Tag: ತಾಪ್ಸಿ ಪನ್ನು

  • ರಕುಲ್ ನಂತರ ಮದುವೆಗೆ ಸಜ್ಜಾದ ಖ್ಯಾತ ನಟಿ ತಾಪ್ಸಿ ಪನ್ನು

    ರಕುಲ್ ನಂತರ ಮದುವೆಗೆ ಸಜ್ಜಾದ ಖ್ಯಾತ ನಟಿ ತಾಪ್ಸಿ ಪನ್ನು

    ಬಾಲಿವುಡ್ ಅಂಗಳದಲ್ಲಿ ಮದುವೆಯ ಸಂಭ್ರಮ ಮನೆ ಮಾಡಿದೆ. ಕಳೆದ ವಾರವಷ್ಟೇ ರಕುಲ್ (Rakul Preet Singh) ಮತ್ತು ಜಾಕಿ ಭಗ್ನಾನಿ ಗೋವಾದಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದರು. ಗೂಗ್ಲಿ ಬೆಡಗಿ ಕೃತಿ ಕರಬಂಧ ಮಾರ್ಚ್‌ನಲ್ಲಿ ಮದುವೆ ಆಗೋದಾಗಿ ಅನೌನ್ಸ್ ಮಾಡಿದ್ದರು. ಈ ಬೆನ್ನಲ್ಲೇ ಬಾಲಿವುಡ್ ನಟಿ ತಾಪ್ಸಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

    ಫೆ.21ರಂದು ರಕುಲ್ ಜಾಕಿ ಜೊತೆ ಮದುವೆಯಾದರು. ಕೃತಿ ಇದೇ ಮಾರ್ಚ್ 13ಕ್ಕೆ ಹೊಸ ಬಾಳಿಗೆ ಕಾಲಿಡಲಿದ್ದಾರೆ. ಈ ಬೆನ್ನಲ್ಲೇ ತಾಪ್ಸಿ (Taapsee Pannu) ತಮ್ಮ ಬಹುಕಾಲದ ಗೆಳೆಯನ ಜೊತೆ ಮದುವೆಗೆ ರೆಡಿಯಾಗಿದ್ದಾರೆ. ಮಾರ್ಚ್ ಅಂತ್ಯದಲ್ಲಿ ಉದಯಪುರದಲ್ಲಿ ಮದುವೆ (Wedding) ನಡೆಯಲಿದೆ.‌ ಇದನ್ನೂ ಓದಿ:ಸೆಲೆಬ್ರಿಟಿಗಳ ಮೇಲೆ ಗಂಭೀರ ಆರೋಪ ಮಾಡಿದ ಕಂಗನಾ

    ಬ್ಯಾಡ್ಮಿಂಟನ್ ಆಟಗಾರ ಮಥಿಯಾಸ್ ಬೋ (Mathias Boe) ಜೊತೆ 10 ವರ್ಷಗಳ ಕಾಲ ಡೇಟಿಂಗ್ ಮಾಡ್ತಿದ್ದರು ತಾಪ್ಸಿ. ಈಗ ಗುರುಹಿರಿಯರ ಸಮ್ಮತಿಯ ಮೇರೆಗೆ ಮದುವೆಯಾಗುತ್ತಿದ್ದಾರೆ. ಮದುವೆಗೆ 2 ಕುಟುಂಬದವರು ಮತ್ತು ಆಪ್ತರಷ್ಟೇ ಭಾಗಿಯಾಗಲಿದ್ದಾರೆ. ಹಾಗಾಗಿ ಬಾಲಿವುಡ್ ಮತ್ತು ಸೌತ್ ಸಿನಿಮಾರಂಗದ ಸೆಲೆಬ್ರಿಟಿಗಳಿಗೆ ಮದುವೆಗೆ ಆಹ್ವಾನವಿಲ್ಲ ಎನ್ನಲಾಗುತ್ತಿದೆ.

    ಸದ್ಯ ಪಡ್ಡೆಹುಡುಗರ ನೆಚ್ಚಿನ ನಟಿ ತಾಪ್ಸಿ ಮದುವೆಗೆ ಸಿದ್ಧತೆ ಮಾಡಿಕೊಳ್ತಿರೋದಕ್ಕೆ ನಿರಾಸೆಯಾಗಿದ್ದಾರೆ. ಏನೇ ಆಗಲಿ ನಮ್ಮ ನಾಯಕಿಗೆ ಶುಭವಾಗಲಿ ಎಂದು ಹಾರೈಸುತ್ತಿದ್ದಾರೆ ಫ್ಯಾನ್ಸ್.

  • ಮದುವೆ ಯಾವಾಗ ಎಂದಿದ್ದಕ್ಕೆ? ನಾನಿನ್ನೂ ಪ್ರೆಗ್ನೆಂಟ್‌ ಆಗಿಲ್ಲ ಎಂದು ಉತ್ತರಿಸಿದ ತಾಪ್ಸಿ ಪನ್ನು

    ಮದುವೆ ಯಾವಾಗ ಎಂದಿದ್ದಕ್ಕೆ? ನಾನಿನ್ನೂ ಪ್ರೆಗ್ನೆಂಟ್‌ ಆಗಿಲ್ಲ ಎಂದು ಉತ್ತರಿಸಿದ ತಾಪ್ಸಿ ಪನ್ನು

    ಸೌತ್‌ನ ಬ್ಯುಸಿ ನಟಿ ತಾಪ್ಸಿ ಪನ್ನು (Taapsee Pannu) ಇದೀಗ ನಟನೆಯಿಂದ ಕೊಂಚ ಬ್ರೇಕ್ ಪಡೆದಿದ್ದಾರೆ. ಕಳೆದ ವರ್ಷ ಬ್ಯಾಕ್ ಟು ಬ್ಯಾಕ್ ಹಿಟ್ ಕೊಟ್ಟಿದ್ದ ನಟಿ, ತಾಪ್ಸಿ ಪನ್ನು ಈಗ ಟ್ರಿಪ್ ಮಾಡುವ ಮೂಡ್‌ನಲ್ಲಿದ್ದಾರೆ. ಇದರ ಮಧ್ಯೆ ಅಭಿಮಾನಿಗಳ ಜೊತೆ ಮಾತನಾಡಲು ಕೊಂಚ ಬಿಡುವು ಮಾಡಿಕೊಂಡಿದ್ದಾರೆ. ಮದುವೆ (Wedding) ಬಗ್ಗೆ ಎದುರಾದ ಪ್ರಶ್ನೆಗೆ ನಟಿ ಮಸ್ತ್ ಆಗಿ ಉತ್ತರ ನೀಡಿದ್ದಾರೆ.

    ತೆಲುಗು, ತಮಿಳು ಮತ್ತು ಬಾಲಿವುಡ್ ಸಿನಿಮಾಗಳಲ್ಲೂ ತಾಪ್ಸಿ ಪನ್ನು ನಟಿಸುತ್ತಿದ್ದಾರೆ. ಸಾಕಷ್ಟು ಹಿಟ್ ಚಿತ್ರಗಳನ್ನ ನೀಡಿದ್ದಾರೆ. 2021-2022ರಲ್ಲಿ ಸಾಲು ಸಾಲಾಗಿ ಆರು ಸಿನಿಮಾಗಳನ್ನ ಹಿಟ್ ನೀಡಿದ್ದರು. ಈಗ ಅವರು ಬ್ರೇಕ್ ತೆಗೆದುಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಇರುವ ನಟಿ, ಫ್ಯಾನ್ಸ್ ಜೊತೆ ಪ್ರಶ್ನಾವಳಿಯನ್ನ ಮಾಡಿದ್ದಾರೆ. ಈ ವೇಳೆ ಮದುವೆ ಯಾವಾಗ ಎಂಬ ಪ್ರಶ್ನೆ ಅವರಿಗೆ ಎದುರಾಗಿದೆ.

    ಬ್ಯಾಡ್ಮಿಂಟನ್ ಆಟಗಾರ, ಕೋಚ್ ಮಥಾಯಿಸ್ ಬೋ ಅವರ ಜೊತೆ ತಾಪ್ಸಿ ಪನ್ನು ಬಹಳ ಕಾಲದಿಂದ ಎಂಗೇಜ್ ಆಗಿದ್ದಾರೆ. ಪ್ರಿಯಕರನ ಜೊತೆ ಅವರು ಆಗಾಗ ಫಾರಿನ್ ಟ್ರಿಪ್ ಮಾಡುತ್ತಾರೆ. ಆ ಫೋಟೋಗಳನ್ನು ಕೂಡ ಅವರು ಹಂಚಿಕೊಳ್ಳುತ್ತಾರೆ. ಇನ್ನೂ ತಾಪ್ಸಿಗೆ ವಯಸ್ಸು 35 ವರ್ಷ ಹಾಗಾಗಿ ಮದುವೆ ಬಗ್ಗೆ ಫ್ಯಾನ್ಸ್ ಕೇಳಿದ್ದಾರೆ. ಇದನ್ನೂ ಓದಿ:ಮಹೇಶ್‌ ಬಾಬು ಸಿನಿಮಾ ಬಗ್ಗೆ ಅಪ್‌ಡೇಟ್‌ ಹಂಚಿಕೊಂಡ ಮೀನಾಕ್ಷಿ ಚೌಧರಿ

    ಯಾವಾಗ ನನ್ನ ಮದುವೆ ಅಂತಾ ಕೇಳುತ್ತಿದ್ದೀರಿ. ನಾನಿನ್ನೂ ಗರ್ಭಿಣಿ ಆಗಿಲ್ಲ. ಸದ್ಯಕ್ಕಂತೂ ಆಗಲ್ಲ. ಆದಾಗ ನಿಮಗೆ ತಿಳಿಸುತ್ತೇನೆ ಎಂದು ತಾಪ್ಸಿ ಪನ್ನು ಉತ್ತರಿಸಿದ್ದಾರೆ. ಮಕ್ಕಳನ್ನು ಪಡೆಯಬೇಕು ಎನಿಸಿದಾಗ ನಾನು ಮದುವೆ ಆಗುತ್ತೇನೆ ಎಂದು ಈ ಹಿಂದಿನ ಸಂದರ್ಶನದಲ್ಲಿ ಅವರು ಹೇಳಿದ್ದರು. ಈ ಮೂಲಕ ಸದ್ಯದಲ್ಲೇ ಮದುವೆ ಆಗುವ ಪ್ಲಾನ್ ಇಲ್ಲ ಎಂದು ತಿಳಿಸಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾಶ್ಮೀರದಿಂದ ಶುರುವಾಯ್ತು ಶಾರುಖ್ ನಟನೆಯ ‘ಡಂಕಿ’ ಚಿತ್ರ

    ಕಾಶ್ಮೀರದಿಂದ ಶುರುವಾಯ್ತು ಶಾರುಖ್ ನಟನೆಯ ‘ಡಂಕಿ’ ಚಿತ್ರ

    ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ (Shah Rukh Khan) ನಟನೆಯ ‘ಜವಾನ್’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ನಡುವೆ ಶಾರುಖ್ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಹೆಸರಾಂತ ನಿರ್ದೇಶಕ ರಾಜ್ ಕುಮಾರ್ ಹಿರಾನಿ (Raj Kumar Hirani) ನಿರ್ದೇಶನದಲ್ಲಿ ತಯಾರಾಗುತ್ತಿರುವ ಡಂಕಿ ಚಿತ್ರದಲ್ಲಿ ಅವರು ನಟಿಸುತ್ತಿದ್ದು, ಈ ಸಿನಿಮಾದ ಶೂಟಿಂಗ್ ಸದ್ದಿಲ್ಲದೇ ಶುರುವಾಗಿದೆ.

    ಡಂಕಿ ಸಿನಿಮಾವನ್ನು ನಿರ್ದೇಶಕರು ಕಾಶ್ಮೀರದಿಂದ (Kashmir) ಶುರು ಮಾಡಿದ್ದಾರೆ. ಈ ಭಾಗದ ಚಿತ್ರೀಕರಣಕ್ಕಾಗಿ ಶಾರುಖ್ ಕಾಶ್ಮೀರದಲ್ಲಿ ಬೀಡುಬಿಟ್ಟಿದ್ದಾರೆ. ಕಾಶ್ಮೀರದಲ್ಲಿ ತಮ್ಮ ನೆಚ್ಚಿನ ನಟ ಶಾರುಖ್ ಶೂಟಿಂಗ್ ನಲ್ಲಿ ಪಾಲ್ಗೊಂಡ ವಿಡಿಯೋವನ್ನು ಅವರ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

    ಹನ್ನೊಂದು ವರ್ಷದ ನಂತರ ಶಾರುಖ್ ಸಿನಿಮಾ ಕಾಶ್ಮೀರದಲ್ಲಿ ಚಿತ್ರೀಕರಣವಾಗುತ್ತಿದ್ದು,  ಈ ಹಿಂದೆ ಜಬ್ ತಕ್ ಹೈ ಜಾನ್ ಸಿನಿಮಾದ ಶೂಟಿಂಗ್ ಅದೇ ಸ್ಥಳದಲ್ಲೇ ನಡೆದಿತ್ತು ಎಂದು ಅಭಿಮಾನಿಗಳು ನೆನಪಿಸಿಕೊಂಡಿದ್ದಾರೆ. ಬರೋಬ್ಬರಿ 11 ವರ್ಷಗಳ ಬಳಿಕ ಆ ನೆಲದಲ್ಲಿ ಶಾರುಖ್ ಕಾಲಿಟ್ಟಿರುವುದು ಅಭಿಮಾನಿಗಳಿಗೆ ಸಹಜವಾಗಿಯೇ ಸಂಭ್ರಮ ತಂದಿದೆ. ಇದನ್ನೂ ಓದಿ:ನಾನು ಮಾತಾಡಿದರೆ ಸಮಂತಾ ಕಥೆ ಅಷ್ಟೆ: ಮತ್ತೆ ಗುಡುಗಿದ ಚಿಟ್ಟಿ ಬಾಬು

    ಡಂಕಿ ಸಿನಿಮಾದಲ್ಲಿ ಶಾರುಖ್ ಜೊತೆ ತಾಪ್ಸಿ ಪನ್ನು(Taapsee Pannu) ಮತ್ತು ವಿಕ್ಕಿ ಕೌಶಲ್ (Vicky Kaushal) ನಟಿಸಿದ್ದು, ಸದ್ಯ ಕಾಶ್ಮೀರದ ಸೋನ್ ಮಾರ್ಗ್ ಪ್ರದೇಶದಲ್ಲಿ ಮಾತಿನ ಭಾಗದ ಚಿತ್ರೀಕರಣವನ್ನು ಮಾಡುತ್ತಿದ್ದಾರಂತೆ ನಿರ್ದೇಶಕ ರಾಜಕುಮಾರ್ ಹಿರಾನಿ.

  • ಸಿಕ್ಸ್ ಪ್ಯಾಕ್ ನಲ್ಲಿ ತಾಪ್ಸಿ ಪನ್ನು: ನಟಿಯ ಕಸರತ್ತಿಗೆ ಅಭಿಮಾನಿಗಳ ಪ್ರಶಂಸೆ

    ಸಿಕ್ಸ್ ಪ್ಯಾಕ್ ನಲ್ಲಿ ತಾಪ್ಸಿ ಪನ್ನು: ನಟಿಯ ಕಸರತ್ತಿಗೆ ಅಭಿಮಾನಿಗಳ ಪ್ರಶಂಸೆ

    ಸಾಮಾನ್ಯವಾಗಿ ದೇಹ ಹುರಿಗೊಳಿಸುವಲ್ಲಿ ಹುಡುಗರೇ ಹೆಚ್ಚಿನ ಆಸಕ್ತಿವಹಿಸುತ್ತಾರೆ. ಅದರಲ್ಲೂ ಸಿಕ್ಸ್ ಪ್ಯಾಕ್ (Six Pack), ಏಟ್ ಪ್ಯಾಕ್ ರೀತಿಯ ಕಸರತ್ತುಗಳನ್ನು ಹುಡುಗಿಯರು ಮಾಡಲು ಹೋಗುವುದಿಲ್ಲ. ಹಾಗಂತ ಮಾಡುವುದೇ ಇಲ್ಲ ಅಂತಲ್ಲ. ಬೆರಳೆಣಿಕೆಯಷ್ಟು ನಟಿಯರು ಇಂತಹ ಸಿಕ್ಸ್ ಪ್ಯಾಕ್ ನಲ್ಲಿ ಅಚ್ಚರಿಗೊಳಿಸಿದ್ದೂ ಇದೆ. ಈಗ ಅಂಥದ್ದೇ ಹಾದಿ ಹಿಡಿದಿದ್ದಾರೆ ಬಾಲಿವುಡ್ (Bollywood) ನಟಿ ತಾಪ್ಸಿ ಪನ್ನು.

    ತಾಪ್ಸಿ (Taapsee Pannu)ಇಂಥದ್ದೊಂದು ಕಸರತ್ತು ಮಾಡುತ್ತಿರುವುದು ಯಾಕೆ ಎನ್ನುವ ಪ್ರಶ್ನೆಗೆ ಉತ್ತರವಿಲ್ಲ. ಆದರೆ, ಜಿಮ್ ನಲ್ಲಿ ದೇಹ ಹುರಿಗೊಳಿಸಿಕೊಂಡು ಸಿಕ್ಸ್ ಪ್ಯಾಕ್ ಮಾಡಿರುವ ಕುರಿತು ಅವರ ಜಿಮ್ ಟ್ರೈನರ್ ಹೇಳಿಕೊಂಡಿದ್ದಾರೆ. ತಾಪ್ಸಿ ಜೊತೆಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದು ಟೈಗರ್ ಶ್ರಾಫ್ (Tiger Shroff) ಗೆ ಕಾಂಪಿಟೇಷನ್ ಕೊಡುವುದಕ್ಕಾಗಿ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಡೇಟಿಂಗ್ ವಿಚಾರದಲ್ಲಿ ಸಿಕ್ಕಾಪಟ್ಟೆ ಗೊಂದಲ ಸೃಷ್ಟಿಸ್ತಿದ್ದಾರೆ ರಶ್ಮಿಕಾ ಮಂದಣ್ಣ

    ತಾಪ್ಸಿ ಇತ್ತೀಚಿನ ದಿನಗಳಲ್ಲಿ ವಿವಾದದ ಮೂಲಕ ಗಮನ ಸೆಳೆದಿದ್ದರು. ಮಾದಕ ಉಡುಗೆಯಲ್ಲಿ ಲಕ್ಷ್ಮಿ ಡಾಲರ್ ಹಾಕಿದ್ದಕ್ಕೆ ಟ್ರೋಲ್ ಆಗಿದ್ದರು. ಆದರೆ, ಈ ಬಾರಿ ಸಿಕ್ಸ್ ಪ್ಯಾಕ್ ಕಾರಣಕ್ಕಾಗಿ ಸುದ್ದಿಯಲ್ಲಿದ್ದಾರೆ. ಅಭಿಮಾನಿಗಳು ಕೂಡ ತಾಪ್ಸಿಗೆ ಶುಭ ಹಾರೈಸಿದ್ದಾರೆ. ಜೊತೆಗೆ ಅವರ ಆರೋಗ್ಯದ ಬಗ್ಗೆ ಕಾಳಜಿ ಕೂಡ ವ್ಯಕ್ತ ಪಡಿಸಿದ್ದಾರೆ.

  • ಅಶ್ಲೀಲ ಬಟ್ಟೆ ಜೊತೆ ದೇವಿ ನಕ್ಲೇಸ್ ಧರಿಸಿದ ನಟಿ ತಾಪ್ಸಿ ಪನ್ನು : ದೂರು ದಾಖಲು

    ಅಶ್ಲೀಲ ಬಟ್ಟೆ ಜೊತೆ ದೇವಿ ನಕ್ಲೇಸ್ ಧರಿಸಿದ ನಟಿ ತಾಪ್ಸಿ ಪನ್ನು : ದೂರು ದಾಖಲು

    ಬಿಟೌನ್ ಖ್ಯಾತನಟಿ ತಾಪ್ಸಿ ಪನ್ನು (Taapsee Pannu) ವಿರುದ್ಧ ಮಧ್ಯ ಪ್ರದೇಶದ ಇಂದೋರ್ ನಲ್ಲಿ ದೂರು ದಾಖಲಾಗಿದೆ. ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಬಿ.ಜೆಪಿ ಶಾಸಕಿ ಮಾಲಿನಿ ಗೌರ್ ಪುತ್ರ ಏಕಲವ್ಯ ಸಿಂಗ್ ಗೌರ್  (Eklavya Singh Gaur) ಅವರು ನಿನ್ನೆ ಇಂದೋರ್ ನಲ್ಲಿ ದೂರು (Complaint) ದಾಖಲಿಸಿದ್ದಾರೆ.

    ನೇರ ನುಡಿ ಕಾರಣದಿಂದಾಗಿ ಆಗಾಗ್ಗೆ ವಿವಾದಕ್ಕೆ ಸಿಲುಕಿಕೊಳ್ಳುವ ತಾಪ್ಸಿ ಪನ್ನು ಈ ಬಾರಿ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎನ್ನುವ ಆರೋಪಕ್ಕೆ ತುತ್ತಾಗಿದ್ದಾರೆ. ಎದೆ ಸೀಳು ಕಾಣಿಸುವ ರೀತಿಯಲ್ಲಿ ಬಟ್ಟೆ ಧರಿಸಿರುವ ಅವರು ಆ ಬಟ್ಟೆಯ ಮೇಲೆ ಲಕ್ಷ್ಮೀ ಚಿತ್ರ ಇರುವ ನಕ್ಲೇಸ್ (Devi Necklace) ಧರಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಇದನ್ನೂ ಓದಿ:ಅಂಬಿ ಸ್ಮಾರಕ ಲೋಕಾರ್ಪಣೆ, ಸುಮಲತಾ ಅಂಬರೀಶ್ ಕಣ್ಣೀರು

    ಮುಂಬೈನಲ್ಲಿ ನಡೆದ ಫ್ಯಾಷನ್ ವೀಕ್ ನಲ್ಲಿ ಭಾಗಿಯಾಗಿದ್ದ ತಾಪ್ಸಿ, ರಾಂಪ್ ವಾಕ್ ಮಾಡಿದ್ದರು. ಕೆಂಪು ಬಣ್ಣದ ಗೌನ್ ಧರಿಸಿದ್ದ ಅವರು ಆ ಕಾಸ್ಟ್ಯೂಮ್ ನೊಂದಿಗೆ ಲಕ್ಷ್ಮಿ ಚಿತ್ರ ಇರುವ ನಕ್ಲೇಸ್ ಹಾಕಿಕೊಂಡಿದ್ದರು. ಈ ಫೋಟೋ ಸಾಕಷ್ಟು ಟ್ರೋಲ್ ಕೂಡ ಆಗಿತ್ತು. ನೆಟ್ಟಿಗರು ಕೂಡ ತರಾಟೆಗೆ ತಗೆದುಕೊಂಡಿದ್ದರು. ಅಶ್ಲೀಲ ಬಟ್ಟೆ ಜೊತೆ ಲಕ್ಷ್ಮೀ ಧರಿಸುವುದು ಶೋಭೆ ಅಲ್ಲಅಂತ ಕಾಮೆಂಟ್ ಕೂಡ ಮಾಡಿದ್ದರು.

    ತಾಪ್ಸಿ ಪನ್ನು ಹಾಕಿದ್ದ ಬಟ್ಟೆಯನ್ನು ಕಂಡು ಹಲವರು ಗರಂ ಕೂಡ ಆಗಿದ್ದರು. ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ  ಹಿಂದ್ ರಕ್ಷಕ್ ಸಂಘಟನೆಯ ಏಕಲವ್ಯ ಸಿಂಗ್ ಗೌರ ಮಾರ್ಚ್ 27ರಂದು ಇಂದೋರ್ ನಲ್ಲಿ ದೂರು ದಾಖಲಿಸುವ ಮೂಲಕ ಕಾನೂನು ಕ್ರಮಕ್ಕಾಗಿ ಆಗ್ರಹಿಸಿದ್ದಾರೆ.

  • ನಟಿ ತಾಪ್ಸಿ ಪನ್ನು ಸ್ತನದ ಬಗ್ಗೆ ಕಾಮೆಂಟ್ ಮಾಡಿ ಉಗಿಸಿಕೊಂಡ ನಿರ್ದೇಶಕ ಕಶ್ಯಪ್

    ನಟಿ ತಾಪ್ಸಿ ಪನ್ನು ಸ್ತನದ ಬಗ್ಗೆ ಕಾಮೆಂಟ್ ಮಾಡಿ ಉಗಿಸಿಕೊಂಡ ನಿರ್ದೇಶಕ ಕಶ್ಯಪ್

    ಬಾಲಿವುಡ್ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಸುಮ್ಮನೆ ಇರುವಂತಹ ಜಾಯಮಾನದವರೇ ಅಲ್ಲ. ಬಹುಶಃ ಅವರಿಗೆ ವಿವಾದ ಮಾಡಿಕೊಳ್ಳದೇ ಇದ್ದರೆ ನಿದ್ದೆಯೇ ಬರುವುದಿಲ್ಲ ಅನಿಸುತ್ತದೆ. ಹಾಗಾಗಿ, ಆಗಾಗ್ಗೆ ವಿವಾದಿತ ಮಾತುಗಳನ್ನು ಆಡುತ್ತಲೇ ಇರುತ್ತಾರೆ. ಇದೀಗ ತಾಪ್ಸಿ ಪನ್ನು ಮುಖ್ಯ ಭೂಮಿಕೆಯ ದೋಬಾರಾ ಸಿನಿಮಾಗೆ ಇವರು ನಿರ್ದೇಶನ ಮಾಡಿದ್ದು, ಸದ್ಯ ಅದು ಬಿಡುಗಡೆ ಕೂಡ ಆಗಲಿದೆ.

    ದೋಬಾರಾ ಸಿನಿಮಾವನ್ನು ಜನರಿಗೆ ತಲುಪಿಸಲೇಬೇಕು ಎಂದು ಹಠ ತೊಟ್ಟಿರುವ ಅನುರಾಗ್ ಕಶ್ಯಪ್ ಮತ್ತು ತಾಪ್ಸಿ ಪನ್ನು, ಕಾಲಿಗೆ ಚಕ್ರಕಟ್ಟಿಕೊಂಡು ಪ್ರಚಾರ ಮಾಡುತ್ತಿದ್ದಾರೆ. ಹಲವಾರು ಊರುಗಳಿಗೆ ಮತ್ತು ಮಾಧ್ಯಮಗಳ ಮುಂದೆ ಬಂದು ಸಿನಿಮಾ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ. ಮಾಧ್ಯಮವೊಂದರಲ್ಲಿ ಪ್ರಚಾರಾರ್ಥವಾಗಿ ನಡೆದ ಸಂದರ್ಶನದಲ್ಲಿ ಕಶ್ಯಪ್ ಎಡವಟ್ಟು ಮಾಡಿಕೊಂಡಿದ್ದಾರೆ. ಇದನ್ನೂ ಓದಿ:`ಅರ್ಜುನ್ ರೆಡ್ಡಿ’ ಚಿತ್ರದ ನಂತರ ಕರಣ್ ಜೋಹರ್ ಚಿತ್ರವನ್ನು ವಿಜಯ್ ತಿರಸ್ಕರಿಸಿದ್ದೇಕೆ?

    ಸಂದರ್ಶಕರು ರಣವೀರ್ ಸಿಂಗ್ ಬೆತ್ತೆಲೆ ಫೋಟೋ ಬಗ್ಗೆ ಪ್ರಶ್ನೆ ಮಾಡಿದಾಗ, ಅದರ ಪರವಾಗಿ ಕಶ್ಯಪ್ ಮಾತನಾಡುತ್ತಾರೆ. ಅದರಲ್ಲಿ ತಪ್ಪೇನೂ ಇಲ್ಲವೆಂದು ಹೇಳುತ್ತಾರೆ. ಆದರೆ, ಅದನ್ನು ಪನ್ನು ಒಪ್ಪಿಕೊಳ್ಳುವುದಿಲ್ಲ. ಆಗ ಕಶ್ಯಪ್, ‘ ಈ ತಾಪ್ಸಿಗೆ ಹುಡುಗರನ್ನು ಕಂಡರೆ ಹೊಟ್ಟೆ ಉರಿ, ಈಕೆಯ ಸ್ತನಗಳಿಗಿಂತ ನನ್ನವು ದೊಡ್ಡದಿವೆ’ ಎಂದು ಕಾಮೆಂಟ್ ಮಾಡುತ್ತಾರೆ. ಈ ಮಾತನ್ನು ಕೇಳಿ ತಾಪ್ಸಿ ಶಾಕ್ ಆಗುತ್ತಾರೆ.

    ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಕಶ್ಯಪ್ ಅವರು ಆಡಿದ ಮಾತಿಗೆ ನಾನಾ ರೀತಿಯಲ್ಲಿ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ಸರಿಯಾಗಿಯೇ ಹೇಳಿದ್ದೀಯಾ ಅಂದರೆ, ಇನ್ನೂ ಕೆಲವರು ಕಶ್ಯಪ್ ಮಾತಿಗೆ ಉಗಿದಿದ್ದಾರೆ. ಇನ್ನೂ ಕೆಲವರಂತೂ ಇದೊಂದು ಸಿನಿಮಾ ಪ್ರಚಾರದ ಗಿಮಿಕ್ ಎಂದು ಆಡಿಕೊಳ್ಳುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕರಣ್ ಜೋಹಾರ್ ಶೋಗೆ ಹೋಗೋಕೆ ಸೆಕ್ಸ್, ಬ್ರೇಕಪ್ ಅರ್ಹತೆನಾ:  ನಟಿ ತಾಪ್ಸಿ ಹೇಳಿದ್ದೇನು?

    ಕರಣ್ ಜೋಹಾರ್ ಶೋಗೆ ಹೋಗೋಕೆ ಸೆಕ್ಸ್, ಬ್ರೇಕಪ್ ಅರ್ಹತೆನಾ: ನಟಿ ತಾಪ್ಸಿ ಹೇಳಿದ್ದೇನು?

    ಟಿಟಿಯಲ್ಲಿ ಪ್ರಸಾರವಾಗುತ್ತಿರುವ ಕರಣ್ ಜೋಹಾರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಶೋ ದಿನದಿಂದ ದಿನಕ್ಕೆ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿದೆ. ಈ ಶೋಗೆ ಬರುವ ಸೆಲೆಬ್ರಿಟಿಗಳು ಒಂದಲ್ಲ ಒಂದು ರೀತಿಯಲ್ಲಿ ಅಚ್ಚರಿಯ ಹೇಳಿಕೆ ನೀಡುತ್ತಿದ್ದಾರೆ. ಅದರಲ್ಲೂ ಅವರ ತೀರಾ ಖಾಸಗಿ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಸೆಕ್ಸ್, ಬ್ರೇಕ್ ಅಪ್, ಫಸ್ಟ್ ನೈಟ್, ಅಫೇರ್ ಸೇರಿದಂತೆ ಇಂತಹ ಖಾಸಗಿ ಸಂಗತಿಗಳನ್ನು ಮುಲಾಜಿಲ್ಲದೇ ಹಂಚಿಕೊಳ್ಳುತ್ತಿದ್ದಾರೆ.

    ಈ ಕಾರಣಕ್ಕಾಗಿಯೇ ಒಂದು ರೀತಿಯಲ್ಲಿ ಕಾಫಿ ವಿತ್ ಕರಣ್ ಶೋ ಮಡಿವಂತರ ಕಾರ್ಯಕ್ರಮವಲ್ಲ ಅನಿಸುವಂತಾಗಿದೆ. ಹೀಗಾಗಿಯೇ ನಟಿ ತಾಪ್ಸಿ ಪನ್ನು ಈ ಶೋ ಬಗ್ಗೆ ಕಾಮೆಂಟ್ ಮಾಡಿದ್ದು , ಈವರೆಗೂ ತಮ್ಮನ್ನು ಆ ಶೋಗೆ ಕರೆಯದೇ ಇರುವ ಕಾರಣವನ್ನೂ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಕಾರಣದಿಂದಾಗಿಯೇ ನನ್ನನ್ನು ಕರಣ್ ಮುಂದೆಯೇ ಕರೆಯುವುದಿಲ್ಲ ಎನ್ನುವುದನ್ನು ಈಗಲೇ ಹೇಳಿದ್ದಾರೆ. ಇದನ್ನೂ ಓದಿ:ಪೊಲೀಸ್ ಠಾಣೆ ತಲುಪಿದ ನಿರ್ಮಾಪಕರ ವಲಯದ ಚುನಾವಣೆ ಪ್ರಕ್ರಿಯೆ

    ನನ್ನ ಸೆಕ್ಸ್ ಲೈಫ್ ಚೆನ್ನಾಗಿಲ್ಲ, ಸೆಕ್ಸ್ ಲೈಫ್ ಚೆನ್ನಾಗಿದ್ದವರನ್ನು ಮಾತ್ರ ಕರಣ್ ತಮ್ಮ ಶೋಗೆ ಕರೆಯುತ್ತಾರೆ. ಈ ಕಾರಣದಿಂದಾಗಿಯೇ ಅವರು ನನ್ನನ್ನು ಈವರೆಗೂ ಕರೆದಿಲ್ಲ ಎಂದು ಹೇಳಿದ್ದಾರೆ. ತಾಪ್ಸಿ ಈ ಸ್ಟೇಟ್ ಮೆಂಟ್ ಕೊಡುತ್ತಿದ್ದಂತೆಯೇ ಶೋ ಕುರಿತಾಗಿ ಮತ್ತಷ್ಟು ಕಾಮೆಂಟ್ ಗಳನ್ನು ಅಭಿಮಾನಿಗಳು ಹಾಕಿದ್ದಾರೆ. ಜೀವನದಲ್ಲಿ ಸೆಕ್ಸ್, ದೋಖಾ, ಬ್ರೇಕ್ ಅಪ್ ಬಿಟ್ಟರೆ ಸಂತಸ ಅನ್ನುವುದೇ ಇಲ್ಲವಾ ಎಂದು ಕೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‌ʻಡುಂಕಿʼ ಚಿತ್ರಕ್ಕೆ ಶಾರುಖ್ ಖಾನ್‌ಗೆ ನಾಯಕಿಯಾಗಿ ತಾಪ್ಸಿ ಪನ್ನು

    ‌ʻಡುಂಕಿʼ ಚಿತ್ರಕ್ಕೆ ಶಾರುಖ್ ಖಾನ್‌ಗೆ ನಾಯಕಿಯಾಗಿ ತಾಪ್ಸಿ ಪನ್ನು

    `ಜೀರೋ’ ಚಿತ್ರದ ನಂತರ ಬಾಲಿವುಡ್ ನಟ ಶಾರುಖ್ ಖಾನ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ `ಡುಂಕಿ’ ಚಿತ್ರಕ್ಕೆ ಶಾರುಖ್ ಖಾನ್‌ಗೆ ಜೋಡಿಯಾಗಿ ತಾಪ್ಸಿ ಪನ್ನು ಕಾಣಿಸಿಕೊಂಡಿದ್ದಾರೆ.

    ರಾಜ್‌ಕುಮಾರ್ ಹಿರಾನಿ ನಿರ್ದೇಶನ ಮತ್ತು ನಿರ್ಮಾಣದ `ಡುಂಕಿ’ ಚಿತ್ರದಲ್ಲಿ ಶಾರುಖ್ ಖಾನ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಶಾರುಖ್‌ಗೆ ನಾಯಕಿಯಾಗಿ ತಾಪ್ಸಿ ಪನ್ನು ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಚಿತ್ರದ ಮೊದಲ ಹಂತದ ಶೂಟಿಂಗ್ ನೆರವೇರಿದ್ದು, ಸದ್ಯದಲ್ಲೇ ಎರಡನೇ ಹಂತದ ಚಿತ್ರೀಕರಣ ಶುರುವಾಗಲಿದೆ. ಇದನ್ನೂ ಓದಿ:ಪವಿತ್ರ ಲೋಕೇಶ್ ದೂರು : ತನಿಖೆ ಆರಂಭಿಸಿದ ಸೈಬರ್ ಪೊಲೀಸ್

    ಮೊದಲ ಬಾರಿಗೆ ತೆರೆಗೆ ಮೇಲೆ ಶಾರುಖ್ ಖಾನ್ ಮತ್ತು ತಾಪ್ಸಿ ಜೋಡಿಯಾಗಿ ಕಾಣಿಸಿಕೊಳ್ತಿದ್ದಾರೆ. ಭಿನ್ನ ಕಥೆಯ ಮೂಲಕ ಕಮಾಲ್ ಮಾಡಲು ಸಜ್ಜಾಗಿದ್ದಾರೆ. ಸಹ ನಿರ್ಮಾಪಕಿಯಾಗಿ ಶಾರುಖ್ ಪತ್ನಿ ಗೌರಿ ಖಾನ್ ಸಾಥ್ ನೀಡಿದ್ದಾರೆ.

    Live Tv

  • ಕೊನೆಗೂ ಫಿಕ್ಸ್ ಆಯ್ತು ಶಾರುಖ್ ಖಾನ್- ರಾಜ್‌ಕುಮಾರ್ ಹಿರಾನಿ ಸಿನಿಮಾ

    ಕೊನೆಗೂ ಫಿಕ್ಸ್ ಆಯ್ತು ಶಾರುಖ್ ಖಾನ್- ರಾಜ್‌ಕುಮಾರ್ ಹಿರಾನಿ ಸಿನಿಮಾ

    ಬಾಲಿವುಡ್ ಬಾದಷಾ ಶಾರುಖ್ ಖಾನ್ ಮತ್ತು ರಾಜ್‌ಕುಮಾರ್ ಹಿರಾನಿ ಒಟ್ಟಿಗೆ ಸಿನಿಮಾ ಮಾಡತ್ತಾರಂತೆ ಅನ್ನೋ ಸುದ್ದಿ ಚಾಲ್ತಿಯಲ್ಲಿತ್ತು. ಆದರೆ ಅಧಿಕೃತ ಮಾಹಿತಿ ಇರಲಿಲ್ಲ, ಇದೀಗ ನಟ ಶಾರುಖ್ ಖಾನ್ ಸಾಮಾಜಿಕ ಜಾಲತಾಣದಲ್ಲಿ ರಾಜ್‌ಕುಮಾರ್ ಹಿರಾನಿ ನಿರ್ದೇಶನದಲ್ಲಿ ನಟಿಸಲಿದ್ದಾರೆ ಅಂತಾ ಅಧಿಕೃತವಾಗಿ ಹೇಳಿಕೊಂಡಿದ್ದಾರೆ.

    ಸೋಲಿಲ್ಲದ ಸರದಾರ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಚಿತ್ರದಲ್ಲಿ ಶಾರುಖ್ ಖಾನ್ ನಟಿಸೋದು ಖಚಿತ ಅಂತಾ ತಮ್ಮ ಟ್ವಿಟರ್ ಖಾತೆಯ ಮೂಲಕ ಶಾರುಖ್ ಖಾನ್ ತಿಳಿಸಿದ್ದಾರೆ. ಮತ್ತೊಂದು ದೊಡ್ಡ ಸಿನಿಮಾ ಘೋಷಣೆಯಾಗುತ್ತಿದೆ, ಕೊನೆಗೂ ರಾಜ್‌ಕುಮಾರ್ ಹಿರಾನಿ ಜತೆ ಕೆಲಸ ಮಾಡ್ತಿದ್ದೇನೆ ಅಂತಾ ಖುಷಿಯಿಂದ ಟ್ವಿಟ್ ಶಾರುಖ್ ಖಾನ್ ಮಾಡಿದ್ದಾರೆ. ಇದನ್ನೂ ಓದಿ:ಗಂಡು ಮಗುವಿಗೆ ಜನ್ಮ ನೀಡಿದ ಕಾಜಲ್ ಅಗರ್ವಾಲ್

    ರಾಜ್‌ಕುಮಾರ್ ಹಿರಾನಿ ನಿರ್ದೇಶನದ `ಡುಂಕಿ’ ಚಿತ್ರದಲ್ಲಿ ಶಾರುಖ್‌ಗೆ ಜೋಡಿಯಾಗಿ ತಾಪ್ಸಿ ಪನ್ನು ನಟಿಸಲಿದ್ದಾರೆ. ಭಿನ್ನ ಕಥೆಯ ಮೂಲಕ ಶಾರುಖ್ ಮತ್ತು ತಾಪ್ಸಿ ಕಮಾಲ್ ಮಾಡಲಿದ್ದು, ಮುಂದಿನ ವರ್ಷ ಡಿಸೆಂಬರ್ 22ಕ್ಕೆ ತೆರೆಗೆ ಅಪ್ಪಳಿಸಲಿದೆ. ಒಟ್ನಲ್ಲಿ ಶಾರುಖ್ ಅಭಿಮಾನಿಗಳು ಈ ಸಿಹಿ ಸುದ್ದಿ ಕೇಳಿ ಫುಲ್ ಥ್ರಿಲ್ ಆಗಿದ್ದಾರೆ.

  • ಶಾರೂಖ್ ಖಾನ್- ರಾಜ್‌ಕುಮಾರ್ ಹಿರಾನಿ ಕಾಂಬಿನೇಷನ್‌ನ ಚಿತ್ರದ ಶೂಟಿಂಗ್ ಸ್ಟಾರ್ಟ್!

    ಶಾರೂಖ್ ಖಾನ್- ರಾಜ್‌ಕುಮಾರ್ ಹಿರಾನಿ ಕಾಂಬಿನೇಷನ್‌ನ ಚಿತ್ರದ ಶೂಟಿಂಗ್ ಸ್ಟಾರ್ಟ್!

    ಬಾಲಿವುಡ್‌ನ ಬಾದಷಾ ಶಾರೂಖ್ ಖಾನ್ ನಟನೆಯ 2018ರ `ಜೀರೋ’ ಚಿತ್ರದ ಸೋಲಿನ ನಂತರ ಯಾವ ಚಿತ್ರದಲ್ಲೂ ಕಾಣಿಸಿಕೊಂಡಿರಲಿಲ್ಲ. ಇದೀಗ ನಾಲ್ಕು ವರ್ಷದ ನಂತರ ಸಾಲು ಸಾಲು ಸಿನಿಮಾಗಳಿಗೆ ಶಾರೂಖ್ ಖಾನ್ ಸಹಿ ಹಾಕ್ತಿದ್ದಾರೆ. ಇದೀಗ ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಮುಂದಿನ ವಾರದಿಂದ ಶೂಟಿಂಗ್ ಶುರುವಾಗಲಿದೆ.

    `ಮುನ್ನಭಾಯಿ ಎಂಬಿಬಿಎಸ್’, `ಸಂಜು’, `ಪಿಕೆ’ ಚಿತ್ರಗಳಂತಹ ಭಿನ್ನ ಕಥೆಯನ್ನ ತೆರೆಯ ಮೇಲೆ ಅಚ್ಚುಕಟ್ಟಾಗಿ ತೋರಿಸೋದ್ರಲ್ಲಿ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಸೈ ಎನಿಸಿಕೊಂಡಿದ್ರು. ಇದೀಗ ಅಂತಹದ್ದೇ ಭಿನ್ನ ಕಂಟೆಂಟ್ ಜೊತೆಗೆ ರಾಜ್‌ಕುಮಾರ್ ಹಿರಾನಿ ಮತ್ತು ಶಾರೂಖ್ ಖಾನ್ ಬರುತ್ತಿದ್ದಾರೆ.

    ಶಾರೂಖ್ ಖಾನ್ ನಟನೆಯ ಹೊಸ ಚಿತ್ರವು ಪಕ್ಕಾ ಲವ್ ಕಮ್ ಆಕ್ಷನ್ ಓರಿಯೆಂಟೆಡ್ ಸಿನಿಮಾವಾಗಿದ್ದು, ಚಿತ್ರದ ಪ್ರಮುಖ ಪಾತ್ರದಲ್ಲಿ ಬಾಲಿವುಡ್ ನಟಿ ತಾಪ್ಸಿ ಪನ್ನು ಮತ್ತು ವಿಕ್ಕಿ ಕೌಶಲ್ ಕೂಡ ನಟಿಸಲಿದ್ದಾರೆ. ಈ ಇಬ್ಬರು ಸ್ಟಾರ್‌ಗಳು ವಿಭಿನ್ನ ಪಾತ್ರದ ಮೂಲಕ ಮೋಡಿ ಮಾಡಲು ಸಜ್ಜಾಗಿದ್ದಾರೆ. ಇನ್ನು ಶಾರೂಖ್ ಮತ್ತು ರಾಜ್‌ಕುಮಾರ್ ಹಿರಾನಿ ಕಾಂಬಿನೇಷನ್‌ನ ಚಿತ್ರ ಮುಂಬೈನ ಫಿಲ್ಮಂ ಸಿಟಿನಲ್ಲಿ ಏಪ್ರಿಲ್ 15ರಿಂದ ಶೂಟಿಂಗ್ ಪ್ರಾರಂಭವಾಗಲಿದೆ. ಇದನ್ನೂ ಓದಿ: ಶಾರೂಖ್ ಜೊತೆಗಿನ ಸಿನಿಮಾಗೆ ನಯನ ಶೆಡ್ಯೂಲ್ ಮುಗಿಸೋದು ಯಾವಾಗ? – ಇಲ್ಲಿದೆ ಅಪ್ಡೇಟ್

    ಸದ್ಯ ಡೈರೆಕ್ಟರ್ ಅಟ್ಲಿ ನಿರ್ದೇಶನದ ಚಿತ್ರದಲ್ಲಿ ಶಾರೂಖ್ ಖಾನ್ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಡಬಲ್ ರೋಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಟ್ಲಿ ನಿರ್ದೇಶನದ ಚಿತ್ರ ಕಂಪ್ಲೀಟ್ ಆದ ಕೂಡಲೇ ಏಪ್ರಿಲ್ 15ರಿಂದ ರಾಜ್‌ಕುಮಾರ್ ಹಿರಾನಿ ಚಿತ್ರತಂಡಕ್ಕೆ ಸೇರಿಕೊಳ್ಳಲಿದ್ದಾರೆ. ನಾಲ್ಕು ವರ್ಷದ ನಂತರ ಬರುತ್ತಿರೋ ಶಾರೂಖ್ ಖಾನ್ ಸಿನಿಮಾಗಾಗಿ ಕಾಯ್ತಿರೋ ಫ್ಯಾನ್ಸ್‌ ಈ ಸುದ್ದಿ ಕೇಳಿ ಥ್ರಿಲ್ ಆಗಿದ್ದಾರೆ.