Tag: ತಲೆಬುರುಡೆ

  • ಅಮೆರಿಕಗೆ ಹೋಗಬೇಕಿದ್ದ ಕೊರಿಯರ್‌ನಲ್ಲಿತ್ತು 4 ಮಾನವನ ತಲೆಬುರುಡೆ

    ಅಮೆರಿಕಗೆ ಹೋಗಬೇಕಿದ್ದ ಕೊರಿಯರ್‌ನಲ್ಲಿತ್ತು 4 ಮಾನವನ ತಲೆಬುರುಡೆ

    ಮೆಕ್ಸಿಕೋ ಸಿಟಿ: ಅಮೆರಿಕಕ್ಕೆ (America) ಕೊರಿಯರ್ (Courier) ಮೂಲಕ ಕಳುಹಿಸಬೇಕಿದ್ದ ಪ್ಯಾಕೇಜ್ ಒಂದರಲ್ಲಿ 4 ಮಾನವನ ತಲೆಬುರುಡೆ (Skull) ಪತ್ತೆಯಾಗಿರುವ ಘಟನೆ ಮೆಕ್ಸಿಕೋವಿನ (Mexico) ವಿಮಾನ ನಿಲ್ದಾಣದಲ್ಲಿ (Airport) ನಡೆದಿದೆ. ತಲೆಬುರುಡೆಗಳನ್ನು ಕಂಡ ವಿಮಾನ ನಿಲ್ದಾಣ ಸಿಬ್ಬಂದಿ ದಂಗಾಗಿದ್ದಾರೆ.

    ವರದಿಗಳ ಪ್ರಕಾರ ಮಧ್ಯ ಮೆಕ್ಸಿಕೋವಿನ ಕ್ವೆರೆಟಾರೊ ಇಂಟರ್‌ಕಾಂಟಿನೆಂಟಲ್ ಏರ್‌ಪೋರ್ಟ್‌ನಲ್ಲಿ ಕೊರಿಯರ್ ಪ್ಯಾಕೇಜ್ ಒಂದರಲ್ಲಿ ತಲೆಬುರುಡೆಗಳು ಪತ್ತೆಯಾಗಿವೆ. ರಟ್ಟಿನ ಪೆಟ್ಟಿಗೆಯೊಳಗೆ ಅಲ್ಯೂಮಿನಿಯಂ ಫಾಯಿಲ್‌ನಲ್ಲಿ ತಲೆಬುರುಡೆಗಳನ್ನು ಸುತ್ತಿಡಲಾಗಿತ್ತು ಎಂದು ವರದಿಗಳು ತಿಳಿಸಿವೆ.

    ಈ ಪ್ಯಾಕೇಜ್ ಅನ್ನು ಮೈಕೋವಾಕ್‌ನಿಂದ ಕಳುಹಿಸಲಾಗಿದೆ ಎನ್ನಲಾಗಿದೆ. ಈ ಪ್ರದೇಶ ಮೆಕ್ಸಿಕೋದಲ್ಲಿ ಅತಿ ಹೆಚ್ಚು ಹಿಂಸಾತ್ಮಕ ಘಟನೆಗಳು ನಡೆಯುವ ಸ್ಥಳವಾಗಿದೆ ಎಂದು ತಿಳಿಸಲಾಗಿದೆ. ಇದನ್ನೂ ಓದಿ: ಜಿಮ್ ಮಾಲೀಕನ ಗುಂಡಿಕ್ಕಿ ಹತ್ಯೆ – ಸಿಸಿಟಿವಿ ರೆಕಾರ್ಡ್ ಕಳ್ಳತನ

    ಪತ್ತೆಯಾಗಿರುವ ಮಾನವನ ತಲೆಬುರುಡೆಗಳು ಯಾರಿಗೆ ಸೇರಿರುವುದು, ಅದರ ವಯಸ್ಸು ಅಥವಾ ಇತರ ಮಾಹಿತಿಗಳನ್ನು ಹಂಚಿಕೊಳ್ಳಲಾಗಿಲ್ಲ. ಇಂತಹ ಮಾನವನ ಅವಶೇಷಗಳ ವಾರ್ಗಾವಣೆಗೆ ಸಮರ್ಥ ಆರೋಗ್ಯ ಪ್ರಾಧಿಕಾರದಿಂದ ವಿಶೇಷ ಅನುಮತಿಯ ಅಗತ್ಯವಿರುತ್ತದೆ. ಆದರೆ ಈ ಸಂದರ್ಭದಲ್ಲಿ ಪಡೆಯಲಾಗಿಲ್ಲ ಎನ್ನಲಾಗಿದೆ.

    ಮಾನವನ ತಲೆಬುರುಡೆಗಳ ಸಾಗಾಟದ ಹಿಂದೆ ಅಪರಾಧ ಕೃತ್ಯ ಇದೆಯೇ ಎಂಬ ಬಗ್ಗೆ ಹಾಗೂ ಅದನ್ನು ಅಮೆರಿಕಗೆ ಕಳುಹಿಸುವ ಹಿಂದಿನ ಉದ್ದೇಶದ ಬಗ್ಗೆ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಭಯೋತ್ಪಾದನೆಯಿಂದ ಭಾರತ ನೊಂದಷ್ಟು ಬೇರಾವ ದೇಶವೂ ನೊಂದಿಲ್ಲ: ಜೈಶಂಕರ್

    Live Tv
    [brid partner=56869869 player=32851 video=960834 autoplay=true]

  • ನೂರಾರು ಸಂಖ್ಯೆಯಲ್ಲಿ ನಾಯಿ ತಲೆಬುರುಡೆ ಪತ್ತೆ- ಕುರಿ ಮಾಂಸದ ಹೆಸರಲ್ಲಿ ನಾಯಿ ಮಾಂಸ ಮಾರಾಟ?

    ನೂರಾರು ಸಂಖ್ಯೆಯಲ್ಲಿ ನಾಯಿ ತಲೆಬುರುಡೆ ಪತ್ತೆ- ಕುರಿ ಮಾಂಸದ ಹೆಸರಲ್ಲಿ ನಾಯಿ ಮಾಂಸ ಮಾರಾಟ?

    ಹಾಸನ: ನೂರಾರು ಸಂಖ್ಯೆಯಲ್ಲಿ ನಾಯಿಗಳ ತಲೆಬುರುಡೆಗಳು ಪತ್ತೆಯಾಗಿದ್ದು, ಕುರಿ ಮಾಂಸ ಎಂದು ಹೇಳಿ ನಾಯಿ ಮಾಂಸ ಮಾರಾಟ ಮಾಡುತ್ತಿದ್ದಾರಾ ಎಂಬ ಅನುಮಾನ ಇದೀಗ ಮೂಡಿದೆ. ನಾಯಿ ಬುರುಡೆಗಳು ಪತ್ತೆಯಾಗುತ್ತಿದ್ದಂತೆ ಜಿಲ್ಲೆಯ ಜನ ಹೌಹಾರಿದ್ದಾರೆ.

    ಜಿಲ್ಲೆಯ ಹೊಳೆನರಸೀಪುರ ತಾಲೂಕಿನ, ಸೂರನಹಳ್ಳಿ ಗ್ರಾಮದ ಸಮೀಪದ ಕೊಲ್ಲಿಹಳ್ಳ ಎಂಬ ಪ್ರದೇಶದಲ್ಲಿ ನಾರಾರು ಸಂಖ್ಯೆಯಲ್ಲಿ ನಾಯಿಗಳ ತಲೆಬುರುಡೆಗಳು ಪತ್ತೆಯಾಗಿವೆ. ಹೀಗಾಗಿ ಮಾಂಸಕ್ಕಾಗಿ ನಾಯಿಗಳನ್ನು ಕೊಲ್ಲುವ ತಂಡ ಕಾರ್ಯಚರಣೆ ನಡೆಸುತ್ತಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ನಾಯಿಗಳ ರುಂಡದ ಭಾಗ ಪತ್ತೆಯಾಗಿರುವ ಕೊಲ್ಲಿಹಳ್ಳದ ಸಮೀಪ ಜನ ಸಂಚಾರ ಕಡಿಮೆಯಿದ್ದು, ಹಲವಾರು ವರ್ಷಗಳಿಂದ ದಟ್ಟ ಬೇಲಿ ಬೆಳೆದಿದೆ.

    ನಿರ್ಜನ ಪ್ರದೇಶವಾದ್ದರಿಂದ ಮಾಂಸಕ್ಕಾಗಿ ನಾಯಿಗಳನ್ನು ಕೊಲ್ಲುವವರು ಬುರುಡೆಗಳನ್ನು ತಂದು ಎಸೆಯಲು ಈ ಪ್ರದೇಶ ಆಯ್ಕೆ ಮಾಡಿಕೊಂಡಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ನೂರಾರು ಸಂಖ್ಯೆಯಲ್ಲಿ ನಾಯಿಗಳ ರುಂಡದ ಭಾಗ ಪತ್ತೆಯಾಗಿರುವುದನ್ನು ಗಮನಿಸಿದರೆ, ಮಾಂಸಕ್ಕಾಗಿ ನಾಯಿಗಳನ್ನು ಕೊಲ್ಲುವ ಜಾಲವೊಂದು ತಾಲೂಕಿನಲ್ಲಿ ಕಾರ್ಯಚರಣೆ ನಡೆಸುತ್ತಿರುವ ಬಗ್ಗೆಯೂ ದಟ್ಟ ಅನುಮಾನ ಮೂಡಿದೆ.

    ಶ್ವಾನಗಳ ಮಾರಣ ಹೋಮ ಪ್ರಾಣಿ ಪ್ರಿಯರಲ್ಲಿ ತೀವ್ರ ಆಕ್ರೋಶ ಮೂಡಿಸಿದ್ದು, ಈಗಾಗಲೇ ಪಟ್ಟಣದ ಮಾಂಸ ಪ್ರಿಯರು ಕಂಗಾಲಾಗಿದ್ದಾರೆ. ಈ ಬಗ್ಗೆ ಸಂಬಂಧ ಪಟ್ಟ ಇಲಾಖೆಯವರು ಸೂಕ್ತ ತನಿಖೆ ನಡೆಸಿ ನಾಯಿಗಳ ಮಾರಣ ಹೋಮ ನಡೆಸುತ್ತಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

  • 10 ಕ್ಕೂ ಹೆಚ್ಚು ತಲೆಬುರುಡೆಗಳು ಪ್ರತ್ಯಕ್ಷ- ಬೆಚ್ಚಿ ಬಿದ್ದ ಮೈಸೂರು ಜನ

    10 ಕ್ಕೂ ಹೆಚ್ಚು ತಲೆಬುರುಡೆಗಳು ಪ್ರತ್ಯಕ್ಷ- ಬೆಚ್ಚಿ ಬಿದ್ದ ಮೈಸೂರು ಜನ

    ಮೈಸೂರು: ಮೈಸೂರಿನ ವಿಜಯನಗರದ ಎರಡನೇ ಹಂತದ ಮುಖ್ಯ ರಸ್ತೆಯಲ್ಲಿ 10 ಕ್ಕೂ ಹೆಚ್ಚು ತಲೆ ಬುರುಡೆಗಳು ಪ್ರತ್ಯಕ್ಷವಾಗಿವೆ. ಇದರಿಂದ ನಗರದ ಜನರು ಭಯಗೊಂಡಿದ್ದಾರೆ.

    ರಸ್ತೆ ಬದಿ ಕಸ ಹಾಕುವ ಜಾಗದಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ತಲೆ ಬುರುಡೆಗಳನ್ನು ಇಲ್ಲಿ ಎಸೆಯಲಾಗಿದೆ. ಮಾಟ ಮಂತ್ರಕ್ಕಾಗಿ ಹೀಗೆ ಯಾರೋ ತಲೆ ಬುರುಡೆ ತಂದು ನಂತರ ಅವುಗಳನ್ನು ಹೀಗೆ ಬಿಸಾಕಿರುವ ಸಾಧ್ಯತೆ ಇದೆ. ತಲೆ ಬುರುಡೆಗಳನ್ನು ಕಂಡ ಸ್ಥಳೀಯರು ಒಂದು ಕಡೆ ಕುತೂಹಲದಿಂದ ಅವುಗಳನ್ನು ವೀಕ್ಷಿಸುತ್ತಿದ್ದಾರೆ.

    ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಬಳಿಕ ಸ್ಥಳೀಯರಿಂದ ಮಾಹಿತಿ ತಿಳಿದ ವಿಜಯನಗರ ಪೊಲೀಸರು ಸ್ಥಳಕ್ಕೆ ಬಂದು ಬುರುಡೆಗಳನ್ನು ಅಲ್ಲಿಂದ ತೆರವುಗೊಳಿಸಿದ್ದಾರೆ.

    https://www.youtube.com/watch?v=cuC4suhTGI4

  • ಹೆತ್ತವರ ಮೇಲಿನ ದ್ವೇಷ ತೀರಿಸಿಕೊಳ್ಳಲು 4ರ ಬಾಲಕಿಗೆ ಕಬ್ಬಿಣ ರಾಡ್ ನಿಂದ ಹಲ್ಲೆಗೈದ!

    ಹೆತ್ತವರ ಮೇಲಿನ ದ್ವೇಷ ತೀರಿಸಿಕೊಳ್ಳಲು 4ರ ಬಾಲಕಿಗೆ ಕಬ್ಬಿಣ ರಾಡ್ ನಿಂದ ಹಲ್ಲೆಗೈದ!

    ಮುಂಬೈ: ತನ್ನದಲ್ಲದ ತಪ್ಪಿಗೆ 4 ವರ್ಷದ ಬಾಲಕಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರೋ ಅಮಾನವೀಯ ಘಟನೆಯೊಂದು ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    ಘಟನೆಗೆ ಸಂಬಂಧಿಸಿದಂತೆ 19 ವರ್ಷದ ರಹೀಮ್ ಶೌಕರ್ ಅಲಿ ಶೇಕ್ ಎಂಬಾತನನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ. ಈತ ಭಯಾಂಡರ್ ಪೂರ್ವದ ಆಜಾದ್ ನಗರದ ನಿವಾಸಿ ಅಂತ ಪೊಲೀಸರು ತಿಳಿಸಿದ್ದಾರೆ.

    ಏನಿದು ಘಟನೆ?: ಹೆತ್ತವರ ಮೇಲಿನ ದ್ವೇಷವನ್ನು ತೀರಿಸಿಕೊಳ್ಳಲು ಅವರ 4 ವರ್ಷದ ಬಾಲಕಿಯ ತಲೆಗೆ ಆರೋಪಿ ಕಬ್ಬಿಣದ ರಾಡ್ ನಿಂದ ಹೊಡೆದು ಗಂಭೀರವಾಗಿ ಹಲ್ಲೆ ನಡೆಸಿದ್ದಾನೆ ಅಂತ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.

    ಮನೆಯ ಪಕ್ಕದಲ್ಲಿರೋ ಕಸದ ರಾಶಿಯ ಬಳಿ ಮಗಳು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಹೆತ್ತವರು ಗಮನಿಸಿದ್ದಾರೆ. ಬಳಿಕ ಅವರು ಆಕೆಯನ್ನು ಕೂಡಲೇ ಸ್ಥಳಿಯ ಕಸ್ತೂರಿ ಆಸ್ಪತ್ರೆಗೆ ದಾಖಲಿಸಿದ್ದು, ಇದೀಗ ಬಾಲಕಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟದಲ್ಲಿದ್ದಾಳೆ.

    ಹಲ್ಲೆಗೆ ಕಾರಣವೇನು?: ಆರೋಪಿ ಬಾಲಕಿಯನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದನು. ಹೀಗಾಗಿ ಹೆತ್ತವರು ಆತನ ಜೊತೆ ಸಲುಗೆಯಿಂದ ವರ್ತಿಸದಂತೆ ಎಚ್ಚರಿಕೆ ನೀಡಿದ್ದರು. ಈ ವಿಚಾರ ಆರೋಪಿಗೆ ತಿಳಿದು ಹೆತ್ತವರ ಮೇಲಿನ ಸಿಟ್ಟಿಗೆ ಬಾಲಕಿಯ ಮೇಲೆ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.

    ಆರೋಪಿ ಕಬ್ಬಿಣದ ರಾಡ್ ನಿಂದ ಬಾಲಕಿಯ ತಲೆಗೆ ಹೊಡೆದಿದ್ದರಿಂದ ಆಕೆ ಗಂಭೀರ ಗಾಯಗೊಂಡಿದ್ದಾಳೆ. ಅಲ್ಲದೇ ಆಕೆಯ ಮುಖ ಹಾಗೂ ಕಣ್ಣುಗಳಿಗೂ ಗಂಭೀರ ಗಾಯಗಳಾಗಿವೆ. ಹೀಗಾಗಿ ಸದ್ಯ ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಅಂತ ವೈದ್ಯ ರಾಜೀವ್ ಅಗರ್ ವಾಲ್ ತಿಳಿಸಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರೋಪಿಯನ್ನು ಬಂಧಿಸಲಾಗಿದೆ. ಆತನ ವಿರುದ್ಧ ಐಪಿಸಿ ಸೆಕ್ಷನ್ 307(ಹತ್ಯೆ ಯತ್ನ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಡಿಸೆಂಬರ್ 18ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ ಅಂತ ಪೊಲೀಸರು ತಿಳಿಸಿದ್ದಾರೆ.

     

  • ಹೈಸ್ಕೂಲ್ ಆವರಣದಲ್ಲಿ ಮನುಷ್ಯರ ತಲೆ ಬುರುಡೆ, ಮೂಳೆಗಳ ರಾಶಿ ಪತ್ತೆ: ಸಾರ್ವಜನಿಕರಲ್ಲಿ ಆತಂಕ

    ಹೈಸ್ಕೂಲ್ ಆವರಣದಲ್ಲಿ ಮನುಷ್ಯರ ತಲೆ ಬುರುಡೆ, ಮೂಳೆಗಳ ರಾಶಿ ಪತ್ತೆ: ಸಾರ್ವಜನಿಕರಲ್ಲಿ ಆತಂಕ

    ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮನುಷ್ಯರ ಬುರುಡೆ, ಮೂಳೆಗಳ ರಾಶಿ ಪತ್ತೆಯಾಗಿದೆ. ನಗರದ ಮೂರು ಸಾವಿರ ಮಠದ ಸಾವಿತ್ರಿ ಶೆಟ್ಟಿ ಹೈಸ್ಕೂಲ್ ಆವರಣದಲ್ಲಿ ಮೂಳೆ, ಬುರುಡೆ ರಾಶಿ ಸಿಕ್ಕಿದೆ.

    ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಅಣ್ಣಿಗೇರಿ ಪಟ್ಟಣದಲಿ ಆರು ವರ್ಷಗಳ ಹಿಂದೆ ಸುಮಾರು 600 ತಲೆಬುರುಡೆಗಳು ಪತ್ತೆಯಾಗಿದ್ದವು. ಇವುಗಳ ಇತಿಹಾಸ ತಿಳಿಯುವ ಸಲುವಾಗಿ ನಡೆಸಲಾಗಿದ್ದ ಕಾರ್ಬನ್ ಪರೀಕ್ಷೆಯಲ್ಲಿ ಇವು 638 ವರ್ಷಗಳಷ್ಟು ಹಳೆಯದ್ದು ಅನ್ನೋ ಮಾಹಿತಿ ಲಭ್ಯವಾಗಿತ್ತು.

    ಸದ್ಯ ಬುರುಡೆ ಮತ್ತು ಮೂಳೆ ಸಿಕ್ಕಿರುವ ಪ್ರೌಢಾಶಾಲೆಯ ಏರಿಯಾದಲ್ಲಿ ಆತಂಕದ ವಾತಾವರಣ ಉಂಟಾಗಿದೆ.