Tag: ತಲ್ಚಾರ್

  • ದುನಿಯಾ ವಿಜಿ 46ನೇ ಬರ್ತ್ ಡೇಯಲ್ಲಿ ಅವಾಂತರ- ತಲ್ವಾರ್‌ನಲ್ಲಿ ಕೇಕ್ ಕಟ್ ಮಾಡಿದ ನಟ

    ದುನಿಯಾ ವಿಜಿ 46ನೇ ಬರ್ತ್ ಡೇಯಲ್ಲಿ ಅವಾಂತರ- ತಲ್ವಾರ್‌ನಲ್ಲಿ ಕೇಕ್ ಕಟ್ ಮಾಡಿದ ನಟ

    ಬೆಂಗಳೂರು: ನಟ ದುನಿಯಾ ವಿಜಯ್ ತಮ್ಮ 46ನೇ ವರ್ಷದ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆ ಆಚರಿಸಿಕೊಂಡರು.

    ಬೆಂಗಳೂರಿನ ತಮ್ಮ ನಿವಾಸದಲ್ಲಿ ಕುಟುಂಬಸ್ಥರು ಹಾಗೂ ಅಭಿಮಾನಿಗಳೊಂದಿಗೆ ಕತ್ತಿಯಲ್ಲಿ ಕೇಕ್ ಕಟ್ ಮಾಡಿ ಹುಟ್ಟುಹಬ್ಬವನ್ನು ಸೆಲಬ್ರೇಟ್ ಮಾಡಿಕೊಂಡರು. ಈ ವೇಳೆ ತಮ್ಮ ‘ಸಲಗ’ ಚಿತ್ರದ ಟೀಸರ್ ಬಿಡುಗಡೆ ಮಾಡಿದರು. ತಮ್ಮ ನೆಚ್ಚಿನ ನಟನಿಗೆ ವಿಶ್ ಮಾಡಲು ರಾಜ್ಯದ ಹಲವಡೆಯಿಂದ ಅಭಿಮಾನಿಗಳು ಬಂದಿದ್ದರು.

    ನಟ ದುನಿಯಾ ವಿಜಯ್ ‘ಸಲಗ’ ಚಿತ್ರದ ಟೀಸರ್ ಬಿಡುಗಡೆ ಮಾಡುತ್ತಿದ್ದಂತೆ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಬರ್ತ್ ಡೇ ಸೆಲಬ್ರೇಷನ್ ವೇಳೆ ವಿಜಿಯ ತಂದೆ ತಾಯಿ ಹಾಗೂ ಎರಡನೇ ಪತ್ನಿ ಕೀರ್ತಿ ಭಾಗಿಯಾಗಿದ್ದರು.

    ಈ ಬಾರಿ ತಲ್ವಾರ್ ನಲ್ಲಿ ಕೇಕ್ ಕತ್ತರಿಸೋ ಮೂಲಕ ದುನಿಯಾ ವಿಜಿ ಬರ್ತ್ ಡೇಯನ್ನ ವಿಶೇಷವಾಗಿ ಆಚರಿಸಿಕೊಂಡಿದ್ದು, ಈ ಮೂಲಕ ತಮ್ಮ ಬರ್ತ್ ಡೇ ಸೆಲಬ್ರೇಷನ್ ವೇಳೆ ಎಡವಟ್ಟು ಮಾಡಿಕೊಂಡಿದ್ದಾರೆ. ಯಾವುದೇ ಆಯುಧಗಳನ್ನು ಸಾರ್ವಜನಿಕವಾಗಿ ಬಳಸುವಂತಿಲ್ಲ, ಪ್ರದರ್ಶಿಸುವಂತಿಲ್ಲ. ಇದು ಆರ್ಮ್ಸ್ ಆ್ಯಕ್ಟ್ ಅಡಿ ಅಪರಾಧವಾಗುತ್ತದೆ. ಆದರೆ ಹುಟ್ಟುಹಬ್ಬದ ಸಂಭ್ರಮದ ವೇಳೆ ಈ ಎಡವಟ್ಟು ನಡೆದಿದ್ದು, ಹೊಸ ವಿವಾದವನ್ನು ತನ್ನ ಮೈಮೇಲೆ ಎಳೆದುಕೊಂಡಿದ್ದಾರೆ.