Tag: ತಾಪಮಾನ

  • ರಾಯಚೂರಿನಲ್ಲಿ ದಾಖಲೆಯ ಬಿಸಿಲು – ಮಣ್ಣಿನ ಮಡಿಕೆಗೆ ಹೆಚ್ಚಾದ ಡಿಮ್ಯಾಂಡ್

    ರಾಯಚೂರಿನಲ್ಲಿ ದಾಖಲೆಯ ಬಿಸಿಲು – ಮಣ್ಣಿನ ಮಡಿಕೆಗೆ ಹೆಚ್ಚಾದ ಡಿಮ್ಯಾಂಡ್

    ರಾಯಚೂರು: ಜಿಲ್ಲೆಯಲ್ಲಿ ದಿನೇ ದಿನೇ ಬಿಸಿಲು ಹೆಚ್ಚಾಗುತ್ತಿದ್ದು, ದಾಖಲೆ ಬರೆಯುತ್ತಿದೆ. ಇದರಿಂದ ಜನರು ತತ್ತರಿಸಿ ಹೋಗಿದ್ದು, ಮಡಿಕೆ, ಹಣ್ಣುಗಳು ಸೇರಿದಂತೆ ಇನ್ನಿತರ ವ್ಯಾಪಾರದ ಬೇಡಿಕೆ ಹೆಚ್ಚಾಗುತ್ತಿದೆ.

    ಹೌದು, ರಾಯಚೂರು ಜಿಲ್ಲೆಯಲ್ಲಿ ಈಗಾಗಲೇ ತಾಪಮಾನ ದಾಖಲೆಯ ಮಟ್ಟಕ್ಕೆ ತಲುಪಿದ್ದು, ಮಾರ್ಚ್ ತಿಂಗಳಲ್ಲೇ 41.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಪ್ರತಿದಿನ ಸರಾಸರಿ 38-40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುವುದು ಸಾಮಾನ್ಯವಾಗಿದೆ.ಇದನ್ನೂ ಓದಿ: ರಾಯಚೂರಿನಲ್ಲಿ ಖೋಟಾ ನೋಟು ಜಾಲ ಪತ್ತೆ – ಎಎಸ್‌ಐ ಸೇರಿ ನಾಲ್ವರು ಅರೆಸ್ಟ್‌

    ಜಿಲ್ಲೆಯಲ್ಲಿ ಮಧ್ಯಾಹ್ನವಾದರೆ ಸಾಕು ಹೊರಗೆ ಓಡಾಡುತ್ತಿರುವ ಜನರು ಕಣ್ಣಿಗೆ ಬೀಳುವುದೇ ಇಲ್ಲ. ಆರಾಮಾಗಿ ಮನೆಯಲ್ಲಿ ಕುಳಿತುಕೊಳ್ಳುವುದೇ ಒಳಿತು ಎನ್ನುವಂತಾಗಿದೆ. ಬೇಸಿಗೆಯ ಬಿಸಿಲಿಗೆ ಜನರು ಕಂಗಾಲಾಗಿದ್ದು, ಇತ್ತ ಸೀಸನ್ ವ್ಯಾಪಾರಗಳು ಜೋರಾಗಿ ನಡೆಯುತ್ತಿವೆ. ಹಿಂದೆಂದೂ ಕಾಣದ ಪೈಪೋಟಿ ವ್ಯಾಪಾರಿಗಳಲ್ಲಿ ಕಾಣುತ್ತಿದೆ.

    ರಾಜಸ್ಥಾನದ ಮಣ್ಣಿನ ಗಡಿಗೆ, ಮಡಿಕೆ, ಬಾಟಲ್‌ಗಳ ಮಾರಾಟಕ್ಕೆ ನಗರದಲ್ಲಿ ತೀವ್ರ ಪೈಪೋಟಿಯಿದೆ. ಯಾವುದೇ ರಸ್ತೆಯಲ್ಲಿ ಹೋದರೂ ಕೂಡ ಮಡಿಕೆಗಳು ಕಾಣಸಿಗುತ್ತಿವೆ. 50-800 ರೂ.ವರೆಗೆ ಮಣ್ಣಿನ ಮಡಿಕೆ, ಬಾಟಲ್‌ಗಳು ಮಾರಾಟವಾಗುತ್ತಿದೆ. ಆದರೆ ವ್ಯಾಪಾರಿಗಳ ಸಂಖ್ಯೆ ಹೆಚ್ಚಾಗಿದ್ದಕ್ಕೆ ಕೆಲವರು ದೂರದಿಂದ ತಂದ ವಸ್ತುಗಳು ಮಾರಾಟವಾಗದೇ ನಷ್ಟವನ್ನೂ ಅನುಭವಿಸುತ್ತಿದ್ದಾರೆ.

    ಮಣ್ಣಿನ ಮಡಿಕೆ ವ್ಯಾಪಾರದ ಜೊತೆ ಕಲ್ಲಂಗಡಿ, ಕರಬೂಜ ಸೇರಿ ವಿವಿಧ ಹಣ್ಣುಗಳು, ತೆಂಗಿನಕಾಯಿ, ಎಳನೀರು ವ್ಯಾಪಾರದಲ್ಲೂ ಪೈಪೋಟಿ ಜೋರಾಗಿದೆ. ಮಂಡ್ಯ, ಮದ್ದೂರು, ಮೈಸೂರಿನಿಂದ ಬರುವ ಎಳೆನೀರಿನ ಬೆಲೆ ದುಬಾರಿಯಾಗಿದ್ದು, ಒಂದಕ್ಕೆ 60 ರೂ.ಯಂತೆ ಮಾರಾಟವಾಗುತ್ತಿದೆ. ಹೀಗಾಗಿ ಗ್ರಾಹಕರಿಗೆ ಬೇಸಿಗೆಯ ಬಿಸಿಲಿನ ಜೊತೆಗೆ ಬೆಲೆ ಏರಿಕೆಯ ಬಿಸಿಯೂ ತಟ್ಟುತ್ತಿದೆ.

    ಒಟ್ಟಿನಲ್ಲಿ ಬಿಸಿಲನಾಡು ರಾಯಚೂರಿನಲ್ಲಿ ಈ ಬಾರಿ ಬೇಸಿಗೆ ಆರಂಭದಿಂದಲೇ ರಣಬಿಸಿಲು ಅಬ್ಬರಿಸುತ್ತಿದೆ. ಬಿಸಿಲನ್ನು ಬಂಡವಾಳ ಮಾಡಿಕೊಂಡ ವ್ಯಾಪಾರಿಗಳು ಗ್ರಾಹಕರನ್ನು ಆಕರ್ಷಿಸುತ್ತಿದ್ದರೂ, ತೀವ್ರ ಪೈಪೋಟಿ ಎದುರಿಸುತ್ತಿದ್ದಾರೆ.ಇದನ್ನೂ ಓದಿ: ಅಪ್ಪು ಕೇವಲ ಹೆಸರಲ್ಲ, ಕನ್ನಡಿಗರಿಗೆ ಅದೊಂದು ಭಾವನೆ: ಶ್ರೀದೇವಿ ಭೈರಪ್ಪ

     

  • ರಾಜ್ಯದ 6 ಜಿಲ್ಲೆಗಳಲ್ಲಿ 40ರ ಗಡಿದಾಟಿದ ತಾಪಮಾನ

    ರಾಜ್ಯದ 6 ಜಿಲ್ಲೆಗಳಲ್ಲಿ 40ರ ಗಡಿದಾಟಿದ ತಾಪಮಾನ

    ರಾಯಚೂರು: ಬೇಸಿಗೆ ಆರಂಭವಾಗುತ್ತಿದ್ದಂತೆ ರಾಜ್ಯದಲ್ಲಿ ತಾಪಮಾನ ಹೆಚ್ಚಾಗುತ್ತಿದ್ದು, ಇದೀಗ ರಾಜ್ಯದ ಕೆಲವು ಜಿಲ್ಲೆಗಳು ಗರಿಷ್ಠ ತಾಪಮಾನದ ಗಡಿಯನ್ನು ದಾಟಿದೆ.ಇದನ್ನೂ ಓದಿ: ಅನ್ಯಧರ್ಮದ ಯುವತಿಯರನ್ನು ಪ್ರೀತಿಸಿ ಮದುವೆಯಾಗಿ: ಹಿಂದೂ ಚಿಂತಕ ಚಕ್ರವರ್ತಿ ಸೂಲಿಬೆಲೆ ವಿವಾದದ ಮಾತು

    ಹೌದು, ಕಳೆದ 24 ಗಂಟೆಗಳಲ್ಲಿ ರಾಜ್ಯದ 6 ಜಿಲ್ಲೆಗಳು 40 ಡಿಗ್ರಿ ಸೆಲ್ಸಿಯಸ್ ತಾಪಮಾನದ ಗಡಿದಾಟಿದೆ. ಈ ಪೈಕಿ ಬಿಸಿಲನಾಡು ರಾಯಚೂರು ಅಗ್ರ ಸ್ಥಾನದಲ್ಲಿದ್ದು, 41.1 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ತಾಪಮಾನ ಹೆಚ್ಚಳದಿಂದಾಗಿ ಜಿಲ್ಲೆಯ ಜನ ಕಂಗಾಲಾಗಿದ್ದು, ಕನಿಷ್ಠ ತಾಪಮಾನ ಏರಿಕೆಯಾಗಿರುವುದು ತಲೆ ಸುಡುವಂತೆ ಮಾಡಿದೆ.

    ರಾಯಚೂರು ಬಳಿಕ ಕೊಪ್ಪಳ 40.7 ಡಿಗ್ರಿ, ಉತ್ತರಕನ್ನಡ ಮತ್ತು ಧಾರವಾಡದಲ್ಲಿ 40.5 ಡಿಗ್ರಿ, ಕಲಬುರಗಿ 40.4 ಡಿಗ್ರಿ ಹಾಗೂ ಬಾಗಲಕೋಟೆಯಲ್ಲಿ 40.1 ಡಿಗ್ರಿ ತಾಪಮಾನ ದಾಖಲಾಗಿದೆ. ರಾಯಚೂರು ತಾಪಮಾನದಲ್ಲಿ ದಾಖಲೆಯತ್ತ ಮುನ್ನುಗ್ಗುತ್ತಿದೆ.ಇದನ್ನೂ ಓದಿ: ಬಾಗಲಕೋಟೆ | ಕುರಿ ಕಳ್ಳರನ್ನ ಹಿಡಿಯಲು ಹೋದ ವ್ಯಕ್ತಿಯ ಕೊಲೆ – ಆರೋಪಿಗಳು ಅರೆಸ್ಟ್

     

  • ಸಿಲಿಕಾನ್ ಸಿಟಿಯಲ್ಲಿ ವಾಡಿಕೆಗಿಂತ ಹೆಚ್ಚಿನ ಚಳಿ – 12 ಡಿಗ್ರಿಗೆ ಕುಸಿಯಲಿದ್ಯಂತೆ ತಾಪಮಾನ

    ಸಿಲಿಕಾನ್ ಸಿಟಿಯಲ್ಲಿ ವಾಡಿಕೆಗಿಂತ ಹೆಚ್ಚಿನ ಚಳಿ – 12 ಡಿಗ್ರಿಗೆ ಕುಸಿಯಲಿದ್ಯಂತೆ ತಾಪಮಾನ

    ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ (Bengaluru) ದಿನೇ ದಿನೇ ಚಳಿ ಹೆಚ್ಚಾಗುತ್ತಿದ್ದು, ನಗರದ ತಾಪಮಾನ 12 ಡಿಗ್ರಿಗೆ ಕುಸಿಯುವ ಸಾಧ್ಯತೆಯಿದೆ.

    ಹೌದು, ಸಿಲಿಕಾನ್ ಸಿಟಿಯಲ್ಲಿ (Silicon City) ಇದೀಗ ಹೊರಗಡೆ ಹೋಗುವಾಗ ಸ್ವೆಟರ್ ಹಾಕಿ, ಕೈಗೆ ಗ್ಲೌಸ್, ಕಾಲಿಗೆ ಸಾಕ್ಸ್ ಹಾಕುವ ಪರಿಸ್ಥಿತಿ ಉಂಟಾಗಿದೆ. ದಿನಗಳೆದಂತೆ ಚಳಿ ಜಾಸ್ತಿಯಾಗುತ್ತಿದ್ದು, ಸಂಜೆಯಿಂದಲೇ ಚಳಿ ಪ್ರಾರಂಭವಾಗುತ್ತಿದೆ.ಇದನ್ನೂ ಓದಿ: ಮದುವೆಗೆ ನಿರಾಕರಿಸಿದ್ದಕ್ಕೆ ಪ್ರೇಯಸಿಗೆ ಚಾಕು ಇರಿತ – ಕುಡಿದ ಮತ್ತಲ್ಲಿ ಕೃತ್ಯ

    ಈ ಬಾರಿ ರಾಜ್ಯಕ್ಕೆ ಮಾಗಿ ಚಳಿ ಬೇಗ ಆಗಮಿಸಿದ್ದು, ಇದರ ಪರಿಣಾಮ ಚಳಿ ಜೊತೆಗೆ ಮಧ್ಯರಾತ್ರಿ ಇಬ್ಬನಿ ಕೂಡ ಶುರುವಾಗಿದೆ. ಇನ್ನಷ್ಟೂ ಚಳಿಯ ಪ್ರಮಾಣ ಹೆಚ್ಚಾಗಲಿದ್ದು, ಬೆಂಗಳೂರು ತಾಪಮಾನ 12 ಡಿಗ್ರಿಗೆ ಇಳಿಯುವ ಸಾಧ್ಯತೆ ಇದೆ. ಈಗಾಗಲೇ ಚಳಿ ಹೆಚ್ಚಿದ್ದು, ಡಿಸೆಂಬರ್ ಹಾಗೂ ಜನವರಿ ತಿಂಗಳಲ್ಲಿ ಚಳಿ ಜಾಸ್ತಿ ಆಗುವ ಸಾಧ್ಯತೆಯಿದೆ.

    ರಾಜ್ಯದಲ್ಲಿ ಲಾ ನಿನೊ ಸ್ಥಿತಿಯಿಂದಾಗಿ ಈ ಬಾರಿ ಚಳಿ ಪ್ರಮಾಣ ತೀವ್ರಗೊಂಡಿದೆ. ಪೆಸಿಫಿಕ್ ಮಹಾಸಾಗರದಲ್ಲಿ ಮೇಲ್ಮೈ ಉಷ್ಣಾಂಶ ಸಾಮಾನ್ಯ ಮಟ್ಟಕ್ಕಿಂತ ಕಡಿಮೆಯಾಗುವ ಮೂನ್ಸುಚನೆಯಿದ್ದು, ಈ ರೀತಿ ಕಡಿಮೆಯಾಗುವುದನ್ನು ಲಾ ನಿನೋ ಎಂದು ಕರೆಯುತ್ತಾರೆ. ಈ ಬಾರಿ ರಾಜ್ಯದಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿರುವ ಕಾರಣ ಚಳಿ ಹೆಚ್ಚಾಗಿದೆ.ಇದನ್ನೂ ಓದಿ: ಕಲಬುರಗಿ| ನರ್ಸ್‌ ವೇಷದಲ್ಲಿ ಬಂದ ಮಹಿಳೆಯರಿಂದ ಹಸುಗೂಸು ಕಿಡ್ನ್ಯಾಪ್‌

  • ಒಡಿಶಾದಲ್ಲಿ ಹೆಚ್ಚಿದ ತಾಪಮಾನ – 3 ದಿನದಲ್ಲಿ ಹೀಟ್‌ಸ್ಟ್ರೋಕ್‌ಗೆ 20 ಮಂದಿ ಸಾವು

    ಒಡಿಶಾದಲ್ಲಿ ಹೆಚ್ಚಿದ ತಾಪಮಾನ – 3 ದಿನದಲ್ಲಿ ಹೀಟ್‌ಸ್ಟ್ರೋಕ್‌ಗೆ 20 ಮಂದಿ ಸಾವು

    ಭುವನೇಶ್ವರ: ಒಡಿಶಾದಲ್ಲಿ (Odisha) ಬಿಸಿಲಿನ ತಾಪ ಹೆಚ್ಚುತ್ತಿದ್ದು, ಕಳೆದ ಮೂರು ದಿನಗಳಿಂದ ಹೀಟ್‌ಸ್ಟ್ರೋಕ್‌ಗೆ (Heatstroke) 20 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ.

    ಶುಕ್ರವಾರದಿಂದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 99 ಶಂಕಿತ ಸನ್‌ಸ್ಟ್ರೋಕ್‌ ಸಾವುಗಳು ವರದಿಯಾಗಿವೆ. ಮರಣೋತ್ತರ ಪರೀಕ್ಷೆ ಮತ್ತು ವಿಚಾರಣೆಯ ಬಳಿಕ 20 ಸನ್‌ಸ್ಟ್ರೋಕ್‌ ಸಾವುಗಳು ಎಂದು ದೃಢಪಡಿಸಲಾಗಿದೆ. ಉಳಿದವರು ಇತರ ಕಾರಣಗಳಿಂದ ಸಾವನ್ನಪ್ಪಿದ್ದು, ಪ್ರಕರಣಗಳ ತನಿಖೆ ನಡೆಯುತ್ತಿದೆ ಎಂದು ಅಧಿಕೃತ ವರದಿ ಹೇಳಿದೆ. ಇದನ್ನೂ ಓದಿ: ಸೆನ್ಸೆಕ್ಸ್, ನಿಫ್ಟಿ ಸಾರ್ವಕಾಲಿಕ ದಾಖಲೆ – Zerodha, CDSL ಸರ್ವರ್‌ ಡೌನ್‌, ಹೂಡಿಕೆದಾರರ ಆಕ್ರೋಶ

    ಇದಕ್ಕೂ ಮೊದಲು 42 ಶಂಕಿತ ಸನ್‌ಸ್ಟ್ರೋಕ್‌ ಸಾವುಗಳು ವರದಿಯಾಗಿದ್ದು, ಅವುಗಳಲ್ಲಿ ಆರು ಪ್ರಕರಣಗಳು ದೃಢಪಟ್ಟಿದೆ. ಇನ್ನೂ ಆರು ಸಾವುಗಳು ಇತರ ಕಾರಣಗಳಿಂದ ಸಂಭವಿಸಿವೆ ಎನ್ನಲಾಗಿದೆ. ಬೋಲಂಗಿರ್, ಸಂಬಲ್‌ಪುರ್, ಝಾರ್ಸುಗುಡಾ, ಕಿಯೋಂಜರ್, ಸೋನೆಪುರ್, ಸುಂದರ್‌ಗಢ್ ಮತ್ತು ಬಾಲಸೋರ್ ಜಿಲ್ಲೆಗಳಲ್ಲಿ ಸಾವುಗಳು ಹೆಚ್ಚಾಗಿ ವರದಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಪುಲ್ವಾಮಾದಲ್ಲಿ ಭದ್ರತಾ ಪಡೆಯೊಂದಿಗೆ ಗುಂಡಿನ ಚಕಮಕಿ – ಸಿಕ್ಕಿಬಿದ್ದ ಲಷ್ಕರ್‌ ಟಾಪ್‌ ಕಮಾಂಡರ್ಸ್‌

    ಮುಖ್ಯ ಕಾರ್ಯದರ್ಶಿ ಪ್ರದೀಪ್ ಕುಮಾರ್ ಜೆನಾ ಮತ್ತು ವಿಶೇಷ ಪರಿಹಾರ ಆಯುಕ್ತ ಸತ್ಯಬ್ರತ ಸಾಹು ಅವರು ಭಾನುವಾರ ಜಿಲ್ಲಾಧಿಕಾರಿಗಳೊಂದಿಗೆ ಪರಿಸ್ಥಿತಿಯನ್ನು ಪರಿಶೀಲಿಸಿ ಬಿಸಿಗಾಳಿಯ ಕುರಿತು ಸೂಚನೆಗಳನ್ನು ಜಾರಿಗೊಳಿಸಲು ಮತ್ತು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಡಳಿತಗಳಿಗೆ ಸೂಚನೆ ನೀಡಿದರು. ಇದನ್ನೂ ಓದಿ: ಗಾಳಿ, ಮಳೆ ರಭಸಕ್ಕೆ ಭಾರೀ ಗಾತ್ರದ ಮರ ನೆಲಸಮ – ಸ್ಯಾಂಟ್ರೋ ಕಾರು ಜಖಂ

    ಮೃತ ಕುಟುಂಬಕ್ಕೆ ಪರಿಹಾರ ಮಂಜೂರಾತಿಗಾಗಿ ಪ್ರತಿ ಸಾವಿನ ಮರಣೋತ್ತರ ಪರೀಕ್ಷೆಯನ್ನು ಖಚಿತಪಡಿಸಿಕೊಳ್ಳಲು ಜಿಲ್ಲೆಗಳಿಗೆ ತಿಳಿಸಲಾಗಿದೆ. ಅಲ್ಲದೆ ಪ್ರತಿ ಸಾವಿಗೆ ನಿಖರವಾದ ಕಾರಣವನ್ನು ಖಚಿತಪಡಿಸಿಕೊಳ್ಳಲು ಸ್ಥಳೀಯ ಕಂದಾಯ ಅಧಿಕಾರಿ ಮತ್ತು ಸ್ಥಳೀಯ ವೈದ್ಯಾಧಿಕಾರಿ ಜಂಟಿ ವಿಚಾರಣೆ ನಡೆಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಅನ್ಯಕೋಮಿನ ಯುವತಿಯನ್ನ ಬೈಕ್‌ನಲ್ಲಿ ಕೂರಿಸಿಕೊಂಡು ಹೋಗಿದ್ದಕ್ಕೆ ಯುವಕನಿಗೆ ಹಲ್ಲೆ

  • ರಾಯಚೂರಿನಲ್ಲಿ ಬಿರುಬೇಸಿಗೆಗೆ ಬತ್ತಿದ ಕೆರೆ, ಲಕ್ಷಾಂತರ ಮೀನುಗಳ ಮಾರಣಹೋಮ

    ರಾಯಚೂರಿನಲ್ಲಿ ಬಿರುಬೇಸಿಗೆಗೆ ಬತ್ತಿದ ಕೆರೆ, ಲಕ್ಷಾಂತರ ಮೀನುಗಳ ಮಾರಣಹೋಮ

    ರಾಯಚೂರು: ಬಿಸಿಲನಾಡು ರಾಯಚೂರಿನಲ್ಲಿ (Raichuru) ಈ ಬಾರಿ ದಾಖಲೆ ಸೃಷ್ಟಿಸಿದ ಬಿಸಿಲಿನ ತಾಪಮಾನ ಜಿಲ್ಲೆಯ ಜನರನ್ನು ಮಾತ್ರ ಹೈರಾಣು ಮಾಡಿದೆ. ಆದರೆ ಮೀನುಗಾರಿಕೆಯನ್ನೇ (Fishing) ನಂಬಿ ಬದುಕುತ್ತಿದ್ದ ಮೀನುಗಾರರ ಕುಟುಂಬಗಳು ಮಾತ್ರ ಬೀದಿಗೆ ಬರುವ ಪರಸ್ಥಿತಿ ಎದುರಿಸುತ್ತಿವೆ.

    ರಾಯಚೂರು ಜಿಲ್ಲೆ ಈ ಬಾರಿ ಹಿಂದೆಂದೂ ಕಾಣದಷ್ಟು ಗರಿಷ್ಠ 46.7 ಡಿಗ್ರಿ ಸೆಲ್ಸಿಯಸ್ ತಾಪಮಾನ ಹಾಗೂ ಭೀಕರ ಬರಗಾಲ (Drought) ಎದುರಿಸುತ್ತಿದೆ. ಒಂದೆಡೆ ಜನ ಬಿಸಿಲ ಬೇಗೆಗೆ ತತ್ತರಿಸಿದ್ದರೆ ರಾಯಚೂರು ತಾಲೂಕಿನ ಮರ್ಚಡ್ ಕೆರೆ ಬಹುತೇಕ ಬತ್ತಿಹೋಗಿದ್ದು ಲಕ್ಷಾಂತರ ಮೀನುಗಳು (Fish) ಸಾವನ್ನಪ್ಪಿವೆ. 400 ಎಕರೆ ಪ್ರದೇಶದ ಕೆರೆ ಬೇಸಿಗೆ ಹಾಗೂ ಬರಗಾಲಕ್ಕೆ ಬತ್ತಿಹೋಗಿದೆ. ಪ್ರತೀ ವರ್ಷ ಇಲ್ಲಿನ ಮೀನುಗಾರರ ಸಂಘದ ಎಲ್ಲಾ ಸದಸ್ಯರು‌ ಸೇರಿ ಸುಮಾರು 30 ಲಕ್ಷ ರೂ.ವರೆಗೆ ಆದಾಯ ಪಡೆಯುತ್ತಿದ್ದರು. ಆದರೆ ಈ ಬಾರಿ ಕನಿಷ್ಠ ಖರ್ಚು ಸಹ ವಾಪಸ್ ಬಂದಿಲ್ಲ, ಬದಲಾಗಿ ಮೀನುಗಾರರು ಸಾಲಗಾರರಾಗಿದ್ದಾರೆ.  ಇದನ್ನೂ ಓದಿ: ಪಾಕಿಸ್ತಾನದಲ್ಲಿ ಭಯೋತ್ಪಾದಕರಿಂದ ಗುಂಡಿನ ದಾಳಿ – ಮಲಗಿದ್ದಲ್ಲೇ 7 ಕಾರ್ಮಿಕರು ಸಾವು

    15 ಲಕ್ಷ ರೂ. ಖರ್ಚುಮಾಡಿ ಮೀನಿನ ಮರಿಗಳನ್ನ ಬಿಟ್ಟಿದ್ದರು. ಅಲ್ಲದೆ ಬುಟ್ಟಿ, ಬಲೆ ,ಇತರೆ ಸಾಮಗ್ರಿಗಳಿಗಾಗಿ ಮಾಡಿದ ಸಾಲ‌ ತೀರಿಸಲು ಆಗದ ಪರಿಸ್ಥಿತಿ ಎದುರಾಗಿದೆ. ಈ ಹಿಂದೆಲ್ಲಾ ಕೆಲ ಫ್ಯಾಕ್ಟರಿಗಳಿಂದ ಬರುವ ಕೆಮಿಕಲ್‌ನಿಂದ ಸಾಮಾನ್ಯವಾಗಿ ಕೆರೆಯಲ್ಲಿನ ಮೀನುಗಳು ಸಾಯುತ್ತಿದ್ದವು. ಆದರೆ ಈಗ ಕೆರೆಯಲ್ಲಿ ನೀರು ಕಡಿಮೆಯಿದ್ದು ಬಿಸಿಲಿನ ತಾಪಮಾನ ಹೆಚ್ಚಳದಿಂದ ಮೀನು ಸಾವನ್ನಪ್ಪಿವೆ. ಇಲ್ಲಿನ ಗ್ರಾಮಸ್ಥರು ಮೀನುಗಾರಿಕೆಯನ್ನೇ ನಂಬಿ ಬದುಕುತ್ತಿದ್ದಾರೆ. ಈ ಬಾರಿ ಹೆಚ್ಚಾದ ತಾಪಮಾನದಿಂದ ರಾಶಿ ರಾಶಿ ಮೀನುಗಳು ಸತ್ತು‌ ಹೋಗಿದ್ದು, ನಮ್ಮ ಕುಟುಂಬಗಳು ಬೀದಿಗೆ ಬಂದಿವೆ ಎಂದು ಮೀನುಗಾರರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ ಹಿಂದೂ ಸಂಖ್ಯೆ ಇಳಿಕೆ, ಮುಸ್ಲಿಮರ ಸಂಖ್ಯೆ ಏರಿಕೆ 

    ಗ್ರಾಮದ ಸುಮಾರು 80 ಕುಟುಂಬಗಳು ಮೀನುಗಾರಿಕೆಯನ್ನೇ ನಂಬಿ ಬದುಕುತ್ತಿವೆ. ಈ ವರ್ಷ ಮಳೆ ಕೊರತೆಯಿಂದ ತೀವ್ರ ಬರಗಾಲ ಎದುರಾಗಿದ್ದಕ್ಕೆ ಕೆರೆಯಲ್ಲಿ ನೀರಿಲ್ಲದಂತಾಗಿದೆ. ಅಲ್ಪಸ್ವಲ್ಪ ಜಮೀನಿದ್ದ ಮೀನುಗಾರರಂತೂ ಅತ್ತ ಜಮೀನಿನಲ್ಲೂ ಬೆಳೆ ಬಂದಿಲ್ಲ ಇತ್ತ ಕೆರೆಯಲ್ಲೂ ಮೀನು ಉಳಿಯದೇ ದೊಡ್ಡ ಸಾಲದ ಹೊರೆಯನ್ನೇ ಹೊತ್ತುಕೊಂಡಿದ್ದಾರೆ. ಮೀನು ಹಿಡಿಯುವ ಕೂಲಿ‌ ಕೆಲಸ ಮಾಡುತ್ತಿದ್ದವರಿಗೂ ಈಗ ಉದ್ಯೋಗವಿಲ್ಲದಂತಾಗಿದೆ.

    ಕಳೆದ 6 ವರ್ಷಗಳಿಂದ ಕೆರೆ ಈ ಮಟ್ಟಕ್ಕೆ ಖಾಲಿಯಾಗಿರಲಿಲ್ಲ. ಬರಗಾಲ ಹಾಗೂ ವಿಪರೀತ ಬಿಸಿಲಿನಿಂದ ನೀರಿಲ್ಲದಂತಾಗಿದೆ. ಇದುವರೆಗೂ ರಾಶಿ ರಾಶಿ ಮೀನುಗಳು ಸತ್ತಾಗ ಒಂದು ಬಾರಿಯೂ ಪರಿಹಾರ ಸಿಕ್ಕಿಲ್ಲ. ಆದ್ರೆ ಈ ಬಾರಿ ತೀವ್ರ ಬರಗಾಲ ಇರುವುದರಿಂದ ಸರ್ಕಾರ ಪರಿಹಾರ ನೀಡಬೇಕು ಅಂತ ಮೀನುಗಾರರು ಒತ್ತಾಯಿಸಿದ್ದಾರೆ.

     

  • ರಾಜ್ಯದ ಹವಾಮಾನ ವರದಿ: 30-04-2024

    ರಾಜ್ಯದ ಹವಾಮಾನ ವರದಿ: 30-04-2024

    ಬೆಂಗಳೂರಿನಲ್ಲಿ ದಾಖಲೆ ಪ್ರಮಾಣದ ತಾಪಮಾನ ಕಂಡುಬಂದಿದೆ. ಅಲ್ಲದೇ ಮುಂದಿನ ಒಂದು ವಾರಗಳ ಕಾಲ ರಾಜ್ಯದಲ್ಲಿ ಬಿಸಿಲಿನ ತಾಪಮಾನ ಮತ್ತಷ್ಟು ಹೆಚ್ಚಾಗಲಿದೆ. ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಹೀಟ್‌ವೇವ್ ಅಲರ್ಟ್ ನೀಡಲಾಗಿದೆ. ಕನಿಷ್ಠ ತಾಪಮಾನ 2-3 ಡಿಗ್ರಿ ಏರಿಕೆಯಾಗಲಿದೆ. ಮಡಿಕೇರಿಯಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 38 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಯಾದಗಿರಿ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 43 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಇನ್ನೂ ಉತ್ತರ ಕರ್ನಾಟಕದ ಕೆಲ ನಗರಗಳಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಮೇಲ್ಪಟ್ಟು ದಾಖಲಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 38-23
    ಮಂಗಳೂರು: 33-28
    ಶಿವಮೊಗ್ಗ: 39-24
    ಬೆಳಗಾವಿ: 38-23
    ಮೈಸೂರು: 39-23

    ಮಂಡ್ಯ: 40-24
    ಮಡಿಕೇರಿ: 31-19
    ರಾಮನಗರ: 39-24
    ಹಾಸನ: 37-22
    ಚಾಮರಾಜನಗರ: 39-24
    ಚಿಕ್ಕಬಳ್ಳಾಪುರ: 38-24

    ಕೋಲಾರ: 38-24
    ತುಮಕೂರು: 39-24
    ಉಡುಪಿ: 34-28
    ಕಾರವಾರ: 31-26
    ಚಿಕ್ಕಮಗಳೂರು: 35-21
    ದಾವಣಗೆರೆ: 41-25

    weather

    ಹುಬ್ಬಳ್ಳಿ: 40-24
    ಚಿತ್ರದುರ್ಗ: 39-24
    ಹಾವೇರಿ: 40-24
    ಬಳ್ಳಾರಿ: 43-28
    ಗದಗ: 41-25
    ಕೊಪ್ಪಳ: 41-26

    weather (1)

    ರಾಯಚೂರು: 43-31
    ಯಾದಗಿರಿ: 43-30
    ವಿಜಯಪುರ: 42-28
    ಬೀದರ್: 41-28
    ಕಲಬುರಗಿ: 43-31
    ಬಾಗಲಕೋಟೆ: 42-28

  • ಬಿಸಿಲಿನ ಬೇಗೆಗೆ ಬೆಂಗಳೂರು ತತ್ತರ – 8 ವಲಯಗಳಲ್ಲಿ ದಾಖಲೆಯ ತಾಪಮಾನ

    ಬಿಸಿಲಿನ ಬೇಗೆಗೆ ಬೆಂಗಳೂರು ತತ್ತರ – 8 ವಲಯಗಳಲ್ಲಿ ದಾಖಲೆಯ ತಾಪಮಾನ

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ದಾಖಲೆಯ ತಾಪಮಾನ ಏರಿಕೆಯಾಗಿದೆ. ಮೂರು ವರ್ಷಗಳ ದಾಖಲೆ ಸರಿಗಟ್ಟಿದೆ. ಬರೋಬ್ಬರಿ 36 ರಿಂದ 37 ಡಿಗ್ರಿ ಸೆಲ್ಸಿಯಸ್‌ವರೆಗೆ ತಾಪಮಾನ ಏರಿಕೆಯಾಗಿದೆ. ಬಿಸಿಲಿನ ಬೇಗೆಗೆ ಬೆಂಗಳೂರು ಜನ ತತ್ತರಿಸಿ ಹೋಗಿದ್ದಾರೆ. ಒಟ್ಟು ಬೆಂಗಳೂರಿನಲ್ಲಿ 36 ರಿಂದ 37 ಡಿಗ್ರಿ ಸೆಲ್ಸಿಯಸ್ ತಾಪಮಾನ ಆದರೆ ಬೆಂಗಳೂರಿನ ಎಂಟು ವಲಯಗಳಲ್ಲಿ ತಾಪಮಾನ ದಾಖಲೆ ಬರೆದಿದೆ.

    ಎಲ್ಲಿ ಎಷ್ಟು ತಾಪಮಾನ?
    ಆರ್‌ಆರ್ ನಗರ – 38.60 ಡಿಗ್ರಿ ಸೆಲ್ಸಿಯಸ್
    ಬೆಂಗಳೂರು ಪೂರ್ವ- 37 ಡಿಗ್ರಿ ಸೆಲ್ಸಿಯಸ್
    ಯಲಹಂಕ – 34.90 ಡಿಗ್ರಿ ಸೆಲ್ಸಿಯಸ್
    ಬೆಂಗಳೂರು ದಕ್ಷಿಣ – 35.90 ಡಿಗ್ರಿ ಸೆಲ್ಸಿಯಸ್
    ದಾಸರಹಳ್ಳಿ – 36.60 ಡಿಗ್ರಿ ಸೆಲ್ಸಿಯಸ್
    ಬೊಮ್ಮನಹಳ್ಳಿ – 36.70%
    ಮಹಾದೇವಪುರ – 34.80 ಡಿಗ್ರಿ ಸೆಲ್ಸಿಯಸ್
    ಪಶ್ಚಿಮ ವಲಯ – 35.40 ಡಿಗ್ರಿ ಸೆಲ್ಸಿಯಸ್

    weather

    ಬೆಂಗಳೂರಿನಲ್ಲಿ ಎಲ್ಲೆಲ್ಲಿ ಅಂತರ್ಜಲ ಕುಸಿದಿದೆ. ಮರ ಗಿಡಗಳು ಕಡಿಮೆ ಇದೆಯೋ ಅಲ್ಲಿ ತಾಪಮಾನ (Temperature) ಏರಿಕೆ ಆಗಿದೆ. ಎಲ್ಲೆಲ್ಲಿ ಮರ ಗಿಡಗಳು ಇವೆ ಆ ಭಾಗದಲ್ಲಿ ತಾಪಮಾನ ಕಡಿಮೆ ಇದೆ. ಗಾಳಿಯ ವೇಗ ಕೂಡ ಕಡಿಮೆ ಇದೆ. ಜನರು ಕೂಡ ಪರಿಸರ ಸಂರಕ್ಷಿಸುವ ಕೆಲಸ ಮಾಡಬೇಕು. ಬಿಸಿಲಿನಿಂದ ಎಚ್ಚರ ವಹಿಸಬೇಕು. ಇದನ್ನೂ ಓದಿ: ತೀವ್ರ ಬರ – ಯಾದಗಿರಿ ಜಿಲ್ಲೆಯ 65 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ

    ಒಟ್ಟಾರೆ ಬೆಂಗಳೂರಿನ ತಾಪಮಾನ ಅಲ್ಲದೇ ವಲಯಗಳಲ್ಲೂ ತಾಪಮಾನ ಏರಿಕೆ ಆಗಿದೆ. ಹೀಗಾಗಿ ಜನರು ಕೂಡ ಎಚ್ಚರಿಕೆ ವಹಿಸಬೇಕಿದೆ. ಸಮೃದ್ಧಿ ಮಳೆ ಆದರೆ ತಾಪಮಾನ ತಗ್ಗಲಿದೆ. ವರುಣ ದೇವ ಯಾವಾಗ ಕರುಣಿಸಲಿದ್ದಾನೋ ಕಾದು ನೋಡಬೇಕಿದೆ. ಇದನ್ನೂ ಓದಿ: ಬಂದ ದಾರಿಗಿಲ್ಲ ಸುಂಕ – ದೆಹಲಿಯಲ್ಲಿ ಈಶ್ವರಪ್ಪ ಭೇಟಿಯಾಗದ ಅಮಿತ್ ಶಾ

  • ಮುಂದಿನ 3 ತಿಂಗಳು ಕಾಡಲಿದೆ ರಣಬಿಸಿಲು – ಉತ್ತರ ಒಳನಾಡಿಗೆ ಉಷ್ಣಗಾಳಿಯ ಕೆಟ್ಟ ಪರಿಣಾಮ

    ಮುಂದಿನ 3 ತಿಂಗಳು ಕಾಡಲಿದೆ ರಣಬಿಸಿಲು – ಉತ್ತರ ಒಳನಾಡಿಗೆ ಉಷ್ಣಗಾಳಿಯ ಕೆಟ್ಟ ಪರಿಣಾಮ

    – ಮಧ್ಯ ಭಾರತ, ದಕ್ಷಿಣ ಭಾರತದಲ್ಲಿ ಹೆಚ್ಚಿನ ತಾಪಮಾನ

    ನವದೆಹಲಿ: ಏಪ್ರಿಲ್ ಆರಂಭದಲ್ಲಿಯೇ ರಾಜ್ಯದಲ್ಲಿ ಬಿಸಿಲಿನ (Sun Stroke) ತಾಪ ಹೆಚ್ಚಾಗಿದೆ. ಮುಂದಿನ 3 ತಿಂಗಳು ಬಿಸಿಲಿನ ಕಾಟ ಇರಲಿದ್ದು, ಉತ್ತರ ಒಳನಾಡಿಗೆ ಉಷ್ಣಗಾಳಿಯ ಕೆಟ್ಟ ಪರಿಣಾಮ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (Indian Meteorological Department) ಎಚ್ಚರಿಕೆ ನೀಡಿದೆ.

    ಏಪ್ರಿಲ್‌ನಿಂದ ಜೂನ್‌ವರೆಗೆ ದೇಶದ ಬಹುತೇಕ ಕಡೆಗಳಲ್ಲಿ ಗರಿಷ್ಠ ತಾಪಮಾನವು ವಾಡಿಕೆಗಿಂತ ಹೆಚ್ಚಿರಲಿದೆ. ದೇಶದ ಮಧ್ಯಭಾಗದಲ್ಲಿ ಹಾಗೂ ದಕ್ಷಿಣ ಭಾರತದ ಪಶ್ಚಿಮ ಭಾಗದಲ್ಲಿ ಹೆಚ್ಚಿನ ತಾಪಮಾನದ ಸಾಧ್ಯತೆ ಹೆಚ್ಚಿರಲಿದೆ. ದೇಶದ ಬಹುತೇಕ ಕಡೆಗಳಲ್ಲಿ ಏಪ್ರಿಲ್‌ನಲ್ಲಿ ಗರಿಷ್ಠ ತಾಪಮಾನ ವಾಡಿಕೆಗಿಂತ ಹೆಚ್ಚಿರುವ ಸಾಧ್ಯತೆ ಇದೆ. ಈ ಸಾಧ್ಯತೆ ದಕ್ಷಿಣ ಭಾರತದ ಮಧ್ಯಭಾಗದಲ್ಲಿ ಜಾಸ್ತಿ ಇರಲಿದೆ. ಇದನ್ನೂ ಓದಿ: ಚುನಾವಣಾ ಖರ್ಚಿಗಾಗಿ ಹೆಚ್‌ಡಿಕೆಗೆ 500 ರೂ. ಹಣ ಕೊಟ್ಟ ಅಭಿಮಾನಿ

    ಗುಜರಾತ್, ಮಹಾರಾಷ್ಟ್ರದ ಮಧ್ಯಭಾಗ, ಉತ್ತರ ಕರ್ನಾಟಕ, ರಾಜಸ್ಥಾನ, ಮಧ್ಯಪ್ರದೇಶ, ಒಡಿಶಾ, ಛತ್ತೀಸ್‌ಗಢದ ಉತ್ತರ ಭಾಗ ಮತ್ತು ಆಂಧ್ರ ಪ್ರದೇಶದಲ್ಲಿ ಬಿಸಿಗಾಳಿಯ ಪರಿಣಾಮವು ತೀರಾ ಕೆಟ್ಟದಾಗಿರಲಿದೆ ಎಂದು ಎಚ್ಚರಿಕೆ ನೀಡಿದೆ. ಮಧ್ಯ ಭಾರತ, ಉತ್ತರದ ಬಯಲು ಪ್ರದೇಶಗಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಹಾಗೂ ದಕ್ಷಿಣ ಭಾರತದ ಹಲವು ಕಡೆಗಳಲ್ಲಿ ಬಿಸಿಗಾಳಿಯು  ಏಪ್ರಿಲ್‌ನಲ್ಲಿ ವಾಡಿಕೆಗಿಂತ ಹೆಚ್ಚಾಗಿರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದನ್ನೂ ಓದಿ: ಅಮಿತ್‌ ಶಾ ವಿರುದ್ಧ ಗೂಂಡಾ ಪದ ಬಳಕೆ – ಯತೀಂದ್ರ ಸಿದ್ದರಾಮಯ್ಯಗೆ ನೋಟಿಸ್‌

    ಈ ಪ್ರದೇಶಗಳಲ್ಲಿ ಬಿಸಿಗಾಳಿಯ ಪರಿಣಾಮವು ಒಂದರಿಂದ ಮೂರು ದಿನಗಳವರೆಗೆ ಇರುವುದು ವಾಡಿಕೆ. ಆದರೆ ಈ ಬಾರಿ ಅದು ಎರಡರಿಂದ ಎಂಟು ದಿನಗಳವರೆಗೆ ಇರಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: 410 ಕೋಟಿ ಒಡೆಯ ಸ್ಟಾರ್‌ ಚಂದ್ರು ಹೆಸರಲ್ಲಿ ಒಂದೇ ಒಂದು ಕಾರಿಲ್ಲ

  • ಸಿಲಿಕಾನ್ ಸಿಟಿ ಸೇರಿದಂತೆ 4 ತಿಂಗಳು ರಾಜ್ಯವನ್ನ ಕಾಡಲಿದೆ ರಣಬಿಸಿಲು

    ಸಿಲಿಕಾನ್ ಸಿಟಿ ಸೇರಿದಂತೆ 4 ತಿಂಗಳು ರಾಜ್ಯವನ್ನ ಕಾಡಲಿದೆ ರಣಬಿಸಿಲು

    ಬೆಂಗಳೂರು: ಸಿಲಿಕಾನ್ ಸಿಟಿ (Silicon City) ಸೇರಿದಂತೆ ರಾಜ್ಯದ ಹಲವೆಡೆ ರಣಬಿಸಿಲು ಇರಲಿದೆ ಎಂದು ಹವಾಮಾನ ಇಲಾಖೆ (Meterological Department) ಎಚ್ಚರಿಕೆ ನೀಡಿದೆ.

    ಈಗಾಗಲೇ ಇನ್ನೇನು ಬೇಸಿಗೆ ಕಾಲ ಶುರವಾಗಲಿದ್ದು ಈ ಬಾರಿ ವಾಡಿಕೆಗಿಂತ ಹೆಚ್ಚು ಬಿಸಿಲು ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬರುವ ಮುಂದಿನ ನಾಲ್ಕು ತಿಂಗಳು ಈ ರಣಬಿಸಿಲು ರಾಜ್ಯದ ಜನರನ್ನು ಕಾಡಲಿದೆ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಸಾರ್ವಜನಿಕ ಆಸ್ತಿಗೆ ನಷ್ಟ ಭರಿಸಿದ್ರೆ ಮಾತ್ರ ಪ್ರತಿಭಟನಾಕಾರರಿಗೆ ಜಾಮೀನು – ಕಾನೂನು ಆಯೋಗ ಶಿಫಾರಸು

    ಹವಾಮಾನ ವೈಪರೀತ್ಯ ಹಿನ್ನೆಲೆ ಬೇಸಿಗೆ ಹೆಚ್ಚಾಗುವ ಸಾಧ್ಯತೆ ಇದೆ. ಅದರಿಂದ ಎಂದಿಗಿಂತ ಮುನ್ನವೇ ಈ ಬಾರಿ ಬೇಸಿಗೆ ಬಿಸಿಲು ಆರಂಭವಾಗಲಿದೆ. ತೇವಾಂಶ ಭರಿತ ಮೋಡಗಳ ಸೆಳೆತ ಮತ್ತು ಗಾಳಿ ವೇಗ ಇಲ್ಲದಿರುವುದರ ಪರಿಣಾಮ ವಾತಾವರಣದಲ್ಲಿ ತೀವ್ರ ತೇವಾಂಶ ಕೊರತೆಯಿಂದ ರಣಬಿಸಿಲು ಕಾಡಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸಲು ಜೆಡಿಎಸ್‌ನಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ: ಸುಧಾಕರ್

    ಫೆಬ್ರವರಿಯಿಂದ ಮುಂದಿನ ನಾಲ್ಕು ತಿಂಗಳು ಬೇಸಿಗೆ ಕಾಲ ಇರಲಿದ್ದು, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ 40 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಟಲಿದೆ. ಸದ್ಯ ಫೆಬ್ರವರಿಯಲ್ಲೇ 33-25 ಡಿಗ್ರಿ ಸೆಲ್ಸಿಯಸ್‌ಗೆ ಉಷ್ಣಾಂಶ ಏರಿಕೆಯಾಗುತ್ತಿದೆ. ವಾಡಿಕೆಗಿಂತ 2-3 ಡಿಗ್ರಿ ಉಷ್ಣಾಂಶ ದಿಢೀರ್ ಏರಿಕೆಯಾಗಿದೆ. ಇದನ್ನೂ ಓದಿ: ಇಂದು ಮೋದಿ ಭಾಷಣ – ಬಿಜೆಪಿ ಸಂಸದರ ಹಾಜರಿ ಕಡ್ಡಾಯ

  • ಚಂದ್ರಲೋಕದಲ್ಲಿ ಜೈ ಹಿಂದ್‌ – ಮೊದಲ ಬಾರಿಗೆ ತಾಪಮಾನ ಪರೀಕ್ಷೆ

    ಚಂದ್ರಲೋಕದಲ್ಲಿ ಜೈ ಹಿಂದ್‌ – ಮೊದಲ ಬಾರಿಗೆ ತಾಪಮಾನ ಪರೀಕ್ಷೆ

    – ಗ್ರಾಫ್ ಚಿತ್ರವನ್ನು ಹಂಚಿಕೊಂಡ ಇಸ್ರೋ

    ಬೆಂಗಳೂರು: ಬಾಹ್ಯಾಕಾಶ ಸಂಶೋಧನೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಚಂದ್ರನ ಮಣ್ಣಿನ ತಾಪಮಾನ ಪತ್ತೆ ಹಚ್ಚಲಾಗಿದೆ. ಭಾರತದ ಚಂದ್ರಯಾನ 3 ಯೋಜನೆಯ ಮೂಲಕ ದಕ್ಷಿಣ ಧ್ರುವ ತಲುಪಿರುವ ವಿಕ್ರಮ್ ಲ್ಯಾಂಡರ್ ತನ್ನ ChaSTE ಪೇಲೋಡ್‌ನ ಸಹಾಯದಿಂದ ಮಣ್ಣಿನ ಅಧ್ಯಯನ ಆರಂಭಿಸಿದೆ.

    ಆಗಸ್ಟ್ 23 ರಂದು ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡಿತ್ತು. ಇದಾದ ನಾಲ್ಕು ದಿನಗಳ ಬಳಿಕ ವೈಜ್ಞಾನಿಕ ಪ್ರಯೋಗಗಳ ಮಾಹಿತಿ ಲಭ್ಯವಾಗುತ್ತಿದೆ. ChaSTE (Chandra’s Surface Thermophysical Experiment) ಪೇಲೋಡ್ ಚಂದ್ರನ ಭೂಮಿಯನ್ನು 10 ಸೆಂಟಿ ಮೀಟರ್ ಕೊರೆದು ಪರೀಕ್ಷೆ ನಡೆಸಿದ್ದು, – 10 ಡಿಗ್ರಿಯಿಂದ 60 ಡಿಗ್ರಿ ತಾಪಮಾನ ಇದೆ ಎಂದು ತಿಳಿಸಿದೆ. ಇದನ್ನೂ ಓದಿ: ಪ್ರಧಾನಿ ಮೋದಿಗೆ ಚಂದ್ರಯಾನ-3 ನೌಕೆ ಸೆರೆ ಹಿಡಿದ ಮೊದಲ ಫೋಟೋ ಉಡುಗೊರೆ

    ಚಂದ್ರನ ಮೇಲ್ಮೈಯ ಉಷ್ಣ ವರ್ತನೆಯನ್ನು ಅರ್ಥಮಾಡಿಕೊಳ್ಳಲು ChaSTE ಚಂದ್ರನ ಮೇಲ್ಮೈ ಮೇಲೆ ಥರ್ಮೋಫಿಸಿಕಲ್ ಪ್ರಯೋಗ ನಡೆಸಿದೆ ಎಂದು ಟ್ವೀಟ್‌ನಲ್ಲಿ ಇಸ್ರೋ ವಿವರಿಸಿದ್ದು, ಗ್ರಾಫ್ ಚಿತ್ರಣವನ್ನು ಹಂಚಿಕೊಂಡಿದೆ. ತನಿಖೆಗೆ 10 ಪ್ರತ್ಯೇಕ ತಾಪಮಾನ ಸಂವೇದಕಗಳನ್ನು ಅಳವಡಿಸಲಾಗಿದೆ ಎಂದು ಟ್ವೀಟ್ ಹೇಳಿದೆ. ಅಹಮದಾಬಾದ್‌ನ ಭೌತಿಕ ಸಂಶೋಧನಾ ಪ್ರಯೋಗಾಲಯ (PRL) ಸಹಯೋಗದೊಂದಿಗೆ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದ ಬಾಹ್ಯಾಕಾಶ ಭೌತಶಾಸ್ತ್ರ ಪ್ರಯೋಗಾಲಯ (SPL) ನೇತೃತ್ವದ ತಂಡವು ಪೇಲೋಡ್ ಅನ್ನು ಅಭಿವೃದ್ಧಿಪಡಿಸಿದೆ. ಇದನ್ನೂ ಓದಿ: ಚಂದ್ರಯಾನ ಸಂಭ್ರಮಾಚರಣೆ ಮಾಡಿದವರ ಮೇಲೆ ಕಾಶ್ಮೀರಿ ವಿದ್ಯಾರ್ಥಿಗಳಿಂದ ಹಲ್ಲೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]