Tag: ತವಾ

  • ಊಟ ನೀಡಲು ತಡವಾಗಿದ್ದಕ್ಕೆ ತವಾದಿಂದ ಹೊಡೆದು ಪತ್ನಿಯ ಕೊಲೆ

    ಊಟ ನೀಡಲು ತಡವಾಗಿದ್ದಕ್ಕೆ ತವಾದಿಂದ ಹೊಡೆದು ಪತ್ನಿಯ ಕೊಲೆ

    ಲಕ್ನೋ: ರಾತ್ರಿ ಊಟ ನೀಡಲು ತಡ ಮಾಡಿದ್ದಕ್ಕೆ ಪತಿಯೊಬ್ಬ ತವಾದಿಂದ(Tawa) ಪತ್ನಿಯ(Wife) ತಲೆಗೆ ಹೊಡೆದು ಹತ್ಯೆ ಮಾಡಿದ ಘಟನೆ ನೋಯ್ಡಾದಲ್ಲಿ ನಡೆದಿದೆ.

    ಬಿಹಾರ್ ಮೂಲದ ಅನುಜ್ ಕುಮಾರ್ (37) ಪತ್ನಿ ಖುಷ್ಬುಳನ್ನು ಹತ್ಯೆ ಮಾಡಿದ್ದಾನೆ. ಈತ ನೋಯ್ಡಾದಲ್ಲಿ ಆಟೋ ರಿಕ್ಷಾ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಅನುಜ್ ರಾತ್ರಿ ಊಟಕ್ಕೆಂದು ಮನೆಗೆ ತೆರಳಿದ್ದ.

    crime

    ಆದರೆ ಆತನ ಪತ್ನಿ ಖುಷ್ಬು ಊಟ ತಯಾರು ಮಾಡಲು ವಿಳಂಬ ಮಾಡಿದ್ದಾಳೆ. ಇದರಿಂದ ಕೋಪಗೊಂಡ ಅನುಜ್ ಪತ್ನಿ ಖುಷ್ಬು ಬಳಿ ವಾಗ್ವಾದ ನಡೆಸಿದ್ದಾನೆ. ಇದಾದ ಬಳಿಕ ಖುಷ್ಬುವಿನ ತಲೆಗೆ ಅಲ್ಲೇ ಇದ್ದ ತವಾದಿಂದ ಹೊಡೆದಿದ್ದಾನೆ. ತೀವ್ರ ಗಾಯಗೊಂಡ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಅಲ್ಲಿ ಪ್ರವಾಹ ಆಗಿಲ್ಲ, ಆ ಮೋರಿ ಎಲ್ಲಿದೆ, ಎಲ್ಲಿಗೆ ಹೋಗಿ ತಲುಪುತ್ತೆ ಗೊತ್ತಿಲ್ಲ: ಹ್ಯಾರಿಸ್

    ಪತಿ, ಪತ್ನಿ ಇಬ್ಬರೂ ಬಿಹಾರ ಮೂಲದವರಾಗಿದ್ದು, ಇವರಿಗೆ ಓರ್ವ ಪುತ್ರನಿದ್ದಾನೆ. ಘಟನೆಗೆ ಸಂಬಂಧಿಸಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ನೋಯ್ಡಾ ಪೊಲೀಸರು ಅನುಜ್‍ನನ್ನು ಬಂಧಿಸಿದ್ದಾರೆ.(Arrest) ಇದನ್ನೂ ಓದಿ: ಇನ್ಮುಂದೆ ಟೋಲ್‌ಗಳಲ್ಲಿ ವಾಹನ ನಿಲ್ಲಿಸುವಂತಿಲ್ಲ- ಟೋಲ್ ಸಂಗ್ರಹಕ್ಕೆ ವಿಶೇಷ ತಂತ್ರಜ್ಞಾನ ಅಳವಡಿಕೆಗೆ ಚಿಂತನೆ

    Live Tv
    [brid partner=56869869 player=32851 video=960834 autoplay=true]

  • ಪಂಜಾಬ್ ಫೇಮಸ್ ತವ ತಂದೂರಿ ರೋಟಿ ಮಾಡುವ ವಿಧಾನ

    ಪಂಜಾಬ್ ಫೇಮಸ್ ತವ ತಂದೂರಿ ರೋಟಿ ಮಾಡುವ ವಿಧಾನ

    ಪಾತಿ ನಂತರ ರೋಟಿ ಈಗ ಫುಲ್ ಟ್ರೆಂಡ್ ಕ್ರಿಯೇಟ್ ಮಾಡಿದೆ. ಇದು ಪಂಜಾಬಿ ಸ್ಟೈಲ್ ಆಗಿದ್ದು, ಎಲ್ಲ ಭಾರತೀಯರು ಇಷ್ಟಪಟ್ಟು ತಿನ್ನುವ ತಿನಿಸಿನಲ್ಲಿ ಇದು ಸಹ ಒಂದು. ಅದರಲ್ಲಿಯೂ ರೆಸ್ಟೋರೆಂಟ್ ಮತ್ತು ಹೋಟೆಲ್‍ನಲ್ಲಿ ಮಾಡುವ ತಂದೂರಿ ರೋಟಿ ಸ್ವಲ್ಪ ಹೆಚ್ಚು ಜನರು ಇಷ್ಟಪಡುತ್ತಾರೆ. ಅದಕ್ಕೆ ಇಂದು ತವಾ ಮೇಲೆ ಹೇಗೆ ತಂದೂರಿ ರೋಟಿ ಮಾಡಬಹುದು ಎಂದು ಸರಳ ವಿಧಾನದಲ್ಲಿ ಹೇಳಿಕೊಡುತ್ತಿದ್ದೇವೆ.

    ಬೇಕಾಗಿರುವ ಪದಾರ್ಥಗಳು:
    * ಗೋಧಿ ಹಿಟ್ಟು – 2ವರೆ ಕಪ್
    * ಸಕ್ಕರೆ – 1 ಟೀಸ್ಪೂನ್
    * ಬೇಕಿಂಗ್ ಪೌಡರ್ – 1 ಟೀಸ್ಪೂನ್
    * ಅಡಿಗೆ ಸೋಡಾ – ಅರ್ಧ ಟೀಸ್ಪೂನ್
    * ಉಪ್ಪು – ಅರ್ಧ ಟೀಸ್ಪೂನ್
    * ಮೊಸರು – ಅರ್ಧ ಕಪ್
    * ನೀರು – 1 ಕಪ್
    * ಎಣ್ಣೆ – 2 ಟೇಬಲ್ಸ್ಪೂನ್

    ಮಾಡುವ ವಿಧಾನ:
    * ಮೊದಲನೆಯದಾಗಿ, ದೊಡ್ಡ ಬಟ್ಟಲಿನಲ್ಲಿ ಗೋಧಿ ಹಿಟ್ಟು, ಸಕ್ಕರೆ, ಬೇಕಿಂಗ್ ಪೌಡರ್, ಅಡಿಗೆ ಸೋಡಾ ಮತ್ತು ಉಪ್ಪು ಹಾಕಿ ಸರಿಯಾಗಿ ಕಲಸಿ. * ನಂತರ ಅದಕ್ಕೆ ಮೊಸರು ಸೇರಿಸಿ ಹಿಟ್ಟನ್ನು ಬೆರೆಸಲು ಪ್ರಾರಂಭಿಸಿ. ಅಗತ್ಯವಿರುವಷ್ಟು ನೀರನ್ನು ಸೇರಿಸಿ, 5 ನಿಮಿಷಗಳ ಕಾಲ ಬೆರೆಸುವುದನ್ನು ಮುಂದುವರಿಸಿ.
    * ಈಗ 2 ಟೇಬಲ್ಸ್ಪೂನ್ ಎಣ್ಣೆಯನ್ನು ಸೇರಿಸಿ, ಹಿಟ್ಟು ನಯವಾಗಿ ಮತ್ತು ಮೃದುವಾಗುವವರೆಗೆ ನಾದಿಕೊಳ್ಳಿ. 1 ಗಂಟೆ ಮುಚ್ಚಿಡಿ.
    * 1 ಗಂಟೆಯ ನಂತರ, ಹಿಟ್ಟನ್ನು ಮೃದುವಾಗಿರುವುದನ್ನು ಖಚಿತಪಡಿಸಿಕೊಳ್ಳಿ.


    * ಚೆಂಡು ಗಾತ್ರದಲ್ಲಿ ಹಿಟ್ಟನ್ನು ತೆಗೆದು ಮತ್ತು ಗೋಧಿ ಹಿಟ್ಟಿನೊಂದಿಗೆ ಒತ್ತಿ ನಿಧಾನವಾಗಿ ರೋಲ್ ಮಾಡಿ. ರೋಟಿ ಸ್ವಲ್ಪ ದಪ್ಪವಾಗಿದೆಯೇ ಎಂದು ನೋಡಿ.
    * ಈಗ ಸ್ವಲ್ಪ ನೀರು/ಎಣ್ಣೆ ಹಾಕಿ ರೋಟಿಯನ್ನು ವೃತ್ತಕಾರವಾಗಿ ಒತ್ತಿ.
    * ಮಧ್ಯಮ ಉರಿಯಲ್ಲಿ ತವಾವನ್ನು ಬಿಸಿ ಮಾಡಿ, ರೋಟಿಯನ್ನು ತವಾಕ್ಕೆ ಹಾಕಿ. ಎರಡು ಕಡೆ ಸಮವಾಗಿ ಬೇಯಿಸಿ.

    – ಅಂತಿಮವಾಗಿ, ತಂದೂರಿ ರೋಟಿ ಮೇಲೆ ಬೆಣ್ಣೆಯಾಕಿ, ನಿಮಗಿಷ್ಟವಾದ ಕರಿಯೊಂದಿಗೆ ಆನಂದಿಸಿ.

    Live Tv
    [brid partner=56869869 player=32851 video=960834 autoplay=true]