Tag: ತಾರತಮ್ಯ

  • ದಲಿತ ಬಾಲಕಿಯರು ಬಡಿಸಿದ ಊಟವನ್ನು ಬಿಸಾಡಿ ಎಂದ ಅಡುಗೆಯವ – ಬಂಧನ

    ದಲಿತ ಬಾಲಕಿಯರು ಬಡಿಸಿದ ಊಟವನ್ನು ಬಿಸಾಡಿ ಎಂದ ಅಡುಗೆಯವ – ಬಂಧನ

    ಜೈಪುರ: ರಾಜಸ್ಥಾನದ ಉದಯಪುರ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಇಬ್ಬರು ದಲಿತ ಬಾಲಕಿಯರಿಗೆ ತಾರತಮ್ಯ ಮಾಡಿದ ಆರೋಪದ ಮೇಲೆ ಅಡುಗೆಯವನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

    ಶುಕ್ರವಾರ ಬರೋಡಿ ಪ್ರದೇಶದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಲಾಲ್ ರಾಮ್ ಗುರ್ಜರ್ ಎಂಬಾತ ತಯಾರಿಸಿದ ಮಧ್ಯಾಹ್ನದ ಊಟವನ್ನು ದಲಿತ ಬಾಲಕಿಯರು ಬಡಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಲಾಲ್ ರಾಮ್, ದಲಿತ ಬಾಲಕಿಯರು ಬಡಿಸಿದ ಊಟವನ್ನು ಎಸೆಯುವಂತೆ ಇತರ ವಿದ್ಯಾರ್ಥಿಗಳಿಗೆ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ವಿದ್ಯಾರ್ಥಿಗಳು ಅಡುಗೆಯವನ ಸೂಚನೆಯನ್ನು ಅನುಸರಿಸಿ ಊಟವನ್ನು ಎಸೆದಿದ್ದಾರೆ. ಈ ಘಟನೆಯ ಬಗ್ಗೆ ಬಾಲಕಿಯರು ತಮ್ಮ ಕುಟುಂಬದ ಸದಸ್ಯರಿಗೆ ತಿಳಿಸಿದ್ದು, ಬಳಿಕ ಅವರು ತಮ್ಮ ಕೆಲವು ಸಂಬಂಧಿಕರೊಂದಿಗೆ ಶಾಲೆಗೆ ಆಗಮಿಸಿ, ಅಡುಗೆಯವನ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಮಂಗಳೂರಿನ ಜನರ ಪ್ರೀತಿ, ಅಕ್ಕರೆಗೆ ವಿನಮ್ರನಾಗಿರುವೆ – ಕನ್ನಡದಲ್ಲೇ ಟ್ವೀಟ್ ಮಾಡಿದ ಮೋದಿ

    ಅಡುಗೆಯವನ ವಿರುದ್ಧ ಗೋಗುಂದ ಪೊಲೀಸ್ ಠಾಣೆಯಲ್ಲಿ ಎಸ್‌ಸಿ ಮತ್ತು ಎಸ್‌ಟಿ(ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ವಿಷಯ ನಿಜವೆಂದು ಕಂಡುಬಂದಿದ್ದರಿಂದ ತ್ವರಿತ ಕ್ರಮ ತೆಗೆದುಕೊಳ್ಳಲಾಗಿದೆ. ದಲಿತ ಬಾಲಕಿಯರು ಊಟವನ್ನು ಬಡಿಸಿದ್ದಕ್ಕೆ ಇತರ ವಿದ್ಯಾರ್ಥಿನಿಯರಿಗೆ ಅದನ್ನು ಎಸೆಯಲು ಹೇಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಅಡುಗೆಯವನು ಯಾವಾಗಲೂ ತಾನೇ ಆಯ್ಕೆ ಮಾಡಿ, ಮೇಲ್ವರ್ಗದ ವಿದ್ಯಾರ್ಥಿಗಳಿಂದ ಊಟವನ್ನು ಬಡಿಸುತ್ತಿದ್ದರು. ಆದರೆ ನಿನ್ನೆ ವಿದ್ಯಾರ್ಥಿಗಳು ಸರಿಯಾಗಿ ಬಡಿಸುತ್ತಿಲ್ಲ ಎಂಬ ಕಾರಣಕ್ಕೆ ದಲಿತ ಬಾಲಕಿಯರಿಗೆ ಊಟ ಬಡಿಸುವಂತೆ ಶಿಕ್ಷಕರೊಬ್ಬರು ಸೂಚನೆ ನೀಡಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಲೈಂಗಿಕ ಕಿರುಕುಳ ಪ್ರಕರಣ – ಮುರುಘಾ ಶ್ರೀಗೆ ಸೋಮವಾರದವರೆಗಿಲ್ಲ ಜಾಮೀನು

    Live Tv
    [brid partner=56869869 player=32851 video=960834 autoplay=true]

  • ಪಂಚಾಯತ್‌ ದಲಿತ ಅಧ್ಯಕ್ಷರು ಕುರ್ಚಿಯಲ್ಲಿ ಕೂರುವಂತಿಲ್ಲ, ಸ್ವಾತಂತ್ರ್ಯ ದಿನ ಧ್ವಜ ಹಾರಿಸುವಂತಿಲ್ಲ: ಸರ್ವೇಯಿಂದ ತಾರತಮ್ಯ ಬೆಳಕಿಗೆ

    ಪಂಚಾಯತ್‌ ದಲಿತ ಅಧ್ಯಕ್ಷರು ಕುರ್ಚಿಯಲ್ಲಿ ಕೂರುವಂತಿಲ್ಲ, ಸ್ವಾತಂತ್ರ್ಯ ದಿನ ಧ್ವಜ ಹಾರಿಸುವಂತಿಲ್ಲ: ಸರ್ವೇಯಿಂದ ತಾರತಮ್ಯ ಬೆಳಕಿಗೆ

    ಚೆನ್ನೈ: ಸ್ಥಳೀಯ ಸಂಸ್ಥೆಗಳಲ್ಲಿ ದಲಿತ ಪ್ರತಿನಿಧಿಗಳು ತಾರತಮ್ಯ ಎದುರಿಸುತ್ತಿದ್ದಾರೆ ಎಂಬ ಸ್ಫೋಟಕ ಮಾಹಿತಿಯನ್ನು ತಮಿಳುನಾಡು ಅಸ್ಪೃಶ್ಯತೆ ನಿರ್ಮೂಲನಾ ಮೋರ್ಚಾ (ಟಿಎನ್‌ಯುಇಎಫ್‌) ನಡೆಸಿದ ಸಮೀಕ್ಷೆ ಬಹಿರಂಗಪಡಿಸಿದೆ.

    ತಮಿಳುನಾಡಿನ 24 ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಲಾಗಿತ್ತು. 386 ಪಂಚಾಯಿತಿಗಳಲ್ಲಿ ದಲಿತ ಸಮುದಾಯದವರು ಅಧ್ಯಕ್ಷರಾಗಿದ್ದು, ಆ ಪೈಕಿ 22 ಮಂದಿ ತಮ್ಮ ಕಚೇರಿಗಳಲ್ಲಿ ಕುರ್ಚಿಯಲ್ಲಿ ಕುಳಿತುಕೊಳ್ಳುವಂತಿಲ್ಲ. ಪಂಚಾಯಿತಿಗಳಲ್ಲಿ ದಲಿತ ಪ್ರತಿನಿಧಿಗಳ ವಿರುದ್ಧ 17 ಬಗೆಯ ತಾರತಮ್ಯಗಳು ಚಾಲ್ತಿಯಲ್ಲಿವೆ. ಇದನ್ನೂ ಓದಿ: ಮನೆ ಬಾಡಿಗೆದಾರರಿಗೆ ಶಾಕ್ – ಹೊಸ ನಿಯಮಗಳ ಪ್ರಕಾರ ಶೇ.18 ರಷ್ಟು ತೆರಿಗೆ ಬರೆ

    ಅನೇಕ ದಲಿತ ಪ್ರತಿನಿಧಿಗಳಿಗೆ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನದಂದು ತ್ರಿವರ್ಣ ಧ್ವಜವನ್ನು ಹಾರಿಸುವ ಹಕ್ಕನ್ನು ನಿರಾಕರಿಸಲಾಗಿದೆ. ಈ ತಾರತಮ್ಯವು ಕೆಲವೆಡೆ ಸ್ಥಳೀಯ ಸಂಸ್ಥೆಯ ಕಚೇರಿಗೆ ಪ್ರವೇಶವನ್ನು ನಿರಾಕರಿಸುವುದನ್ನೂ ಒಳಗೊಂಡಿದೆ ಎಂದು ಸಮೀಕ್ಷೆ ತಿಳಿಸಿದೆ.

    ತಮಿಳುನಾಡು ಅತ್ಯಂತ ಪ್ರಗತಿಪರ ರಾಜ್ಯಗಳಲ್ಲಿ ಒಂದಾಗಿದ್ದು, ಸಾಮಾಜಿಕ ನ್ಯಾಯದ ಭೂಮಿ ಎನ್ನುವ ಮಾತು ಈ ಸಮೀಕ್ಷೆಯೊಂದಿಗೆ ಪ್ರಶ್ನಾರ್ಹವಾಗಿದೆ. ಸ್ಥಳೀಯ ಸಂಸ್ಥೆಗಳಲ್ಲಿ ದಲಿತ ಪ್ರತಿನಿಧಿಗಳು ರಾಜ್ಯದ ಹೆಚ್ಚಿನ ಭಾಗಗಳಲ್ಲಿ ತಾರತಮ್ಯಕ್ಕೆ ಒಳಗಾಗಿದ್ದಾರೆ. ಇದನ್ನೂ ಓದಿ: ಶೀಘ್ರವೇ ಉದ್ಘಾಟನೆಗೊಳ್ಳಲಿದೆ ದೆಹಲಿ-ಕಾಶ್ಮೀರಕ್ಕೆ ಸಂಪರ್ಕ ಕಲ್ಪಿಸುವ ವಿಶ್ವದ ಅತಿ ಎತ್ತರದ ರೈಲ್ವೇ ಸೇತುವೆ

    ಅನೇಕ ಸ್ಥಳೀಯ ಸಂಸ್ಥೆಗಳಲ್ಲಿ ಅವರ ಹೆಸರಿನ ಫಲಕಗಳನ್ನು ಪ್ರದರ್ಶಿಸಲಾಗಿಲ್ಲ. ಕೆಲವು ಪಂಚಾಯಿತಿಗಳಲ್ಲಿ ದಲಿತ ಅಧ್ಯಕ್ಷರಿಗೆ ಕುರ್ಚಿ ಮೇಲೆ ಕುಳಿತುಕೊಳ್ಳಲು ಅವಕಾಶವಿಲ್ಲ. ಇನ್ನು ಕೆಲವೆಡೆ ಅವರ ಕುರ್ಚಿಗಳನ್ನು ತೆಗೆಯಲಾಗಿದೆ. ಕೌನ್ಸಿಲ್‌ ಸಭೆಗಳಲ್ಲಿ ನಿರ್ಣಯಗಳನ್ನು ಅಂತಿಮಗೊಳಿಸಿ ಇತರ ಸದಸ್ಯರು ಅಂಗೀಕರಿಸಿದ ನಂತರ ಅದಕ್ಕೆ ದಲಿತ ಸಮುದಾಯದ ಅಧ್ಯಕ್ಷರ ಸಹಿಯನ್ನು ಪಡೆಯಲಾಗುತ್ತದೆ. ಅಕಸ್ಮಾತ್ ಪಂಚಾಯಿತಿಯ ದಲಿತ ಅಧ್ಯಕ್ಷರು ಸಭೆಯ ಅಧ್ಯಕ್ಷತೆ ವಹಿಸಿದರೆ, ದಲಿತೇತರರು ಅದನ್ನು ಬಹಿಷ್ಕರಿಸುತ್ತಾರೆ.

    ಸಮೀಕ್ಷೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ಆಗಸ್ಟ್ 15 ರಂದು ಪಂಚಾಯತ್ ಅಧ್ಯಕ್ಷರು ರಾಷ್ಟ್ರಧ್ವಜಾರೋಹಣ ಮಾಡಲು ಅನುಕೂಲವಾಗುವಂತೆ ವಿಶೇಷ ಅಧಿಕಾರಿಗಳನ್ನು ನಿಯೋಜಿಸುವಂತೆ ಒತ್ತಾಯಿಸಲು ಟಿಎನ್‌ಯುಇಎಫ್‌ ಮುಂದಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಮಂಗಳಮುಖಿಯರ ವಿಶಿಷ್ಟ ಸ್ವಾತಂತ್ರ್ಯ ದಿನಾಚರಣೆ

    ಮಂಗಳಮುಖಿಯರ ವಿಶಿಷ್ಟ ಸ್ವಾತಂತ್ರ್ಯ ದಿನಾಚರಣೆ

    ಬೆಂಗಳೂರು: ಇಂದು ದೇಶದಾದ್ಯಂತ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ. ಬೆಂಗಳೂರಿನ ಎಲ್.ಆರ್ ಬಂಡೆ ಸರ್ಕಲ್ ನಲ್ಲಿ ಮಂಗಳಮುಖಿಯರು ಧ್ವಜಾರೋಹಣ ಮಾಡಿ ಸಿಹಿ ಹಂಚುವ ಮೂಲಕ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದರು.

    ಬಳಿಕ ಭರವಸೆ ಟ್ರಸ್ಟ್ ಸಹಯೋಗದೊಂದಿಗೆ, ಬಿತ್ತಿ ಪತ್ರಗಳನ್ನು ಪ್ರದರ್ಶಿಸುವ ಮೂಲಕ ಮಂಗಳಮುಖಿಯರ ಬಗ್ಗೆ ತಾರತಮ್ಯ ಧೋರಣೆ ಅನುಸರಿಸದಂತೆ, ಅವರ ಬಗ್ಗೆ ಇರುವ ಮನೋಭಾವ ಬದಲಿಸಿಕೊಳ್ಳುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ನಗರದ ನಾನಾ ಭಾಗದಲ್ಲಿ ನಮ್ಮ ಬದುಕನ್ನು ಮುಕ್ತವಾಗಿ ಬದುಕುವ ಅವಕಾಶವನ್ನು ಸಮಾಜ ನೀಡಲಿ ಎಂದು ಬಿತ್ತಿ ಪತ್ರ ಪ್ರದರ್ಶಿಸಿದರು. ಇದನ್ನೂ ಓದಿ: ಧ್ವಜಾರೋಹಣ ಕಾರ್ಯಕ್ರಮಕ್ಕೆ ಗೋ ಮಾತೆ ಎಂಟ್ರಿ

  • ಹಿಂದೂ ಎಂಬ ಕಾರಣಕ್ಕೆ ಹೀನಾಯವಾಗಿ ನೋಡ್ತಿದ್ರು – ಶೋಯೆಬ್ ಅಖ್ತರ್

    ಹಿಂದೂ ಎಂಬ ಕಾರಣಕ್ಕೆ ಹೀನಾಯವಾಗಿ ನೋಡ್ತಿದ್ರು – ಶೋಯೆಬ್ ಅಖ್ತರ್

    ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಆಡುತ್ತಿದ್ದ ವೇಳೆ ತಂಡದಲ್ಲಿ ಹಿಂದೂ ಕ್ರಿಕೆಟ್ ಆಟಗಾರರನ್ನು ಎಷ್ಟು ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದರು ಎಂಬುವುದನ್ನು ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಬಹಿರಂಗ ಪಡಿಸಿದ್ದಾರೆ.

    ಪಾಕ್ ಕ್ರಿಕೆಟ್ ತಂಡದಲ್ಲಿ ಹೆಚ್ಚಿನ ಆಟಗಾರರು ಧರ್ಮ, ಜಾತಿ, ಪ್ರದೇಶದ ಆಧಾರದ ಮೇಲೆ ತಾರತಮ್ಯ ಮಾಡುತ್ತಿದ್ದರು. ಮಾಜಿ ಆಟಗಾರ ದಾನಿಶ್ ಕನೇರಿಯಾ ಅವರು ಸಾಕಷ್ಟು ತಾರತಮ್ಯಕ್ಕೆ ಒಳಗಾಗಿದ್ದಾರೆ. ಅವರೊಂದಿಗೆ ಕುಳಿತು ಊಟ ಮಾಡಲು ಕೂಡ ಆಟಗಾರರು ಇಷ್ಟ ಪಡುತ್ತಿರಲಿಲ್ಲ. ಇಡೀ ತಂಡ ಇದೇ ರೀತಿ ವರ್ತಿಸುತಿತ್ತು. ಅದರಲ್ಲೂ ಹೆಚ್ಚಿನ ಆಟಗಾರರು ಈ ರೀತಿ ಇದ್ದರು ಎಂದು ಅಖ್ತರ್ ಹೇಳಿದ್ದಾರೆ.

    ಯಾವಾಗಲೂ ನಿನ್ನ ಧರ್ಮ ಯಾವುದು? ಪ್ರದೇಶ ಯಾವುದು? ಎಂದು ಮಾತನಾಡುತ್ತಿದ್ದರು. ಕರಾಚಿ, ಪಂಜಾಬ್, ಪೇಜಾವರ್ ಪ್ರದೇಶಕ್ಕೆ ಸೇರಿದವರಾ ಎಂದು ಹೆಚ್ಚು ಚರ್ಚೆ ಮಾಡುತ್ತಿದ್ದರು. ಅದರಲ್ಲೂ ಮೂವರು ಆಟಗಾರರು ಹೆಚ್ಚು ಈ ರೀತಿ ವರ್ತಿಸುತ್ತಿದ್ದರು. ಹಿಂದೂ ಎಂಬ ಕಾರಣಕ್ಕೆ ದಾನಿಶ್ ರನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದರು. ಆದರೆ ಅಂದು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯವನ್ನು ಆತನಿಂದಲೇ ಗೆಲುವು ಪಡೆದಿದ್ದೆವು. ಆತ ತಂಡದಲ್ಲಿರದಿದ್ದರೆ ಖಂಡಿತಾ ಪಂದ್ಯವನ್ನು ಕಳೆದುಕೊಳ್ಳುತ್ತಿದ್ದೆವು. ಆದರೆ ಆತನಿಗೆ ಲಭಿಸಬೇಕಾದ ಗೌರವ ಮಾತ್ರ ಲಭಿಸಲಿಲ್ಲ ಎಂದಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ದಾನಿಶ್ ಕನೇರಿಯಾ, ಅಖ್ತರ್ ಹೇಳಿರುವುದು ಸತ್ಯ. ಆತ ಒಬ್ಬ ಲೆಜೆಂಡ್ ಆಟಗಾರ. ನನಗೆ ಯಾವಾಗಲೂ ಬೆಂಬಲವಾಗಿ ನಿಂತಿರುತ್ತಿದ್ದ. ಆದರೆ ಆ ಸಮಯದಲ್ಲಿ ತಂಡದ ಇತರೆ ಆಟಗಾರರು ತಾರತಮ್ಯ ಮಾಡುತ್ತಿದ್ದರು. ಅಖ್ತರ್ ರೊಂದಿಗೆ ಕೆಲ ಆಟಗಾರರು ಕೂಡ ಬೆಂಬಲ ನೀಡಿದ್ದಾರೆ. ಶೀಘ್ರದಲ್ಲೇ ನನ್ನ ವಿರುದ್ದ ತಾರತಮ್ಯ ನಡೆಸಿದ ಆಟಗಾರರ ಹೆಸರುಗಳನ್ನು ಬಹಿರಂಗ ಪಡಿಸುತ್ತೇನೆ ಎಂದಿದ್ದಾರೆ. ಅಲ್ಲದೇ ಪಾಕ್ ಪರ ಆಡುವುದು ಅದೃಷ್ಟವಾಗಿದ್ದು, ಅದನ್ನು ಗೌರವಿಸುತ್ತೇನೆ ಎಂದಿದ್ದಾರೆ.

    ಪಾಕಿಸ್ತಾನ ಪರ ಅಂತರ್ ರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಆಡಿದ 2ನೇ ಆಟಗಾರ ದಾನಿಶ್ ಆಗಿದ್ದು, ಅನಿಲ್ ದಲ್ಪತ್ ಮೊದಲ ಆಟಗಾರ. ದಾನಿಶ್ ಪಾಕ್ ಪರ 61 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 261 ವಿಕೆಟ್ ಪಡೆದಿದ್ದರೆ. ಏಕದಿನ ಕ್ರಿಕೆಟ್ ನಲ್ಲಿ 18 ಪಂದ್ಯಗಳಿಂದ 15 ವಿಕೆಟ್ ಗಳಿಸಿದ್ದಾರೆ.