್‌ಬಾಸ್ ಕನ್ನಡ (Bigg Boss Kannada)  ಹತ್ತನೇ ಸೀಸನ್‌ ಅಂತಿಮ ಹಂತಕ್ಕೆ ಕ್ಷಣಗಣನೆ ಶುರುವಾಗಿದೆ. ಹದಿನಾಲ್ಕು ವಾರಗಳನ್ನು ಮುಗಿಸಿ ಹದಿನೈದನೇ ವಾರಕ್ಕೆ ಕಾಲಿಟ್ಟಿರುವ ಬಿಗ್‌ಬಾಸ್ ರಿಯಾಲಿಟಿ ಷೋ ದಿನದಿಂದ ದಿನಕ್ಕೆ ಕುತೂಹಲದ ಸ್ವರೂಪ ಪಡೆದುಕೊಳ್ಳುತ್ತಿದೆ. ಈ ಹಂತದಲ್ಲಿ ಈ ಸೀಸನ್‌ ಬಿಗ್‌ಬಾಸ್ ಜರ್ನಿಯನ್ನು ಹೊರಳಿ ನೋಡಿದರೂ ಕುತೂಹಲಕಾರಿ ಚಿತ್ರಣ ಸಿಗುತ್ತದೆ. ಈ ಬಾರಿ ಮನೆಯೊಳಗಿನ ಸದಸ್ಯರು ಎಷ್ಟು ವೈವಿಧ್ಯಪೂರ್ಣವಾಗಿದ್ದರೋ ಮನೆಗೆ ಭೇಟಿ ನೀಡಿದ ಅತಿಥಿಗಳೂ ಷೋಗೆ ಅಷ್ಟೇ ಗಾಢವಾದ ಬಣ್ಣವನ್ನು ತುಂಬಿದ್ದಾರೆ. ಹಾಗಾದ್ರೆ ಬಿಗ್‌ಬಾಸ್‌ ಮನೆಯೊಳಗೆ ಎಂಟ್ರಿ ಕೊಟ್ಟು ಕಲರ್‍ಫುಲ್‌ ಮಾಡಿದ ಗೆಸ್ಟ್‌ಗಳು ಯಾರು? ಅವರು ಭೇಟಿ ನೀಡಿದ ಸಂದರ್ಭ ಹೇಗಿತ್ತು? ಇಲ್ಲಿದೆ ಒಂದು ಚಿತ್ರಣ.

    ಪ್ರದೀಪ್‌ ಈಶ್ವರ್‍ (Pradeep Eshwar) ಸ್ಫೂರ್ತಿ ಮಾತುಗಳು

    ಬಿಗ್‌ಬಾಸ್ ಷೋ ಮೊದಲ ಬೆಳಗಿನಲ್ಲಿಯೇ ಒಂದು ಸರ್ಫೈಸ್ ವಿಸಿಟ್ ಕಾದಿತ್ತು. ಅಂದು ಬೆಳಿಗ್ಗೆ ಚಿಕ್ಕಬಳ್ಳಾಪುರ ಎಂಎಲ್‌ಎ ಪ್ರದೀಪ್ ಈಶ್ವರ್‍ ಬಿಗ್‌ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದರು. ಮನೆಯೊಳಗಿನ ಸದಸ್ಯರು ಅವರ ಸ್ಪೂರ್ತಿದಾಯಕ ಮಾತು ಕೇಳಿ ಕಣ್ಣಲ್ಲಿ ನೀರನ್ನೂ ಎದೆಯಲ್ಲಿ ವಿಶ್ವಾಸವನ್ನೂ ತುಂಬಿಕೊಂಡು ಆಟಕ್ಕೆ ಅಣಿಯಾಗಿದ್ದರು.  ಆರಂಭದಲ್ಲಿ ಪ್ರದೀಪ್‌, ಬಿಗ್‌ಬಾಸ್ ಷೋಗೆ ಸ್ಪರ್ಧಿಯಾಗಿ ಹೋಗಲಿದ್ದಾರೆ ಎಂದು ಊಹಿಸಿದ್ದರಿಂದ ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯೂ ನಡೆದಿತ್ತು. ಆದರೆ ಪ್ರದೀಪ್‌ ಈಶ್ವರ್ ಅವರು ಬಿಗ್‌ಬಾಸ್ ಮನೆಯೊಳಗೆ ಸ್ಪರ್ಧಿಗಳ ಬಾಯಿ ಸಿಹಿ ಮಾಡಿ, ಮಾತುಗಳಿಂದ ವಿಶ್ವಾಸ ತುಂಬಿ ಮನೆಯಿಂದ ಹೊರಗೆ ಬಂದಿದ್ದರು.

    ಲಾರ್ಡ್‌ ಪ್ರಥಮ್ (Pratham) ಗ್ರ್ಯಾಂಡ್ ಎಂಟ್ರಿ

    ಬಿಗ್‌ಬಾಸ್‌ ಸೀಸನ್‌ 4ನ ವಿನ್ನರ್ ಪ್ರಥಮ್‌ ಅವರ ಎಂಟ್ರಿಯಂತೂ ಸಖತ್ ಎಂಟರ್‌ಟೈನಿಂಗ್ ಆಗಿತ್ತು. ತಮ್ಮನ್ನು ತಾವು ‘ಲಾರ್ಡ್‌ ಪ್ರಥಮ್‌’ ಎಂದು ಕರೆದುಕೊಂಡೇ ಒಳಗೆ ಬಂದ ಅವರು ಮನೆಯ ಸದಸ್ಯರಿಂದಲೆಲ್ಲ ಭಾರಿ ಸೇವೆ ಮಾಡಿಸಿಕೊಂಡಿದ್ದರು. ಸದಸ್ಯರಿಗೆಲ್ಲ ತಮ್ಮದೇ ಸ್ಟೈಲ್‌ನಲ್ಲಿಆರ್ಡರ್ ಮಾಡುತ್ತ, ಅವರಿಗೆ ಸಲಹೆ ಸೂಚನೆ ನೀಡುತ್ತ ದಿನವಿಡೀ ಕಾಲಕಳೆದಿದ್ದರು. ಇದು ಬಿಗ್‌ಬಾಸ್ ನೀಡಿದ ಟಾಸ್ಕ್‌ ಇರಬೇಕು ಎಂದು ತಮ್ಮಷ್ಟಕ್ಕೆ ತಾವೇ ಊಹಿಸಿಕೊಂಡ ಸದಸ್ಯರು ಪ್ರಥಮ್ ಮಾತನ್ನು ಚಾಚೂ ತಪ್ಪದೆ ಪಾಲಿಸಿದ್ದರು. ಸಂಗೀತಾ ಅವರಂತೂ ಪ್ರಥಮ್ ಅವರಿಗೆ ಕೈತುತ್ತು ತಿನ್ನಿಸಿದ್ದರು ಕೂಡ. ಆದರೆ ವೀಕೆಂಡ್‌ ಎಪಿಸೋಡಿನಲ್ಲೇ ತಿಳಿದಿದ್ದು, ಪ್ರಥಮ್ ಅವರನ್ನೆಲ್ಲ ಬಕ್ರಾ ಮಾಡಿದ್ದಾರೆ. ಅವರು ಹೇಳಿದ ಆಜ್ಞೆಗಳನ್ನು ಪಾಲಿಸಬೇಕು ಎಂದು ಮನೆಯ ಸದಸ್ಯರಿಗೆ ಯಾವ ಸೂಚನೆಯೂ ಬಿಗ್‌ಬಾಸ್ ಕಡೆಯಿಂದ ಬಂದಿರಲಿಲ್ಲ ಎಂಬುದು!

    ದಸರೆಗೆ ‘ತಾರಾ’ ಮೆರುಗು

    ಬಿಗ್‌ಬಾಸ್‌ ಮನೆ ಜಿದ್ದಾಜಿದ್ದಿನ ಟಾಸ್ಕ್‌ಗಳು, ಅದರಲ್ಲಿನ ಜಗಳಗಳ ಟೆನ್ಷನ್‌ನಲ್ಲಿ ಮುಳುಗಿಹೋಗಿರುವಾಗ ‘ದಸರೆ’ ಸಂಭ್ರಮಕ್ಕೆ ಮೆರುಗು ನೀಡಲು ಮನೆಯೊಳಗೆ ಬಂದವರು ತಾರಾ ಅನೂರಾಧಾ. ಅವರ ಉಪಸ್ಥಿತಿಯಲ್ಲಿ ಮನೆಯ ಸದಸ್ಯರೆಲ್ಲ ತಮ್ಮ ಭಿನ್ನಾಭಿಪ್ರಾಯಗಳನ್ನು ಮರೆತು ಹಾಡು, ಕುಣಿದು, ಸಂಭ್ರಮಿಸಿದ್ದರು. ತಾರಾ ಪ್ರತಿ ಸದಸ್ಯರನ್ನೂ ಕರೆದು ಅವರ ಶಕ್ತಿ, ಮಿತಿಗಳ ಬಗ್ಗೆ ತಿಳಿಸಿ ಸ್ಪೂರ್ತಿ ತುಂಬಿದ್ದರು.

    ಭಾಗ್ಯ ತಂದ ಸುಷ್ಮಾ

    ಕಲರ್ಸ್‌ ಕನ್ನಡದ ‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ ಭಾಗ್ಯ ಪಾತ್ರದಲ್ಲಿ ನಟಿಸುತ್ತಿರುವ ಸುಷ್ಮಾ ಎನ್ ರಾವ್ ಅವರ ಎಂಟ್ರಿ ಮನೆಮಂದಿಗೆಲ್ಲ ಒಂದು ರೀತಿಯಲ್ಲಿ ಪ್ಲೆಸೆಂಟ್ ಸರ್ಪೈಸ್ ಆಗಿತ್ತು. ಆ ಸಂದರ್ಭದಲ್ಲಿ ವರ್ತೂರು ಸಂತೋಷ್ ಆಗಷ್ಟೇ ಹುಲಿಯುಗುರಿನ ಪ್ರಕರಣ ಎದುರಿಸಿ ಮತ್ತೆ ಮನೆಯೊಳಗೆ ಎಂಟ್ರಿ ಪಡೆದುಕೊಂಡಿದ್ದರು. ಮತ್ತು ಆ ತಳಮಳ ತಾಳಲಾರದೆ ಮನೆಯಿಂದ ಹೊರಗೆ ಹೋಗುವುದಾಗಿ ಹಟ ಹಿಡಿದು ಕೂತಿದ್ದರು. ಸುಷ್ಮಾ ಅವರ ಆಪ್ತ ಕಿವಿಮಾತುಗಳು ಅವರ ನಿರ್ಧಾರವನ್ನು ತಕ್ಷಣಕ್ಕೆ ಬದಲಿಸಲಿಲ್ಲವಾದರೂ, ಮತ್ತೆ ಆಡುವ ಉತ್ಸಾಹ ತುಂಬಿದ್ದಂತೂ ನಿಜ. ಅವರಷ್ಟೇ ಅಲ್ಲ, ತಮ್ಮ ಅತ್ಯಮೂಲ್ಯ ಸಲಹೆಗಳನ್ನು ಅವರು ಎಲ್ಲ ಸದಸ್ಯರಿಗೂ ನೀಡಿದರು.

    ಬ್ರಹ್ಮಾಂಡ ಗುರುಜಿಯ ನಗೆಬುಗ್ಗೆ

    ತಮ್ಮ ವಿಶಿಷ್ಟ ಮ್ಯಾನರಿಸಂ, ಮಾತಾಡುವ ಶೈಲಿಯಿಂದ ಸಾಕಷ್ಟು ಜನಪ್ರಿಯವಾಗಿರುವ ಬ್ರಹ್ಮಾಂಡ ಗುರೂಜಿ ಬಿಗ್‌ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಾಗಲೇ ಎಂಟರ್‌ಟೈನ್ಮೆಂಟ್‌ನ ಪ್ಯಾಕೇಜ್ ಕಾದಿದೆ ಎಂಬುದು ನಿಕ್ಕಿಯಾಗಿತ್ತು. ಆ ನಿರೀಕ್ಷೆಯಂತೂ ಹುಸಿ ಹೋಗಲಿಲ್ಲ. ಎಲ್ಲ ಸದಸ್ಯರಿಗೂ ಅಷ್ಟೇ ಏಕೆ ಬಿಗ್‌ಬಾಸ್‌ಗೂ ತಮ್ಮದೇ ಸ್ಟೈಲ್‌ನಲ್ಲಿ ಗದರುತ್ತ, ಅವರು ಸದಸ್ಯರಿಗೆ ಕೊಟ್ಟ ಕಾಟ ಸಣ್ಣದಲ್ಲ. ಬಿಗ್‌ಬಾಸ್ ಅವರಿಗೆ ನೀಡಿದ್ದ ಟಾಸ್ಕ್‌ ಅನ್ನು ಸಖತ್ ಎಂಟರ್‌ಟೈನಿಂಗ್ ಆಗಿಯೇ ನಿರ್ವಹಿಸಿದರು. ಮನೆಯಿಂದ ಹೋಗುವಾಗ ಕಣ್ಣಲ್ಲಿ ನೀರು ತುಂಬಿಕೊಂಡಿದ್ದರು.

    ಶ್ರುತಿ ನ್ಯಾಯ ಪಂಚಾಯ್ತಿ

    ಹಿರಿಯ ನಟಿ ಶ್ರುತಿ ಬಿಗ್‌ಬಾಸ್‌ ಮನೆಯೊಳಗೆ ಎಂಟ್ರಿ ಕೊಟ್ಟಿದ್ದು ನ್ಯಾಯ ಪಂಚಾಯ್ತಿ ನಡೆಸುವುದಕ್ಕಾಗಿ. ಕಿಚ್ಚು ಸುದೀಪ್ ಅವರ ಅನುಪಸ್ಥಿತಿಯಲ್ಲಿ ಶನಿವಾರದ ಪಂಚಾಯ್ತಿಯನ್ನು ನಡೆಸಿಕೊಡಲು ಶ್ರುತಿ ಬಂದಿದ್ದರು. ಮನೆಮಂದಿಗೆಲ್ಲ ಅಕ್ಕರೆಯ ಅಕ್ಕನಾಗಿ ಬುದ್ಧಿ ಹೇಳಿ, ತಿದ್ದಿ ತೀಡಿದ ಅವರು, ಮನೆಯೊಳಗಿನ ನ್ಯಾಯಪೀಠದಲ್ಲಿ ಕೂತು ಕೈಯಲ್ಲಿ ಸುತ್ತಿಗೆ ಹಿಡಿದು ಮನೆಯ ಸದಸ್ಯರ ನಡುವಿನ ಹಲವು ಆರೋಪ-ಪ್ರತ್ಯಾರೋಪಗಳನ್ನು ಆಲಿಸಿ ಪ್ರಕರಣಗಳನ್ನು ಬಗೆಹರಿಸಿದರು ಕೂಡ. ವಿಶೇಷವಾಗಿ ಅವರು ಮನೆಯ ಮಹಿಳಾ ಸ್ಪರ್ಧಿಗಳಲ್ಲಿ ತುಂಬಿದ ವಿಶ್ವಾಸವಂತೂ ನಂತರದ ದಿನಗಳಲ್ಲಿ ಎದ್ದು ಕಾಣುವಂಥ ಬದಲಾವಣೆಯನ್ನು ತಂದಿತ್ತು.

    ಶೈನ್-ಶುಭಾ ಜೋಷ್

    ಶ್ರುತಿ ಬಂದು ಹೋದ ಮರುದಿನದ ಭಾನುವಾರ ಮತ್ತಿಬ್ಬರು ಕಾರಿನಲ್ಲಿ ಮನೆಯೊಳಗೆ ಎಂಟ್ರಿ ಕೊಟ್ಟಿದ್ದರು. ಅವರು ಹಿಂದಿನ ಬಿಗ್‌ಬಾಸ್ ಸೀಸನ್‌ ಸ್ಪರ್ಧಿಗಳಾದ ಶೈನ್ ಶೆಟ್ಟಿ ಮತ್ತು ಶುಭಾ ಪೂಂಜಾ. ಇಬ್ಬರೂ ತಮ್ಮ ಜೋಷ್‌ ಅನ್ನು, ಚುರುಕುತನವನ್ನು ಮನೆಯ ಸದಸ್ಯರಿಗೆಲ್ಲ ಹಂಚಿದರು. ಅವರ ಜೊತೆ ಸೇರಿ ವಿಶಿಷ್ಟವಾದ ಟಾಸ್ಕ್‌ಗಳನ್ನು ಆಡಿಸಿದರು. ಭಾನುವಾರವನ್ನು ಸಖತ್ ಕಲರ್‌ಫುಲ್ ಆಗಿ ಮಾಡಿದರು.

    ಸಪ್ತಮಿ ಗೌಡ ಸಾಮಾಜಿ ಜಾಗೃತಿ

    ಬಿಗ್‌ಬಾಸ್ ಎನ್ನುವುದು ಬರೀ ಎಂಟರ್‌ಟೇನ್ಮೆಂಟ್‌ಗೆ ಮಾತ್ರ ಸೀಮಿತವಾದದ್ದಲ್ಲ, ಸಾಮಾಜಿಕ ಜಾಗೃತಿಯೂ ಅದರ ಭಾಗ ಎನ್ನುವುದಕ್ಕೆ ‘ಕಾಂತಾರ’ ನಟಿ ಸಪ್ತಮಿ ಗೌಡ ಅವರ ಎಂಟ್ರಿಯೇ ನಿದರ್ಶನವಾಗಿತ್ತು.  ಕರ್ನಾಟದ ಸರ್ಕಾರ ವಿತರಿಸುತ್ತಿರುವ ಶಕ್ತಿ ಮೆನ್‌ಸ್ಟ್ರೂಯಲ್ ಕಪ್ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಅವರು ಬಿಗ್‌ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದರು. ಅವರು ಮನೆಯ ಪುರುಷ ಮತ್ತು ಮಹಿಳಾ ಸದಸ್ಯರಿಗೆ ಈ ಬಗ್ಗೆ ಕೇಳಿದ ಪ್ರಶ್ನೆಗಳು ವಿಚಾರಪ್ರಚೋದಕವಾಗಿದ್ದವು ಮತ್ತು ಸಾಮಾಜಿಕ ಜಾಗೃತಿ ಮೂಡಿಸುವಂತಿದ್ದವು.

    ಗುರೂಜಿ ಭವಿಷ್ಯವಾಣಿ

    ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಅವರ ಆಗಮನ ಇಡೀ ಮನೆಯೊಳಗೆ ದೈವೀಕ ಕಳೆ ತುಂಬಿದ್ದು ಸುಳ್ಳಲ್ಲ. ಮನೆಯೊಳಗೆ ಆಗಮಿಸಿ ಪೂಜೆ ನಡೆಸಿದ ಅವರು ಪ್ರತಿಯೊಬ್ಬ ಸದಸ್ಯರಿಗೂ ಭವಿಷ್ಯವನ್ನೂ ಹೇಳಿದರು. ಅವರ ಮಾತುಗಳು ಹಲವು ಸ್ಪರ್ಧಿಗಳಲ್ಲಿ ಸ್ಫೂರ್ತಿ ತುಂಬಿತ್ತು. ಹಾಗೆಯೇ ಪ್ರತಾಪ್‌ ಅವರ ಕಳವಳವನ್ನೂ ಹೆಚ್ಚಿಸಿತ್ತು. ಒಟ್ಟಾರೆ ಬಿಗ್‌ಬಾಸ್‌ ವೇದಿಕೆಗೊಂದು ದೈವೀಕ ಪ್ರಭಾವಳಿಯನ್ನು ಅವರು ತುಂಬಿದರು ಎಂದರೆ ತಪ್ಪಾಗಲಿಕ್ಕಿಲ್ಲ.

    ಬಿಗ್ ಬಾಸ್ ಕನ್ನಡ ಸೀಸನ್ 10 ರ 24 ಗಂಟೆಗಳ ಲೈವ್ ಸ್ಟ್ರೀಮಿಂಗ್ ಅನ್ನು ಒದಗಿಸುವ ಜಿಯೋ ಸಿನೆಮಾದಲ್ಲಿ ಪ್ರತ್ಯೇಕವಾಗಿ ಲಭ್ಯವಿರುವ ಆಕರ್ಷಕ ಫಿನಾಲೆಯನ್ನು ತಪ್ಪಿಸಿಕೊಳ್ಳಬೇಡಿ.

  • Bigg Boss Kannada: ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟ ನಟಿ ತಾರಾ

    Bigg Boss Kannada: ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟ ನಟಿ ತಾರಾ

    ನ್ನಡದ ಹಿರಿಯ ನಟಿ ತಾರಾ ಬಿಗ್ ಬಾಸ್  ಮನೆಯೊಳಗೆ ಪ್ರವೇಶ ಮಾಡಿದ್ದಾರೆ. ದಸರಾ ಹಬ್ಬದ ಪ್ರಯುಕ್ತವಾಗಿ ತಾರಾ (Tara) ಅವರನ್ನು ಮನೆಯೊಳಗೆ ಕಳುಹಿಸಲಾಗಿದೆ. ಹಬ್ಬವನ್ನು ಮನೆಮಂದಿ ಸಂಭ್ರಮದಿಂದ ಆಚರಿಸುತ್ತಿರುವ ಪ್ರೊಮೋವನ್ನು ವಾಹಿನಿಯು ಬಿಡುಗಡೆ ಮಾಡಿದೆ. ಬಿಗ್ ಬಾಸ್ ಸ್ಪರ್ಧಿಗಳ ಜೊತೆಗೆ ಹಬ್ಬವನ್ನು ಆಚರಿಸಿರುವ ತಾರಾ, ಭರ್ಜರಿ ಮನೆರಂಜನೆಯನ್ನು ಮನೆಯೊಳಗೆ ಇದ್ದವರ ಜೊತೆ ಪಡೆದಿದ್ದಾರೆ.

    ಒಂದು ಕಡೆ ಮನೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದ್ದರೆ, ಮತ್ತೊಂದು ಕಡೆ ಸೂತಕದ ಛಾಯೆಯೂ ಆವರಿಸಿಕೊಂಡಿದೆ. ಅದನ್ನು ಮರೆಸುವುದಕ್ಕಾಗಿಯೇ ಬಿಗ್ ಬಾಸ್ ಹೊಸ ಎಂಟ್ರಿಯೊಂದನ್ನು ಕೊಡಿಸಿದೆ. ಹಾಗಂತ ತಾರಾ ಸ್ಪರ್ಧಿಯಾಗಿ ಮನೆಯೊಳಗೆ ಹೋಗಿಲ್ಲ. ಅತಿಥಿಯಾಗಿ ಎಂಟ್ರಿ ಕೊಟ್ಟು, ಹಬ್ಬ ಮುಗಿಸಿಕೊಂಡು ವಾಪಸ್ಸಾಗಲಿದ್ದಾರೆ. ಸೂತಕದ ಛಾಯೆಯಾಗಿ ಇದೇ ಮೊದಲ ಬಾರಿಗೆ ಬಿಗ್ ಬಾಸ್ ಸ್ಪರ್ಧಿಯೊಬ್ಬರನ್ನು ಮನೆಯಿಂದಲೇ ಬಂಧಿಸಲಾಗಿದೆ.

    ಬಿಗ್ ಬಾಸ್ (Bigg Boss Kannada) ಸ್ಪರ್ಧಿ ವರ್ತೂರು ಸಂತೋಷ್ (Varthur Santhosh) ಜೈಲು ಪಾಲಾಗಿದ್ದಾರೆ. ಹುಲಿ ಉಗುರು ಧರಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಮೊನ್ನೆ ರಾತ್ರಿ ಸಂತೋಷ್ ಅವರನ್ನು ಬಿಗ್ ಬಾಸ್ ಮನೆಯಿಂದಲೇ ಬಂಧಿಸಲಾಗಿತ್ತು(Arrest). ಅರಣ್ಯ ಅಧಿಕಾರಿಗಳು ಇಂದು ನ್ಯಾಯಾಲಯಕ್ಕೆ ಸಂತೋಷ್ ಅವರನ್ನು ಹಾಜರು ಪಡಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ 14 ದಿನಗಳ ಕಾಲ ನ್ಯಾಯಾಧೀಶರು ನ್ಯಾಯಾಂಗ ಬಂಧನ (Jail) ವಿಧಿಸಿದ್ದಾರೆ.

    ಮೊನ್ನೆ ರಾತ್ರಿಯಿಂದಲೇ ವರ್ತೂರು ಸಂತೋಷ್ ಅವರನ್ನು ಅರಣ್ಯಾಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ತನ್ನಲ್ಲಿರುವ ಹುಲಿ ಉಗುರು ಬಂದಿದ್ದು ಹೇಗೆ? ಯಾರು ಕೊಟ್ಟರು? ಎಲ್ಲಿಂದ ಖರೀದಿ ಮಾಡಿದಿದ್ದೀರಿ? ಮಾರಿದವರು ಈಗ ಎಲ್ಲಿದ್ದಾರೆ? ಎಷ್ಟು ಮಂದಿಗೆ ಈ ರೀತಿ ಉಗುರು ಮಾರಲಾಗಿದೆ ಹೀಗೆ ಇತ್ಯಾದಿ ಪ್ರಶ್ನೆಗಳನ್ನು ಅರಣ್ಯಾಧಿಕಾರಿಗಳು ಸಂತೋಷ್ ಮುಂದೆ ಇಟ್ಟಿದ್ದರು. ಅದಕ್ಕೆ ಸಂತೋಷ್ ಕೂಡ ಉತ್ತರ ನೀಡಿದ್ದಾರೆ ಎನ್ನುವ ಮಾಹಿತಿ ಇದೆ.

    ಅಪರಿಚಿತರು ಹುಲಿ ಉಗುರನ್ನು ಮಾರಕ್ಕೆ ತಂದಿದ್ದರು. ಅವರು ಎಲ್ಲಿಂದ ಬಂದಿದ್ದರು, ಯಾರು ಎನ್ನುವುದು ನನಗೆ ಗೊತ್ತಿಲ್ಲ. ಮಾರಾಟ ಮಾಡುತ್ತಿರುವ ವಿಷಯ ಗೆಳೆಯರಿಂದ ತಿಳಿಯಿತು. ಹಣ ಕೊಟ್ಟು ಇದನ್ನು ಖರೀದಿ ಮಾಡಿದ್ದೇನೆ ಎಂದು ಅಧಿಕಾರಿಗಳ ಮುಂದೆ ಸಂತೋಷ್ ಹೇಳಿದ್ದಾರೆ ಎನ್ನುವುದು ಸಿಕ್ಕಿರುವ ವರ್ತಮಾನ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಟಗರು ಪಲ್ಯ’ ವೀಕ್ಷಿಸಲು ಸಿಎಂಗೆ ಆಹ್ವಾನ ನೀಡಿದ ಡಾಲಿ ಧನಂಜಯ್

    ‘ಟಗರು ಪಲ್ಯ’ ವೀಕ್ಷಿಸಲು ಸಿಎಂಗೆ ಆಹ್ವಾನ ನೀಡಿದ ಡಾಲಿ ಧನಂಜಯ್

    ಗರು ಪಲ್ಯ (Tagaru Palya) ಸಿನಿಮಾ ನೋಡುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ (Siddaramaiah) ಅವರಿಗೆ ಮನವಿ ಮಾಡಿದ್ದಾರೆ ನಟ ಡಾಲಿ ಧನಂಜಯ್ (Dolly Dhananjay). ನಿನ್ನೆಯಷ್ಟೇ ಸಿಎಂ ಅವರನ್ನು ಭೇಟಿ ಮಾಡಿದ ಡಾಲಿ ಮತ್ತು ನಟಿ ತಾರಾ (Tara), ಚಿತ್ರದ ಟ್ರೈಲರ್ ತೋರಿಸಿ ಪ್ರದರ್ಶನಕ್ಕೆ ಬರುವಂತೆ ಮನವಿ ಮಾಡಿಕೊಂಡಿದ್ದಾರೆ. ಆ ಫೋಟೋಗಳನ್ನು ಸ್ವತಃ ಸಿಎಂ ಅವರೇ ತಮ್ಮ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಟ್ರೇಲರ್ ಬಿಡುಗಡೆ

    ಡಾಲಿ ಧನಂಜಯ್ ನಿರ್ಮಾಣ ಮಾಡಿರುವ ಮೂರನೇ ಸಿನಿಮಾ ಟಗರು ಪಲ್ಯದ ಟ್ರೇಲರ್ ಬಿಡುಗಡೆಯಾಗಿದೆ. ಬೆಂಗಳೂರಿನ ಕಲಾವಿದರ ಸಂಘದಲ್ಲಿ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಆಕರ್ಷಕ ಬಿಂದು ಡಿಬಾಸ್.. ಡಾಲಿ ನಿರ್ಮಾಣದ ಟಗಲು ಪಲ್ಯ ಟ್ರೇಲರ್ ರಿಲೀಸ್ ಮಾಡಿದ ದಚ್ಚು ಇಡೀ ತಂಡಕ್ಕೆ ಶುಭ ಹಾರೈಸಿದರು.  ತಾರಾ, ರಂಗಾಯಣ ರಘು, ಅಮೃತಾ, ನಾಗಭೂಷಣ್ ಸೇರಿದಂತೆ ನೀನಾಸಂ ಸತೀಶ್ ಹಾಗೂ ನೆನಪಿರಲಿ ಪ್ರೇಮ್ ಇವೆಂಟ್ ನಲ್ಲಿ ಭಾಗಿಯಾಗಿದ್ದರು. ಟ್ರೇಲರ್ ಬಿಡುಗಡೆ ಮಾಡಿ ಮಾತಿಗಿಳಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾತನಾಡಿ, ಟಗರು ಪಲ್ಯ ತಂಡಕ್ಕೆ ಶುಭಾಶಯ. ಟ್ರೇಲರ್ ನೋಡಿದಾಗ ಖುಷಿ ಆಯಿತು. 7 ಸ್ಟಾರ್ ಸುಲ್ತಾನ್ ಚೆನ್ನಾಗಿ ಆಕ್ಟ್ ಮಾಡಿದೆ. ಅಮೃತಾ ಅವರಿಗೆ ಸ್ವಾಗತ. ನಮ್ಮದು ಚಿಕ್ಕ ಇಂಡಸ್ಟ್ರೀ. ನೀಟ್ ಇಂಡಸ್ಟ್ರೀ. ಇದು ನಮ್ಮ‌ಮಣ್ಣಿನ ಸೊಗಡಿನ ಸಿನಿಮಾ.  ಟ್ರೇಲರ್ ನಲ್ಲಿ ಸಿನಿಮಾ ಏನೋ ಅನ್ನೋದು ಹೇಳಬಹುದು. ಪ್ರತಿ ಒಂದು ಸೀನು. ನಗಲು ಏನು ಬೇಕು ಎಲ್ಲವೂ ಇದೆ. ಸಿನಿಮಾ ಚೆನ್ನಾಗಿ ಆಗಲಿ. ಹೀರೋಗಳು ಏನು ಮಾಡುತ್ತಿದ್ದಾರಯ್ಯ ಅಂತಾ ತುಂಬಾ ಜನ ಕೇಳುತ್ತಾರೆ. ನಾವು ಪ್ರೊಡ್ಯೂಸ್ ಮಾಡ್ತೀವೆ. ಈ ಸಾಲಿನಲ್ಲಿ ಡಾಲಿ ಅವರು ಮೊದಲು ನಿಲ್ಲುತ್ತಾರೆ. ಇದು ಧನಂಜಯ್ ನಿರ್ಮಾಣದ ಮೂರನೇ ಸಿನಿಮಾ. ಆತ ಕಷ್ಟಪಟ್ಟು  ಮೇಲೆ ಬಂದಿದ್ದಾರೆ. ಬಡವರ ಮಕ್ಕಳು ದೊಡ್ಡವರು ಆಗಬೇಕು. ಡಾಲಿ ಪಿಕ್ಚರ್ಸ್ ದೊಡ್ಡ ಪ್ರೊಡಕ್ಷನ್ ಆಗಿ ಬೆಳೆಯಲಿ. ನಾಗಭೂಷಣ್ ಫ್ಯಾನ್ ನಾನು. ನಾವು ಚಿಕ್ಕ ಕಲಾವಿದರು ನಿಮ್ಮ ಬ್ಯಾನರ್ ನಡಿ ನನಗೂ ಅವಕಾಶ ಕೊಡಿ‌ ಎಂದು ಧನಂಜಯ್ ಕಾಲೆಳೆದರು.

    ಡಾಲಿ ಧನಂಜಯ್ ಮಾತನಾಡಿ, ಎಲ್ಲಾ ಸಂಬಂಧಗಳನ್ನು ನೆನಪಿಸುವ ಸಿನಿಮಾವೇ ಟಗರು ಪಲ್ಯ. ಇಡೀ ತಂಡಕ್ಕೆ ಧನ್ಯವಾದ ಹೇಳಬೇಕು. ನನಗೆ ಉಮೇಶ್ ಅವರು ಕಥೆ ಹೇಳಿದಾಗ ತುಂಬಾ ಇಷ್ವವಾಯಿತು. ಒಳ್ಳೆ ಪ್ರತಿಭೆಗಳಿಗೆ ಬಂಡವಾಳ ಹಾಕುವುದು ಖುಷಿ ನನಗೆ ಇದೆ. ಅವರವರ ಪ್ರತಿಭೆಗಳು ಅವರನ್ನ ಮೇಲೆ ಕರೆದುಕೊಂಡು ಬರುತ್ತಿದೆ. ಇಡೀ ತಂಡ ನನಗೆ ಅದ್ಭುತವಾಗಿ ಕೋ ಆಪರೇಟಿಂಗ್ ಮಾಡಿದರು. ನಾಗಭೂಷಣ್ ಯಾವುದೇ ಪಾತ್ರ ಕೊಟ್ಟರು ತೂಗಿಸಿಕೊಂಡು ಹೋಗುವ ನಟ. ಟಗರು ಪಲ್ಯದಲ್ಲಿ ನೀವು ಬೇರೆ ನಾಗಭೂಷಣ್ ನೋಡಬಹುದು. ಅಮೃತಾ ಲುಕ್ ಟೆಸ್ಟ್ ಮಾಡಿದಾಗ ಸ್ಯಾಂಡಲ್ ವುಡ್ ಮಹಾಲಕ್ಷ್ಮೀ ತರ ಕಾಣಿಸ್ತಾರೆ. ಚಿತ್ರರಂಗದ ಮಹಾಲಕ್ಷ್ಮಿ ಆಗಿ ಬೆಳಗಲಿ ಎಂದು ಹಾರೈಸಿದ್ದೇವು. ಖಂಡಿತ. ಹಾಗೇ ಆಗುತ್ತಿದೆ. ಸೂರ್ಯಕಾಂತಿ ಸಾಂಗ್ ಹಿಟ್ ಆಗಿದೆ. ನನ್ನ ಬೆನ್ನು ತಟ್ಟಲು ಇವತ್ತು ಒಬ್ಬರು ಅಣ್ಣ ಬಂದಿದ್ದಾರೆ. ಯಾವಾಗ ಸಿಕ್ಕರು ಖುಷಿಯಿಂದ ತಬ್ಬಿಕೊಂಡು ಚೆನ್ನಾಗಿ ಕೆಲಸ ಮಾಡುತ್ತಿದ್ದೀಯಾ.. ಮಾಡು ಖುಷಿಪಡುತ್ತೇನೆ ಎನ್ನುತ್ತಾರೆ ಎಂದು ದರ್ಶನ್ ಅವರ ಬಗ್ಗೆ ಹೇಳಿದರು.

    ನಟ ನಾಗಭೂಷಣ್ ಮಾತನಾಡಿ, ನಾನು ಲೀಡ್ ಕ್ಯಾರೆಕ್ಟರ್ ಮಾಡಬೇಕು ಎಂದು ಇಂಡಸ್ಟ್ರೀಗೆ ಬಂದವನಲ್ಲ. ಕ್ಯಾರೆಕ್ಟರ್ ಆರ್ಟಿಸ್ಟ್ ಆಗಬೇಕು ಎಂದು ಬಂದವನು. ನನ್ನ ಪುಣ್ಯ. ಅಂದು ಇಕ್ಕಟ್ ಸಿನಿಮಾ. ಈಗ ಟಗರು ಪಲ್ಯ ಸಿಕ್ಕಿದೆ. ಟಗರು ಪಲ್ಯ ಸಿನಿಮಾದ ಪಾತ್ರ ನನಗೆ ತೃಪ್ತಿ ಕೊಟ್ಟ ಪಾತ್ರ. ನಾನು ಒಬ್ಬ ಹಳ್ಳಿ ಹುಡುಗ. ನಾನು ಬೆಳೆದು ಬಂದ ಪರಿಸರವನ್ನು ಪ್ರತಿನಿಧಿಸುವುದು, ನಮ್ಮೂರು ಕಥೆ ಇರುವುದರಿಂದ ಈ ಸಿನಿಮಾ ಮತ್ತಷ್ಟು ಕನೆಕ್ಟ್ ಆಗಿದೆ. ಹಲವು ವರ್ಷಗಳಿಂದ ಒಂದು ಮಾತು ಹೇಳುತ್ತಿದ್ದೀರಾ.. ಬೇರೆ ಭಾಷೆಯಲ್ಲಿ ಕಡಿಮೆ ಬಜೆಟ್ ನಲ್ಲಿ, ಒಳ್ಳೊಳ್ಳೆ ಕಂಟೆಂಟ್ ಸಿನಿಮಾ ಬರ್ತಿಲ್ಲ ಎನ್ನುತ್ತಿದ್ದರು. ಅದಕ್ಕೆಲ್ಲ ಉತ್ತರ ಟಗರು ಪಲ್ಯ ಎಂದರು.

    ನಟಿ ಅಮೃತಾ ಪ್ರೇಮ್ ಮಾತನಾಡಿ, ದರ್ಶನ್ ಸರ್ ಕಡೆಯಿಂದ ನನ್ನ ಮೊದಲ ಟ್ರೇಲರ್ ಬಿಡುಗಡೆಯಾಗಿರುವುದು ಬಹಳ ಖುಷಿ ಇದೆ. ಈ ಕ್ಷಣ ನನಗೆ ಲೈಫ್ ಲಾಂಗ್ ನೆನಪು ಇರುತ್ತದೆ. ಡಾಲಿ ಪಿಕ್ಚರ್ಸ್ ನಡಿ ನನಗೆ ಅವಕಾಶ ಸಿಕ್ಕಿರುವುದು ಎಷ್ಟು ಖುಷಿ ಇದೆಯೋ, ಅದರ ಜೊತೆ ದರ್ಶನ್ ಸರ್ ಟ್ರೇಲರ್ ಲಾಂಚ್ ಮಾಡಿರುವುದು  ತುಂಬಾನೇ ಖುಷಿ ಇದೆ.  ದರ್ಶನ್ ಸರ್ ನಮ್ಮ ಫ್ಯಾಮಿಲಿಗೆ ಹತ್ತಿರ ಆದವರು. ಅಪ್ಪನ ಸಿನಿಮಾ ಜರ್ನಿಯಿಂದ ಜೊತೆಯಲಿ ಇದ್ದಾರೆ. ನನಗೆ ಮೊದಲ ಸಿನಿಮಾದ ಟ್ರೇಲರ್ ಲಾಂಚ್ ಬಂದಿದ್ದಾರೆ. ಈ ಪಾತ್ರಕ್ಕೆ ಚ್ಯೂಸ್ ಮಾಡಿದ ನಿರ್ದೇಶಕರಿಗೆ, ಡಾಲಿ ಸರ್ ಗೆ ಧನ್ಯವಾದ. ಡಾಲಿ ಪಿಕ್ಚರ್ಸ್… ಈ ಪ್ರೊಡಕ್ಷನ್ ಬಗ್ಗೆ  ಹೇಳೋದಾದರೆ, ಎಷ್ಟೇ ಹೊಸಬರು ಬರುವಾಗ ಡಾಲಿ ಪಿಕ್ಚರ್ಸ್ ಎಂದು ಬರುತ್ತಾರೆ . ಹೋಗುವಾಗ ನಮ್ಮದೇ ಪಿಕ್ಚರ್ಸ್ ಎಂದು  ಹೋಗುತ್ತಾರೆ. ಆ ರೀತಿ ಎಲ್ಲರನ್ನೂ ರೀಸಿವ್ ಮಾಡಿಕೊಳ್ಳುತ್ತಾರೆ ಎಂದರು.

    ಡಾಲಿ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಡಾಲಿ ಧನಂಜಯ್ ನಿರ್ಮಿಸುತ್ತಿರುವ ‘ಟಗರು ಪಲ್ಯ’ ಸಿನಿಮಾಗೆ ಉಮೇಶ್ ಕೆ ಕೃಪ ಆಕ್ಷನ್ ಕಟ್ ಹೇಳಿದ್ದಾರೆ. ನಾಗಭೂಷಣ, ಅಮೃತಾ ಪ್ರೇಮ್ ಜೊತೆಗೆ ರಂಗಾಯಣ ರಘು, ತಾರಾ, ಶರತ್ ಲೋಹಿತಾಶ್ವ, ವೈಜನಾಥ್ ಬಿರಾದಾರ್, ವಾಸುಕಿ ವೈಭವ್ ಸೇರಿದಂತೆ ದೊಡ್ಡ ತಾರಾಬಳಗವಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚಿಕ್ಕಮಗಳೂರಿನಲ್ಲಿ ‘ಒಂದ್ಸಲ ಮೀಟ್ ಮಾಡೋಣ ‘ ಅಂತಿದ್ದಾರೆ ಎಸ್.ನಾರಾಯಣ್

    ಚಿಕ್ಕಮಗಳೂರಿನಲ್ಲಿ ‘ಒಂದ್ಸಲ ಮೀಟ್ ಮಾಡೋಣ ‘ ಅಂತಿದ್ದಾರೆ ಎಸ್.ನಾರಾಯಣ್

    ನ್ನಡದ ಮೇರು ಪ್ರತಿಭೆಗಳಾದ ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್ ಸೇರಿದಂತೆ ಅನೇಕ ಖ್ಯಾತ ನಟರ ಚಿತ್ರಗಳನ್ನು ನಿರ್ದೇಶಿಸಿರುವ ಹೆಸರಾಂತ ನಿರ್ದೇಶಕ ಎಸ್.ನಾರಾಯಣ್ (S. Narayan) ನಿರ್ದೇಶನದಲ್ಲಿ ಶ್ರೇಯಸ್ ಮಂಜು ನಾಯಕನಾಗಿ ನಟಿಸುತ್ತಿರುವ ‘ಒಂದ್ಸಲ ಮೀಟ್ ಮಾಡೋಣ’ (Ondu Sala Meet Maadona) ಚಿತ್ರ ಆರಂಭವಾಗಿದೆ.  ಚಿಕ್ಕಮಗಳೂರಿನ ಶ್ರೀದೇವಿರಮ್ಮ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ಸಮಾರಂಭ ನೆರವೇರಿತು. ಶ್ರೇಯಸ್ ಮಂಜು (Shreyas)  ಹಾಗೂ ತಾರಾ ಅನುರಾಧ ಅವರ ಮೇಲೆ ಸೆರೆಹಿಡಿಯಲಾದ ಮೊದಲ ಸನ್ನಿವೇಶಕ್ಕೆ ಸ್ಥಳೀಯ ಶಾಸಕರಾದ ಹೆಚ್.ಡಿ.ತಮ್ಮಯ್ಯ ಆರಂಭ ಫಲಕ ತೋರಿದರು. ನಿರ್ಮಾಣ ಸಹಾಯಕ ಮಹಾದೇವ ಕ್ಯಾಮೆರಾ ಚಾಲನೆ ಮಾಡಿದರು.

    ಒಂದ್ಸಲ ಮೀಟ್ ಮಾಡೋಣ ಪ್ರೀತಿಯ ಜರ್ನಿ ಎಂದು ಹೇಳುವ  ನಿರ್ದೇಶಕರು, ಚಿಕ್ಕಮಗಳೂರಿನಿಂದ ಚಿತ್ರೀಕರಣ ಪ್ರಾರಂಭವಾಗಿ, ಸಕಲೇಶಪುರ, ವಿರಾಜಪೇಟೆ, ಕಣ್ಣೂರು, ಮೈಸೂರು, ಬೆಂಗಳೂರು, ಬೆಳಗಾವಿ ಹಾಗೂ ಗೋವಾ ಮುಂತಾದ ಕಡೆ ನಡೆಯಲಿದೆ. ಇದೊಂದು ಟ್ರಾವೆಲಿಂಗ್ ಲವ್ ಸ್ಟೋರಿ ಎಂದು ತಿಳಿಸಿದ್ದಾರೆ.  ಈಶಾ ಪ್ರೊಡಕ್ಷನ್ಸ್ ಲಾಂಛನದಲ್ಲಿ ಬಿ.ಪಿ.ತ್ಯಾಗರಾಜ್ ಅವರು ಅರ್ಪಿಸುತ್ತಿರುವ ಈ ಚಿತ್ರವನ್ನು ಕೆ.ಮಂಜು ಹಾಗೂ ರಮೇಶ್ ಯಾದವ್ ನಿರ್ಮಾಣ‌ ಮಾಡುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸದಭಿರುಚಿ ಚಿತ್ರಗಳನ್ನು ನಿರ್ಮಾಣ ಮಾಡಿರುವ ಕೆ.ಮಂಜು ಹಾಗೂ ರಮೇಶ್ ಯಾದವ್ ಅವರು ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಮುಂದೆ ಇವರ ಕಾಂಬಿನೇಶನ್ ನಲ್ಲಿ ಸಾಕಷ್ಟು ಚಿತ್ರಗಳು ನಿರ್ಮಾಣವಾಗಲಿದೆ. ಇದನ್ನೂ ಓದಿ:‘ಅರ್ಜುನ್ ರೆಡ್ಡಿ’ ನಿರ್ದೇಶಕನ ಸಿನಿಮಾದಲ್ಲಿ ವಿಜಯ್ ದೇವರಕೊಂಡ

    ನಿರ್ದೇಶಕ ಎಸ್. ನಾರಾಯಣ್ ಚಿತ್ರಕಥೆ, ಸಂಭಾಷಣೆ ಬರೆದು, ಗೀತರಚನೆ ಮಾಡಿರುವ ಈ ಚಿತ್ರಕ್ಕೆ ಜಸ್ಸಿ ಗಿಫ್ಟ್  ಸಂಗೀತ ನೀಡುತ್ತಿದ್ದಾರೆ. ಕುಮಾರ್ ಗೌಡ ಛಾಯಾಗ್ರಹಣ, ಶಿವಪ್ರಸಾದ್ ಯಾದವ್ ಸಂಕಲನ, ಅರ್ಜುನ್ ಸಾಹಸ ನಿರ್ದೇಶನ, ಸಂತು ನೃತ್ಯ ನಿರ್ದೇಶನ ಹಾಗೂ ಆನಂದ್ ಅವರ ಕಲಾ ನಿರ್ದೇಶನ  ಚಿತ್ರಕ್ಕಿದೆ‌.

    ಶ್ರೇಯಸ್ ಮಂಜು ಅವರಿಗೆ ನಾಯಕಿಯಾಗಿ ಬೃಂದಾ ಆಚಾರ್ (Brinda Acharya) ನಟಿಸುತ್ತಿದ್ದಾರೆ. ತಾರಾ ಅನುರಾಧ, ಶರತ್ ಲೋಹಿತಾಶ್ವ, ಸಾಧುಕೋಕಿಲ, ಪ್ರಮೋದ್ ಶೆಟ್ಟಿ, ಕಲ್ಯಾಣಿ, ರಂಗಾಯಣ ರಘು, ಪಾವಗಡ ಮಂಜು, ಜಯರಾಮ್, ಸುಜಯ್ ಶಾಸ್ತ್ರಿ, ಗಿರಿ ಮುಂತಾದವರು ತಾರಾಬಳಗದಲ್ಲಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೊಲೆ ಆರೋಪಿಯನ್ನು ಬಂಧಿಸಲು ಸಹಾಯ ಮಾಡಿದ ತಾರಾಗೆ ಭಾರೀ ಮೆಚ್ಚುಗೆ

    ಕೊಲೆ ಆರೋಪಿಯನ್ನು ಬಂಧಿಸಲು ಸಹಾಯ ಮಾಡಿದ ತಾರಾಗೆ ಭಾರೀ ಮೆಚ್ಚುಗೆ

    ದಾವಣಗೆರೆ: ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಅರೋಪಿಯನ್ನು ಬಂಧಿಸಲು ಡಾಗ್ ಸ್ಕ್ವಾಡ್ ಕ್ರೈಂ ವಿಭಾಗದ ಶ್ವಾನ ತಾರಾ (Dog Thara) ಸಹಾಯ ಮಾಡಿದೆ.

    ಕೊಲೆ ನಡೆದ ಸ್ಥಳದಿಂದ 8 ಕಿಲೋಮೀಟರ್ ಕ್ರಮಿಸಿ ಆರೋಪಿಯನ್ನು ತಾರಾ ಪತ್ತೆ ಮಾಡಿದೆ. ಈ ಮೂಲಕ ಇದೀಗ ತಾರಾಗೆ ಪೊಲೀಸ್ ಇಲಾಖೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.

    ಕಳೆದ ಭಾನುವಾರ ಸೋಮಶೆಟ್ಟಿಹಳ್ಳಿ ಕ್ರಾಸ್ ಬಳಿ ಹಳೆಯ ದ್ವೇಷದ ಹಿನ್ನೆಲೆ ಕೊಲೆ ನಡೆದಿತ್ತು. ನರಸಿಂಹ ಎಂಬಾತನನ್ನು ಶಿವಯೋಗೀಶ್ ಕೊಲೆ ಮಾಡಿದ್ದ. ಕೊಲೆ ಮಾಡಿ ಆರೋಪಿ ಶ್ರೀರಾಮನಗರದಲ್ಲಿರುವ ಮನೆಯಲ್ಲಿ ಅವಿತು ಕೂತಿದ್ದ. ಇತ್ತ ಪೊಲೀಸರು ಆರೋಪಿಯ ಬಂಧನಕ್ಕೆ ಬಲೆ ಬಿಸಿದ್ದರು. ಇದನ್ನೂ ಓದಿ: ಗೂಡ್ಸ್ ವಾಹನ ಡಿಕ್ಕಿಯಾಗಿ ಮಕ್ಕಳಿಬ್ಬರ ದುರ್ಮರಣ

    ಅಂತೆಯೇ ಶ್ವಾನ ತಾರಾ ಆರೋಪಿಯು ಕೊಲೆಗೆ ಬಳಸಿದ್ದ ಕಟ್ಟಿಗೆಯನ್ನು ಮೂಸಿ ನೋಡಿ ಕೊಲೆಗಾರನ ಜಾಡು ಹಿಡಿದಿದೆ. ಈ ಮೂಲಕ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ದಿ ಕೇರಳ ಸ್ಟೋರಿ’ ಸಿನಿಮಾ ಪರ ಬ್ಯಾಟ್ ಬೀಸಿದ ನಟಿ ತಾರಾ

    ‘ದಿ ಕೇರಳ ಸ್ಟೋರಿ’ ಸಿನಿಮಾ ಪರ ಬ್ಯಾಟ್ ಬೀಸಿದ ನಟಿ ತಾರಾ

    ದಾ ಶರ್ಮಾ ನಟನೆಯ ‘ದಿ ಕೇರಳ ಸ್ಟೋರಿ’ (The Kerala Story) ಚಿತ್ರವನ್ನು ಬ್ಯಾನ್ ಮಾಡಬೇಕು ಎಂಬ ಕೂಗು ಜೋರಾಗುತ್ತಿದೆ. ಕಾನೂನು ಪರಿಧಿಯಲ್ಲಿ ಕಟ್ಟಿ ಹಾಕುವ ಪ್ರಯತ್ನ ವಿಫಲವಾಗಿದ್ದರಿಂದ ಕೆಲ ಕಡೆ ಪ್ರತಿಭಟನೆ ಕೂಡ ನಡೆದಿದೆ. ಈ ನಡುವೆಯೇ ಮೇ 05 ರಂದು ಸಿನಿಮಾ ದೇಶದಾದ್ಯಂತ ಬಿಡುಗಡೆ ಆಗುತ್ತಿದೆ. ಈ ಕುರಿತು ಕನ್ನಡದ ನಟಿ, ರಾಷ್ಟ್ರಪ್ರಶಸ್ತಿ ವಿಜೇತೆ ತಾರಾ (Taara) ಪ್ರತಿಕ್ರಿಯೆ ನೀಡಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿರುವ ತಾರಾ, ‘ಸಿನಿಮಾ ಸತ್ಯದ ದರ್ಶನ ಮಾಡಿಸುತ್ತದೆ ಅಂತಾದರೆ ಯಾಕೆ ಬ್ಯಾನ್ ಮಾಡಬೇಕು? ಸಿನಿಮಾದಲ್ಲಿ ಇರುವ ವಿಷಯವು ತಪ್ಪಾಗಿದ್ದರೆ ಅದನ್ನು ಸೆನ್ಸಾರ್ ಮಂಡಳಿಯು ನೋಡಿಕೊಳ್ಳುತ್ತದೆ. ಸತ್ಯ ಯಾವುದು, ಸುಳ್ಳು ಯಾವುದು ಎನ್ನುವುದನ್ನು ನೋಡುಗರು ತೀರ್ಮಾನಿಸುತ್ತಾರೆ’ ಎಂದಿದ್ದಾರೆ. ಇದನ್ನೂ ಓದಿ:ಪಾಲಕ್ ಜೊತೆ ಕಿಸ್ ಮಾಡುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಇಬ್ರಾಹಿಂ ಅಲಿ ಖಾನ್

    ವಿವಾದಕ್ಕೆ ಕಾರಣವಾಗುವಂತಹ ಮತ್ತು ಆಕ್ಷೇಪಕ್ಕೆ ಗುರಿಯಾಗಿರುವ ಹಲವು ದೃಶ್ಯಗಳಿಗೆ ಸೆನ್ಸಾರ್ (Censor) ಮಂಡಳಿಯು ಈಗಾಗಲೇ ಕತ್ತರಿ ಹಾಕಿದೆ. ಬರೋಬ್ಬರಿ 10 ದೃಶ್ಯಗಳಿಗೆ ಕತ್ತರಿ ಹಾಕುವ ಮೂಲಕ ಚಿತ್ರತಂಡಕ್ಕೆ ಶಾಕ್ ನೀಡಿದೆ. ಅಲ್ಲದೇ ಚಿತ್ರಕ್ಕೆ ‘ಎ’ ಪ್ರಮಾಣ ಪತ್ರವನ್ನು ನೀಡಿದೆ. ಮಾಜಿ ಸಿಎಂ ಒಬ್ಬರ ಸಂದರ್ಶನ, ಕೆಲ ಸಂಭಾಷಣೆಗಳು ಹಾಗೂ ಕಮ್ಯುನಿಸ್ಟ್  (Communist)ಪಕ್ಷದವರ ಬಗ್ಗೆ ಆಡಿದ ಮಾತುಗಳಿಗೆ ಸೆನ್ಸಾರ್ ಮಂಡಳಿಯು ಕತ್ತರಿ ಹಾಕಿದೆ.

    ಕಳೆದ ಎರಡು ವಾರಗಳಿಂದ ‘ದಿ ಕೇರಳ ಸ್ಟೋರಿ’ ಸಿನಿಮಾದ ಬಗ್ಗೆ ಸಾಕಷ್ಟು ಪರ ವಿರೋಧದ ಮಾತು ಕೇಳಿ ಬರುತ್ತಿದೆ. ಈ ಸಿನಿಮಾದಲ್ಲಿರುವುದು ಸತ್ಯ ಎಂದು ಚಿತ್ರತಂಡ ಹೇಳಿಕೊಂಡರೆ, ಅದು ಕಪೋಕಲ್ಪಿತ ಕಥೆ ಎಂದು ಹಲವರು ವಾದಿಸುತ್ತಿದ್ದಾರೆ. ಈ ಸಿನಿಮಾ ಪ್ರದರ್ಶನಕ್ಕೆ ತಡೆಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲು ಕೂಡ ಏರಲಾಗಿತ್ತು. ಆದರೆ, ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಳ್ಳಲು ಸುಪ್ರೀಂ ನಿರಾಕರಿಸಿತ್ತು. ಹೈಕೋರ್ಟ್ ಗೆ ಹೋಗಲು ಸೂಚನೆ ನೀಡಿತ್ತು. ಇಷ್ಟೆಲ್ಲ ಬೆಳವಣಿಗೆ ಮಧ್ಯಯೇ ಮತ್ತೊಂದು ಸವಾಲು ಘೋಷಣೆ ಆಗಿದೆ.

    ಈ ಸಿನಿಮಾದಲ್ಲಿಯ ಮಾಹಿತಿಯು ನಿಜ ಅಂತ ಸಾಬೀತು ಪಡಿಸಿದರೆ ಒಂದು ಕೋಟಿ ರೂಪಾಯಿ ಬಹುಮಾನ ಕೊಡುವುದಾಗಿ ಮುಸ್ಲಿಂ (Muslim) ಯೂತ್ ಲೀಗ್ ಕೇರಳ ರಾಜ್ಯ ಕಮಿಟಿಯು ಘೋಷಿಸಿದೆ. ಸಿನಿಮಾದಲ್ಲಿ ಸುಳ್ಳುಗಳ ಸರಮಾಲೆಯೇ ಇದೆ. ಅವರು ಹೇಳುತ್ತಿರುವುದು ನಿಜ ಎಂದು ಸಾಬೀತು ಪಡಿಸಲಿ ಎಂದು ಹೇಳಿಕೆ ನೀಡಿದೆ.

     

  • ಸುತ್ತಿಟ್ಟ ಉಡುಪಿ ಸೀರೆಯ ಸೆರಗಿನೊಳಗಿಂದ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ ನಟಿ ತಾರಾ

    ಸುತ್ತಿಟ್ಟ ಉಡುಪಿ ಸೀರೆಯ ಸೆರಗಿನೊಳಗಿಂದ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ ನಟಿ ತಾರಾ

    ಉಡುಪಿ: ಸೀರೆಯ ಒಳಗಿಟ್ಟು ಮಲ್ಲಿಗೆ ಹೂವನ್ನು ಸುತ್ತಿ ಬಿಜೆಪಿ (BJP Manifesto) ಜಿಲ್ಲಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ ಕೋಟಾ ಶ್ರೀನಿವಾಸ ಪೂಜಾರಿ ಮತ್ತು ನಟಿ ತಾರಾ ಈ ಕಾರ್ಯಕ್ರಮದಲ್ಲಿ ಭಾಗಿಯಾದರು. ಇದೊಂದು ಅಪ್ಯಾಯಮಾನ ಘಟನೆ ಎಂದು ತಾರಾ (Actress Thara) ಹೇಳಿದರು.

    ಭಾರತೀಯ ಜನತಾ ಪಾರ್ಟಿ (BJP) ಉಡುಪಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಪಟ್ಟಂತೆ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಸಮಾಜ ಕಲ್ಯಾಣ- ಹಿಂದುಳಿದ ವರ್ಗಗಳ ಸಚಿವ ಕೋಟಾ ಶ್ರೀನಿವಾಸ ಪೂಜಾರಿ (Kota Srinivas Poojary), ನಟಿ ತಾರಾ ಹಾಗೂ ಬಿಜೆಪಿಯ ಜಿಲ್ಲಾ ನಾಯಕರುಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. 24 ವಿವಿಧ ಯೋಜನೆಗಳ ಪಟ್ಟಿಯನ್ನು ಪ್ರಣಾಳಿಕೆ ಮೂಲಕ ಬಿಜೆಪಿ ಬಿಡುಗಡೆ ಮಾಡಿದೆ. ಇದನ್ನೂ ಓದಿ: ಹನುಮ ಭಕ್ತ ಬಜರಂಗದಳದವರು ಸಿಡಿದು ನಿಂತ್ರೆ ಬೇರು ಸಮೇತ ಕಿತ್ತೋಗ್ತೀರಿ: ಬೊಮ್ಮಾಯಿ

    ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಸರ್ಕಾರಿ ಮೆಡಿಕಲ್ ಕಾಲೇಜು ಕೈಗಾರಿಕಾ ವಲಯ ಕಿರು  ಬಂದರು ಐಟಿ ಪಾರ್ಕ್ ಜೊತೆಗೆ ಪಾರಂಪರಿಕ ಕ್ಷೇತ್ರಗಳ ಕಾರಿಡಾರ್ ಯೋಜನೆ ಜಾರಿಗೆ ತರುವುದಾಗಿ ಭರವಸೆ ನೀಡಿದೆ. ಉಡುಪಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿ ಒಂದು ವಿಶೇಷ ಪ್ರಣಾಳಿಕೆ ಬಿಡುಗಡೆ ಎಂದು ಅನಿಸಿತು. ತಾಯಿಯ ಸೀರೆಯ ಸೆರಗಿನಿಂದ ಪ್ರಣಾಳಿಕೆಯನ್ನು ತೆಗೆದು ಬಿಡುಗಡೆ ಮಾಡಲಾಯಿತು. ನನಗೆ ಬಹಳ ಅಪ್ಯಾಯಮಾನ ಅನ್ನಿಸಿತು. ಸೃಷ್ಟಿ ಮಾಡುವ ಗುಣ ಇರುವುದು ತಾಯಿ ಮತ್ತು ಪ್ರಕೃತಿಗೆ ಮಾತ್ರ. ಅರ್ಥಪೂರ್ಣ ಭಾವ ಆಗಿತ್ತು ಎಂದು ತಾರಾ ಹೇಳಿದರು.

    ಉಡುಪಿ ಜಿಲ್ಲೆ ಅಭಿವೃದ್ಧಿ ಹೊಂದಿದ ಜಿಲ್ಲೆಗಳ ಪಟ್ಟಿಯಲ್ಲಿದೆ ಜಿಲ್ಲೆ ಬೆಳೆದಂತೆ ಮತ್ತಷ್ಟು ಬೇಡಿಕೆಗಳು ಇದ್ದೇ ಇರುತ್ತದೆ. ಈ ಭಾಗದ ಜನರ ಉದ್ಯೋಗ ಶಿಕ್ಷಣ ಆರೋಗ್ಯಕ್ಕೆ ಸಂಬಂಧಪಟ್ಟಂತೆ 24 ವಂಶಗಳ ಪ್ರಣಾಳಿಕೆಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ರಾಜ್ಯ ಮಟ್ಟದಲ್ಲಿ ಪ್ರಣಾಳಿಕೆಯು ಬಿಡುಗಡೆಯಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಒಂದು ಪ್ರಣಾಳಿಕೆಯನ್ನು ಬಿಜೆಪಿ ಬಿಡುಗಡೆ ಮಾಡುತ್ತದೆ ಎಂದರು. ಇದನ್ನೂ ಓದಿ: ಕೆಸರು ಗದ್ದೆಯಲ್ಲಿ ಸಿಲುಕಿದ ಪ್ರಧಾನಿ ಮೋದಿ ಭದ್ರತೆಯ ಸೇನಾ ಹೆಲಿಕಾಪ್ಟರ್‌ – ಮುಂದೇನಾಯ್ತು?

  • ಉಡಾಳ್ ಬಾಬು ಆಗಿದ್ದ ನಟ ಪ್ರಮೋದ್ ಇದೀಗ ‘ಬಾಂಡ್ ರವಿ’ ಅವತಾರ:  ಟೀಸರ್ ಗೆ ಮೆಚ್ಚುಗೆಯ ಮಹಾಪೂರ

    ಉಡಾಳ್ ಬಾಬು ಆಗಿದ್ದ ನಟ ಪ್ರಮೋದ್ ಇದೀಗ ‘ಬಾಂಡ್ ರವಿ’ ಅವತಾರ: ಟೀಸರ್ ಗೆ ಮೆಚ್ಚುಗೆಯ ಮಹಾಪೂರ

    ಸ್ಯಾಂಡಲ್ ವುಡ್ ಅಂಗಳದ ಯುವ ಹಾಗೂ ಪ್ರತಿಭಾನ್ವಿತ ನಾಯಕ ನಟ ಪ್ರಮೋದ್. ರತ್ನನ್ ಪ್ರಪಂಚದಲ್ಲಿ ಉಡಾಳ್ ಬಾಬು ಆಗಿ ಸಿನಿ ಪ್ರೇಕ್ಷಕರ ಮನಸೂರೆಗೊಂಡ ಪ್ರಮೋದ್ ‘ಬಾಂಡ್ ರವಿ’ಯಾಗಿ ತೆರೆ ಮೇಲೆ ಬರೋಕೆ ಸಜ್ಜಾಗಿದ್ದಾರೆ.  ಈ ಚಿತ್ರದ ಇಂಟ್ರಸ್ಟಿಂಗ್ ಹಾಗೂ ಅಷ್ಟೇ ಖಡಕ್ ಆದ ಟೀಸರ್ ಇಂದು ಬಿಡುಗಡೆಯಾಗಿದೆ. ಪ್ರಮೋದ್ ಖಡಕ್ ಅಂಡ್ ಮಾಸ್ ಆಕ್ಟಿಂಗ್ ಎಲ್ಲರ ಗಮನ ಸೆಳೆಯುತ್ತಿದೆ. ಟೀಸರ್ ನೋಡಿದವರು ಬಾಂಡ್ ರವಿ (Bond Ravi) ಬ್ರ್ಯಾಂಡ್ ರವಿ ಆಗೋದ್ರಲ್ಲಿ ಡೌಟೇ ಇಲ್ಲ ಅಂತಿದ್ದಾರೆ. ಟೀಸರ್ (Teaser) ಪತ್ರಕರ್ತರಿಂದ ಬಿಡುಗಡೆಯಾಗಿದ್ದು ವಿಶೇಷ. ಇದಕ್ಕೆ ಕಾರಣ ನಟ ಪ್ರಮೋದ್. ನಾನು ಏನು ಆಗಿಲ್ಲದೆ ಇದ್ದಾಗಿನಿಂದಲೂ ನನ್ನನ್ನು  ಸಪೋರ್ಟ್ ಮಾಡಿಕೊಂಡು ಬಂದವರು ಪತ್ರಕರ್ತರು. ಎಂಟು ವರ್ಷದಿಂದ ನನ್ನ ಪ್ರತಿ ಹೆಜ್ಜೆಯಲ್ಲಿ ಮಾಧ್ಯಮ ಹಾಗೂ ಪತ್ರಕರ್ತ ಮಿತ್ರರ ಸಪೋಟ್ ಬಹಳ ದೊಡ್ಡದು. ಆದ್ದರಿಂದ ಈ ಚಿತ್ರದ ಟೀಸರ್ ಪತ್ರಕರ್ತ ಮಿತ್ರರೇ ಬಿಡುಗಡೆ ಮಾಡಿಕೊಡಬೇಕು ಎಂದು ಪತ್ರಕರ್ತರ ಮೂಲಕ ಟೀಸರ್ ಬಿಡುಗಡೆ ಮಾಡಿಸಿದ್ದು ಬಹಳ ವಿಶೇಷವಾಗಿತ್ತು.

    ‘ಗೀತಾ ಬ್ಯಾಂಗಲ್ ಸ್ಟೋರ್’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ನಾಯಕ ನಟನಾಗಿ ಎಂಟ್ರಿ ಕೊಟ್ಟ ಪ್ರಮೋದ್ (Pramod) ‘ಮತ್ತೆ ಉದ್ಭವ’, ‘ಪ್ರೀಮಿಯರ್ ಪದ್ಮಿನಿ’ ಹಾಗೂ ‘ರತ್ನನ್ ಪ್ರಪಂಚ’ ಸಿನಿಮಾಗಳಲ್ಲಿ ತಮ್ಮ ವಿಶೇಷ ಅಭಿನಯದ ಮೂಲಕ ಅಪಾರ ಮನ್ನಣೆ ಗಳಿಸಿಕೊಂಡಿದ್ದಾರೆ. ‘ಬಾಂಡ್ ರವಿ’ ಸಿನಿಮಾ ಪ್ರಮೋದ್ ಗೆ ಬಿಗ್ ಬ್ರೇಕ್ ನೀಡೋದ್ರಲ್ಲಿ ಡೌಟೇ ಇಲ್ಲ ಎನ್ನುವಂತಿದೆ ಬಿಡುಗಡೆಯಾಗಿರುವ ಪ್ರಾಮಿಸಿಂಗ್ ಟೀಸರ್. ಪಂಚಿಂಗ್  ಹಾಗೂ ಮಾಸ್ ಡೈಲಾಗ್ ಗಳು ಟೀಸರ್ ನಲ್ಲಿ ಗಮನ ಸೆಳೆದಿದ್ದು ಸಿನಿಮಾ ಮೇಲಿನ ಕ್ಯೂರಿಯಾಸಿಟಿಯನ್ನು ಹೆಚ್ಚಿಸಿದೆ. ನಟ ಪ್ರಮೋದ್ ಮಾತನಾಡಿ ನಾನು ಈ ಸಿನಿಮಾವನ್ನು ತುಂಬಾ ಮೆಚ್ಚಿ ಇಷ್ಟಪಟ್ಟು ಮಾಡಿದ್ದೇನೆ. ಈ ಸಿನಿಮಾ ಮೇಲೆ ಕೆಟ್ಟ ನಂಬಿಕೆ ಇದೆ. ಸಿನಿಮಾ ಗೆದ್ದೇ ಗೆಲ್ಲುತ್ತೆ ಅನ್ನೋ ಬಲವಾದ ನಂಬಿಕೆ ಕೂಡ ನನಗಿದೆ. ಅಷ್ಟು ಒಳ್ಳೆಯ ಕಂಟೆಂಟ್, ಕಥೆ ಸಿನಿಮಾದಲ್ಲಿದೆ. ನಾನು ಕೂಡ ಈ ಸಿನಿಮಾ ಮೂಲಕ ದೊಡ್ಡ ಮಟ್ಟದಲ್ಲಿ ಗೆಲ್ಲುತ್ತೇನೆ ಎಂದು ಭರವಸೆಯ ಮಾತುಗಳನ್ನಾಡಿದ್ರು.

    ಸಂಗೀತ ನಿರ್ದೇಶಕ ಮನೋಮೂರ್ತಿ (Manomurthy) ಮಾತನಾಡಿ ನನಗೂ ಈ ಸಿನಿಮಾ ಬಗ್ಗೆ ಅಪಾರ ಭರವಸೆ ಇದೆ. ಮುಂಗಾರು ಮಳೆ ಕೂಡ ಹೀಗೆ ಆರಂಭವಾಗಿದ್ದು, ಅದು ದೊಡ್ಡ ಹಿಟ್ ಆಯ್ತು ಈ ಸಿನಿಮಾ ಕೂಡ ಹಿಟ್ ಆಗುತ್ತೆ. ಪ್ರಮೋದ್ ಮತ್ತು ಕಾಜಲ್ ಕುಂದರ್ ಇಬ್ಬರು ಅಮೋಘವಾಗಿ ನಟಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ರು. ಚಿತ್ರದ ನಟಿ ಕಾಜಲ್ ಕುಂದರ್ ಮಾತನಾಡಿ ನನ್ನ ಮೇಲೆ ನಂಬಿಕೆ ಇಟ್ಟು ಒಳ್ಳೆಯ ಪಾತ್ರವನ್ನು ಕೊಟ್ಟಿದ್ದಕ್ಕೆ  ಚಿತ್ರತಂಡಕ್ಕೆ ತುಂಬಾ ಧನ್ಯವಾದಗಳು. ನನ್ನ ಪಾತ್ರಕ್ಕೆ ನ್ಯಾಯ ಒದಗಿಸಿದ್ದೇನೆ  ಎಂಬ ನಂಬಿಕೆ ಇದೆ. ಪ್ರಮೋದ್ ಅವರ ಜೊತೆ ನಟಿಸಿದ್ದು ತುಂಬಾ ಖುಷಿ ಕೊಟ್ಟಿದೆ ಎಂದ್ರು. ಇದನ್ನೂ ಓದಿ:`ಕಮಲಿ’ ಖ್ಯಾತಿಯ ಅಮೂಲ್ಯಗೌಡರ ಹಾಟ್ ಫೋಟೋ ವೈರಲ್

    ಚಿತ್ರದ ನಿರ್ದೇಶಕ ಪ್ರಜ್ಚಲ್ (Prajwal) ಮಾತನಾಡಿ ಇದು ನನ್ನ ಮೊದಲ ಸಿನಿಮಾ. ಸಿನಿಮಾ ಚೆನ್ನಾಗಿ ಮೂಡಿ ಮುಂದಿದೆ. ಒಂದೊಳ್ಳೆ ಸಿನಿಮಾ ಮಾಡಿದ ತೃಪ್ತಿ ನನಗಿದೆ. ಪ್ರಮೋದ್ ಅವರು ನನಗೆ ಸಿಕ್ಕಿದ್ದು ನನ್ನ ಅದೃಷ್ಟ. ಅವ್ರು ವ್ಯಕ್ತಿಯಾಗಿ, ನಟನಾಗಿ ನನಗೆ ತುಂಬಾ ಸಪೋರ್ಟ್ ಮಾಡಿದ್ದಾರೆ. ನವೆಂಬರ್ ನಲ್ಲಿ ಸಿನಿಮಾ ಬಿಡುಗಡೆಗೆ ಪ್ಲ್ಯಾನ್ ಮಾಡಿದ್ದೇವೆ. ಖಂಡಿತ ಈ ಚಿತ್ರ ಎಲ್ಲರಿಗೂ ಇಷ್ಟವಾಗುತ್ತೆ ಎಂದು ತಮ್ಮ ಸಿನಿಮಾ ಬಗ್ಗೆ ಮನದಾಳದ ಮಾತುಗಳನ್ನ ಹಂಚಿಕೊಂಡ್ರು.

    ಬಾಂಡ್ ರವಿ ಆಕ್ಷನ್ ಲವ್ ಸ್ಟೋರಿ ಸಿನಿಮಾ. ಚಿತ್ರರಂಗದಲ್ಲಿ ಹನ್ನೊಂದು ವರ್ಷಗಳಿಂದ ನಿರ್ದೇಶನ ವಿಭಾಗದಲ್ಲಿ ದುಡಿದ ಅನುಭವ ಇರುವ ಪ್ರಜ್ವಲ್ ಎಸ್.ಪಿ. ಬಾಂಡ್ ರವಿ ಸೂತ್ರಧಾರ.  ನರಸಿಂಹಮೂರ್ತಿ ಲೈಫ್ ಲೈನ್ ಫಿಲಂ ಬ್ಯಾನರ್ ನಡಿ ಬಾಂಡ್ ರವಿ ಸಿನಿಮಾಗೆ ಬಂಡವಾಳ ಹೂಡಿದ್ದು, ಮಲ್ಲಿಕಾರ್ಜುನ್ ಕಾಶಿ ಹಾಗೂ ಝೇವಿಯರ್ ಫರ್ನಾಂಡಿಸ್ ಸಹ ನಿರ್ಮಾಪಕರ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಚಿತ್ರದಲ್ಲಿ ಅಪ್ಪು ಅಭಿಮಾನಿಯಾಗಿ ಪ್ರಮೋದ್ ನಟಿಸಿದ್ದು ಇವರಿಗೆ ಜೋಡಿಯಾಗಿ ಕಾಜಲ್ ಕುಂದರ್ ತೆರೆ ಹಂಚಿಕೊಂಡಿದ್ದಾರೆ.

    ಬೆಂಗಳೂರು, ಶಿವಮೊಗ್ಗ, ಕೊಡಚಾದ್ರಿ, ಕುದುರೆಮುಖ, ಉಡುಪಿ, ಮಂಗಳೂರು ಭಾಗಗಳಲ್ಲಿ ಬಾಂಡ್ ರವಿ ಚಿತ್ರೀಕರಣ ನಡೆಸಲಾಗಿದೆ. ರವಿಕಾಳೆ, ಧರ್ಮ, ವಿಜಯ್ ಚೆಂಡೂರ್, ಶೋಭರಾಜ್ ಚಿತ್ರದ ತಾರಾ ಬಳಗದಲ್ಲಿದ್ದಾರೆ. ಕೆ.ಎಸ್. ಚಂದ್ರಶೇಖರ್ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ, ಸುನೀಲ್ ಮತ್ತು ದೇವ್ ಎನ್, ರಾಜ್ ಸಂಭಾಷಣೆ, ಮನೋಮೂರ್ತಿ ಸಂಗೀತ ಚಿತ್ರಕ್ಕಿದೆ.

    Live Tv
    [brid partner=56869869 player=32851 video=960834 autoplay=true]