Tag: ತಾಪಮಾನ

  • ರಾಜ್ಯದ ನಗರಗಳ ಹವಾಮಾನ ವರದಿ: 25-02-2020

    ರಾಜ್ಯದ ನಗರಗಳ ಹವಾಮಾನ ವರದಿ: 25-02-2020

    ಇನ್ನೇನು ಬೇಸಿಗೆ ಆರಂಭವಾಯಿತು, ಹೀಗಾಗಿ ಚಳಿ ನಿಧಾನವಾಗಿ ಕಡಿಮೆಯಾಗುತ್ತಿದ್ದು, ಅದೇ ರೀತಿ ಕಾವು ಸಹ ನಿಧಾನವಾಗಿ ಹೆಚ್ಚುತ್ತಿದೆ. ಇಷ್ಟುದಿನ ಮೋಡ ಕವಿದ ವಾತಾವರಣ, ಚಳಿ ಇರುತ್ತಿತ್ತು. ಇನ್ನು ಬಿಸಿಲಿನ ಬೇಗೆ ಸುಡಲಿದೆ. ಅದೇ ರೀತಿ ಇಂದು ಸಹ ರಾಜ್ಯದ ಬಹುತೇಕ ಕಡೆಗಳಲ್ಲಿ ಒಣ ಹವೆ ಇರಲಿದೆ.

    ಉತ್ತರ ಕರ್ನಾಟಕ ಭಾಗಗಳಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಲಿದ್ದು, ತಂಪು ಪಾನೀಯ ಹಾಗೂ ಛತ್ರಿ ಮೊರೆ ಹೋಗಬೇಕಾಗಬಹುದು. ರಾಜಧಾನಿ ಬೆಂಗಳೂರಿನಲ್ಲಿ ಇಂದು ಗರಿಷ್ಠ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್, ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ಮೈಸೂರಿನಲ್ಲಿ ಗರಿಷ್ಠ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದರೆ, ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮಂಡ್ಯದಲ್ಲಿ ಗರಿಷ್ಠ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದರೆ, ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ನಗರಗಳ ಗರಿಷ್ಟ, ಕನಿಷ್ಟ ಉಷ್ಣಾಂಶ ಮಾಹಿತಿ:
    ಬೆಂಗಳೂರು: 31 – 18
    ಮೈಸೂರು: 33 – 19
    ಮಂಗಳೂರು: 32 – 25
    ಶಿವಮೊಗ್ಗ: 36 – 19
    ಬೆಳಗಾವಿ: 33 – 21

    ಮಂಡ್ಯ: 34 – 19
    ರಾಮನಗರ: 33 – 19
    ಮಡಿಕೇರಿ: 29 – 16
    ಹಾಸನ: 32 – 18
    ಚಾಮರಾಜನಗರ: 33 – 19

    ಚಿಕ್ಕಬಳ್ಳಾಪುರ: 31 – 17
    ಕೋಲಾರ: 31 – 18
    ತುಮಕೂರು: 32 – 19
    ಉಡುಪಿ: 32 – 26
    ಕಾರವಾರ: 32 – 26

    ಚಿಕ್ಕಮಗಳೂರು: 32 – 17
    ದಾವಣಗೆರೆ: 35 – 19
    ಚಿತ್ರದುರ್ಗ: 33 – 19
    ಹಾವೇರಿ: 36 – 19
    ಬಳ್ಳಾರಿ: 36 – 22

    ಧಾರವಾಡ: 34 – 21
    ಗದಗ: 34 – 21
    ಕೊಪ್ಪಳ: 35 – 21
    ರಾಯಚೂರು: 36 – 23
    ಯಾದಗಿರಿ: 35 – 23

    ವಿಜಯಪುರ: 34 – 22
    ಬೀದರ್: 32 – 21
    ಕಲಬುರಗಿ: 34 – 22
    ಬಾಗಲಕೋಟೆ: 35 – 23

  • ರಾಜ್ಯದ ನಗರಗಳ ಹವಾಮಾನ ವರದಿ: 24-02-2020

    ರಾಜ್ಯದ ನಗರಗಳ ಹವಾಮಾನ ವರದಿ: 24-02-2020

    ನಾಳೆ ರಾಜ್ಯದ ಹಲವು ಭಾಗಗಳಲ್ಲಿ ಮೋಡ ಕವಿದ ವಾತಾವರಣ ಆಗುವ ಸಾಧ್ಯತೆಗಳಿವೆ. ಆದರೆ ಉತ್ತರ ಕರ್ನಾಟಕ ಭಾಗಗಳಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಲಿದೆ. ಬೆಂಗಳೂರಿನಲ್ಲಿ ಇಂದು ಗರಿಷ್ಠ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದರೆ, ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ಮೈಸೂರಿನಲ್ಲಿ ಗರಿಷ್ಠ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದರೆ, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮಂಡ್ಯದಲ್ಲಿ ಗರಿಷ್ಠ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದರೆ, ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ನಗರಗಳ ಗರಿಷ್ಟ, ಕನಿಷ್ಟ ಉಷ್ಣಾಂಶ ಮಾಹಿತಿ:
    ಬೆಂಗಳೂರು: 31 – 19
    ಮೈಸೂರು: 33 – 21
    ಮಂಗಳೂರು: 33 – 26
    ಶಿವಮೊಗ್ಗ: 36 – 21
    ಬೆಳಗಾವಿ: 34 – 22

    ಮಂಡ್ಯ: 33 – 22
    ರಾಮನಗರ: 33 – 22
    ಮಡಿಕೇರಿ: 30 – 18
    ಹಾಸನ: 32 – 19
    ಚಾಮರಾಜನಗರ: 33 – 22

    ಚಿಕ್ಕಬಳ್ಳಾಪುರ: 30 – 19
    ಕೋಲಾರ: 30 – 19
    ತುಮಕೂರು: 33 – 21
    ಉಡುಪಿ: 33 – 27
    ಕಾರವಾರ: 33 – 26

    ಚಿಕ್ಕಮಗಳೂರು: 32 – 18
    ದಾವಣಗೆರೆ: 35 – 22
    ಚಿತ್ರದುರ್ಗ: 33 – 22
    ಹಾವೇರಿ: 36 -22
    ಬಳ್ಳಾರಿ: 35 – 24

    ಧಾರವಾಡ: 34 – 22
    ಗದಗ: 34 – 23
    ಕೊಪ್ಪಳ: 34 – 23
    ರಾಯಚೂರು: 35 – 24
    ಯಾದಗಿರಿ: 35 – 25

    ವಿಜಯಪುರ: 35 – 26
    ಬೀದರ್: 32 – 24
    ಕಲಬುರಗಿ: 35 – 26
    ಬಾಗಲಕೋಟೆ: 36 – 24

  • ರಾಜ್ಯದ ನಗರಗಳ ಹವಾಮಾನ ವರದಿ: 23-02-2020

    ರಾಜ್ಯದ ನಗರಗಳ ಹವಾಮಾನ ವರದಿ: 23-02-2020

    ನ್ಮುಂದೆ ರಾಜ್ಯದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಲಿದೆ. ಬೆಂಗಳೂರಿನಲ್ಲಿ ಇಂದು ಗರಿಷ್ಠ ಉಷ್ಣಾಂಶ 30 ಡಿಗ್ರಿ ಸೆಲ್ಸಿಯಸ್ ಇರಲಿದ್ದರೆ, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ಉತ್ತರ ಕರ್ನಾಟಕ ಭಾಗದಲ್ಲಿ ಈಗಾಗಲೇ 34 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಇದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ. ಇತ್ತ ಮೈಸೂರಿನಲ್ಲಿ ಗರಿಷ್ಠ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದರೆ, ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ನಗರಗಳ ಗರಿಷ್ಟ, ಕನಿಷ್ಟ ಉಷ್ಣಾಂಶ ಮಾಹಿತಿ:
    ಬೆಂಗಳೂರು: 30 – 20
    ಮೈಸೂರು: 32 – 22
    ಮಂಗಳೂರು: 34 – 27
    ಶಿವಮೊಗ್ಗ: 34 – 22
    ಬೆಳಗಾವಿ: 34 – 22

    ಮಂಡ್ಯ: 33 – 22
    ರಾಮನಗರ: 32 – 21
    ಮಡಿಕೇರಿ: 30 – 18
    ಹಾಸನ: 32 – 19
    ಚಾಮರಾಜನಗರ: 32 – 22

    ಚಿಕ್ಕಬಳ್ಳಾಪುರ: 29 – 18
    ಕೋಲಾರ: 29 – 19
    ತುಮಕೂರು: 32 – 21
    ಉಡುಪಿ: 34 – 26
    ಕಾರವಾರ: 33 – 27

    ಚಿಕ್ಕಮಗಳೂರು: 31 – 19
    ದಾವಣಗೆರೆ: 34 – 23
    ಚಿತ್ರದುರ್ಗ: 32 – 22
    ಹಾವೇರಿ: 34 – 23
    ಬಳ್ಳಾರಿ: 34 – 23

    ಧಾರವಾಡ: 34 – 22
    ಗದಗ: 33 – 23
    ಕೊಪ್ಪಳ: 33 – 23
    ರಾಯಚೂರು: 34 – 23
    ಯಾದಗಿರಿ: 34 – 24

    ವಿಜಯಪುರ: 34 – 25
    ಬೀದರ್: 33 – 23
    ಕಲಬುರಗಿ: 34 – 24
    ಬಾಗಲಕೋಟೆ: 34 – 24

  • ಶುಭ್ರವಾದ ನೀಲಿ ಆಕಾಶದಿಂದ ರಾಜ್ಯದಲ್ಲಿ ಹೆಚ್ಚಾಗಿದೆ ಚಳಿ

    ಶುಭ್ರವಾದ ನೀಲಿ ಆಕಾಶದಿಂದ ರಾಜ್ಯದಲ್ಲಿ ಹೆಚ್ಚಾಗಿದೆ ಚಳಿ

    ಬೆಂಗಳೂರು: ಕಳೆದ ಮೂರ್ನಾಲ್ಕು ದಿನಗಳಿಂದ ಸಿಕ್ಕಪಟ್ಟೆ ಚಳಿ ಜನರನ್ನು ಹೈರಾಣಾಗಿಸಿದೆ. ಅದರಲ್ಲೂ ಉತ್ತರ ಕರ್ನಾಟಕ ಭಾಗಗಳಲ್ಲಿ ಚಳಿಯ ಪ್ರಮಾಣ ಹೆಚ್ಚಾಗಿದೆ. ಸೋಮವಾರ ಬೀದರ್ ನಲ್ಲಿ ವಾಡಿಕೆಗಿಂತ 7 ಡಿಗ್ರಿ ಸೆಲ್ಸಿಯಸ್ ಕಡಮೆ ತಾಪಮಾನ ದಾಖಲಾಗಿದೆ. ಬರೀ ಬೀದರ್ ಮಾತ್ರವಲ್ಲ ಶಿವಮೊಗ್ಗ, ಚಿತ್ರದುರ್ಗ, ಹಾಸನ, ವಿಜಯಪುರ, ರಾಯಚೂರು ಸೇರಿದಂತೆ ಹಲವೆಡೆ ವಾಡಿಕೆಯ ಕನಿಷ್ಠ ತಾಪಮಾನಕ್ಕಿಂತ ಕಡಿಮೆ ತಾಪಮಾನ ದಾಖಲಾಗಿದೆ.

    ರಾಜಧಾನಿ ಬೆಂಗಳೂರಿನಲ್ಲಿ ಈ ರೀತಿಯ ವಾತಾವರಣವಿಲ್ಲ. ವಾಡಿಕೆಗಿಂತ ಕಡಿಮೆ ತಾಪಮಾನ ದಾಖಲಾಗಿಲ್ಲ. ಉತ್ತರ ಒಳನಾಡು, ದಕ್ಷಿಣ ಒಳನಾಡು ಹಾಗೂ ಮಲೆನಾಡಿನಲ್ಲಿ ಕನಿಷ್ಠ ತಾಪಮಾನ ಕಡಿಮೆಯಾಗಿದೆ.

    ಈ ರೀತಿ ಕನಿಷ್ಠ ತಾಪಮಾನ ದಾಖಲಾಗಲು ಪ್ರಮುಖ ಕಾರಣ ಶುಭ್ರವಾದ ನೀಲಿ ಆಕಾಶ. ಕಳೆದ ವಾರ ರಾಜ್ಯದೆಲ್ಲೆಡೆ ಮೋಡ ಕವಿದ ವಾತಾವರಣವಿತ್ತು. ಆದರೆ ಈ ವಾರ ಮೋಡವೇ ಇಲ್ಲ. ಹೀಗಾಗಿ ಬೆಳಗ್ಗಿನ ಸಮಯದಲ್ಲಿ ಕನಿಷ್ಠ ತಾಪಮಾನ ಕಡಿಮೆಯಾಗುತ್ತಿದೆ.

    ಉತ್ತರ ಭಾರತದಲ್ಲಿ ಮಳೆಯಾಗ್ತಿದ್ದು, ಅಲ್ಲಿನ ಶೀತ ಗಾಳಿಯ ಪ್ರಭಾವವೂ ಕೂಡ ರಾಜ್ಯದಲ್ಲಿ ಚಳಿ ಹೆಚ್ಚಾಗಲು ಕಾರಣವಾಗಿದೆ. ಆದರೆ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ವಾಡಿಕೆಯ ತಾಪಮಾನ ಇರಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ನಿರ್ದೇಶಕರಾದ ಶ್ರೀನಿವಾಸ್ ರೆಡ್ಡಿ ತಿಳಿಸಿದ್ದಾರೆ.

    ವಿಶೇಷವೆಂದರೆ ದೇಶದಲ್ಲೇ ಸೋಮವಾರ ಗರಿಷ್ಠ ತಾಪಮಾನ ನಮ್ಮ ರಾಜ್ಯದಲ್ಲಿ ದಾಖಲಾಗಿದೆ. ಕಾರವಾರದಲ್ಲಿ ಸೋಮವಾರ 37 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು.

  • ತೋಳ ಚಂದ್ರಗ್ರಹಣದ ಎಫೆಕ್ಟ್- ವಾತಾವರಣದಲ್ಲಿ ಭಾರೀ ಬದಲಾವಣೆ

    ತೋಳ ಚಂದ್ರಗ್ರಹಣದ ಎಫೆಕ್ಟ್- ವಾತಾವರಣದಲ್ಲಿ ಭಾರೀ ಬದಲಾವಣೆ

    ಬೆಂಗಳೂರು: ಕಳೆದ ವರ್ಷದ ಕೊನೆಯಲ್ಲಿ ಸೂರ್ಯಗ್ರಹಣ ಈ ವರ್ಷದ ಆರಂಭದಲ್ಲಿ ಚಂದ್ರಗ್ರಹಣ. ಹದಿನೈದು ದಿನಗಳ ಅಂತರದಲ್ಲಿ ಬಂದ ಈ ಎರಡು ಗ್ರಹಣಗಳು ವಾತಾವರಣದಲ್ಲಿ ಭಾರೀ ಬದಲಾವಣೆಗೆ ಕಾರಣವಾಗಿವೆ.

    ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಮೈ ಕೊರೆವ ಚಳಿಯಿಂದ ಜನರು ಹೊರಗಡೆ ಬರುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಬೆಳಗ್ಗೆ ಮೈಕೊರೆವ ಚಳಿ ಇದ್ದರೆ, ಮಧ್ಯಾಹ್ನದ ವೇಳೆ ಸೆಕೆ ಫೀಲ್ ಆಗುತ್ತೆ. ಸಂಜೆ ಹೊತ್ತಿಗೆ ಮತ್ತದೇ ರಣಭೀಕರ ಚಳಿ. ಹೀಗಾಗಿ ತೋಳ ಚಂದ್ರಗ್ರಹಣದಿಂದ ಹವಾಮಾನದಲ್ಲಿ ಮಹತ್ತರವಾದ ಬದಲಾವಣೆಯಾಗಿದೆ ಎನ್ನಲಾಗುತ್ತಿದೆ.

    ಚಂದ್ರಗ್ರಹಣದ ಬಳಿಕ ವಾತಾವರಣದಲ್ಲಿ ಆಗುತ್ತಿರುವ ಬದಲಾವಣೆಗೆ ಜ್ಯೋತಿಷಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಆಸ್ಟ್ರೇಲಿಯಾ ಕಾಡ್ಗಿಚ್ಚಿಗೆ ಸೂರ್ಯಗ್ರಹಣವೇ ಕಾರಣ ಎನ್ನಲಾಗಿದೆ. ಈಗ ಚಂದ್ರಗ್ರಹಣದಿಂದ ಜಲ ಗಂಡಾಂತರ, ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇವೆ ಎಂದು ಹೇಳಲಾಗುತ್ತಿದೆ.

    ವಿಜ್ಞಾನಿಗಳ ಪ್ರಕಾರ, ರಾಜ್ಯದ ದಕ್ಷಿಣ ಕರಾವಳಿ, ಉತ್ತರ ಕರಾವಳಿ ಭಾಗ ಸೇರಿದಂತೆ ನಾನಾಕಡೆ ವಾತಾವರಣದಲ್ಲಿ ತೀವ್ರ ಬದಲಾವಣೆಗೆ ಕಾರಣವಾಗಿದ್ದು, ಸಂಕ್ರಾಮಿಕ ರೋಗಗಳು ಹೆಚ್ಚಾಗುವ ಸಾಧ್ಯತೆ ಇದೆ. ದಿನೇ ದಿನೇ ಚಳಿಯ ತೀವ್ರತೆ ಹೆಚ್ಚಾಗುತ್ತಿದ್ದು, ಮಕ್ಕಳು, ಮಹಿಳೆಯರು, ವಯಸ್ಸಾದವರು ಹೆಚ್ಚರ ವಹಿಸಿದರೆ ಒಳ್ಳೆಯದು ಎಂದು ತಿಳಿಸಿದ್ದಾರೆ.

  • ಗ್ರಹಣದ ಬಳಿಕ ಹಠಾತ್ ತಾಪಮಾನ ಏರಿಕೆ

    ಗ್ರಹಣದ ಬಳಿಕ ಹಠಾತ್ ತಾಪಮಾನ ಏರಿಕೆ

    – 4, 5 ದಿನ ರಾಜ್ಯದಲ್ಲಿ ತಾಪಮಾನ ಏರಿಕೆ ಸಾಧ್ಯತೆ

    ಬೆಂಗಳೂರು: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಳಿ ಘರ್ಜಿಸುತ್ತಿದ್ದರೆ, ಇತ್ತ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಬಿಸಿಲಿನ ಪ್ರತಾಪ ಹೆಚ್ಚಾಗಿದೆ. ಕಂಕಣ ಸೂರ್ಯಗ್ರಹಣ ಮುಗಿದ ಬಳಿಕ ರಾಜ್ಯದಲ್ಲಿ ಹಠಾತ್ ತಾಪಮಾನ ಏರಿಕೆಯಾಗಿದೆ.

    ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಾಖಲೆಯ ಚಳಿ ದಾಖಲಾಗಿದೆ. 2.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದೆಹಲಿಯಲ್ಲಿ ದಾಖಲಾಗಿದ್ದು, ಕೊರೆಯುವ ಚಳಿಯಿಂದಾಗಿ ಹಿಮ ಕೂಡ ಹೆಚ್ಚಾಗಿದೆ. ಇತ್ತ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕಳೆದ ಎರಡು ದಿನಗಳಿಂದ ಹವಾಮಾನದಲ್ಲಿ ವೈಪರೀತ್ಯ ಉಂಟಾಗಿದೆ. ಕಂಕಣ ಸೂರ್ಯಗ್ರಹಣ ಬಳಿಕ ರಾಜ್ಯದಲ್ಲಿ ಹಠಾತ್ ಬಿಸಿಲಿನ ತಾಪಮಾನ ಏರಿಕೆಯಾಗಿದೆ. ಇಷ್ಟು ದಿನ ಚಳಿಯಿಂದ ನಡುಗುತ್ತಿದ್ದ ಜನ, ಇದೀಗಾ ಬಿಸಿಲು ಸೆಕೆಯನ್ನ ಅನುಭವಿಸುತ್ತಿದ್ದಾರೆ.

    ಗ್ರಹಣ ಮುಗಿದ ಬಳಿಕ ಕಳೆದ ಎರಡು ದಿನಗಳಿಂದ ಕರ್ನಾಟಕದಾದ್ಯಂತ ತಾಪಮಾನ ಏರಿಕೆಯಾಗಿದೆ. ಪೂರ್ವ, ಆಗ್ನೇಯ ದಿಕ್ಕಿನಿಂದ ಬಿಸಿಗಾಳಿ ಬೀಸುತ್ತಿದೆ. ಅರಬ್ಬೀ ಸಮುದ್ರದ ಪಶ್ಚಿಮ ಭಾಗದಲ್ಲಿ ಲೋ ಪ್ರೆಸರ್ ಸಿಸ್ಟಮ್ ಇತ್ತು. ಇದರಿಂದ ಪೂರ್ವ ಭಾಗದಿಂದ ಗಾಳಿ ಬರುತ್ತಿದೆ. ಇಲ್ಲಿಂದ ಬರುವ ಗಾಳಿ ತೇವಾಂಶವನ್ನ ತರುತ್ತದೆ. ಇದರಿಂದನೇ ರಾಜ್ಯದಲ್ಲಿ ತಾಪಮಾನ ಏರಿಕೆಯಾಗುತ್ತಿದೆ. ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಎರಡು ದಿನಗಳ ಹಿಂದೆ 15-17 ಡಿಗ್ರಿ ಸೆಲ್ಸಿಯಸ್ ತಾಪಮಾನವಿತ್ತು. ಆದರೆ ಇಂದು 17-19 ಡಿಗ್ರಿ ಸೆಲ್ಸಿಯಸ್ ತಾಪಮಾನವಿದೆ. ನಾಲ್ಕೈದು ದಿನಗಳಲ್ಲಿ ಮತ್ತಷ್ಟೂ ತಾಪಮಾನ ಹೆಚ್ಚಾಗುವ ಸಾಧ್ಯತೆಗಳಿವೆ. ಒಟ್ಟಾರೆ ರಾಜ್ಯದಲ್ಲಿ ಉಷ್ಣಾಂಶದ ಪ್ರಮಾಣ 20 ಡಿಗ್ರಿ ಸೆಲ್ಸಿಯಸ್ ಗೆ ತಲುಪಿದೆ ಎಂದು ರಾಜ್ಯ ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್ ಪಾಟೀಲ್ ತಿಳಿಸಿದ್ದಾರೆ.

    ಎಲ್ಲಾ ಜಿಲ್ಲೆಗಳಲ್ಲಿ ವಾಡಿಕೆಗಿಂತ 2 ರಿಂದ 5 ಡಿಗ್ರಿ ಸೆಲ್ಸಿಯಸ್ ತನಕ ತಾಪಮಾನ ಏರಿಕೆಯಾಗುವ ಸಾಧ್ಯತೆಗಳಿವೆ. ಉತ್ತರ ದಿಕ್ಕಿನಿಂದ ಗಾಳಿ ಬೀಸಿದರೆ ಮಾತ್ರ ರಾಜ್ಯದಲ್ಲಿ ತಾಪಮಾನ ಇಳಿಕೆಯಾಗುತ್ತೆ. ಪೂರ್ವ ದಿಕ್ಕಿನಿಂದ ಮತ್ತೇ ಏನಾದರೂ ಬಿಸಿಗಾಳಿ ಬಂದರೆ ಮತ್ತಷ್ಟು ತಾಪಮಾನ ಏರಿಕೆಯಾಗಲಿದ್ದು, ಬೇಸಿಗೆಯ ಅನುಭವ ಆಗೋದು ಗ್ಯಾರಂಟಿ. ಪ್ರಾಕೃತಿಕ ವಲಯದಲ್ಲಿ ಈ ವ್ಯತ್ಯಾಸಗಳು ಸಾಮಾನ್ಯ ಆಗಿರುವುದರಿಂದ ಒಂದು ವಾರದೊಳಗೆ ಸಹಜಸ್ಥಿತಿಗೆ ಹವಾಮಾನ ಬರಲಿದೆ.

  • ಕರ್ನಾಟಕಕ್ಕೆ ಕಾದಿದೆ ಈ ಬಾರಿ ಭೀಕರ ಚಳಿ ಬಾಧೆ

    ಕರ್ನಾಟಕಕ್ಕೆ ಕಾದಿದೆ ಈ ಬಾರಿ ಭೀಕರ ಚಳಿ ಬಾಧೆ

    – ಮಡಿಕೇರಿಯಲ್ಲಿ ಈಗಲೇ 12 ಡಿಗ್ರಿಗೆ ಇಳಿದ ತಾಪಮಾನ

    ಮಡಿಕೇರಿ: ಕರ್ನಾಟಕದಲ್ಲಿ ಹೊಸ ವರ್ಷದಿಂದ ಭೀಕರ ಚಳಿ ಕಾಡುವ ಸೂಚನೆ ಇದ್ದು, ಭೂಮಿಯಾಳದಲ್ಲಿ ನಿರಂತರ ಜ್ವಾಲಾಮುಖಿ ಸ್ಫೋಟದ ಪರಿಣಾಮವೇ ಕಾರಣ ಎನ್ನಲಾಗಿದೆ. ದೇಶದ ಇತರ ಕೆಲ ಭಾಗಗಳಲ್ಲಿ ಹಿಮಪಾತವಾಗಲಿದ್ದು, ಕರ್ನಾಟಕ ಹಿಂದೆಂದೂ ಕಾಣದ ಚಳಿಗಾಲ ಇನ್ನೊಂದು ತಿಂಗಳಲ್ಲಿ ಕಾಣಿಸಲಿದೆ ಎಂದು ಭೂಗರ್ಭ ತಜ್ಞರು ಎಚ್ಚರಿಕೆ ಕೊಟ್ಟಿದ್ದಾರೆ.

    ಗ್ರಹಣದ ಆಸು-ಪಾಸು ಹಾಗೂ ಗ್ರಹಣ ಮುಗಿದ ಬಳಿಕ ಈ ಶೀತಗಾಳಿಯ ತೀವ್ರತೆ ಹೆಚ್ಚಾಗಲಿದೆ ಎಂಬ ಎಚ್ಚರಿಕೆಯನ್ನು ನೀಡಲಾಗಿದ್ದು, ಪುಟಾಣಿ ಮಕ್ಕಳಿಗೆ, ವಯಸ್ಸಾದವರಿಗೆ, ಗರ್ಭಿಣಿಯರಿಗೆ ಈ ರೀತಿ ವಾತಾವರಣ ಬದಲಾದರೆ ಆರೋಗ್ಯ ಸಮಸ್ಯೆ ಕಾಡುವ ಸಾಧ್ಯತೆ ಇದೆ.

    ಕರ್ನಾಟಕದ ಕಾಶ್ಮೀರ ಎಂದೇ ಖ್ಯಾತಿಯಾಗಿರುವ ಕೊಡಗು ಜಿಲ್ಲೆ ಪ್ರವಾಸಿ ತಾಣಗಳಿಗೂ ಖ್ಯಾತಿಯಾಗಿದ್ದು, ಆದರೆ ಇಲ್ಲಿ ಮೈ ಕೊರೆಯುವ ಚಳಿ, ಮುಂಜಾನೆಯ ಮಂಜಿನ ಮುಸುಕು, ತಣ್ಣನೆಯ ಗಾಳಿ ಜನಜೀವನವನ್ನು ಥಂಡಾ ಹೊಡೆಸಿದೆ. ಭಾರೀ ಚಳಿಯಿಂದಾಗಿ ದಿನನಿತ್ಯದ ಕೆಲಸ ಮಾಡಲು ಕೊಡಗಿನ ಜನರು ಹರಸಾಹಸ ಪಡಬೇಕಿದೆ.

    ಕಳೆದ ಹಲವು ವರ್ಷಗಳಿಗೆ ಹೋಲಿಸಿದರೆ ಕಿತ್ತಲೆ ನಾಡು ಕೊಡಗಿನಲ್ಲಿ ಈ ಬಾರಿ ಊಹಿಸಲು ಅಸಾಧ್ಯ ಎನ್ನುವಷ್ಟರ ಮಟ್ಟಿಗೆ ಚಳಿ ಜನರನ್ನು ತತ್ತರಿಸುವಂತೆ ಮಾಡಿದೆ. ಮುಂಜಾನೆ ಬೇಗ ಕೆಲಸಕ್ಕೆ ತೆರಳುವವರು, ವ್ಯಾಪಾರಿಗಳು ಚಳಿಯ ಹೊಡೆತಕ್ಕೆ ತರಗುಡುತ್ತಿದ್ದಾರೆ. ಚಳಿ ಕಾರಣದಿಂದ ಅಂಗಡಿಗಳಲ್ಲಿ ಸ್ವೆಟರ್, ಕಂಬಳಿ ವ್ಯಾಪಾರವೂ ತುಸು ಹೆಚ್ಚಿದ್ದು, ಜೊತೆಗೆ ಅವುಗಳ ಬೆಲೆಯೂ ಏರಿಕೆಯಾಗಿದೆ. ಮಂಜಿನ ನಗರಿ ಮಡಿಕೇರಿಯಲ್ಲಿ ಮೈ ಕೊರೆಯುವ ಚಳಿ, ನಡುಕ ಹುಟ್ಟಿಸುವ ಗಾಳಿಗೆ ಜನರಂತೂ ಹೈರಾಣಾಗಿ ಹೋಗಿದ್ದಾರೆ.

    ಮಡಿಕೇರಿಯಲ್ಲಿ ಕಳೆದ ಎರಡು ದಿನಗಳಿಂದ ಕನಿಷ್ಠ 12 ಡಿಗ್ರಿ ಸೆಲ್ಸಿಯಸ್  ತಾಪಮಾನ ದಾಖಲಾಗಿದೆ. ಸ್ಥಳೀಯರಷ್ಟೇ ಅಲ್ಲದೇ ಜಿಲ್ಲೆಗೆ ಬರುತ್ತಿರುವ ಪ್ರವಾಸಿಗರೂ ಬೆಂಕಿಯ ಮೊರೆ ಹೋಗುವಂತೆ ಮಾಡಿದೆ. ಗರಿಷ್ಟ ಅಂದರೆ 15 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದೆ. ಗಾಳಿ ಗಂಟೆಗೆ 7 ಕಿಲೋ ಮೀಟರ್ ವೇಗದಲ್ಲಿ ಬೀಸುತ್ತಿದೆ. ಸಾಮಾನ್ಯವಾಗಿ ಡಿಸೆಂಬರ್ ತಿಂಗಳ ಅಂತ್ಯದಲ್ಲಿ ಚಳಿ ಆರಂಭಗೊಂಡು ಫೆಬ್ರವರಿ ತಿಂಗಳವರೆಗೂ ಮುಂದುವರಿಯುತಿತ್ತು. ಆದರೆ ಈ ಬಾರಿ ಡಿಸೆಂಬರ್ ಎರಡನೇ ವಾರದಲ್ಲೇ ಆರಂಭಗೊಂಡ ಚಳಿ ಈಗ ಜನರನ್ನು ತತ್ತರಿಸುವಂತೆ ಮಾಡುತ್ತಿದೆ.

    ಜಿಲ್ಲೆಯ ಹೂ ಮಾರಾಟಗಾರರಂತೂ ಕಂಬಳಿ ಸುತ್ತಿಕೊಂಡೇ ವ್ಯಾಪಾರ ಮಾಡುವಂತಾಗಿದೆ. ಬೆಳಗ್ಗೆ ವಾಯುವಿಹಾರಕ್ಕೆ ತೆರಳುವವರು ಹಾಸಿಗೆ ಬಿಟ್ಟು ಮೇಲೇಳೋದೆ ಬೇಡ ಎನ್ನುವಷ್ಟರ ಮಟ್ಟಿಗೆ ಚಳಿಗಾಳಿ ಹೊಡೆಯುತ್ತಿದೆ. ಹಾಲು, ಪೇಪರ್ ವಿತರಕರಿಗಂತೂ ಚಳಿಯ ನಡುವೆ ಕೆಲಸ ಮಾಡುವುದು ಸವಾಲಾಗಿ ಹೋಗಿದೆ. ಚಳಿಯಿಂದ ರಕ್ಷಿಸಿಕೊಳ್ಳಲು ಅನೇಕರು ಬೆಂಕಿಯ ಮೊರೆ ಹೋಗುತ್ತಿದ್ದಾರೆ. ಬಾಡಿಗೆ ಮನೆಯಲ್ಲಿ ಬೆಂಕಿ ಹಾಕಿಕೊಳ್ಳುವ ವ್ಯವಸ್ಥೆ ಇಲ್ಲದವರು ಚಳಿಗೆ ಹೈರಾಣಾಗುವ ಸ್ಥಿತಿಯಿದೆ.

  • ‘ಕುದಿಯುತ್ತಿರುವ ಅರಬ್ಬೀ ಸಮುದ್ರದಿಂದ ಕಾಪಾಡು’ – ದೈವದ ಮೊರೆ ಹೋದ ಕಡಲ ಮಕ್ಕಳು

    ‘ಕುದಿಯುತ್ತಿರುವ ಅರಬ್ಬೀ ಸಮುದ್ರದಿಂದ ಕಾಪಾಡು’ – ದೈವದ ಮೊರೆ ಹೋದ ಕಡಲ ಮಕ್ಕಳು

    – 40 ವರ್ಷದಲ್ಲಿ ಮೊದಲ ಬಾರಿ ವೈಪರೀತ್ಯ
    – ತಟಕ್ಕೆ ಬರುತ್ತಿದೆ ಜೆಲ್ಲಿ, ಕಾರ್ಗಿಲ್ ಮೀನುಗಳು

    ಉಡುಪಿ: ಜಾಗತಿಕ ತಾಪಮಾನದಿಂದ ಮನುಷ್ಯ ತತ್ತರಿಸಿ ಹೋಗುತ್ತಿದ್ದಾನೆ. ಭೂಮಿಯ ಉಷ್ಣತೆ ಹೆಚ್ಚಿರೋದು ಮಾತ್ರವಲ್ಲ, ಸಮುದ್ರ ಕೂಡಾ ಕಾದು ಕೆಂಡದಂತಾಗಿದೆ. ಕಡಲು ಕುದಿಯುತ್ತಿರೋದ್ರಿಂದ ಮೊಗವೀರರು ಕಸುಬು ಕಳೆದುಕೊಂಡು ದೈವ ಬೊಬ್ಬರ್ಯನ ಮೊರೆ ಹೋಗುವಂತಾಗಿದೆ.

    ಜಾಗತಿಕ ತಾಪಮಾನ ವಿಪರೀತವಾಗಿ ಏರುತ್ತಿದೆ. ತಾಪಮಾನದ ಏರಿಕೆಯಿಂದಾಗಿ ಸಮುದ್ರದ ಮೀನೆಲ್ಲಾ ಸಾಗರದ ತಳಕ್ಕೆ ಸೇರುತ್ತಿದೆ. ಮತ್ಸ್ಯ ಸಂಪತ್ತನ್ನೇ ನಂಬಿರುವ ಮೀನುಗಾರರಿಗೆ ಇದರಿಂದ ಕಸುಬೇ ಇಲ್ಲದಂತಾಗಿದೆ. ಬೆಳಗ್ಗೆಯಿಂದ ಸಂಜೆಯ ತನಕ ಸಮುದ್ರಕ್ಕೆ ಬಲೆ ಬೀಸಿದರೂ ನಿರೀಕ್ಷಿತ ಮೀನು ಸಿಗುತ್ತಿಲ್ಲ. ನೀರು ತಂಪಾಗುತ್ತಿಲ್ಲ, ಮೀನು ತಟಕ್ಕೋ, ನೀರಿನ ಮೇಲ್ಮೈಗೋ ಬರುತ್ತಲೇ ಇಲ್ಲ. ಕಳೆದ 40 ವರ್ಷಗಳಲ್ಲೆ ಮೊದಲ ಬಾರಿಗೆ ಈ ತರದ ಹವಾಮಾನ ವೈಪರಿತ್ಯವಾಗಿದೆ.

    ವರ್ಷದಲ್ಲಿ ಮಳೆ ಹೆಚ್ಚಾದಾಗ ನೆರೆ ಬಂದಾಗ ಕಡಲು ಪ್ರಕ್ಷುಬ್ಧವಾಗುತ್ತದೆ. ಈ ಸಂದರ್ಭ ಯಥೇಚ್ಛ ಮತ್ಸ್ಯ ಸಂಪತ್ತು ಕಡಲಮಕ್ಕಳ ಪಾಲಾಗುತ್ತದೆ. ಆದರೆ ಈ ಬಾರಿ ಆಗದೆ ಇರುವುದು ಆತಂಕಕ್ಕೆ ಕಾರಣವಾಗಿದೆ. ಕಷ್ಟ ಮತ್ತು ಸುಖ ಬಂದಾಗ ಕಡಲ ಮಕ್ಕಳು ದೈವ ಬೊಬ್ಬರ್ಯನ ಮೊರೆ ಹೋಗ್ತಾರೆ. ಇದೀಗ ಅರಬ್ಬೀ ಸಮುದ್ರದಲ್ಲಿ ಮತ್ಸ್ಯಕ್ಷಾಮ ಎದುರಾಗಿದ್ದು ಮತ್ತೆ ಬೊಬ್ಬರ್ಯ ದೈವಕ್ಕೆ ದರ್ಶನ ಸೇವೆ ಕೊಟ್ಟಿದ್ದಾರೆ. ಮಲ್ಪೆ ಸಮೀಪದ ಕಲ್ಮಾಡಿ ಬೊಬ್ಬರ್ಯ ಪಾದೆಯಲ್ಲಿ ದರ್ಶನ ಸೇವೆ ನಡೆದಿದೆ. ಹವಾಮಾನ ವೈಪರೀತ್ಯ ನೀಗಿಸಿ ತಾಪಮಾನ ಇಳಿಸು ಎಂದು ಸಾವಿರಾರು ಮೀನುಗಾರರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಗಾಯದ ಮೇಲೆ ಬರೆ ಎಂಬಂತೆ ಸಮುದ್ರದ ತಾಪಮಾನ ಏರಿದ್ದರಿಂದ ಜೆಲ್ಲಿ ಫಿಶ್ ಮತ್ತು ಕಾರ್ಗಿಲ್ ಫಿಶ್ ಎಂಬ ಆಕ್ರಮಣ ಮಾಡುವ ಮೀನು ಸಾಗರದ ತಟಕ್ಕೆ ಲಗ್ಗೆಯಿಡುತ್ತಿದೆ. ಈ ಮೀನುಗಳು ಲಕ್ಷಾಂತರ ರೂಪಾಯಿಯ ಬಲೆಯನ್ನು ಕತ್ತರಿಸಿ ಪುಡಿ ಮಾಡುತ್ತವೆ. ಇದನ್ನು ಓದಿ: ಸಮುದ್ರದಲ್ಲಿ ಸಿಕ್ತು ಟನ್ ಗಟ್ಟಲೇ ಅಪರೂಪದ ಕಾರ್ಗಿಲ್ ಮೀನು – ಮೀನುಗಾರರಲ್ಲಿ ಆತಂಕ

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಪರ್ಸಿನ್ ಬೋಟ್ ಮೀನುಗಾರ ರಮೇಶ್ ಮೆಂಡನ್, ಸಮುದ್ರದ ನೀರು ಇಷ್ಟೊತ್ತಿಗೆ ತಂಪೇರಬೇಕಿತ್ತು. ಆದರೆ ತಾಪಮಾನ ತುಂಬಾ ಹೆಚ್ಚಾಗಿದೆ. ಮೀನಿನ ಬುಗ್ಗೆಗಳು ತಳ ಬಿಟ್ಟು ಮೇಲಕ್ಕೆ ಬರುತ್ತಿಲ್ಲ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮೀನುಗಾರಿಕೆಗೆ ಹೋದರೂ ಏನೂ ಗಿಟ್ಟುತ್ತಿಲ್ಲ ಎಂದರು. ನಾವು ದೈವ ದೇವರನ್ನು ನಂಬಿ, ಪ್ರಾಣದ ಹಂಗು ತೊರೆದು ಕಡಲಿಗೆ ಇಳಿಯುತ್ತೇವೆ. ಇದೀಗ ಮತ್ಸ್ಯಕ್ಷಾಮ ಬಂದಿದೆ. ಕಡಲರಾಜ ಬೊಬ್ಬರ್ಯನೇ ನಮ್ಮ ಕೈಹಿಡಿಬೇಕೆಂದು ದರ್ಶನ ಸೇವೆ ಕೊಟ್ಟಿದ್ದೇವೆ. ನಮ್ಮ ಭಾರವನ್ನು ದೇವರ ಮೇಲೆ ಹಾಕಿದ್ದೇವೆ ಎಂದು ಪೂವಪ್ಪ ಮೀನುಗಾರ ಹೇಳಿದರು.

    ವಾಯುಭಾರ ಕುಸಿತ, ವಿಪರೀತ ಮಳೆಯಿಂದ ಆರಂಭದ ದಿನಗಳಲ್ಲಿ ಮೀನುಗಾರಿಕೆ ಆಗಿರಲಿಲ್ಲ. ನಾಡದೋಣಿ ಮೀನುಗಾರಿಕೆಗೆ ಈ ಬಾರಿ ಹವಾಮಾನ ಸಹಕರಿಸಿಯೇ ಇಲ್ಲ. ಇದೀಗ ಪರ್ಸೀನ್ ಮೀನುಗಾರಿಕೆ ಆರಂಭವಾಗುವ ಕಾಲಕ್ಕೆ ಸಮುದ್ರದ ನೀರು ಕುದಿಯುತ್ತಿದೆ. ಸಮುದ್ರವನ್ನೇ ನಂಬಿರುವ ಮೊಗವೀರರನ್ನು ಸಮುದ್ರರಾಜ ಕೈಹಿಡಿಯುತ್ತಾನಾ ನೋಡಬೇಕು.

  • ನಮ್ಮನ್ನು ನಂಬಿ ದೇಶ ಭಯವಿಲ್ಲದೆ ಮಲಗುತ್ತೆ, ತಾಪಮಾನಕ್ಕೆಲ್ಲ ನಾವು ಹೆದರಲ್ಲ: ಬಿಎಸ್‍ಎಫ್ ಯೋಧ

    ನಮ್ಮನ್ನು ನಂಬಿ ದೇಶ ಭಯವಿಲ್ಲದೆ ಮಲಗುತ್ತೆ, ತಾಪಮಾನಕ್ಕೆಲ್ಲ ನಾವು ಹೆದರಲ್ಲ: ಬಿಎಸ್‍ಎಫ್ ಯೋಧ

    ನವದೆಹಲಿ: ಗಡಿಯಲ್ಲಿ ನಾವಿದ್ದೇವೆ ಎಂದು ಜನ ಆರಾಮಾಗಿ ನೆಮ್ಮದಿಯಿಂದ ನಿದ್ರೆ ಮಾಡುತ್ತಾರೆ. ದೇಶದ ಕಾಯುವ ಯೋಧರು ತಾಪಮಾನಕ್ಕೆ ಹೆದರಲ್ಲ ಎಂಬ ಭಾರತೀಯ ಸೈನಿಕರೊಬ್ಬರ ಹೇಳಿಕೆಗೆ ಇಡೀ ದೇಶವೇ ಸಲಾಂ ಎನ್ನುತ್ತಿದೆ.

    ಬೇಸಿಗೆ ಧಗೆಗೆ ಉತ್ತರ ಭಾರತ ತತ್ತರಿಸಿ ಹೋಗಿದ್ದು, ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲೂ ಕೂಡ ಬಿಸಿಲ ಝಳ ಹೆಚ್ಚಿದೆ. ಹೀಗಾಗಿ ಅಲ್ಲಿನ ಜನರಿಗೆ ಮಾತ್ರವಲ್ಲದೇ ಅಲ್ಲಿ ಗಡಿ ಕಾಯುವ ಸೈನಿಕರೂ ಕೂಡ ಬಿಸಿಲಿನ ಧಗೆಗೆ ಹೈರಾಣಾಗಿದ್ದಾರೆ. ಆದರೂ ಪಟ್ಟು ಬಿಡದೆ ದೇಶಕ್ಕಾಗಿ ವೀರಯೋಧರು ಗಡಿ ಕಾಯುತ್ತಿದ್ದು, ಬಿಸಿಲಿನಲ್ಲಿ ಕೆಲಸ ಮಾಡುವುದು ಕಷ್ಟವಾಗಲ್ಲವಾ? ಎಂದು ಕೇಳಿದರೆ, ನಾವು ಯೋಧರು ದೇಶವನ್ನು ಕಾಯುವವರು. ನಾವು ಈ ತಾಪಮಾನಕ್ಕೆಲ್ಲಾ ಹೆದರಲ್ಲ ಎಂದು ಹೇಳಿ ಎಲ್ಲರ ಮನ ಗೆದ್ದಿದ್ದಾರೆ.

    ನಾವು ಗಡಿಯಲ್ಲಿ ಕಾಯುತ್ತಿದ್ದೇವೆ ಎಂಬ ನಂಬಿಕೆಯಿಂದ ದೇಶದ ಪ್ರಜೆಗಳು ನೆಮ್ಮದಿಯಿಂದ ನಿದ್ರೆ ಮಾಡುತ್ತಿದ್ದಾರೆ. ಆದ್ದರಿಂದ ತಾಪಮಾನ ಹೇಗೆ ಇರಲಿ ನಾವು ಅದನ್ನು ಎದುರಿಸುತ್ತೇವೆ. ಸದಾ ಎಚ್ಚರಿಕೆಯಿಂದ ಕೆಲಸ ಮಾಡುತ್ತೇವೆ ಎಂದು ಸುದ್ದಿಸಂಸ್ಥೆಯೊಂದಕ್ಕೆ ಸೈನಿಕರೊಬ್ಬರು ನೀಡಿರುವ ಹೇಳಿಕೆಗೆ ಎಲ್ಲರು ಸೆಲ್ಯೂಟ್ ಹೊಡೆಯುತ್ತಿದ್ದಾರೆ.

    ರಾಜಸ್ಥಾನ ಹಾಗೂ ಗುಜರಾತ್‍ನಲ್ಲಿ ಬಿಸಿಲಿನ ಬೇಗೆಗೆ ಜನರು ತತ್ತರಿಸಿ ಹೋಗಿದ್ದಾರೆ. ಈ ರಣ ಬಿಸಿಲಿನಲ್ಲೂ ನಮ್ಮ ಭಾರತೀಯ ಯೋಧರು ಮಾತ್ರ ತಾಪಮಾನಕ್ಕೆ ಹೆದರದೆ, ಬಿಸಿಲನ್ನು ಎದುರಿಸಿಕೊಂಡು ತಮ್ಮ ಕರ್ತವ್ಯ ಮಾಡುತ್ತಿದ್ದಾರೆ. ಸದ್ಯ ರಾಜಸ್ಥಾನದಲ್ಲಿ 46 ಡಿಗ್ರಿ ಸೆಲ್ಸಿಯಸ್‍ಗಿಂತ ಹೆಚ್ಚು ತಾಪಮಾನ ದಾಖಲಾಗಿದೆ. ಅದರಲ್ಲೂ ಇಲ್ಲಿನ ಚುರು ಪ್ರದೇಶದಲ್ಲಿ ಕೆಲವು ದಿನಗಳಿಂದ 50 ಡಿಗ್ರಿ ಸೆಲ್ಸಿಯಸ್ ತಾಪಮಾನವಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.