Tag: ತಲೆ ಬುರುಡೆ

  • ಕಾಳಿ ದೇವಿ ಪಾದದ ಕೆಳಗೆ ವ್ಯಕ್ತಿಯ ತಲೆ ಬುರುಡೆ!

    ಕಾಳಿ ದೇವಿ ಪಾದದ ಕೆಳಗೆ ವ್ಯಕ್ತಿಯ ತಲೆ ಬುರುಡೆ!

    ಹೈದರಾಬಾದ್: ಕಾಳಿ ದೇವಿ ವಿಗ್ರಹದ ಪಾದದ ಕೆಳಗೆ ವ್ಯಕ್ತಿಯೊಬ್ಬನ ತಲೆ ಬುರುಡೆ ಪತ್ತೆಯಾಗಿರುವ ಆಘಾತಕಾರಿ ಘಟನೆ ತೆಲಂಗಾಣದಲ್ಲಿ ನಡೆದಿದೆ.

    ನಿನ್ನೆ ತೆಲಂಗಾಣದ ರಸ್ತೆ ಬದಿಯಲ್ಲಿ ಇದ್ದ ಕಾಳಿ ದೇವಿ ವಿಗ್ರಹದ ಪಾದದ ಕೆಳಗೆ ವ್ಯಕ್ತಿಯೊಬ್ಬನ ತಲೆ ಬುರುಡೆಯನ್ನು ಮೊದಲು ಅರ್ಚಕರು ನೋಡಿದ್ದಾರೆ. ನಂತರ ಈ ಕುರಿತು ಅರ್ಚಕರು ಪೊಲೀಸರಿಗೆ ಮಾಹಿತಿ ನೀಡಿದ್ದು ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಪ್ರಸ್ತುತ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಆರೋಗ್ಯ ಇಲಾಖೆ ಸಿಬ್ಬಂದಿಗೆ ಕೂಡಲೇ ಸಂಬಳ ಬಿಡುಗಡೆ ಮಾಡಿ: ಹಾಲಪ್ಪ ಆಚಾರ್ ತರಾಟೆ

    ಈ ದೃಶ್ಯವನ್ನು ನೋಡಿದ ಗ್ರಾಮಸ್ಥರು ಅಚ್ಚರಿಗೊಂಡಿದ್ದು, ದೇವಿ ಪಾದದ ಬಳಿ ಇರುವ ವ್ಯಕ್ತಿ ಯಾರು ಎಂಬುದು ಇನ್ನೂ ತಿಳಿದುಬಂದಿಲ್ಲ. ಈ ಹಿನ್ನೆಲೆ ಮೃತ ವ್ಯಕ್ತಿಯ ಗುರುತನ್ನು ತಿಳಿದುಕೊಳ್ಳಲು ಪೊಲೀಸರು ಸೋಶಿಯಲ್ ಮೀಡಿಯಾದ ಫೋಟೋವನ್ನು ಶೇರ್ ಮಾಡಿದ್ದಾರೆ.

    ಪರಿಣಾಮ ಫೋಟೋ ನೋಡಿ ಸೂರ್ಯಪೇಟೆಯ ಕುಟುಂಬವೊಂದು ಪೊಲೀಸರನ್ನು ಸಂರ್ಪಕಿಸಿದೆ. ಫೋಟೋ ನೋಡಿದರೆ ನಮ್ಮ ಮನೆಯವನು ಎಂದು ಅನಿಸುತ್ತಿದೆ. ನಮ್ಮ ಕುಟುಂಬದಲ್ಲಿ 2 ವರ್ಷಗಳ ಹಿಂದೆ 30 ವರ್ಷದ ಮಾನಸಿಕ ಅಸ್ವಸ್ಥ ಕಾಣೆಯಾಗಿದ್ದನು. ಈ ಫೋಟೋ ನೋಡಿದರೆ ಇವನು ನಮ್ಮ ಕುಟುಂಬದವನಂತೆ ಕಾಣಿಸುತ್ತಿದ್ದಾನೆ ಎಂದು ಪೊಲೀಸರಿಗೆ ಕುಟುಂಬದವರು ತಿಳಿಸಿದ್ದಾರೆ.

    ಈ ಕುರಿತು ಮಾತನಾಡಿದ ದೇವರಕೊಂಡದ ಉಪ ಪೊಲೀಸ್ ವರಿಷ್ಠಾಧಿಕಾರಿ ಆನಂದರೆಡ್ಡಿ, ಸುಮಾರು 30ರ ಆಸುಪಾಸಿನ ವ್ಯಕ್ತಿಯನ್ನು ಬೇರೆಡೆ ಹತ್ಯೆಗೈದು ತಲೆಯನ್ನು ವಿಗ್ರಹದ ಪಾದದ ಕೆಳಗೆ ಹಿಟ್ಟಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಕುರಿತು ಎಲ್ಲ ಆಯಾಮಗಳಲ್ಲಿ ನಾವು ತನಿಖೆ ಮಾಡುತ್ತೇವೆ. ಈ ಕೃತ್ಯವನ್ನು ಭೇದಿಸಲು 8 ತಂಡವನ್ನು ರಚಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

    ಮೃತ ವ್ಯಕ್ತಿಯ ಶವವನ್ನು ಇನ್ನೂ ಪತ್ತೆ ಮಾಡಲಾಗಿಲ್ಲ. ಈ ಕುರಿತು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಸಿಸಿಟಿವಿ ಕ್ಯಾಮೆರಾಗಳಿಂದ ದೃಶ್ಯಗಳನ್ನು ಸ್ಕ್ಯಾನ್ ಮಾಡಲಾಗುತ್ತಿದೆ ಎಂದು ಹೇಳಿದರು. ಇದನ್ನೂ ಓದಿ:  ಮತ್ತೆ ಮೇಕೆದಾಟು ಅರ್ಜಿ ವಿಚಾರಣೆ ಮುಂದೂಡಿದ ಸುಪ್ರೀಂ

    ಪ್ರಸ್ತುತ ವಿಗ್ರಹದ ಪಾದದಲ್ಲಿ ತಲೆ ಕತ್ತರಿಸಿರುವ ಭಯಾನಕ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

  • ಚರಂಡಿಯಲ್ಲಿ ಪತ್ತೆಯಾಯ್ತು ಮನುಷ್ಯರ ತಲೆಬುರುಡೆ!

    ಚರಂಡಿಯಲ್ಲಿ ಪತ್ತೆಯಾಯ್ತು ಮನುಷ್ಯರ ತಲೆಬುರುಡೆ!

    ಬೆಳಗಾವಿ(ಚಿಕ್ಕೋಡಿ): ಅಥಣಿ ಪಟ್ಟಣದ ವಿಕ್ರಮಪುರ ನಗರದ ಚರಂಡಿಯಲ್ಲಿ ಎರಡು ತಲೆ ಬುರುಡೆ ಪತ್ತೆಯಾಗಿದೆ.

    ಇಂದು ವಿಕ್ರಮಪುರ ನಗರದ ನಿವಾಸಿ ಡಾ.ರಾಮ್ ಕುಲಕರ್ಣಿ ಎಂಬುವವರ ಮನೆಯ ಮುಂದಿನ ಚರಂಡಿಯಲ್ಲಿ ತಲೆ ಬುರುಡೆ ಪತ್ತೆಯಾಗಿದೆ. ಪುರಸಭೆ ಕಾರ್ಮಿಕರು ಸ್ವಚ್ಛತಾ ಕಾರ್ಯ ಮಾಡುವಾಗ ಚರಂಡಿಯಲ್ಲಿ ಎರಡು ತಲೆ ಬುರುಡೆ ಸಿಕ್ಕಿದೆ.

    ಎರಡು ತಲೆ ಬುರುಡೆಯನ್ನು ಚರಂಡಿಯಿಂದ ಹೊರತೆಗೆದಾಗ ಸ್ಥಳೀಯರು ಅದನ್ನು ಕಂಡು ಆತಂಕಕ್ಕೆ ಒಳಗಾಗಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಅಮವಾಸ್ಯೆ ಇದ್ದ ಕಾರಣಕ್ಕೆ, ವಾಮಾಚಾರ ಮಾಡಲು ತಲೆ ಬುರುಡೆಗಳನ್ನು ಉಪಯೋಗಿಸಿಕೊಂಡು ಬಳಿಕ ಅದನ್ನು ಚರಂಡಿಯಲ್ಲಿ ಎಸೆದಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ.

    ಯಾರು ಈ ಬುರುಡೆಗಳನ್ನು ಚರಂಡಿಯಲ್ಲಿ ಎಸೆದಿದ್ದು ಎಂಬ ಪ್ರಶ್ನೆ ಈಗ ಹುಟ್ಟಿಕೊಂಡಿದೆ. ಅಥಣಿ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಪ್ರದೇಶದಲ್ಲಿ ತಲೆ ಬುರುಡೆ ಪತ್ತೆಯಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv