Tag: ತಾಪ್ಸಿ ಪನ್ನು

  • ಮಿಷನ್ ಇಂಪಾಸಿಬಲ್ ಚಿತ್ರದಲ್ಲಿ ರಿಷಭ್ ಶೆಟ್ಟಿ: ತಾಪ್ಸಿ ಪನ್ನು ನಾಯಕಿ

    ಮಿಷನ್ ಇಂಪಾಸಿಬಲ್ ಚಿತ್ರದಲ್ಲಿ ರಿಷಭ್ ಶೆಟ್ಟಿ: ತಾಪ್ಸಿ ಪನ್ನು ನಾಯಕಿ

    ವಿಭಿನ್ನ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ರಿಷಭ್ ಶೆಟ್ಟಿ ಸದ್ಯ ಕಾಂತರ ಸೇರಿದಂತೆ ಹಲವು ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದರೂ, ಈ ನಡುವೆ ಸದ್ದಿಲ್ಲದೇ ತೆಲುಗು ಸಿನಿಮಾದಲ್ಲೂ ನಟಿಸಿ ಬಂದಿದ್ದಾರೆ. ‘ಮಿಷನ್ ಇಂಪಾಸಿಬಲ್’ ಹೆಸರಿನಲ್ಲಿ ಮೂಡಿ ಬಂದಿರುವ ಈ ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು, ಆನಂತರವೇ ಅವರು ತೆಲುಗಿಗೆ ಹಾರಿದ ಸುದ್ದಿ ಪಕ್ಕಾ ಆಗಿದೆ. ಇದನ್ನೂ ಓದಿ : ಹಿಂದಿ ಆಯ್ತು, ಇದೀಗ ಮರಾಠಿಯಲ್ಲೂ ಕನ್ನಡದ ದಿಯಾ

    ರಿಲೀಸ್ ಆಗಿರುವ ಟ್ರೇಲರ್ ಗಮನಿಸಿದರೆ, ಅದೊಂದು ಪಕ್ಕಾ ಕಾಮಿಡಿ ಮಾದರಿಯ ಸಿನಿಮಾ ಎನಿಸುತ್ತಿದೆ. ಭೂಗತ ಜಗತ್ತಿನ ದೊರೆ ದಾವೂದ್ ಇಬ್ರಾಹಿಂ ಅರೆಸ್ಟ್ ಮಾಡಿದರೆ ಮೂರು ಲಕ್ಷ ರೂಪಾಯಿ ಸಿಗುತ್ತದೆ ಎನ್ನುವ ಕಾರಣಕ್ಕೆ ಮೂವರು ಮಕ್ಕಳು ಅವನ ಹಿಂದೆ ಬೀಳುವುದು. ಆ ಮೂವರು ಮಕ್ಕಳ ಕೀಟಲೆ ಹೀಗೆ ಟ್ರೇಲರ್ ಸಾಗುತ್ತದೆ. ಇದನ್ನೂ ಓದಿ : ಸಿಂಬು ನಟನೆಯ ಚಿತ್ರಕ್ಕೆ ಐಶ್ವರ್ಯ ರಜನೀಕಾಂತ್ ನಿರ್ದೇಶಕಿ

    ಅಂದಹಾಗೆ ಈ ಸಿನಿಮಾದಲ್ಲಿ ರಿಷಭ್ ಶೆಟ್ಟಿ ಕಲೀಲ ಹೆಸರಿನ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಕಲೀಲ ಯಾರು? ಇವನ ಹಿನ್ನೆಲೆ ಏನು? ಇವನಿಂದ ಏನೆಲ್ಲ ಸಾಧ್ಯ ಎನ್ನುವುದನ್ನು ಸಿನಿಮಾದಲ್ಲಿಯೇ ನೋಡಬೇಕು. ಮಹತ್ವದ ಪಾತ್ರವಂತೂ ಆಗಿರುತ್ತದೆ. ಇದನ್ನೂ ಓದಿ : ಅಂದು ಸುದೀಪ್ ಪುಸ್ತಕ ಬಿಡುಗಡೆ ಮಾಡಿದ್ದ ಪುನೀತ್, ಇಂದು ಪುನೀತ್ ಪುಸ್ತಕ ಬಿಡುಗಡೆ ಮಾಡಿದ ಸುದೀಪ್

    ಸಿನಿಮಾದ ಹೆಸರು ಮಿಷನ್ ಇಂಪಾಸಿಬಲ್ ಅಂತ ಇಟ್ಟಿದ್ದರೂ, ಕನ್ನಡದ ಅನೇಕ ನಂಟುಗಳನ್ನು ಈ ಸಿನಿಮಾ ಹೊಂದಿದೆ. ರಿಷಭ್ ಪಾತ್ರದ ಶೂಟಿಂಗ್ ಬೆಂಗಳೂರಿನಲ್ಲೇ ನಡೆದಿದೆ. ಕನ್ನಡದ ಭಾರೀ ಬಜೆಟ್ ಸಿನಿಮಾ ಕೆಜಿಎಫ್ ನ ಪ್ರಸ್ತಾಪ ಕೂಡ ಸಿನಿಮಾದಲ್ಲಿ ಆಗಿದೆ. ಈ ತೆಲುಗಿನಲ್ಲಿ ಸಿನಿಮಾದಲ್ಲಿ ತಾಪಸ್ಸಿ ಪನ್ನು ನಾಯಕಿ. ಉಳಿದಂತೆ ತೆಲುಗಿನ ನಟರೇ ತಾರಾಗಣದಲ್ಲಿ ಇದ್ದಾರೆ.

  • ಮಹಿಳಾ ದಿನಾಚರಣೆ ಪ್ರಯುಕ್ತ ಶಭಾಷ್ ಮಿಥು ಚಿತ್ರದ ಪೋಸ್ಟರ್ ಹಂಚಿಕೊಂಡ ತಾಪ್ಸಿ ಪನ್ನು

    ಮಹಿಳಾ ದಿನಾಚರಣೆ ಪ್ರಯುಕ್ತ ಶಭಾಷ್ ಮಿಥು ಚಿತ್ರದ ಪೋಸ್ಟರ್ ಹಂಚಿಕೊಂಡ ತಾಪ್ಸಿ ಪನ್ನು

    ಮುಂಬೈ: ಅಂತರಾಷ್ಟೀಯ ಮಹಿಳಾ ದಿನಾಚರಣೆ ನಿಮಿತ್ಯ ಬಾಲಿವುಡ್ ನಟಿ ತಾಪ್ಸಿ ಪನ್ನು ತಮ್ಮ ಮುಂಬರುವ ಶಭಾಷ್ ಮಿಥು ಚಿತ್ರದ ಪೋಸ್ಟರ್‍ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    ಭಾರತೀಯ ಕ್ರಿಕೆಟ್ ತಾರೆ ಮಿಥಾಲಿ ರಾಜ್ ಅವರು ನನ್ನಂತಹ ಲಕ್ಷಾಂತರ ಮಹಿಳೆಯರಿಗೆ ಸ್ಪೂರ್ತಿಯಾಗಿದ್ದಾರೆ. ಅಂತಹ ಲಕ್ಷಾಂತರ ಮಹಿಳೆಯರ ಮಧ್ಯೆ ನಿರ್ದಿಷ್ಟ ಗುಣಲಕ್ಷಣಗಳನ್ನು ಹೊಂದಿರುವ ಅವರನ್ನು ಅನುಸರಿಸಲು ಇದೊಂದು ಸರಿಯಾದ ಮಾರ್ಗವಾಗಿದೆ. ಈ ಮಹಿಳಾ ದಿನದಂದು ನಾನು ಶೌರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಎಲ್ಲ ಮಹಿಳೆಯರಿಗೂ ಹುರಿದುಂಬಿಸುತ್ತಿದ್ದೇನೆ. #ಶಭಾಷ್‍ಮಿಥು #ಶಭಾಷ್‍ಮಹಿಳೆ #ಶಭಾಷ್‍ನಿಮಗೆ ಎಂದು ಶಿರ್ಷೀಕೆ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ನಿರ್ಬಂಧಕ್ಕೆ ಒಳಪಟ್ಟ ದೇಶಗಳ್ಯಾವುವು? ಕಾರಣ ಏನು? ಪಟ್ಟಿಯಲ್ಲಿ ರಷ್ಯಾ ನಂ.1

     

    View this post on Instagram

     

    A post shared by Taapsee Pannu (@taapsee)

    ತಮ್ಮ ಹೊಸ ಪೋಸ್ಟರ್‌ನಲ್ಲಿ ತಾಪ್ಸಿ ಮಿಥಾಲಿ ಎಂದು ಬರೆದ ನೀಲಿ ಜರ್ಸಿವೊಂದನ್ನು ಧರಿಸಿದ್ದಾರೆ. ಅವರು ಒಂದು ಕೈಯಲ್ಲಿ ಬ್ಯಾಟ್ ಮತ್ತು ಇನ್ನೊಂದು ಕೈಯಲ್ಲಿ ಹೆಲ್ಮೆಟ್ ಹಿಡಿದುಕೊಂಡು ಅಭಿಮಾನಿಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದಾರೆ. ಇದನ್ನೂ ಓದಿ : ಮಹಿಳಾ ದಿನಾಚರಣೆಗಾಗಿ ವಿಶೇಷ ಪೋಸ್ಟರ್ ರಿಲೀಸ್ ಮಾಡಿದ ಕೆಜಿಎಫ್ 2 ತಂಡ

    ಇದಕ್ಕೂ ಮುನ್ನ ಚಿತ್ರದ ನಿರ್ಮಾಪಕರು ತಾಪ್ಸಿಯ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದರು. ಪೋಸ್ಟರ್‌ನಲ್ಲಿ, ಅವರು ನೀಲಿ ಜರ್ಸಿಯನ್ನು ಧರಿಸಿದ್ದು ಚೆಂಡನ್ನು ಬೌಂಡರಿ ಲೈನಿಗಟ್ಟುವ ದೃಶ್ಯದ ಫೋಟೋ ಇದಾಗಿದೆ.

     

    View this post on Instagram

     

    A post shared by Taapsee Pannu (@taapsee)

    ಶಭಾಷ್ ಮಿಥು ಚಿತ್ರವು ಭಾರತ ಮಹಿಳಾ ಏಕದಿನ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಅವರ ಜೀವನವನ್ನು ಆಧರಿಸಿದೆ. ಈ ಚಿತ್ರವು ಮಿಥಾಲಿ ರಾಜ್ ಅವರ ಜೀವನದ ಏರಿಳಿತಗಳು, ಹಿನ್ನಡೆಗಳು ಮತ್ತು ಅವರ ಜೀವನದ ಕೆಲ ಘಟ್ಟಗಳನ್ನೊಳಗೊಂಡಿದೆ. ಚಿತ್ರದಲ್ಲಿ ಬಾಲಿವುಡ್ ನಟ ವಿಜಯ್ ರಾಝ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವನ್ನು ರಾಹುಲ್ ಧೋಲಾಕಿಯಾ ನಿರ್ದೇಶಿಸಿದ್ದು ಚಿತ್ರದ ಕಥೆಯನ್ನು ಪ್ರಿಯಾ ಅವೆನ್ ಅವರು ಬರೆದಿದ್ದಾರೆ.

  • ನಾನು Useless ಬಾಯ್‍ಫ್ರೆಂಡ್ಸ್ ಜೊತೆ ಡೇಟಿಂಗ್ ಮಾಡಿದ್ದೇನೆ: ತಾಪ್ಸಿ ಪನ್ನು

    ನಾನು Useless ಬಾಯ್‍ಫ್ರೆಂಡ್ಸ್ ಜೊತೆ ಡೇಟಿಂಗ್ ಮಾಡಿದ್ದೇನೆ: ತಾಪ್ಸಿ ಪನ್ನು

    ಮುಂಬೈ: ಯಾವಾಗಲೂ ತಮ್ಮ ನೇರ ನುಡಿಗೆ ಸುದ್ದಿಯಾಗುವ ಬಾಲಿವುಡ್ ನಟಿ ತಾಪ್ಸಿ ಪನ್ನು, ಇಂದು ಸಹ ಸಂದರ್ಶಕರೊಬ್ಬರು ಕೇಳಿದ ಪ್ರಶ್ನೆಗೆ ನೇರವಾಗಿ ಉತ್ತರಿಸಿ ಸುದ್ದಿಯಾಗಿದ್ದಾರೆ.

    ತಾಪ್ಸಿ ಪನ್ನು ಮತ್ತು ತಾಹಿರ್ ರಾಜ್ ಭಾಸಿನ್ ನಟನೆಯ ‘ಲೂಪ್ ಲಪೇಟಾ’ ಸಿನಿಮಾ ಶೀಘ್ರದಲ್ಲೇ ಓಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಿನಿಮಾ ಪ್ರಮೋಷನ್‍ಗೆ ಬಂದಾಗ ಸಂದರ್ಶಕರು, ನೀವು ಯೂಸ್‍ಲೆಸ್ (ಅಪ್ರಯೋಜಕ) ಬಾಯ್‍ಫ್ರೆಂಡ್ ಜೊತೆ ಡೇಟ್ ಮಾಡಿದ್ದೀರಾ ಎಂದು ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಅವರು, ಹೌದು, ನಾನು ಅನೇಕ ಯೂಸ್‍ಲೆಸ್ ಬಾಯ್‍ಫ್ರೆಂಡ್‍ಗಳ ಜೊತೆ ಡೇಟಿಂಗ್ ಮಾಡಿದ್ದೇನೆ ಎಂದು ನೇರವಾಗಿ ಉತ್ತರಿಸಿದ್ದಾರೆ. ಇದಕ್ಕೆ ಸಹನಟ ತಾಹಿರ್, ಅವರು ದೆಹಲಿಯಿಂದ ಬಂದವರು ಎಂದು ಕಿಚಾಯಿಸಿದರು. ಅದನ್ನು ಒಪ್ಪಿಕೊಂಡು ತಾಪ್ಸಿ ನಕ್ಕರು. ಇದನ್ನೂ ಓದಿ: ‘ಮರಳಿ ಬರುತ್ತಿದ್ದೇನೆ’ – 56ರ ಹರೆಯದಲ್ಲೂ ಜಿಮ್‍ನಲ್ಲಿ ಬೆವರಿಳಿಸುತ್ತಿದ್ದಾರೆ ಸಲ್ಲು

    ಹಿಂದೊಮ್ಮೆ ತಾಪ್ಸಿ ಅವರಿಗೆ ಬಾಯ್‍ಫ್ರೆಂಡ್ ಬಗ್ಗೆ ಕೇಳಿದಾಗ, ನಾನು ಮಥಿಯಾಸ್ ಜೊತೆ ಲವ್ ರಿಲೇಶನ್ ಶಿಪ್‍ನಲ್ಲಿದ್ದೇನೆ. ಆದರೆ ಸದ್ಯಕ್ಕೆ ಮದುವೆ ಬಗ್ಗೆ ಯೋಚನೆ ಮಾಡಿಲ್ಲ. ತನಗೆ ಮಕ್ಕಳು ಬೇಕೆನಿಸಿದಾಗ ಮದುವೆಯಾಗುತ್ತೇನೆ. ಸದ್ಯಕ್ಕೆ ಆ ಆಲೋಚನೆ ಇಲ್ಲ. ಈಗ ನನ್ನ ಗಮನವೆಲ್ಲ ಸಿನಿಮಾದತ್ತ ಇದೆ. ತಾನು ವೃತ್ತಿ ಹಾಗೂ ವೈಯಕ್ತಿಕ ಜೀವನವನ್ನು ಸದಾ ಪ್ರತ್ಯೇಕವಾಗಿ ನೋಡುತ್ತೇನೆ. ಎರಡನ್ನೂ ಮಿಕ್ಸ್ ಮಾಡುವುದಿಲ್ಲ ಎಂದು ಲವ್ ಲೈಫ್ ಹಾಗೂ ಬಾಯ್‍ಫ್ರೆಂಡ್ ಬಗ್ಗೆ ತಾಪ್ಸಿ ಹೇಳಿಕೊಂಡಿದ್ದರು.

    ಪ್ರಸ್ತುತ ತಾಪ್ಸಿ ‘ಲೂಪ್ ಲಪೇಟಾ’ ಸಿನಿಮಾದ ಪ್ರಮೋಷನ್‍ನಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ಜೋಡಿಯಾಗಿ ತಾಹಿರ್ ರಾಜ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾಗೆ ಆಕಾಶ್ ಭಾಟಿಯಾ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಇದು ಇವರ ಚೊಚ್ಚಲ ಸಿನಿಮಾವಾಗಿದೆ. ಇದು ಕಾಮಿಡಿ ಮತ್ತು ಥ್ರಿಲ್ಲರ್ ಸಿನಿಮಾವಾಗಿದೆ. ಇದನ್ನೂ ಓದಿ:  ಸುಧಾಕರ್ ಏನು ಸಿಎಂಗಿಂತ ದೊಡ್ಡವರಾ? ಬಿಜೆಪಿ ಶಾಸಕ ಕಿಡಿ

  • ಸೀರೆಯುಟ್ಟು ವಿದೇಶದಲ್ಲಿ ಸುತ್ತಾಡಿದ ತಾಪ್ಸಿ ಪನ್ನು

    ಸೀರೆಯುಟ್ಟು ವಿದೇಶದಲ್ಲಿ ಸುತ್ತಾಡಿದ ತಾಪ್ಸಿ ಪನ್ನು

    ಮಾಸ್ಕೋ: ನಟಿ ತಾಪ್ಸಿ ಪನ್ನು ಸೀರೆಯುಟ್ಟು ವಿದೇಶದಲ್ಲಿ ಸುತ್ತಾಡುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ತಾಪ್ಸಿ ಪನ್ನು ತಮ್ಮತಂಗಿ ಶಗುನ್ ಪನ್ನು ಜೊತೆಗೆ ವಿದೇಶದಲ್ಲಿ ರಜೆಯ ಮಜದಲ್ಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಾಪ್ಸಿ ಅವರ ಪ್ರವಾಸದ ಚಿತ್ರಗಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಹೆಚ್ಚಾಗಿ ತಾಪ್ಸಿ ಸೀರೆಯನ್ನು ತೊಟ್ಟಿದ್ದಾರೆ. ಸೀರೆಯುಟ್ಟು ಶೂ ತೊಟ್ಟು ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ತಾಪ್ಸಿ ಹಂಚಿಕೊಂಡಿದ್ದಾರೆ. ನೆಟ್ಟಗರು ಸೀರೆಯಲ್ಲಿ ತಾಪ್ಸಿ ವಿದೇಶ ಸುತ್ತಿರುವುದನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:  SSLC ಪರೀಕ್ಷೆ ನಡೆಸಬಾರದು: ವಾಟಳ್ ನಾಗರಾಜ್

     

    View this post on Instagram

     

    A post shared by Taapsee Pannu (@taapsee)

    ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ತಾಪ್ಸಿ ಸದ್ಯ ಕೊಂಚ ಬ್ರೇಕ್ ಪಡೆದಿದ್ದು ವಿದೇಶ ಪ್ರವಾಸದಲ್ಲಿದ್ದಾರೆ. ತನ್ನ ತಂಗಿಯ ಜೊತೆಗೆ ರಷ್ಯಾದ ಮಾಸ್ಕೋನಲ್ಲಿ ಸುತ್ತಾಡುತ್ತಿದ್ದಾರೆ. ವಿದೇಶ ಪ್ರವಾಸದಲ್ಲೂ ತಾಪ್ಸಿ ಭಾರತೀಯ ಸಂಸ್ಕೃತಿಯ ಉಡುಪನ್ನು ತೊಟ್ಟಿರುವುದಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

     

    View this post on Instagram

     

    A post shared by Taapsee Pannu (@taapsee)

    ಬಾಯ್‍ಫ್ರೆಂಡ್ ಮಥಿಯಾಸ್ ಜತೆ ಲವ್ ರಿಲೇಶನ್ ಶಿಪ್‍ನಲ್ಲಿದ್ದೇನೆ. ಆದರೆ ಸದ್ಯಕ್ಕೆ ಮದುವೆ ಬಗ್ಗೆ ಯೋಚನೆ ಮಾಡಿಲ್ಲ. ತನಗೆ ಮಕ್ಕಳು ಬೇಕೆನಿಸಿದಾಗ ಮದುವೆಯಾಗುತ್ತೇನೆ. ಸದ್ಯಕ್ಕೆ ಆ ಆಲೋಚನೆ ಇಲ್ಲ. ಸದ್ಯಕ್ಕೆ ಏನಿದ್ದರೂ ತನ್ನ ಗಮನವೆಲ್ಲ ಸಿನಿಮಾದತ್ತ ಇದೆ. ತಾನು ವೃತ್ತಿ ಹಾಗೂ ವೈಯಕ್ತಿಕ ಜೀವನವನ್ನು ಸದಾ ಪ್ರತ್ಯೇಕವಾಗಿ ನೋಡುತ್ತೇನೆ. ಎರಡನ್ನೂ ಮಿಕ್ಸ್ ಮಾಡುವುದಿಲ್ಲ ಎಂದು ಲವ್ ಲೈಫ್ ಹಾಗೂ ಬಾಯ್ ಫ್ರೆಂಡ್ ಬಗ್ಗೆ ಈ ಹಿಂದೆ ತಾಪ್ಸಿ ಹೇಳಿಕೊಂಡಿದ್ದರು.

    ನಟಿ ತಾಪ್ಸಿ ಪನ್ನು ಸದಾ ಒಂದಿಲ್ಲೊಂದು ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿರುತ್ತಾರೆ. ಈ ಬಾರಿ ಅವರು ಹಸೀನ್ ದಿಲ್‍ರುಬಾ ಚಿತ್ರಕ್ಕಾಗಿ ಹಾಟ್ ಅವತಾರ ತಾಳಿದ್ದಾರೆ. ಇತ್ತಿಚೇಗೆ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಸಾಕಷ್ಟು ಮೆಚ್ಚುಗೆ ಪಡೆದುಕೊಳ್ಳುತ್ತಿದೆ.

  • ಫಿಲಂ ಫೇರ್ ಅವಾರ್ಡ್ಸ್ 2021 – ಇರ್ಫಾನ್ ಖಾನ್ ಬೆಸ್ಟ್ ಆಕ್ಟರ್, ಥಪ್ಪಡ್ ಬೆಸ್ಟ್ ಸಿನಿಮಾ

    ಫಿಲಂ ಫೇರ್ ಅವಾರ್ಡ್ಸ್ 2021 – ಇರ್ಫಾನ್ ಖಾನ್ ಬೆಸ್ಟ್ ಆಕ್ಟರ್, ಥಪ್ಪಡ್ ಬೆಸ್ಟ್ ಸಿನಿಮಾ

    – ತಾಪ್ಸಿ ಪನ್ನು ಅತ್ಯುತ್ತಮ ನಟಿ

    ಮುಂಬೈ: 2021ರ ಫಿಲಂಫೇರ್ ಅವಾರ್ಡ್ ವಿಜೇತರ ಪಟ್ಟಿ ಪ್ರಕಟವಾಗಿದ್ದು, ಅಂಗ್ರೆಜಿ ಮೀಡಿಯಂ ಸಿನಿಮಾ ನಟನೆಗಾಗಿ ದಿ.ಇರ್ಫಾನ್ ಖಾನ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ. ಅಜಯ್ ದೇವ್‍ಗನ್ ಮತ್ತು ಕಾಜೋಲ್ ನಟನೆಯ ‘ತಾನ್ಹಾಜಿ- ದಿ ಅನ್‍ಸಂಗ್ ವಾರಿಯರ್’ ಚಿತ್ರ ಹಲವು ವಿಭಾಗಗಳಲ್ಲಿ ಪ್ರಶಸ್ತಿಯನ್ನ ಬಾಚಿಕೊಂಡಿದೆ. ಪ್ರಶಸ್ತಿ ವಿಜೇತರ ಪಟ್ಟಿ ಈ ಕೆಳಗಿನಂತಿದೆ.

    ಅತ್ಯುತ್ತಮ ಚಿತ್ರ: ಥಪ್ಪಡ್
    ಅತ್ಯುತ್ತಮ ನಟ: ಇರ್ಫಾನ್ ಖಾನ್ (ಸಿನಿಮಾ-ಅಂಗ್ರೇಜಿ ಮೀಡಿಯಂ)
    ಅತ್ಯುತ್ತಮ ನಟಿ: ತಾಪ್ಸಿ ಪನ್ನು (ಸಿನಿಮಾ-ಥಪ್ಪಡ್)
    ವಿಮರ್ಶಕರ ಆಯ್ಕೆಯ ಅತ್ಯುತ್ತಮ ನಟ: ಅಮಿತಾಬ್ ಬಚ್ಚನ್ (ಸಿನಿಮಾ-ಗುಲಾಬೋ ಸಿತಾಬೋ)
    ವಿಮರ್ಶಕರ ಆಯ್ಕೆಯ ಅತ್ಯುತ್ತಮ ನಟಿ: ತಿಲ್ತೋಮಾ ಶೋಮೆ (ಸಿನಿಮಾ-ಸರ್)

    ಅತ್ಯುತ್ತಮ ಸಂಭಾಷಣೆ- ಜೂಹಿ ಚರ್ತುವೇದಿ (ಸಿನಿಮಾ- ಗುಲಾಬೋ ಸಿತಾಬೋ)
    ಅತ್ಯುತ್ತಮ ನಿರ್ದೇಶನ: ಓಂ ರಾವತ್ (ಸಿನಿಮಾ-ತಾನ್ಹಾಜಿ; ದಿ ಅನ್‍ಸಂಗ್ ವಾರಿಯರ್)
    ಅತ್ಯುತ್ತಮ ಪೋಷಕ ನಟ: ಸೈಫ್ ಅಲಿ ಖಾನ್ (ಸಿನಿಮಾ-ತಾನ್ಹಾಜಿ; ದಿ ಅನ್‍ಸಂಗ್ ವಾರಿಯರ್)
    ಅತ್ಯುತ್ತಮ ಪೋಷಕ ನಟಿ: ಫರೂಖ್ ಜಾಫರ್ (ಗುಲಾಬೋ ಸಿತಾಬೋ)
    ಅತ್ಯುತ್ತಮ ಸಾಹಿತ್ಯ: ಗುಲ್ಜಾರ್(ಛಪಾಕ್)

    ಅತ್ಯುತ್ತಮ ಮ್ಯೂಸಿಕಲ್ ಅಲ್ಬಂ: ಲೂಡೋ (ಪ್ರೀತಮ್)
    ಅತ್ಯುತ್ತಮ ಹಿನ್ನೆಲೆ ಗಾಯಕ: ರಾಘವ್ ಚೈತನ್ಯ-ಇಕ್ ಟುಕಡಾ ಚುಪಾ (ಸಿನಿಮಾ-ಥಪ್ಪಡ್)
    ಅತ್ಯುತ್ತಮ ಹಿನ್ನೆಲೆ ಗಾಯಕಿ: ಆಸೀಸ್ ಕೌರ್- ಮಲಂಗ್ (ಸಿನಿಮಾ-ಮಲಂಗ್)
    ಅತ್ಯುತ್ತಮ ಸಾಹಸ: ರಮಜಾನ್ ಬುಲುಟ್, ಆರ್.ಪಿ.ಯಾದವ್ (ಸಿನಿಮಾ-ತಾನ್ಹಾಜಿ; ದಿ ಅನ್‍ಸಂಗ್ ವಾರಿಯರ್)
    ಅತ್ಯುತ್ತಮ ವಿಎಫ್‍ಎಕ್ಸ್: ಪ್ರಸಾದ್ ಸುತಾರ್ (ಸಿನಿಮಾ-ತಾನ್ಹಾಜಿ; ದಿ ಅನ್‍ಸಂಗ್ ವಾರಿಯರ್)

    ಅತ್ಯುತ್ತಮ ವಸ್ತ್ರ ವಿನ್ಯಾಸ: ವೀರಾ ಕಪೂರ್ ಇಇ (ಸಿನಿಮಾ-ಗುಲಾಬೋ ಸಿತಾಬೋ)
    ಅತ್ಯುತ್ತಮ ಧ್ವನಿ ಮುದ್ರಣ: ಕಾಮೆದ್ ಖಾರಡೆ (ಸಿನಿಮಾ-ಥಪ್ಪಡ್)
    ಅತ್ಯುತ್ತಮ ಪ್ರೊಡೆಕ್ಷನ್ ಡಿಸೈನ್: ಮಾನಸಿ ಧೃವ್ ಮೆಹ್ತಾ (ಸಿನಿಮಾ-ಗುಲಾಬೋ ಸಿತಾಬೋ)
    ಅತ್ಯುತ್ತಮ ಬ್ಯಾಕ್‍ಗ್ರೌಂಡ್ ಸ್ಕೋರ್: ಮಂಗೇಶ್ ಊರ್ಮಿಳಾ ಧಾಕಡೆ (ಸಿನಿಮಾ-ಥಪ್ಪಡ್)
    ಅತ್ಯುತ್ತಮ ಸಿನಿಮಾ (ಫಿಕ್ಷನ್): ಅರ್ಜುನ್

    ಅತ್ಯುತ್ತಮ ಸಿನಿಮಾ (ಪಾಪೂಲರ್ ಚಾಯ್ಸ್): ದೇವಿ
    ಅತ್ಯುತ್ತಮ ಸಿನಿಮಾ (ನಾನ್ ಫಿಕ್ಷನ್): ಬ್ಯಾಕ್‍ಯಾರ್ಡ್ ವೈಡ್‍ಲೈಫ್ ಸೆಂಚೂರಿ
    ಅತ್ಯುತ್ತಮ ಕಿರುಚಿತ್ರ (ಪೀಪಲ್ಸ್ ಚಾಯ್ಸ್): ಪೂರ್ತಿ ಸವರಾಡೆಕರ್
    ಅತ್ಯುತ್ತಮ ನಟ (ಕಿರುಚಿತ್ರ): ಅರ್ನವ್
    ಅತ್ಯುತ್ತಮ ಕೊರಿಯೋಗ್ರಾಫರ್: ಫರ್ಹಾ ಖಾನ್ (ದಿಲ್ ಬೇಚೆರಾ)

     

  • ತಾಪ್ಸಿ ಪನ್ನು, ಅನುರಾಗ್ ಆದಾಯದಲ್ಲಿ 650 ಕೋಟಿ ವ್ಯತ್ಯಾಸ ಪತ್ತೆ ಹಚ್ಚಿದ ಐಟಿ ಅಧಿಕಾರಿಗಳು

    ತಾಪ್ಸಿ ಪನ್ನು, ಅನುರಾಗ್ ಆದಾಯದಲ್ಲಿ 650 ಕೋಟಿ ವ್ಯತ್ಯಾಸ ಪತ್ತೆ ಹಚ್ಚಿದ ಐಟಿ ಅಧಿಕಾರಿಗಳು

    – ಮೊಬೈಲ್‍ನಲ್ಲಿದ್ದ ದಾಖಲೆಗಳು ಡಿಲೀಟ್
    – 5 ಕೋಟಿ ನಗದು ಹಣ ಸ್ವೀಕರಿಸಿದ ತಾಪ್ಸಿ

    ಮುಂಬೈ: ನಿರ್ಮಾಪಕ ಅನುರಾಗ್ ಕಶ್ಯಪ್ ಹಾಗೂ ಜನಪ್ರಿಯ ನಟಿ ತಾಪ್ಸಿ ಪನ್ನು ಮನೆ ಮೇಲಿನ ಐಟಿ ದಾಳಿ ಬಾಲಿವುಡ್‍ನಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದು, ನೂರಾರು ಕೋಟಿ ರೂ.ಗಳನ್ನು ಕಾನೂನುಬಾಹಿರವಾಗಿ ವರ್ಗಾವಣೆ ಮಾಡಿರುವ ಕುರಿತು ಮಾಹಿತಿ ಲಭ್ಯವಾಗಿದೆ.

    ಎರಡು ದಿನಗಳ ಕಾಲ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಸುಮಾರು 5 ಕೋಟಿ ರೂ.ಗಳಿಗೆ ಸಂಬಂಧಿಸಿದಂತೆ ಹಣದ ವ್ಯವಹಾರ ನಡೆಸಿರುವ ಬಗ್ಗೆ ನಮಗೆ ರಿಸಿಪ್ಟ್ ಸಿಕ್ಕಿದೆ. ಲೆಕ್ಕ ನೀಡುವಾಗ ನಿರ್ಮಾಪಕ ಅನುರಾಗ್ ಕಶ್ಯಪ್ ಅವರು 20 ಕೋಟಿ ರೂ.ಗಳ ನಕಲಿ ಖರ್ಚು ತೋರಿಸಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.

    ತಾಪ್ಸಿ ಪನ್ನು ಸುಮಾರು 5 ಕೋಟಿ ರೂ.ಗಳನ್ನು ನಗದು ರೂಪದಲ್ಲಿ ಸ್ವೀಕರಿಸಿದ್ದು, ಅವರ ಕಂಪನಿ ಸಹ ತೆರಿಗೆಯನ್ನು ವಂಚಿಸಿದೆ. ತಾಪ್ಸಿ ಪನ್ನು ಅವರ ವ್ಯವಹಾರಗಳು ಹಾಗೂ ಸಿನಿಮಾಗಳಿಗೆ ಸಹಿ ಹಾಕುವಾಗ ಪಡೆದ ಮೊತ್ತದ ಬಗ್ಗೆ ತನಿಖೆ ನಡೆಯುತ್ತಿದೆ. ಕೆಲ ಸಿನಿಮಾಗಳಿಗೆ ಸಹಿ ಹಾಕುವಾಗ ಕೋಟಿ ರೂ.ಗಿಂತ ಕಡಿಮೆ ಹಣ ಪಡೆದಿದ್ದಾರೆ. ನಟಿಯ ಪ್ರಾಥಮಿಕ ಹೇಳಿಕೆಯನ್ನು ಮಾರ್ಚ್ 3ರಂದು ದಾಖಲಿಸಿದ್ದು, ಇಂದೂ ಸಹ ವಿವರವಾದ ಹೇಳಿಕೆಯನ್ನು ನಟಿ ತಾಪ್ಸಿ ಪನ್ನು ದಾಖಲಿಸಿದ್ದಾರೆ.

    ನಟಿಯ ಮೊಬೈಲ್‍ನಿಂದ ಕೆಲ ಡೇಟಾವನ್ನು ಡಿಲೀಟ್ ಮಾಡಲಾಗಿದೆ ಎಂದು ಐಟಿ ಅಧಿಕಾರಿಗಳು ಶಂಕಿಸಿದ್ದಾರೆ. ಈ ಡೇಟಾ ಮರಳಿ ಪಡೆಯಲು ತಜ್ಞರನ್ನು ಸಂಪರ್ಕಿಸಲಾಗಿದೆ. ಮುಂಬರುವ ದಿನಗಳಲ್ಲಿ ನಟಿಯನ್ನು ಮತ್ತೆ ವಿಚಾರಣೆಗೆ ಹಾಜರಾಗಲಿದ್ದಾರೆ.

    ಅನುರಾಗ್ ಕಶ್ಯಪ್ ಒಡೆತನದ ಫ್ಯಾಂಟಮ್ ಫಿಲಂಸ್ ಷೇರುದಾರರು ಸುಮಾರು 600 ಕೋಟಿ ರೂ.ಗಳ ಆದಾಯ ತೆರಿಗೆಯನ್ನು ವಂಚಿಸಿದ್ದಾರೆ ಎಂದು ಶಂಕಿಸಲಾಗಿದೆ. ಫ್ಯಾಂಟಮ್ ಫಿಲಂಸ್‍ನಿಂದ ಷೇರು ಮಾರಾಟ ನಡೆಸಿದ್ದು, ಇದರಿಂದ ಗಳಿಸಿದ ಹಣದಿಂದ ಆದಾಯ ತೆರಿಗೆ ಪಾವತಿಸಿಲ್ಲ ಎನ್ನಲಾಗಿದೆ.

    ಫ್ಯಾಂಟಮ್ ಫಿಲಂಸ್‍ನವರು ಸುಳ್ಳು ವೆಚ್ಚ ಹಾಗೂ ನಕಲಿ ಬಿಲ್‍ಗಳನ್ನು ಸೃಷ್ಟಿಸಿದ್ದಾರೆ. ಅನುರಾಗ್ ಕಶ್ಯಪ್ ಅವರ ಮೊಬೈಲ್‍ನ ಡೇಟಾಗಳನ್ನು ಸಹ ಡಿಲೀಟ್ ಮಾಡಿರುವುದು ಪತ್ತೆಯಾಗಿದೆ. ಫ್ಯಾಂಟಮ್ ಫಿಲಂಸ್‍ನಲ್ಲಿ ಅನುರಾಗ್ ಕಶ್ಯಪ್ ಸಹ ಶೇರ್ ಹೋಲ್ಡರ್ ಆಗಿದ್ದಾರೆ. ಅಲ್ಲದೆ 300 ಕೋಟಿ ರೂ.ಗಳ ವ್ಯವಹಾರದ ಕುರಿತು ಸಂಸ್ಥೆಯ ಅಧಿಕಾರಿಗಳು ವಿವರಿಸುವಲ್ಲಿ ವಿಫಲರಾಗಿದ್ದಾರೆ. ಬಾಕ್ಸ್ ಆಫಿಸ್ ಕಲೆಕ್ಷನ್‍ಗೆ ಹೋಲಿಸಿದರೆ ಪ್ರೊಡಕ್ಷನ್ ಹೌಸ್ ಆದಾಯವನ್ನು ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸಿದ್ದಕ್ಕೆ ಪುರಾವೆಗಳು ಸಿಕ್ಕಿದೆ ಎಂದು ಐಟಿ ಹೇಳಿದೆ.

  • ತಾಪ್ಸಿ ಪನ್ನು, ಅನುರಾಗ್ ಕಶ್ಯಪ್ ಮನೆ ಮೇಲೆ ಐಟಿ ದಾಳಿ

    ತಾಪ್ಸಿ ಪನ್ನು, ಅನುರಾಗ್ ಕಶ್ಯಪ್ ಮನೆ ಮೇಲೆ ಐಟಿ ದಾಳಿ

    ಮುಂಬೈ: ಬಾಲಿವುಡ್ ನಿರ್ಮಾಪಕರಾದ ಅನುರಾಗ್ ಕಶ್ಯಪ್, ವಿಕಾಸ್ ಬಹ್ಲ್ ಹಾಗೂ ಜನಪ್ರಿಯ ನಟಿ ತಾಪ್ಸಿ ಪನ್ನು ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ.

    ಅನುರಾಗ್ ಕಶ್ಯಪ್ ಅವರ ನಿರ್ಮಾಣ ಸಂಸ್ಥೆ ಫ್ಯಾಂಟಮ್ ಫಿಲಂಸ್‍ಗೆ ಸಂಬಂಧಿಸಿದ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ದಾಳಿ ನಡೆಸಲಾಗಿದೆ. ಈ ಮೂವರು ಸೆಲೆಬ್ರಿಟಿಗಳ ಮನೆಗಳು ಮಾತ್ರವಲ್ಲದೆ ಮುಂಬೈ ಹಾಗೂ ಪುಣೆಯಲ್ಲಿ 20 ಕಡೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ತೆರಿಗೆ ವಂಚನೆಗೆ ಸಂಬಂಧಿಸಿದಂತೆ ದಾಳಿ ನಡೆಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ಟ್ಯಾಲೆಂಟ್ ಮ್ಯಾನೇಜ್‍ಮೆಂಟ್ ಕಂಪನಿ ನಡೆಸುತ್ತಿರುವ ಸಿನಿಮಾ ನಿರ್ಮಾಪಕ ಮಧು ಮಂತೇನಾ ವರ್ಮಾ ಸಹ ಐಟಿ ಕಣ್ಗಾವಲಿನಲ್ಲಿದ್ದಾರೆ.

    ಅನುರಾಗ್ ಕಶ್ಯಪ್ ನಿರ್ಮಾಣದಲ್ಲಿ ಮುಂಬರುವ ಥ್ರಿಲ್ಲರ್ ‘ದೋಬಾರಾ’ಗಾಗಿ ನಟ ಪಾವೈಲ್ ಗುಲಾಟಿ ಅವರೊಂದಿಗೆ ಮತ್ತೆ ಒಂದಾಗುತ್ತಿರುವುದಾಗಿ ತಾಪ್ಸೀ ಪನ್ನು ಇತ್ತೀಚೆಗೆ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಅಲ್ಲದೆ ಫೆಬ್ರವರಿ 28ರಂದು ಥಪ್ಪಡ್ ಸಿನಿಮಾದ ಮೊದಲ ವರ್ಷದ ಆ್ಯನಿವರ್ಸರಿ ಆಚರಿಸುತ್ತಿರುವುದಾಗಿ ಸಹ ಪೋಸ್ಟ್ ಮಾಡಿದ್ದರು.

     

    View this post on Instagram

     

    A post shared by Taapsee Pannu (@taapsee)

    ದೋಬಾರಾ ಸಿನಿಮಾ ಒಪ್ಪಿಕೊಳ್ಳುವ ಮೂಲಕ ತಾಪ್ಸಿ ಪನ್ನು ಅವರು ಅನುರಾಗ್ ಕಶ್ಯಪ್ ಜೊತೆ ಮೂರನೇ ಬಾರಿ ಒಂದಾಗುತ್ತಿದ್ದಾರೆ. 2018ರಲ್ಲಿ ಹಿಟ್ ಆಗಿದ್ದ ಮನ್‍ಮರ್ಝಿಯಾನ್ ಹಾಗೂ ಸಂದ್ ಕಿ ಆಂಖ್ ಸಿನಿಮಾಗಳಲ್ಲಿ ಈ ಜೋಡಿ ಒಂದಾಗಿತ್ತು. ತಾಪ್ಸಿ ಪನ್ನು ಅವರು ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ಹೆಚ್ಚು ಗುರುತಿಸಿಕೊಂಡಿದ್ದಾರೆ.

  • ಒಮ್ಮೆ ಕೆನ್ನೆಗೆ ಬಾರಿಸಿದ್ದಕ್ಕೆ ಮದ್ವೆ ಮುರಿದುಕೊಂಡ್ರಿ – ತಾಪ್ಸಿಗೆ ಪ್ರತಾಪ್ ಸಿಂಹ ಹೀಗಂದಿದ್ಯಾಕೆ..?

    ಒಮ್ಮೆ ಕೆನ್ನೆಗೆ ಬಾರಿಸಿದ್ದಕ್ಕೆ ಮದ್ವೆ ಮುರಿದುಕೊಂಡ್ರಿ – ತಾಪ್ಸಿಗೆ ಪ್ರತಾಪ್ ಸಿಂಹ ಹೀಗಂದಿದ್ಯಾಕೆ..?

    ಬೆಂಗಳೂರು: ರೈತರ ಪ್ರತಿಭಟನೆ ಸಂಬಂಧ ಅಮೆರಿಕದ ಪಾಪ್ ಗಾಯಕಿ ರಿಹಾನಾ ಮಾಡಿರುವ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಈ ಸಂಬಂಧ ಸೆಲೆಬ್ರಿಟಿಗಳು ಕೂಡ ವಾದ-ವಿವಾದಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಅಂತೆಯೇ ಬಾಲಿವುಡ್ ನಟಿ ತಾಪ್ಸಿ ಪನ್ನು ಕೂಡ ಒಂದು ಟ್ವೀಟ್ ಮಾಡಿದ್ದು, ಇದಕ್ಕೆ ಮೈಸೂರು ಸಂಸದ ಪ್ರತಾಪ್ ಸಿಂಹ ಖಾರವಾಗಿಯೇ ಪ್ರತ್ಯುತ್ತರ ನೀಡಿದ್ದಾರೆ.

    ತಾಪ್ಸಿ ಟ್ವೀಟ್‍ಗೆ ಪ್ರತಿಕ್ರಿಯಿಸಿರುವ ಸಿಂಹ, ತಾಪ್ಸೀ ಅವರೇ, ಓರ್ವ ರಶ್ದಿ ಭಾರತೀಯ ಮುಸ್ಲಿಮರನ್ನು ಕೆರಳಿಸಿತು. ಒಂದು ವ್ಯಂಗ್ಯಚಿತ್ರವು ಪ್ರಪಂಚದಾದ್ಯಂತ ಮುಸ್ಲಿಮರನ್ನು ಕೆರಳಿಸಿತು. ಒಂದು ಪುಸ್ತಕ (The da Vinci Code) ವಿಶ್ವದೆಲ್ಲೆಡೆ ಕ್ರಿಶ್ಚಿಯನರಲ್ಲಿ ಸಂಚಲನ ಮೂಡಿಸಿತ್ತು. ಅಂತೆಯೇ ಕೇವಲ ಒಂದು ಬಾರಿ ಕೆನ್ನೆಗೆ ಬಾರಿಸಿದ್ದಕ್ಕೆ ನೀವು ಮದುವೆ ಮುರಿದುಕೊಂಡ್ರಿ. ದಯವಿಟ್ಟು ಸ್ಕ್ರಿಪ್ಟೆಡ್ ಸಿನಿಮಾ ಡೈಲಾಗ್‍ಗಳಿಗೆ ನಿಮ್ಮನ್ನು ನೀವು ಸೀಮಿತಗೊಳಿಸಿಕೊಳ್ಳಿ. ಉಳಿದ ವಿಚಾರಗಳು ನಿಮ್ಮ ಜ್ಞಾನದ ಹೊರಗಿದೆ ಎಂದು ಹೇಳಿದ್ದಾರೆ.

    ತಾಪ್ಸಿ ಹೇಳಿದ್ದೇನು..?
    ಒಂದು ಟ್ವೀಟ್ ನಿಮ್ಮ ಒಗ್ಗಟ್ಟನ್ನು ಕೆರಳಿಸುವುದಾದರೆ, ಒಂದು ಜೋಕ್ ನಿಮ್ಮ ನಂಬಿಕೆಯನ್ನು ಕೆರಳಿಸುವುದಾದರೆ ಅಥವಾ ಒಂದು ಕಾರ್ಯಕ್ರಮ ನಿಮ್ಮ ಧಾರ್ಮಿಕ ನಂಬಿಕೆಯನ್ನು ಕೆರಳಿಸುವುದಾದರೆ? ಮೊದಲು ನೀವು ನಂಬಿರುವ ಮೌಲ್ಯಗಳನ್ನು ಗಟ್ಟಿಗೊಳಿಸುವ ಕೆಲಸ ಮಾಡಿ. ಬದಲಿಗೆ ಉಳಿದವರಿಗೆ ಪ್ರಾಪಗಾಂಡಾ ಪಾಠ ಮಾಡಲು ಬರಬೇಡಿ’ ಎಂದು ನಟಿ ತಾಪ್ಸಿ ಟ್ವೀಟ್ ಮಾಡಿದ್ದರು.

    ತಾಪ್ಸಿ ಅವರು ಮಾಡಿರುವ ಈ ಟ್ವೀಟ್ ಎಲ್ಲೆಡೆ ಭಾರೀ ವೈರಲ್ ಆಗಿದ್ದು, ಪರ- ವಿರೋಧ ಕಾಮೆಂಟ ಗಳು ಬರುತ್ತಿದ್ದವು. ಇದೀಗ ಪ್ರತಾಪ್ ಸಿಂಹ ಅವರು ಅದೇ ಶೈಲಿಯಲ್ಲಿ ಪ್ರತಿಕ್ರಿಯಿಸುವ ಮೂಲಕ ಟಾಂಗ್ ನೀಡಿದ್ದಾರೆ.

  • ವಿಡಿಯೋ ಹೇಗೆ ಮಾಡ್ಬೇಕು – ಅಭಿಮಾನಿಗಳಿಗೆ ತಾಪ್ಸಿ ಟಿಪ್ಸ್

    ವಿಡಿಯೋ ಹೇಗೆ ಮಾಡ್ಬೇಕು – ಅಭಿಮಾನಿಗಳಿಗೆ ತಾಪ್ಸಿ ಟಿಪ್ಸ್

    ಮುಂಬೈ: ಬಾಲಿವುಡ್ ನಟಿ ತಾಪ್ಸಿ ಪನ್ನು ತಮ್ಮ ಮುಂದಿನ ಚಿತ್ರ ರಶ್ಮಿ ರಾಕೆಟ್‍ನಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಚಿತ್ರೀಕರಣದ ವೇಳೆ ಗುಜರಾತ್ ರೌಂಡ್ಸ್ ಹೊಡೆಯುತ್ತಿರುವ ತಾಪ್ಸಿ ಗುಜರಾತ್ ಸುಂದರ ಸ್ಥಳದಲ್ಲಿನ ಒಂದು ವೀಡಿಯೋವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದ್ದಾರೆ. ಸಿನಿಮಾ ಕುರಿತಂತೆ ಡಿಟೇಲ್ಸ್ ನೀಡುತ್ತಾ ವೀಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

     

    View this post on Instagram

     

    A post shared by Taapsee Pannu (@taapsee)

    ರಾನ್ ಆಫ್ ಕಚ್‍ನಂತಹ ಸುಂದರವಾದ ಬಯಲು ಪ್ರದೇಶಕ್ಕೆ ಹೋಗಿದ್ದ ತಾಪ್ಸಿ ಅಭಿಮಾನಿಗಳಿ ಸುಂದರವಾದ ಪ್ರದೇಶಗಳಲ್ಲಿ ಹಂತ ಹಂತವಾಗಿ ಹೇಗೆ ವೀಡಿಯೋ ಶೂಟ್ ಮಾಡಬಹುದು ಎಂದು ಸಲಹೆ ನೀಡುವ ಮೂಲಕ ಮನರಂಜನೆ ನೀಡಿದ್ದಾರೆ. ಈ ಸ್ಥಳದಲ್ಲಿ ತಾಪ್ಸಿ ಬಿಳಿ ಟಿ-ಶರ್ಟ್, ಜಾಕೆಟ್ ಮತ್ತು ಶೂಗಳನ್ನು ಧರಿಸಿದ್ದು, ವೀಡಿಯೋನಲ್ಲಿ ಜಾಕೆಟ್ ಬಿಚ್ಚಿ ನೆಲದ ಮೇಲೆ ಪುಷ್ ಆಪ್ಸ್ ಮಾಡಿದ್ದಾರೆ. ಸದಯ ಈ ವಿಡಯೋ ಇದೀಗ ಫುಲ್ ವೈರಲ್ ಆಗುತ್ತಿದೆ.

     

    View this post on Instagram

     

    A post shared by Taapsee Pannu (@taapsee)

    ಜೊತೆಗೆ ರಶ್ಮಿ ರಾಕೆಟ್ ಚಿತ್ರೀಕರಣದ ಕೊನೆಯ ದಿನದ ಶೂಟಿಂಗ್ ವೇಳೆ ಗುಜರಾತಿ  ಸಾಂಪ್ರದಾಯಿಕ ಉಡುಪನ್ನು ಧರಿಸಿ ಒಂಟೆ ಬಂಡಿಯ ಮೇಲೆ ತಾಪ್ಸಿ ಕುಳಿತಿರುವ ಮತ್ತೊಂದು ಫೋಟೋವನ್ನು ಕೂಡ ಶೇರ್ ಮಾಡಿಕೊಂಡಿದ್ದಾರೆ.

     

    View this post on Instagram

     

    A post shared by Taapsee Pannu (@taapsee)

    ಇನ್ನೂ ರಶ್ಮಿ ರಾಕೆಟ್ ಚಿತ್ರದಲ್ಲಿ ತಾಪ್ಸಿ ಕ್ರೀಡಾಪಟುವಾಗಿ ಅಭಿನಯಿಸುತ್ತಿದ್ದು, ತಾಪ್ಸಿ ಗಂಡನ ಪಾತ್ರದಲ್ಲಿ ಪ್ರಿಯನ್ಶು ಪೈನ್ಯುಲಿ ಅಭಿನಯಿಸಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿಷೇಕ್ ಬ್ಯಾನರ್ಜಿ ಕಾಣಿಸಿಕೊಂಡಿದ್ದು, ಚಿತ್ರಕ್ಕೆ ಆಕರ್ಷ್ ಖುರಾನಾ ಆ್ಯಕ್ಷನ್ ಕಟ್ ಹೇಳಿದ್ದಾರೆ. ಅನಿರುದ್ಧ ಗುಹಾ ಮತ್ತು ಕಾನಿಕಾ ಧಿಲ್ಲಾನ್ ಚಿತ್ರ ಕಥೆ ಬರೆದಿದ್ದು, ರೋನಿ ಸ್ಕ್ರೂವಾಲಾ ಸೇರಿದಂತೆ ನೇಹಾ ಆನಂದ್ ಮತ್ತು ಪ್ರಂಜಲ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

  • ಸಂಬಳ ಕಟ್ ಮಾಡಲಿ ನಾವು ತಯಾರಾಗಿದ್ದೇವೆ ಎಂದ ತಾಪ್ಸಿ

    ಸಂಬಳ ಕಟ್ ಮಾಡಲಿ ನಾವು ತಯಾರಾಗಿದ್ದೇವೆ ಎಂದ ತಾಪ್ಸಿ

    ನವದೆಹಲಿ: ಬಾಲಿವುಡ್ ಬೆಡಗಿ ತಾಪ್ಸಿ ಪನ್ನು ತಮ್ಮ ಅಭಿಪ್ರಾಯಗಳನ್ನು ನೇರವಾಗಿ ಹಂಚಿಕೊಳ್ಳುತ್ತಾರೆ. ನೇರ ಮಾತುಗಳ ಮೂಲಕವೇ ಅವರು ಚಿರಪರಿಚಿತರಾಗಿದ್ದಾರೆ. ಇದೀಗ ಲಾಕ್‍ಡೌನ್ ಹಿನ್ನೆಲೆ ಆರ್ಥಿಕತೆಯೇ ಬುಡಮೇಲಾಗಿದ್ದು, ಖಾಸಗಿ ಕಂಪನಿಗಳು ಉದ್ಯೋಗಿಗಳಿಗೆ ಸಂಬಳ ನೀಡಲು ಪರಿತಪಿಸುವಂತಾಗಿದೆ. ಹೀಗಾಗಿ ಹಲವು ಕಂಪನಿಗಳಲ್ಲಿ ಸಂಬಳ ಕಡಿತ ಮಾಡಲಾಗುತ್ತಿದೆ. ಇನ್ನು ಸಿನಿಮಾ ರಂಗದ ಸಂಬಳದ ಕುರಿತು ಸಹ ಚರ್ಚೆ ನಡೆಯುತ್ತಿದ್ದು, ಈ ಕುರಿತು ತಾಪ್ಸಿ ಪನ್ನು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

    ತಾಪ್ಸಿ ಬಾಲಿವುಡ್‍ನಲ್ಲಿ ಬಹು ಬೇಡಿಕೆಯ ನಟಿಯಾಗಿದ್ದು, ತಮ್ಮ ವಿಶಿಷ್ಠ ಸಿನಿಮಾಗಳ ಮೂಲಕವೇ ಅಭಿಮಾನಿ ವರ್ಗವನ್ನು ಗಳಿಸಿದ್ದಾರೆ. ತುಂಬಾ ವಿಭಿನ್ನ, ವಿಶೇಷ ಸಿನಿಮಾಗಳನ್ನು ಮಾತ್ರ ತಾಪ್ಸಿ ಒಪ್ಪಿಕೊಳ್ಳುತ್ತಾರೆ. ಬದ್ಲಾ, ಗೇಮ್ ಓವರ್, ಮಿಷನ್ ಮಂಗಳ್, ಸಾಂದ್ ಕಿ ಆಂಕ್ ಹಾಗೂ ತಪ್ಪಡ್ ನಂತರ ವಿಶಿಷ್ಠ ಸಿನಿಮಾಗಳಲ್ಲಿ ತಾಪ್ಸಿ ಪಾತ್ರ ನಿಭಾಯಿಸಿದ್ದಾರೆ. ತಪ್ಪಡ್ ಸಿನಿಮಾ ಮೂಲಕ ಮಹಿಳೆಯರ ಮೇಲಿನ ಶೋಷಣೆ ಕುರಿತು ಬೆಳಕು ಚೆಲ್ಲಿದ್ದಾರೆ.

    ಹೀಗಿರುವಾಗಲೇ ಸಿನಿಮಾ ತಾರೆಯರ ಸಂಬಳದ ಕುರಿತ ಪ್ರಶ್ನೆಗೂ ಉತ್ತರಿಸಿರುವ ಅವರು, ಇಂತಹ ಸಂದರ್ಭದಲ್ಲಿ ನಾನು ಯಾವುದೇ ಚಿತ್ರೀಕರಣದಲ್ಲಿ ಭಾಗಿಯಾಗಿಲ್ಲ. ಹೀಗಾಗಿ ಸಂಬಳ ಸಿಗುತ್ತಿಲ್ಲ. ಮುಂದೆ ಸಂಬಳ ಕಟ್ ಮಾಡುವುದಾದರೆ ಮಾಡಲಿ. ನಾನು ಅದಕ್ಕೆ ಸಿದ್ಧಳಿದ್ದೇನೆ ಎಂದು ನೇರವಾಗಿ ಉತ್ತರಿಸಿದ್ದಾರೆ.

    ಲಾಕ್‍ಡೌನ್ ಹಿನ್ನೆಲೆ ಹಲವರು ಒಟಿಟಿ ಪ್ಲಾಟ್‍ಫಾರ್ಮ್‍ನಲ್ಲಿ ಸಿನಿಮಾ ಬಿಡುಗಡೆಗೆ ಮುಂದಾಗಿದ್ದಾರೆ. ಈ ಕುರಿತು ಹಲವು ನಿರ್ಮಾಪಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಹ ಉತ್ತರಿಸಿರುವ ತಾಪ್ಸಿ, ಅವರು ಸಿಟ್ಟಾಗಿರುವುದರಲ್ಲಿ ಅರ್ಥವಿದೆ. ನಿರ್ಮಾಪಕರು ಸಿಟ್ಟಾಗಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಸಿನಿಮಾ ಬಿಡುಗಡೆಗೆ ಆತರ ಪಡಬಾರದು, ಸ್ವಲ್ಪ ಕಾಯಬೇಕು ಎಂದಿದ್ದಾರೆ. ಅಲ್ಲದೆ ದೇಶದಲ್ಲಿ ಚಿತ್ರಮಂದಿರಗಳು ನಶಿಸುವುದಿಲ್ಲ ಎಂದು ಸಹ ಹೇಳಿದ್ದಾರೆ.

    ತಾಪ್ಸಿ ಪನ್ನು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಸದ್ಯ ಹಸೀನ್ ದಿಲ್ರುಬಾ, ಲೂಪ್ ಲಪೇಟಾ, ಜನ ಗಣ ಮನ, ಶಹಬ್ಬಾಷ್ ಮಿತು ಚಿತ್ರಗಳಲ್ಲಿ ತೊಡಗಿಕೊಂಡಿದ್ದಾರೆ. ಲಾಕ್‍ಡೌನ್ ಹಿನ್ನೆಲೆ ಚಿತ್ರೀಕರಣ ಸ್ಥಗಿತವಾಗಿದ್ದರಿಂದ ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ.