Tag: ತಾಯಿ ಕೋತಿ

  • ತನ್ನ ಜೀವ ಪಣಕ್ಕಿಟ್ಟು ಪುಟ್ಟ ಮರಿಯನ್ನು ರಕ್ಷಿಸಿದ ತಾಯಿ ಕೋತಿ – ವಿಡಿಯೋ ವೈರಲ್

    ತನ್ನ ಜೀವ ಪಣಕ್ಕಿಟ್ಟು ಪುಟ್ಟ ಮರಿಯನ್ನು ರಕ್ಷಿಸಿದ ತಾಯಿ ಕೋತಿ – ವಿಡಿಯೋ ವೈರಲ್

    ನವದೆಹಲಿ: ತಾಯಿ ಪ್ರೀತಿಗೆ ಸಾಟಿಯಿಲ್ಲ, ತಾಯಿ ಎದುರು ಆ ದೇವರೇ ಸಲಾಂ ಹೊಡೆಯುತ್ತಾನೆ ಎಂಬ ಮಾತಿದೆ. ಮನುಷ್ಯರೇ ಆಗಲಿ, ಪ್ರಾಣಿಗಳೇ ಆಗಲಿ ತಾಯಿ ಮಮತೆ, ಪ್ರೀತಿ ಒಂದೆ. ಇದಕ್ಕೆ ಉದಾಹರಣೆ ಎನ್ನುವಂತೆ ಸಾಮಾಜಿಕ ಜಾಲತಾಣಗಳಲ್ಲಿ ತಾಯಿ ಕೋತಿ ತನ್ನ ಮರಿಯನ್ನು ರಕ್ಷಣೆ ಮಾಡಿರುವ ವಿಡಿಯೋವೊಂದು ಸಖತ್ ವೈರಲ್ ಆಗಿದ್ದು, ತನ್ನ ಪ್ರಣವನ್ನು ಲೆಕ್ಕಿಸದೆ ತಾಯಿ ಕೋತಿ ತನ್ನ ಪುಟ್ಟ ಮರಿಯ ಜೀವ ಉಳಿಸಿದ ದೃಶ್ಯ ನೆಟ್ಟಿಗರ ಮನ ಮುಟ್ಟಿದೆ.

    ವೈರಲ್ ವಿಡಿಯೋದಲ್ಲಿ ಕೋತಿಯೊಂದು ತನ್ನ ಕಂದನನ್ನು ಪ್ರಾಣದ ಹಂಗು ತೊರೆದು ರಕ್ಷಿಸಿದ ದೃಶ್ಯ ಸೆರೆಯಾಗಿದೆ. ಕಟ್ಟಡದಿಂದ ಮತ್ತೊಂದು ಕಟ್ಟಡಕ್ಕೆ ಹಾರುವಾಗ ವಿದ್ಯುತ್ ತಂತಿಯ ಮಧ್ಯದಲ್ಲಿ ಸಿಲುಕಿ, ಜೀವ ಉಳಿಸಿಕೊಳ್ಳಲು ಒದ್ದಾಡುತ್ತಿದ್ದ ಪುಟ್ಟ ಮರಿಯನ್ನು ತಾಯಿ ಕೋತಿ ತನ್ನ ಜೀವ ಪಣಕ್ಕಿಟ್ಟು ರಕ್ಷಿಸಿರುವ ದೃಶ್ಯ ನೋಡಿ ನೆಟ್ಟಿಗರು ಮನಸೋತಿದ್ದಾರೆ.

    ತನ್ನ ಜೀವವನ್ನು ಲೆಕ್ಕಿಸದೆ ಮರಿಗಾಗಿ ತಾಯಿ ಕೋತಿ ಕಟ್ಟದದಿಂದ ವಿದ್ಯುತ್ ತಂತಿಯ ಮೇಲೆ ಹಾರಿ, ತನ್ನ ಕರುಳ ಕುಡಿಯನ್ನು ರಕ್ಷಿಸಿರುವುದು ತಾಯಿಯ ನಿಸ್ವಾರ್ಥ ಪ್ರೀತಿ ಏನು ಎಂಬುದನ್ನು ತಿಳಿಸುತ್ತೆ ಎಂದು ನೆಟ್ಟಿಗರು ಈ ದೃಶ್ಯವನ್ನು ವರ್ಣಿಸಿದ್ದಾರೆ.

    ಈ ಹೃದಯಸ್ಪರ್ಶಿ ವಿಡಿಯೋವನ್ನು ಅರಣ್ಯ ಅಧಿಕಾರಿ ಪ್ರವೀಣ್ ಕಾಸ್ವಾನ್ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದು ತಾಯಿ ನಡೆಸಿದ ರಕ್ಷಣಾ ಕಾರ್ಯಾಚರಣೆ, ವಿಫಲವಾಗಲು ಸಾಧ್ಯವೆ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ತಾಯಿ ಪ್ರೀತಿಗೆ, ದಿಟ್ಟತನಕ್ಕೆ ಸಲಾಂ ಎಂದಿದ್ದಾರೆ.

  • ಸತ್ತ ಕರುಳ ಕುಡಿಯನ್ನ ಹೊತ್ತು ತಿರುಗುತ್ತಿದೆ ಕೋತಿ!

    ಸತ್ತ ಕರುಳ ಕುಡಿಯನ್ನ ಹೊತ್ತು ತಿರುಗುತ್ತಿದೆ ಕೋತಿ!

    ಚಿಕ್ಕಬಳ್ಳಾಪುರ: ಸತ್ತು ಕರಳುಕುಡಿ ಮರಿಕೋತಿಯನ್ನು ಎಲ್ಲೂ ಬಿಡದೇ ಕಳೆದ ಎರಡು ದಿನಗಳಿಂದ ತಾಯಿ ಕೋತಿಯೊಂದು ಹೊತ್ತು ತಿರುಗುತ್ತಿರುವ ಮನಕಲಕುವ ಘಟನೆ ಚಿಕ್ಕಬಳ್ಳಾಪುರದ್ಲಲಿ ನಡೆದಿದೆ.

    ಜಿಲ್ಲೆಯ ಗೌರಿಬಿದನೂರು ನಗರದಲ್ಲಿ ಆಗ ತಾನೆ ತನ್ನ ಕರುಳ ಬಳ್ಳಿ ಹಂಚಿಕೊಂಡು ಹುಟ್ಟಿರುವ ಕೋತಿ ಮರಿಯೊಂದು ಸತ್ತು ಹೋಗಿದೆ. ಕೋತಿ ಮರಿ ಸತ್ತು ಹೋಗಿದರೂ ಸಹ ತಾಯಿ ಕೋತಿ ಅದನ್ನು ತಾನು ಎಲ್ಲಿ ಹೋದರೂ ಅಲ್ಲಿಗೆ ಕರೆದುಕೊಂಡು ಹೋಗುತ್ತಿದೆ.

    ಗೌರಿಬಿದನೂರು ನಗರದ ಅಂಚೆ ಕಚೇರಿ ಅಸುಪಾಸಿನಲ್ಲೇ ಕೋತಿ ಅಡ್ಡಾಡುತ್ತಿದ್ದು. ತಾಯಿ ಕೋತಿಯ ಮಮತೆ ಕಂಡು ನೋಡುಗರು ಮನಕಲಕುವಂತಿದೆ.

    ಈ ಹಿಂದೆ ಚಾಮರಾಜನಗರದ ಭ್ರಮರಾಂಭ ಬಡಾವಣೆಯಲ್ಲಿ ಕೋತಿಯೊಂದು ಒಂದು ವಾರ ತನ್ನ ಮೃತ ಮರಿಯನ್ನು ತನ್ನ ಕಂಕುಳಿನಲ್ಲಿ ಹೊತ್ತು ತಿರುಗಾಡುತ್ತಿತ್ತು. ಕೋತಿ ತಾಯಿಗೆ ತನ್ನ ಕಂದ ಒಂದು ವಾರದ ಹಿಂದೆಯೇ ಮೃತಪಟ್ಟಿತ್ತು ಎಂಬ ವಿಷಯ ತಿಳಿದಿರಲಿಲ್ಲ. ತಿಳಿದಿದ್ರು ತಾಯಿ ಕರುಳು ಮಾತ್ರ ತನ್ನ ಮರಿ ಸಾವನ್ನಪ್ಪಿಲ್ಲ ಎಂಬ ಭಾವನೆಯಲ್ಲೇ ಇತ್ತು. ತನ್ನ ಕಂದ ಈಗ ಏಳುತ್ತೆ, ಆಗ ಏಳುತ್ತೆ ಎಂಬ ಭಾವನೆಯಲ್ಲೇ ತಾಯಿ ಕೋತಿ ಮರಿ ಕೋತಿಯ ಮುಖವನ್ನು ನೆಕ್ಕಿ ಎಬ್ಬಿಸಲು ಪ್ರಯತ್ನ ಪಟ್ಟಿತ್ತು.