Tag: ತಲೆನೋವು

  • ತಲೆನೋವಿನಿಂದ ಬೇಸತ್ತು 7 ತಿಂಗಳ ಗರ್ಭಿಣಿ ಆತ್ಮಹತ್ಯೆ

    ತಲೆನೋವಿನಿಂದ ಬೇಸತ್ತು 7 ತಿಂಗಳ ಗರ್ಭಿಣಿ ಆತ್ಮಹತ್ಯೆ

    ಬೀದರ್: ತೀವ್ರವಾದ ತಲೆನೋವಿನಿಂದ ಬೇಸತ್ತು ಗರ್ಭಿಣಿಯೊಬ್ಬರು (Pregnant) ಆತ್ಮಹತ್ಯೆಗೆ ಶರಣಾದ ಘಟನೆ ಬೀದರ್‌ ಜಿಲ್ಲೆಯಲ್ಲಿ ನಡೆದಿದೆ.

    ಮೃತಳನ್ನು ಕಿರ್ತಿ ರಾಮು (22) ಎಂದು ಗುರುತಿಸಲಾಗಿದೆ. ಈಕೆ ಸದ್ಯ 7 ತಿಂಗಳ ಗರ್ಭಿಣಿ. ಈ ಘಟನೆ ಬೀದರ್ (Bidar) ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಮಾಣಿಕ್ ನಗರದಲ್ಲಿ ನಡೆದಿದೆ. ಇದನ್ನೂ ಓದಿ: ಖ್ಯಾತ ಗಾಯಕಿ ಮಂಗ್ಲಿ ಕಾರಿಗೆ ಗುದ್ದಿದ ಟ್ರಕ್: ತಪ್ಪಿದ ಭಾರೀ ಅನಾಹುತ

    ಕೀರ್ತಿರಾಮು ಅವರು ಹಲವು ತಿಂಗಳುಗಳಿಂದ ತೀವ್ರವಾದ ತಲೆನೋವಿನಿಂದ ಬಳಲುತ್ತಿದ್ದರು. ಎಷ್ಟೇ ಚಿಕಿತ್ಸೆ ಮಾಡಿದರೂ ಗುಣವಾಗುತ್ತಿರಲಿಲ್ಲ. ಇದರಿಂದ ಬೇಸತ್ತು ಕೀರ್ತಿರಾಮು ಅವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಬಾವಿಗೆ ಬಿದ್ದ ಗರ್ಭಿಣಿಯ ಮೃತದೇಹವನ್ನು ಪೊಲೀಸರು ಮೇಲೆಕ್ಕಿತ್ತಿದ್ದು, ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಕುರಿತು ಹುಮ್ನಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ತಲೆ ನೋವು ನಿವಾರಕದ ಡಬ್ಬಿ ನುಂಗಿ 9 ತಿಂಗಳ ಮಗು ಸಾವು

    ತಲೆ ನೋವು ನಿವಾರಕದ ಡಬ್ಬಿ ನುಂಗಿ 9 ತಿಂಗಳ ಮಗು ಸಾವು

    ಬಳ್ಳಾರಿ: ಒಂಬತ್ತು ತಿಂಗಳ ಮಗು  (Baby) ತಲೆ ನೋವು (Headache) ನಿವಾರಕದ ಡಬ್ಬಿ ನುಂಗಿ ದಾರುಣವಾಗಿ ಮೃತಪಟ್ಟ ಘಟನೆ ಬಳ್ಳಾರಿ  (Ballari) ಜಿಲ್ಲೆ ಕಂಪ್ಲಿ ಪಟ್ಟಣದ 5ನೇ ವಾರ್ಡ್ ಇಂದಿರಾನಗರದಲ್ಲಿ ನಡೆದಿದೆ.

    ಮುತ್ಯಾಲ ರಾಘವೇಂದ್ರ ಮತ್ತು ತುಳಸಿ ದಂಪತಿ ಏಕೈಕ ಪುತ್ರಿ ಪ್ರಿಯದರ್ಶಿನಿ ಸಾವನ್ನಪ್ಪಿದ ದುರ್ದೈವಿ. ಶುಕ್ರವಾರ ಸಂಜೆ ಆಟವಾಡುತ್ತಿದ್ದಾಗ ಪ್ರಿಯದರ್ಶಿನಿ ಚಿಕ್ಕ ಡಬ್ಬಿಯನ್ನು ನುಂಗಿದ್ದಾಳೆ.  ಇದನ್ನೂ ಓದಿ: ಆರ್‌ಎಸ್‌ಎಸ್‌ ಸಂಸ್ಥೆಗಳಿಗೆ ಸರ್ಕಾರ ಮಂಜೂರು ಮಾಡಿದ್ದ ಭೂಮಿ ವಾಪಸ್‌ ಪಡೆಯುತ್ತೇವೆ: ದಿನೇಶ್‌ ಗುಂಡೂರಾವ್‌

    ಡಬ್ಬಿ ನುಂಗಿದ ಪರಿಣಾಮ ಏಕಾಏಕಿ ಉಸಿರಾಟದ ತೊಂದರೆ ಕಾಣಿಸಿದೆ.  ಉಸಿರಾಟದ ತೊಂದರೆ ಹೆಚ್ಚಾದ ಬೆನ್ನಲ್ಲೇ ಗಾಬರಿಯಾದ ಪೋಷಕರು ಖಾಸಗಿ ವೈದ್ಯರ ಬಳಿ ಕರೆದುಕೊಂಡು ಹೋಗಿದ್ದಾರೆ.

    ದೇಹ ಪರೀಕ್ಷಿಸಿದ ವೈದ್ಯರು ಮಾರ್ಗಮಧ್ಯೆ ಮೃತಪಟ್ಟಿದ್ದಾಳೆ ಎಂದು ತಿಳಿಸಿದ್ದಾರೆ. ಈ ದಂಪತಿಗೆ ವಿವಾಹವಾಗಿ 10 ವರ್ಷಗಳ ನಂತರ ಈ ಮಗು ಜನಿಸಿತ್ತು.

  • ಮೈಗ್ರೇನ್ ಚಿಕಿತ್ಸೆಗೆ ಬಂದಾಗ ಬೆಳಕಿಗೆ ಬಂತು ಅಪ್ಪನೇ ಮಾಡ್ತಿದ್ದ ಅತ್ಯಾಚಾರ..!

    ಮೈಗ್ರೇನ್ ಚಿಕಿತ್ಸೆಗೆ ಬಂದಾಗ ಬೆಳಕಿಗೆ ಬಂತು ಅಪ್ಪನೇ ಮಾಡ್ತಿದ್ದ ಅತ್ಯಾಚಾರ..!

    ನವದೆಹಲಿ: ಆಕೆಗಿನ್ನೂ 17 ವರ್ಷ ಪ್ರಾಯ. ಕಳೆದ ಕೆಲ ದಿನಗಳಿಂದ ಆಕೆಗೆ ವಿಪರೀತ ತಲೆ ನೋವು ಕಾಡಲು ಶುರುವಾಗಿತ್ತು. ಹೀಗಾಗಿ ಆಕೆ ದೂರದ ಬಿಹಾರದಿಂದ ಮೈಗ್ರೇನ್ ಚಿಕಿತ್ಸೆಗೆಂದು ದೆಹಲಿಗೆ ಆಗಮಿಸಿದ್ದಳು. ಈಕೆಯ ಮೈಗ್ರೇನ್ ತಲೆನೋವಿಗೆ ಚಿಕಿತ್ಸೆ ಆರಂಭಿಸಿದ ವೈದ್ಯರು ಈಕೆಯ ಮಾತು ಕೇಳಿ ಬೆಚ್ಚಿ ಬಿದ್ದಿದ್ದಾರೆ. ಕಾರಣ ಆಕೆಯ ಮೈಗ್ರೇನ್ ತಲೆನೋವಿನ ಹಿಂದಿತ್ತು ವಿಚಿತ್ರ ಕಥೆ. ಅಷ್ಟು ದಿನ ಮೌನವಾಗಿಯೇ ಪ್ರತಿಭಟಿಸುತ್ತಿದ್ದ ಆಕೆ ವೈದ್ಯರ ಮುಂದೆ ತಾನು ಅನುಭವಿಸುತ್ತಿದ್ದ ವೇದನಾಜನಕ ಕತೆಯನ್ನು ಹೇಳಿದ್ದಳು. ಈ ಎಲ್ಲಾ ವಿಚಿತ್ರ ಕಥೆಗಳಿಗೆ ಮೂಕಪ್ರೇಕ್ಷಕರಾಗಿದ್ದು ಮಾತ್ರ ದೆಹಲಿಯ ಸಫ್ದರ್‍ಜಂಗ್ ಆಸ್ಪತ್ರೆ ವೈದ್ಯರು.

    ಆಕೆಯ ಊರು ಬಿಹಾರ ರಾಜ್ಯದ ಶೇಖ್‍ಪುರ್ ಜಿಲ್ಲೆಯ ಒಂದು ಗ್ರಾಮ. ತಂದೆ, ತಾಯಿ, ಸೋದರಿ ಜೊತೆ ವಾಸಿಸುತ್ತಿದ್ದಳು. ತಂದೆ ಕೃಷಿಕ. ಆದರೆ ಆತನೊಳಗೊಬ್ಬ ವಿಕೃತ ಕಾಮಿಯಿದ್ದ. ಆಕೆ ತನ್ನ ಸ್ವಂತ ಮಗಳು ಎಂಬುದನ್ನೂ ಮರೆತು ಆತ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗುತ್ತಿದ್ದ. ಇಷ್ಟೇ ಅಲ್ಲ ತನ್ನ ಪುತ್ರಿಯನ್ನು ಬೆತ್ತಲೆಗೊಳಿಸಿ ಆತ ಮೊಬೈಲ್‍ನಲ್ಲಿ ಆಕೆಯ ಫೋಟೋ ತೆಗೆದಿಟ್ಟುಕೊಂಡಿದ್ದ. ಈ ಫೋಟೋಗಳನ್ನೇ ಪದೇ ಪದೇ ತೋರಿಸಿಕೊಂಡು ಆತ ತನ್ನ ಕಾಮತೃಷೆ ತೀರಿಸಿಕೊಳ್ಳುತ್ತಿದ್ದ.

    ತಲೆನೋವಿಗೆ ಕಾರಣವಾಗಿದ್ದೇ ಈ ಮೊಬೈಲ್!: ಹೀಗೆ ತನ್ನ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಎಸಗಿದ ಸಾಕ್ಷ್ಯಾಧಾರಗಳಿರುವ ಮೊಬೈಲ್ ಆಕೆಯ ತಂದೆ ದೆಹಲಿಗೆ ಬರುವ ರೈಲಿನಲ್ಲಿ ಕಳೆದುಹೋಗುತ್ತದೆ. ಇದಾದ ನಂತರ ಈಕೆಗೆ ಮೈಗ್ರೇನ್ ಕಾಣಿಸಿಕೊಂಡಿದೆ. ತಲೆ ನೋವು ತಡೆದುಕೊಳ್ಳಲು ಸಾಧ್ಯವೇ ಇಲ್ಲ ಅನ್ನಿಸಿದಾಗ ಆಕೆಯನ್ನು ಪೋಷಕರು ದೆಹಲಿಯ ಸಫ್ದರ್‍ಜಂಗ್ ಆಸ್ಪತ್ರೆಗೆ ಕರೆತಂದಿದ್ದಾರೆ. ಆಸ್ಪತ್ರೆಯಲ್ಲಿ ಆರಂಭದಲ್ಲಿ ಆಕೆ ವೈದ್ಯರ ಬಳಿ ಏನನ್ನೂ ಹೇಳಿರುವುದಿಲ್ಲ. ಆದರೆ ಚಿಕಿತ್ಸೆ ಮುಂದುವರಿದ ಭಾಗವಾಗಿ ವೈದ್ಯರು ತಲೆನೋವಿಗೆ ಕಾರಣವಾದ ಘಟನೆಗಳನ್ನು ಕೇಳಿದಾಗ ಆಕೆ ತನ್ನ ಜೀವನದಲ್ಲಿ ಆದ ಘಟನೆಗಳನ್ನು ಬಾಯಿ ಬಿಟ್ಟಿದ್ದಾಳೆ.

    ‘ನನ್ನ ತಂದೆ ರಾತ್ರಿ ಮಲಗಿದ್ದಾಗ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ. ಕಳೆದ ಕೆಲವರ್ಷಗಳಿಂದ ನನ್ನ ಮೇಲೆ ನಿರಂತರ ದೌರ್ಜನ್ಯ, ಅತ್ಯಾಚಾರ ನಡೆಸುತ್ತಿದ್ದ. ನಾನು ಇದಕ್ಕೆ ಪ್ರತಿಭಟಿಸಿದರೆ ನನಗೆ ಹೊಡೆಯುತ್ತಿದ್ದ. ಅಲ್ಲದೆ ನನ್ನನ್ನು ಬೆದರಿಸುತ್ತಿದ್ದ. ಹೀಗಾಗಿ ನಾನು ಯಾರ ಜೊತೆಗೆ ಏನೂ ಹೇಳಿಕೊಂಡಿರಲಿಲ್ಲ. ಆದರೆ ತಂದೆಯ ಮೊಬೈಲ್‍ನಲ್ಲಿ ನನ್ನ ಹಲವಾರು ನಗ್ನ ಫೋಟೋಗಳಿದ್ದವು. ಈ ಮೊಬೈಲ್ ಕಳೆದುಹೋದ ಮೇಲೆ ನನಗೆ ತಲೆ ನೋವು ಶುರುವಾಯಿತು’ ಎಂದು ಬಾಯಿಬಿಟ್ಟಿದ್ದಾಳೆ. ಈ ವಿಚಾರ ತಿಳಿದ ವೈದ್ಯರು ತನ್ನ ಸೀನಿಯರ್ ಡಾಕ್ಟರ್ ಗೆ ಈ ವಿಚಾರ ತಿಳಿಸಿದ್ದಾರೆ. ನಂತರ ಆಕೆಯ ತಂದೆಯ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ನೀಡಿದ ಬೆನ್ನಲ್ಲೇ ಪೊಲೀಸರು ಆಕೆಯ ತಂದೆಯನ್ನು ಬಂಧಿಸಿದ್ದಾರೆ. ಈ ಪ್ರಕರಣದ ತನಿಖೆ ಮುಂದುವರಿದಿದೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

    ಮನೋಶಾಸ್ತ್ರಜ್ಞರ ಪ್ರಕಾರ, ಮಕ್ಕಳ ಮೇಲೆ ಆಗುವ ಈ ರೀತಿಯ ಲೈಂಗಿಕ ದೌರ್ಜನ್ಯಗಳಿಂದ ಅವರು ಖಿನ್ನತೆಗೆ ಜಾರುವ ಸಾಧ್ಯತೆಗಳಿವೆ ಎಂದಿದ್ದಾರೆ.