Tag: ತವರು ಮನೆ

  • ಮಗಳು ತವರು ಮನೆ ಬಿಟ್ಟು ಹೋಗುವಂತೆ ಹೋಗ್ತಿದ್ದೇನೆ – ರೋಹಿಣಿ ಸಿಂಧೂರಿ

    ಮಗಳು ತವರು ಮನೆ ಬಿಟ್ಟು ಹೋಗುವಂತೆ ಹೋಗ್ತಿದ್ದೇನೆ – ರೋಹಿಣಿ ಸಿಂಧೂರಿ

    ಮೈಸೂರು: ಮೈಸೂರು ನನಗೆ ತಾಯಿ ಮನೆ ಅನುಭವ ನೀಡಿದೆ. ಇದೀಗ ಮಗಳು ತವರು ಮನೆ ಬಿಟ್ಟು ಹೋಗುವಂತೆ ಜಿಲ್ಲೆಯಿಂದ ನಿರ್ಗಮಿಸುತ್ತಿದ್ದೇನೆ ಎಂದು ರೋಹಿಣಿ ಸಿಂಧೂರಿ ಭಾವನಾತ್ಮಕ ನುಡಿಗಳನ್ನು ನುಡಿದಿದ್ದಾರೆ.


    ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರೋಹಿಣಿ ಸಿಂಧೂರಿ, ವರ್ಗಾವಣೆ ಬಳಿಕ ಸಾಕಷ್ಟು ಜನ ತಮ್ಮ ಪ್ರೀತಿ ಮತ್ತು ಅಭಿಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಒಬ್ಬ ಮಗಳಾಗಿ ಮೈಸೂರಿನ ಎಲ್ಲಾ ಜನತೆಗೆ ನಾನು ಧನ್ಯವಾದ ಹೇಳುತ್ತೇನೆ. ಉತ್ತಮ ಕೆಲಸ ಮಾಡುವ ಸಂದರ್ಭದಲ್ಲಿ ಈ ರೀತಿಯಾಗುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಆದರೂ ಮಗಳು ತವರು ಮನೆ ಬಿಟ್ಟು ಹೋಗುವಂತೆ ಹೋಗುತ್ತಿದ್ದೇನೆ ಎಂದರು. ಇದನ್ನೂ ಓದಿ: ರೋಹಿಣಿ ಸಿಂಧೂರಿ ನನ್ನನ್ನ ಟಾರ್ಗೆಟ್ ಮಾಡ್ತಿದ್ದಾರೆ: ರಾಜೀನಾಮೆ ನೀಡಿ ಕಣ್ಣೀರಿಟ್ಟ ಶಿಲ್ಪಾನಾಗ್

    ಹೊಸದಾಗಿ ಬಂದ ಜಿಲ್ಲಾಧಿಕಾರಿಗೆ ಶುಭಾಶಯ ಹೇಳಲು ಬಂದಿದ್ದೆ. ಜಿಲ್ಲೆಯ ವಸ್ತುಸ್ಥಿತಿ ಬಗ್ಗೆ ಮಾಹಿತಿ ನೀಡಿದ್ದೇನೆ. ಜಿಲ್ಲೆಯಲ್ಲಿ ಕೋವಿಡ್ ಕೆಲಸಗಳ ಬಗ್ಗೆಯೂ ಮಾಹಿತಿ ನೀಡಿದ್ದೇನೆ. ಒಳ್ಳೆಯ ಕೆಲಸ ಮಾಡುವ ಸಮಯದಲ್ಲಿ ಈ ವರ್ಗಾವಣೆ ಆಗಿದೆ. ಏನು ನಡೆದಿದೆ ಹೇಗೆ ನಡೆದಿದೆ ಅನ್ನೋದು ಎಲ್ಲರ ಮುಂದೆ ನಡೆದಿದೆ. ನಾನು ಅದರ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಅವರ ಹತಾಶೆ ಹಾಗೂ ಅಭದ್ರತೆ, ಒತ್ತಾಸೆಗೆ ಈ ರೀತಿ ಮಾತನಾಡೋದು ಸರಿಯಲ್ಲ ಎಂದರು. ಇದನ್ನೂ ಓದಿ:ರೋಹಿಣಿ ಸಿಂಧೂರಿ, ಶಿಲ್ಪಾ ನಾಗ್ ಇಬ್ಬರೂ ವರ್ಗಾವಣೆ- ಸರ್ಕಾರದಿಂದ ಆದೇಶ

    ಯಾವುದೋ ಕಾರಣಕ್ಕೆ ಅಧಿಕಾರಿಯನ್ನು ತೆಗೆಸಿ ಮಿಷನ್ ಮುಗಿಯಿತು ಅಂದುಕೊಳ್ಳೋದು ತಪ್ಪು. ಈ ಥರ ಬೆಳವಣಿಗೆ ಯಾವ ಜಿಲ್ಲೆಯಲ್ಲೂ ಯಾವ ಸಂಸ್ಥೆಯಲ್ಲೂ ಆದರೂ ವ್ಯವಸ್ಥೆ ಸರಿ ಮಾಡಲು ಆಗುವುದಿಲ್ಲ ಎಂದು ಹೇಳಿದರು.

    ರೋಹಿಣಿ ಸಿಂಧೂರಿ ಭೂ ಮಾಫೀಯಾಗೆ ಬಲಿಯಾದರು ಎಂಬ ಪತ್ರಕರ್ತರ ಪ್ರಶ್ನೆಗೆ ನೋ ಕಾಮೆಂಟ್, ಥ್ಯಾಂಕ್ಯೂ ಮೈಸೂರು ಎಂದು ಹೇಳಿ ರೋಹಿಣಿ ಸಿಂಧೂರಿ ನಿರ್ಗಮಿಸಿದರು.ಇದನ್ನೂ ಓದಿ: CSR ಫಂಡ್ ಲೆಕ್ಕ ನೀಡಿಲ್ಲ, ಕೋವಿಡ್ ಕೇರ್ ಸೆಂಟರ್ ತೆರೆದಿಲ್ಲ- ಶಿಲ್ಪಾ ನಾಗ್ ವಿರುದ್ಧ ಡಿಸಿ ರೋಹಿಣಿ ಸಿಂಧೂರಿ ಪ್ರತ್ಯಾರೋಪ

    ವರ್ಗಾವಣೆ

    ಇಬ್ಬರು ಮಹಿಳಾ ಐಎಎಸ್ ಅಧಿಕಾರಿಗಳ ಕಿತ್ತಾಟ ಪ್ರಕರಣ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಸರ್ಕಾರ ಸಹ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿತ್ತು. ಇದಾದ ಬೆನ್ನಲ್ಲೇ ಇದೀಗ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಇಬ್ಬರನ್ನೂ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

    ರೋಹಿಣಿ ಸಿಂಧೂರಿ ಅವರನ್ನು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಾಗಿ ವರ್ಗಾವಣೆ ಮಾಡಲಾಗಿದ್ದು, ಶಿಲ್ಪಾ ನಾಗ್ ಅವರನ್ನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಇ-ಗವರ್ನೆನ್ಸ್ ನಿರ್ದೇಶಕರನ್ನಾಗಿ ವರ್ಗಾವಣೆಗೊಳಿಸಲಾಗಿದೆ.

    ವಾಣಿಜ್ಯ ತೆರಿಗೆಗಳ ಹೆಚ್ಚುವರಿ ಆಯುಕ್ತರಾಗಿದ್ದ ಬಗಾದಿ ಗೌತಮ್ ಅವರನ್ನು ಮೈಸೂರು ಜಿಲ್ಲಾಧಿಕಾರಿಯನ್ನಾಗಿ ವರ್ಗಾವಣೆಗೊಳಿಸಲಾಗಿದೆ. ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ ಎಂಡಿ ಲಕ್ಷ್ಮಿಕಾಂತ್ ರೆಡ್ಡಿ ಅವರನ್ನು ಮೈಸೂರು ಮಹಾನಗರ ಪಾಲಿಕೆ ಆಯುಕ್ತರನ್ನಾಗಿ ತಕ್ಷಣಕ್ಕೆ ಜಾರಿಗೆ ಬರುವಂತೆ ಆದೇಶಿಸಲಾಗಿದೆ.

    ಬಿಬಿಎಂಪಿ ವಿಶೇಷ ಆಯುಕ್ತರಾಗಿದ್ದ ಪಿ.ರಾಜೇಂದ್ರ ಚೋಳನ್ ಅವರಿಗೆ ಹೆಚ್ಚುವರಿಯಾಗಿ ಬೆಸ್ಕಾಂ ಎಂಡಿಯಾಗಿ ಜವಾಬ್ದಾರಿಯನ್ನು ನೀಡಲಾಗಿದೆ. ಬೆಸ್ಕಾಂ ಎಂಡಿ ಆಗಿದ್ದ ರಾಜೇಶ್ ಗೌಡ ಅವರನ್ನು ಬಿಡುಗಡೆಗೊಳಿಸಲಾಗಿದೆ.

  • ತವರು ಮನೆಗೆ ಹೋಗಲು ಬಿಡದ ಪತಿಯ ಮರ್ಮಾಂಗವನ್ನೇ ಕತ್ತರಿಸಿದ್ಲು

    ತವರು ಮನೆಗೆ ಹೋಗಲು ಬಿಡದ ಪತಿಯ ಮರ್ಮಾಂಗವನ್ನೇ ಕತ್ತರಿಸಿದ್ಲು

    – ಪರೀಕ್ಷೆ ಬರೆಯಲು ತವರು ಮನೆಗೆ ಹೋಗುತ್ತೇನೆ ಎಂದ ಪತ್ನಿ

    ರಾಂಚಿ: ತವರು ಮನೆಗೆ ಹೋಗಲು ಬಿಡಲಿಲ್ಲ ಎಂದು ಪತ್ನಿಯೊಬ್ಬಳು ತನ್ನ ಪತಿಯ ಮರ್ಮಾಂಗವನ್ನೇ ಕತ್ತರಿಸಿದ ಘಟನೆ ಜಾರ್ಖಂಡ್‍ನ ಗಿರಿಹಿಡ್ ಜಿಲ್ಲೆಯಲ್ಲಿ ನಡೆದಿದೆ.

    ಪತ್ನಿ ತಾನು ತನ್ನ ತವರು ಮನೆಗೆ ಹೋಗುತ್ತೇನೆ ಎಂದು ಹಠ ಮಾಡುತ್ತಿದ್ದಳು. ಆದರೆ ಪತಿ ಆಕೆಗೆ ಅನುಮತಿ ನೀಡಲಿಲ್ಲ. ಇದರಿಂದ ಕೋಪಗೊಂಡ ಪತ್ನಿ ಬ್ಲೇಡ್‍ನಿಂದ ಆತನ ಮರ್ಮಾಂಗದ ಮೇಲೆ ಹಲ್ಲೆ ನಡೆಸಿದ್ದಾಳೆ.

    ಈ ಘಟನೆಯಿಂದ ಗಂಭೀರವಾಗಿ ಗಾಯಗೊಂಡ ಪತಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಆತನನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸುವಂತೆ ಸಲಹೆ ನೀಡಿದ್ದರು. ಸದ್ಯ ಪತಿಯ ಆರೋಗ್ಯದ ಬಗ್ಗೆ ವೈದ್ಯರು ಪ್ರತಿಕ್ರಿಯಿಸಿ, ಮಹಿಳೆ ತನ್ನ ಪತಿಯ ಮರ್ಮಾಂಗವನ್ನು ಶೇ. 60ರಷ್ಟು ಕತ್ತರಿಸಿದ್ದಾಳೆ ಎಂದು ಹೇಳಿದ್ದಾರೆ.

    ಎರಡು ದಿನದ ಹಿಂದೆ ನನ್ನ ಪತ್ನಿ ತನ್ನ ತವರು ಮನೆಯಿಂದ ಹಿಂತಿರುಗಿದ್ದಳು. ಆದರೆ ಈಗ ಮತ್ತೆ ಹೋಗುತ್ತೇನೆ ಎಂದು ಹಠ ಮಾಡುತ್ತಿದ್ದಳು. ಈ ವಿಷಯಕ್ಕಾಗಿ ಇಬ್ಬರ ನಡುವೆ ಜಗಳ ನಡೆದಿತ್ತು. ಜಗಳ ವಿಕೋಪಕ್ಕೆ ತಿರುಗುತ್ತಿದ್ದಂತೆ ಆಕೆ ನನ್ನ ಖಾಸಗಿ ಅಂಗದ ಮೇಲೆ ಹಲ್ಲೆ ಮಾಡಿದ್ದಾಳೆ ಎಂದು ಪತಿ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾನೆ.

    ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಪತ್ನಿ, ನಾನು ಪರೀಕ್ಷೆ ಬರೆಯಬೇಕಿತ್ತು. ಹಾಗಾಗಿ ನಾನು ನನ್ನ ತವರು ಮನೆಗೆ ಹೋಗುತ್ತೇನೆ ಎಂದು ಹಠ ಮಾಡಿದ್ದೆ. ಆದರೆ ನನ್ನ ಪತಿ ನಿರಾಕರಿಸಿದ ಬಳಿಕ ನಾನು ಇಲ್ಲಿಯೇ ಇದ್ದೆ ಎಂದು ಹೇಳಿದ್ದಾಳೆ.

    ಈ ಬಗ್ಗೆ ಮಾತನಾಡಿದ ಬಾಗೋದರ್ ಪೊಲೀಸ್ ಠಾಣೆಯ ಉಸ್ತುವಾರಿ, ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಪತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಚಾರಣೆ ವೇಳೆ ಪತ್ನಿ ಖಾಸಗಿ ಅಂಗವನ್ನು ಕತ್ತರಿಸಿದ್ದಾಳೆ ಎಂದು ಪತಿ ಒಪ್ಪಿಕೊಂಡಿದ್ದಾನೆ. ಈ ಪ್ರಕರಣದ ಬಗ್ಗೆ ಮಹಿಳೆಯನ್ನು ಕೂಡ ವಿಚಾರಣೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.

  • ಪತ್ನಿ ಮನೆಗೆ ಬರಲು ನಿರಾಕರಿಸಿದ್ದಕ್ಕೆ ಪತಿ ಆತ್ಮಹತ್ಯೆ

    ಪತ್ನಿ ಮನೆಗೆ ಬರಲು ನಿರಾಕರಿಸಿದ್ದಕ್ಕೆ ಪತಿ ಆತ್ಮಹತ್ಯೆ

    ಹೈದರಾಬಾದ್: ಪತ್ನಿ ಮನೆಗೆ ಬರಲು ನಿರಾಕರಿಸಿದ್ದಕ್ಕೆ ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಆಂಧ್ರಪ್ರದೇಶದ ಅಚುತಪುರಂನಲ್ಲಿ ನಡೆದಿದೆ.

    ವೀರ ಬಾಬು(22) ಆತ್ಮಹತ್ಯೆ ಮಾಡಿಕೊಂಡ ಪತಿ. ಅಚುತಪುರಂ ನಿವಾಸಿಯಾಗಿರುವ ವೀರ ನಾಲ್ಕು ತಿಂಗಳ ಹಿಂದೆ ಗೊಲ್ಲಾಪ್ರೊಲು ನಿವಾಸಿ ಸತ್ಯವೇಣಿಯನ್ನು ಮದುವೆ ಆಗಿದ್ದನು. ಮದುವೆಯಾದ ನಂತರ ಸತ್ಯವೇಣಿ ಪದೇ ಪದೇ ತನ್ನ ತವರು ಮನೆಗೆ ಹೋಗುತ್ತಿದ್ದಳು.

    ದೀಪಾವಳಿ ಹಬ್ಬಕ್ಕೆ ಪತ್ನಿಯನ್ನು ಮನೆಗೆ ಕರೆದುಕೊಂಡು ಬರಲು ಅಕ್ಟೋಬರ್ 16ರಂದು ವೀರ ಗೊಲ್ಲಾಪ್ರೊಲುಗೆ ತೆರಳಿದ್ದನು. ಈ ವೇಳೆ ಸತ್ಯವೇಣಿ ಪತಿ ಜೊತೆ ಹೋಗಲು ನಿರಾಕರಿಸುತ್ತಾಳೆ. ಅಲ್ಲದೆ ಆಕೆಯ ಮನೆಯವರು ಕೂಡ ಆಕೆಯ ನಿರ್ಧಾರವನ್ನು ಬೆಂಬಲಿಸಿದ್ದಾರೆ.

    ಪತ್ನಿ ಸತ್ಯವೇಣಿ ಹಾಗೂ ಆಕೆಯ ಮನೆಯವರ ನಿರ್ಧಾರದಿಂದ ವೀರ ಬೇಸರಗೊಂಡಿದ್ದನು. ಅಲ್ಲದೆ ಗೊಲ್ಲಾಪ್ರೊಲುನಿಂದ ಅಚುತಪುರಂನಲ್ಲಿ ಇರುವ ತನ್ನ ಮನೆಗೆ ಹಿಂತಿರುಗುತ್ತಿದ್ದಂತೆ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಈ ಬಗ್ಗೆ ವೀರ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ದೂರು ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ.

  • ಹಬ್ಬಕ್ಕೆ ತವರು ಮನೆಗೆ ಹೋದ ಪತ್ನಿ-ಪತಿಯಿಂದ ಮಚ್ಚಿನಿಂದ ಹಲ್ಲೆ

    ಹಬ್ಬಕ್ಕೆ ತವರು ಮನೆಗೆ ಹೋದ ಪತ್ನಿ-ಪತಿಯಿಂದ ಮಚ್ಚಿನಿಂದ ಹಲ್ಲೆ

    ಬೆಂಗಳೂರು: ಪತ್ನಿ ಗಣೇಶ ಹಬ್ಬಕ್ಕೆ ತವರು ಮನೆಗೆ ಹೋದಳು ಎಂಬ ಕಾರಣಕ್ಕೆ ಕೋಪಗೊಂಡ ಗಂಡ ಮಚ್ಚಿನಿಂದ ಆಕೆಯ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿರುವ ಘಟನೆ ನಗರದ ಎಂಇಐ ಬಡಾವಣೆಯಲ್ಲಿ ನಡೆದಿದೆ.

    ಹಲ್ಲೆ ಮಾಡಿರುವ ಪತಿಯನ್ನು ಲೋಹಿತ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಲೋಹಿತ್‍ನ ಬಾಮೈದ ಸತೀಶ್ ಹಾಗೂ ಅತ್ತೆ ಪಾರ್ವತಮ್ಮ ಅವರಿಗೆ ಗಂಭೀರ ಗಾಯಗಳಾಗಿದ್ದು, ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಲೋಹಿತ್ 8 ವರ್ಷದ ಹಿಂದೆ ಭಾರತಿ (ಹೆಸರು ಬದಲಿಸಲಾಗಿದೆ) ಅವರನ್ನು ಮದುವೆಯಾಗಿದ್ದ, ಆದರೆ ಅತ್ತೆ ಮನೆಯವರನ್ನು ಕಂಡರೆ ಅವನಿಗೆ ಆಗುತ್ತಿರಲಿಲ್ಲ ಎಂದು ಹೇಳಲಾಗಿದೆ.

    ಪತಿ ತವರು ಮನೆಗೆ ಹೋಗುವುದು ಬೇಡ ಎಂದರು ಭಾರತಿ ಹಬ್ಬಕ್ಕೆ ಹೋಗಿದ್ದರು. ಇದರಿಂದ ಕೋಪಗೊಂಡ ಲೋಹಿತ್ ಮನೆಯ ಮುಂದೆ ಬಂದು ಗಲಾಟೆ ಮಾಡುತ್ತಿದ್ದನು. ಇದನ್ನು ಪ್ರಶ್ನೆ ಮಾಡಲು ಹೋದ ಸತೀಶ್ ಮತ್ತು ಅತ್ತೆ ಪಾರ್ವತಮ್ಮಗೆ ಅಲ್ಲೇ ಇದ್ದ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಈ ವೇಳೆ ಲೋಹಿತ್‍ಗೂ ಗಾಯವಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಈ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

  • ತವರು ಮನೆಯಲ್ಲಿ 10 ನಿಮಿಷ ತಡ ಮಾಡಿದಕ್ಕೆ ‘ತಲಾಖ್’ ನೀಡಿದ ಪತಿ

    ತವರು ಮನೆಯಲ್ಲಿ 10 ನಿಮಿಷ ತಡ ಮಾಡಿದಕ್ಕೆ ‘ತಲಾಖ್’ ನೀಡಿದ ಪತಿ

    ಲಕ್ನೌ: ಪತ್ನಿ ತನ್ನ ತವರು ಮನೆಯಲ್ಲಿ 10 ನಿಮಿಷ ತಡ ಮಾಡಿದ್ದಕ್ಕೆ ಪತಿ ಆಕೆಗೆ ಫೋನಿನಲ್ಲೇ ತ್ರಿವಳಿ ತಲಾಖ್ ನೀಡಿದ ಘಟನೆ ಉತ್ತರ ಪ್ರದೇಶದ ಈಟಾದಲ್ಲಿ ನಡೆದಿದೆ.

    ಅಫ್‍ರೋಜ್ ಪತ್ನಿ ತಲಾಖ್ ನೀಡಿದ ಪತಿ. ಅಫ್‍ರೋಜ್ ಹೈದರಾಬಾದ್‍ನಲ್ಲಿರುವ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಒಂದೂವರೆ ವರ್ಷದ ಹಿಂದೆ ಅಫ್‍ರೋಜ್, ಶಂಬುಲ್ ಬೇಗಂಳನ್ನು ಮದುವೆ ಆಗಿದ್ದನು. ಮದುವೆಯ ನಂತರ ಆತ ವರದಕ್ಷಿಣೆ ನೀಡುವಂತೆ ಪತ್ನಿಗೆ ಕಿರುಕುಳ ನೀಡಿದ್ದಾನೆ.

    ಶಂಬುಲ್ ಬೇಗಂ ಜನವರಿ 18ರಂದು ಅನಾರೋಗ್ಯದಿಂದ ಬಳುತ್ತಿದ್ದ ತನ್ನ ಅಜ್ಜಿಯನ್ನು ನೋಡಲು ತವರು ಮನೆಗೆ ಹೋಗಿದ್ದಳು. ಅಫ್‍ರೋಜ್ ತನ್ನ ಪತ್ನಿ ತವರು ಮನೆಗೆ ಹೋಗಲು ಕೇವಲ 30 ನಿಮಿಷ ಕಾಲಾವಕಾಶ ನೀಡಿದ್ದನು. ಆದರೆ ಶಂಬುಲ್ 10 ನಿಮಿಷ ತಡ ಮಾಡಿದ್ದಾಳೆ. ಆಗ ಅಫ್‍ರೋಜ್ ತನ್ನ ಸಹೋದರನನ್ನು ಪತ್ನಿಯ ತವರು ಮನೆಗೆ ಕಳುಹಿಸಿ ಅಲ್ಲಿ ಶಂಬುಲ್ ಜೊತೆ ಫೋನಿನಲ್ಲಿ ಮಾತನಾಡಿಸುವುದಾಗಿ ಹೇಳಿದ್ದಾನೆ. ಬಳಿಕ ಅಫ್‍ರೋಜ್ ಫೋನಿನಲ್ಲಿ ತನ್ನ ಪತ್ನಿಗೆ ತಲಾಖ್ ನೀಡಿದ್ದಾನೆ.

    ಒಂದೂವರೆ ವರ್ಷದ ಹಿಂದೆ ನನ್ನ ಪೋಷಕರು ಶಂಬುಲ್ ಜೊತೆ ಮದುವೆ ಮಾಡಿಸಿದ್ದರು. ಮದುವೆ ಆದ ದಿನದಿಂದ ಈವರೆಗೂ ನನ್ನ ಪತಿ ಹಾಗೂ ಆತನ ಮನೆಯವರು ನನಗೆ ತವರು ಮನೆಯಿಂದ ವರದಕ್ಷಿಣೆ ತರುವಂತೆ ಕಿರುಕುಳ ನೀಡಿದ್ದಾರೆ. ಆದರೆ ನನ್ನ ತವರು ಮನೆಯವರು ವರದಕ್ಷಿಣೆ ನೀಡಲು ನಿರಾಕರಿಸಿದ್ದರು. ಹಾಗಾಗಿ ನನ್ನ ಪತಿ ನನಗೆ ತವರು ಮನೆಗೆ ಹೋಗಲು ಅನುಮತಿ ನೀಡುತ್ತಿರಲಿಲ್ಲ ಎಂದು ಶಂಬುಲ್ ಪೊಲೀಸರ ಬಳಿ ಹೇಳಿದ್ದಾಳೆ.

    ಫೋನಿನಲ್ಲಿ ತಲಾಖ್ ಪಡೆದ ಬಳಿಕ ನಾನು ನನ್ನ ಪತಿಯ ಮನೆಗೆ ಹೋದೆ. ಅಲ್ಲಿ ನನ್ನ ಪತಿ ಹಾಗೂ ಆತನ ಕುಟುಂಬದವರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಶಂಬುಲ್ ಹೇಳಿದ್ದಾಳೆ. ಪೊಲೀಸರು ಈ ಪ್ರಕರಣವನ್ನು ತಲಾಖ್ ಎಂದು ದಾಖಲಿಸಿಲ್ಲ. ವರದಕ್ಷಿಣೆ ಕಿರುಕುಳ ಎಂದು ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ ಎಂದು ಪೊಲೀಸ್ ಅಧಿಕಾರಿ ರೋಮಸಿಯಾ ಮೌರ್ಯ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮದ್ವೆಯಾದ ಮರುದಿನ ತವರು ಮನೆಗೆ ಹೋಗಿ ಗಂಡನ ಮನೆಯವರಿಗೆ ಶಾಕ್ ನೀಡಿದ ವಧು!

    ಮದ್ವೆಯಾದ ಮರುದಿನ ತವರು ಮನೆಗೆ ಹೋಗಿ ಗಂಡನ ಮನೆಯವರಿಗೆ ಶಾಕ್ ನೀಡಿದ ವಧು!

    ಭೋಪಾಲ್: ನವವಿವಾಹಿತೆಯೊಬ್ಬಳು ಮದುವೆಯಾದ ಮರುದಿನವೇ ತನ್ನ ತವರು ಮನೆಗೆ ಹೋಗಿ ಪ್ರಿಯಕರನೊಂದಿಗೆ 2ನೇ ಮದುವೆಯಾದ ಘಟನೆ ಮಧ್ಯಪ್ರದೇಶದ ಭೋಪಾಲ್‍ನ ಸಾರನಿಯಲ್ಲಿ ನಡೆದಿದೆ.

    ಸಂಜನಾ ಕಾತ್ಕರ್ ಪ್ರಿಯಕರನೊಂದಿಗೆ 2ನೇ ಮದುವೆಯಾದ ವಧು. ಫೆಬ್ರವರಿ 28 ರಂದು ಸಂಜನಾ, ನಿತೇಶ್ ನಾಗಲೇ ಎಂಬವರ ಜೊತೆ ವಿವಾಹವಾಗಿದ್ದಳು. ಅದ್ರೆ ಸಂಜನಾಗೆ ಈ ಮದುವೆ ಇಷ್ಟವಿರಲಿಲ್ಲ. ತನ್ನ ಕುಟುಂಬದ ಒತ್ತಾಯಕ್ಕಾಗಿ ನಿತೇಶ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಳು.

    ಸಂಪ್ರದಾಯದ ಪ್ರಕಾರ ಮದುವೆಯ ಮರುದಿನ ವಧು ತನ್ನ ತವರು ಮನೆಗೆ ಹೋಗಬೇಕು. ಹಾಗೆಯೇ ಸಂಜನಾ ತನ್ನ ತವರುಮನೆಗೆ ಹೋಗಿ ನಂತರ ಅಲ್ಲಿ ತನ್ನ ಪ್ರಿಯಕರನೊಂದಿಗೆ ಎರಡನೇ ಮದುವೆಯಾಗಿದ್ದಾಳೆ. ನಂತರ ಸಂಜನಾ ತನ್ನ ಪ್ರಿಯಕರನೊಂದಿಗೆ ಮದುವೆಯಾದ ಫೋಟೋವನ್ನು ತನ್ನ ಮೊದಲ ಪತಿ ನಿತೇಶ್ ಹಾಗೂ ಸಂಬಂಧಿಕರೆಲ್ಲರಿಗೂ ವಾಟ್ಸಪ್‍ನಲ್ಲಿ ಕಳುಹಿಸಿದ್ದು, ಆ ಫೋಟೋ ನೋಡುತ್ತಿದ್ದಂತೆ ನಿತೇಶ್ ದಂಗಾಗಿದ್ದಾರೆ.

    ಸಂಜನಾ ತನ್ನ ಪ್ರಿಯಕರನೊಂದಿಗೆ ಮದುವೆಯಾದ ಫೋಟೋವನ್ನು ನೋಡುತ್ತಿದ್ದಂತೆ ನಿತೇಶ್ ಕುಟುಂಬದವರು ಆಕೆಯ ವಿರುದ್ಧ ಚಿನ್ನಾಭರಣ ಹಾಗೂ ಹಣ ಕಳ್ಳತನದ ದೂರು ನೀಡಿದ್ದಾರೆ. ಅಷ್ಟೇ ಅಲ್ಲದೇ ಮದುವೆಯ ಖರ್ಚು ನೀಡುವಂತೆ ಸಂಜನಾ ಮನೆಯವರಿಗೆ ಒತ್ತಾಯ ಮಾಡುತ್ತಿದ್ದಾರೆ.

    ನಿತೇಶ್ ಕುಟುಂಬದವರು ಸಂಜನಾ ವಿರುದ್ಧ ಕಳ್ಳತನದ ದೂರು ದಾಖಲಿಸಿದ್ದು, ಎಸ್‍ಡಿಒಪಿ ಪಂಕಜ್ ದಿಕ್ಷೀತ್ ಅವರನ್ನು ಭೇಟಿ ಮಾಡಿ ಘಟನೆ ಬಗ್ಗೆ ವಿವರಿಸಿ ಸಂಜನಾ ಕುಟುಂಬದವರು ಮದುವೆಯ ಖರ್ಚು ನೀಡುವಂತೆ ಆಗ್ರಹಿಸಿದ್ದಾರೆ.