Tag: ತಾಯಿ. ಮಗು

  • ಹಸುವಿನ ಹೊಟ್ಟೆ ಮೇಲೆ ತಾಯಿ, ಮಗುವಿನ ಆರೈಕೆಯ ಚಿತ್ರ

    ಹಸುವಿನ ಹೊಟ್ಟೆ ಮೇಲೆ ತಾಯಿ, ಮಗುವಿನ ಆರೈಕೆಯ ಚಿತ್ರ

    ಬೆಳಗಾವಿ(ಚಿಕ್ಕೋಡಿ): ಸಾಮಾನ್ಯವಾಗಿ ಕಪ್ಪು-ಬಿಳುಪು ಬಣ್ಣವಿರುವ ಹಸುವಿನ ಮೇಲೆ ನಾನಾ ರೀತಿಯ ಚಿತ್ರಗಳು ಕಾಣಸಿಗುತ್ತವೆ. ಇದೀಗ ಇಂತದ್ದೇ ಹಸುವಿನ ಹೊಟ್ಟೆ ಮೇಲೆ ತಾಯಿ ಮಗುವನ್ನ ಆರೈಕೆ ಮಾಡುವ ಹೋಲಿಕೆಯ ಚಿತ್ರವೊಂದು ಮೂಡಿ ಗಮನ ಸೆಳೆದಿದೆ.

    ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ರೈತ ರಾಹುಲ್ ಜಾಧವ್ ಅವರಿಗೆ ಸೇರಿದ ಹಸುವಿನ ಹೊಟ್ಟೆಯ ಮೇಲೆ ಈ ರೀತಿಯ ಚಿತ್ರ ಮೂಡಿದ್ದು, ಅಚ್ಚರಿಗೆ ಕಾರಣವಾಗಿದೆ. ಅಲ್ಲದೆ ಇದನ್ನು ನೋಡಲು ಜನರು ದೌಡಾಯಿಸುತ್ತಿದ್ದಾರೆ.

    ಮೂಲತಃ ಕೃಷಿ ಜೊತೆಗೆ ಹೈನುಗಾರಿಕೆ ಮಾಡುವ ಜಾಧವ್ ಕುಟುಂಬ ನಾಲ್ಕು ವರ್ಷಗಳ ಹಿಂದೆ ಮಹಾರಾಷ್ಟ್ರದ ಮೀರಜ್ ಜಾನುವಾರು ಮಾರುಕಟ್ಟೆಯಿಂದ ಬಿಳಿ – ಕಪ್ಪು ಬಣ್ಣದ ಜರ್ಸಿ ಪ್ರಬೇಧದ ಹಸುವನ್ನು ತಂದಿದ್ದರು. ಕಳೆದ ಮೂರು ವರ್ಷಗಳಿಂದ ಹೊಟ್ಟೆಯ ಮೇಲೆ ಈ ರೀತಿ ಹಚ್ಚೆ ಮೂಡಲು ಆರಂಭವಾಗಿ ದಿನ ಕಳೆದಂತೆಯೇ ಈಗ ಸಂಪೂರ್ಣವಾಗಿ ಮಹಿಳೆ ಕುಳಿತುಕೊಂಡು ಮಗುವನ್ನ ಆರೈಕೆ ಮಾಡುವ ರೀತಿಯ ಚಿತ್ರ ಸ್ಪಷ್ಟವಾಗಿ ಕಾಣುತ್ತಿದೆ.

    ಈ ರೀತಿಯ ಅಚ್ಚರಿಯ ಚಿತ್ರ ಮೂಡಿರುವ ಕಾರಣ ಇದೀಗ ಹೆಚ್ಚಿನ ಸಂಖ್ಯೆಯ ಜನರು ಬಂದು ಈ ಅಚ್ಚರಿಯನ್ನ ಕಣ್ಣು ತುಂಬಿ ಕೊಳ್ಳುತ್ತಿದ್ದಾರೆ.

  • ಅಕ್ರಮ ಸಂಬಂಧದಿಂದ ಮಗು ಜನನ- ಕತ್ತು ಹಿಸುಕಿ ಕೊಂದ ತಾಯಿ

    ಅಕ್ರಮ ಸಂಬಂಧದಿಂದ ಮಗು ಜನನ- ಕತ್ತು ಹಿಸುಕಿ ಕೊಂದ ತಾಯಿ

    ಗಾಂಧಿನಗರ: ಅಕ್ರಮ ಸಂಬಂಧದಿಂದ ಜನಿಸಿದ ಒಂದೂವರೆ ತಿಂಗಳ ಮಗುವನ್ನು ಕೊಂದು ಕಾಲುವೆಗೆ ಬಿಸಾಡಿದ್ದ ತಾಯಿಯನ್ನು ಬಂಧಿಸುವಲ್ಲಿ ಗುಜರಾತಿನ ಪೊಲೀಸರು ಯಶಸ್ವಿಯಾಗಿದ್ದಾರೆ.

    ಮಗುವಿನ ಮೃತ ದೇಹ ಮೇ 23ರಂದು ಕೈರಾ ಜಿಲ್ಲೆಯ ಕಾಲುವೆ ಬಳಿ ಪತ್ತೆಯಾಗಿತ್ತು. ಈ ಪ್ರಕರಣವನ್ನು ಕೈಗೆತ್ತಿಕೊಂಡ ಪೊಲೀಸರು, ಸುತ್ತಮುತ್ತಲಿನ ಆಸ್ಪತ್ರೆಯಲ್ಲಿ ಜನನ ದಾಖಲಾತಿಗಳನ್ನು ಪರಿಶೀಲನೆ ಮಾಡುವಾಗ ಈ ಮಗು ನಾಡಿಯಾಡ್‍ನ ಸಿವಿಲ್ ಆಸ್ಪತ್ರೆಯಲ್ಲಿ ಜನಿಸಿದೆ ಇದರ ತಾಯಿ ಆಶಾ ರಾಥೋಡ್ ಎಂದು ತಿಳಿದು ಬಂದಿದೆ.

    ಈ ವಿಚಾರದ ಬಗ್ಗೆ ಮಾತನಡಿರುವ ಕ್ಯಾಥ್ಲಾನ್ ಪೊಲೀಸ್ ಠಾಣೆಯ ಅಧಿಕಾರಿ ಡಿ.ಕೆ ರಾಲ್, ಈ ಮಹಿಳೆಗೆ 2009ರಲ್ಲಿ ವಿವಾಹವಾಗಿದ್ದು, ಆಗಲೇ ಇಬ್ಬರು ಮಕ್ಕಳಿದ್ದಾರೆ. ಆದರೆ ಪತಿಯೊಂದಿಗೆ ವಿಚ್ಛೇದನ ಬಯಸಿದ್ದ ಆಶಾ 2015 ರಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು ಎಂದು ಹೇಳಿದ್ದಾರೆ.

    ಆಸ್ಪತ್ರೆಯಿಂದ ದಾಖಲೆ ಪಡೆದ ಪೊಲೀಸರು ಆರೋಪಿ ಮನೆಗೆ ಹೋಗಿ ಮಗು ಎಲ್ಲಿ ಎಂದು ವಿಚಾರಿಸಿದ್ದಾರೆ. ಈ ವೇಳೆ ಸುಳ್ಳು ಮಾಹಿತಿ ನೀಡಲು ಮುಂದಾದ ಆಶಾ ರಾಥೋಡ್ ನನ್ನು ಮಗು ಕಾಯಿಲೆಯಿಂದ ಬಳಲುತ್ತಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ ಎಂದು ಹೇಳಿದ್ದಾಳೆ. ಪೊಲೀಸರ ನಿರಂತರ ವಿಚಾರಣೆಯ ನಂತರ ಆ ಮಗು ಅಕ್ರಮ ಸಂಬಂಧದಿಂದ ಜನಿಸಿತ್ತು. ಸಮಾಜದಲ್ಲಿ ಅದನ್ನು ಮುಚ್ಚಿಡಲು ನಾನೇ ಮಗುವನ್ನು ಕತ್ತು ಹಿಸುಕಿ ಕೊಂದು ನಂತರ ಕಾಲುವೆಯಲ್ಲಿ ಬಿಸಾಡಿ ಬಂದೆ ಎಂದು ಒಪ್ಪಿಕೊಂಡಿದ್ದಾಳೆ.

    ಈಗ ಆಶಾ ರಾಥೋಡ್ ಮೇಲೆ ಕೊಲೆ ಕೇಸ್ ಹಾಕಲಾಗಿದ್ದು, ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.