Tag: ತರಾಟೆ

  • ಬಯಲಲ್ಲಿ ಶೌಚಕ್ಕೆ ತೆರಳುತ್ತಿದ್ದ ಯುವಕನಿಗೆ ಸಿಇಓ ಫುಲ್ ಕ್ಲಾಸ್

    ಬಯಲಲ್ಲಿ ಶೌಚಕ್ಕೆ ತೆರಳುತ್ತಿದ್ದ ಯುವಕನಿಗೆ ಸಿಇಓ ಫುಲ್ ಕ್ಲಾಸ್

    ಯಾದಗಿರಿ: ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಕವಿತಾ ಮನ್ನಿಕೇರಿ ಅವರು ಮನೆ ಮುಂದೆ ಶೌಚಾಲಯ ಕಟ್ಟಿಸಿಕೊಳ್ಳದೆ ಬಯಲು ಶೌಚಾಲಯಕ್ಕೆ ತೆರಳುತ್ತಿದ್ದ ಯುವಕನಿಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಇಂದು ಬೆಳಗ್ಗೆ ಸಿಇಓ ಕವಿತಾ ಮನ್ನಿಕೇರಿ ಸಭೆಯ ನಿಮಿತ್ತ ಯಾದಗಿರಿಯಿಂದ ವಿಜಯಪುರಕ್ಕೆ ತೆರಳುತ್ತಿದ್ದರು. ಇದೇ ಮಾರ್ಗದ ವಡಗೇರಾ ತಾಲೂಕಿನ ನಾಯ್ಕಲ್ ಗ್ರಾಮದಲ್ಲಿ ಯುವಕನೊಬ್ಬ ಬಯಲಲ್ಲಿ ಶೌಚಕ್ಕೆ ತೆರಳುತ್ತಿದ್ದನ್ನು ಕಂಡಿದ್ದಾರೆ. ಕೂಡಲೇ ತಮ್ಮ ವಾಹನವನ್ನು ನಿಲ್ಲಿಸಿ ಯುವಕನನ್ನು ನಿಲ್ಲಿಸಿ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    ವಿದ್ಯಾವಂತರಾದ ನೀವೇ ಹೀಗೆ ಬಯಲಲ್ಲಿ ಶೌಚಕ್ಕೆ ಹೋಗುವುದು ಎಷ್ಟು ಸರಿ? ಬೆಲೆ ಬಾಳುವ ಮೊಬೈಲ್‍ಗಳನ್ನು ಜೇಬಿನಲ್ಲಿರಿಸಿಕೊಳ್ಳುತ್ತೀರಿ. ನಿಮಗೆ ಶೌಚಾಲಯವನ್ನು ಕಟ್ಟಿಸಿಕೊಳ್ಳೋಕೆ ಆಗುವುದಿಲ್ಲವೇ ಎಂದು ಯುವಕನಿಗೆ ಪ್ರಶ್ನಿಸಿದರು. ಅಲ್ಲದೆ ಕೆಂಡಾಮಂಡಲರಾಗಿದ್ದ ಅವರು ಮೊದಲು ಶೌಚಾಲಯ ಕಟ್ಟಿ ಬಳಿಕ ಮನೆ ನಿರ್ಮಾಣ ಮಾಡೋದನ್ನು ಕಲಿಯಿರಿ ಎಂದು ಕಿಡಿಕಾರಿದ್ರು.

    ಸರ್ಕಾರ ಬಯಲು ಮುಕ್ತ ರಾಜ್ಯ ಮಾಡಲು ಸಾಕಷ್ಟು ಅನುದಾನ ಬಿಡುಗಡೆ ಮಾಡಿದ್ದರೂ ಜನರು ಮಾತ್ರ ಇನ್ನು ಜಾಗೃತಿಗೊಂಡು ಶೌಚಾಲಯ ಕಟ್ಟಿಸಿಕೊಳ್ಳದೇ ಬಯಲು ಪ್ರದೇಶಕ್ಕೆ ಹೋಗುವುದು ಎಷ್ಟು ಸರಿ. ಸಿಇಓ ಮನ್ನಿಕೇರಿ ಅವರು ಶೌಚಾಲಯದ ಬಗ್ಗೆ ಜನರಿಗೆ ಖಡಕ್ ವಾರ್ನಿಂಗ್ ಕೊಟ್ಟು ಎಚ್ಚರಿಸಿದ್ದಕ್ಕೆ ಇದೀಗ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಚಿವರ ಮುಂದೆ ಕೃಷಿ ಅಧಿಕಾರಿಯನ್ನೇ ತರಾಟೆಗೆ ತೆಗೆದುಕೊಂಡ ರೈತ

    ಸಚಿವರ ಮುಂದೆ ಕೃಷಿ ಅಧಿಕಾರಿಯನ್ನೇ ತರಾಟೆಗೆ ತೆಗೆದುಕೊಂಡ ರೈತ

    ದಾವಣಗೆರೆ: ಕೃಷಿ ಅಧಿಕಾರಿಗಳನ್ನು ರೈತರೊಬ್ಬರು ಸಚಿವರ ಮುಂಭಾಗವೇ ತರಾಟೆಗೆ ತೆಗೆದುಕೊಂಡು, ಸಚಿವರ ಕಾರಿಗೆ ಅಡ್ಡ ಹಾಕಿದ ಘಟನೆ ದಾವಣಗೆರೆ ಜಿಲ್ಲೆಯ ಈರ್ಚಘಟ್ಟ ಗ್ರಾಮದಲ್ಲಿ ನಡೆದಿದೆ.

    ಇಂದು ಕೃಷಿ ಸಚಿವ ಶಿವಶಂಕರರೆಡ್ಡಿ ರೈತರ ಜೊತೆ ಸಂವಾದ ಕಾರ್ಯಕ್ರಮಕ್ಕೆ ಆಗಮಿಸಿದಾಗ ಈ ಘಟನೆ ನಡೆದಿದೆ. ಜಿಲ್ಲೆಯ ಕೃಷಿ ಅಧಿಕಾರಿಗಳು ವ್ಯವಸಾಯ ಉಪಕರಣಕ್ಕೆ ಯಾವುದೇ ಸಬ್ಸಿಡಿ ಕೊಡುತ್ತಿಲ್ಲ. ಕಚೇರಿಗೆ ತೆರಳಿದ್ರು ಯಾವುದೇ ಸ್ಪಂದನೆ ಮಾಡುತ್ತಿಲ್ಲ. ನಾಳೆ ಕಚೇರಿಗೆ ಹೋಗುತ್ತೇನೆ. ಆಗ ಏನಾದ್ರು ಸಬ್ಸಿಡಿ ಕೊಡದೇ ಇದ್ರೆ ಅಧಿಕಾರಿಗಳ ಮನೆ ಮುಂದೆ ಧರಣಿ ಕೂರುತ್ತೇನೆ. ಅದಕ್ಕೂ ಜಗ್ಗಲ್ಲಿಲ್ಲ ಎಂದರೆ ನಿಮ್ಮನ್ನು ಕಾಣುತ್ತೇನೆ ಎಂದು ಜಗಳೂರು ತಾಲ್ಲೂಕಿನ ರೈತ ಹಾಲೇಶ್ ಸಚಿವರಿಗೆ ತರಾಟೆಗೆ ತೆಗೆದುಕೊಂಡರು.

    ಕಾರ್ಯಕ್ರಮಕ್ಕೂ ಮುಂಚಿತವಾಗಿ ಗ್ರಾಮದ ಮಲ್ಲಿಕಾರ್ಜುನ್ ಎಂಬವರ ಜಮೀನಿನ ಕೃಷಿ ಹೊಂಡಕ್ಕೆ ಬಾಗಿನ ಅರ್ಪಿಸುವ ಕಾರ್ಯಕ್ರಮ ನೆರವೇರಿಸಿದರು. ಆದರೆ ಮಳೆಯೇ ಇಲ್ಲದ ಜಿಲ್ಲೆಯಲ್ಲಿ ಕೃಷಿ ಹೊಂಡ ಕ್ಕೆ ಬೋರ್‍ವೆಲ್ ನೀರನ್ನು ತುಂಬಿಸಿ ಸಚಿವರಿಂದ ಮೆಚ್ಚುಗೆ ಪಡಿಯಲು ಅಧಿಕಾರಿಗಳು ಈ ರೀತಿ ಮಾಡಿದ್ದಾರೆ ಗ್ರಾಮಸ್ಥರು ಹೇಳಿದ್ದಾರೆ.

    ಮಳೆ ನೀರಿನ ಮೂಲಕ ಕೃಷಿ ಹೊಂಡ ತುಂಬಿಸುವ ಯೋಜನೆಗೆ ಇದಾಗಿದೆ. ಆದರೆ ಈ ಯೋಜನೆಗೆ ಅಧಿಕಾರಿಗಳೇ ಎಳ್ಳುನೀರು ಬಿಟ್ಟಿದ್ದಾರೆ. ಇದರ ಮಾಹಿತಿ ಅರಿಯದ ಕೃಷಿ ಸಚಿವರು ತುಂಬಿದ್ದ ಕೃಷಿ ಹೊಂಡಕ್ಕೆ ಬಾಗಿನ ಅರ್ಪಿಸಿ ಸಂವಾದ ಕಾರ್ಯಕ್ರಮಕ್ಕೆ ತೆರಳಿದರು. ಅಲ್ಲದೇ ಕೃಷಿ ಸಚಿವರು ಬರುತ್ತಾರೆಂದು ಕೃಷಿ ಹೊಂಡಕ್ಕೆ ಅಧಿಕಾರಿಗಳು ತಂತಿ ಬೇಲಿಯನ್ನು ಸಹ ನಿರ್ಮಿಸಿದ್ದರು. ನಂತರ ರೈತರ ಸಂವಾದ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಕೃಷಿ ಭಾಗ್ಯ ಪರಿಕರ ವಿತರಿಸಿ ಮಾತನಾಡಿದ ಅವರು, ಆತ್ಮಹತ್ಯೆ ಮಾಡಿಕೊಂಡು ಸತ್ತವರೆಲ್ಲಾ ಸಾಲಭಾದೆಯಿಂದ ಸಾವನ್ನಪ್ಪಿದ್ದಾರೆಂದು ಹೇಳಲು ಸಾಧ್ಯವಿಲ್ಲ. ಕೆಲವರು ತಮ್ಮ ಕೌಟುಂಬಿಕ ತೊಂದರೆ ಹಾಗೂ ಬೇರೆ ಬೇರೆ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಇಂತಹ ಆತ್ಮಹತ್ಯೆ ವಿಚಾರಗಳನ್ನು ಮಾಧ್ಯಮಗಳು ವೈಭವಿಕರಿಸುವುದು ಸರಿಯಲ್ಲ. ನಮ್ಮ ಸರ್ಕಾರ ರೈತರ ಬಗ್ಗೆ ವಿಶೇಷ ಕಾಳಜಿಯನ್ನು ಹೊಂದಿದೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ಬರಗಾಲದಲ್ಲಿ ನಾವು ಬದುಕಿರೋದೆ ಹೆಚ್ಚು, ಲಂಚ ಕೇಳ್ತಿರಲ್ಲ ನಾಚಿಕೆಯಾಗಲ್ವಾ?- ಅಧಿಕಾರಿಗಳಿಗೆ ರೈತರಿಂದ ತರಾಟೆ

    ಬರಗಾಲದಲ್ಲಿ ನಾವು ಬದುಕಿರೋದೆ ಹೆಚ್ಚು, ಲಂಚ ಕೇಳ್ತಿರಲ್ಲ ನಾಚಿಕೆಯಾಗಲ್ವಾ?- ಅಧಿಕಾರಿಗಳಿಗೆ ರೈತರಿಂದ ತರಾಟೆ

    ಮಂಡ್ಯ: ಬರಗಾಲದಲ್ಲಿ ನಾವು ಬದುಕಿರೋದೆ ಹೆಚ್ಚು. ನಮ್ಮ ಹತ್ತಿರ ದುಡ್ಡು ಕೇಳ್ತಿರಲ್ಲ ನಾಚಿಕೆಯಾಗಲ್ವ ನಿಮ್ಗೆ. ಯಾರ ಮನೆ ಅಡವಿಟ್ಟು ದುಡ್ಡು ತಂದು ಕೊಡೋಣ. ಹೊಟ್ಟೆಗೆ ಅನ್ನ ತಿಂತೀರಾ? ಏನು ತಿಂತೀರಾ ಎಂದು ಅಧಿಕಾರಿಗಳನ್ನು ಜನ ಸಂಪರ್ಕ ಸಭೆಯಲ್ಲಿ ರೈತರರು ಬಹಿರಂಗವಾಗಿ ತರಾಟೆಗೆ ತೆಗೆದುಕೊಂಡ ಘಟನೆ ಮಂಡ್ಯದ ಕೆಆರ್ ಪೇಟೆಯಲ್ಲಿ ನಡೆದಿದೆ.

    ಕೆ.ಆರ್ ಪೇಟೆಯ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಕಚೇರಿ ಆವರಣದಲ್ಲಿ, ಜನಸಂಪರ್ಕ ಸಭೆ ಆಯೋಜಿಸಲಾಗಿತ್ತು. ಈ ವೇಳೆ ರೈತರ ರಕ್ತ ಕುಡಿಯಲು ಹುಟ್ಟಿದ್ದೀರ ನೀವು ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ ರೈತರು, ಲಂಚ ಕೊಟ್ಟವರಿಗೆ ವಿದ್ಯುತ್ ಟ್ರಾನ್ಸ್ ಫಾರಂ ಕೊಡುತ್ತಿದ್ದೀರಿ. 2013ರಲ್ಲಿ ಹಣ ಕಟ್ಟಿದವರಿಗೆ ಟಿಸಿ ಕೊಡದೇ, ಲಂಚ ಪಡೆದು ಬೇಕಾದವರಿಗೆ ಟಿಸಿ ಕೊಡುತ್ತಿದ್ದೀರಾ. ಟಿಸಿಗಳು ಕೆಟ್ಟು ಹೋದರೂ ಲಂಚ ಕೊಡದೆ ಅವುಗಳನ್ನು ಸರಿಪಡಿಸುವುದಿಲ್ಲ ಎಂದು ಆರೋಪಿಸಿದರು.

    ನಿಜವಾದ ರೈತರು ಬದುಕುವುದು ಹೇಗೆ. ನೀವೆಲ್ಲ ನಾಲ್ಕು ಅಕ್ಷರ ಕಲಿತಿದ್ದೀರ ಎಂದು ದೇವಲೋಕದಿಂದ ಇಳಿದು ಬಂದ ರೀತಿ ಆಡಬಾರದು. ನೀವು ಇಂಜಿನಿಯರಿಂಗ್ ಓದಿ ಬಂದಿಲ್ಲ. ನಿಮ್ಮ ಹೆಂಡತಿಯರಿಗೆ ಸೀರೆ ಕೊಡಿಸಲು ಹಣ ಹೇಗೆ ಹೊಂದಿಸುವುದು ಎಂಬುದನ್ನು ಓದಿ ಬಂದಿದ್ದೀರ ಎಂದು ರೈತರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.

    ರೈತರ ಆಕ್ರೋಶಕ್ಕೆ ಬೆದರಿದ ಮೇಲಾಧಿಕಾರಿಗಳು ಇನ್ನು ಮುಂದೆ ಈ ರೀತಿಯ ತಪ್ಪುಗಳು ಆಗುವುದಿಲ್ಲ. ಲಂಚಬಾಕ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಸಮಸ್ಯೆ ಬಗೆಹರಿಸೋದಾಗಿ ಹೇಳಿ ರೈತರನ್ನ ಸಮಾಧಾನ ಪಡಿಸಿದರು.

  • ಮನೆ ಹಂಚಿಕೆಯಲ್ಲಿ ಅಕ್ರಮ – ಧಾರವಾಡ ಸಿಇಒಗೆ ಪ್ರಹ್ಲಾದ್ ಜೋಶಿ ಕ್ಲಾಸ್

    ಮನೆ ಹಂಚಿಕೆಯಲ್ಲಿ ಅಕ್ರಮ – ಧಾರವಾಡ ಸಿಇಒಗೆ ಪ್ರಹ್ಲಾದ್ ಜೋಶಿ ಕ್ಲಾಸ್

    ಧಾರವಾಡ: ಅಭಿವೃದ್ಧಿ ವಿಚಾರದಲ್ಲಿ ಅಕ್ರಮ ನಡೆದಿದ್ದಕ್ಕೆ ಸಂಸದ ಪ್ರಹ್ಲಾದ್ ಜೋಶಿ ಅಧಿಕಾರಿಗಳ ವಿರುದ್ಧ ಹರಿಹಾಯ್ದಿದ್ದಾರೆ.

    ಕೇಂದ್ರ ಪುರಸ್ಕೃತ ಯೋಜನೆಯಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಸಮಿತಿ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಸ್ನೇಹಲ್ ಅವರ ಮೇಲೆ ಹರಿಹಾಯ್ದ ಸಂಸದರು, ಧಾರವಾಡ ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿ ನಾಲ್ಕು ಸಾವಿರ ಮನೆ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಹೇಳಿ ತರಾಟೆಗೆ ತೆಗೆದುಕೊಂಡರು.

    ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿ ಒಂದೇ ಕುಟುಂಬಕ್ಕೆ ನಾಲ್ಕು ಮನೆಗಳನ್ನು ಹಂಚಿಕೆ ಮಾಡಲಾಗಿದೆ. ಈ ಕುರಿತು 6 ತಿಂಗಳ ಹಿಂದೆಯೇ ಅಧಿಕಾರಿಗಳ ಗಮನಕ್ಕೆ ತಂದರೂ, ಅವರು ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೇ ಎಲ್ಲಿ ತಪ್ಪಾಗಿದೆ ಎನ್ನುವ ವರದಿಯನ್ನು ಕೂಡಾ ನೀಡಿಲ್ಲ. ಪ್ರಕರಣವನ್ನು ಸಿಬಿಐ ಅಥವಾ ಸಿಐಡಿಗೆ ನೀಡಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಜೋಶಿ ಅವರು ಎಚ್ಚರಿಕೆ ನೀಡಿದರು.

    ಹೆಸರಿಗೆ ಮಾತ್ರ ಸರ್ಕಾರ:
    ಹೆಸರಿಗೆ ಮಾತ್ರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸರ್ಕಾರವಿದೆಯೇ ಹೊರತು, ಸ್ಥಳೀಯವಾಗಿ ಸರ್ಕಾರ ಅಸ್ತಿತ್ವದಲ್ಲಿಯೇ ಇಲ್ಲ ಎಂದು ಸಂಸದ ಪ್ರಹ್ಲಾದ ಜೋಶಿ ವ್ಯಂಗ್ಯವಾಡಿದರು.

    ಸಭೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಂಸದರು, ಸರ್ಕಾರ ರಚನೆಯಾಗಿ ಸುಮಾರು ದಿನಗಳೇ ಕಳೆದಿವೆ. ಇಲ್ಲಿವರೆಗೂ ಜಿಲ್ಲಾ ಉಸ್ತುವಾರಿ ಸಚಿವರ ನೇಮಕವಾಗಿಲ್ಲ. ಜೆಡಿಎಸ್ ಹಾಗೂ ಕಾಂಗ್ರೆಸ್ ತಿಕ್ಕಾಟದಿಂದಾಗಿ ಆಡಳಿತ ವ್ಯವಸ್ಥೆ ಹದಗೆಟ್ಟು ಹೋಗಿದೆ. ಇದರ ಲಾಭ ಪಡೆದಿರುವ ಅಧಿಕಾರಿಗಳು ಯಾರ ಮಾತನ್ನು ಕೇಳುತ್ತಿಲ್ಲ. ಸದ್ಯ ಉಸ್ತುವಾರಿ ಸಚಿವರೇ ಇಲ್ಲದಿರುವುದರಿಂದ ಜಿಲ್ಲೆಗೆ ಯಾರೂ ಗತಿ ಇಲ್ಲದಂತಾಗಿದೆ ಎಂದು ಅವರು ಆರೋಪಿಸಿದರು.

  • ಕಾಮಗಾರಿ ನಡೆಯದೇ ಬಿಲ್ ತೋರಿಸಿದ್ದು ಯಾಕೆ: ಸುಳ್ಳು ಹೇಳಿದ ಅಧಿಕಾರಿಗಳಿಗೆ ಸಚಿವ ಹೆಗ್ಡೆಯಿಂದ ಕ್ಲಾಸ್

    ಕಾಮಗಾರಿ ನಡೆಯದೇ ಬಿಲ್ ತೋರಿಸಿದ್ದು ಯಾಕೆ: ಸುಳ್ಳು ಹೇಳಿದ ಅಧಿಕಾರಿಗಳಿಗೆ ಸಚಿವ ಹೆಗ್ಡೆಯಿಂದ ಕ್ಲಾಸ್

    ಕಾರವಾರ: ತಮ್ಮ ಅವಧಿಯ ಅನುದಾನದ ಕಾಮಗಾರಿಗಳನ್ನು ಪ್ರಾರಂಭಿಸದೇ ಸುಳ್ಳು ನೆಪ ಹೇಳುತ್ತಿದ್ದ ಅಧಿಕಾರಿಗಳಿಗೆ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗ್ಡೆ ತರಾಟೆಗೆ ತಗೆದುಕೊಂಡಿದ್ದಾರೆ.

    ಕಾರವಾರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮೂಲಸೌಕರ್ಯ ಯೋಜನೆಗಳ ವಿಚಕ್ಷಣ ಸಮಿತಿ ಸಭೆಯಲ್ಲಿ ಮಾತನಾಡಿದ ಸಂಸದರು, ನಿಮ್ಮ ಬೇಜವಾಬ್ದಾರಿ ಹಾಗೂ ನಿರ್ಲಕ್ಷದಿಂದ ಕಾಮಗಾರಿ ಪ್ರಾರಂಭವಾಗುತ್ತಿಲ್ಲ. ಸರ್ಕಾರಿ ಕೆಲಸ ಅಂದರೆ ಆಟ ಆಡುವುದು ಅಂದುಕೊಂಡಿದ್ದಿರಾ. ನನಗೆ ಸೂಕ್ತ ಮಾಹಿತಿ ನೀಡದೇ ಇಂದು ಕಾರವಾರದಿಂದ ಹೋಗುವಂತಿಲ್ಲ ಎಂದು ಖಡಕ್ ಆಗಿ ಸೂಚಿಸಿದರು.

    ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ 851 ವಿವಿಧ ಕಾಮಗಾರಿಗಳಲ್ಲಿ 838 ಕಾಮಗಾರಿಗಳು ಮಂಜೂರಾಗಿವೆ. ಅದರಲ್ಲಿ 796 ಕಾಮಗಾರಿಗಳಿಗೆ ಅನುಮೋದನೆ ದೊರತಿದೆ. 2012-13ರ ಅವಧಿಯಲ್ಲಿಯೇ ಅನುಮೋದನೆಗೊಂಡಿದ್ದ 55 ಕಾಮಗಾರಿಗಳು ಇಂದಿಗೂ ಪ್ರಾರಂಭಗೊಂಡಿಲ್ಲ ಯಾಕೆ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು.

    ಅನುಮೋಧನೆಗೊಂಡ ಕಾಮಗಾರಿಗಳಲ್ಲಿ ರಸ್ತೆ ಬದಲಿಗೆ ಚರಂಡಿಯನ್ನು ನಿರ್ಮಿಸಿ ಅಧಿಕಾರಿಗಳು ಬಿಲ್ ಮಾಡಿಕೊಂಡಿದ್ದಾರೆ. ಬೈಲಹೊಂಗಲ ಹಾಗೂ ಖಾನಾಪುರದ ಜಿಲ್ಲಾ ಪಂಚಾಯತ್ ಎಂಜಿನಿಯರ್ ಗಳು ಅನುಮೋದನೆಗೊಂಡ 37 ಕಾಮಗಾರಿಗಳಲ್ಲಿ 34 ಕಾಮಗಾರಿಗಳನ್ನು ಪ್ರಾರಂಭವೇ ಮಾಡಿಲ್ಲ. ಇನ್ನು ನಾಲ್ಕು ವರ್ಷದ ಸಂಸದ ಅವಧಿಯಲ್ಲಿ ಕೇವಲ ನಾಲ್ಕು ಕಾಮಗಾರಿಗಳನ್ನು ಮಾತ್ರ ಮುಗಿಸಿದ್ದು ಉಳಿದ ಕಾಮಗಾರಿಗಳ ಯಾವಾಗ ಪೂರ್ಣಗೊಳ್ಳುತ್ತವೆ ಎಂದು ಅಧಿಕಾರಿಗಳನ್ನು ಅನಂತ್ ಕುಮಾರ್ ಹೆಗ್ಡೆ ಖರವಾಗಿ ಪ್ರಶ್ನಿಸಿದರು.

    ಸಚಿವರು ಪ್ರಶ್ನೆಗಳಿಗೆ ಬೈಲಹೊಂಗಲ ಹಾಗೂ ಖಾನಾಪುರದ ಜಿಲ್ಲಾ ಪಂಚಾಯತ್ ಸಹಾಯಕ ಎಂಜಿನಿಯರ್ ಗಳಾದ ಜಿ.ಎಸ್.ಪಾಟೀಲ್, ಆರ್.ವಿ.ಚತುವಾಡಿಗಿ ಅವರು ಉತ್ತರ ನೀಡಲು ತಡಕಾಡಿದರು. ಇದರಿಂದ ಕೋಪಗೊಂಡ ಸಚಿವರು ಸಭೆಯಿಂದ ಹೊರ ನಡೆದು, ಮಾಹಿತಿ ತರುವಂತೆ ಸೂಚಿಸಿದರು. ಇದಲ್ಲದೇ ಕೆನರಾ ಲೋಕಸಭಾ ಕ್ಷೇತ್ರದ ಸಾಕಷ್ಟು ಕಾಮಗಾರಿಗಳಲ್ಲಿ ಕೆಲಸವೇ ಪ್ರಾರಂಭವಾಗಿಲ್ಲ. ಕೆಲವರು ಹಳೇ ಕಟ್ಟಡಗಳ ಫೋಟೋ ತೋರಿಸಿ ಬಿಲ್ ಮಾಡಿಕೊಂಡಿದ್ದಾರೆ ಎಂದು ಹೇಳಿ, ಸಮರ್ಪಕ ಉತ್ತರ ನೀಡುವವರಗೂ ಕಾರವಾರದಿಂದ ತೆರಳದಂತೆ ಅಧಿಕಾರಿಗಳಿಗೆ ಸೂಚಿಸಿದರು.

  • ಮದ್ಯ ಸೇವಿಸಿ ಖಾಸಗಿ ಬಸ್ ಚಲಾಯಿಸುತ್ತಿದ್ದ ಚಾಲಕನಿಗೆ ತರಾಟೆ

    ಮದ್ಯ ಸೇವಿಸಿ ಖಾಸಗಿ ಬಸ್ ಚಲಾಯಿಸುತ್ತಿದ್ದ ಚಾಲಕನಿಗೆ ತರಾಟೆ

    ತುಮಕೂರು: ಖಾಸಗಿ ಬಸ್ ಅಪಘಾತವಾಗಿ 7 ಮಂದಿ ಜಿಲ್ಲೆಯಲ್ಲಿ ಸಾವನ್ನಪ್ಪಿದರೆ, ಇನ್ನೊಂದೆಡೆ ಸಂಭವಿಸಬಹುದಾಗಿದ್ದ ಅಪಘಾತವನ್ನು ಪ್ರಯಾಣಿಕರ ಸಮಯಪ್ರಜ್ಞೆ ತಪ್ಪಿಸಿದೆ.

    ಮದ್ಯ ಸೇವಿಸಿ ಖಾಸಗಿ ಬಸ್ಸನ್ನು ಅಡ್ಡಾದಿಡ್ಡಿ ಚಲಾಯಿಸುತ್ತಿದ್ದ ಚಾಲಕನನ್ನ ತಡೆದು ಪ್ರಯಾಣಿಕರೇ ತರಾಟೆಗೆ ತೆಗೆದುಕೊಂಡಿದ್ದಾರೆ. ಮಧುಗಿರಿ ತಾಲೂಕಿನ ಬ್ಯಾಲ್ಯ ಗ್ರಾಮದಲ್ಲಿ ಘಟನೆ ನಡೆದಿದ್ದು, ಮದ್ಯ ಸೇವಿಸಿ ಚಲಾಯಿಸುತ್ತಿದ್ದ ಡ್ರೈವರ್ ಮಹೇಶ್ ಗೆ ಪ್ರಯಾಣಿಕರು ಕ್ಲಾಸ್ ತೆಗೆದುಕೊಂಡು ಬಸ್ ತಡೆದಿದ್ದಾರೆ.

    ತುಮಕೂರಿನಿಂದ ಕೊಡಿಗೇನಹಳ್ಳಿಗೆ ಹೋಗುತ್ತಿದ್ದ ಬಿಎಂಎಸ್ ಖಾಸಗಿ ಬಸ್‍ನಲ್ಲಿ ಚಾಲಕ ಮಹೇಶ್ ಕುಡಿದು ಬಸ್ ಚಲಾಯಿಸುತ್ತಿದ್ದನ್ನು ಪ್ರಯಾಣಿಕರು ಗಮನಿಸಿದ್ದಾರೆ. ಬ್ಯಾಲ್ಯ ಗ್ರಾಮಕ್ಕೆ ಬರುತ್ತಿದ್ದಂತೆ ಪ್ರಯಾಣಿಕರು ಬಸ್ಸಿನಿಂದ ಕೆಳಗಿಳಿದು ಮುಂದೆ ಹೋಗದಂತೆ ತಡೆದು ಚಾಲಕನ ವಿರುದ್ಧ ಗಲಾಟೆ ಮಾಡಿದ್ದಾರೆ.

    ಇದೇ ವೇಳೆ ಮೇಲೇಳಲು ಆಗದ ಸ್ಥಿತಿಯಲ್ಲಿದ್ದ ಚಾಲಕ ಮಹೇಶ್ ಬಸ್ಸಿನ ಹಿಂಬದಿಯ ಸೀಟಿನಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿ ಕುಳಿತಿದ್ದಾನೆ. ಬಳಿಕ ಪ್ರಯಾಣಿಕರಿಗೆ ಟಿಕೆಟ್ ಹಣ ವಾಪಸ್ ನೀಡಿದ ನಿರ್ವಾಹಕ ಪ್ರಯಾಣಿಕರನ್ನ ಕಳುಹಿಸಿದ್ದಾನೆ.