Tag: ತಹಶಿಲ್ದಾರ್

  • ಲೋಕಾಯುಕ್ತ ಬಲೆಗೆ ಬಿದ್ದ ಕಂದಾಯ ಇಲಾಖೆಯ ತಹಶೀಲ್ದಾರ್

    ಲೋಕಾಯುಕ್ತ ಬಲೆಗೆ ಬಿದ್ದ ಕಂದಾಯ ಇಲಾಖೆಯ ತಹಶೀಲ್ದಾರ್

    ಬೆಂಗಳೂರು: ಕಂದಾಯ ಇಲಾಖೆಯ (Revenue Department) ವಿಶೇಷ ತಹಶೀಲ್ದಾರ್ (Tehsildar) ಲೋಕಾಯುಕ್ತ (Lokayukta) ಬಲೆಗೆ ಬಿದ್ದಿದ್ದಾರೆ.

    ಖಾತೆ ಮಾಡಿಕೊಡಲು ಬ್ರೋಕರ್ ಮೂಲಕ 5 ಲಕ್ಷಕ್ಕೆ ತಹಶೀಲ್ದಾರ್ ವರ್ಷ ಒಡೆಯರ್ ಬೇಡಿಕೆ ಇಟ್ಟಿದ್ದರು. ಖಚಿತ ಮಾಹಿತಿ ಮೇರೆಗೆ ತಹಶೀಲ್ದಾರ್ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ, ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕೇಸರಿ ರಾಜಕೀಯ ಬಣ್ಣವಾಗೋದು ಬೇಡ – ಸರ್ಕಾರಕ್ಕೆ ಶ್ರೀನಿವಾಸ್ ಪ್ರಸಾದ್ ಸಲಹೆ

    ಸದ್ಯ ಈ ಸಂಬಂಧ ಬ್ರೋಕರ್ ಹಾಗೂ ತಹಶೀಲ್ದಾರ್ ಅನ್ನು ವಶಕ್ಕೆ ಪಡೆದು, ಲೋಕಾಯುಕ್ತ ಕಚೇರಿಗೆ ಕರೆದೊಯ್ದು ಇಬ್ಬರನ್ನು ವಿಚಾರಣೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಯುವತಿಯೊಂದಿಗೆ ಸಲುಗೆಯಿಂದ ಮಾತಾಡಿದ್ದಕ್ಕೆ ವಿದ್ಯಾರ್ಥಿಯನ್ನು ಅಪಹರಿಸಿ ಹಲ್ಲೆ

    Live Tv
    [brid partner=56869869 player=32851 video=960834 autoplay=true]

  • ಕೆಲ್ಸ ಆಗದಿದ್ರೆ ಖಾನಾಪುರ ತೊರೆಯಿರಿ – ಪೆನ್ಷನ್ ಮಾಡಿಕೊಡದ ಅಧಿಕಾರಿಗಳಿಗೆ ಶಾಸಕಿ ನಿಂಬಾಳ್ಕರ್ ಕ್ಲಾಸ್

    ಕೆಲ್ಸ ಆಗದಿದ್ರೆ ಖಾನಾಪುರ ತೊರೆಯಿರಿ – ಪೆನ್ಷನ್ ಮಾಡಿಕೊಡದ ಅಧಿಕಾರಿಗಳಿಗೆ ಶಾಸಕಿ ನಿಂಬಾಳ್ಕರ್ ಕ್ಲಾಸ್

    ಬೆಳಗಾವಿ: ಅರ್ಜಿ ಸಲ್ಲಿಸಿ ವರ್ಷ ಕಳೆದರೂ ಪೆನ್ಷನ್ ಮಾಡಿಕೊಡದ ಅಧಿಕಾರಿಗಳಿಗೆ ಶಾಸಕಿ ಅಂಜಲಿ ನಿಂಬಾಳ್ಕರ್ ಮೈಚಳಿ ಬಿಡಿಸಿದ್ದಾರೆ.

    ಜಿಲ್ಲೆಯ ಖಾನಾಪುರ ಪಟ್ಟಣದ ತಹಶೀಲ್ದಾರ್ ಕಚೇರಿಗೆ ದಿಢೀರ್ ಭೇಟಿ ನೀಡಿದ ಶಾಸಕಿ, ಅರ್ಜಿ ಸಲ್ಲಿಸಿ ಒಂದು ವರ್ಷವಾದರೂ ಪೆನ್ಷನ್ ಮಾಡಿಕೊಡ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಂಜಲಿ ನಿಂಬಾಳ್ಕರ್ ಕಳೆದ ವರ್ಷ 160 ಪೆನ್ಷನ್ ಅರ್ಜಿ ನೀಡಿದ್ದರು. ಒಂದು ವರ್ಷವಾದರೂ ಅಧಿಕಾರಿಗಳು ಪೆನ್ಷನ್ ಮಾಡಿಕೊಟ್ಟಿರಲಿಲ್ಲ, ಈ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡಿದ್ದಾರೆ.

    ಒಂದು ವರ್ಷವಾದರೂ ಅರ್ಜಿಯನ್ನು ವಿಲೇವಾರಿ ಮಾಡದ್ದಕ್ಕೆ ಪೆನ್ಷನ್ ಸೂಪರ್ ವೈಸರ್ ಮತ್ತು ಕೇಸ್ ವರ್ಕರ್‌ಗೆ ಶಾಸಕಿ ಮೈಚಳಿ ಬಿಡಿಸಿದ್ದು, ದಾಖಲೆ ಸಮೇತ ಕಚೇರಿಗೆ ಆಗಮಿಸಿ ಅಧಿಕಾರಿಗಳಿಗೆ ಬೆವರಿಳಿಸಿದ್ದಾರೆ. ಜನರ ಪರವಾಗಿ ಕೆಲಸ ಮಾಡದಿದ್ದರೆ ಖಾನಾಪುರ ಬಿಡುವಂತೆ ಎಚ್ಚರಿಕೆ ನೀಡಿದ್ದಾರೆ.

    ಯಾವ ರೀತಿ ಅರ್ಜಿಗಳ ವಿಲೇವಾರಿ ಮಾಡುತ್ತೀರಿ ಹೇಳಿ, ಅಧಿಕಾರಿಗಳು ಶಾಸಕಿ ಮುಂದೆಯೇ ನನ್ನ ವ್ಯಾಪ್ತಿಗೆ ಬರುವುದಿಲ್ಲ ಎಂದು ಒಬ್ಬರ ಮೇಲೆ ಒಬ್ಬರು ಹಾಕಿ ಜಾರಿಕೊಳ್ಳಲು ಯತ್ನಿಸಿದರು. ಮಧ್ಯಾಹ್ನ ಆದರೂ ಎರಡನೇ ದರ್ಜೆ ಅಧಿಕಾರಿಗಳು ಕಚೇರಿಗೆ ಬಂದಿರಲಿಲ್ಲ. ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

    ಅಧಿಕಾರಿಗಳ ಮಾತಿನಿಂದ ಬೇಸರಗೊಂಡ ಶಾಸಕಿ ಅಂಜಲಿ ನಿಂಬಾಳ್ಕರ್, ನಿಮ್ಮ ವೇತನ ಆಗದಿದ್ದರೆ ಸರ್ಕಾರ ಮತ್ತು ತಹಶಿಲ್ದಾರ ತಲೆ ತಿನ್ನುತ್ತೀರಿ. ನಮ್ಮ ಕೆಲಸವನ್ನು ಸರಿಯಾಗಿ ಮಾಡಿಕೊಡಿ ಎಂದು ಕೇಸ್ ವರ್ಕರ್‌ಗೆ ಕೈ ಮುಗಿದು ಬೇಡಿಕೊಂಡಿದ್ದಾರೆ. ನಿಮ್ಮ ಕಾಲಿಗೆ ಬೇಕಾದರೂ ಬೀಳುತ್ತೇನೆ ಕೆಲಸ ಮಾಡಿ. ಜನರ ಬಗ್ಗೆ ಸ್ವಲ್ಪ ಕಳಕಳಿ ಇಟ್ಟುಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

  • ಕಲಬುರಗಿಯ ಬೋರ್‌ವೆಲ್‌ನಲ್ಲಿ ಬಿಸಿನೀರು – ಆಶ್ಚರ್ಯಕ್ಕೊಳಗಾದ ಜನತೆ

    ಕಲಬುರಗಿಯ ಬೋರ್‌ವೆಲ್‌ನಲ್ಲಿ ಬಿಸಿನೀರು – ಆಶ್ಚರ್ಯಕ್ಕೊಳಗಾದ ಜನತೆ

    ಕಲಬುರಗಿ: ಮನೆಯಲ್ಲಿ ಹಾಕಿಸಿದ ಬೋರ್ ವೆಲ್‍ನಲ್ಲಿ ಬಿಸಿನೀರು ಬರುತ್ತಿರುವ ಅಚ್ಚರಿ ಘಟನೆ ಚಿಂಚೋಳಿ ತಾಲೂಕಿನ ಚಂದಾಪುರ ಪಟ್ಟಣದಲ್ಲಿ ನಡೆದಿದೆ.

    ಚಂದಾಪುರ ಪಟ್ಟಣದಲ್ಲಿ ಶಿವಕುಮಾರ್ ಐನೋಳಿ ಎಂಬುವವರ ಮನೆಯಲ್ಲಿ ಎರಡು ದಿನದ ಹಿಂದೆ ಬೋರ್ ಹಾಕಿಸಿದ್ದು, ಬೋರ್‌ವೆಲ್‌ನಲ್ಲಿ ಬಿಸಿನೀರು ಬರುತ್ತಿವೆ.

    ಬೋರ್‌ವೆಲ್‌ ಹಾಕಿಸಿದ ನಂತರ ನೀರು ಬಳಕೆ ಮಾಡಲು ಮುಂದಾದಾಗ ನೀರು ಬಿಸಿಯಿರುವುದು ಗೊತ್ತಾಗಿದೆ. ಈ ಅಚ್ಚರಿ ವಿಷಯ ತಿಳಿಯುತ್ತಿದಂತೆ ಪಟ್ಟಣದ ಜನ ನೀರು ನೋಡಲು ಶಿವಕುಮಾರ್ ಮನೆಯತ್ತ ದೌಡಾಯಿಸುತ್ತಿದ್ದಾರೆ. ವಿಷಯ ತಿಳಿದ ಚಿಂಚೋಳಿ ತಹಶೀಲ್ದಾರ್ ಪಂಡಿತ ಬಿರಾದಾರ, ಮನೆಗೆ ಭೇಟಿ ನೀಡಿ ಬಿಸಿನೀರು ಬರುತ್ತಿರುವುದನ್ನು ಪರಿಶೀಲಿಸಿದ್ದಾರೆ.

    ತಹಶೀಲ್ದಾರ್ ಅವರು ಭೂ ವಿಜ್ಞಾನಿಗಳನ್ನು ಕಳುಹಿಸಿ ಬಿಸಿನೀರು ಬರಲು ಕಾರಣ ಪತ್ತೆಹಚ್ಚುವಂತೆ ತಿಳಿಸುವುದಾಗಿ ಬೋರ್‌ವೆಲ್‌ ಮಾಲೀಕರಿಗೆ ತಿಳಿಸಿದ್ದಾರೆ. ಭೂ ವಿಜ್ಞಾನಿಗಳು ಬಂದು ಪರಿಶೀಲಿಸಿದ ನಂತರವಷ್ಟೇ ಬೋರ್‌ವೆಲ್‌ನಲ್ಲಿ ಬಿಸಿನೀರು ಬರಲು ಕಾರಣವೇನು ಎಂಬುದು ತಿಳಿಯಬೇಕಿದೆ.

  • ನೀನೇನ್ ಸಾಫ್ಟ್ ವೇರ್ ಎಂಜಿನಿಯರಾ?- ಯುವತಿಗೆ ತಹಶೀಲ್ದಾರ್ ಅವಾಜ್

    ನೀನೇನ್ ಸಾಫ್ಟ್ ವೇರ್ ಎಂಜಿನಿಯರಾ?- ಯುವತಿಗೆ ತಹಶೀಲ್ದಾರ್ ಅವಾಜ್

    ತುಮಕೂರು: ಜಾತಿ ಹಾಗೂ ಆದಾಯ ಪ್ರಮಾಣ ಪತ್ರಕ್ಕಾಗಿ ಕಚೇರಿಗೆ ಬಂದ ಸಾರ್ವಜನಿಕರಿಗೆ ಗ್ರೇಡ್-2 ತಹಶೀಲ್ದಾರ್ ಅವಾಜ್ ಹಾಕಿದ್ದಾರೆ.

    ಡಿ.ಸಿ.ಕಚೇರಿಯಲ್ಲಿರುವ ಪ್ರಮಾಣಪತ್ರ ವಿತರಣಾ ಕೇಂದ್ರದ ಬಳಿ ಜಾತಿ ಹಾಗೂ ಆದಾಯ ಪ್ರಮಾಣ ಪತ್ರಕ್ಕಾಗಿ ನೂರಾರು ಜನರು ಸಾಲಿನಲ್ಲಿ ನಿಂತಿದ್ರು. ಪ್ರಮಾಣ ಪತ್ರ ವಿತರಣೆ ವೇಳೆ ಕಂಪ್ಯೂಟರ್ ಆಪರೇಟರ್ ತಾಂತ್ರಿಕ ಕಾರಣ ಹೇಳಿ ಸರ್ಟಿಫಿಕೇಟ್ ನೀಡಲು ವಿಳಂಬ ಮಾಡುತ್ತಿದ್ದರು.

    ಹೀಗೆ ಕಂಪ್ಯೂಟರ್ ಆಪರೇಟರ್ ವಿನಾಕಾರಣ ವಿಳಂಬ ಮಾಡುತ್ತಿದ್ದುದನ್ನು ಅಲ್ಲಿ ನಿಂತಿದ್ದ ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಇದರಿಂದ ಸಿಡಿಮಿಡಿಗೊಂಡ ಗ್ರೇಡ್ -2 ತಹಶೀಲ್ದಾರ್ ಇಂದಿರಾ, ಯುವತಿಯೋರ್ವಳಿಗೆ ಕಚೇರಿಯಲ್ಲೇ ಅವಾಜ್ ಹಾಕಿದ್ದಾರೆ.

    ನೀನೇನ್ ಸಾಫ್ಟ್ ವೇರ್ ಇಂಜಿನಿಯರಾ? ಹಾಗಾದ್ರೆ ಬಂದು ರಿಪೇರಿ ಮಾಡು ಎಂದಿದ್ದಾರೆ. ಬ್ಯಾಂಕಲ್ಲಿ ಗಂಟೆಗಟ್ಟಲೆ ಕ್ಯೂ ನಿಲ್ಲುತ್ತೀರಾ? ಇಲ್ಲಿ ನಿಂತುಕೊಳ್ಳೋಕೆ ಏನಾಗತ್ತೆ ನಿಮಗೆ? ಎಂದು ದರ್ಪ ಮೆರೆದಿದ್ದಾರೆ. ಯಾರಿಗೆ ಬೇಕಾದ್ರೂ ಈ ಕುರಿತು ದೂರು ಕೊಡಿ ನಮಗೆ ಏನೂ ಮಾಡೋಕೆ ಆಗಲ್ಲ ಎಂದು ಅವಾಜ್ ಹಾಕಿದ್ದಾರೆ.