Tag: ತಾರಕ್‌ ಸಿನಿಮಾ

  • ದರ್ಶನ್ ನಿರಪರಾಧಿಯಾಗಿ ಹೊರ ಬರಲಿ, ನ್ಯಾಯದ ಬಗ್ಗೆ ನಂಬಿಕೆಯಿದೆ: ನಟಿ ಯಮುನಾ

    ದರ್ಶನ್ ನಿರಪರಾಧಿಯಾಗಿ ಹೊರ ಬರಲಿ, ನ್ಯಾಯದ ಬಗ್ಗೆ ನಂಬಿಕೆಯಿದೆ: ನಟಿ ಯಮುನಾ

    ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Murder Case) ಪ್ರಕರಣದಲ್ಲಿ ಆರೋಪಿಯಾಗಿ ದರ್ಶನ್ ಅರೆಸ್ಟ್ ಆಗಿದ್ದಾರೆ. ಈ ಬೆನ್ನಲ್ಲೇ ದರ್ಶನ್ ಪ್ರಕರಣದ ಕುರಿತು ನಟಿ ಯಮುನಾ ಪ್ರತಿಕ್ರಿಯೆ ನೀಡಿದ್ದಾರೆ. ದರ್ಶನ್ (Darshan) ನಿರಪರಾಧಿಯಾಗಿ ಹೊರಗೆ ಬರಲಿ ಎಂದು ನಟಿ ಮಾತನಾಡಿದ್ದಾರೆ. ಇದನ್ನೂ ಓದಿ:ದರ್ಶನ್ ಘಟನೆ ಕೇಳಿದ್ಮೇಲೆ ಶಾಕ್ ಆಯ್ತು: ‘ತಾರಕ್‌’ ನಟಿ ಶಾನ್ವಿ ಶ್ರೀವಾತ್ಸವ್

    ಈ ಘಟನೆ ಅವರಿಂದ ಆಗಿದೆ ಅಂದರೆ ನಂಬೋಕೆ ಆಗುತ್ತಿಲ್ಲ. ನಿರಪರಾಧಿಯಾಗಿ ಹೊರ ಬಂದರೆ ಸಾಕು. ಏನೇ ಇದ್ರೂ ನ್ಯಾಯದ ಕುರಿತು ನಂಬಿಕೆ ಇದೆ ಎಂದು ನಟಿ ಯಮುನಾ ಶ್ರೀನಿಧಿ ಮಾತನಾಡಿದ್ದಾರೆ. ಸದ್ಯ ದರ್ಶನ್ ಅವರು ವಿಚಾರಣೆಯಲ್ಲಿದ್ದಾರೆ ಆರೋಪಿ ಸ್ಥಾನದಲ್ಲಿದ್ದಾರೆ. ಎಲ್ಲರೂ ಅವರವರ ಕೆಲಸ ಮಾಡ್ತಿದ್ದಾರೆ. ನನ್ನ ಅಭಿಪ್ರಾಯ ಇಲ್ಲಿ ಶೂನ್ಯ. ರೇಣುಕಾಸ್ವಾಮಿ ಕೊಲೆ ಯಾರೇ ಮಾಡಿದ್ರೂ ಅದು ತಪ್ಪೇ. ನ್ಯಾಯಾಲಯದಿಂದ ಅಧಿಕೃತ ತೀರ್ಪು ಬಂದ್ಮೇಲೆ ಇವರೇ ಮಾಡಿದ್ದು ಎಂದು ನಂಬುತ್ತೇನೆ. ಎಲ್ಲದಕ್ಕಿಂತ ದೊಡ್ಡದು ನ್ಯಾಯಾಲಯ, ಅದಕ್ಕೆ ಎಲ್ಲರೂ ತಲೆ ಬಾಗಲೇಬೇಕು. ಈ ಕೃತ್ಯ ನಡೆಯಬಾರದಿತ್ತು. ಆದರೆ ನಡೆದಿದೆ. ಅದರ ಬಗ್ಗೆ ನೋವಿದೆ ಎಂದು ನಟಿ ಯಮುನಾ (Actress Yamuna Srinidhi) ಮಾತನಾಡಿದ್ದಾರೆ.

    ನಾನು ‘ತಾರಕ್’ (Tarak Film) ಚಿತ್ರದಲ್ಲಿ ದರ್ಶನ್ ಜೊತೆ ಅಭಿನಯಿಸಿದ್ದೇನೆ. ಮಲೇಷಿಯಾದಲ್ಲಿ ಶೂಟಿಂಗ್ ಇತ್ತು. ಸೆಟ್‌ನಲ್ಲಿ ತುಂಬಾ ಚೆನ್ನಾಗಿರುತ್ತಿದ್ದ ವ್ಯಕ್ತಿತ್ವ ದರ್ಶನ್ ಅವರದ್ದು, ತಾನು ದೊಡ್ಡ ಸ್ಟಾರ್ ಅಂತ ಎಂದಿಗೂ ಧಿಮಾಕು ತೋರಿಸಿಲ್ಲ. ಈ ಘಟನೆ ನಡೆಯೋಕೂ ಮುನ್ನ 15 ದಿನದ ಹಿಂದೆ ಮೈಸೂರಿನಲ್ಲಿ ದರ್ಶನ್‌ರನ್ನು ಭೇಟಿಯಾಗಿದ್ದೆ. 7 ವರ್ಷದ ಬಳಿಕವೂ ಗುರುತಿಸಿ ಮಾತನಾಡಿಸಿದರು ಅವರು ಎಂದು ನಟಿ ಮಾತನಾಡಿದ್ದಾರೆ.

    ಅಂದಹಾಗೆ, 2017ರಲ್ಲಿ ದರ್ಶನ್ ನಟನೆಯ ‘ತಾರಕ್’ ಸಿನಿಮಾದಲ್ಲಿ ಯುಮುನಾ ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ. ಅಶ್ವಿನಿ ನಕ್ಷತ್ರ ಸೀರಿಯಲ್ ಸೇರಿದಂತೆ ಹಲವು ಸೀರಿಯಲ್ ಮತ್ತು ಸಿನಿಮಾದಲ್ಲಿ ನಟಿಸಿದ್ದಾರೆ.

  • ದರ್ಶನ್ ಘಟನೆ ಕೇಳಿದ್ಮೇಲೆ ಶಾಕ್ ಆಯ್ತು: ‘ತಾರಕ್‌’ ನಟಿ ಶಾನ್ವಿ ಶ್ರೀವಾತ್ಸವ್

    ದರ್ಶನ್ ಘಟನೆ ಕೇಳಿದ್ಮೇಲೆ ಶಾಕ್ ಆಯ್ತು: ‘ತಾರಕ್‌’ ನಟಿ ಶಾನ್ವಿ ಶ್ರೀವಾತ್ಸವ್

    ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Murder Case) ಪ್ರಕರಣದಲ್ಲಿ ಸ್ಯಾಂಡಲ್‌ವುಡ್ ಖ್ಯಾತ ನಟ ದರ್ಶನ್ (Darshan) ಅರೆಸ್ಟ್ ಆಗಿದ್ದಾರೆ. ಈಗ ದರ್ಶನ್ ಪ್ರಕರಣದ ಬಗ್ಗೆ ತಾರಕ್ ನಟಿ ಶಾನ್ವಿ (Shanvi Srivastava) ರಿಯಾಕ್ಟ್ ಮಾಡಿದ್ದಾರೆ. ದರ್ಶನ್ ಘಟನೆ ಕೇಳಿದ್ಮೇಲೆ ಶಾಕ್ ಆಯ್ತು ಎಂದು ನಟಿ ಮಾತನಾಡಿದ್ದಾರೆ. ಇದನ್ನೂ ಓದಿ:ಶಿವರಾಜ್‌ಕುಮಾರ್, ಹೇಮಂತ್ ರಾವ್ ಹೊಸ ಚಿತ್ರಕ್ಕೆ ಟೈಟಲ್ ಫಿಕ್ಸ್

    ಅವರ ಜೊತೆ ‘ತಾರಕ್’ ಸಿನಿಮಾದಲ್ಲಿ ಅಭಿನಯಿಸಿದ ಅನುಭವ ಚೆನ್ನಾಗಿತ್ತು. ಅಷ್ಟು ದೊಡ್ಡ ಸ್ಟಾರ್ ಅವರ ಜೊತೆ ನಟಿಸಿದ್ದು, ಖುಷಿಯಿದೆ. ನನಗೆ ತುಂಬಾ ಗೌರವ ಕೊಡ್ತಾ ಇದ್ದರು. ಅದು ಬಿಟ್ಟು ವೈಯಕ್ತಿಕ ವಿಚಾರ ನನಗೆ ಗೊತ್ತಿಲ್ಲ. ದರ್ಶನ್ ಈ ಘಟನೆ ಕೇಳಿ ಶಾಕ್ ಆಯ್ತು. ಈ ಪ್ರಕರಣದ ಕುರಿತು ನಾನು ಕಾಮೆಂಟ್ ಮಾಡೋದು ಸರಿಯಲ್ಲ. ನನಗೆ ಸಂಬಂಧಿಸಿಲ್ಲದ ಪ್ರಕರಣದ ಮಾತನಾಡಲ್ಲ ಎಂದು ನಟಿ ಮಾತನಾಡಿದ್ದಾರೆ. ಇದನ್ನೂ ಓದಿ:‘ಪುಷ್ಪ 2’ ಹಾಡಿಗೆ ಸೊಂಟ ಬಳುಕಿಸಿದ ಆಶಿಕಾ ರಂಗನಾಥ್

    ನಾನು ಸೋಶಿಯಲ್ ಮೀಡಿಯಾ ಯೂಸ್ ಮಾಡೋವಾಗ ಕೆಟ್ಟ ಕಾಮೆಂಟ್ ಒಳ್ಳೆಯ ಕಾಮೆಂಟ್ ಬರುತ್ತದೆ. ಆದರೆ ಒಳ್ಳೆಯ ಕಾಮೆಂಟ್ ಜಾಸ್ತಿ ಇರುತ್ತಲ್ಲ ಅದರ ಬಗ್ಗೆ ಗಮನ ಕೊಡ್ತೀನಿ. ಕೆಟ್ಟ ಕಾಮೆಂಟ್‌ಗಳಿಗೆ ಜಾಸ್ತಿ ತಲೆ ಕೆಡಿಸಿಕೊಂಡರೆ ಸಮಯ ವ್ಯರ್ಥವಾಗುತ್ತದೆ. ದರ್ಶನ್ ಅವರು ಆದಷ್ಟು ಬೇಗ ಈ ಪ್ರಕರಣದಿಂದ ಹೊರ ಬರಲಿ ಅಂತ ಆಶಿಸುತ್ತೇನೆ ಎಂದು ಶಾನ್ವಿ ಮಾತನಾಡಿದ್ದಾರೆ.

    ಅಂದಹಾಗೆ, 2017ರಲ್ಲಿ ದರ್ಶನ್ ನಟನೆಯ ‘ತಾರಕ್’ ಸಿನಿಮಾದಲ್ಲಿ ಶಾನ್ವಿ ನಾಯಕಿಯಾಗಿ ನಟಿಸಿದ್ದರು. ಇಬ್ಬರ ಕಾಂಬಿನೇಷನ್ ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗಿತ್ತು.