Tag: ತಾನ್ಯಾ ಹೋಪ್

  • ಸರ್ಜರಿಗೆ ಮೊರೆ ಹೋಗಿದ್ರಾ ಬಸಣ್ಣಿ? ತುಟಿ ಮೇಲೆ ಕಣ್ಣಿಟ್ಟವರಿಗೆ ತಾನ್ಯಾ ಗರಂ

    ಸರ್ಜರಿಗೆ ಮೊರೆ ಹೋಗಿದ್ರಾ ಬಸಣ್ಣಿ? ತುಟಿ ಮೇಲೆ ಕಣ್ಣಿಟ್ಟವರಿಗೆ ತಾನ್ಯಾ ಗರಂ

    ನ್ನಡದ ಯಜಮಾನ (Yajamana), ಅಮರ್ (Amar), ಖಾಕಿ ಸಿನಿಮಾಗಳಲ್ಲಿ ನಟಿಸಿರುವ ಬೆಂಗಳೂರಿನ ಬೆಡಗಿ ತಾನ್ಯಾ ಹೋಪ್ (Tanya Hope) ಅವರು ಬಹುಭಾಷಾ ನಟಿಯಾಗಿ ಮಿಂಚ್ತಿದ್ದಾರೆ. ಇತ್ತೀಚಿಗೆ ಚಿತ್ರದ ಪ್ರಚಾರ ಕಾರ್ಯದ ವೇಳೆ ತಾನ್ಯಾ ತುಟಿಗೆ ಸರ್ಜರಿ ಮಾಡಿಸಿರುವ ಬಗ್ಗೆ ಪ್ರಶ್ನೆ ಎದುರಾಗಿದೆ. ಅದಕ್ಕೆ ನಟಿ ಖಡಕ್ ಉತ್ತರ ನೀಡಿದ್ದಾರೆ.

    ಸಂತಾನಂ ನಟನೆಯ ಕಿಕ್ (Kick) ಸಿನಿಮಾದಲ್ಲಿ ತಾನ್ಯಾ ಹೋಪ್ ಮತ್ತು ರಾಗಿಣಿ ದ್ವಿವೇದಿ (Ragini Dwivedi) ನಾಯಕಿಯರಾಗಿ ನಟಿಸಿದ್ದಾರೆ. ಈ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದ ವೇಳೆ, ತುಟಿಯ ಸರ್ಜರಿ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಅದಕ್ಕೆ ನಟಿ ಬೇಸರದಿಂದಲೇ ಉತ್ತರಿಸಿದ್ದಾರೆ. ಇದರ ಬಗ್ಗೆ ಪದೇ ಪದೇ ತಮಗೆ ಪ್ರಶ್ನೆ ಎದುರಾಗಿರೋದಾಗಿ ಹೇಳಿದ್ದಾರೆ. ಇದನ್ನೂ ಓದಿ:‘ಅರ್ಜುನ್ ರೆಡ್ಡಿ’ ನಿರ್ದೇಶಕನ ಸಿನಿಮಾದಲ್ಲಿ ವಿಜಯ್ ದೇವರಕೊಂಡ

    ನನ್ನ ತುಟಿಗೆ ನಾನು ಸರ್ಜರಿ ಮಾಡಿಸಿಲ್ಲ. ಎಲ್ಲರೂ ಯಾಕೆ ನಿಮ್ಮ ತುಟಿ ದಪ್ಪ ಇದೆ ಅಂತಾ ಕೇಳ್ತಾರೆ. ನನ್ನ ಚಿಕ್ಕ ವಯಸ್ಸಿನಿಂದಲೂ ನನ್ನ ತುಟಿ ಹೀಗೆಯೇ ಇದೆ. ನಿಜಕ್ಕೂ ನಾನು ಯಾವುದೇ ಆಪರೇಷನ್ ಮಾಡಿಸಿಲ್ಲ ಎಂದು ನಟಿ ಸ್ಪಷ್ಟನೆ ನೀಡಿದ್ದಾರೆ. ಅದ್ಯಾಕೆ ಎಲ್ಲರಿಗೂ ನನ್ನ ತುಟಿ ಮೇಲೆ ಕಣ್ಣು ಗೊತ್ತಿಲ್ಲ ಎಂದು ಬೇಸರದಿಂದ ಉತ್ತರಿಸಿದ್ದಾರೆ.

    ‘ಅಮರ್’ ಸಿನಿಮಾ ಮೂಲಕ ಅಭಿಷೇಕ್ ಅಂಬರೀಶ್‌ಗೆ (Abhishek Ambareesh) ಜೋಡಿಯಾಗಿ ಚಂದನವನಕ್ಕೆ ಪಾದಾರ್ಪಣೆ ಮಾಡಿದರು. ಬಳಿಕ ಯಜಮಾನ ಸಿನಿಮಾದಲ್ಲಿ ಬಸಣ್ಣಿ ಬಾ ಹಾಡಿಗೆ ಸೊಂಟ ಬಳುಕಿಸಿದ್ದರು. ಕನ್ನಡದ ಜೊತೆಗೆ ಪರಭಾಷೆಗಳಲ್ಲೂ ನಟಿ ಮಿಂಚಿದ್ದರು. ಬೆಂಗಳೂರಿನ ಖ್ಯಾತ ಉದ್ಯಮಿ ರವಿ ಪುರವಂಕರ ಅವರ ಮಗಳಾಗಿದ್ದು, ತಮ್ಮ ಕನಸಿನಂತೆ ಚಿತ್ರರಂಗದಲ್ಲಿ ತಾನ್ಯಾ ಸದ್ದು ಮಾಡ್ತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಸಣ್ಣಿ ಬೆಡಗಿಯ ಇನ್‍ಸ್ಟಾ ಅಕೌಂಟ್ ಹ್ಯಾಕ್

    ಬಸಣ್ಣಿ ಬೆಡಗಿಯ ಇನ್‍ಸ್ಟಾ ಅಕೌಂಟ್ ಹ್ಯಾಕ್

    ಬೆಂಗಳೂರು: ಇತ್ತೀಚೆಗೆ ಹ್ಯಾಕಿಂಗ್ ಸುದ್ದಿ ಸದ್ದು ಮಾಡುತ್ತಿದ್ದು, ಈ ಹಿಂದೆ ಆಶಿಕಾ ರಂಗನಾಥ್, ವಶಿಷ್ಠ ಸಿಂಹ ಇನ್‍ಸ್ಟಾ ಕೌಂಟ್ ಹ್ಯಾಕ್ ಆಗಿತ್ತು. ಇದೀಗ ಬಸಣ್ಣಿ ಬೆಡಗಿ ತಾನ್ಯಾ ಹೋಪ್ ಇನ್‍ಸ್ಟಾ ಖಾತೆ ಹ್ಯಾಕ್ ಆಗಿದೆ.

    ಯಜಮಾನ ಸಿನಿಮಾದ ಬಸಣ್ಣಿ ಬಾ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಕನ್ನಡಿಗರ ಮನೆ ಮಾತಾಗಿರುವ ತಾನ್ಯಾ ಹೋಪ್, ಬಳಿಕ ಅಭಿಷೇಕ್ ಅಂಬರೀಶ್ ಅಭಿನಯದ ಅಮರ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಮಾತ್ರವಲ್ಲದೆ ತೆಲುಗು, ತಮಿಳು ಸಿನಿಮಾಗಳಲ್ಲಿ ಸಹ ತಾನ್ಯಾ ನಟಿಸಿದ್ದಾರೆ. ಹೀಗಿರುವಾಗಲೇ ಇದೀಗ ಇದ್ದಕ್ಕಿದ್ದಂತೆ ಅವರ ಇನ್‍ಸ್ಟಾ ಖಾತೆ ಹ್ಯಾಕ್ ಆಗಿರುವ ಬಗ್ಗೆ ಸುಳಿವು ಸಿಕ್ಕಿದೆ.

    ಬಹುತೇಕ ನಟ, ನಟಿಯರು ತಮ್ಮ ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಇನ್‍ಸ್ಟಾಗ್ರಾಮ್ ಮೂಲಕವೇ ಅಪ್‍ಡೇಟ್ ನೀಡುತ್ತಾರೆ. ಅದೇ ರೀತಿ ತಾನ್ಯಾ ಸಹ ಸಖತ್ ಆಕ್ಟಿವ್ ಆಗಿದ್ದರು. ತಮ್ಮ ಗ್ಲಾಮರಸ್ ಫೋಟೊ, ವರ್ಕೌಟ್, ಡ್ಯಾನ್ಸ್ ವಿಡಿಯೋಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಇದೀಗ ಅವರ ಅಕೌಂಟ್ ಹ್ಯಾಕ್ ಆಗಿದೆ ಎನ್ನಲಾಗಿದೆ.

    ಅಕೌಂಟ್ ಹ್ಯಾಕ್ ಆಗಿದ್ದನ್ನು ಕಂಡು ಅವರ ಅಭಿಮಾನಿಗಳು ಗಾಬರಿಯಾಗಿದ್ದು, ಪ್ರೋಫೈಲ್ ಪಿಕ್ಚರ್ ರಿಮೂವ್ ಆಗಿತ್ತು. ಆದರೆ ಹೆಸರು ಮಾತ್ರ ಹೋಪ್ ತಾನ್ಯಾ ಎಂದಿತ್ತು. ಹೀಗೆ ಬದಲಾಗಿರುವುದನ್ನು ಸಹ ಗಮನಿಸಿದ್ದಾರೆ. ವಿಷಾದದ ಸಂಗತಿ ಎಂದರೆ ಹ್ಯಾಕ್ ಬಗ್ಗೆ ನಟಿಗೆ ಸುಳಿವು ಸಹ ಸಿಕ್ಕಿಲ್ಲ. ಸ್ಯಾಂಡಲ್‍ವುಡ್‍ನಲ್ಲಿ ಈಗಾಗಲೇ ಅನೇಕರು ಹ್ಯಾಕರ್ ಗಳಿಗೆ ಬಲಿಯಾಗಿದ್ದಾರೆ.

    ಆಶಿಕಾ ರಂಗನಾಥ್, ಮನ್ವಿತಾ ಕಾಮತ್ ಹಾಗೂ ವಶಿಷ್ಠ ಸಿಂಹ ಅವರ ಇನ್‍ಸ್ಟಾ ಖಾತೆಗಳು ಸಹ ಹ್ಯಾಕ್ ಆಗಿದ್ದವು. ಕಾಪಿರೈಟ್ ಉಲ್ಲಂಘನೆ ಎಂದು ಹೇಳಿಕೊಳ್ಳುವ ಕ್ಲಿಕ್ ಬೈಟ್ ಲಿಂಕ್ ಬಂದಿದ್ದು, ಇದಕ್ಕೆ ಪ್ರತಿಕ್ರಿಯಿಸಿದ್ದರಿಂದ ತಾತ್ಕಾಲಿಕವಾಗಿ ಅವರ ಇನ್‍ಸ್ಟಾಗ್ರಾಮ್ ಖಾತೆಗಳು ಹ್ಯಾಕ್ ಆಗಿದ್ದವು. ಈ ಮೂಲಕ ತಾತ್ಕಾಲಿಕವಾಗಿ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯ ಮೇಲಿನ ಹಿಡಿತವನ್ನು ಕಳೆದುಕೊಂಡಿದ್ದರು.

    ಲ್ಯಾಂಡಿಂಗ್ ಪೇಜ್‍ನಲ್ಲಿ ಮನ್ವಿತಾ ಹಾಗೂ ಆಶಿಕಾ ಟರ್ಕಿಶ್ ಮೂಲದವರಂತೆ ಕಾಣುವ ಸಂದೇಶ ಕಾಣಿಸುತ್ತಿತ್ತು. ಆದರೆ ವಶಿಷ್ಠ ಸಿಂಹ ಅವರ ಖಾತೆಯನ್ನು ಮುಳಬಾಗಿಲಿನವರು ಹ್ಯಾಕ್ ಮಾಡಿದ್ದರು. ಅಭಿಮಾನಿಗಳೊಂದಿಗೆ ನಟ ಚಾಟ್ ಮಾಡುವ ರೀತಿ ಹ್ಯಾಕರ್ ಗಳು ವರ್ತಿಸಿದ್ದರು.

    ಇದೀಗ ತಾನ್ಯಾ ಹೋಪ್ ಖಾತೆ ಹ್ಯಾಕ್ ಆಗಿರುವುದರಿಂದ ಅಭಿಮಾನಿಗಳು ಬೇಸರಗೊಂಡಿದ್ದು, ಮತ್ತೆ ಯಾವಾಗ ಮರುಳುತ್ತಾರೆ ಎಂದು ಪ್ರಶ್ನಿಸುತ್ತಿದ್ದಾರೆ. ಅಲ್ಲದೆ ತಮ್ಮ ಖಾತೆ ಹ್ಯಾಕ್ ಆಗಿರುವ ಬಗ್ಗೆ ತಾನ್ಯಾ ಯಾವುದೇ ರೀತಿಯ ಸುಳಿವು ನೀಡಿಲ್ಲ. ಹೀಗಾಗಿ ತಮ್ಮ ನೆಚ್ಚಿನ ನಟಿ ಮರಳುವುದನ್ನು ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ.

  • ‘ಖಾಕಿ’ ಖದರ್‌ಗೂ ರೋಮಾಂಚನ ಮೂಡಿಸಿದ ವೀಡಿಯೋ ಸಾಂಗ್!

    ‘ಖಾಕಿ’ ಖದರ್‌ಗೂ ರೋಮಾಂಚನ ಮೂಡಿಸಿದ ವೀಡಿಯೋ ಸಾಂಗ್!

    ಬೆಂಗಳೂರು: ಚಿರಂಜೀವಿ ಸರ್ಜಾ ಇತ್ತೀಚೆಗೆ ಒಂದರ ಹಿಂದೊಂದರಂತೆ ಮಾಸ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ನಾನಾ ರೀತಿಯ ಪಾತ್ರಗಳನ್ನು ನಿರ್ವಹಿಸಿ ಮಾಸ್ ಲುಕ್ಕಿನತ್ತ ಹೊರಳಿಕೊಂಡಿರೋ ಅವರು ಸದ್ಯಕ್ಕೆ ಸದ್ದು ಮಾಡುತ್ತಿರೋದು `ಖಾಕಿ’ ಚಿತ್ರದ ಮೂಲಕ. ಕನ್ನಡ ಚಿತ್ರರಂಗದಲ್ಲಿ ಅದ್ಧೂರಿ ಸಿನಿಮಾಗಳ ನಿರ್ಮಾಪಕರೆಂದೇ ಹೆಸರು ಮಾಡಿರುವ ತರುಣ್ ಶಿವಪ್ಪ ನಿರ್ದೇಶನದಲ್ಲಿ ಮೂಡಿ ಬಂದಿರೋ ಚಿತ್ರವಿದು. ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾಗಿದ್ದ ಟೀಸರ್ ಮೂಲಕ ಖಾಕಿ ಖದರ್‍ನ ಸಣ್ಣ ಝಲಕ್ ಜಾಹೀರಾಗಿತ್ತು. ಆ ಥ್ರಿಲ್ ಇನ್ನೂ ಹಬೆಯಾಡುತ್ತಿರುವಾಗಲೇ `ಖಾಕಿ’ಯ ಕಡೆಯಿಂದ ರೋಮಾಂಚನದ ಕಾವೇರಿಸುವಂಥಾ ಚೆಂದದ ವೀಡಿಯೋ ಸಾಂಗೊಂದು ಬಿಡುಗಡೆಯಾಗಿದೆ.

    ಸಂಜಿತ್ ಹೆಗ್ಡೆ ಮತ್ತು ಇಶಾ ಸುಚಿ ಹಾಡಿರೋ ಈ ಹಾಡು ಸಾಹಿತ್ಯ, ಸಂಗೀತ ಸೇರಿದಂತೆ ಎಲ್ಲ ರೀತಿಯಲ್ಲಿಯೂ ಒಂದೇ ಗುಕ್ಕಿಗೆ ಎಲ್ಲರನ್ನೂ ಆವರಿಸಿಕೊಳ್ಳುವಂತೆ ಮೂಡಿ ಬಂದಿದೆ. ಯಾರೇ ನೀನು, ಯಾರೇ ನೀನು ಎಂಬ ಈ ವೀಡಿಯೋ ಸಾಂಗ್ ರಿತ್ವಿಕ್ ಮುರಳೀಧರ್ ಸಂಗೀತ ಸಂಯೋಜನೆಯೊಂದಿಗೆ ಮೂಡಿ ಬಂದಿದೆ. ಕವಿರತ್ನ ಡಾ ವಿ. ನಾಗೇಂದ್ರ ಪ್ರಸಾದ್ ಬರೆದಿರುವ ಲವಲವಿಕೆಯ ಸಾಲುಗಳಂತೂ ಒಂದೇ ಸಲಕ್ಕೆ ಎಲ್ಲರಿಗೂ ನಾಟುವಂತಿವೆ. ಆಹ್ಲಾದದ ಬುಗ್ಗೆಗಳನ್ನು ಎದೆಯ ಮಿದುವಿಗೆ ಸೋಕಿಸುವಂತಿರೋ ಸಾಹಿತ್ಯ, ಅದಕ್ಕೆ ತಕ್ಕುದಾದ ಸಂಗೀತ ಮತ್ತು ಸಂಜಿತ್ ಹೆಗ್ಡೆ, ಇಶಾ ಸುಚಿಯ ಗಾನ ಮಾಧುರ್ಯದೊಂದಿಗೆ ಈ ಹಾಡು ಖಾಕಿ ಖದರ್‍ಗೂ ರೋಮಾಂಚನ ಮೂಡಿಸುವಂತಿದೆ.

    ಈ ಹಾಡಿನಲ್ಲಿ ಚಿರಂಜೀವಿ ಸರ್ಜಾ ಮತ್ತು ತಾನ್ಯಾ ಹೋಪ್ ಮೋಹಕವಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಖಾಕಿ ಚಿತ್ರದ ಅಸಲಿ ಕಥೆ ಏನೆಂಬುದರ ಸುತ್ತಾ ಥರ ಥರದ ಚರ್ಚೆಗಳು ನಡೆಯುತ್ತಿವೆ. ಇದೊಂದು ಪಕ್ಕಾ ಮಾಸ್ ಚಿತ್ರ. ಖಾಕಿ ಅಂದೇಟಿಗೆ ಪೊಲೀಸ್ ನೆನಪಾಗೋದರಿಂದ ಇಲ್ಲಿ ಚಿರು ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆಂದೇ ಆರಂಭದಲ್ಲಿ ಅಂದುಕೊಳ್ಳಲಾಗಿತ್ತು. ಆದರೆ ಅವರಿಲ್ಲಿ ಕೇಬಲ್ ಆಪರೇಟರ್ ಆಗಿ ನಟಿಸಿದ್ದಾರೆಂಬ ವಿಚಾರ ಇತ್ತೀಚೆಗಷ್ಟೇ ಬಹಿರಂಗಗೊಂಡಿತ್ತು. ಕಥೆಯ ವಿಚಾರ ಏನೋ ಗೊತ್ತಿಲ್ಲ, ಆದರೆ ಆ ಕಥೆಯೊಳಗೊಂದು ಮುದ್ದಾದ ಲವ್ ಸ್ಟೋರಿ ಇದೆ ಎಂಬುದನ್ನು ಈ ವೀಡಿಯೋ ಸಾಂಗ್ ಖಚಿತ ಪಡಿಸಿದೆ. ಇದರೊಂದಿಗೆ ಖಾಕಿ ಖದರ್ ಮೋಹಕ ರೂಪ ಪಡೆದುಕೊಂಡಿದೆ!

  • ತೆರೆ ಕಾಣುವ ಮೊದಲೇ ಹೆಚ್ಚಿದ ಬೇಡಿಕೆ, ಮಲಯಾಳಂಗೆ ಡಬ್ ಆಯ್ತು ‘ಉದ್ಘರ್ಷ’

    ತೆರೆ ಕಾಣುವ ಮೊದಲೇ ಹೆಚ್ಚಿದ ಬೇಡಿಕೆ, ಮಲಯಾಳಂಗೆ ಡಬ್ ಆಯ್ತು ‘ಉದ್ಘರ್ಷ’

    ಥ್ರಿಲ್ಲರ್ ಸಿನಿಮಾಗಳ ಮಾಸ್ಟರ್ ಡೈರೆಕ್ಟರ್ ಸುನೀಲ್ ಕುಮಾರ್ ದೇಸಾಯಿ ದಶಕಗಳ ನಂತರ ಮತ್ತೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಮಾಡ್ತಾರೆ ಅಂದಾಗಲೇ ಅವರ ಅಭಿಮಾನಿಗಳಲ್ಲಿ ಪುಳಕವುಂಟಾಗಿತ್ತು. ಇನ್ನು ದೇಸಾಯಿ ಉದ್ಘರ್ಷ ಚಿತ್ರದ ಫಸ್ಟ್‌ಲುಕ್, ಫಸ್ಟ್‌ಲುಕ್ ಟೀಸರ್, ಪೋಸ್ಟರ್ಸ್ ಒಂದಕ್ಕೊಂದು ವಿಭಿನ್ನವಾಗಿದ್ದು ಚಿತ್ರ ರಸಿಕರ ನಿರೀಕ್ಷೆಯನ್ನು ಹೆಚ್ಚಿಸಿದೆ.


    ಈ ನಡುವೆ ಇದೇ ಮೊದಲ ಬಾರಿಗೆ ಸುನೀಲ್ ಕುಮಾರ್ ದೇಸಾಯಿ ಬಹು ಭಾಷಾ ಚಿತ್ರ ಮಾಡಿದ್ದು ಉದ್ಘರ್ಷ ಚಿತ್ರವನ್ನು ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಿದ್ದಾರೆ. ಅಲ್ಲದೇ, ತಮಿಳಿಗೆ ಉಚ್ಚಕಟ್ಟಂ ಅನ್ನೋ ಹೆಸರಿನಲ್ಲಿ ಡಬ್ ಕೂಡ ಮಾಡಿದ್ದಾರೆ. ಆದ್ರೆ, ಈಗ ಲೇಟೆಸ್ಟ್ ವಿಷಯವೆಂದರೆ, ದೇಸಾಯಿ ಚಿತ್ರಕ್ಕೆ ಮಲಯಾಳಂನಲ್ಲೂ ಬೇಡಿಕೆ ಬಂದಿದ್ದು, ಆ ಭಾಷೆಗೂ ಚಿತ್ರವನ್ನು ದೇಸಾಯಿ ಡಬ್ ಮಾಡಿದ್ದಾರೆ. ದೇಸಾಯಿ ಚಿತ್ರಗಳು ಈ ಹಿಂದೆಯೂ ಮಲಯಾಳಂಗೆ ಡಬ್ ಆಗಿದ್ದವು.

    ಈ ಬಗ್ಗೆ ವಿವರಣೆ ನೀಡಿರೋ ದೇಸಾಯಿ, ನನ್ನ ತರ್ಕ, ನಿಷ್ಕರ್ಷ, ಮರ್ಮ ಚಿತ್ರ ಈಗಾಗಲೇ ಮಲಯಾಳಂ ಭಾಷೆಗೆ ಡಬ್ ಆಗಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿವೆ. ಇದೇ ಹಿನ್ನೆಲೆಯಲ್ಲಿ ಮಲಯಾಳಂ ಇಂಡಸ್ಟ್ರೀಯಿಂದ ಉದ್ಘರ್ಷಕ್ಕೂ ಬೇಡಿಕೆ ಬಂದ ಹಿನ್ನೆಲೆ, ನಾವೇ ಡಬ್ಬಿಂಗ್ ಮಾಡಿಸುತ್ತಿದ್ದೇವೆ. ಈ ಗಾಗಲೇ ಕನ್ನಡ, ತೆಲುಗು, ತಮಿಳು ಡಬ್ಬಿಂಗ್ ಮುಗಿದಿದ್ದು ಮಲಯಾಳಂ ಭಾಷೆಯ ಡಬ್ಬಿಂಗ್ ಕಾರ್ಯವೂ ಭರದಿಂದ ಸಾಗಿದೆ ಅಂತಾ ಹೇಳಿದ್ದಾರೆ. ಅಲ್ಲದೇ, ಅವರೇ ಹೇಳುವಂತೆ ಶೀಘ್ರದಲ್ಲಿಯೇ ನಾಲ್ಕೂ ಭಾಷೆಗಳಲ್ಲಿ ಶೀಘ್ರದಲ್ಲಿಯೇ ಚಿತ್ರದ ಟ್ರೈಲರ್ ಅನ್ನು ರಿಲೀಸ್ ಮಾಡಲಾಗುತ್ತಿದೆಯಂತೆ.


    ಯಾರೆಲ್ಲ ನಟಿಸಿದ್ದಾರೆ ಗೊತ್ತಾ..?!
    ಇನ್ನು, ಚಿತ್ರದಲ್ಲಿ ಸಿಂಗಂ 3 ಖ್ಯಾತಿಯ ಠಾಕೂರ್ ಅನೂಪ್ ಸಿಂಗ್ ನಾಯಕ ನಟರಾಗಿ ನಟಿಸಿದ್ದರೆ, ತಮಿಳಿನ ಕಬಾಲಿ ಖ್ಯಾತಿಯ ಧನ್ಸಿಕಾ ಹಾಗೂ ನವ ನಟಿ ತಾನ್ಯಾ ಹೋಪ್ ನಾಯಕಿಯರಾಗಿ ಅಭಿನಯಿಸಿದ್ದಾರೆ. ಅಲ್ಲದೇ ಬಾಲಿವುಡ್ ವಿಲನ್ ಕಬೀರ್ ಸಿಂಗ್ ದುಹಾನ್, ತೆಲುಗಿನ ಬಾಹುಬಲಿ ಖ್ಯಾತಿಯ ಪ್ರಭಾಕರ್, ಶ್ರವಣ್ ರಾಘವೇಂದ್ರ, ವಂಶಿ ಕೃಷ್ಣ, ಶ್ರದ್ಧಾ ದಾಸ್ ಮುಂತಾದವರು ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಬಹುಭಾಷಾ ತಾರೆ, ಕನ್ನಡಿಗ ಕಿಶೋರ್ ಮತ್ತೊಂದು ಪ್ರಮುಖ ಹಾಗೂ ವಿಶಿಷ್ಟ ಪಾತ್ರದಲ್ಲಿ ನಟಿಸಿದ್ದರೆ, ಹರ್ಷಿಕಾ ಪೂಣಚ್ಚ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಪಿ. ರಾಜನ್ ಹಾಗೂ ದಿವಂಗತ ವಿಷ್ಣುವರ್ಧನ್ ಅವರು ಕ್ಯಾಮರಾ ವರ್ಕ್ ಮಾಡಿದ್ದರೆ, ಹಿಂದಿಯ ಖ್ಯಾತ ಮ್ಯೂಸಿಕ್ ಡೈರೆಕ್ಟರ್ ಸಂಜೋಯ್ ಚೌಧುರಿ ಸಂಗೀತ ನೀಡಿದ್ದಾರೆ. ಇನ್ನು ಚಿತ್ರಕ್ಕೆ ನಿರ್ದೇಶಕ ದೇಸಾಯಿ ಅವರ ಸ್ನೇಹಿತ ಆರ್. ದೇವರಾಜ್ ಹಣ ಹೂಡಿದ್ದು, ರಾಜೇಂದ್ರ ಹಾಗೂ ಡಿ. ಮಂಜುನಾಥ್ ಸಹ ನಿರ್ಮಾಪಕರಾಗಿದ್ದಾರೆ. ಡಿ ಕ್ರಿಯೇಶನ್ಸ್ ಬ್ಯಾನರ್ ಅಡಿ ಚಿತ್ರ ಮೂಡಿ ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದರ್ಶನ್ ಅಭಿಮಾನಿಯಂತೆ ಉದ್ಘರ್ಷ ಹೀರೋ ಅನೂಪ್!

    ದರ್ಶನ್ ಅಭಿಮಾನಿಯಂತೆ ಉದ್ಘರ್ಷ ಹೀರೋ ಅನೂಪ್!

    ಬೆಂಗಳೂರು: ವಿಭಿನ್ನ ಪೋಸ್ಟರ್ ಮೂಲಕವೇ ಚಂದನವನದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಉದ್ಘರ್ಷ ಸಿನಿಮಾ ಹೊಸ ಆಲೋಚನೆಗಳನ್ನು ಪ್ರೇಕ್ಷಕರಲ್ಲಿ ಹುಟ್ಟು ಹಾಕಿತ್ತು. ಈ ಕುತೂಹಲಗಳನ್ನು ಮತ್ತಷ್ಟು ಹೆಚ್ಚು ಮಾಡಿ ಮೊದಲ ಬಾರಿಗೆ ಚಿತ್ರದ ತಂಡ ಮಾಧ್ಯಮಗಳ ಮುಂದೇ ಬಂದಿತ್ತು.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಸುನಿಲ್ ದೇಸಾಯಿ ಅವರು, ಚಿತ್ರದ ಬಗ್ಗೆ ಈ ಸಂದರ್ಭದಲ್ಲಿ ಕಡಿಮೆ ಮಾತನಾಡುತ್ತೇನೆ. ಏಕೆಂದರೆ ಚಿತ್ರದ ನಾಯಕ ನಟ ಠಾಕೂರ್ ಅನೂಪ್ ಸಿಂಗ್ ಪರಿಚಯ ಮಾಡಬೇಕಿದೆ. ಅಲ್ಲದೇ ಚಿತ್ರಕ್ಕಾಗಿ ನಾನು ಅನೂಪ್ ಸಿಂಗ್ ಆಯ್ಕೆ ಮಾಡಿದ ಕುರಿತು ಹೇಳಬೇಕಿದೆ ಎಂದು ಮಾತು ಆರಂಭಿಸಿದರು.

    ಚಿತ್ರ ಕಥೆ ಸಿದ್ಧಗೊಂಡ ಬಳಿಕ ನಾಯಕನ ಹುಡುಕಾಟದಲ್ಲಿದ್ದೆ. ಆಕಸ್ಮಿಕವಾಗಿ ಠಾಕೂರ್ ಅನೂಪ್ ಸಿಂಗ್ ನಾನು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡೆವು. ಒಂದೇ ನೋಟದಲ್ಲಿ ನನ್ನ ಕಥೆಯ ನಾಯಕ ಅವರಲ್ಲಿ ಕಾಣಿಸಿದರು. ನನ್ನ ಸಿನಿಮಾಗೆ ನೀವು ನಾಯಕನಟರಾಗ ಬೇಕು ಎಂದು ಹೇಳುತ್ತಿದಂತೆ ಅನೂಪ್ ಅಚ್ಚರಿಗೊಳಗಾದರು. ಆದರೆ ಚಿತ್ರದ ಕಥೆ ಕೇಳಿದ ಮರುಕ್ಷಣದಲ್ಲಿ ಒಪ್ಪಿಕೊಂಡರು ಎಂದು ಚಿತ್ರ ನಾಯಕ ನಟನ ಹುಡುಕಾಟದ ಹಿಂದಿನ ಕುತೂಹಲ ಕಥೆ ಬಿಚ್ಚಿಟ್ಟರು.

    ಚಿತ್ರದ ಕಥೆಗೆ ಅಭಿನಯ ಮಾತ್ರವಲ್ಲದೇ ವಿಲನ್ ಲುಕ್ ಕೂಡ ಬೇಕಾಗಿದ್ದರಿಂದ ಅವರನ್ನೇ ಆಯ್ಕೆ ಮಾಡಲಾಯಿತು. ಚಿತ್ರದ ಕುರಿತು ಬಹಳ ಆತ್ಮವಿಶ್ವಾಸ ಇದ್ದು, ಸಿನಿ ರಸಿಕರು ನಮಗೇ ಬೆಂಬಲ ನೀಡುತ್ತಾರೆ. ಅನುಪ್ ಕೂಡ ನಾನು ಬಯಸಿದ್ದ ಅಂಶಗಳಿಗಿಂತ ಹೆಚ್ಚಿನದನ್ನು ಚಿತ್ರಕ್ಕೆ ನೀಡಿದ್ದಾರೆ. ಅವರ ಈ ಕೆಲಸ ಶೈಲಿ ಹಾಗೂ ಅವರಿಗೆ ಕೆಲಸ ಮಾಡಲು ಇರುವ ಹಠ ಎಲ್ಲರಿಗೂ ಇಷ್ಟವಾಗುತ್ತದೆ. ಚಿತ್ರೀಕರಣ ವೇಳೆ ಅವರು ಹಲವು ಬಾರಿ ಡ್ಯೂಪ್ ಇಲ್ಲದೇ ಸಾಹಸ ದೃಶ್ಯಗಳನ್ನು ನಡೆಸಿದ್ದಾರೆ. ಸಿನಿಮಾ ನೋಡಿದಾಗ ಅವರ ಶ್ರಮ ನಿಜವಾಗಿ ಅರಿವಾಗುತ್ತದೆ ಎಂದರು.

    ಇದೇ ವೇಳೆ ದರ್ಶನ್ ಬಗ್ಗೆ ಹಾಡಿ ಹೊಗಳಿದ ನಾಯಕ ಠಾಕೂರ್ ಅನೂಪ್ ಸಿಂಗ್, ನಾನು ದರ್ಶನ್ ಅವರ ದೊಡ್ಡ ಅಭಿಮಾನಿ. ಅವರ ಜೊತೆ ಯಜಮಾನ ಚಿತ್ರದಲ್ಲಿ ಅಭಿನಯಿಸಿದ್ದು ತುಂಬಾ ಖುಷಿ ತಂದಿದೆ. ಅವರು ಚಿತ್ರೀಕರಣಕ್ಕೆ ರಾಜನ ಹಾಗೆಯೇ ಬರುತ್ತಾರೆ, ರಾಜನ ಹಾಗೆಯೇ ಹೋಗುತ್ತಾರೆ. ಬಾಲಿವುಡ್‍ನ ಸಲ್ಮಾನ್ ಖಾನ್ ರೀತಿ, ಬಾದ್ ಷಾ ಅವರು. ನನ್ನ ಚಿತ್ರವನ್ನು ನೋಡಿ ಎಂದಿದ್ದಕ್ಕೆ, ತಮ್ಮ ಮೊಬೈಲ್ ನಂಬರ್ ಕೊಟ್ಟು ನಿನಗಾಗಿ ಬರುತ್ತೇನೆ ಎಂದು ಹೇಳಿದರು. ಅವರ ಸರಳ ವ್ಯಕ್ತಿತ್ವ ಕಂಡು ನನಗೆ ಹೆಮ್ಮೆಯಾಯಿತು ಎಂದು ಹೇಳಿದರು.

    ಉದ್ಘರ್ಷ ಚಿತ್ರ ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು ಹಾಗು ಮಲಯಾಳಂನಲ್ಲಿ ಏಕಕಾಲದಲ್ಲಿ ಬಿಡುಗಡೆ ಮಾಡಲು ನಿರ್ದೇಶಕರು ಚಿಂತನೆ ನಡೆಸಿದ್ದಾರೆ. ಅದ್ದರಿಂದಲೇ ನಾಲ್ಕು ಭಾಷೆಗಳಲ್ಲಿ ನಟಿಸಿರುವ ಕಲಾವಿದರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅನೂಪ್ ಈಗಾಗಲೇ ದಕ್ಷಿಣ ಭಾರತದ ಚಿತ್ರರಂಗಕ್ಕೆ ಪರಿಚಿತರಾಗಿದ್ದು, ಕನ್ನಡ, ತಮಿಳು, ತೆಲುಗು ಸೇರಿದಂತೆ ಹಲವು ಸಿನಿಮಾಗಳಲ್ಲಿ ನಡೆಸಿದ್ದಾರೆ. ಕಬಾಲಿ ಚಿತ್ರದಲ್ಲಿ ರಜಿನಿಕಾಂತ್ ಪಕ್ಕ ಮಿಂಚಿದ್ದ ಧನ್ಸಿಕಾ, ತಾನ್ಯಾ ಹೋಪ್, ಕಬೀರ್ ಸಿಂಗ್ ದುಹಾನ್ ಹಾಗೂ ಬಾಹುಬಲಿ ಚಿತ್ರದಲ್ಲಿ ಕಾಲಕೇಯ ಪಾತ್ರದಲ್ಲಿ ನಟಿಸಿದ್ದ ಪ್ರಭಾಕರ್, ಶ್ರದ್ಧಾ ದಾಸ್ ಮುಂತಾದ ನಟರ ಬಹುದೊಡ್ಡ ಪಟ್ಟಿಯೇ ಈ ಚಿತ್ರದಲ್ಲಿ ಇದೆ.

    ಉಳಿದಂತೆ ಉದ್ಘರ್ಷ ಚಿತ್ರದಲ್ಲಿ ಚಿತ್ರದಲ್ಲಿ ಹರ್ಷಿಕಾ ಪೂಣಚ್ಚ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದೇವರಾಜ್ ನಿರ್ಮಾಣ ಮಾಡುತ್ತಿದ್ದಾರೆ. ಮಂಜುನಾಥ್, ತಿರುಮಲೈ, ರಾಜೇಂದ್ರ ಕುಮಾರ್ ಸಹ ನಿರ್ಮಾಪಕರಾಗಿ ಕೈ ಜೋಡಿಸಿದ್ದಾರೆ. ಚಿತ್ರಕ್ಕೆ ಸಂಜೋಯ್ ಚೌಧರಿ ಸಂಗೀತ, ವಿಷ್ಣು ವರ್ಧನ್ ಛಾಯಾಗ್ರಹಣ, ಕೆಂಪರಾಜು ಸಂಕಲನ ಹಾಗೂ ಖ್ಯಾತ ಸಾಹಸ ನಿರ್ದೇಶಕ ರವಿವರ್ಮ ಸಾಹಸ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv