Tag: ತಾಪ್ಸಿ ಪನ್ನು

  • ಮುಂಬೈನಲ್ಲಿ ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿಸಿದ ತಾಪ್ಸಿ ಪನ್ನು- ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!

    ಮುಂಬೈನಲ್ಲಿ ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿಸಿದ ತಾಪ್ಸಿ ಪನ್ನು- ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!

    ಬಾಲಿವುಡ್ ಬೆಡಗಿ ತಾಪ್ಸಿ ಪನ್ನು (Taapsee Pannu) ಅವರು ಮದುವೆಯ ಬಳಿಕವೂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಮುಂಬೈನಲ್ಲಿ 4.33 ಕೋಟಿ ರೂ. ಮೌಲ್ಯದ ಐಷಾರಾಮಿ ಅಪಾರ್ಟ್‌ಮೆಂಟ್‌ವೊಂದನ್ನು ಖರೀದಿಸಿದ್ದಾರೆ. ಇದನ್ನೂ ಓದಿ:ಸಿನಿಮಾ ಗೆದ್ದ ಬೆನ್ನಲ್ಲೇ ದೇವಿ ಮೊರೆ ಹೋದ ಶ್ರೀನಿಧಿ ಶೆಟ್ಟಿ

    ಮೂಲಗಳ ಪ್ರಕಾರ, ಸಹೋದರಿ ಶಗುನ್ ಪನ್ನು ಅವರೊಂದಿಗೆ ಸೇರಿ ಈ ಅಪಾರ್ಟ್‌ಮೆಂಟ್ (Apartment) ಖರೀದಿಸಿದ್ದಾರೆ. ಇದಕ್ಕೆ 4.33 ಕೋಟಿ ರೂ. ಪಾವತಿಸಿದ್ದಾರೆ. ಅವರ ಅಪಾರ್ಟ್‌ಮೆಂಟ್ ಒಟ್ಟು 1669 ಚದರ ಅಡಿ ವಿಸ್ತೀರ್ಣವಿದ್ದು, 2 ಕಾರು ಪಾರ್ಕಿಂಗ್ ಸ್ಥಳಗಳನ್ನು ಹೊಂದಿದೆ.

    ಮೇ 15ರಂದು ಆಸ್ತಿ ನೋದಣಿ ಮಾಡಿಸಲಾಗಿದೆ. ಸಹೋದರಿ ಜೊತೆ ಸೇರಿ ಮುದ್ರಾಂಕ ಶುಲ್ಕ 21.65 ಲಕ್ಷ ರೂ. ಹಾಗೂ 30,000 ರೂ. ರಿಜಿಸ್ಟ್ರೇಷನ್ ಶುಲ್ಕವನ್ನೂ ಪಾವತಿಸಿದ್ದಾರೆ. ಸದ್ಯ ಹೊಸ ಮನೆ ಖರೀದಿಸಿರುವ ಖುಷಿಯಲ್ಲಿರುವ ತಾಪ್ಸಿಗೆ ಫ್ಯಾನ್ಸ್ ವಿಶ್ ಮಾಡಿದ್ದಾರೆ. ಇದನ್ನೂ ಓದಿ:Cannes Film Festival 2025: ರೆಡ್ ಕಾರ್ಪೆಟ್‌ನಲ್ಲಿ ಮಿಂಚಿದ ಕನ್ನಡತಿ ದಿಶಾ ಮದನ್

    ಕಾಂಚನ 2, ಗೇಮ್ ಓವರ್, ಆರಂಭಂ, ಡುಂಕಿ, ತಪ್ಪಡ್, ಆಡುಕಲಾಂ ಸಿನಿಮಾಗಳಲ್ಲಿ ತಾಪ್ಸಿ ನಟಿಸಿದ್ದಾರೆ. ಗ್ಲ್ಯಾಮರ್‌ಗಿಂತ ಕಥೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ.

  • ‘ಗಾಂಧಾರಿ’ಯಾದ ತಾಪ್ಸಿ ಪನ್ನು- ಆ್ಯಕ್ಷನ್ ಥ್ರಿಲ್ಲರ್‌ ಕಥೆಯಲ್ಲಿ ನಟಿ

    ‘ಗಾಂಧಾರಿ’ಯಾದ ತಾಪ್ಸಿ ಪನ್ನು- ಆ್ಯಕ್ಷನ್ ಥ್ರಿಲ್ಲರ್‌ ಕಥೆಯಲ್ಲಿ ನಟಿ

    ಬಾಲಿವುಡ್ ಬ್ಯೂಟಿ ತಾಪ್ಸಿ ಪನ್ನು (Taapsee Pannu) ಸದ್ಯ ಆ್ಯಕ್ಷನ್ ಥ್ರಿಲ್ಲರ್ ಕಥೆಯೊಂದನ್ನು ಒಪ್ಪಿಕೊಂಡಿಕೊಂಡಿದ್ದಾರೆ. ನಿರ್ಮಾಪಕಿ ಕನ್ನಿಕಾ ಧಿಲ್ಲೋನ್ (Kanika Dhillon) ಜೊತೆ ಹೊಸ ಚಿತ್ರಕ್ಕಾಗಿ ಕೈಜೋಡಿಸುತ್ತಿದ್ದಾರೆ. ಇದನ್ನೂ ಓದಿ:ನನಗೆ ಯಾವುದೇ ಕೆಟ್ಟ ಮೆಸೇಜ್‌ ಬಂದಿಲ್ಲ: ರೇಣುಕಾಸ್ವಾಮಿ ಬಗ್ಗೆ ರಾಗಿಣಿ ರಿಯಾಕ್ಷನ್‌

     

    View this post on Instagram

     

    A post shared by Netflix India (@netflix_in)

    ಮದುವೆಯ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ತಾಪ್ಸಿ ಬ್ಯುಸಿಯಾಗಿದ್ದಾರೆ. ಆದರೆ ಹೇಳಿಕೊಳ್ಳುವಂತಹ ಯಶಸ್ಸು ಅವರಿಗೆ ಸಿಕ್ತಿಲ್ಲ. ಹಾಗಂತ ನಟಿಗೆ ಬೇಡಿಕೆ ಏನು ಕಮ್ಮಿಯಾಗಿಲ್ಲ. ಈಗ ಗಾಂಧಾರಿಯಾಗಿ ತೆರೆಯ ಮೇಲೆ ಮಿಂಚಲು ನಟಿ ಸಜ್ಜಾಗಿದ್ದಾರೆ.

    ಈ ಹಿಂದೆ ‘ಫಿರ್ ಆಯಿ ಹಸೀನ್ ದಿಲ್ರುಬಾ’ ಚಿತ್ರಕ್ಕೆ ಕನ್ನಿಕಾ ಧಿಲ್ಲೋನ್ ಕಥೆ ಬರೆದಿದ್ದರು. ಈಗ ಅವರೊಂದಿಗೆ ‘ಗಾಂಧಾರಿ’ (Gandhari) ಎಂಬ ಸಿನಿಮಾಗಾಗಿ ಸಾಥ್ ನೀಡಿದ್ದಾರೆ ತಾಪ್ಸಿ. ವಿಭಿನ್ನ ಕಥೆಯನ್ನು ನಟಿ ಹೇಳಲು ಹೊರಟಿದ್ದಾರೆ. ತಾಯಿ ಮತ್ತು ಮಗುವಿನ ಬಂಧದ ಬಗ್ಗೆ ಸಾರುವ ಕಥೆಯಾಗಿದೆ. ಜೊತೆಗೆ ಆ್ಯಕ್ಷನ್ ಥ್ರಿಲ್ಲರ್‌ನಲ್ಲಿ ಇದು ಮೂಡಿ ಬರಲಿದೆ. ಒಟಿಟಿಯಲ್ಲಿ ಸಿನಿಮಾ ರಿಲೀಸ್ ಆಗಲಿದೆ.

  • ನಾನು ಸೆಲೆಬ್ರಿಟಿಯೇ ಹೊರತು ಸಾರ್ವಜನಿಕರ ಆಸ್ತಿಯಲ್ಲ- ಟ್ರೋಲಿಗರಿಗೆ ತಾಪ್ಸಿ ಪನ್ನು ವಾರ್ನಿಂಗ್

    ನಾನು ಸೆಲೆಬ್ರಿಟಿಯೇ ಹೊರತು ಸಾರ್ವಜನಿಕರ ಆಸ್ತಿಯಲ್ಲ- ಟ್ರೋಲಿಗರಿಗೆ ತಾಪ್ಸಿ ಪನ್ನು ವಾರ್ನಿಂಗ್

    ಪಿಂಕ್, ಡುಂಕಿ (Dunki) ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಖ್ಯಾತ ನಟ ತಾಪ್ಸಿ ಪನ್ನು (Taapsee Pannu) ಸದಾ ಒಂದಲ್ಲಾ ಒಂದು ವಿಚಾರವಾಗಿ ಟ್ರೋಲ್ (Troll) ಆಗುತ್ತಲೇ ಇರುತ್ತಾರೆ. ಇದೀಗ ಸಂರ್ದಶನವೊಂದರಲ್ಲಿ ನಾನು ಪಬ್ಲಿಕ್ ಫಿಗರ್, ಹಾಗಂತ ಸಾರ್ವಜನಿಕರ ಆಸ್ತಿಯಲ್ಲ ಎಂದು ಟ್ರೋಲಿಗರ ವಿರುದ್ಧ ನಟಿ ಗರಂ ಆಗಿದ್ದಾರೆ. ಇದನ್ನೂ ಓದಿ:ಮೆಗಾಸ್ಟಾರ್ ಚಿರಂಜೀವಿ ನಟನೆಯ ‘ವಿಶ್ವಂಭರ’ ಸಿನಿಮಾದಲ್ಲಿ ಭಜರಂಗಿ ಲೋಕಿ

    ಅತಿರೇಕದ ಟ್ರೋಲ್ (Troll) ಮತ್ತು ಅನುಚಿತ ವರ್ತನೆಗಳ ಬಗ್ಗೆ ತಾಪ್ಸಿ ಮಾತನಾಡಿ, ಏನು ಮಾಡಿದರೂ ಅಥವಾ ಮಾಡದೇ ಇದ್ದರೂ ಟ್ರೋಲ್‌ಗೆ ಒಳಗಾಗುತ್ತೇನೆ. ಇದನ್ನು ಜೀವನದಲ್ಲಿ ತಡವಾಗಿ ಅರಿತುಕೊಂಡೆ ಎಂದು ಮಾತನಾಡಿದ್ದಾರೆ. ನಾನು ಸೆಲೆಬ್ರಿಟಿ ನಿಜ. ಆದರೆ ಸಾರ್ವಜನಿಕರ ಆಸ್ತಿಯಲ್ಲ ಎಂದು ಟ್ರೋಲಿಗರಿಗೆ ವಾರ್ನಿಂಗ್ ಕೊಟ್ಟಿದ್ದಾರೆ. ಈ ಎರಡರ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ಗೌರವ ಕೊಟ್ಟು ಪಡೆದುಕೊಳ್ಳಬೇಕು. ನನ್ನ ಮೈ ಮೇಲೆ ಬೀಳುವುದು ಸರಿಯಲ್ಲ ಎಂದು ಮಾತನಾಡಿದ್ದಾರೆ.

    ನಾನು ಕೂಡ ಎಲ್ಲರಂತೆಯೇ ಫೋಟೋ ತೆಗೆಯಲು ಮತ್ತು ಮಾತನಾಡುವಾಗ ಮೈ ಬೀಳುವುದು ಮತ್ತು ಅನುಚಿತ ವರ್ತನೆಗಳನ್ನು ನಾನು ಸಹಿಸುವುದಿಲ್ಲ. ನಾನು ಸರಿಯಾದ ವೃತ್ತಿ ಮತ್ತು ಸ್ಥಳದಲ್ಲಿದ್ದೇನೆ. ಕ್ಯಾಮೆರಾ ಮುಂದೆ ಬಂದಾಗ ಎಂಜಾಯ್ ಮಾಡಿಕೊಂಡು ಕೆಲಸ ಮಾಡುತ್ತೇನೆ. ಆದರೆ ಅನುಚಿತ ವರ್ತನೆಯನ್ನು ಎಂದಿಗೂ ನಾನು ವಿರೋಧಿಸುತ್ತೇನೆ ಎಂದು ತಾಪ್ಸಿ ಮಾತನಾಡಿದ್ದಾರೆ.

  • ಸೆಲ್ಫಿಗೆ ಪೋಸ್ ಕೊಡದ ತಾಪ್ಸಿ ಪನ್ನು ಮೇಲೆ ಸೋಷಿಯಲ್ ಮೀಡಿಯಾ ಸ್ಟಾರ್ ಕಿಡಿ

    ಸೆಲ್ಫಿಗೆ ಪೋಸ್ ಕೊಡದ ತಾಪ್ಸಿ ಪನ್ನು ಮೇಲೆ ಸೋಷಿಯಲ್ ಮೀಡಿಯಾ ಸ್ಟಾರ್ ಕಿಡಿ

    ಬಾಲಿವುಡ್ ಬೆಡಗಿ ತಾಪ್ಸಿ ಪನ್ನು (Taapsee Pannu) ಸದ್ಯ ಅಕ್ಷಯ್ ಕುಮಾರ್ (Akshay Kumar) ಜೊತೆಗಿನ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಪ್ರಚಾರ ಕಾರ್ಯದ ವೇಳೆ, ಸೆಲ್ಫಿಗೆ ಪೋಸ್ ಕೊಡದ ತಾಪ್ಸಿ ಪನ್ನು ಮೇಲೆ ಸೋಷಿಯಲ್ ಮೀಡಿಯಾ ಸ್ಟಾರ್ ಅನನ್ಯ ಕಿಡಿಕಾರಿದ್ದಾರೆ.

    ಅಕ್ಷಯ್ ಕುಮಾರ್ ನಟನೆಯ ‘ಖೇಲ್ ಖೇಲ್ ಮೇ’ (Khel Khel Mein) ಎಂಬ ಚಿತ್ರದಲ್ಲಿ ತಾಪ್ಸಿ ನಾಯಕಿಯಾಗಿದ್ದಾರೆ. ಚಿತ್ರದ ಪ್ರಚಾರದ ಕೆಲಸಕ್ಕೆ ಚಾಲನೆಯನ್ನೂ ನೀಡಿರುವ ಚಿತ್ರತಂಡ ಹಾಡೊಂದರ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಂಡಿತ್ತು. ಆಗ ಈ ಸಮಾರಂಭದಲ್ಲಿ ಸೋಷಿಯಲ್ ಮೀಡಿಯಾದ ಸ್ಟಾರ್ ಅನನ್ಯ ದ್ವಿವೇದಿ ಭಾಗಿಯಾಗಿದ್ದರು. ಬಳಿಕ ವೇದಿಕೆಯಲ್ಲಿ ತಾಪ್ಸಿಗೆ ಸೆಲ್ಫಿ ಕೇಳಿದರು. ಅವರು ನಗುಮುಖದಿಂದಲೇ ಸೆಲ್ಫಿಗೆ ನಿರಾಕರಿಸಿದರು. ಇದೇ ಬೇಸರದಲ್ಲಿ ಅನನ್ಯ ದ್ವಿವೇದಿ ಅವರು ತಾಪ್ಸಿ ವಿರುದ್ಧ ಹರಿಹಾಯ್ದಿದ್ದಾರೆ. ತಾಪ್ಸಿಗೆ ಉತ್ತಮ ಪಿಆರ್ ತರಬೇತಿಯ ಅಗತ್ಯವಿದೆ ಎಂದು ಅನನ್ಯ ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡಿದ್ದಾರೆ.

    ಅನನ್ಯಾ ವೈರಲ್ ವೀಡಿಯೋದಲ್ಲಿ ಈ ಬಗ್ಗೆ ಕಾಮೆಂಟ್ ಮಾಡಿದ್ದು, ಹಲವಾರು ಕ್ಯಾಮೆರಾಗಳಿಗೆ ಪೋಸ್ ನೀಡುತ್ತಿರುವಾಗ,ಸೆಲ್ಫಿಯನ್ನು ಏಕೆ ನಿರಾಕರಿಸುತ್ತಾರೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ನನ್ನಂತಹ ಪ್ರಭಾವಿಗಳನ್ನು ಕರೆದ ಕಾರಣವೆಂದರೆ ಅವರ ಹಾಡನ್ನು ಪ್ರಚಾರ ಮಾಡಲು. ಆಕೆಗೆ ನಿಜವಾಗಿಯೂ ಉತ್ತಮ ಪಿಆರ್ ತರಬೇತಿಯ ಅಗತ್ಯವಿದೆ ಎಂದು ಕುಟುಕಿದ್ದಾರೆ. ಇದನ್ನೂ ಓದಿ:ನ್ಯಾಚುರಲ್ ಸ್ಟಾರ್ ನಾನಿ ಸಿನಿಮಾದಲ್ಲಿ ‘ಕೆಜಿಎಫ್’ ನಟಿ

    ಇದೀಗ ತಾಪ್ಸಿ ನಡೆಗೆ ಪರ ಮತ್ತು ವಿರೋಧದ ಚರ್ಚೆ ನಡೆಯುತ್ತಿದೆ. ನಟಿ ಎಂಬ ಕಾರಣಕ್ಕೆ ಪ್ರತಿ ಸೆಲ್ಫಿಗೂ ಹೌದು ಎಂದು ಹೇಳಬೇಕಿಲ್ಲ ಎಂದು ಅಭಿಮಾನಿಗಳು ತಾಪ್ಸಿ ಪರ ಬ್ಯಾಟ್ ಬೀಸಿದ್ದಾರೆ.

  • ಮದುವೆ ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡ ತಾಪ್ಸಿ ಪನ್ನು

    ಮದುವೆ ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡ ತಾಪ್ಸಿ ಪನ್ನು

    ಗುಟ್ಟು ಗುಟ್ಟಾಗಿಯೇ ಮದುವೆಯಾಗಿದ್ದ (Marriage) ಬಾಲಿವುಡ್ ನಟಿ ತಾಪ್ಸಿ ಪನ್ನು (Taapsee Pannu), ಮದುವೆಯ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಅವರನ್ನು ಕಂಡು ಅಭಿಮಾನಿಗಳು ಶುಭಾಶಯಗಳನ್ನು ತಿಳಿಸಿದ್ದಾರೆ. ಆಪ್ತರಿಗಷ್ಟೇ ಆಹ್ವಾನಿಸಿ ಮದುವೆ ಆಗಿದ್ದರಿಂದ ಯಾರಿಗೂ ಇವರ ಮದುವೆ ವಿಚಾರವೇ ಗೊತ್ತಿರಲಿಲ್ಲ. ಬ್ಲರ್ಬ್ ಆಗಿರುವ ವಿಡಿಯೋವೊಂದು ಲೀಕ್ ಆಗಿ ಮದುವೆ ಸಮಾಚಾರ ತಿಳಿಸಿತ್ತು.

    ತಾಪ್ಸಿ ಉದಯ್‌ಪುರದಲ್ಲಿ ಅದ್ಧೂರಿಯಾಗಿ ಮದುವೆಯಾಗಿರೋದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ವಿಚಾರ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿತ್ತು. ಆದರೆ ತಮ್ಮ ಮದುವೆ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ಅವರು ನೀಡಿರಲಿಲ್ಲ. ಮದುವೆ ಫೋಟೋ ಕೂಡ ಶೇರ್ ಮಾಡಿ ಪತಿ ಬಗ್ಗೆ ಮಾತನಾಡಿಲ್ಲ. ಇದೀಗ ಡ್ಯಾನ್ಸ್ ಮಾಡುತ್ತಾ ವೇದಿಕೆ ಏರಿ ಮಥಾಯಸ್ ಬೋ (Mathayas Bho) ಅವರಿಗೆ ಹಾರ ಹಾಕಿ ಖುಷಿಯಿಂದ ಮದುವೆ ಆಗುತ್ತಿರುವ ವಿಡಿಯೋ ಸದ್ದು ಮಾಡಿತ್ತು. ಹಾಗಾಗಿ ಮದುವೆ ಫೋಟೋ ಮತ್ತು ವಿಡಿಯೋಗಾಗಿ ಅಭಿಮಾನಿಗಳು ಕಾಯುತ್ತಿದ್ದರು.

    ಮಾರ್ಚ್ 20ರಿಂದ ಮದುವೆ ಸಂಭ್ರಮ ಶುರುವಾಗಿದ್ದು, ಮಾರ್ಚ್ 23ಕ್ಕೆ ತಾಪ್ಸಿ ಪನ್ನು- ಮಥಾಯಸ್ ಬೋ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ತಾಪ್ಸಿ ಸಿಖ್ ಧರ್ಮಕ್ಕೆ ಸೇರಿದವರು. ಮಥಾಯಸ್ ಕ್ರೈಸ್ತ ಧರ್ಮಕ್ಕೆ ಸೇರಿದ್ದಾರೆ. ಎರಡು ಧರ್ಮದ ಪದ್ಧತಿಯಂತೆ ಮದುವೆ ನೆಡೆದಿದೆ. ಆ ಮದುವೆ ಹೇಗಿತ್ತು ಎನ್ನುವುದನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ, ಫೋಟೋ ಮತ್ತು ಫೋಟೋ ಸಿಗೋದು ಅನುಮಾನ ಎನ್ನಲಾಗುತ್ತಿದೆ.

    ಈ ಕುರಿತಂತೆ ಸ್ವತಃ ತಾಪ್ಸಿ ಅವರೇ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು, ನನಗೆ ಫೋಟೋ ಮತ್ತು ವಿಡಿಯೋವನ್ನು ಮುಚ್ಚಿಡುವಂತಹ ಉದ್ದೇಶವಿರಲಿಲ್ಲ. ಆದರೆ, ಅದು ನನ್ನ ಖಾಸಗಿ ಕಾರ್ಯಕ್ರಮ. ಹಾಗಾಗಿ ಅದನ್ನು ಹಂಚಿಕೊಳ್ಳಲ್ಲ ಎಂದು ಹೇಳುವ ಮೂಲಕ ನಿರಾಸೆ ಮೂಡಿಸಿದ್ದಾರೆ ತಾಪ್ಸಿ.

  • ಮದುವೆ ಫೋಟೋ, ವಿಡಿಯೋ ಶೇರ್ ಮಾಡಲ್ಲ ಅಂದ ತಾಪ್ಸಿ ಪನ್ನು

    ಮದುವೆ ಫೋಟೋ, ವಿಡಿಯೋ ಶೇರ್ ಮಾಡಲ್ಲ ಅಂದ ತಾಪ್ಸಿ ಪನ್ನು

    ಬಾಲಿವುಡ್ (Bollywood) ಬ್ಯೂಟಿ ತಾಪ್ಸಿ ಪನ್ನು (Taapsee Pannu) ಇತ್ತೀಚೆಗಷ್ಟೇ ಮದುವೆ ಆಗಿರುವ ವಿಷಯ ಗೊತ್ತೇ ಇದೆ. ಆಪ್ತರಿಗಷ್ಟೇ ಆಹ್ವಾನಿಸಿ ಮದುವೆ ಆಗಿದ್ದರಿಂದ ಯಾರಿಗೂ ಮದುವೆ ವಿಚಾರವೇ ಗೊತ್ತಿರಲಿಲ್ಲ. ಬ್ಲರ್ಬ್ ಆಗಿರುವ ವಿಡಿಯೋವೊಂದು ಲೀಕ್ ಆಗಿ ಮದುವೆ ಸಮಾಚಾರ ತಿಳಿಸಿತ್ತು.

    ತಾಪ್ಸಿ ಉದಯ್‌ಪುರದಲ್ಲಿ ಅದ್ಧೂರಿಯಾಗಿ ಮದುವೆಯಾಗಿರೋದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ವಿಚಾರ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿತ್ತು. ಆದರೆ ತಮ್ಮ ಮದುವೆ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ಅವರು ನೀಡಿರಲಿಲ್ಲ. ಮದುವೆ ಫೋಟೋ ಕೂಡ ಶೇರ್ ಮಾಡಿ ಪತಿ ಬಗ್ಗೆ ಮಾತನಾಡಿಲ್ಲ. ಇದೀಗ ಡ್ಯಾನ್ಸ್ ಮಾಡುತ್ತಾ ವೇದಿಕೆ ಏರಿ ಮಥಾಯಸ್ ಬೋ (Mathayas Bho) ಅವರಿಗೆ ಹಾರ ಹಾಕಿ ಖುಷಿಯಿಂದ ಮದುವೆ ಆಗುತ್ತಿರುವ ವಿಡಿಯೋ ಸದ್ದು ಮಾಡಿತ್ತು. ಹಾಗಾಗಿ ಮದುವೆ ಫೋಟೋ ಮತ್ತು ವಿಡಿಯೋಗಾಗಿ ಅಭಿಮಾನಿಗಳು ಕಾಯುತ್ತಿದ್ದರು.

    ಮಾರ್ಚ್ 20ರಿಂದ ಮದುವೆ ಸಂಭ್ರಮ ಶುರುವಾಗಿದ್ದು, ಮಾರ್ಚ್ 23ಕ್ಕೆ ತಾಪ್ಸಿ ಪನ್ನು- ಮಥಾಯಸ್ ಬೋ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ತಾಪ್ಸಿ ಸಿಖ್ ಧರ್ಮಕ್ಕೆ ಸೇರಿದವರು. ಮಥಾಯಸ್ ಕ್ರೈಸ್ತ ಧರ್ಮಕ್ಕೆ ಸೇರಿದ್ದಾರೆ. ಎರಡು ಧರ್ಮದ ಪದ್ಧತಿಯಂತೆ ಮದುವೆ ನೆಡೆದಿದೆ. ಆ ಮದುವೆ ಹೇಗಿತ್ತು ಎನ್ನುವುದನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ, ಫೋಟೋ ಮತ್ತು ಫೋಟೋ ಸಿಗೋದು ಅನುಮಾನ ಎನ್ನಲಾಗುತ್ತಿದೆ.

    ಈ ಕುರಿತಂತೆ ಸ್ವತಃ ತಾಪ್ಸಿ ಅವರೇ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು, ನನಗೆ ಫೋಟೋ ಮತ್ತು ವಿಡಿಯೋವನ್ನು ಮುಚ್ಚಿಡುವಂತಹ ಉದ್ದೇಶವಿರಲಿಲ್ಲ. ಆದರೆ, ಅದು ನನ್ನ ಖಾಸಗಿ ಕಾರ್ಯಕ್ರಮ. ಹಾಗಾಗಿ ಅದನ್ನು ಹಂಚಿಕೊಳ್ಳಲ್ಲ ಎಂದು ಹೇಳುವ ಮೂಲಕ ನಿರಾಸೆ ಮೂಡಿಸಿದ್ದಾರೆ ತಾಪ್ಸಿ.

  • ಕೊನೆಗೂ ಲೀಕ್ ಆಯ್ತು ತಾಪ್ಸಿ ಪನ್ನು ಮದುವೆ ವಿಡಿಯೋ

    ಕೊನೆಗೂ ಲೀಕ್ ಆಯ್ತು ತಾಪ್ಸಿ ಪನ್ನು ಮದುವೆ ವಿಡಿಯೋ

    ಬಾಲಿವುಡ್ (Bollywood) ಬ್ಯೂಟಿ ತಾಪ್ಸಿ ಪನ್ನು (Taapsee Pannu) ಇತ್ತೀಚೆಗೆ ಸೀಕ್ರೆಟ್ ಮದುವೆಯಾಗಿರೋದು (Wedding) ಈಗಾಗಲೇ ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಮದುವೆಯ ಒಂದೇ ಒಂದು ಫೋಟೋ ಲೀಕ್ ಆಗದಂತೆ ನಟಿ ನೋಡಿಕೊಂಡಿದ್ದರು. ಹೀಗಿದ್ದರೂ ಕೂಡ ನಟಿ ತಾಪ್ಸಿಯ ಮದುವೆ ವಿಡಿಯೋ ಇದೀಗ ಹೊರಬಿದ್ದಿದೆ. ಸಂತಸದಿಂದ ಮದುವೆ ದಿನ ವೇದಿಕೆ ಏರುತ್ತಿರುವ ನಟಿಯ ವಿಡಿಯೋ ಲೀಕ್‌ ಆಗಿದ್ದು, ಅಭಿಮಾನಿಗಳ ಗಮನ ಸೆಳೆದಿದೆ.

    10 ದಿನಗಳ ಹಿಂದೆ ತಾಪ್ಸಿ ಉದಯ್‌ಪುರದಲ್ಲಿ ಅದ್ಧೂರಿಯಾಗಿ ಮದುವೆಯಾಗಿರೋದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಚಾರ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ. ಆದರೆ ತಮ್ಮ ಮದುವೆ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಮದುವೆ ಫೋಟೋ ಕೂಡ ಶೇರ್ ಮಾಡಿ ಪತಿ ಬಗ್ಗೆ ಮಾತನಾಡಿಲ್ಲ. ಇದೀಗ ಡ್ಯಾನ್ಸ್ ಮಾಡುತ್ತಾ ವೇದಿಕೆ ಏರಿ ಮಥಾಯಸ್ ಬೋ ಅವರಿಗೆ ಹಾರ ಹಾಕಿ ಖುಷಿಯಿಂದ ಮದುವೆ ಆಗುತ್ತಿರುವ ವಿಡಿಯೋ ಸದ್ದು ಮಾಡುತ್ತಿದೆ. ಇದನ್ನೂ ಓದಿ:‘R B 01’ ಚಿತ್ರದಲ್ಲಿ ಪಾತ್ರ ಹೇಗಿರಲಿದೆ? ಮಾಹಿತಿ ಬಿಚ್ಚಿಟ್ಟ ರಕ್ಷಕ್

    ಮಾರ್ಚ್ 20ರಿಂದ ಮದುವೆ ಸಂಭ್ರಮ ಶುರುವಾಗಿದ್ದು, ಮಾರ್ಚ್ 23ಕ್ಕೆ ತಾಪ್ಸಿ ಪನ್ನು- ಮಥಾಯಸ್ ಬೋ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಾಪ್ಸಿ ಸಿಖ್ ಧರ್ಮಕ್ಕೆ ಸೇರಿದವರು. ಮಥಾಯಸ್ ಕ್ರೈಸ್ತ ಧರ್ಮಕ್ಕೆ ಸೇರಿದ್ದಾರೆ. ಎರಡು ಧರ್ಮದ ಪದ್ಧತಿಯಂತೆ ಮದುವೆ ನೆರವೇರಿದೆ.

    10 ವರ್ಷಗಳಿಂದ ಮಥಾಯಸ್ ಬೋ ಜೊತೆ ತಾಪ್ಸಿ ಡೇಟಿಂಗ್ ಮಾಡುತ್ತಿದ್ದರು. ಹೊಸ ಬಾಳಿಗೆ ಕಾಲಿಟ್ಟಿರುವ ನಟಿಗೆ ಫ್ಯಾನ್ಸ್ ಶುಭಕೋರುತ್ತಿದ್ದಾರೆ. ಆದಷ್ಟು ಬೇಗ ನಟಿಯ ಮದುವೆಯ ಫೋಟೋ ರಿವೀಲ್ ಮಾಡಲಿ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

  • ಸೀಕ್ರೆಟ್ ಆಗಿ ಮದುವೆಯಾದ ನಟಿ ತಾಪ್ಸಿ ಪನ್ನು

    ಸೀಕ್ರೆಟ್ ಆಗಿ ಮದುವೆಯಾದ ನಟಿ ತಾಪ್ಸಿ ಪನ್ನು

    ಬಾಲಿವುಡ್ ಬ್ಯೂಟಿ ತಾಪ್ಸಿ ಪನ್ನು (Taapsee Pannu) ಸದ್ದಿಲ್ಲದೇ ಸೀಕ್ರೆಟ್ ಆಗಿ ಮದುವೆಯಾಗಿದ್ದಾರೆ. ಬಹುಕಾಲದ ಗೆಳೆಯನ ಜೊತೆ ನಟಿ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಮದುವೆಗೆ (Wedding) ಹಾಜರಿ ಹಾಕಿದ್ದವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ.

    ಕೆಲದಿನಗಳಿಂದ ನಟಿಯ ಮದುವೆಯ ಬಗ್ಗೆ ಸುದ್ದಿ ವೈರಲ್ ಆಗಿತ್ತು. ಆದರೆ ತಾಪ್ಸಿ (Tapsee Pannu) ಈ ಬಗ್ಗೆ ಯಾವುದೇ ರಿಯಾಕ್ಷನ್ ಕೊಡದೇ ಮೌನ ವಹಿಸಿದ್ದರು. ಇದೀಗ ನಟಿ ಉದಯ್‌ಪುರದಲ್ಲಿ ಗುಟ್ಟಾಗಿ ಮದುವೆಯಾಗಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:‘ಬೊಂಬೆ ಹೇಳುತೈತೆ’ ಸಾಂಗ್ ಕೇಳುತ್ತಿದ್ದಂತೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಕಣ್ಣೀರು

    ಮಾರ್ಚ್ 20ರಿಂದ ಮದುವೆ ಸಂಭ್ರಮ ಶುರುವಾಗಿದ್ದು, ಮಾರ್ಚ್ 23ಕ್ಕೆ ತಾಪ್ಸಿ ಪನ್ನು- ಮಥಾಯಸ್ ಬೋ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಎನ್ನಲಾಗುತ್ತಿದೆ. ತಾಪ್ಸಿ ಸಿಖ್ ಧರ್ಮಕ್ಕೆ ಸೇರಿದವರು. ಮಥಾಯಸ್ ಕ್ರೈಸ್ತ ಧರ್ಮಕ್ಕೆ ಸೇರಿದ್ದಾರೆ. ಎರಡು ಧರ್ಮದ ಪದ್ಧತಿಯಂತೆ ಮದುವೆ ನೆರವೇರಿದೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಆದರೆ ನಟಿಯ ಮದುವೆಯ ಫೋಟೋ ಎಲ್ಲಿಯೂ ರಿವೀಲ್ ಆಗಿಲ್ಲ. ಮದುವೆ ಬಗ್ಗೆ ನಟಿ ಅಧಿಕೃತ ಮಾಹಿತಿ ನೀಡುವವರೆಗೂ ಕಾಯಬೇಕಿದೆ.

    10 ವರ್ಷಗಳಿಂದ ಮಥಾಯಸ್ ಬೋ ಜೊತೆ ತಾಪ್ಸಿ ಡೇಟಿಂಗ್ ಮಾಡುತ್ತಿದ್ದರು. ಹೊಸ ಬಾಳಿಗೆ ಕಾಲಿಟ್ಟಿರುವ ನಟಿಗೆ ಫ್ಯಾನ್ಸ್ ಶುಭಕೋರುತ್ತಿದ್ದಾರೆ.

  • ಕುಡಿಯಲ್ಲ, ಸಿಗರೇಟ್ ಸೇದಲ್ಲ: ಪಾರ್ಟಿ ಬಗ್ಗೆ ನಟಿ ತಾಪ್ಸಿ ಕಿಡಿಕಿಡಿ

    ಕುಡಿಯಲ್ಲ, ಸಿಗರೇಟ್ ಸೇದಲ್ಲ: ಪಾರ್ಟಿ ಬಗ್ಗೆ ನಟಿ ತಾಪ್ಸಿ ಕಿಡಿಕಿಡಿ

    ಬಾಲಿವುಡ್ (Bollywood) ನಟಿ ತಾಪ್ಸಿ ಪನ್ನು ಬಿಟೌನ್ ನಲ್ಲಿ ನಡೆಯುವ ಪಾರ್ಟಿ ಬಗ್ಗೆ ಮಾತನಾಡಿದ್ದಾರೆ. ಅವಕಾಶಕ್ಕಾಗಿ ಅಲ್ಲಿ ತಡರಾತ್ರಿ ಪಾರ್ಟಿ ಮಾಡಬೇಕು, ಸ್ಟಾರ್ ಗಳ ಜೊತೆ ಚಾಟ್ ಮಾಡಬೇಕು ಅಂತೆಲ್ಲ ಹೇಳಿದ್ದಾರೆ. ನಾನು ಕುಡಿಯಲ್ಲ, ಸಿಗರೇಟು ಸೇದಲ್ಲ. ಹಾಗಾಗಿ ಪಾರ್ಟಿಯಲ್ಲಿ ಕಾಣಿಸಿಕೊಂಡಿಲ್ಲ.  ಈ ಕಾರಣಕ್ಕಾಗಿಯೇ ನನಗೆ ಅವಕಾಶ ಸಾಕಷ್ಟು ಸಿಗಲಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

    ಈ ನಡುವೆ ತಾಪ್ಸಿ ಪನ್ನು ಮದುವೆಯ ಸಡಗರದಲ್ಲಿದ್ದಾರೆ. ಬಾಲಿವುಡ್ ಅಂಗಳದಲ್ಲಿ ಮದುವೆಯ ಸಂಭ್ರಮ ಜೋರಾಗಿದೆ. ಕೆಲವು ದಿನಗಳ ಹಿಂದೆಯಷ್ಟೇ ರಕುಲ್ (Rakul Preet Singh) ಮತ್ತು ಜಾಕಿ ಭಗ್ನಾನಿ ಗೋವಾದಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದರು. ಗೂಗ್ಲಿ ಬೆಡಗಿ ಕೃತಿ ಕರಬಂಧ ಮಾರ್ಚ್‌ನಲ್ಲಿ ಮದುವೆ ಆಗೋದಾಗಿ ಅನೌನ್ಸ್ ಮಾಡಿದ್ದರು. ಇದೀಗ ತಾಪ್ಸಿ ಸರದಿ.

    ತಾಪ್ಸಿ (Taapsee Pannu) ತಮ್ಮ ಬಹುಕಾಲದ ಗೆಳೆಯನ ಜೊತೆ ಮದುವೆಗೆ ರೆಡಿಯಾಗಿದ್ದು, ಮಾರ್ಚ್ ಅಂತ್ಯದಲ್ಲಿ ಉದಯಪುರದಲ್ಲಿ ಮದುವೆ (Wedding) ನಡೆಯಲಿದೆ. ಕ್ರಿಶ್ಚಿಯನ್ ಮತ್ತು ಸಿಖ್ ಸಂಪ್ರದಾಯದಂತೆ ಈ ಜೋಡಿ ಮದುವೆ ಆಗಲಿದೆ. ‌

    ಬ್ಯಾಡ್ಮಿಂಟನ್ ಆಟಗಾರ ಮಥಿಯಾಸ್ ಬೋ (Mathias Boe) ಜೊತೆ 10 ವರ್ಷಗಳ ಕಾಲ ಡೇಟಿಂಗ್ ಮಾಡ್ತಿದ್ದರು ತಾಪ್ಸಿ. ಈಗ ಗುರುಹಿರಿಯರ ಸಮ್ಮತಿಯ ಮೇರೆಗೆ ಮದುವೆಯಾಗುತ್ತಿದ್ದಾರೆ. ಮದುವೆಗೆ 2 ಕುಟುಂಬದವರು ಮತ್ತು ಆಪ್ತರಷ್ಟೇ ಭಾಗಿಯಾಗಲಿದ್ದಾರೆ. ಹಾಗಾಗಿ ಬಾಲಿವುಡ್ ಮತ್ತು ಸೌತ್ ಸಿನಿಮಾರಂಗದ ಸೆಲೆಬ್ರಿಟಿಗಳಿಗೆ ಮದುವೆಗೆ ಆಹ್ವಾನವಿಲ್ಲ ಎನ್ನಲಾಗುತ್ತಿದೆ.

     

    ಸದ್ಯ ಪಡ್ಡೆಹುಡುಗರ ನೆಚ್ಚಿನ ನಟಿ ತಾಪ್ಸಿ ಮದುವೆಗೆ ಸಿದ್ಧತೆ ಮಾಡಿಕೊಳ್ತಿರೋದಕ್ಕೆ ನಿರಾಸೆಯಾಗಿದ್ದಾರೆ. ಏನೇ ಆಗಲಿ ನಮ್ಮ ನಾಯಕಿಗೆ ಶುಭವಾಗಲಿ ಎಂದು ಹಾರೈಸುತ್ತಿದ್ದಾರೆ ಫ್ಯಾನ್ಸ್.

  • ಸಿಖ್, ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾಗಲಿದ್ದಾರೆ ನಟಿ ತಾಪ್ಸಿ ಪನ್ನು

    ಸಿಖ್, ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾಗಲಿದ್ದಾರೆ ನಟಿ ತಾಪ್ಸಿ ಪನ್ನು

    ಟಿ ತಾಪ್ಸಿ ಪನ್ನು ಮದುವೆಯ ಸಡಗರದಲ್ಲಿದ್ದಾರೆ. ಬಾಲಿವುಡ್ ಅಂಗಳದಲ್ಲಿ ಮದುವೆಯ ಸಂಭ್ರಮ ಜೋರಾಗಿದೆ. ಕೆಲವು ದಿನಗಳ ಹಿಂದೆಯಷ್ಟೇ ರಕುಲ್ (Rakul Preet Singh) ಮತ್ತು ಜಾಕಿ ಭಗ್ನಾನಿ ಗೋವಾದಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದರು. ಗೂಗ್ಲಿ ಬೆಡಗಿ ಕೃತಿ ಕರಬಂಧ ಮಾರ್ಚ್‌ನಲ್ಲಿ ಮದುವೆ ಆಗೋದಾಗಿ ಅನೌನ್ಸ್ ಮಾಡಿದ್ದರು. ಇದೀಗ ತಾಪ್ಸಿ ಸರದಿ.

    ತಾಪ್ಸಿ (Taapsee Pannu) ತಮ್ಮ ಬಹುಕಾಲದ ಗೆಳೆಯನ ಜೊತೆ ಮದುವೆಗೆ ರೆಡಿಯಾಗಿದ್ದು, ಮಾರ್ಚ್ ಅಂತ್ಯದಲ್ಲಿ ಉದಯಪುರದಲ್ಲಿ ಮದುವೆ (Wedding) ನಡೆಯಲಿದೆ. ಕ್ರಿಶ್ಚಿಯನ್ ಮತ್ತು ಸಿಖ್ ಸಂಪ್ರದಾಯದಂತೆ ಈ ಜೋಡಿ ಮದುವೆ ಆಗಲಿದೆ. ‌

    ಬ್ಯಾಡ್ಮಿಂಟನ್ ಆಟಗಾರ ಮಥಿಯಾಸ್ ಬೋ (Mathias Boe) ಜೊತೆ 10 ವರ್ಷಗಳ ಕಾಲ ಡೇಟಿಂಗ್ ಮಾಡ್ತಿದ್ದರು ತಾಪ್ಸಿ. ಈಗ ಗುರುಹಿರಿಯರ ಸಮ್ಮತಿಯ ಮೇರೆಗೆ ಮದುವೆಯಾಗುತ್ತಿದ್ದಾರೆ. ಮದುವೆಗೆ 2 ಕುಟುಂಬದವರು ಮತ್ತು ಆಪ್ತರಷ್ಟೇ ಭಾಗಿಯಾಗಲಿದ್ದಾರೆ. ಹಾಗಾಗಿ ಬಾಲಿವುಡ್ ಮತ್ತು ಸೌತ್ ಸಿನಿಮಾರಂಗದ ಸೆಲೆಬ್ರಿಟಿಗಳಿಗೆ ಮದುವೆಗೆ ಆಹ್ವಾನವಿಲ್ಲ ಎನ್ನಲಾಗುತ್ತಿದೆ.

     

    ಸದ್ಯ ಪಡ್ಡೆಹುಡುಗರ ನೆಚ್ಚಿನ ನಟಿ ತಾಪ್ಸಿ ಮದುವೆಗೆ ಸಿದ್ಧತೆ ಮಾಡಿಕೊಳ್ತಿರೋದಕ್ಕೆ ನಿರಾಸೆಯಾಗಿದ್ದಾರೆ. ಏನೇ ಆಗಲಿ ನಮ್ಮ ನಾಯಕಿಗೆ ಶುಭವಾಗಲಿ ಎಂದು ಹಾರೈಸುತ್ತಿದ್ದಾರೆ ಫ್ಯಾನ್ಸ್.