Tag: ತಲಾಕ್

  • ತ್ರಿವಳಿ ತಲಾಖ್ ಹೇಳಲು ನಿರಾಕರಿಸಿದ ಯುವಕನಿಗೆ ಹಲ್ಲೆ

    ತ್ರಿವಳಿ ತಲಾಖ್ ಹೇಳಲು ನಿರಾಕರಿಸಿದ ಯುವಕನಿಗೆ ಹಲ್ಲೆ

    ತಿರುವನಂತಪರ: ಮೂರು ಬಾರಿ ತಲಾಖ್ ಪದವನ್ನು ಹೇಳುವ ಮೂಲಕ ವಿಚ್ಛೇದನದ ಬೇಡಿಕೆಯನ್ನು ನಿರಾಕರಿಸಿದ್ದಕ್ಕಾಗಿ ಪತ್ನಿಯ ಸಂಬಂಧಿಕರು ಯವಕನೊಬ್ಬನಿಗೆ ಹಲ್ಲೆ ನಡೆಸಿರುವ ಘಟನೆ ಕೇರಳದ ಮಲ್ಲಪುರಂ ಜಿಲ್ಲೆಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

    ಅಬ್ದುಲ್ ಅಸೀಬ್ (30) ಹಲ್ಲೆಗೊಳಗಾದ ಯವಕ. ಒಂದೂವರೆ ತಿಂಗಳ ಹಿಂದೆ ಮದುವೆಯಾಗಿದ್ದ ಈತ ಕೆಲದಿನಗಳ ನಂತರ ಪತ್ನಿಯಿಂದ ಬೇರೆಯಾಗಿದ್ದ. ಆ ಬಳಿಕ ಪತ್ನಿಯ ತಂದೆ, ತಾಯಿ ಮತ್ತು ಸಂಬಂಧಿಕರು ಅಸೀಬ್ ಬಳಿ ವಿಚ್ಛೇದನ ನೀಡುವಂತೆ ತ್ರಿವಳಿ ತಲಾಖ್ ಹೇಳಲು ಕೇಳಿಕೊಂಡಿದ್ದಾರೆ. ಇದಕ್ಕೆ ನಿರಾಕರಿಸಿದ್ದ ಅಸೀಬ್‍ಗೆ ಆತನ ಮಾವ ಹಾಗೂ ಪತ್ನಿಯ ಚಿಕ್ಕಪ್ಪಂದಿರು ಹಲ್ಲೆ ನಡೆಸಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಒಂದು ಕೆನ್ನೆಗೆ ಹೊಡೆದಾಗ ಮತ್ತೊಂದು ಕೆನ್ನೆ ತೋರಿಸಿದರೆ ಸಿಗೋದು ಸ್ವಾತಂತ್ರ್ಯವಲ್ಲ, ಭಿಕ್ಷೆ: ಕಂಗನಾ

    ಅಸೀಬ್ ಅನುಮಾನಾಸ್ಪದ ಸ್ವಭಾವದವ ಹೊಂದಿದ್ದು, ಮಾದಕ ದ್ರವ್ಯ ಸೇವಿಸುತ್ತಿದ್ದರಿಂದಾಗಿ ದಾಂಪತ್ಯ ಜೀವನದಲ್ಲಿ ಬಿರುಕು ಕಾಣಿಸಿಕೊಂಡು ಪತಿ, ಪತ್ನಿ ದೂರವಾಗಿದ್ದರು ಎಂದು ಪತ್ನಿಯ ಸಂಬಂಧಿಕರು ಆರೋಪಿಸಿದ್ದಾರೆ. ಇದನ್ನೂ ಓದಿ: ಶ್ರೀಕಿ ಜೊತೆ ಪ್ರಿಯಾಂಕ್ ಖರ್ಗೆಗೆ ಸಂಪರ್ಕ, 50 ಸಾವಿರ ಕೋಟಿ ಆಸ್ತಿ – ಕಾರ್ಣಿಕ್ ಆರೋಪ

    ನಿನ್ನೆ ಅಸೀಬ್‍ನ ಕಚೇರಿಗೆ ಆಗಮಿಸಿದ ಪತ್ನಿಯ ಚಿಕ್ಕಪ್ಪಂದಿರು ಪತ್ನಿಯ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಸಾಂಕೇತಿಕವಾಗಿ ಪತ್ನಿಗೆ ವಿಚ್ಛೇದನ ನೀಡುವ ಭಾಗವಾಗಿ ತ್ರಿವಳಿ ತಲಾಖ್ ಹೇಳಬೇಕು ಎಂದು ಒತ್ತಾಯಿಸಿದಾಗ ತಲಾಕ್ ಹೇಳಲು ನಿರಾಕರಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದ ಪತ್ನಿಯ ಚಿಕ್ಕಪ್ಪಂದಿರು ಅಸೀಬ್‍ಗೆ ಮನಬಂದಂತೆ ಥಳಿಸಿ ಗಂಭೀರವಾಗಿ ಗಾಯಗೊಳಿಸಿದ್ದಾರೆ. ಆಸೀಬ್ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಘಟನೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳನ್ನು ಕೊಟ್ಟಕ್ಕಲ್ ಪೊಲೀಸರು ಬಂಧಿಸಿದ್ದಾರೆ.

  • ಬಿಡುಗಡೆಗೆ ಸಜ್ಜಾಯಿತು ‘ತಲಾಕ್ ತಲಾಕ್ ತಲಾಕ್’ ಚಿತ್ರ

    ಬಿಡುಗಡೆಗೆ ಸಜ್ಜಾಯಿತು ‘ತಲಾಕ್ ತಲಾಕ್ ತಲಾಕ್’ ಚಿತ್ರ

    ದಂಡನಾಯಕ ಸಿನಿಮಾ ಮೂಲಕ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ಹಿರಿಯ ನಿರ್ದೇಶಕ ಎ. ವೈಧ್ಯನಾಥ ಹಲವು ವರ್ಷಗಳ ನಂತರ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ. ಈ ಬಾರಿ ದೇಶದಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿರೋ ತ್ರಿವಳಿ ತಲಾಕ್ ವಿಷಯವನ್ನಾಧರಿಸಿ ಚಿತ್ರಕಥೆ ಹೆಣೆದು ತೆರೆ ಮೇಲೆ ತರಲು ರೆಡಿಯಾಗಿದ್ದಾರೆ. ಸಾಮಾಜಿಕ ಕಳಕಳಿ ಒಳಗೊಂಡಿರುವ ಈ ಚಿತ್ರದ ಹೆಸರು `ತಲಾಕ್, ತಲಾಕ್, ತಲಾಕ್’.

    ತಲಾಕ್ ಬಗ್ಗೆ ಸೂಕ್ಷ್ಮ ಮಾಹಿತಿಗಳನ್ನು ಕಲೆಹಾಕಿ ನೂರ್ ಜಹೀರ್ ಅವರ ಪುಸ್ತಕವನ್ನಾಧರಿಸಿ ಎ. ವೈಧ್ಯನಾಥ್ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಎ. ವೈಧ್ಯನಾಥ್ ಇಬ್ಬರ ಮಕ್ಕಳು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ತಲಾಕ್ ನಂತರ ಹೆಣ್ಣು ಮಕ್ಕಳು ಅನುಭವಿಸುವ ನೋವಿನ ಬಗ್ಗೆ ಚಿತ್ರದಲ್ಲಿ ಕಟ್ಟಿಕೊಡಲಾಗಿದ್ದು, ನಿರ್ದೇಶಕರು ಯಾರ ಭಾವನೆಗಳಿಗೂ ನೋವಾಗದಂತೆ ಎಚ್ಚರ ವಹಿಸಿ ಸಿನಿಮಾ ಮಾಡಿದ್ದಾರೆ. ಈಗಾಗಲೇ ಯು.ಕೆ, ಆಸ್ಟ್ರೇಲಿಯಾ, ಚೆನ್ನೈ ಫಿಲ್ಮೋತ್ಸವಗಳಲ್ಲಿ ಪ್ರದರ್ಶನಗೊಂಡು ಮೆಚ್ಚುಗೆ ಪಡೆದುಕೊಂಡಿದೆ ‘ತಲಾಕ್, ತಲಾಕ್, ತಲಾಕ್’ ಚಿತ್ರ. ಫೆಬ್ರವರಿಯಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದ್ದು, ಸದ್ಯದಲ್ಲೇ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡಲಿದೆ ಚಿತ್ರತಂಡ.

    ಖ್ಯಾತ ಛಾಯಾಗ್ರಾಹಕ ಅಶೋಕ್ ಕಶ್ಯಪ್ ಕ್ಯಾಮೆರಾ ಕಣ್ಣಲ್ಲಿ ‘ತಲಾಕ್, ತಲಾಕ್, ತಲಾಕ್’ ಸಿನಿಮಾ ಸೆರೆಯಾಗಿದ್ದು, ಪ್ರವೀಣ್ ಗೋಡ್ಕಿಂಡಿ ಅವರ ಮನ ಮಿಡಿಯುವ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಹಿರಿಯ ನಟ ಶ್ರೀನಿವಾಸ ಮೂರ್ತಿ ಚಿತ್ರದಲ್ಲಿ ಮೌಲ್ವಿ ಪಾತ್ರದಲ್ಲಿ ನಟಿಸಿದ್ದು, ಆರ್.ಜೆ. ನೇತ್ರಾ, ರವಿ ಭಟ್, ವೀಣಾ ಸುಂದರ್, ಪದ್ಮಾ ಜೋಯಿಸ್, ಶಾಮಂತ್ ವೈಧ್ಯ, ಸುಚೇತನ್ ಸ್ವರೂಪ್ ವೈಧ್ಯನಾಥ್ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಎ.ವೈಧ್ಯನಾಥ್ ಸಿನಿಮಾ ನಿರ್ದೇಶನದ ಜೊತೆ ನಿರ್ಮಾಣವನ್ನು ಮಾಡಿದ್ದು, ಪತ್ನಿ ಸುಭಾಷಿಣಿ ವೈಧ್ಯನಾಥ್ ಕೂಡ ಸಿನಿಮಾ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ಸಾಕಷ್ಟು ಗಮನ ಸೆಳೆದಿರುವ ಈ ಚಿತ್ರ ಯಾವ ರೀತಿ ಪ್ರಭಾವ ಬೀರುತ್ತೆ ಅನ್ನೋದನ್ನ ಕಾದು ನೋಡಬೇಕು.

  • ಮಗ ತಲಾಕ್ ನೀಡಿದ ಕೆಲವೇ ಗಂಟೆಗಳಲ್ಲಿ ಸೊಸೆಯ ಮೇಲೆ ಅತ್ಯಾಚಾರವೆಸಗಿದ ಮಾವ

    ಮಗ ತಲಾಕ್ ನೀಡಿದ ಕೆಲವೇ ಗಂಟೆಗಳಲ್ಲಿ ಸೊಸೆಯ ಮೇಲೆ ಅತ್ಯಾಚಾರವೆಸಗಿದ ಮಾವ

    ಜೈಪುರ: ಮಗ ತಲಾಕ್ ನೀಡಿದ ಕೆಲವೇ ಗಂಟೆಗಳಲ್ಲಿ ಮಾವ ತನ್ನ ಸೊಸೆಯನ್ನು ಅತ್ಯಾಚಾರ ಮಾಡಿದ ಘಟನೆ ರಾಜಸ್ಥಾನದ ಅಲ್ವರ್ ಜಿಲ್ಲೆಯಲ್ಲಿ ನಡೆದಿದೆ.

    ಮಹಿಳೆ 2015ರಲ್ಲಿ ಮದುವೆಯಾಗಿ ಒಂದು ವರ್ಷಕ್ಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ ಆಕೆಯ ಪತಿ ಹಾಗೂ ಆತನ ಕುಟುಂಬಸ್ಥರು ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು.

    ನ. 20ರಂದು ಪತಿಯ ಕುಟುಂಬಸ್ಥರು ಆಕೆಯನ್ನು ರೂಮಿನಲ್ಲಿ ಬಂಧಿಸಿ ವರದಕ್ಷಿಣೆ ತರುವಂತೆ ಹಲ್ಲೆ ಮಾಡಿದ್ದರು. ಬಳಿಕ ನ. 22ರಂದು ಪತಿ ಮನೆಗೆ ಬಂದು ಮಹಿಳೆಗೆ ತಲಾಕ್ ನೀಡಿದ್ದಾನೆ. ತಲಾಕ್ ನೀಡಿದ ದಿನ ರಾತ್ರಿ ಸುಮಾರು 11 ಗಂಟೆಗೆ ಮಾವ ಹಾಗೂ ಸಂಬಂಧಿಕರು ಆಕೆಯ ರೂಮಿಗೆ ಹೋಗಿ ಗನ್ ತೋರಿಸಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.

    ಮರುದಿನ ಬೆಳಗ್ಗೆ ಸಂತ್ರಸ್ತೆ ತನ್ನ ತಂದೆಗೆ ಕರೆ ಮಾಡಿ ಘಟನೆ ಬಗ್ಗೆ ವಿವರಿಸಿದ್ದಾಳೆ. ಬಳಿಕ ತಂದೆ ಪೊಲೀಸ್ ಠಾಣೆ ಹೋಗಿ ದೂರು ನೀಡಿದ್ದಾರೆ. ಪೊಲೀಸರು ದೂರು ದಾಖಲಿಸಿಕೊಂಡು ಮಹಿಳೆಯನ್ನು ರಕ್ಷಿಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಉಪ ಅಧೀಕ್ಷಕ ಕುಮ್ವತ್, ಐಪಿಸಿ ಸೆಕ್ಷನ್ ಅಡಿಯಲ್ಲಿ ಅತ್ಯಾಚಾರದ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದೇವೆ. ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದು, ವರದಿಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ.

  • ದುಬೈನಿಂದ ವಾಟ್ಸಪ್‍ನಲ್ಲೇ ಶಿವಮೊಗ್ಗದಲ್ಲಿರುವ ಪತ್ನಿಗೆ ತಲಾಖ್

    ದುಬೈನಿಂದ ವಾಟ್ಸಪ್‍ನಲ್ಲೇ ಶಿವಮೊಗ್ಗದಲ್ಲಿರುವ ಪತ್ನಿಗೆ ತಲಾಖ್

    ಶಿವಮೊಗ್ಗ: ತ್ರಿವಳಿ ತಲಾಖ್ ವಿರುದ್ಧ ಕೇಂದ್ರ ಸರ್ಕಾರ ಕಾನೂನು ಜಾರಿಗೆ ತಂದಿದ್ದರೂ ದುಬೈನಿಂದ ಪತಿ ಮಹಾಶಯನೊಬ್ಬ ವಾಟ್ಸಾಪ್ ಮೂಲಕ ಪತ್ನಿಗೆ ತಲಾಖ್ ನೀಡಿದ್ದಾನೆ.

    ನಗರದ ಟ್ಯಾಂಕ್ ಮೊಹಲ್ಲಾ ನಿವಾಸಿ ಮುಸ್ತಫಾ ಬೇಗ್ ಪತ್ನಿಗೆ ತಲಾಖ್ ನೀಡಿದ ಪತಿ. ಮುಸ್ತಫಾ ಬೇಗ್ ಅದೇ ಬಡಾವಣೆಯ ಆಯಿಷಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದ. ಬಳಿಕ ಕೆಲಸಕ್ಕಾಗಿ ದುಬೈಗೆ ತೆರಳಿದ್ದ. ವರ್ಷಕ್ಕೆ ಎರಡು ಬಾರಿ ಮನೆಗೆ ಬಂದು, ಪತ್ನಿ ಹಾಗೂ ಮಗಳ ಜೊತೆಗೆ ಕಾಲ ಕಳೆಯುತ್ತಿದ್ದ. ಇದನ್ನೂ ಓದಿ: ಮೋದಿ ರ‍್ಯಾಲಿಯಲ್ಲಿ ಭಾಗವಹಿಸಿದ್ದಕ್ಕೆ ಪತ್ನಿಗೆ ತಲಾಕ್ ನೀಡಿದ ಪತಿ!

    ಮುಸ್ತಫಾ ಬೇಗ್ ತನ್ನ ವೇತನದಲ್ಲಿ ಕುಟುಂಬ ನಿರ್ವಹಣೆಗಾಗಿ ಪ್ರತಿ ತಿಂಗಳು 13 ಸಾವಿರ ರೂ. ನೀಡುತ್ತಿದ್ದ. 20 ವರ್ಷಗಳ ಕಾಲ ಆಯಿಷಾ ಜೊತೆಗೆ ಸಂಸಾರ ನಡೆಸಿದ್ದ ಮುಸ್ತಫಾ ಬೇಗ್ ಈಗ ವಾಟ್ಸಪ್ ಮೂಲಕ ತಲಾಖ್ ನೀಡಿದ್ದಾನೆ. ಆದರೆ ಪತ್ನಿ ಆಯಿಷಾ ಅವರು ಮಾತ್ರ ನನಗೆ ತಲಾಖ್ ಬೇಡ, ಪತಿಯೇ ಬೇಕು. ನಾನು ಆತನ ಜೊತೆಗೆ ಸಂಸಾರ ನಡೆಸಬೇಕು ನನಗೆ ನ್ಯಾಯ ಕೊಡಿಸಿ ಎಂದು ಮಹಿಳಾ ಠಾಣೆಗೆ ದೂರು ನೀಡಿದ್ದಾರೆ.  ಇದನ್ನೂ ಓದಿ: ಅತ್ತೆಯ 2ನೇ ಪತಿಯೊಂದಿಗೆ ಸೆಕ್ಸ್ ಗೆ ಒತ್ತಾಯಿಸಿದ್ರು – ವಾಟ್ಸಪ್‍ನಲ್ಲಿ ತ್ರಿವಳಿ ತಲಾಕ್ ಪಡೆದ ಮಹಿಳೆ ಹೇಳಿಕೆ

    ಮೊದಲು ದೂರು ದಾಖಲಿಸಿಕೊಳ್ಳಲು ಪೊಲೀಸರು ಹಿಂದೇಟು ಹಾಕಿದ್ದರು. ಆದರೆ ಆಯಿಷಾ ಒತ್ತಾಯಕ್ಕೆ ದೂರು ದಾಖಲಿಸಿಕೊಂಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಬುಧವಾರ ಅಧಿಕೃತವಾಗಿ ಮುಸ್ತಫಾ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

  • ಮೋದಿ ರ‍್ಯಾಲಿಯಲ್ಲಿ ಭಾಗವಹಿಸಿದ್ದಕ್ಕೆ ಪತ್ನಿಗೆ ತಲಾಕ್ ನೀಡಿದ ಪತಿ!

    ಮೋದಿ ರ‍್ಯಾಲಿಯಲ್ಲಿ ಭಾಗವಹಿಸಿದ್ದಕ್ಕೆ ಪತ್ನಿಗೆ ತಲಾಕ್ ನೀಡಿದ ಪತಿ!

    ಲಕ್ನೋ: ಉತ್ತರ ಪ್ರದೇಶದ ಮಹಿಳೆಯೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರ ರ‍್ಯಾಲಿಯಲ್ಲಿ ಭಾಗವಹಿಸಿದಕ್ಕೆ ಪತಿ ತ್ರಿವಳಿ ತಲಾಕ್ ನೀಡಿದ್ದಾನೆ ಎಂದು ಸಂತ್ರಸ್ತ ಮಹಿಳೆ ಆರೋಪಿಸಿದ್ದಾರೆ.

    ಉತ್ತರ ಪ್ರದೇಶ ಮುಸ್ಲಿಂ ಮಹಿಳೆ ಫಿರಾ ಎಂಬವರು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ತ್ರಿವಳಿ ತಲಾಕ್ ನಿಷೇಧ ಕ್ರಮವನ್ನ ಬೆಂಬಲಿಸಲು ಮೋದಿ ಅವರು ನಡೆಸಿದ ರ‍್ಯಾಲಿಯಲ್ಲಿ ಭಾಗವಹಿಸಿದ್ದರು.

    ಆದರೆ, ಫಿರಾ ಪತಿ ಡ್ಯಾನಿಶ್ ಸಂಬಂಧಿ ಮಹಿಳೆಯೊಂದಿಗೆ ಆಕ್ರಮ ಸಂಬಂಧ ಹೊಂದಿದ್ದು, ಮಗುವನ್ನು ಸಹ ಹೊಂದಿದ್ದಾರೆ. ಇದರಿಂದ ಆತ ಪ್ರತಿದಿನವೂ ತನಗೆ ತಲಾಕ್ ನೀಡುವಂತೆ ಹಿಂಸೆ ನೀಡುತ್ತಿದ್ದ. ಅಲ್ಲದೇ ನಾನು ಪ್ರಧಾನಿ ನರೇಂದ್ರ ಮೋದಿ ಅವರ ರ‍್ಯಾಲಿಯಲ್ಲಿ ಭಾಗವಹಿಸಿ ವಾಪಸ್ ಬಂದ ನಂತರ ಮೋದಿ ನನ್ನನ್ನು ಏನು ಮಾಡಲು ಸಾಧ್ಯವಿಲ್ಲ ಎಂದು ಹೇಳಿ ನನ್ನ ಮಗುವಿನೊಂದಿಗೆ ನಮ್ಮಿಬ್ಬರನ್ನು ಹೊಡೆದು ಮನೆಯಿಂದ ಹೊರ ಹಾಕಿರುವುದಾಗಿ ತಿಳಿಸಿದ್ದಾರೆ.

    ಆದರೆ ಪತ್ನಿಯ ಆರೋಪವನ್ನು ನಿರಾಕರಿಸಿರುವ ಡ್ಯಾನಿಶ್, ತನ್ನ ಪತ್ನಿ ಆಕ್ರಮ ಸಂಬಂಧ ಹೊಂದಿದ್ದಳು. ಆಕೆ ಜಿನ್ಸ್ ಪ್ಯಾಂಟ್ ಧರಿಸುತ್ತಿದ್ದಳು. ಅಲ್ಲದೇ ಆಕೆಯ ಚಿಕ್ಕಪ್ಪ ನನಗೆ ತೊಂದರೆ ನೀಡುತ್ತಿದ್ದ ಮತ್ತು ಹಲ್ಲೆಗೈದಿದ್ದಾನೆ. ನಾನು ತಲಾಕ್ ನೀಡುವುದಕ್ಕೂ ಮೋದಿ ರ‍್ಯಾಲಿಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.

  • ನಾನು ನಿಮಗೆ ವೋಟ್ ಹಾಕಿದ್ದೇನೆ, ಪ್ಲೀಸ್ ತ್ರಿವಳಿ ತಲಾಖ್ ನಿಷೇಧಿಸಿ: ಮೋದಿಗೆ ಗರ್ಭಿಣಿಯಿಂದ ಪತ್ರ

    ನಾನು ನಿಮಗೆ ವೋಟ್ ಹಾಕಿದ್ದೇನೆ, ಪ್ಲೀಸ್ ತ್ರಿವಳಿ ತಲಾಖ್ ನಿಷೇಧಿಸಿ: ಮೋದಿಗೆ ಗರ್ಭಿಣಿಯಿಂದ ಪತ್ರ

    ಲಕ್ನೋ: ತ್ರಿವಳಿ ತಲಾಖ್ ನಿಷೇಧಿಸಿ ಎಂದು ಉತ್ತರ ಪ್ರದೇಶದ ಮೂರು ತಿಂಗಳ ಗರ್ಭಿಣಿಯೊಬ್ಬರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

    ತ್ರಿವಳಿ ತಲಾಖ್ ನಿಷೇಧಿಸಲು ನೀವು ಮುಂದಾಗಿದ್ದಕ್ಕೆ ನಾನು ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಮತವನ್ನು ಹಾಕಿದ್ದೇನೆ. ಹೀಗಾಗಿ ತ್ರಿವಳಿ ತಲಾಖ್ ನಿಷೇಧಿಸಿ ಎಂದು ತ್ರಿವಳಿ ತಲಾಖ್ ಸಂತ್ರಸ್ತೆ ಎರಡು ಹೆಣ್ಣುಮಕ್ಕಳ ತಾಯಿ ಆಗಿರುವ ಶಗುಫ್ತಾ ಮೋದಿಗೆ ಪತ್ರ ಬರೆದಿದ್ದಾರೆ.

    ಈ ಪತ್ರದ ಪ್ರತಿಯನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಜಿಲ್ಲಾಧಿಕಾರಿ ಮತ್ತು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಕಳುಹಿಸಿದ್ದಾರೆ.

    ಶಹನ್ ಪುರ ನಿವಾಸಿ ಶಗುಫ್ತಾ ಮತ್ತು ಶಂಶದ್ ನಡುವೆ 5 ವರ್ಷದ ಹಿಂದೆ ಮದುವೆಯಾಗಿದ್ದು ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮೂರನೇ ಮಗು ಹೆಣ್ಣಾಗಲಿದೆ ಎಂದು ತಿಳಿದು ಪತಿ ಗರ್ಭಪಾತಕ್ಕೆ ಒತ್ತಾಯಿಸಿದ್ದಾನೆ. ಆದರೆ ಶಗುಫ್ತಾ ಪತಿಯ ಮಾತನ್ನು ವಿರೋಧಿಸಿದ್ದಾರೆ. ಇದಕ್ಕೆ ಸಿಟ್ಟಾದ ಶಂಶದ್ ತನ್ನ ಸಹೋದರರ ಜೊತೆಗೂಡಿ ಮನಬಂದಂತೆ ಥಳಿಸಿದ್ದಾನೆ. ಮಗುವನ್ನು ಭ್ರೂಣದಲ್ಲಿ ಹತ್ಯೆ ಮಾಡಲು ಹೊಟ್ಟೆಗೆ ಹೊಡೆದಿದ್ದಾನೆ. ಅಷ್ಟೇ ಅಲ್ಲದೇ ಮೂರು ಬಾರಿ ತಲಾಖ್ ಹೇಳಿ ಈಗ ಮನೆಯಿಂದ ಹೊರಗೆ ಹಾಕಿದ್ದಾನೆ.

    ಈ ಸಂಬಂಧ ಶಂಶದ್ ಮತ್ತು ಸಹೋದರನ ವಿರುದ್ಧ ಐಪಿಸಿ ಸೆಕ್ಷನ್ 315ರ ಅಡಿ(ಭ್ರೂಣ ಹತ್ಯೆ) ಮಾರ್ಚ್ 24ರಂದು ಪ್ರಕರಣ ದಾಖಲಾಗಿದೆ.

    ಜೀವಂತವಾಗಿ ಜನಿಸುವುದನ್ನು ತಡೆಯುವ ಉದ್ದೇಶ ಅಥವಾ ಹುಟ್ಟಿನ ನಂತರ ಮಗುವಿನ ಸಾವಿಗೆ ಕಾರಣವಾಗುವ ಈ ಆರೋಪ ಸಾಬೀತಾದರೆ ಐಪಿಸಿಯ ಸೆಕ್ಷನ್ 315ರ ಅನ್ವಯ 10 ವರ್ಷಗಳ ಕಾಲ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ.