Tag: ತಾನ್ಯ ಹೋಪ್

  • ತಾನ್ಯ ಹೋಪ್-ಸಂತಾನಂ ನಟನೆಯ ‘ಕಿಕ್’ ಚಿತ್ರದ ಗಿಲ್ಮಾ ಸಾಂಗ್ ರಿಲೀಸ್

    ತಾನ್ಯ ಹೋಪ್-ಸಂತಾನಂ ನಟನೆಯ ‘ಕಿಕ್’ ಚಿತ್ರದ ಗಿಲ್ಮಾ ಸಾಂಗ್ ರಿಲೀಸ್

    ಸ್ಯಾಂಡಲ್ ವುಡ್ ನ ಹೆಸರಾಂತ ನಿರ್ದೇಶಕ ಪ್ರಶಾಂತ್ ರಾಜ್ (Prashant Raj) ನಿರ್ದೇಶನದಲ್ಲಿ ಮೂಡಿ ಬಂದಿರುವ ತಮಿಳಿನ ‘ಕಿಕ್’ ಸಿನಿಮಾದ ಕಲರ್ ಫುಲ್ ಹಾಡೊಂದು ಇಂದು ರಿಲೀಸ್ ಆಗಿದೆ. ಗಿಲ್ಮಾ (Gilma Song) ಹೆಸರಿನ ಹಾಡಿನಲ್ಲಿ ಕನ್ನಡದ ಹುಡುಗಿ ತಾನ್ಯ ಹೋಪ್ ಮತ್ತು ತಮಿಳಿನ ನಟ ಸಂತಾನಂ ಹೆಜ್ಜೆ ಹಾಕಿದ್ದಾರೆ. ಕಲರ್ ಫುಲ್ ಸಿನಿಮಾಗಳಿಗೆ ಹೆಸರು ಮಾಡಿರುವ ಪ್ರಶಾಂತ್ ರಾಜ್, ಈ ಹಾಡನ್ನು ಅಷ್ಟೇ ಸುಂದರವಾಗಿ ಪರದೆಯ ಮೇಲೆ ತೋರಿಸಿದ್ದಾರೆ.

    ಮೊನ್ನೆಯಷ್ಟೇ ಈ ಸಿನಿಮಾ ಟೀಸರ್ (Teaser) ಅನ್ನು ರಿಲೀಸ್ ಮಾಡಿದ್ದರು ನಿರ್ದೇಶಕರು. ಆ ಟೀಸರ್ ಮೂಲಕ ಭರ್ಜರಿ ಮನರಂಜನೆಯನ್ನೇ ಕೊಡುವ ಸುಳಿವು ನೀಡಿದ್ದರು ಪ್ರಶಾಂತ್ ರಾಜ್. ಈ ಸಿನಿಮಾದ ನಾಯಕ ಸಂತಾನಂ ಅಭಿಮಾನಿಗಳು ಟೀಸರ್ ನೋಡಿ ಭರ್ಜರಿ ಎಂದು ಸಂಭ್ರಮಸಿದ್ದರು.

     

    ತಮ್ಮ ಚೊಚ್ಚಲು ತಮಿಳು ಚಿತ್ರಕ್ಕೆ ಕಿಕ್ (Kick) ಎಂದು ಹೆಸರಿಟ್ಟು ಕುತೂಹಲ ಮೂಡಿಸಿದ್ದಾರೆ ಪ್ರಶಾಂತ್ ರಾಜ್. ಈ ಸಿನಿಮಾದ ಮತ್ತೊಂದು ವಿಶೇಷ ಅಂದರೆ, ಕನ್ನಡದ ಹಲವು ಪ್ರತಿಭೆಗಳನ್ನು ತಮ್ಮೊಂದಿಗೆ ತಮಿಳಿಗೂ ಕರೆದುಕೊಂಡು ಹೋಗಿದ್ದಾರೆ ನಿರ್ದೇಶಕರು. ಕಾಮಿಡಿ ಸಿನಿಮಾಗಳ ಮೂಲಕ ತಮಿಳಿನ ಪ್ರೇಕ್ಷಕರ ಮನ ಗೆದ್ದಿರುವ ಸಂತಾನಂ (Santhanam) ಈ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದಾರೆ.

    ಬಸಣ್ಣಿ ಬಾ ಹಾಡಿನ ಖ್ಯಾತಿಯ ತಾನ್ಯ ಹೋಪ್ (Tanya Hope) ನಾಯಕಿಯಾಗಿ ಕಾಣಿಸಿಕೊಂಡಿದ್ದರೆ, ತುಪ್ಪದ ಬೆಡಗಿ ರಾಗಿಣಿ (Ragini) ಕೂಡ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಅಲ್ಲದೇ ಹೆಸರಾಂತ ತಾರಾ ಬಳಗವೇ ಸಿನಿಮಾದಲ್ಲಿದೆ. ಸಿನಿಮಾದ ಮತ್ತೊಂದು ವಿಶೇಷ ಎಂದರೆ, ಕಾಮಿಡಿಗೆ ಒತ್ತು ನೀಡಲಾಗಿದೆ. ಹೆಸರಾಂತ ಕಾಮಿಡಿ ಕಲಾವಿದರೇ ತಾರಾ ಬಳಗದಲ್ಲಿ ಇದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಚಿತ್ರಕ್ಕಿದೆ.

     

    ಈ ಕುರಿತು ಮಾತನಾಡಿದ ಪ್ರಶಾಂತ್ ರಾಜ್, ‘ಬ್ರಹ್ಮಾನಂದಂ ನನ್ನಿಷ್ಟದ ನಟ. ಈ ಸಿನಿಮಾದಲ್ಲಿ ಕಾಮಿಡಿಗೂ ಹೆಚ್ಚು ಒತ್ತು ನೀಡಲಾಗಿದೆ. ಹಾಗಾಗಿ ಸಾಧು ಕೋಕಿಲಾ (Sadhu Kokila) ಕೂಡ ಸಿನಿಮಾದಲ್ಲಿ ಇದ್ದಾರೆ. ಈ ಸಿನಿಮಾದ ಮೂಲಕ ಫ್ರೆಶ್ ಆಗಿರುವ ಕಥೆಯನ್ನು ಹೇಳುವುದಕ್ಕೆ ಹೊರಟಿದ್ದೇನೆ’ ಅಂತಾರೆ. ಸೆಪ್ಟೆಂಬರ್ 1 ರಂದು ಈ ಸಿನಿಮಾ ರಿಲೀಸ್ ಆಗುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಂತಾನಂ ನಟನೆಯ ‘ಕಿಕ್’ ಸಿನಿಮಾದ ಟೀಸರ್ ಔಟ್: ಭರ್ಜರಿ ಎಂದ ಫ್ಯಾನ್ಸ್

    ಸಂತಾನಂ ನಟನೆಯ ‘ಕಿಕ್’ ಸಿನಿಮಾದ ಟೀಸರ್ ಔಟ್: ಭರ್ಜರಿ ಎಂದ ಫ್ಯಾನ್ಸ್

    ನ್ನಡದ ಅನೇಕ ನಿರ್ದೇಶಕರು ಬೇರೆ ಬೇರೆ ಸಿನಿಮಾ ರಂಗದಲ್ಲಿ ಬ್ಯುಸಿಯಾಗಿದ್ದಾರೆ. ಬಹುತೇಕ ಚಿತ್ರಗಳು ರಿಲೀಸ್ ಗೆ ರೆಡಿಯಾಗಿವೆ. ಅದರಲ್ಲಿ ಮೊದಲು ಕನ್ನಡದ ಪ್ರತಿಭಾವಂತ ನಿರ್ದೇಶಕ ಪ್ರಶಾಂತ್ ರಾಜ್ (Prashant Raj) ನಿರ್ದೇಶನದ ಕಿಕ್ ಚಿತ್ರ ಬಿಡುಗಡೆ ಆಗುತ್ತಿದೆ. ಅದಕ್ಕೂ ಮೊದಲು ಸಿನಿಮಾದ ಟೀಸರ್ (Teaser) ಅನ್ನು ರಿಲೀಸ್ ಮಾಡಿರುವ ನಿರ್ದೇಶಕರು ಭರ್ಜರಿ ಮನರಂಜನೆಯನ್ನೇ ಕೊಟ್ಟಿದ್ದಾರೆ. ಈ ಸಿನಿಮಾದ ನಾಯಕ ಸಂತಾನಂ ಅಭಿಮಾನಿಗಳು ಟೀಸರ್ ಭರ್ಜರಿ ಎಂದು ಸಂಭ್ರಮಸಿದ್ದಾರೆ.

    ‘ಕಿಕ್’ ಸಿನಿಮಾದ ಬಿಡುಗಡೆ ದಿನಾಂಕ ಬಹಿರಂಗವಾಗಿದೆ. ಪೋಸ್ಟರ್ ವೊಂದನ್ನು ರಿಲೀಸ್ (Release) ಮಾಡಿರುವ ಪ್ರಶಾಂತ್ ರಾಜ್, ಸೆಪ್ಟಂಬರ್ 1 ರಂದು ರಿಲೀಸ್ ಮಾಡುವುದಾಗಿ ತಿಳಿಸಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳು ಸೂಪರ್ ಹಿಟ್ ಆಗಿದ್ದು, ಸಿನಿಮಾ ನಿರೀಕ್ಷೆ ಕೂಡ ಮೂಡಿಸಿದೆ. ಟೀಸರ್ ಕೂಡ ಚಿತ್ರದ ಬಗ್ಗೆ ಮತ್ತಷ್ಟು ಭರವಸೆಯನ್ನು ಮೂಡಿಸಿದೆ.

    ತಮ್ಮ ಚೊಚ್ಚಲು ತಮಿಳು ಚಿತ್ರಕ್ಕೆ ಕಿಕ್ (Kick) ಎಂದು ಹೆಸರಿಟ್ಟು ಕುತೂಹಲ ಮೂಡಿಸಿದ್ದರು ಪ್ರಶಾಂತ್ ರಾಜ್. ಈ ಸಿನಿಮಾದ ಮತ್ತೊಂದು ವಿಶೇಷ ಅಂದರೆ, ಕನ್ನಡದ ಹಲವು ಪ್ರತಿಭೆಗಳನ್ನು ತಮ್ಮೊಂದಿಗೆ ತಮಿಳಿಗೂ ಕರೆದುಕೊಂಡು ಹೋಗಿದ್ದಾರೆ ನಿರ್ದೇಶಕರು. ಕಾಮಿಡಿ ಸಿನಿಮಾಗಳ ಮೂಲಕ ತಮಿಳಿನ ಪ್ರೇಕ್ಷಕರ ಮನ ಗೆದ್ದಿರುವ ಸಂತಾನಂ (Santhanam) ಈ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದಾರೆ.

    ಬಸಣ್ಣಿ ಬಾ ಹಾಡಿನ ಖ್ಯಾತಿಯ ತಾನ್ಯ ಹೋಪ್ (Tanya Hope) ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ತುಪ್ಪದ ಬೆಡಗಿ ರಾಗಿಣಿ (Ragini) ಕೂಡ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಅಲ್ಲದೇ ಹೆಸರಾಂತ ತಾರಾ ಬಳಗವೇ ಸಿನಿಮಾದಲ್ಲಿದೆ. ಸಿನಿಮಾದ ಮತ್ತೊಂದು ವಿಶೇಷ ಎಂದರೆ, ಕಾಮಿಡಿಗೆ ಒತ್ತು ನೀಡಲಾಗಿದೆ. ಹೆಸರಾಂತ ಕಾಮಿಡಿ ಕಲಾವಿದರೇ ತಾರಾ ಬಳಗದಲ್ಲಿ ಇದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಚಿತ್ರಕ್ಕಿದೆ.

     

    ಈ ಕುರಿತು ಮಾತನಾಡಿದ ಪ್ರಶಾಂತ್ ರಾಜ್, ‘ಬ್ರಹ್ಮಾನಂದಂ ನನ್ನಿಷ್ಟದ ನಟ. ಈ ಸಿನಿಮಾದಲ್ಲಿ ಕಾಮಿಡಿಗೂ ಹೆಚ್ಚು ಒತ್ತು ನೀಡಲಾಗಿದೆ. ಹಾಗಾಗಿ ಸಾಧು ಕೋಕಿಲಾ (Sadhu Kokila) ಕೂಡ ಸಿನಿಮಾದಲ್ಲಿ ಇದ್ದಾರೆ. ಈ ಸಿನಿಮಾದ ಮೂಲಕ ಫ್ರೆಶ್ ಆಗಿರುವ ಕಥೆಯನ್ನು ಹೇಳುವುದಕ್ಕೆ ಹೊರಟಿದ್ದೇನೆ’ ಅಂತಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಿರ್ದೇಶಕ ಪ್ರಶಾಂತ್ ರಾಜ್ ಅವರ ತಮಿಳಿನ ‘ಕಿಕ್’ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್

    ನಿರ್ದೇಶಕ ಪ್ರಶಾಂತ್ ರಾಜ್ ಅವರ ತಮಿಳಿನ ‘ಕಿಕ್’ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್

    ನ್ನಡದ ಪ್ರತಿಭಾವಂತ ನಿರ್ದೇಶಕ ಪ್ರಶಾಂತ್ ರಾಜ್ (Prashanth Raj) ಅವರ ‘ಕಿಕ್’ ಸಿನಿಮಾದ ಬಿಡುಗಡೆ ದಿನಾಂಕ ಬಹಿರಂಗವಾಗಿದೆ. ಪೋಸ್ಟರ್ ವೊಂದನ್ನು ರಿಲೀಸ್ (Release) ಮಾಡಿರುವ ಪ್ರಶಾಂತ್ ರಾಜ್, ಸೆಪ್ಟಂಬರ್ 1 ರಂದು ರಿಲೀಸ್ ಮಾಡುವುದಾಗಿ ತಿಳಿಸಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳು ಸೂಪರ್ ಹಿಟ್ ಆಗಿದ್ದು, ಸಿನಿಮಾ ನಿರೀಕ್ಷೆ ಕೂಡ ಮೂಡಿಸಿದೆ.

    ತಮ್ಮ ಚೊಚ್ಚಲು ತಮಿಳು ಚಿತ್ರಕ್ಕೆ ಕಿಕ್ (Kick) ಎಂದು ಹೆಸರಿಟ್ಟು ಕುತೂಹಲ ಮೂಡಿಸಿದ್ದರು ಪ್ರಶಾಂತ್ ರಾಜ್. ಈ ಸಿನಿಮಾದ ಮತ್ತೊಂದು ವಿಶೇಷ ಅಂದರೆ, ಕನ್ನಡದ ಹಲವು ಪ್ರತಿಭೆಗಳನ್ನು ತಮ್ಮೊಂದಿಗೆ ತಮಿಳಿಗೂ ಕರೆದುಕೊಂಡು ಹೋಗಿದ್ದಾರೆ ನಿರ್ದೇಶಕರು. ಕಾಮಿಡಿ ಸಿನಿಮಾಗಳ ಮೂಲಕ ತಮಿಳಿನ ಪ್ರೇಕ್ಷಕರ ಮನ ಗೆದ್ದಿರುವ ಸಂತಾನಂ (Santhanam) ಈ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದಾರೆ. ಇದನ್ನೂ ಓದಿ:ಮಾಲಾಶ್ರೀ ಕೋರಿಕೆಯನ್ನ ಈಡೇರಿಸಿದ ದೈವ- ಕೊರಗಜ್ಜನ ಆದಿಸ್ಥಳಕ್ಕೆ ನಟಿ ಭೇಟಿ

    ಬಸಣ್ಣಿ ಬಾ ಹಾಡಿನ ಖ್ಯಾತಿಯ ತಾನ್ಯ ಹೋಪ್ (Tanya Hope) ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ತುಪ್ಪದ ಬೆಡಗಿ ರಾಗಿಣಿ (Ragini) ಕೂಡ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಅಲ್ಲದೇ ಹೆಸರಾಂತ ತಾರಾ ಬಳಗವೇ ಸಿನಿಮಾದಲ್ಲಿದೆ. ಸಿನಿಮಾದ ಮತ್ತೊಂದು ವಿಶೇಷ ಎಂದರೆ, ಕಾಮಿಡಿಗೆ ಒತ್ತು ನೀಡಲಾಗಿದೆ. ಹೆಸರಾಂತ ಕಾಮಿಡಿ ಕಲಾವಿದರೇ ತಾರಾ ಬಳಗದಲ್ಲಿ ಇದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಚಿತ್ರಕ್ಕಿದೆ.

     

    ಈ ಕುರಿತು ಮಾತನಾಡಿದ ಪ್ರಶಾಂತ್ ರಾಜ್, ‘ಬ್ರಹ್ಮಾನಂದಂ ನನ್ನಿಷ್ಟದ ನಟ. ಈ ಸಿನಿಮಾದಲ್ಲಿ ಕಾಮಿಡಿಗೂ ಹೆಚ್ಚು ಒತ್ತು ನೀಡಲಾಗಿದೆ. ಹಾಗಾಗಿ ಸಾಧು ಕೋಕಿಲಾ (Sadhu Kokila) ಕೂಡ ಸಿನಿಮಾದಲ್ಲಿ ಇದ್ದಾರೆ. ಈ ಸಿನಿಮಾದ ಮೂಲಕ ಫ್ರೆಶ್ ಆಗಿರುವ ಕಥೆಯನ್ನು ಹೇಳುವುದಕ್ಕೆ ಹೊರಟಿದ್ದೇನೆ’ ಅಂತಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೇಸಿಗೆಯಲ್ಲಿ ಚುಮುಚುಮು ಚಳಿ ಎಂದ ತಾನ್ಯ ಹೋಪ್ : ‘ಕಬ್ಜ’ದಲ್ಲಿ ಹಾಟ್ ಹಾಟ್

    ಬೇಸಿಗೆಯಲ್ಲಿ ಚುಮುಚುಮು ಚಳಿ ಎಂದ ತಾನ್ಯ ಹೋಪ್ : ‘ಕಬ್ಜ’ದಲ್ಲಿ ಹಾಟ್ ಹಾಟ್

    ಬಸಣ್ಣಿ ಹಾಡಿಗೆ ಮೈಚಳಿ ಬಿಟ್ಟು ಕುಣಿದಿದ್ದ ನಟಿ ತಾನ್ಯ ಹೋಪ್ (Tanya Hope), ಇದೀಗ ಕಬ್ಜ (Kabzaa) ಸಿನಿಮಾದ ಹಾಡಿನಲ್ಲಿ ಇನ್ನೂ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ‘ಚುಮು ಚುಮು ಚಳಿ’ (Chalichali) ಎನ್ನುವ ಹಾಡಿನಲ್ಲಿ ಉಪೇಂದ್ರ (Upendra) ಜೊತೆ ಸಖತ್ ಸ್ಟೆಪ್ ಹಾಕಿರುವ ಅವರು, ಪಡ್ಡೆ ಹುಡುಗರಿಗೆ ಬಿಸಿ ಬಿಸಿ ತಾಗಿಸಿದ್ದಾರೆ. ತಾನ್ಯ ಹೋಪ್ ಜೊತೆ ಉಪ್ಪಿ ಕೂಡ ಮಜವಾಗಿ ಡಾನ್ಸ್ ಮಾಡಿದ್ದು ವಿಶೇಷ. ರವಿ ಬಸರೂರು ಸಂಗೀತ ಸಂಯೋಜನೆಯಲ್ಲಿ ಈ ಹಾಡು ಮೂಡಿ ಬಂದಿದೆ.

    ನಿನ್ನೆ ಶಿಡ್ಲಘಟ್ಟದಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಈ ಹಾಡನ್ನು ರಿಲೀಸ್ ಮಾಡಿದ್ದು, ಶಿವರಾಜ್ ಕುಮಾರ್, ಉಪೇಂದ್ರ ಸೇರಿದಂತೆ ಹಲವರು ಈ ಸಮಾರಂಭದಲ್ಲಿ ಭಾಗಿಯಾಗಿದ್ದರು. ಚಿತ್ರತಂಡ ಮೊದಲೇ ಘೋಷಿಸಿದಂತೆ ಸಾವಿರಾರು ಜನರ ಮಧ್ಯ ಈ ಹಾಡಿನ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು. ಸಂಗೀತ, ನೃತ್ಯ ಕಾರ್ಯಕ್ರಮಗಳು ಮತ್ತಷ್ಟು ಮೆರಗು ನೀಡಿದ್ದು ವಿಶೇಷ. ಇದನ್ನೂ ಓದಿ: ಪೃಥ್ವಿ ಶಾ ಯಾರು ಅಂತಾನೇ ಗೊತ್ತಿಲ್ಲ, ಆತ ಕುಡಿದು ಬಂದಿದ್ದ – ಸಪ್ನಾ ಗಿಲ್

    ಆರ್.ಚಂದ್ರು ನಿರ್ದೇಶನದಲ್ಲಿ ಕಬ್ಜ ಸಿನಿಮಾ ಮೂಡಿ ಬಂದಿದ್ದು, ಉಪೇಂದ್ರ ಮತ್ತು ಕಿಚ್ಚ ಸುದೀಪ್ ತೆರೆ ಹಂಚಿಕೊಂಡಿದ್ದಾರೆ. ಈ ಕಾಂಬಿನೇಷನ್ ಜೊತೆ ಶ್ರೀಯಾ ಶರಣ್ ನಾಯಕಿಯಾಗಿ ನಟಿಸಿದ್ದಾರೆ. ಹಲವು ಭಾಷೆಗಳಲ್ಲಿ ಈ ಸಿನಿಮಾ ತಯಾರಾಗಿದ್ದು, ಈಗಾಗಲೇ ನೋಡುಗರಲ್ಲಿ ಕ್ರೇಜ್ ಕ್ರಿಯೇಟ್ ಮಾಡಿದೆ. ಈ ವರ್ಷದ ಅತೀ ನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲೂ ಕಾಣಿಸಿಕೊಂಡಿದೆ.

    ಹಲವು ಅಚ್ಚರಿಗಳನ್ನು ಸಿನಿಮಾದಲ್ಲಿ ತೋರಿಸಲಿದ್ದಾರಂತೆ ನಿರ್ದೇಶಕ ಚಂದ್ರು. ಹೆಸರಾಂತ ತಾರಾಬಳಗ ಕೂಡ ಈ ಸಿನಿಮಾದಲ್ಲಿದೆ. ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಗೆ ಸಲ್ಲುವಂತೆ ಕಲಾವಿದರ ಆಯ್ಕೆ ಮಾಡಿದ್ದಾರಂತೆ. ಹಾಗಾಗಿ ಇದೊಂದು ಭಾರತೀಯ ಸಿನಿಮಾ ಎನ್ನುತ್ತಾರೆ ನಿರ್ದೇಶಕರು. ಈಗಾಗಲೇ ರಿಲೀಸ್ ಆಗಿರುವ ಟ್ರೈಲರ್ ಮತ್ತು ಟೀಸರ್ ಅಪಾರ ಮೆಚ್ಚುಗೆ ಪಡೆದಿವೆ.

  • ‘ಕಬ್ಜ’ ಸಿನಿಮಾಗಾಗಿ ಕುಣಿಯಲಿದ್ದಾರೆ ತಾನ್ಯಾ ಹೋಪ್

    ‘ಕಬ್ಜ’ ಸಿನಿಮಾಗಾಗಿ ಕುಣಿಯಲಿದ್ದಾರೆ ತಾನ್ಯಾ ಹೋಪ್

    ಗಾಗಲೇ ‘ಕಬ್ಜ’ (Kabzaa) ಸಿನಿಮಾದ ರಿಲೀಸ್ ದಿನಾಂಕವನ್ನು ಘೋಷಣೆ ಮಾಡಿರುವ ನಿರ್ದೇಶಕ ಆರ್.ಚಂದ್ರು, ಈ ನಡುವೆ ಮತ್ತೊಂದು ಅಚ್ಚರಿ ಸುದ್ದಿಯನ್ನೂ ನೀಡಿದ್ದಾರೆ. ಕಬ್ಜ ಸಿನಿಮಾಗಾಗಿ ಸ್ಪೆಷಲ್ ಸಾಂಗ್ (Special Song) ಚಿತ್ರೀಕರಣಕ್ಕೆ ಅವರು ಸಿದ್ಧತೆ ಮಾಡಿಕೊಂಡಿದ್ದು, ಈ ವಿಶೇಷ ಹಾಡಿಗೆ ತಾನ್ಯ ಹೋಪ್ (Tanya Hope) ಹೆಜ್ಜೆ ಹಾಕಲಿದ್ದಾರೆ ಎಂದು ಹೇಳಲಾಗುತ್ತಿದೆ. ಯಜಮಾನ ಸಿನಿಮಾಗಾಗಿ ‘ಬಸಣ್ಣಿ ಬಾ’ ಗೀತೆಗೆ ಸೊಂಟ ಬಳುಕಿಸಿದ್ದ ತಾನ್ಯ, ಕಬ್ಜ ಸಿನಿಮಾದ ಹಾಡಿನಲ್ಲೂ ಹಾಟ್ ಹಾಟ್ ಆಗಿ ಕಾಣಿಸಿಕೊಳ್ಳಲಿದ್ದಾರಂತೆ.

    ಈ ಹಾಡಿನ ಚಿತ್ರೀಕರಣಕ್ಕಾಗಿ ಅದ್ಧೂರಿ ಸೆಟ್ ಹಾಕಲಾಗುತ್ತಿದ್ದು, ಪೂರ್ತಿ ಹಾಡು ಇದೇ ಸೆಟ್ ನಲ್ಲೇ ಚಿತ್ರೀಕರಣವಾಗಲಿದೆ. ತಾನ್ಯ ಜೊತೆ ಸುದೀಪ್ ಹೆಜ್ಜೆ ಹಾಕುತ್ತಾರಾ ಅಥವಾ ಉಪೇಂದ್ರ ಇರಲಿದ್ದಾರೆ ಎನ್ನುವುದೇ ಸದ್ಯಕ್ಕಿರುವ ಕುತೂಹಲ. ಈ ಸಿನಿಮಾದಲ್ಲಿ ಇನ್ನೂ ಹಲವು ಅಚ್ಚರಿಯ ಕಲಾವಿದರು ಇರಲಿದ್ದಾರಂತೆ. ಆ ಕಲಾವಿದರ ಕುರಿತಂತೆ ಹೆಚ್ಚಿನ ಮಾಹಿತಿ ಸಿನಿಮಾದಲ್ಲೇ ಸಿಗಲಿದೆ ಎಂದಿದ್ದಾರೆ ಚಂದ್ರು. ಇದನ್ನೂ ಓದಿ:ಮದುವೆ ಫೋಟೋ ಹಂಚಿಕೊಂಡ ಬೆನ್ನಲ್ಲೇ ವೈರಲಾಯ್ತು ಸಿದ್- ಕಿಯಾರಾ ಆಮಂತ್ರಣ ಪತ್ರಿಕೆ

    ಕಿಚ್ಚ ಸುದೀಪ್ (Sudeep), ಉಪೇಂದ್ರ (Upendra) ಮತ್ತು ಆರ್.ಚಂದ್ರು ಕಾಂಬಿನೇಷನ್ ನ ಮೊದಲ ಸಿನಿಮಾ ಇದಾಗಿದ್ದು, ಈಗಾಗಲೇ ಬಹುತೇಕ ಚಿತ್ರೀಕರಣವನ್ನೂ ಮುಗಿಸಿಕೊಂಡಿದೆ. ಮಾರ್ಚ್ 17 ರಂದು ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬ. ಅಂದು ಈ ಸಿನಿಮಾವನ್ನು ಬಿಡುಗಡೆ ಮಾಡುವ ತಯಾರಿ ಕೂಡ ನಡೆದಿದೆ. ಆರೇಳು ಭಾಷೆಗಳಲ್ಲಿ ಈ ಸಿನಿಮಾವನ್ನು ಬಿಡುಗಡೆ ಮಾಡುವುದಾಗಿ ಈಗಾಗಲೇ ನಿರ್ದೇಶಕರು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪ್ರಶಾಂತ್ ರಾಜ್ ನಿರ್ದೇಶನದ  ತಮಿಳಿನ ‘ಕಿಕ್’ ಸಿನಿಮಾದಲ್ಲಿ ಬ್ರಹ್ಮಾನಂದಂ ನಟನೆ

    ಪ್ರಶಾಂತ್ ರಾಜ್ ನಿರ್ದೇಶನದ ತಮಿಳಿನ ‘ಕಿಕ್’ ಸಿನಿಮಾದಲ್ಲಿ ಬ್ರಹ್ಮಾನಂದಂ ನಟನೆ

    ನ್ನಡದ ಖ್ಯಾತ ಯುವ ನಿರ್ದೇಶಕ ಪ್ರಶಾಂತ್ ರಾಜ್ (Prashanth Raj) ಸದ್ದಿಲ್ಲದೇ ತಮಿಳು ಸಿನಿಮಾ ರಂಗಕ್ಕೆ ಹಾರಿ, ಚಿತ್ರದ ಟೈಟಲ್ ಅನ್ನು ಅನಾವರಣಗೊಳಿಸುವ ಮೂಲಕ ಸಖತ್ ಸದ್ದು ಮಾಡಿದ್ದಾರೆ. ಇದೀಗ ಮತ್ತೊಂದು ಕಾರಣಕ್ಕಾಗಿ ಈ ಸಿನಿಮಾ ಸುದ್ದಿಗೆ ಬಂದಿದೆ. ಈ ಚಿತ್ರದಲ್ಲಿ ತೆಲುಗಿನ ಖ್ಯಾತ ಕಾಮೆಡಿಯನ್ ಬ್ರಹ್ಮಾನಂದಂ (Brahmanandam) ಅವರು ನಟಿಸುತ್ತಿದ್ದು, ವಾಲಿ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಇದೊಂದು ವಿಜ್ಞಾನಿಯ ಪಾತ್ರವಾಗಿದೆಯಂತೆ.

    ತಮ್ಮ ಚೊಚ್ಚಲು ತಮಿಳು ಚಿತ್ರಕ್ಕೆ ಕಿಕ್ (Kick) ಎಂದು ಹೆಸರಿಟ್ಟಿರುವ ಪ್ರಶಾಂತ್ ರಾಜ್, ಕನ್ನಡದ ಹಲವು ಪ್ರತಿಭೆಗಳನ್ನು ತಮ್ಮೊಂದಿಗೆ ತಮಿಳಿಗೂ ಕರೆದುಕೊಂಡು ಹೋಗಿದ್ದಾರೆ. ಕಾಮಿಡಿ ಸಿನಿಮಾಗಳ ಮೂಲಕ ತಮಿಳಿನ ಪ್ರೇಕ್ಷಕರ ಮನ ಗೆದ್ದಿರುವ ಸಂತಾನಂ (Santhanam) ಈ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದು, ಬಸಣ್ಣಿ ಬಾ ಹಾಡಿನ ಖ್ಯಾತಿಯ ತಾನ್ಯ ಹೋಪ್ (Tanya Hope) ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ತುಪ್ಪದ ಬೆಡಗಿ ರಾಗಿಣಿ (Ragini) ಕೂಡ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಇದನ್ನೂ ಓದಿ:‘ಹನಿಮೂನ್’ ಗೂ ಮುನ್ನ ಮನೆದೇವರ ಆಶೀರ್ವಾದ ಪಡೆದ ನಟಿ ಮಹಾಲಕ್ಷ್ಮಿ ಹಾಗೂ ರವೀಂದರ್

    ಈ ಕುರಿತು ಮಾತನಾಡಿದ ಪ್ರಶಾಂತ್ ರಾಜ್, ‘ಬ್ರಹ್ಮಾನಂದಂ ನನ್ನಿಷ್ಟದ ನಟ. ಈ ಸಿನಿಮಾದಲ್ಲಿ ಕಾಮಿಡಿಗೂ ಹೆಚ್ಚು ಒತ್ತು ನೀಡಲಾಗಿದೆ. ಹಾಗಾಗಿ ಸಾಧು ಕೋಕಿಲಾ (Sadhu Kokila) ಕೂಡ ಸಿನಿಮಾದಲ್ಲಿ ಇದ್ದಾರೆ. ಈ ಸಿನಿಮಾದ ಮೂಲಕ ಫ್ರೆಶ್ ಆಗಿರುವ ಕಥೆಯನ್ನು ಹೇಳುವುದಕ್ಕೆ ಹೊರಟಿದ್ದೇನೆ’ ಅಂತಾರೆ. ಈಗಾಗಲೇ ಸಿನಿಮಾದ ಬಹುತೇಕ ಶೂಟಿಂಗ್ ಮುಗಿದಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಚಿತ್ರಕ್ಕಿದೆ.

    Live Tv
    [brid partner=56869869 player=32851 video=960834 autoplay=true]

  • ತಮಿಳಿನ ಮೊದಲ ಸಿನಿಮಾದಲ್ಲೇ ‘ಕಿಕ್’ ಕೊಟ್ಟ ಕನ್ನಡದ ಹೆಸರಾಂತ ನಿರ್ದೇಶಕ ಪ್ರಶಾಂತ್ ರಾಜ್

    ತಮಿಳಿನ ಮೊದಲ ಸಿನಿಮಾದಲ್ಲೇ ‘ಕಿಕ್’ ಕೊಟ್ಟ ಕನ್ನಡದ ಹೆಸರಾಂತ ನಿರ್ದೇಶಕ ಪ್ರಶಾಂತ್ ರಾಜ್

    ವ್ ಗುರು ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಪ್ರಶಾಂತ್ ರಾಜ್, ಇದೇ ಮೊದಲ ಬಾರಿಗೆ ತಮಿಳು ಸಿನಿಮಾವೊಂದನ್ನು ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಬಹುತೇಕ ಶೂಟಿಂಗ್ ಮುಗಿದಿದ್ದರೂ, ಆ ಸಿನಿಮಾಗೆ ಟೈಟಲ್ ಮಾತ್ರ ಇಟ್ಟಿರಲಿಲ್ಲ. ಈ ಹಿಂದಿನ ಅವರ ನಿರ್ದೇಶನದಲ್ಲಿ ತಯಾರಾದ ಅಷ್ಟೂ ಕನ್ನಡದ ಚಿತ್ರಗಳು ವಿಶೇಷ ಟೈಟಲ್ ಇಟ್ಟಿದ್ದ ಪ್ರಶಾಂತ್ ರಾಜ್, ತಮ್ಮ ಚೊಚ್ಚಲು ತಮಿಳು ಚಿತ್ರಕ್ಕೆ ಯಾವ ರೀತಿ ಶೀರ್ಷಿಕೆ ಇಡಬಹುದು ಎನ್ನುವ ಕುತೂಹಲವಿತ್ತು. ಅದಕ್ಕೀಗ ತೆರೆ ಬಿದ್ದಿದೆ.

    ಕಲರ್ ಫುಲ್ ಸಿನಿಮಾ ಮಾಡುವಲ್ಲಿ ಪ್ರಶಾಂತ್ ರಾಜ್ ನಿಸ್ಸೀಮರು. ತಮಿಳಿನಲ್ಲೂ ಅಂಥದ್ದೇ ಕಥೆಯನ್ನು ಆಯ್ದುಕೊಂಡು ಆ ಚಿತ್ರಕ್ಕೆ ‘ಕಿಕ್’ ಎಂದು ಹೆಸರಿಟ್ಟಿದ್ದಾರೆ. ಗಣೇಶ ಹಬ್ಬದ ದಿನದಂದು ಟೈಟಲ್ ರಿಲೀಸ್ ಮಾಡಿದ್ದಾರೆ. ಇಡೀ ಸಿನಿಮಾ ನೋಡುಗರಿಗೆ ಕಿಕ್ ಕೊಡುತ್ತಲೇ ಸಾಗುತ್ತದೆ. ಹಾಗಾಗಿ ಇಂಥದ್ದೊಂದು ಟೈಟಲ್ ಇಟ್ಟಿರುವುದಾಗಿ ಪ್ರಶಾಂತ್ ಪ್ರತಿಕ್ರಿಯಿಸಿದ್ದಾರೆ. ಇದು ಕೂಡ ಹೊಸ ಬಗೆಯ ಸಿನಿಮಾ ಎನ್ನುತ್ತಾರೆ. ಇದನ್ನೂ ಓದಿ:ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ‘ಗಂಡುಮಗ’ ಎಂದು ಹಾಡಿ ಹೊಗಳಿದ ಜಗ್ಗೇಶ್

    ಹಾಸ್ಯ ಪಾತ್ರಗಳ ಮೂಲಕ ತಮಿಳು ಸಿನಿಮಾ ರಂಗದಲ್ಲೇ ಫೇಮಸ್ ಆಗಿ, ಆ ನಂತರ ಹೀರೋ ಆಗಿರುವ ಸಂತಾನಂ ಈ ಚಿತ್ರದ ನಾಯಕರು. ಇದೇ ಮೊದಲ ಬಾರಿಗೆ ಅವರು ಹೊಸ ಬಗೆಯ ಪಾತ್ರವನ್ನು ಪೋಷಿಸುತ್ತಿದ್ದಾರೆ. ಕಿಕ್ ಸಿನಿಮಾದಲ್ಲಿ ಅವರು ವಿಭಿನ್ನ ಪಾತ್ರ ಮಾಡುತ್ತಿದ್ದಾರಂತೆ. ಸಂತಾನಂ ಜೊತೆ ಇದೇ ಮೊದಲ ಬಾರಿಗೆ ತಾನ್ಯ ಹೋಪ್ ನಾಯಕಿಯಾಗಿ ನಟಿಸುತ್ತಿದ್ದಾರೆ. ರಾಗಿಣಿ, ಸಾಧು ಕೋಕಿಲಾ ಸೇರಿದಂತೆ ಹಲವು ಕನ್ನಡದ ಕಲಾವಿದರೇ ತಾರಾಗಣದಲ್ಲಿ ಇದ್ದಾರೆ. ನವೀನ್ ರಾಜ್ ನಿರ್ಮಾಣದಲ್ಲಿ ಈ ಸಿನಿಮಾ ಮೂಡಿ ಬಂದಿದೆ.

    Live Tv
    [brid partner=56869869 player=32851 video=960834 autoplay=true]

  • ಕರ್ನಾಟಕದಲ್ಲೇ ನಡೆಯಿತು ತಮಿಳು ಸಿನಿಮಾಗೆ ಮುಹೂರ್ತ: ಬೆಂಗಳೂರಿಗೆ ಬಂದಿಳಿದ ತಮಿಳು ನಟ

    ಕರ್ನಾಟಕದಲ್ಲೇ ನಡೆಯಿತು ತಮಿಳು ಸಿನಿಮಾಗೆ ಮುಹೂರ್ತ: ಬೆಂಗಳೂರಿಗೆ ಬಂದಿಳಿದ ತಮಿಳು ನಟ

    ರೆಂಜ್, ದಳಪತಿ, ಜೂಮ್, ಲವ್ ಗುರು ಸಿನಿಮಾಗಳ ಖ್ಯಾತಿಯ ಪ್ರಶಾಂತ್ ರಾಜ್ ನಿರ್ದೇಶನದ ಹೊಸ ಸಿನಿಮಾ ಸೆಟ್ಟೇರಿದೆ. ಈ ಬಾರಿ ಪ್ರಶಾಂತ್ ಕನ್ನಡದ ಜೊತೆಗೆ ತಮಿಳಿನಲ್ಲೂ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಅದರ ಮೊದಲ ಭಾಗವಾಗಿ ನಿನ್ನೆ ಬೆಂಗಳೂರಿನ ಕೊಂದಂಡ ರಾಮ ದೇಗುಲದಲ್ಲಿರುವ ಸಾಯಿಬಾಬಾ ಮಂದಿರದಲ್ಲಿ ಸಿನಿಮಾದ ಮುಹೂರ್ತ ನೆರವೇರಿದೆ. ತಮಿಳು ಸಿನಿಮಾವೊಂದು ಕನ್ನಡದ ನೆಲದಲ್ಲೇ ಮುಹೂರ್ತ ಕಂಡು ಕನ್ನಡಿಗರಿಗೆ ಸಂಭ್ರಮ ತಂದಿದೆ. ಇದನ್ನೂ ಓದಿ : ಮಸಾಜ್ ಪಾರ್ಲರ್ ಹುಡುಗಿ ಪಾತ್ರದಲ್ಲಿ ಅದಿತಿ ಪ್ರಭುದೇವ್

    ಫಾರ್ಚುನ್ ಫಿಲ್ಮಂ ಬ್ಯಾನರ್ ನಡಿ ಪ್ರೊಡಕ್ಷನ್ ನಂಬರ್ 10 ಟೈಟಲ್ ನಡಿ ಸೆಟ್ಟೇರಿರುವ ಈ ಸಿನಿಮಾದಲ್ಲಿ ತಮಿಳಿನ ಖ್ಯಾತ ನಟ ಸಂತಾನಂ ನಾಯಕನಾಗಿ ನಟಿಸ್ತಿದ್ದು, ತಾನ್ಯ ಹೋಪ್ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ರೋಮ್ಯಾಂಟಿಕ್ ಕಾಮಿಡಿ ಜಾನರ್ ಈ ಸಿನಿಮಾಗೆ ನವೀನ್ ರಾಜ್ ಬಂಡವಾಳ ಹೂಡಿದ್ದಾರೆ. ಇಂದಿನಿಂದ ಶೂಟಿಂಗ್ ಶುರು ಮಾಡಿರುವ ಪ್ರಶಾಂತ್ ರಾಜ್, ಫಸ್ಟ್ ಡೇ ಶೆಡ್ಯೂಲ್ಡ್ ನಲ್ಲೂ ಬೆಂಗಳೂರಿನಲ್ಲಿ ಮುಗಿಸಿಕೊಂಡು, ಆ ನಂತ್ರ ಚೆನ್ನೈನಲ್ಲಿ ಹಾಗೂ ವಿದೇಶದಲ್ಲಿ ಹಾಡು, ಕೆಲವೊಂದು ದೃಶ್ಯಗಳನ್ನು ಚಿತ್ರೀಕರಿಕರಿಸಲು ಪ್ಲ್ಯಾನ್ ಹಾಕಿಕೊಂಡಿದ್ದಾರೆ. ಇದನ್ನೂ ಓದಿ : ನಮ್ಮದು ಪ್ಯಾನ್ ಇಂಡಿಯಾ ಸಿನಿಮಾವಲ್ಲ, ಸಿನಿಮಾ ಅಷ್ಟೇ : ಬಾಲಿವುಡ್ ವಿರುದ್ಧ ಕಿಚ್ಚ ಸುದೀಪ್ ಗುಡುಗು

    ಪ್ರಶಾಂತ್ ರಾಜ್ ನಿರ್ದೇಶನದ ಚೊಚ್ಚಲು ತಮಿಳು ಸಿನಿಮಾದಲ್ಲಿ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಕೂಡ ಪಾತ್ರ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರು ಗ್ಲಾಮರೆಸ್ ಆಗಿ ಕಾಣಿಸಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ತಮಿಳು ಮತ್ತು ಕನ್ನಡದಲ್ಲಿ ಏಕಕಾಲಕ್ಕೆ ಈ ಸಿನಿಮಾ ತಯಾರಾಗುತ್ತಿದ್ದು, ರಾಗಿಣಿಗಾಗಿಯೇ ಈ ಸಿನಿಮಾದಲ್ಲಿ ವಿಶೇಷ ಹಾಡು ಕೂಡ ಇದೆಯಂತೆ. ಇದನ್ನೂ ಓದಿ : ಮಂದಣ್ಣಗಾಗಿ ಮುಂಬೈನಲ್ಲಿ ಮುಗಿಬಿದ್ದ ಫ್ಯಾನ್ಸ್ : ಬಾಲಿವುಡ್ ನಲ್ಲೂ ರಶ್ಮಿಕಾ ಹವಾ

    ಪ್ರಶಾಂತ್ ರಾಜ್ ಸಿನಿಮಾಗಳು ಅಂದ್ರೆ ಅಲ್ಲಿ ಸಂಗೀತಕ್ಕೆ ಹೆಚ್ಚಿನ ಪ್ರಾಧ್ಯಾನ್ಯತೆ ಇರುತ್ತದೆ. ಅದರಂತೆ ಈ ಬಾರಿ ಪ್ರಶಾಂತ್ ಮ್ಯೂಸಿಕಲ್ ಕಂಪೋಸರ್ ಅರ್ಜುನ್ ಜನ್ಯ ಜೊತೆ ಕೈ ಜೋಡಿಸಿದ್ದಾರೆ. ಪ್ರಶಾಂತ್ ನಿರ್ದೇಶನದ ಹೊಸ ಸಿನಿಮಾಗೆ ಅರ್ಜುನ್ ಜನ್ಯ ಮ್ಯೂಸಿಕ್ ನೀಡಲಿದ್ದು, ಸುಧಾಕರ್ ಕ್ಯಾಮೆರಾ ಕೈಚಳಕ ಸಿನಿಮಾದಲ್ಲಿರಲಿದೆ. ಸದ್ಯದಲ್ಲಿಯೇ ಉಳಿದ ತಾರಾಬಳಗದ ಮಾಹಿತಿಯನ್ನು ಚಿತ್ರತಂಡ ನೀಡಲಿದೆ. ಇದನ್ನೂ ಓದಿ : ಬಾಲಿವುಡ್ ಎಂದರೆ ಭಾರತೀಯ ಸಿನಿಮಾರಂಗವಲ್ಲ: ಮೆಗಾಸ್ಟಾರ್ ಚಿರಂಜೀವಿಗೂ ಆಗಿತ್ತು ಅವಮಾನ

    ಈಗಾಗಲೇ ಹಾಡುಗಳಿಗೆ ರಾಗ ಸಂಯೋಜನೆ ಶುರು ಮಾಡಿದ್ದಾರಂತೆ ಜನ್ಯ. ಸಾಮಾನ್ಯವಾಗಿ ಪ್ರಶಾಂತ್ ರಾಜ್ ನಿರ್ದೇಶನದ ಬಹುತೇಕ ಚಿತ್ರಗಳ ಹಾಡುಗಳು ಗೆದ್ದಿವೆ. ಸೂಪರ್ ಹಿಟ್ ಸಾಲುಗಳಲ್ಲಿ ಕಾಣಿಸಿಕೊಂಡಿವೆ. ಈ ಸಿನಿಮಾದ ಹಾಡುಗಳು ಕೂಡ ಕೇಳುಗರಿಗೆ ಇಷ್ಟವಾಗಲಿವೆ ಎಂದಿದ್ದಾರೆ ನಿರ್ದೇಶಕರು.

  • ತಮಿಳು ನಟ ಸಂತಾನಂ ಜೊತೆ ಹಾಟ್ ಹಾಟ್ ಆಗಿ ಕಾಣಿಸಿಕೊಳ್ತಾರಂತೆ ರಾಗಿಣಿ

    ತಮಿಳು ನಟ ಸಂತಾನಂ ಜೊತೆ ಹಾಟ್ ಹಾಟ್ ಆಗಿ ಕಾಣಿಸಿಕೊಳ್ತಾರಂತೆ ರಾಗಿಣಿ

    ಪ್ರಶಾಂತ್ ರಾಜ್ ನಿರ್ದೇಶನದ ಚೊಚ್ಚಲು ತಮಿಳು ಸಿನಿಮಾದಲ್ಲಿ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಕೂಡ ಪಾತ್ರ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರು ಗ್ಲಾಮರೆಸ್ ಆಗಿ ಕಾಣಿಸಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ತಮಿಳು ಮತ್ತು ಕನ್ನಡದಲ್ಲಿ ಏಕಕಾಲಕ್ಕೆ ಈ ಸಿನಿಮಾ ತಯಾರಾಗುತ್ತಿದ್ದು, ರಾಗಿಣಿಗಾಗಿಯೇ ಈ ಸಿನಿಮಾದಲ್ಲಿ ವಿಶೇಷ ಹಾಡು ಕೂಡ ಇದೆಯಂತೆ. ಇದನ್ನೂ ಓದಿ : ಮಂದಣ್ಣಗಾಗಿ ಮುಂಬೈನಲ್ಲಿ ಮುಗಿಬಿದ್ದ ಫ್ಯಾನ್ಸ್ : ಬಾಲಿವುಡ್ ನಲ್ಲೂ ರಶ್ಮಿಕಾ ಹವಾ

    ಪ್ರಶಾಂತ್ ರಾಜ್ ಇದೇ ಮೊದಲ ಬಾರಿಗೆ ತಮಿಳಿಗೆ ಹಾರಿದ್ದು, ಸಂತಾನಂ ಅವರು ಚಿತ್ರದಲ್ಲಿ ನಾಯಕನ ಪಾತ್ರ ಮಾಡುತ್ತಿದ್ದಾರೆ. ಬಸಣ್ಣಿ ಬಾ ಖ್ಯಾತಿಯ ತಾನ್ಯ ಹೋಪ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ತಿಂಗಳು ಕೊನೆಯ ವಾರದಿಂದ ಸಿನಿಮಾದ ಶೂಟಿಂಗ್ ಮಾಡುವುದಾಗಿ ನಿರ್ದೇಶಕರು ತಿಳಿಸಿದ್ದಾರೆ. ಇದನ್ನೂ ಓದಿ : ಬಾಲಿವುಡ್ ಎಂದರೆ ಭಾರತೀಯ ಸಿನಿಮಾರಂಗವಲ್ಲ: ಮೆಗಾಸ್ಟಾರ್ ಚಿರಂಜೀವಿಗೂ ಆಗಿತ್ತು ಅವಮಾನ

    ಪ್ರಶಾಂತ್ ರಾಜ್ ನಿರ್ದೇಶನದ ಬಹುತೇಕ ಸಿನಿಮಾಗಳು ಕ್ಯೂಟ್ ಲವ್ ಸ್ಟೋರಿಯನ್ನೇ ಒಳಗೊಂಡಿವೆ. ಈವರೆಗೂ ಅವರ ಸಿನಿಮಾಗಳು ಕಲರ್ ಫುಲ್ ಆಗಿಯೇ ಮೂಡಿ ಬಂದಿವೆ. ಹಾಗಾಗಿ ಈ ಸಿನಿಮಾ ಕೂಡ ಒಂದೊಳ್ಳೆ ರೊಮ್ಯಾಂಟಿಕ್ ಲವ್ ಸ್ಟೋರಿಯನ್ನೇ ಒಳಗೊಂಡಿದೆ. ಹಾಗಾಗಿ ಕ್ಯೂಟ್ ಕಪಲ್ ಇಟ್ಟುಕೊಂಡು ಹೊಸ ಸಿನಿಮಾ ಮಾಡಲು ಹೊರಟಿದ್ದಾರೆ ನಿರ್ದೇಶಕರು.  ಇದನ್ನೂ ಓದಿ : ಕೆಜಿಎಫ್ 2 : ಗೋವಾದಲ್ಲಿ ಸಕ್ಸಸ್ ಪಾರ್ಟಿ

    ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದು, ಈಗಾಗಲೇ ಹಾಡುಗಳಿಗೆ ರಾಗ ಸಂಯೋಜನೆ ಶುರು ಮಾಡಿದ್ದಾರಂತೆ ಜನ್ಯ. ಸಾಮಾನ್ಯವಾಗಿ ಪ್ರಶಾಂತ್ ರಾಜ್ ನಿರ್ದೇಶನದ ಬಹುತೇಕ ಚಿತ್ರಗಳ ಹಾಡುಗಳು ಗೆದ್ದಿವೆ. ಸೂಪರ್ ಹಿಟ್ ಸಾಲುಗಳಲ್ಲಿ ಕಾಣಿಸಿಕೊಂಡಿವೆ. ಈ ಸಿನಿಮಾದ ಹಾಡುಗಳು ಕೂಡ ಕೇಳುಗರಿಗೆ ಇಷ್ಟವಾಗಲಿವೆ ಎಂದಿದ್ದಾರೆ ನಿರ್ದೇಶಕರು.

  • ಪ್ರಶಾಂತ್ ರಾಜ್ ನಿರ್ದೇಶನದ ತಮಿಳು ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶಕ

    ಪ್ರಶಾಂತ್ ರಾಜ್ ನಿರ್ದೇಶನದ ತಮಿಳು ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶಕ

    ಲವ್ ಗುರು ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಮೂಡಿಸಿದ್ದ ಪ್ರಶಾಂತ್ ರಾಜ್ ಇದೀಗ ಸದ್ದಿಲ್ಲದೇ ತಮಿಳು ಸಿನಿಮಾ ರಂಗಕ್ಕೆ ಹಾರಿದ್ದಾರೆ. ಇದೇ ಮೊದಲ ಬಾರಿಗೆ ಅವರು ತಮಿಳು ಚಿತ್ರವೊಂದನ್ನು ನಿರ್ದೇಶನ ಮಾಡುತ್ತಿದ್ದು, ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಪ್ರಶಾಂತ್ ರಾಜ್ ಸಿನಿಮಾಗಳೆಂದರೆ ಅಲ್ಲಿ ಸಂಗೀತಕ್ಕೆ ಹೆಚ್ಚಿನ ಪ್ರಾಧಾನ್ಯತೆ ಇರುತ್ತದೆ. ಅಲ್ಲದೇ, ಮೆಲೊಡಿಗೂ ಅವರು ಹೆಚ್ಚು ಒತ್ತು ಕೊಡುತ್ತಾರೆ. ಈವರೆಗೂ ಪ್ರಶಾಂತ್ ರಾಜ್ ನಿರ್ದೇಶನದಲ್ಲಿ ಮೂಡಿ ಬಂದ ಚಿತ್ರಗಳಲ್ಲಿ ಹಾಡುಗಳು ಸೂಪರ್ ಹಿಟ್ ಆಗಿವೆ. ಹೀಗಾಗಿ ಪ್ರಶಾಂತ್ ರಾಜ್ ಮತ್ತು ಅರ್ಜುನ್ ಜನ್ಯ ಕಾಂಬಿನೇಷನ್ ನ ಹಾಡುಗಳು ಬಗ್ಗೆ ಈಗಿಂದಲೇ ಕುತೂಹಲ ಹೆಚ್ಚಾಗಿದೆ.

    ಸಿನಿಮಾ ತಮಿಳದ್ದಾದರೂ, ಬಹುತೇಕ ಕನ್ನಡದ ತಂತ್ರಜ್ಞರು ಮತ್ತು ಕಲಾವಿದರು ಈ ಸಿನಿಮಾದಲ್ಲಿ ಇರಲಿದ್ದಾರೆ ಎಂದು ಈ ಹಿಂದೆ ಪ್ರಶಾಂತ್ ರಾಜ್ ಹೇಳಿದ್ದರು. ಕನ್ನಡದ ಹುಡುಗಿಯನ್ನೇ ನಾಯಕಿಯನ್ನಾಗಿ ಆಯ್ಕೆ ಮಾಡುವೆ ಎಂದೂ ತಿಳಿಸಿದ್ದರು. ಕೊಟ್ಟ ಮಾತಿನಂತೆ ಕನ್ನಡದ ನಟಿಯನ್ನೇ ನಾಯಕಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ತಾನ್ಯ ಹೋಪ್ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದನ್ನೂ ಓದಿ : ಕೆಜಿಎಫ್ 2 : ಕಿಚ್ಚ ಸುದೀಪ್ ಮತ್ತು ಯಶ್ ಮಧ್ಯೆ ತಂದಿಡುತ್ತಿದೆ ವೈರಲ್ ವಿಡಿಯೋ

    ಲವ್ ಗುರು ಸೇರಿದಂತೆ ಅನೇಕ ಚಿತ್ರಗಳಿಗೆ ನಿರ್ದೇಶನ ಮಾಡಿರುವ ಪ್ರಶಾಂತ್ ರಾಜ್, ಇದೇ ಮೊದಲ ಬಾರಿಗೆ ತಮಿಳು ಚಿತ್ರ ಮಾಡುತ್ತಿದ್ದು, ತಮ್ಮದೇ ಆದ ಶೈಲಿಯ ಕಥೆಯನ್ನೇ ತಮಿಳಿನಲ್ಲೂ ಆಯ್ಕೆ ಮಾಡಿದ್ದಾರೆ. ಲವ್, ಕಲರ್ ಫುಲ್ ಮತ್ತು ಮ್ಯೂಸಿಕ್ ಈ ಮೂರು ಪ್ರಶಾಂತ್ ರಾಜ್ ಮಂತ್ರಗಳು. ಅವರ ಬಹುತೇಕ ಚಿತ್ರಗಳು ಕಲರ್ ಫುಲ್ ಆಗಿ ಮೂಡಿ ಬಂದಿವೆ. ಹೊಸ ಹೊಸ ಲೊಕೇಶನ್ ಗಳಲ್ಲಿ ಚಿತ್ರಿತವಾಗಿವೆ. ತಮಿಳು ಸಿನಿಮಾದಲ್ಲೂ ಈ ಸೂತ್ರವನ್ನೇ ಅವರು ಪಾಲಿಸಿಕೊಂಡು ಹೋಗುತ್ತಿದ್ದಾರಂತೆ. ಇದನ್ನೂ ಓದಿ: ತಾಯಿಯಾಗುತ್ತಿದ್ದಾರೆ ಚಂದ್ರನ ರಾಣಿ ಶ್ರಿಯಾ ಸರನ್ 

    ಪ್ರಶಾಂತ್ ರಾಜ್ ಅವರ ತಮಿಳಿನ ಚೊಚ್ಚಲು ಚಿತ್ರಕ್ಕೆ ಸಂತಾನಂ ಹೀರೋ. ಈ ತಿಂಗಳು ಕೊನೆಯಲ್ಲಿ ಶೂಟಿಂಗ್ ಶುರುವಾದರೆ, ಆಗಸ್ಟ್ ನಲ್ಲಿ ಸಿನಿಮಾ ಬಿಡುಗಡೆ ಮಾಡುವುದಾಗಿ ಹೇಳುತ್ತಾರೆ ನಿರ್ದೇಶಕರು. ಇದನ್ನೂ ಓದಿ : ಕೆಜಿಎಫ್-2 ಸಿನಿಮಾ ವೀಕ್ಷಣೆ ವೇಳೆ ಹಾರಿದ ಗುಂಡು- ಯುವಕನ ಹೊಟ್ಟೆಗೆ ಗಾಯ

    ಸಾಧು ಕೋಕಿಲಾ ಸೇರಿದಂತೆ ಕೆಲ ನಟರೂ ಈ ಸಿನಿಮಾದಲ್ಲಿ ನಟಿಸಲಿದ್ದಾರೆ. ಸುಧಾಕರ್ ಅವರ ಸಿನಿಮಾಟೋಗ್ರಫಿ ಚಿತ್ರಕ್ಕಿರಲಿದೆ. ಕನ್ನಡದ ಸಂಗೀತ ನಿರ್ದೇಶಕರೇ ಈ ಸಿನಿಮಾದಲ್ಲಿ ಕೆಲಸ ಮಾಡಲಿದ್ದಾರೆ.