Tag: ತರುಣ್ ಟಾಕೀಸ್

  • ಯುವ ಸಾಮ್ರಾಟ್ ಚಿರುಗೆ ರಿಯಲ್ ಸ್ಟಾರ್ ಉಪ್ಪಿ ಸಾಥ್?

    ಯುವ ಸಾಮ್ರಾಟ್ ಚಿರುಗೆ ರಿಯಲ್ ಸ್ಟಾರ್ ಉಪ್ಪಿ ಸಾಥ್?

    – ಅಷ್ಟಕ್ಕೂ ಇವರಿಬ್ಬರು ಮಾಡ್ತಿರೋದೇನು ಗೊತ್ತಾ?

    ಪವರ್ ಫುಲ್ ಟೈಟಲ್, ಕ್ಯಾಚಿ ಟ್ಯಾಗ್ ಲೈನ್ ಮೂಲಕ ಸ್ಯಾಂಡಲ್ ವುಡ್‍ನಲ್ಲಿ ಸಂಚಲನ ಸೃಷ್ಟಿಸ್ತಿರೋ ಸಿನಿಮಾ ‘ಖಾಕಿ’. ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ, ಬ್ಯೂಟಿಫುಲ್ ತನ್ಯಾ ಹೋಪ್ ನಟನೆಯ ಸಿನಿಮಾ. ಈಗಾಗಲೇ ಟೀಸರ್ ಮೂಲಕ ಸೌಂಡ್ ಮಾಡ್ತಿರೋ ಖಾಕಿ ಚಿತ್ರ ಟ್ರೇಲರ್ ಇದೇ ತಿಂಗಳ 8ರಂದು ರಿಲೀಸ್ ಆಗ್ತಿದೆ. ಇಂಟ್ರೆಸ್ಟಿಂಗ್ ಅಂದ್ರೆ ರಿಯಲ್ ಸ್ಟಾರ್ ಉಪೇಂದ್ರ ಟ್ರೇಲರ್ ಲಾಂಚ್ ಮಾಡಲಿದ್ದಾರೆ.

    ಅಂದಹಾಗೇ ಚಿತ್ರಕ್ಕೆ ನವೀನ್ ರೆಡ್ಡಿ ಆ್ಯಕ್ಷನ್ ಕಟ್ ಹೇಳಿದ್ದು, ಮಾಸ್ ಲೀಡರ್, ವಿಕ್ಟರಿ-2 ನಂತಹ ಅದ್ಭುತ ಸಿನಿಮಾಗಳನ್ನ ಕೊಟ್ಟಿರೋ ತರುಣ್ ಶಿವಪ್ಪ ಈ ಚಿತ್ರಕ್ಕೂ ಬಂಡವಾಳ ಹೂಡಿದ್ದಾರೆ. ಮೊದಲಿನಿಂದ್ಲೂ ತರುಣ್ ಟಾಕೀಸ್ ನಿಂದ ಹೊರ ಬಂದಿರೋ ಸಿನಿಮಾಗಳಲ್ಲಿ ತಾಂತ್ರಿಕ ಶ್ರೀಮಂತಿಕೆ ಎದ್ದು ಕಾಣುತ್ತದೆ. ಅಷ್ಟೇ ಅಲ್ಲದೇ ತಮ್ಮ ಸಿನಿಮಾಗಳಿಗೆ ಯಾವುದೇ ಅಗತ್ಯತೆ ಇದ್ದರೆ ಕೊರತೆಯಾಗದಂತೆ ನೋಡಿಕೊಳ್ತಾರೆ ತರುಣ್.

    ಇನ್ನು ಖಾಕಿ ಚಿತ್ರಕ್ಕಡ ರಿತ್ವಿಕ್ ಸಂಗೀತ ನೀಡಿದ್ದು, ಬಾಲಾ ಛಾಯಾಗ್ರಹಣ, ವಿನೋದ್ ಸಾಹಸ ನಿರ್ದೇಶನ, ಕೆ.ಎಂ. ಪ್ರಕಾಶ್ ಸಂಕಲನ ಚಿತ್ರಕ್ಕಿದೆ. ಇನ್ನು ಜನವರಿ 24 ರಂದು ಖಾಕಿ ಸಿನಮಾ ಕನ್ನಡ, ತೆಲುಗು ಎರಡು ಭಾಷೆಯಲ್ಲೂ ತೆರೆ ಕಾಣಲಿದೆ.

  • ಮೋಡಿ ಮಾಡಿತು ‘ಖಾಕಿ’ ಹಾಡಿನ ಲಿರಿಕಲ್ ಕಂ ಮೇಕಿಂಗ್ ವೀಡಿಯೋ!

    ಮೋಡಿ ಮಾಡಿತು ‘ಖಾಕಿ’ ಹಾಡಿನ ಲಿರಿಕಲ್ ಕಂ ಮೇಕಿಂಗ್ ವೀಡಿಯೋ!

    ತರುಣ್ ಶಿವಪ್ಪ ನಿರ್ಮಾಣ ಮಾಡಿರುವ ಖಾಕಿ ಚಿತ್ರ ಹಂತ ಹಂತವಾಗಿ ತನ್ನ ಕ್ರಿಯೇಟಿವಿಟಿಯಿಂದಲೇ ಪ್ರೇಕ್ಷಕರನ್ನು ಸೆಳೆದುಕೊಳ್ಳುತ್ತಾ ಬರುತ್ತಿದೆ. ಈಗಾಗಲೇ ಟೀಸರ್ ಮೂಲಕ ಸಖತ್ ಆಗಿಯೇ ಸೌಂಡು ಮಾಡುತ್ತಿರೋ ಖಾಕಿ ಇದೀಗ ಪ್ರತೀ ಪಡ್ಡೆ ಹುಡುಗರ ಆತ್ಮ ನಿವೇದನೆಯಂಥಾ ಮಜವಾದ ಹಾಡೊಂದರ ಮೂಲಕ ಮತ್ತೆ ಸುದ್ದಿ ಕೇಂದ್ರಕ್ಕೆ ಬಂದಿದೆ. ಈ ಮೂಲಕವೇ ಯೋಗರಾಜ ಭಟ್ ಮತ್ತೆ ತಮ್ಮ ಲವಲವಿಕೆಯ ಶೈಲಿಯ ಹಾಡಿನ ಮೋಡಿ ಹಾಕಿದ್ದಾರೆ. ಈ ಹಾಡಿನ ಲಿರಿಕಲ್ ಕಂ ಮೇಕಿಂಗ್ ವೀಡಿಯೋವನ್ನು ಇದೀಗ ಚಿತ್ರತಂಡ ಬಿಡುಗಡೆಗೊಳಿಸಿದೆ.

    ಇದೀಗ ‘ಪ್ರತ್ರಿಯೊಬ್ಬ ಹುಡುಗನ ಹಿಂದೆ ಹುಡುಗಿ ಇರ್ತಾಳಂತೆ, ಅವರಿಂದ ಹುಡುಗರ ಜೀವ್ನ ಚೆನ್ನಾಗಿರ್ತಾದಂತೆ’ ಎಂಬ ಲಿರಿಕಲ್ ವೀಡಿಯೋ ಸಾಂಗ್ ಬಿಡುಗಡೆಯಾಗಿದೆ. ಒಂದೇ ಸಲಕ್ಕೆ ಇಷ್ಟವಾಗಿ ಬಿಡುವಂಥಾ ಈ ಹಾಡನ್ನು ಯೋಗರಾಜ್ ಭಟ್ ಬರೆದಿದ್ದಾರೆ. ಯುವ ಸಮುದಾಯದ ತವಕ ತಲ್ಲಣಗಳನ್ನು ತೆಳು ಉಡಾಫೆಯ ಧಾಟಿಯಲ್ಲಿ ಅಕ್ಷರವಾಗಿಸೋದು ಯೋಗರಾಜ್ ಭಟ್ ಅವರಿಗೆ ಒಲಿದಿರುವ ಕಲೆ. ಈ ಹಾಡಿನ ಮೂಲಕ ಅದು ಮತ್ತೊಮ್ಮೆ ಮಿರುಗಿದೆ. ನವೀನ್ ಸಜ್ಜು ಹಾಡಿರುವ ಈ ಹಾಡು ರಿತ್ವಿಕ್ ಮುರಳೀಧರ್ ಅವರ ಸಂಗೀತ ಸಂಯೋಜನೆಯಲ್ಲಿ ಚೆಂದಗೆ ಮೂಡಿ ಬಂದಿದೆ.

    ಎಲ್ಲರಿಗೂ ಇಷ್ಟವಾಗುವಂಥಾ ಈ ಹಾಡು ರೂಪುಗೊಂಡಿರೋ ರೀತಿಯನ್ನು ಜಾಹೀರು ಮಾಡುವಂಥಾ ಈ ಮೇಕಿಂಗ್ ಕಂ ಲಿರಿಕಲ್ ವೀಡಿಯೋಗೆ ಪ್ರೇಕ್ಷಕರ ಕಡೆಯಿಂದಲೂ ವ್ಯಾಪಕ ಪಾಸಿಟಿವ್ ಪ್ರತಿಕ್ರಿಯೆಗಳೇ ಕೇಳಿ ಬರುತ್ತಿವೆ. ಈ ವೀಡಿಯೋದಲ್ಲಿ ಸದರಿ ಹಾಡಿಗೆ ಅದು ಹೇಗೆ ದೃಷ್ಯ ರೂಪ ಕೊಡಲಾಗಿದೆ ಎಂಬ ಮಜವಾದ ಝಲಕ್‍ಗಳಿದ್ದಾವೆ. ಈ ಮೂಲಕವೇ ಚಿರಂಜೀವಿ ಸರ್ಜಾ ಮತ್ತು ತಾನ್ಯಾ ಹೋಪ್ ರೊಮ್ಯಾಂಟಿಕ್ ಕಾಗಿ ಕಾಣಿಸಿಕೊಂಡಿರೋ ರೀತಿಯ ತುಣುಕುಗಳೂ ಕಾಣಿಸಿಕೊಂಡಿವೆ. ಇದೆಲ್ಲವೂ ಖಾಕಿಯತ್ತ ಹೊತ್ತಿಕೊಂಡಿರೋ ಕುತೂಹಲ ಮತ್ತಷ್ಟು ಕಾವಿಗೊಡ್ಡಿಕೊಳ್ಳುವಂತೆ ಮಾಡುವಂತಿದೆ.

    ಇದು ತರುಣ್ ಟಾಕೀಸ್ ಮೂಲಕ ತರುಣ್ ಶಿವಪ್ಪ ನಿರ್ಮಾಣ ಮಾಡಿರುವ ಚಿತ್ರ. ಖಾಕಿ ಅಂದಾಕ್ಷಣ ಇದು ಪೊಲೀಸ್ ಕಥೆ ಇರಬಹುದಾ ಎಂಬ ಕುತೂಹಲ ಹುಟ್ಟಿಕೊಂಡಿತ್ತು. ಅದೀಗ ನಾನಾ ದಿಕ್ಕುಗಳಲ್ಲಿ ಚದುರಿಕೊಂಡಿದೆ. ಈ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಈ ವರೆಗೆ ನಟಿಸಿರದಂಥಾ ಹೈ ವೋಲ್ಟೋಜ್ ಆಕ್ಷನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆಂಬ ಮಾಹಿತಿ ಈ ಹಿಂದೆಯೇ ಜಾಹೀರಾಗಿತ್ತು. ನವೀನ್ ರೆಡ್ಡಿ ನಿರ್ದೇಶನ ಮಾಡಿರೋ ಈ ಚಿತ್ರದಲ್ಲಿ ಚಿರು ಮತ್ತು ತಾನ್ಯಾ ಜೋಡಿ ಅದೆಷ್ಟು ರೊಮ್ಯಾಂಟಿಕ್ ಮೂಡಲ್ಲಿ ಮುದ್ದು ಮುದ್ದಾಗಿ ನಟಿಸಿದ್ದಾರೆಂಬುದನ್ನು ಈ ಹಾಡಿನ ಲಿರಿಕಲ್ ಕಂ ಮೇಕಿಂಗ್ ವೀಡಿಯೋ ಅನಾವರಣಗೊಳಿಸಿದೆ. ಹೀಗೆ ಪ್ರತೀ ಹೆಜ್ಜೆಯಲ್ಲಿಯೂ ಗಮನ ಸೆಳೆಯುತ್ತಾ ಸಾಗುತ್ತಿರೋ ಈ ಚಿತ್ರವೀಗ ಬಿಡುಗಡೆಯತ್ತ ಮುಖ ಮಾಡಿದೆ.

  • ಕಲಾದೇವಿಯನ್ನು ಆರಾಧಿಸುವ ಕಲಾರಾಧಕರಿಗಾಗಿ ಸಿನಿಮಾ ಸ್ಕೂಲ್!

    ಕಲಾದೇವಿಯನ್ನು ಆರಾಧಿಸುವ ಕಲಾರಾಧಕರಿಗಾಗಿ ಸಿನಿಮಾ ಸ್ಕೂಲ್!

    ಬೆಂಗಳೂರು: ನಿರ್ಮಾಪಕ ತರುಣ್ ಶಿವಪ್ಪ ಸದಾ ಕ್ರಿಯಾಶೀಲತೆಗಾಗಿ ತುಡಿಯುವವರು. ತರುಣ್ ಟಾಕೀಸ್ ಸಂಸ್ಥೆಯನ್ನು ಆರಂಭಿಸಿ ಆ ಮೂಲಕ ರೋಸ್, ಮಾಸ್ ಲೀಡರ್, ವಿಕ್ಟರಿ-2 ಥರದ ಸೂಪರ್ ಹಿಟ್ ಚಿತ್ರಗಳನ್ನು ಸೇರಿದಂತೆ ಈಗ ನಿರ್ಮಾಣ ಹಂತದಲ್ಲಿರುವ ಖಾಕಿ ಸಿನಿಮಾವನ್ನು ನಿರ್ಮಿಸಿರುವವರು ನಿರ್ಮಾಪಕ ತರುಣ್ ಶಿವಪ್ಪ. ಸಾಮಾನ್ಯಕ್ಕೆ ಸಿನಿಮಾ ನಿರ್ಮಾಪಕರು ತಾವಾಯಿತು ತಮ್ಮ ಹಣಕಾಸಿನ ವ್ಯವಹಾರವಾಯಿತು ಎಂದು ಸುಮ್ಮನಾಗಿಬಿಡುತ್ತಾರೆ. ಯಾವ ಸಿನಿಮಾದ ಮೇಲೆ ಹೂಡಿಕೆ ಮಾಡಿದರೆ ಎಷ್ಟು ಲಾಭವಾಗಬಹುದು ಎಂಬುದಷ್ಟೇ ಅವರ ಲೆಕ್ಕಾಚಾರವಾಗಿರುತ್ತದೆ. ಆದರೆ ನಿರ್ಮಾಪಕ ತರುಣ್ ಶಿವಪ್ಪ ಅವರ ಆಲೋಚನಾ ಲಹರಿಯೇ ಬೇರೆ. ಕನ್ನಡ ಚಿತ್ರರಂಗವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವುದು ಹೇಗೆ? ಇಲ್ಲಿ ಕೊರತೆ ಇರುವ ಸಮರ್ಥ ಕಲಾವಿದರು, ತಂತ್ರಜ್ಞರನ್ನು ಹುಟ್ಟುಹಾಕುವುದು ಹೇಗೆ ಎಂದು ಚಿಂತಿಸಿ, ಸಾಕಷ್ಟು ಜನರೊಂದಿಗೆ ಚರ್ಚಿಸಿ ಒಂದು ತೀರ್ಮಾನಕ್ಕೆ ಬಂದಿದ್ದಾರೆ. ಅದು ಸಿನಿಮಾ ಶಾಲೆಯನ್ನು ಆರಂಭಿಸುವುದು.

    `ಸಿನಿಮಾ ಸ್ಕೂಲ್’ ಹೆಸರಿನಲ್ಲಿ ಚಲನಚಿತ್ರ ರಂಗಕ್ಕೆ ಸಂಬಂಧಿಸಿದ ತರಬೇತಿ ಕೇಂದ್ರವನ್ನು ನಿರ್ಮಾಪಕ ತರುಣ್ ಶಿವಪ್ಪ ಆರಂಭಿಸುತ್ತಿದ್ದಾರೆ. ಕಲಾದೇವಿಯನ್ನು ಆರಾಧಿಸುವ ಕಲಾರಾಧಕರಿಗೆ ಎನ್ನುವ ಅಡಿಬರಹವನ್ನೂ ನೀಡಿದ್ದಾರೆ.

    ನಿಜ ಚಿತ್ರರಂಗದ ಭಾಗವಾಗಬೇಕು ಎಂದು ತುಡಿಯುವ ಅಸಂಖ್ಯ ಜನರಿದ್ದಾರೆ. ಆದರೆ ಸರಿಯಾದ ಮಾರ್ಗದರ್ಶನವಿಲ್ಲದೆ ಅನೇಕರು ತಮ್ಮ ಮನಸ್ಸಿಗೊಪ್ಪದ ಕ್ಷೇತ್ರಗಳಲ್ಲಿ ದುಡಿಯುವಂತಹ ಸಂದರ್ಭ ಒದಗಿಬರುತ್ತದೆ. ಇನ್ನು ಕೆಲವರು ಹೇಗೋ ಮಾಡಿ ಚಿತ್ರರಂಗದ ಸಂಪರ್ಕ ಸಾಧಿಸುತ್ತಾರಾದರೂ, ಪರಿಣತಿಯ ಕೊರತೆಯಿಂದ ಗೆಲುವು ಮರೀಚಿಕೆಯಾಗುತ್ತದೆ. ಈ ನಿಟ್ಟಿನಲ್ಲಿ ಕರಾರುವಕ್ಕಾದ, ಸ್ಪಷ್ಟ ಮಾರ್ಗದರ್ಶನ, ನಿಯಮಿತವಾದ ಶಿಕ್ಷಣ ಅಗತ್ಯ. ಆದರೆ, ಎಲ್ಲಿ ಹೋಗಿ ಯಾರ ಬಳಿ ಕಲಿಯುವುದು, ಅಸಲಿಗೆ ತಮಗೊಪ್ಪುವ ಯಾವ ವಿಭಾಗವನ್ನು ಆಯ್ಕೆ ಮಾಡಿಕೊಂಡರೆ ಸೂಕ್ತ ಎನ್ನುವ ಗೊಂದಲ ಇರುತ್ತದೆ. ಇಂಥ ಅಭ್ಯರ್ಥಿಗಳಿಗೆ `ಸಿನಿಮಾ ಸ್ಕೂಲ್’ ಸಂಪೂರ್ಣ ಸಹಕಾರಿಯಾಗಲಿದೆ. ನಟನೆ, ನಿರ್ದೇಶನ, ಛಾಯಾಗ್ರಹಣ, ಸಂಗೀತ, ಸಂಕಲನ ಮತ್ತು ನಿರೂಪಣೆಯ ಕುರಿತಾಗಿ ಇಲ್ಲಿ ತರಬೇತಿ ಆರಂಭಿಸಲಾಗುತ್ತಿದೆ.

    ಆದರ್ಶ ಫಿಲಂ ಇನ್ಸ್ ಟಿಟ್ಯೂಟ್ ಸೇರಿದಂತೆ ರಾಜ್ಯದ ಹಲವಾರು ಸಿನಿಮಾ ಶಾಲೆಗಳಲ್ಲಿ ಕಳೆದ ಇಪ್ಪತ್ತೈದು ವರ್ಷಗಳಿಂದ ತರಬೇತುದಾರರಾಗಿ ಕಾರ್ಯ ನಿರ್ವಹಿಸಿರುವ, ಶಿವಾನಿ, ಮಿಂಚು, ಜುಲೈ22, 1947, ಇಂಗಳೆ ಮಾರ್ಗ, ಸಾವಿತ್ರಿ ಬಾಯಿ ಫುಲೆ, ಗೌರಿಪುತ ಮುಂತಾದ ಚಿತ್ರಗಳನ್ನು ನಿರ್ದೇಶಿಸಿರುವ ವಿಶಾಲ್ ರಾಜ್ ಈ `ಸಿನಿಮಾ ಸ್ಕೂಲ್’ಗೆ ಪ್ರಾಂಶುಪಾಲರಾಗಿದ್ದಾರೆ. ಅನುಭವೀ ತಂತ್ರಜ್ಞರು, ನಿರ್ದೇಶಕರು ಸೇರಿದಂತೆ ಸಿನಿಮಾದಲ್ಲಿ ಹೆಸರು ಮಾಡಿದವರು, ರಂಗಕರ್ಮಿಗಳು `ಸಿನಿಮಾ ಸ್ಕೂಲ್’ ನಲ್ಲಿ ತರಬೇತಿ, ಉಪನ್ಯಾಸ ನೀಡಲಿದ್ದಾರೆ.

    ನಾಗರಬಾವಿ ನಮ್ಮೂರ ತಿಂಡಿ ಹಿಂಭಾಗದಲ್ಲಿರುವ ಸೆವೆನ್ ವಂಡರ್ಸ್ ಕಟ್ಟಡದ ಎರಡನೇ ಮಹಡಿಯಲ್ಲಿ `ಸಿನಿಮಾ ಸ್ಕೂಲ್’ ಅಕ್ಟೋಬರ್ ತಿಂಗಳ ಕೊನೆಯ ವೇಳೆಗೆ ಕಾರ್ಯಾರಂಭ ಮಾಡಲಿದೆ. ಮೂರು ಮತ್ತು ಆರು ತಿಂಗಳ ಕೋರ್ಸ್ ಗಳು ಇಲ್ಲಿರುತ್ತವೆ. ಸಾಮಾನ್ಯವಾಗಿ ಸಿನಿಮಾ ಶಾಲೆಗಳು ನಿಗದಿತ ಅವಧಿಯಲ್ಲಿ ಕಲಿಸಿ ಸರ್ಟಿಫಿಕೇಟ್ ಕೊಟ್ಟು ಕಳಿಸಲಾಗುತ್ತದೆ. ಆದರೆ `ಸಿನಿಮಾ ಸ್ಕೂಲ್’ನ ಧ್ಯೇಯವೇ ಬೇರೆ ಇದೆ. ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಕಳಿಸಿಕೊಟ್ಟುಬಿಟ್ಟರೆ ಮತ್ತೆ ಅವರು ಆಡಿಷನ್‍ಗಳಲ್ಲಿ ಭಾಗವಹಿಸುತ್ತಾ, ಅವಕಾಶಕ್ಕಾಗಿ ಅಲೆದಾಡುವಂತಾಗುತ್ತದೆ. ಹೊಸದಾಗಿ ಕಲಿತು ಹೋದವರಿಗೆ ಅಷ್ಟು ಸುಲಭಕ್ಕೆ ಅವಕಾಶಗಳು ದೊರೆಯುವುದೂ ಇಲ್ಲ. ಸಿನಿಮಾ ಸ್ಕೂಲ್‍ನಲ್ಲಿ ಕೋರ್ಸು ಮುಗಿಸಿದ ಎರಡು ಮೂರು ಬ್ಯಾಚ್‍ಗಳ ಅಭ್ಯರ್ಥಿಗಳಲ್ಲಿ ಯಾರು ಉತ್ತಮವಾಗಿ ಕಲಿತಿರುತ್ತಾರೋ ಅವರಿಗಾಗಿಯೇ ತರುಣ್ ಟಾಕೀಸ್ ಅಡಿಯಲ್ಲಿ ಹೊಸ ಚಿತ್ರಗಳನ್ನು ಆರಂಭಿಸಿ, ಆದ್ಯತೆ ಮೇರೆಗೆ ಸಿನಿಮಾದಲ್ಲಿ ಕೆಲಸ ಮಾಡುವ ಅವಕಾಶ ನೀಡಲಾಗುತ್ತದೆ. ಕಮರ್ಷಿಯಲ್, ಕಲಾತ್ಮಕ ಮತ್ತು ಬ್ರಿಡ್ಜ್ ಚಿತ್ರಗಳನ್ನು ರೂಪಿಸಿ ಆ ಮೂಲಕ ಹೊಸ ಪ್ರತಿಭೆಗಳನ್ನು ಪರಿಚಯಿಸಲಾಗುತ್ತದೆ.

     ಕಲಾದೇವಿಯನ್ನು ಆರಾಧಿಸುವ, ಚಿತ್ರರಂಗದಲ್ಲಿ ಕೆಲಸ ಮಾಡಲು ಬಯಕೆ ಇರುವವರು `ಸಿನಿಮಾ ಸ್ಕೂಲ್’ ಸೇರಿ ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಬಹುದು.

    ಸಂಪರ್ಕ: #40, 2ನೇ ಮಹಡಿ, ನಮ್ಮೂರ ತಿಂಡಿ ಬಳಿ, ಎನ್.ಜಿ.ಇ.ಎಫ್ ಲೇಔಟ್ ಪಾರ್ಕ್ ಎದುರು, ನಾಗರಬಾವಿ, ಬೆಂಗಳೂರು-560072, ಮೊಬೈಲ್ 92069 20689

  • ತರುಣ್ ಟಾಕೀಸ್ ನಿರ್ಮಾಣದ ಮೂರನೇ ಚಿತ್ರ ಶುರು!

    ತರುಣ್ ಟಾಕೀಸ್ ನಿರ್ಮಾಣದ ಮೂರನೇ ಚಿತ್ರ ಶುರು!

    ಬೆಂಗಳೂರು: ತರುಣ್ ಟಾಕೀಸ್ ಲಾಂಛನದಲ್ಲಿ ತರುಣ್ ಶಿವಪ್ಪ ಹಾಗೂ ಮಾನಸ ತರುಣ್ ನಿರ್ಮಿಸುತ್ತಿರುವ `ಪ್ರೊಡಕ್ಷನ್ ನಂ 3` ನೂತನ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ರಾಜಾಜಿನಗರದ ಮೋದಿ ಆಸ್ಪತ್ರೆ ಬಳಿಯಿರುವ ಗಣೇಶನ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಪ್ರಥಮ ಸನ್ನಿವೇಶಕ್ಕೆ ಮಾನಸ ತರುಣ್ ಆರಂಭ ಫಲಕ ತೋರಿದರು. ನಿದೇರ್ಶಕ ಹರಿ ಸಂತು ಅವರ ತಾಯಿ ಪ್ರೇಮ ಕ್ಯಾಮೆರಾ ಚಾಲನೆ ಮಾಡಿದರು.

    ಅಲೆಮಾರಿ ಸಂತು ಎಂದೆ ಖ್ಯಾತರಾಗಿರುವ, ಇತ್ತೀಚೆಗಷ್ಟೇ `ಕಾಲೇಜ್ ಕುಮಾರ` ಎಂಬ ಯಶಸ್ವಿ ಚಿತ್ರವನ್ನು ನಿರ್ದೇಶಿಸಿದ್ದ ಹರಿ ಸಂತು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆಯನ್ನು ತರುಣ್ ಸುಧೀರ್ ಬರೆದಿದ್ದಾರೆ. ಗುರುಪ್ರಶಾಂತ್ ರೈ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ, ಕೆ.ಎಂ.ಪ್ರಕಾಶ್ ಸಂಕಲನ, ಭೂಷಣ್ ನೃತ್ಯ ನಿರ್ದೇಶನ ಹಾಗೂ ಮೋಹನ್ ಬಿ ಕೆರೆ ಅವರ ಕಲಾ ನಿರ್ದೇಶನವಿರುವ ಈ ಚಿತ್ರಕ್ಕೆ ರಾಜಶೇಖರ್ ಸಂಭಾಷಣೆ ಬರೆದಿದ್ದಾರೆ.

    ಈ ಚಿತ್ರಕ್ಕಾಗಿ ಕಲಾ ನಿರ್ದೇಶಕ ಮೋಹನ್ ಬಿ ಕೆರೆ ಅವರು ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ಒಂದು ತಿಂಗಳಿನಿಂದ ಬೃಹತ್ ಮನೆ ಸೆಟ್ ನಿರ್ಮಾಣ ಮಾಡುತ್ತಿದ್ದಾರೆ.

    ಶರಣ್, ರವಿಶಂಕರ್, ಸಾಧುಕೋಕಿಲ, ತಬಲನಾಣಿ, ಪ್ರಶಾಂತ್ ಸಿದ್ದಿ, ಅರಸು, ಕಲ್ಯಾಣಿ, ಅರುಣ ಬಾಲರಾಜ್, ಸುಂದರ್, ನಾಜರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.