Tag: ತಹಸೀಲ್ದಾರ್

  • ಪಾನಿಪುರಿ, ಗೋಬಿ ಮಂಚೂರಿ ಮಾರುವವರೇ ನಮಗಿಂತ ಸುಖವಾಗಿದ್ದಾರೆ: ಸರ್ಕಾರಿ ನೌಕರಿ ಬಗ್ಗೆ ತಹಸೀಲ್ದಾರ್‌ ಬೇಸರ

    ಪಾನಿಪುರಿ, ಗೋಬಿ ಮಂಚೂರಿ ಮಾರುವವರೇ ನಮಗಿಂತ ಸುಖವಾಗಿದ್ದಾರೆ: ಸರ್ಕಾರಿ ನೌಕರಿ ಬಗ್ಗೆ ತಹಸೀಲ್ದಾರ್‌ ಬೇಸರ

    – ಈಗ ನನಗೆ ಸರ್ಕಾರಿ ನೌಕರಿನೇ ಬೇಡ ಅನ್ನೋ ಹಾಗಾಗಿದೆ
    – ಬಿಪಿ, ಶುಗರ್‌, ಕಿಡ್ನಿ ಸಮಸ್ಯೆ ಎಲ್ಲಾ ಬರ್ತಿದೆ

    ಹಾಸನ: ಪಾನಿಪುರಿ, ಗೋಬಿ ಮಂಚೂರಿ ಅಂಗಡಿ ಇಟ್ಟುಕೊಂಡಿರುವವರು ನಮಗಿಂತ ಸುಖವಾಗಿ ಜೀವನ ಮಾಡ್ತಾರೆ ಎಂದು ಸರ್ಕಾರಿ ನೌಕರಿ ಬಗ್ಗೆ ಹಾಸನದ ಹೊಳೆನರಸೀಪುರ ತಹಸೀಲ್ದಾರ್‌ ಬೇಸರ ವ್ಯಕ್ತಪಡಿಸಿದ್ದಾರೆ.

    ತಾಲೂ ಸರ್ಕಾರಿ ನೌಕರರ ಸಂಘದ ನೂತನ ಸದಸ್ಯರ ಪದಗ್ರಹಣ ಸಮಾರಂಭದಲ್ಲಿ ತಹಸೀಲ್ದಾರ್‌ ಕೆ.ಕೆ.ಕೃಷ್ಣಮೂರ್ತಿ ತಮ್ಮ ಕೆಲಸದ ಒತ್ತಡಗಳ ಬಗ್ಗೆ ಹೇಳಿಕೊಂಡಿದ್ದಾರೆ.

    ನಾನು ಒಬ್ಬ ತಹಸೀಲ್ದಾರ್. ಒಂದು ತಾಲೂಕಿನ ಆಡಳಿತದ ಮುಖ್ಯಸ್ಥನಾಗಿದ್ದೇನೆ. ಈಗ ನನಗೆ ಸರ್ಕಾರಿ ನೌಕರಿನೇ ಬೇಡ ಅನ್ನುವ ಹಾಗಾಗಿದೆ. ನನ್ನ ವೈಯುಕ್ತಿಕವಾಗಿ ಹೇಳುವುದಾದರೆ ಪಾನಿಪುರಿ, ಗೋಬಿ ಮಂಚೂರಿ ಅಂಗಡಿ ಇಟ್ಟುಕೊಂಡಿರುವವರು ನಮಗಿಂತ ಸುಖವಾಗಿ ಜೀವನ ಮಾಡ್ತಾರೆ. ಅವರಿಗೆ ಅಷ್ಟು ಸಮಾಧಾನ, ನೆಮ್ಮದಿ ಇದೆ ಎಂದು ತಿಳಿಸಿದ್ದಾರೆ.

    ಪಾನಿಪುರಿ ಮಾರುವವನು ಹೆಂಡ್ತಿ ಮಕ್ಕಳ ಜೊತೆ ಕಾಲ ಕಳೆಯುತ್ತಾನೆ. ಹೆಂಡ್ತಿ, ಮಕ್ಕಳನ್ನು ಊರಿಗೆ, ಎಲ್ಲಿ ಬೇಕಾದರೂ ಕರೆದುಕೊಂಡು ಹೋಗುತ್ತಾನೆ. ದುರದೃಷ್ಟವಶಾತ್ ನಮ್ಮ ಕುಟುಂಬವನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ದೇವರ ದರ್ಶನ ಮಾಡಿಸೋಕೆ ಯೋಗ್ಯತೆಯಿಲ್ಲ ಹಾಗಾಗಿದೆ. ನಮಗೆ ಬರೀ ಒತ್ತಡ, ಒತ್ತಡ, ಒತ್ತಡ, ಒತ್ತಡ ಎಂದು ಬೇಸರ ಹೊರಹಾಕಿದ್ದಾರೆ.

    ಶಾಸಕಾಂಗ ಏನು ಶಾಸನಗಳನ್ನು ಮಾಡಿಕೊಳ್ಳುತ್ತಾರೆಯೋ ಅವುಗಳನ್ನು ಕಾರ್ಯರೂಪಕ್ಕೆ ತರುವುದು ನಮ್ಮ ಕೆಲಸ. ಎಲ್ಲಾ ಇಲಾಖೆಗಳ ಸವಲತ್ತುಗಳನ್ನು ಎಲ್ಲರಿಗೂ ತಲುಪಿಸಬೇಕು. ಇತ್ತೀಚೆಗೆ ಮೊಬೈಲ್ ಬಂದಿದೆ. ಅದರಲ್ಲಿ ನಮ್ಮ ಪ್ರೋಗ್ರೆಸ್ ವೀಕ್ಷಣೆ ಮಾಡ್ತಾರೆ.‌ ಶೋಕಾಸ್ ನೋಟಿಸ್ ಕೊಡ್ತಾರೆ, ಒತ್ತಡ ಹೇರುತ್ತಾರೆ. ವರ್ಕ್ ಆಫ್ ಲೋಡ್ ಜಾರಿ ಮಾಡ್ತಾರೆ, ಖಂಡನೆ ಮಾಡ್ತಾರೆ. ಇಲಾಖೆ ವಿಚಾರಣೆ ನಡೆಸುತ್ತಾರೆ. ವಾಟ್ಸಪ್‌ ಗ್ರೂಪ್ ಮಾಡ್ತಾರೆ, ಸಂಜೆಯೊಳಗೆ ನಾವು ವರದಿ ಕೊಡಬೇಕು. ಎಷ್ಟು ಚಿತ್ರಹಿಂಸೆ ಆಗ್ತಾ ಇದೆ ಎಂದು ನೊಂದು ನುಡಿದಿದ್ದಾರೆ.

    ಎಂಟು ತಾಲೂಕಿಗೆ ಚಾಲೆಂಜ್ ಮಾಡ್ತೀನಿ. ಹದಿನಾಲ್ಕು ಜನ ಸಿಬ್ಬಂದಿ ಉಪಯೋಗಿಸಿಕೊಂಡು ಕೆಲಸ ಮಾಡುತ್ತಿದ್ದೀನಿ. ನಮ್ಮ ವಿಲೇಜ್ ಅಕೌಂಟೆಟ್ಸ್ ಅಷ್ಟು ಗೋಳು ಹುಯ್ಕೊತಾ ಇದ್ದೀನಿ. ಇದಕ್ಕೆ ಕಾರಣ ಅವೈಜ್ಞಾನಿಕವಾಗಿ ನಮಗೆ ಟಾರ್ಗೆಟ್ ಕೊಡ್ತಾ ಇದ್ದಾರೆ. ಕಾಲಾವಕಾಶ ಕೊಟ್ಟರೆ ಕೆಲಸ ಮಾಡ್ತೇವೆ. ಇಪ್ಪತ್ತೈದು ಕೆಲಸ ಕೊಟ್ಟು ಕಡಿಮೆ ಅವಧಿ ನೀಡಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಇದನ್ನು ಸಮರ್ಥವಾಗಿ ಹೇಳಲು ತಾಕತ್ ಇಲ್ಲ. ಸಮರ್ಪಕವಾಗಿ ಕೆಲಸ ಕೊಡಿ ನಾವು ಮಾಡುತ್ತೇವೆ ಎಂದು ಹೇಳುವ ತಾಕತ್ ಇಲ್ಲ. ಎಷ್ಟು ನೌಕರರು ತಪ್ಪು ಮಾಡದೆ ಬಲಿಪಶು ಆಗುತ್ತಿದ್ದಾರೆ ಎಂದು ತಿಳಿಸಿದ್ದಾರೆ.

    ಉಗುರಷ್ಟು ಮಾಡಿದ ತಪ್ಪಿಗೆ ಕೊಡಲಿಯಷ್ಟು ಶಿಕ್ಷೆ ನೀಡಿ ಮಟಾಶ್ ಮಾಡ್ತಾರೆ. ಏಕಾಏಕಿ ಎಫ್‌ಐಆರ್ ಮಾಡಿ ಅವರ ಮನೆ ಹಾಳು ಮಾಡ್ತಾ ಇದ್ದಾರೆ. ಏನು ತಪ್ಪು ಮಾಡಿದ್ದಾರೆ ನೋಡಲ್ಲ. ಸರ್ಕಾರಿ ನೌಕರರು ಘಾಸಿ ಆಗ್ತಾರೆ, ಅವರ ಕುಟುಂಬ ಆಘಾತಕ್ಕೆ ಒಳಗಾಗುತ್ತಾರೆ. ಸಮರ್ಪಕವಾದ ಕಾರಣ ಇಟ್ಟುಕೊಂಡು ಇಲಾಖಾ ವಿಚಾರಣೆ ಮಾಡಲಿ ಎಂದು ಸಲಹೆ ನೀಡಿದ್ದಾರೆ.

    ಮೊದಲು ಶಿಕ್ಷಕ ವೃತ್ತಿಗೆ ಭಾರಿ ಗೌರವ ಇತ್ತು. ಈಗ ಶಿಕ್ಷಕ ಮಾಡಲು ಕಷ್ಟ ಅದಕ್ಕೆ ಕಾರಣ, ಆ ಮೊಟ್ಟೆ. ನನ್ನ ಹೆಂಡ್ತಿ, ನಾದಿನಿ, ಕೋಬ್ರದರ್ ಕೂಡ ಶಿಕ್ಷಕ. ಐದು ರೂಪಾಯಿ ಸ್ಪಾರ್ಸರ್ ಮೊಟ್ಟೆಗೆ ಏಳು ರೂಪಾಯಿ ಆದರೂ ಟೀಚರ್ ಕೊಡಬೇಕು. ಮೊಟ್ಟೆ ಸೈಜ್ ನೋಡಬೇಕು, ಚಿಕ್ಕಿ ಬೇರೆ. ಇಷ್ಟು ಒತ್ತಡದಲ್ಲಿ ಬೇಯುತ್ತಿದ್ದೇವೆ. ಆಧುನಿಕತೆ ಜಾಸ್ತಿ ಆದಂತೆ ತಲೆನೋವು ಕೂಡ ಜಾಸ್ತಿ ಆಗ್ತಿದೆ. ನಾಳೆಗೆ ಕೆಲಸ ಮಾಡಬೇಕು ಅಂದರೆ ಆಗಲ್ಲ. ಸರ್ಕಾರಿ ‌ನೌಕರರು ಹೈರಾಣಾಗಿ ಹೋಗಿದ್ದಾರೆ. ಬಿಪಿ, ಶುಗರ್, ಕಿಡ್ನಿ, ಲಿವರ್ ಎಲ್ಲಾ ಹೋಗಿದೆ. ಸಮರ್ಥವಾದ ರೀತಿಯಲ್ಲಿ ಹೇಳೋಣ, ಎದೆಯುಬ್ಬಿಸಿ ಮಾತನಾಡಬೇಕು. ಎಷ್ಟೇ ಮೇಲ್ಪಟ್ಟ ಅಧಿಕಾರಿಯಾದರೂ ಗೌರವಕೊಟ್ಟು ಎದೆಕೊಟ್ಟು ಮಾಡಬೇಕು. ನಮ್ಮ ಬೇಡಿಕೆಗಳನ್ನು ಗಮನಕ್ಕೆ ತರಬೇಕು ಎಂದು ಸರ್ಕಾರಿ ನೌಕರರಿಗೆ ಕರೆ ನೀಡಿದ್ದಾರೆ.

  • ಅಂತರ್ಜಾತಿ ವಿವಾಹ – ದಲಿತನೆಂದು ಅಳಿಯನನ್ನೇ ಕೊಂದ ಅತ್ತೆ

    ಅಂತರ್ಜಾತಿ ವಿವಾಹ – ದಲಿತನೆಂದು ಅಳಿಯನನ್ನೇ ಕೊಂದ ಅತ್ತೆ

    ಡೆಹ್ರಾಡೂನ್: ತನ್ನ ಅಳಿಯ ದಲಿತನೆಂಬ ಕಾರಣಕ್ಕೆ ಹುಡುಗಿ ತಾಯಿಯೇ ಅಳಿಯನನ್ನು ಅಪಹರಿಸಿ ಹತ್ಯೆ ಮಾಡಿರುವ ಘಟನೆ ಇಂದು ಉತ್ತರಾಖಂಡದ ಅಲ್ಮೊರಾ ಜಿಲ್ಲೆಯಲ್ಲಿ ನಡೆದಿದೆ.

    ಇಲ್ಲಿನ ಪನು ಅಧೋಖಾನ್ ರಾಜಕೀಯ ದಲಿತ ಮುಖಂಡ ಜಗದೀಶ್ ಚಂದ್ರ ಅವರಿಂದು ಭಿಕಿಯಾಸೈನ್ ಪಟ್ಟಣದಲ್ಲಿ ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಉಪ್ಪಿನ ಉಪವಿಭಾಗದ ತಹಸೀಲ್ದಾರ್ ನಿಶಾ ರಾಣಿ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಬಾಯ್ ಫ್ರೆಂಡ್ ಜೊತೆ ಲಾಡ್ಜ್‌ಗೆ ಹೋಗಿದ್ದ ವಿದ್ಯಾರ್ಥಿನಿ ಹೆಣವಾದ್ಲು – ಕಾರಣ ಮಾತ್ರ ಸಸ್ಪೆನ್ಸ್

    ಮೃತದೇಹವನ್ನು ವಿಲೇವಾರಿ ಮಾಡಲು ಕಾರಿನಲ್ಲಿ ತೆಗೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಪತ್ನಿಯ ತಾಯಿ, ಆಕೆಯ ಮಲತಂದೆ ಹಾಗೂ ಮಲ ಸಹೋದರ ಸಿಕ್ಕಿಬಿದ್ದಿದ್ದು, ತಕ್ಷಣವೇ ಬಂಧಿಸಲಾಗಿದೆ.

    ಆಗಸ್ಟ್ 21ರಂದು ಜಗದೀಶ್ ಚಂದ್ರ ಅಂತರ್ಜಾತಿ ಮಹಿಳೆಯೊಂದಿಗೆ ವಿವಾಹವಾಗಿದ್ದರು. ತಮಗೆ ಜೀವ ಬೆದರಿಕೆ ಬಂದಿರುವುದಾಗಿ ಆಗಸ್ಟ್ 27ರಂದು ಭದ್ರತೆ ಕೋರಿ, ಆಡಳಿತಕ್ಕೆ ಪತ್ರ ಬರೆದಿದ್ದರು. ಸೂಕ್ತ ವ್ಯವಸ್ಥೆ ಕಲ್ಪಿಸ ಹಿನ್ನೆಲೆಯಲ್ಲಿ ಅವರು ಸಾವನ್ನಪ್ಪಿದ್ದಾರೆ. ನಿನ್ನೆ ಪತ್ನಿಯ ತಾಯಿಯೇ ಚಂದ್ರನನ್ನು ಅಪಹರಿಸಿ, ಹತ್ಯೆ ಮಾಡಿದ್ದಾರೆ ಎಂದು ತಹಸೀಲ್ದಾರ್ ಹೇಳಿದ್ದಾರೆ. ಇದನ್ನೂ ಓದಿ: 60 ವರ್ಷ ವಯಸ್ಸಾಗಿದ್ದು, ಹೃದಯ ತುಂಬಾ ಸೂಕ್ಷ್ಮವಾಗಿದ್ರಿಂದ ಪ್ರಾಬ್ಲಂ ಬರೋದು ಸಹಜ: ಡಾ. ರಂಗನಾಥ್

    KILLING CRIME

    ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಉತ್ತರಾಖಂಡ್ ಪರಿವರ್ತನ್ ಪಕ್ಷದ ನಾಯಕ ಪಿ.ಸಿ ತಿವಾರಿ, ಜಗದೀಶ್ ಚಂದ್ರ ಉಪ್ಪಿನ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಚುನಾವಣೆಗೆ ಸ್ಪರ್ಧಿಸಿದರು. ಅವರ ದೂರಿನ ಮೇರೆಗೆ ಭದ್ರತೆ ನೀಡಿದ್ದರೆ ರಕ್ಷಿಸಬಹುದಿತ್ತು. ಈ ಹತ್ಯೆ ಉತ್ತರಾಖಂಡ್‌ಗೆ ನಾಚಿಗೇಡಿನ ಸಂಗತಿಯಾಗಿದೆ. ಮೃತರ ಪತ್ನಿಗೆ 1 ಕೋಟಿ ರೂ. ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬರ ಅಧ್ಯಯನ ಪ್ರವಾಸ – ತಹಸೀಲ್ದಾರರಿಗೆ ಕಪಾಳಕ್ಕೆ ಹೊಡೆಯುತ್ತೇನೆ ಎಂದ ಬಿಎಸ್‍ವೈ

    ಬರ ಅಧ್ಯಯನ ಪ್ರವಾಸ – ತಹಸೀಲ್ದಾರರಿಗೆ ಕಪಾಳಕ್ಕೆ ಹೊಡೆಯುತ್ತೇನೆ ಎಂದ ಬಿಎಸ್‍ವೈ

    ರಾಯಚೂರು: ರಾಜ್ಯದಲ್ಲಿ ಬರ ಅಧ್ಯಯನ ಪ್ರವಾಸ ಕೈಗೊಂಡಿರುವ ಮಾಜಿ ಸಿಎಂ ಯಡಿಯೂರಪ್ಪನವರು ಇಂದು ಜನರಿಗೆ ಮೂಲಭೂತ ಸೌಕರ್ಯಗಳನ್ನು ನೀಡದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಇಂದು ಯಡಿಯೂರಪ್ಪ ಜಿಲ್ಲೆಯ ಲಿಂಗಸುಗೂರಿನ ಛತ್ತರ ತಾಂಡಾದಲ್ಲಿ ಬರ ಅಧ್ಯಯನ ಮಾಡಿದರು. ಈ ವೇಳೆ ಅಧಿಕಾರಿಗಳು ಕುಡಿಯುವ ನೀರು, ಉದ್ಯೋಗಗಳನ್ನು ಸರಿಯಾಗಿ ನೀಡಿಲ್ಲ ಎಂದು ಗ್ರಾಮಸ್ಥರು ಅಹವಾಲುಗಳನ್ನು ನೀಡಿದ್ದಾರೆ. ಇದಕ್ಕೆ ಕೋಪಗೊಂಡ ಬಿಎಸ್‍ವೈ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ತರಾಟೆಗೆ ತೆಗೆದುಕೊಂಡಿದ್ದಾರೆ.

    ಈ ಸಮಯದಲ್ಲಿ ಕುಡಿಯುವ ನೀರಿನ ಪೂರೈಕೆ ಸರಿಯಾಗಿ ಆಗುತ್ತಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ. ಇದಕ್ಕೆ ಸ್ಥಳದಲ್ಲಿ ಇದ್ದ ತಹಶೀಲ್ದಾರ್ ಚಂದ್ರಕಾಂತ್ ಅವರ ಮೇಲೆ ಕೋಪಗೊಂಡ ಯಡಿಯೂರಪ್ಪ ತಹಶೀಲ್ದಾರ್ ಕಪಾಳಕ್ಕೆ ಹೊಡೆಯುತ್ತೇನೆ ಎಂದು ಎಚ್ಚರಿಕೆ ನೀಡಿದರು. ನಂತರ ಸರಿಯಾಗಿ ನೀರು ಪೂರೈಕೆ ಮಾಡುವಂತೆ ತಾಕೀತು ಮಾಡಿದರು.

    ಇದೇ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಿಎಂ ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಯಾವ ಕಾರಣಕ್ಕೆ ಮಾಡುತ್ತಿದ್ದಾರೆ ಎನ್ನುವುದು ಗೊತ್ತಿಲ್ಲ. ಇಲ್ಲಿ ಸಾಕಷ್ಟು ಸಮಸ್ಯೆಗಳಿವೆ ಆದರೂ ಗ್ರಾಮ ವಾಸ್ತವ್ಯ ಮಾಡಲು ಹೊರಟಿದ್ದಾರೆ. ಕೇವಲ ಶಾಲೆಯಲ್ಲಿ ವಾಸ್ತವ್ಯ ಹೂಡಿದರೆ ಸಮಸ್ಯೆ ಬಗೆಹರಿಯುವುದಿಲ್ಲ. ರಾಜ್ಯ ಸರ್ಕಾರದ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಮೈತ್ರಿ ಸರಕಾರ ಬರ ನಿರ್ವಹಣೆ, ಕುಡಿಯುವ ನೀರು ಹಾಗು ಉದ್ಯೋಗ ನೀಡಲು ವಿಫಲವಾಗಿದೆ ಎಂದು ವಾಗ್ದಾಳಿ ಮಾಡಿದರು.

    https://www.youtube.com/watch?v=ICaTbsE2JyA

    ಮಾಧ್ಯಮಗಳ ವಿರುದ್ಧ ಮುಖ್ಯಮಂತ್ರಿಗಳ ಕ್ರಮದ ಬಗ್ಗೆ ಕೇಳಿದಾಗ, ಸಿಎಂ ಮಾಧ್ಯಮಗಳಿಗೆ ಏನು ಮಾಡಲು ಸಾಧ್ಯವಿಲ್ಲ. ನಿಮ್ಮೊಂದಿಗೆ ನಾವು ಇದ್ದೇವೆ, ಮುಂದೆ ಸದನದಲ್ಲಿ ಮಾಧ್ಯಮಗಳ ಪರವಾಗಿ ನಾನು ಮಾತನಾಡುತ್ತೇನೆ ಎಂದು ಹೇಳಿದರು.

  • ದಲಿತರಿಗೆ ಸಾಮಾಗ್ರಿ ನೀಡಿದ್ರೆ 1 ಸಾವಿರ ದಂಡ- ಸಿಎಂ ಜಿಲ್ಲೆಯಲ್ಲಿ ಬಹಿಷ್ಕಾರ ಪೀಡೆ

    ದಲಿತರಿಗೆ ಸಾಮಾಗ್ರಿ ನೀಡಿದ್ರೆ 1 ಸಾವಿರ ದಂಡ- ಸಿಎಂ ಜಿಲ್ಲೆಯಲ್ಲಿ ಬಹಿಷ್ಕಾರ ಪೀಡೆ

    ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನಲ್ಲಿ ದಲಿತರಿಗೆ ಸವರ್ಣಿಯರು ಬಹಿಷ್ಕಾರ ಹಾಕಿರುವ ಘಟನೆ ನಡೆದಿದೆ.

    ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ತರದಲೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ದಲಿತರು ಗ್ರಾಮದಲ್ಲಿರುವ ಸವರ್ಣಿಯರ ಅಂಗಡಿಗಳಲ್ಲಿ ಮನೆ ಸಾಮಗ್ರಿಗಳನ್ನ ಖರೀದಿಸುವಂತಿಲ್ಲ. ಒಂದು ವೇಳೆ ದಲಿತರಿಗೆ ಸಾಮಾಗ್ರಿಗಳನ್ನು ನೀಡಿದರೆ ಅಂತಹವರಿಗೆ ಒಂದು ಸಾವಿರ ರೂ. ದಂಡ ವಿಧಿಸಲಾಗುತ್ತಿದೆ ಎಂದು ಆರೋಪಿಸಲಾಗಿದೆ. ದಲಿತರನ್ನು ಕೂಲಿ ಕೆಲಸಕ್ಕೂ ಸಹ ಕರೆಯಬಾರದು ಎಂದು ದಿಗ್ಬಂಧನ ವಿಧಿಸಿ ಬಹಿಷ್ಕಾರ ಹಾಕಲಾಗಿದೆ ಎಂದು ದಲಿತ ಮುಖಂಡರು ಆರೋಪಿಸಿದ್ದಾರೆ.

    ಈ ಸಂಬಂಧ ತಹಶೀಲ್ದಾರ್ ಕಚೇರಿಗೆ ತರದಲೆ ಗ್ರಾಮದ ದಲಿತ ಮುಖಂಡರು ಮತ್ತು ದಲಿತ ಸಂಘಟನೆ ಕಾರ್ಯಕರ್ತರು ಭೇಟಿ ನೀಡಿ ಗ್ರಾಮದ ಪರಿಸ್ಥಿತಿ ವಿವರಿಸಿ ತಪ್ಪಿತ್ಥರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

    ಗ್ರಾಮದಲ್ಲಿ ಮೂರು ವರ್ಷಗಳ ಹಿಂದೆ ಕ್ಷುಲಕ ಕಾರಣಕ್ಕೆ ದಲಿತರು ಮತ್ತು ಸವರ್ಣಿಯರ ನಡುವೆ ಊರ ಹಬ್ಬದ ವೇಳೆ ಜಗಳ ಉಂಟಾಗಿತ್ತು. ಈಗ ಮತ್ತೆ ಊರ ಹಬ್ಬ ಮಾಡುವ ವೇಳೆ ಹಳೇ ಜಗಳದ ಹಿನ್ನೆಲೆಯಲ್ಲಿ ಸವರ್ಣಿಯರು ದಲಿತರಿಗೆ ಬಹಿಷ್ಕಾರ ಹಾಕಿ ಹಬ್ಬ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗುತ್ತಿದೆ.