Tag: ತಾಯಿ-ಮಗ

  • ತಾಯಿಯ ಅಂತ್ಯಕ್ರಿಯೆ ಮುಗಿಸಿ ಮನೆಗೆ ಬರುತ್ತಲೇ ಮಗ ಹೃದಯಾಘಾತದಿಂದ ಸಾವು

    ತಾಯಿಯ ಅಂತ್ಯಕ್ರಿಯೆ ಮುಗಿಸಿ ಮನೆಗೆ ಬರುತ್ತಲೇ ಮಗ ಹೃದಯಾಘಾತದಿಂದ ಸಾವು

    ಶಿವಮೊಗ್ಗ: ಮೃತ ತಾಯಿಯ (Mother) ಅಂತ್ಯಕ್ರಿಯೆ (Funeral) ನೆರವೇರಿಸಿ, ಮನೆಗೆ ಬರುತ್ತಿದ್ದಂತೆ ಮಗ (Son) ಕೂಡಾ ಮೃತಪಟ್ಟಿರುವ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನ ಸುಳಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲ್ಲುಸಾಲೆ ಗ್ರಾಮದಲ್ಲಿ ಕಳೆದ ಶನಿವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಹುಲ್ಲುಸಾಲೆ ಗ್ರಾಮದ ಚಿನ್ನಮ್ಮ (78) ಕಳೆದ ಶನಿವಾರ ವಯೋಸಹಜವಾಗಿ ಸಾವನ್ನಪ್ಪಿದ್ದರು. ತಾಯಿಯ ಅಂತ್ಯ ಸಂಸ್ಕಾರವನ್ನು ಮಗ ತಿಮ್ಮಪ್ಪಗೌಡ (58) ಭಾನುವಾರದಂದು ನೆರವೇರಿಸಿದ್ದರು. ಅಂತ್ಯ ಸಂಸ್ಕಾರ ಮುಗಿಸಿಕೊಂಡು ಮನೆಗೆ ಬಂದ ಅರ್ಧಗಂಟೆ ಸಮಯದಲ್ಲೇ ತಿಮ್ಮಪ್ಪಗೌಡ ಹೃದಯಾಘಾತದಿಂದ (Heart Attack) ಮೃತಪಟ್ಟಿದ್ದಾರೆ. ಇದನ್ನೂ ಓದಿ: ಕಾಲು ಜಾರಿ ತೊಡಿಕಾನ ಜಲಪಾತಕ್ಕೆ ಬಿದ್ದು ಅರಣ್ಯ ವೀಕ್ಷಕ ಸಾವು

    ತಿಮ್ಮಪ್ಪಗೌಡ ತನ್ನ ತಾಯಿಯನ್ನು ಬಹಳ ಪ್ರೀತಿಸುತ್ತಿದ್ದು, ತಾಯಿ ಮೃತಪಟ್ಟ ನಂತರ ತೀವ್ರವಾಗಿ ನೊಂದಿದ್ದರು. ಹೀಗಾಗಿಯೇ ಹೃದಯಾಘಾತ ಆಗಿರಬಹುದು ಎನ್ನಲಾಗುತ್ತಿದೆ. ಒಂದೇ ಮನೆಯಲ್ಲಿ 2 ದಿನದ ಅಂತರದಲ್ಲಿ ತಾಯಿ ಮಗ ಮೃತಪಟ್ಟಿರುವುದು ಕುಟುಂಬಕ್ಕಷ್ಟೇ ಅಲ್ಲದೇ ಗ್ರಾಮಸ್ಥರಿಗೂ ದುಃಖ ಉಂಟುಮಾಡಿದೆ. ಇದನ್ನೂ ಓದಿ: ಕುದಿಯುತ್ತಿರುವ ಸಾಂಬಾರ್‌ ಪಾತ್ರೆಗೆ ಬಿದ್ದು ಬಾಲಕ ಸಾವು

    Live Tv
    [brid partner=56869869 player=32851 video=960834 autoplay=true]

  • ಗೋಡೆಗೆ ಬಡಿದು ತಾಯಿಯನ್ನೇ ಕೊಂದ ಪಾಪಿ ಮಗ

    ಗೋಡೆಗೆ ಬಡಿದು ತಾಯಿಯನ್ನೇ ಕೊಂದ ಪಾಪಿ ಮಗ

    ತಿರುವನಂತಪುರಂ: ವ್ಯಕ್ತಿಯೊಬ್ಬ ತನ್ನ ಸ್ವಂತ ತಾಯಿಯೊಂದಿಗೆ ಜಗಳವಾಡಿ ಕೋಪದಲ್ಲಿ ಗೋಡೆಗೆ ಬಡಿದು ಕೊಂದಿರುವ ಘಟನೆ ಕೊಚ್ಚಿಯ ಮುವಾಟ್ಟುಪುಳದ ಪಲ್ಲಿಚಿರಂಗರಾದಲ್ಲಿ ನಡೆದಿದೆ.

    ಆರೋಪಿ ಮನೋಜ್(46) ತನ್ನ ತಾಯಿ ಶಾಂತಮ್ಮ ನೆರೆಹೊರೆಯವರ ಮುಂದೆ ತನ್ನ ಬಗ್ಗೆ ಅನಗತ್ಯ ವಿಚಾರಗಳನ್ನು ಹೇಳುತ್ತಿರುತ್ತಾರೆ ಎಂಬ ಕಾರಣಕ್ಕೆ ಜಗಳವಾಡಿ ಹತ್ಯೆ ಮಾಡಿದ್ದಾನೆ. ಇದನ್ನೂ ಓದಿ: ಅಧಿಕಾರಕ್ಕೆ ಬಂದ್ರೆ ಟ್ರಿಪಲ್‌ ರೈಡಿಂಗ್‌ಗೆ ಅವಕಾಶ: SBSP ಭರವಸೆ

    ಫೆಬ್ರವರಿ 5 ರ ರಾತ್ರಿ ಮನೋಜ್ ತಾಯಿ ಶಾಂತಮ್ಮ ಅವರ ಮೇಲೆ ಕೋಪಗೊಂಡು ಜಗಳ ಪ್ರಾರಂಭಿಸಿದ್ದಾನೆ. ತಾಯಿ-ಮಗನ ನಡುವಿನ ಜಗಳ ವಿಕೋಪಕ್ಕೆ ತಿರುಗಿತ್ತು. ಕೋಪದ ಭರದಲ್ಲಿ ಮನೋಜ್ ತಾಯಿಯ ಮುಖವನ್ನು ಅಡುಗೆಮನೆ ಗೋಡೆಗೆ ಹೊಡೆದಿದ್ದಾನೆ. ತಾಯಿ ಸಾಯುವವರೆಗೂ ಮುಖಕ್ಕೆ ಹಲ್ಲೆ ಮಾಡಿದ್ದ ಎಂದು ಆರೋಪಿಸಲಾಗಿದೆ.

    ಬಳಿಕ ಆರೋಪಿ ಸಾಕ್ಷ್ಯಗಳನ್ನು ನಾಶಪಡಿಸಲು ಯತ್ನಿಸಿದ್ದಾನೆ. ತಾಯಿಯನ್ನು ಕೊಂದ ಬಳಿಕ ಗೋಡೆಗೆ ಅಂಟಿದ್ದ ರಕ್ತದ ಕಲೆಯನ್ನು ಒರೆಸಿ ಸ್ವಚ್ಛಗೊಳಿಸಿದ್ದಾನೆ. ತಾನು ಎಸಗಿರುವ ಕೃತ್ಯ ಯಾರಿಗೂ ತಿಳಿಯಬಾರದೆಂದು ಮರುದಿನ ಬೆಳಗ್ಗೆ ತಾಯಿ ಎದ್ದೇಳುತ್ತಿಲ್ಲ, ಒಂದು ಬಾರಿ ಪರೀಕ್ಷಿಸಿ ಎಂದು ನೆರೆಹೊರೆಯವರನ್ನು ಕರೆದು ಕೇಳಿದ್ದಾನೆ. ಇದನ್ನೂ ಓದಿ: ಖಾಸಗಿ ಸಂಸ್ಥೆಯಲ್ಲಿ ಭಾರೀ ಅಗ್ನಿ ಅವಘಡ

    POLICE JEEP

    ನೆರೆಹೊರೆಯವರು ಆಕೆಯನ್ನು ಪರೀಕ್ಷಿಸಿದಾಗ ಆಕೆ ಮೃತಪಟ್ಟಿರುವ ವಿಚಾರ ತಿಳಿದುಬಂದಿದೆ. ತಕ್ಷಣ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮನೋಜ್ ಮೇಲೆ ಪ್ರಕರಣ ದಾಖಲಿಸಿಕೊಂಡು, ಆತನನ್ನು ಬಂಧಿಸಿದ್ದಾರೆ.

  • ಮಗನಿಗೆ ಗಂಜಿ, ತಾಯಿಗೆ ತಣ್ಣೀರು ಬಟ್ಟೆ- ಊಟವಿಲ್ಲದೆ ನರಳಾಟ

    ಮಗನಿಗೆ ಗಂಜಿ, ತಾಯಿಗೆ ತಣ್ಣೀರು ಬಟ್ಟೆ- ಊಟವಿಲ್ಲದೆ ನರಳಾಟ

    – ತಾನು ಉಪವಾಸವಿದ್ದು ಮಗನನ್ನು ಸಾಕುತ್ತಿದ್ದಾರೆ ತಾಯಿ

    ಮಡಿಕೇರಿ: ಕೊರೊನಾ ಮಹಾಮಾರಿ ಬಡವರು, ಕೂಲಿಕಾರ್ಮಿಕರನ್ನು ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದ್ದು, ಲಾಕ್‍ಡೌನ್ ಆಗಿರುವುದರಿಂದ ಕೂಲಿ ಕೆಲಸ ಇಲ್ಲದೆ ಗಂಜಿ ಕುಡಿದು ಬದುಕು ದೂಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

    ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಹಂಚಿತ್ತಿಟ್ಟು ಗ್ರಾಮದಲ್ಲಿ ಇಂತಹ ಮನಕಲಕುವ ಸ್ಥಿತಿ ಇದ್ದು, ಮಹಿಳೆ ಶಾಂತಮ್ಮ, ಬೆನ್ನು ಮೂಳೆ ಮುರಿದುಕೊಂಡು 13 ವರ್ಷದಿಂದ ಹಾಸಿಗೆ ಹಿಡಿದಿರುವ ಮಗನನ್ನು ಸಾಕುತ್ತಿದ್ದಾರೆ. ಕೂಲಿ ಮಾಡುತ್ತಿದ್ದ ಶಾಂತಮ್ಮ ಅದೇ ಹಣದಿಂದ ತನ್ನ ಮಗ ವಿಠಲನಿಗೆ ಮಂಗಳೂರಿನ ವೆನ್‍ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರು. ಆದರೆ ಲಾಕ್‍ಡೌನ್ ಆಗಿರುವ ಹಿನ್ನೆಲೆಯಲ್ಲಿ ಕೂಲಿಯೂ ಇಲ್ಲದೆ, ಮಗನಿಗೆ ಚಿಕಿತ್ಸೆ ಕೊಡಿಸಲು ಮಂಗಳೂರಿಗೆ ಕರೆದೊಯ್ಯಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ. ದುಡಿಮೆ ಇಲ್ಲದ್ದರಿಂದ ತಿನ್ನುವ ಅನ್ನಕ್ಕೂ ಆಹಾಕಾರ ಎದುರಾಗಿದೆ.

    ಸರ್ಕಾರ ಕೊಟ್ಟಿರುವ ಕೇವಲ ಐದು ಕೆ.ಜಿ ಅಕ್ಕಿಯಿಂದ ನಾನೇನು ಮಾಡಲು ಸಾಧ್ಯ. ಸೊಂಟ ಮುರಿದುಕೊಂಡು ನಡೆದಾಡಲು ಸಾಧ್ಯವಿಲ್ಲದೆ ಹಾಸಿಗೆ ಹಿಡಿದಿರುವ ಮಗನಿಗೆ ಗಂಜಿ ಹಾಕಿ ಹಸಿವಿನಿಂದಲೇ ಇರುತ್ತೇನೆ. ಇದರ ನಡುವೆ ಯಾರಾದರೂ ಕೂಲಿ ಕೆಲಸಕ್ಕೆ ಕರೆದರೆ, ಕೆಲಸಕ್ಕೆ ಬಂದಿರುವವರು ಏನಾದ್ರು ಕೊಟ್ಟರೆ ಅದನ್ನು ತಿನ್ನುತ್ತೇನೆ ಎಂದು ಶಾಂತಮ್ಮ ಕಣ್ಣೀರಿಡುತ್ತಿದ್ದಾರೆ. ಈ ಮೂಲಕ ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ.

  • ತಾಯಿ ಅಸ್ಥಿ ವಿಸರ್ಜನೆ ವೇಳೆ ಕಾವೇರಿ ಸಂಗಮದಲ್ಲಿ ಕೊಚ್ಚಿಹೋದ ಮಗ

    ತಾಯಿ ಅಸ್ಥಿ ವಿಸರ್ಜನೆ ವೇಳೆ ಕಾವೇರಿ ಸಂಗಮದಲ್ಲಿ ಕೊಚ್ಚಿಹೋದ ಮಗ

    ಮಂಡ್ಯ: ತಾಯಿಯ ಅಸ್ಥಿ ವಿಸರ್ಜನೆಗೆ ಆಗಮಿಸಿದ್ದ ಮಗ ಕಾವೇರಿ ನದಿಯಲ್ಲಿ ಕೊಚ್ಚಿ ಹೋಗಿರುವ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ, ಗಂಜಾಂ ಬಳಿಯ ಕಾವೇರಿ ನದಿ ಸಂಗಮದಲ್ಲಿ ನಡೆದಿದೆ.

    ಶ್ರೀಕಾಂತ್ (45) ಕೊಚ್ಚಿ ಹೋದ ವ್ಯಕ್ತಿ. ಬೆಂಗಳೂರಿನ ರಾಜಾಜಿ ನಗರದ ನಿವಾಸಿ ಶ್ರೀಕಾಂತ್ ಅವರ ತಾಯಿ ಅಂಬುಜಾ ಸಾವಿಗೀಡಾಗಿದ್ದರು. ಅವರ ಅಸ್ಥಿ ವಿಸರ್ಜನೆಗಾಗಿ 5 ಜನರ ಜೊತೆ ಸಂಗಮಕ್ಕೆ ಶ್ರೀಕಾಂತ್ ಆಗಮಿಸಿದ್ದರು.

    ಈ ವೇಳೆ ಅಸ್ಥಿ ವಿಸರ್ಜನೆಗೆ ಕಾವೇರಿ ನದಿಗಿಳಿದಾಗ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ. ಮೃತ ದೇಹಕ್ಕಾಗಿ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೋಲಿಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಶ್ರೀರಂಗಪಟ್ಟಣ ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಬೈಕ್‍ಗಳ ಮುಖಾಮುಖಿ ಡಿಕ್ಕಿ-ತಾಯಿ, ಮಗ ಸೇರಿದಂತೆ ಮೂವರ ಸಾವು

    ಬೈಕ್‍ಗಳ ಮುಖಾಮುಖಿ ಡಿಕ್ಕಿ-ತಾಯಿ, ಮಗ ಸೇರಿದಂತೆ ಮೂವರ ಸಾವು

    ಚಿತ್ರದುರ್ಗ: ಎರಡು ಬೈಕುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ತಾಯಿ, ಮಗ ಸೇರಿದಂತೆ ಮೂವರು ಮೃತಪಟ್ಟಿರುವ ಘಟನೆ ಹೊರವಲಯದ ಸಮೀಪ ಕ್ಯಾದಿಗೆರೆ ಬಳಿ ನಡೆದಿದೆ.

    ರಫೀಕ್ (26), ರಜೀಯಾ (50) ಮೃತ ದುರ್ದೈವಿಗಳಾಗಿದ್ದು, ಮತ್ತೋರ್ವನ ಗುರುತು ಪತ್ತೆಯಾಗಿಲ್ಲ. ಮೃತರನ್ನು ನಗರದ ಕಾಮನಬಾವಿ ಬಡಾವಣೆಯ ನಿವಾಸಿಗಳೆಂದು ಗುರುತಿಸಲಾಗಿದೆ.

    ಮೃತ ರಫೀಕ್ ಹಾಗೂ ರಜೀಯಾ ಸಂಬಂಧಿಕರ ವಿವಾಹ ಸಮಾರಂಭಕ್ಕೆ ಬೈಕಿನಲ್ಲಿ ತೆರಳಿದ್ದರು. ಮದುವೆ ಕಾರ್ಯಕ್ರಮ ಮುಗಿದ ಬಳಿಕ ಮರಡಿಹಳ್ಳಿಗೆ ವಾಪಾಸ್ಸಾಗುತ್ತಿದ್ದರು. ಈ ವೇಳೆ ಕ್ಯಾದಿಗೆರೆ ಸಮೀಪ ಎರಡು ಬೈಕುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.

    ಡಿಕ್ಕಿಯ ರಭಸಕ್ಕೆ ಎರಡೂ ಬೈಕಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆ ಸಂಬಂಧ ಚಿತ್ರದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಪಾರ್ಟ್‍ಮೆಂಟ್‍ನ 3ನೇ ಮಹಡಿಯಿಂದ ಬಿದ್ದು ತಾಯಿ-ಮಗ ಅನುಮಾನಾಸ್ಪದ ಸಾವು

    ಅಪಾರ್ಟ್‍ಮೆಂಟ್‍ನ 3ನೇ ಮಹಡಿಯಿಂದ ಬಿದ್ದು ತಾಯಿ-ಮಗ ಅನುಮಾನಾಸ್ಪದ ಸಾವು

    ಬೆಂಗಳೂರು: ಅಪಾರ್ಟ್‍ಮೆಂಟ್ ಮೇಲಿಂದ ಬಿದ್ದು ತಾಯಿ, ಮಗ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯದ ಕಾಡುಗೋಡಿಯ ಬೆಳ್ತೂರಿನಲ್ಲಿ ನಡೆದಿದೆ.

    ಯಾದಗಿರಿ ಮೂಲದ ತಾಯಿ ಸುಂದರಮ್ಮ(55) ಹಾಗೂ ಮಗ ಮೌನೇಶ್(36) ಮೃತ ದುದೈರ್ವಿಗಳು. ಮೌನೇಶ್ ಕೆಎಸ್‍ಆರ್ ಟಿಸಿ ಬಸ್ ಚಾಲಕರಾಗಿದ್ದು, 4 ದಿನದ ಹಿಂದಷ್ಟೇ ಯಾದಗಿರಿಯಿಂದ ಬೆಂಗಳೂರಿಗೆ ಬಂದಿದ್ದರು. ಕಾಡುಗೋಡಿ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಆಗಿದ್ದ ಚಂದ್ರಪ್ಪ ಎಂಬವರು ವಾಸವಿದ್ದ ಅಪಾರ್ಟ್‍ಮೆಂಟ್ ಫ್ಲಾಟ್ ಮೇಲಿಂದ ಬಿದ್ದು ಇಂದು ತಾಯಿ-ಮಗ ಸಾವನ್ನಪ್ಪಿದ್ದಾರೆ.

    ಇನ್ಸ ಪೆಕ್ಟರ್ ಚಂದ್ರಪ್ಪ ಅವರ ತಂಗಿ ಹಾಗೂ ಮೃತ ಮೌನೇಶ್ ಗೆ ಪ್ರೇಮಾಂಕುರವಾಗಿತ್ತು. ಎರಡು-ಮೂರು ಬಾರಿ ಚಂದ್ರಪ್ಪ ಸಹೋದರಿ ಮೌನೇಶ್ ಜೊತೆ ಮನೆ ಬಿಟ್ಟು ಹೋಗಿದ್ದಳು. ಇದರಿಂದ ಕೋಪಗೊಂಡಿದ್ದ ಚಂದ್ರಪ್ಪ, ಮೌನೇಶ್ ಹಾಗೂ ಅವರ ತಾಯಿಯನ್ನು ತಂದು ಕೂಡಿಹಾಕಿದ್ದರು ಎಂದು ಹೇಳಲಾಗಿದೆ. ಆದರೆ ಇಂದು ಅನುಮಾನಾಸ್ಪದ ರೀತಿಯಲ್ಲಿ ಇಬ್ಬರೂ ಸಾವನ್ನಪ್ಪಿದ್ದಾರೆ.

    ಇತ್ತೀಚೆಗೆ ಕಾಡುಗೋಡಿಯಿಂದ ಇನ್ಸ್ ಪೆಕ್ಟರ್ ಚಂದ್ರಪ್ಪ ಅವರ ವರ್ಗಾವಣೆ ಆಗಿತ್ತು. ಸದ್ಯ ಘಟನೆ ಸಂಬಂಧ ಕಾಡುಗೋಡಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ಸ್ ಪೆಕ್ಟರ್ ಚಂದ್ರಪ್ಪ ಅವರನ್ನ ಕರೆಸಿ ಪೊಲೀಸರು ವಿಚಾರಣೆ ಮಾಡಿದ್ದು, ಅವರನ್ನು ಕರೆಸಿ ಮಾತನಾಡಿದ್ದು ನಿಜ. ಆದ್ರೆ ಅವರೇ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಚಂದ್ರಪ್ಪ ಹೇಳಿದ್ದಾರೆ.