Tag: ತರಬೇತಿ ವಿಮಾನ

  • ಗುಜರಾತ್‌ನಲ್ಲಿ ಖಾಸಗಿ ತರಬೇತಿ ವಿಮಾನ ಅಪಘಾತ – ಮಹಿಳಾ ಪೈಲಟ್‌ಗೆ ಗಾಯ

    ಗುಜರಾತ್‌ನಲ್ಲಿ ಖಾಸಗಿ ತರಬೇತಿ ವಿಮಾನ ಅಪಘಾತ – ಮಹಿಳಾ ಪೈಲಟ್‌ಗೆ ಗಾಯ

    ಗಾಂಧಿನಗರ: ಖಾಸಗಿ ವಿಮಾನಯಾನ ಅಕಾಡೆಮಿಗೆ ಸೇರಿದ ತರಬೇತಿ ವಿಮಾನ (Private Trainer Aircraft) ಅಪಘಾತಕ್ಕೀಡಾಗಿ ಮಹಿಳಾ ತರಬೇತಿ ಪೈಲಟ್ ಗಾಯಗೊಂಡಿರುವ ಘಟನೆ ಗುಜರಾತ್‌ನ (Gujarat) ಮೆಹ್ಸಾನಾ ಜಿಲ್ಲೆಯಲ್ಲಿ ನಡೆದಿದೆ.

    ಕೆಲವು ತಾಂತ್ರಿಕ ಕಾರಣಗಳಿಂದಾಗಿ ಸಿಂಗಲ್ ಎಂಜಿನ್ ವಿಮಾನವು ಮೆಹ್ಸಾನಾ ಪಟ್ಟಣದ ಬಳಿಯ ಉಚಾರ್ಪಿ ಗ್ರಾಮದಲ್ಲಿ ಮೈದಾನಕ್ಕೆ ಡಿಕ್ಕಿ ಹೊಡೆದಿದೆ ಎಂದು ಮೆಹ್ಸಾನಾ ತಾಲೂಕು ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಡಿಜಿ ಬದ್ವಾ ತಿಳಿಸಿದ್ದಾರೆ. ಇದನ್ನೂ ಓದಿ: ಅಶ್ವನಿ ವೇಗಕ್ಕೆ ಕೊನೆಯ ಸ್ಥಾನಕ್ಕೆ ಜಾರಿದ ಕೋಲ್ಕತ್ತಾ – ಮುಂಬೈಗೆ ಭರ್ಜರಿ ಜಯ

    ಅಪಘಾತದಲ್ಲಿ ಪೈಲಟ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಬದ್ವಾ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಲವ್ವರ್ ಜೊತೆ ಮಾತನಾಡಲು 1.5 ಲಕ್ಷದ ಫೋನಿಗೆ ಡಿಮ್ಯಾಂಡ್ – ಕೊಡದ್ದಕ್ಕೆ ತನ್ನ ಕೈಯನ್ನೇ ಕೊಯ್ದ ಯುವತಿ

  • ತೆಲಂಗಾಣದಲ್ಲಿ IAFನ ತರಬೇತಿ ವಿಮಾನ ಪತನ – ಇಬ್ಬರು ಪೈಲಟ್‌ಗಳ ದುರ್ಮರಣ

    ತೆಲಂಗಾಣದಲ್ಲಿ IAFನ ತರಬೇತಿ ವಿಮಾನ ಪತನ – ಇಬ್ಬರು ಪೈಲಟ್‌ಗಳ ದುರ್ಮರಣ

    ಹೈದರಾಬಾದ್‌: ತೆಲಂಗಾಣದ ಮೇದಕ್‌ ಜಿಲ್ಲೆಯ ತೂಪ್ರಾನ್‌ನ ರಾವೆಲ್ಲಿ ಗ್ರಾಮದಲ್ಲಿ ತರಬೇತಿ ವಿಮಾನವೊಂದು (Trainer Aircraft) ಪತನಗೊಂಡ ಪರಿಣಾಮ ಭಾರತೀಯ ವಾಯುಪಡೆಯ (IAF) ಇಬ್ಬರು ಪೈಲಟ್‌ಗಳು ಸಾವನ್ನಪ್ಪಿದ್ದಾರೆ.

    ಹೈದರಾಬಾದ್‌ನಲ್ಲಿರುವ ಏರ್ ಫೋರ್ಸ್ ಅಕಾಡೆಮಿಯಿಂದ (AFA) ವಾಡಿಕೆಯ ತರಬೇತಿಗಾಗಿ Pilatus PC 7 Mk-II ವಿಮಾನ ಟೇಕಾಫ್ ಆಗಿತ್ತು. ಈ ವೇಳೆ ಅಪಘಾತ ಸಂಭವಿಸಿ ವಿಮಾನದಲ್ಲಿದ್ದ ತರಬೇತುದಾರ ಮತ್ತು ತರಬೇತಿ ನಿರತ ಪೈಲಟ್ ಇಬ್ಬರೂ ಸಾವನ್ನಪ್ಪಿದ್ದಾರೆ. ಸದ್ಯ ಅಪಘಾತಕ್ಕೆ ನಿಖರ ಕಾರಣ ಪತ್ತೆಹಚ್ಚಲು ತನಿಖೆಗೆ ಆದೇಶಿಸಲಾಗಿದೆ. ಇದನ್ನೂ ಓದಿ: ಲೋಕ ಸಮರದಲ್ಲಿ ಬಿಜೆಪಿ-ಜೆಡಿಎಸ್ ಒಂದಾಗಿ ಕಾಂಗ್ರೆಸ್ಸನ್ನು ಧೂಳಿಪಟ ಮಾಡ್ತೇವೆ: ವಿಜಯೇಂದ್ರ

    ಪಿಲಾಟಸ್ PC 7 Mk-II ವಿಮಾನವು ಒಂದೇ ಎಂಜಿನ್‌ ಒಳಗೊಂಡ ತರಬೇತಿ ವಿಮಾನವಾಗಿದೆ. IAF ಪೈಲಟ್‌ಗಳ ತರಬೇತಿಗಾಗಿ ಇದನ್ನು ಬಳಸಲಾಗುತ್ತದೆ. ಸ್ವಿಟ್ಜರ್‌ಲೆಂಡಿನ ಪಿಲಾಟಸ್ ಸಂಸ್ಥೆಯು ಇದನ್ನು ವಿನ್ಯಾಸಗೊಳಿಸಿ, ತಯಾರಿಸಲಿದೆ. ಈ ವಿಮಾನವನ್ನು ಏರೋಬ್ಯಾಟಿಕ್ಸ್, ಯುದ್ಧತಂತ್ರ ಮತ್ತು ರಾತ್ರಿ ಹಾರಾಟ ಸೇರಿದಂತೆ ಎಲ್ಲಾ ಮೂಲಭೂತ ತರಬೇತಿ ಕಾರ್ಯಗಳಿಗೆ ಬಳಸಲಾಗುತ್ತದೆ. ಸರಿಸುಮಾರು 1,330 ಕೆ.ಜಿ ತೂಕ ಹೊಂದಿರುತ್ತದೆ ಎಂದು ಅಂದಾಜಿಸಲಾಗಿದೆ.

    ಅಪಘಾತದಲ್ಲಿ ಮೃತಪಟ್ಟ ಪೈಲಟ್‌ಗಳ ಕುಟುಂಬಗಳಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಾಂತ್ವನ ಹೇಳಿದ್ದಾರೆ. ಹೈದರಾಬಾದ್ ಬಳಿ ನಡೆದ ಈ ಅಪಘಾತದಿಂದ ದುಃಖವಾಗಿದೆ. ಇಬ್ಬರು ಪೈಲಟ್‌ಗಳು ಪ್ರಾಣ ಕಳೆದುಕೊಂಡಿರುವುದು ತುಂಬಾ ದುಃಖಕರವಾಗಿದೆ. ಈ ದುರಂತ ಸಮಯದಲ್ಲಿ, ನಾವು ಅವರ ಕುಟುಂಬಗಳೊಂದಿಗೆ ಇರುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: 4 ರಾಜ್ಯಗಳ ವಿಚಿತ್ರ ಫಲಿತಾಂಶ ಜನರಿಗೆ ಆಘಾತವುಂಟು ಮಾಡಿದೆ: ಮಾಯಾವತಿ

  • ಕಲಬುರಗಿಯ ರೈತರ ಜಮೀನಿನಲ್ಲಿ ಲ್ಯಾಂಡ್ ಆದ ತರಬೇತಿ ವಿಮಾನ

    ಕಲಬುರಗಿಯ ರೈತರ ಜಮೀನಿನಲ್ಲಿ ಲ್ಯಾಂಡ್ ಆದ ತರಬೇತಿ ವಿಮಾನ

    ಕಲಬುರಗಿ: ತರಬೇತಿ ನೀಡುತ್ತಿದ್ದ ವಿಮಾನವೊಂದು (Training Aircraft) ಹಾರಾಟದ ವೇಳೆ ತಾಂತ್ರಿಕ ದೋಷ ಉಂಟಾದ ಹಿನ್ನೆಲೆ ಪೈಲಟ್ ರೈತರ ಜಮೀನಿನಲ್ಲಿ ತುರ್ತು ಭೂಸ್ಪರ್ಷ (Emergency Landing) ಮಾಡಿರುವ ಘಟನೆ ಕಲಬುರಗಿಯಲ್ಲಿ (Kalaburagi) ನಡೆದಿದೆ.

    ಜಿಲ್ಲೆಯ ಚಿತ್ತಾಪುರ ತಾಲೂಕಿನ ಪೇಟ್ ಸೀರೂರ್ ಗ್ರಾಮದ ಹೊರವಲಯದಲ್ಲಿ ಘಟನೆ ನಡೆದಿದೆ. ಕಲಬುರಗಿ ವಿಮಾನ ನಿಲ್ದಾಣದ ಟ್ರೈನಿಂಗ್ ವಿಮಾನ ಹಾರಾಟ ಪ್ರಾರಂಭಿಸಿದ ನಂತರ ಅದರ ಎಂಜಿನ್‌ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ. ಇದನ್ನೂ ಓದಿ: 16ನೇ ವಯಸ್ಸಿನವ್ರಿಗೆ ಲೈಂಗಿಕ ವಿಚಾರದ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯವಿದೆ: ಮೇಘಾಲಯ ಹೈಕೋರ್ಟ್

    ವಿಮಾನ ನಿಲ್ದಾಣದಿಂದ ಟೇಕಾಫ್ ಆಗಿ 15 ಕಿಮೀ ಹಾರಾಟದ ಬಳಿಕ ವಿಮಾನದಲ್ಲಿ ಸಮಸ್ಯೆ ಉಂಟಾದ ಹಿನ್ನೆಲೆ ಪೈಲಟ್ ತಕ್ಷಣವೇ ಹತ್ತಿರದ ಜಮೀನಿನಲ್ಲಿ ಲ್ಯಾಂಡ್ ಮಾಡಿದ್ದಾರೆ. ಅದೃಷ್ಟವಶಾತ್ ಪೈಲಟ್ ಹಾಗೂ ಟ್ರೈನಿ ಪೈಲಟ್‌ಗಳು ಅಪಾಯದಿಂದ ಪಾರಾಗಿದ್ದಾರೆ. ಘಟನೆ ಮಾಡಬೂಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇದನ್ನೂ ಓದಿ: ʻಟಗರು ಪಲ್ಯʼ ಚಿತ್ರದಲ್ಲಿ ನಟಿಸಿದ 7 ಸ್ಟಾರ್‌ ಸುಲ್ತಾನ್‌ ಕುರ್ಬಾನಿಗೆ ಭಾರೀ ವಿರೋಧ

  • ತಾಂತ್ರಿಕ ತೊಂದರೆಯಿಂದ ತರಬೇತಿ ವಿಮಾನ ತುರ್ತು ಭೂಸ್ಪರ್ಶ- ತಪ್ಪಿದ ಭಾರೀ ಅನಾಹುತ

    ತಾಂತ್ರಿಕ ತೊಂದರೆಯಿಂದ ತರಬೇತಿ ವಿಮಾನ ತುರ್ತು ಭೂಸ್ಪರ್ಶ- ತಪ್ಪಿದ ಭಾರೀ ಅನಾಹುತ

    ಬೆಳಗಾವಿ: ತಾಂತ್ರಿಕ ತೊಂದರೆಯಿಂದ ತರಬೇತಿ ವಿಮಾನವೊಂದು (Training Aircraft) ತುರ್ತು ಭೂಸ್ಪರ್ಶ ಆಗಿರುವ ಘಟನೆ ಬೆಳಗಾವಿ (Belgavi) ತಾಲೂಕಿನ ಹೊನ್ನಿಹಾಳ (Honnihala) ಹೊರವಲಯದಲ್ಲಿ ನಡೆದಿದೆ.

    ತಾಲೂಕಿನ ಸಾಂಬ್ರಾ ಏರ್‌ಪೋರ್ಟ್‌ನಿಂದ (Sambra Airport) ಹೊರಟಿದ್ದ ತರಬೇತಿ ವಿಮಾನ ತಾಂತ್ರಿಕ ತೊಂದರೆಯಿಂದಾಗಿ ಹೊಲದಲ್ಲಿ ತುರ್ತು ಭೂಸ್ಪರ್ಶವಾಗಿದೆ. ರೆಡ್‌ಬರ್ಡ್ (Redbird) ಸಂಸ್ಥೆಗೆ ಸೇರಿದ VT- RBF ತರಬೇತಿ ವಿಮಾನ ಇದಾಗಿದ್ದು, ಘಟನೆ ನಡೆದ ವೇಳೆ ವಿಮಾನದಲ್ಲಿ ಇಬ್ಬರು ಪ್ರಯಾಣಿಸುತ್ತಿದ್ದರೆಂಬ ಮಾಹಿತಿ ಲಭಿಸಿದೆ. ಇದನ್ನೂ ಓದಿ: ಒಬ್ಬಂಟಿಯಾಗಿ ಸಾಗುವವರನ್ನು ಟಾರ್ಗೆಟ್ ಮಾಡುತ್ತಿದ್ದ ಕುಖ್ಯಾತ ಡಕಾಯಿತಿ ಗ್ಯಾಂಗ್ ಅರೆಸ್ಟ್

    ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ರಾಜ್ಯದ ಹಲವೆಡೆ ವರುಣನ ಅವಾಂತರ- ವಿಜಯಪುರ, ಬಳ್ಳಾರಿಯಲ್ಲಿ ಸಿಡಿಲಬ್ಬರಕ್ಕೆ ಇಬ್ಬರು ಬಲಿ

     

  • ತರಬೇತಿ ವಿಮಾನ ಪತನ – ಮಹಿಳಾ ಪೈಲಟ್‌, ಮಾರ್ಗದರ್ಶಿ ಸಾವು

    ತರಬೇತಿ ವಿಮಾನ ಪತನ – ಮಹಿಳಾ ಪೈಲಟ್‌, ಮಾರ್ಗದರ್ಶಿ ಸಾವು

    ಭೋಪಾಲ್:‌ ಮಧ್ಯಪ್ರದೇಶದ (Madhya Pradesh) ಬಾಲಾಘಾಟ್‌ (Balaghat) ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ವಿಮಾನವೊಂದು (Trainer Aircraft Crashes) ಪತನವಾಗಿದ್ದು, ತರಬೇತಿನಿರತ ಮಹಿಳಾ ಪೈಲಟ್‌ ಹಾಗೂ ವಿಮಾನ ಮಾರ್ಗದರ್ಶಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕಿನಾರ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದ್ದು, ಅದು ತರಬೇತಿ ವಿಮಾನವಾಗಿದೆ. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸ್ ಸಿಬ್ಬಂದಿಯ ತಂಡ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದೆ. ಇದನ್ನೂ ಓದಿ: ತನ್ನದೇ ಕತ್ತು ಸೀಳಿ, ಚಾಕು, ಗನ್ ಹಿಡ್ಕೊಂಡು ದೆಹಲಿ ಬೀದಿಯಲ್ಲಿ ಓಡಾಡಿದ ವ್ಯಕ್ತಿ – ಜನ ಚೆಲ್ಲಾಪಿಲ್ಲಿ

     

    ಲಾಂಜಿ ಮತ್ತು ಕಿರ್ನಾಪುರ್ ಪ್ರದೇಶಗಳ ಪರ್ವತ ವಲಯದಲ್ಲಿ ಮೃತದೇಹಗಳು ಪತ್ತೆಯಾಗಿವೆ. ಮೃತರು ಮಹಿಳಾ ಪೈಲಟ್‌ ರುಕ್ಷಂಕಾ, ಮಾರ್ಗದರ್ಶಿ ಮೋಹಿತ್‌ ಕುಮಾರ್‌ ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸಮೀರ್ ಸೌರಭ್ ತಿಳಿಸಿದ್ದಾರೆ.

    ಬಾಲಾಘಾಟ್ ಗಡಿಯಲ್ಲಿರುವ ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯ ಬಿರ್ಸಿ ವಿಮಾನ ನಿಲ್ದಾಣದಿಂದ ಈ ತರಬೇತಿ ವಿಮಾನ ಹಾರಾಟ ಆರಂಭಿಸಿತ್ತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ಏಷ್ಯಾದಲ್ಲೇ ಫಸ್ಟ್- ಎರಡೂ ಕೈಗಳ ಶಸ್ತ್ರಚಿಕಿತ್ಸೆ ಯಶಸ್ವಿ

    ಅಪಘಾತದ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ ಶನಿವಾರ ಬಾಲಾಘಾಟ್‌ನಲ್ಲಿ ಆಲಿಕಲ್ಲು ಮಳೆಯಾಗಿತ್ತು. ಪ್ರತಿಕೂಲ ಹವಾಮಾನದಿಂದ ಈ ಅಪಘಾತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.

  • ದೇವಾಲಯಕ್ಕೆ ಡಿಕ್ಕಿ ಹೊಡೆದು ವಿಮಾನ ಪತನ – ತರಬೇತಿ ಪಡೀತಿದ್ದ ಪೈಲಟ್ ಸಾವು

    ದೇವಾಲಯಕ್ಕೆ ಡಿಕ್ಕಿ ಹೊಡೆದು ವಿಮಾನ ಪತನ – ತರಬೇತಿ ಪಡೀತಿದ್ದ ಪೈಲಟ್ ಸಾವು

    ಭೋಪಾಲ್: ತರಬೇತಿ ವಿಮಾನವೊಂದು (Training Plane) ಶುಕ್ರವಾರ ಮುಂಜಾನೆ ದೇವಾಲಯವೊಂದಕ್ಕೆ (Temple) ಅಪ್ಪಳಿಸಿ ಪತನವಾಗಿರುವ (Plane Crash) ಘಟನೆ ಮಧ್ಯಪ್ರದೇಶದ (Madhya Pradesh) ರೇವಾ ಜಿಲ್ಲೆಯ ಡುಮ್ರಿ ಗ್ರಾಮದಲ್ಲಿ ನಡೆದಿದೆ. ವಿಮಾನ ಪತನದಲ್ಲಿ ತರಬೇತಿ ಪಡೆಯುತ್ತಿದ್ದ ಪೈಲಟ್ (Pilot) ಸಾವನ್ನಪ್ಪಿದ್ದಾರೆ.

    ಖಾಸಗಿ ಕಂಪನಿಗೆ ಸೇರಿದ ವಿಮಾನ ಡುಮ್ರಿ ಗ್ರಾಮದ ದೇವಾಲಯದ ಗೋಪುರಕ್ಕೆ ಅಪ್ಪಳಿಸಿದ್ದರಿಂದ ಅಪಘಾತ ಸಂಭವಿಸಿದೆ. ವಿಮಾನದಲ್ಲಿ ಇಬ್ಬರು ಪೈಲಟ್‌ಗಳಿದ್ದು, ಒಬ್ಬ ಪೈಲಟ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೊಬ್ಬ ಪೈಲಟ್ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ತಾನೇ ಇರಿದುಕೊಂಡು ಆಸ್ಪತ್ರೆ ದಾಖಲಾದ ವ್ಯಕ್ತಿ ವೈದ್ಯರಿಗೂ ಚಾಕು ಇರಿದ

    ಈ ಬಗ್ಗೆ ರೇವಾ ಎಸ್‌ಪಿ ನವನೀತ್ ಭಾಸಿನ್ ಮಾಹಿತಿ ನೀಡಿದ್ದು, ಶುಕ್ರವಾರ ಮುಂಜಾನೆ ದುರ್ಘಟನೆ ನಡೆದಿದೆ. ಅಪಘಾತಕ್ಕೊಳಗಾದ ವಿಮಾನ ತರಬೇತಿ ವಿಮಾನವಾಗಿದ್ದು, ಒಬ್ಬ ಪೈಲಟ್ ಸಾವನ್ನಪ್ಪಿದ್ದಾರೆ. ಮತ್ತೊಬ್ಬರು ಗಾಯಗೊಂಡಿದ್ದಾರೆ. ಗಾಯಗೊಂಡ ಪೈಲಟ್ ಅನ್ನು ಸಂಜಯ್ ಗಾಂಧಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದ್ದು, ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಚಾಮುಂಡಿಬೆಟ್ಟದ ಸಮೀಪ 50ಕ್ಕೂ ಹೆಚ್ಚು ಮಂದಿ ಪ್ರವಾಸಿಗರಿದ್ದ ಬಸ್‍ನಲ್ಲಿ ಬೆಂಕಿ!

    ಮೇಲ್ನೋಟಕ್ಕೆ ಅಪಘಾತಕ್ಕೆ ಕಾರಣ ಹವಾಮಾನ ವೈಪರೀತ್ಯ ಎನ್ನಲಾಗಿದೆ. ಮಂಜು ಮುಸುಕಿದ ವಾತಾವರಣದಿಂದ ದಾರಿ ಸರಿಯಾಗಿ ಕಾಣಿಸದೇ ವಿಮಾನ ದೇವಾಲಯಕ್ಕೆ ಅಪ್ಪಳಿಸಿದೆ ಎಂದು ಶಂಕಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಟೇಕಾಫ್ ವೇಳೆ ರನ್ ವೇ ಪಕ್ಕಕ್ಕಿಳಿದ ತರಬೇತಿ ವಿಮಾನ

    ಟೇಕಾಫ್ ವೇಳೆ ರನ್ ವೇ ಪಕ್ಕಕ್ಕಿಳಿದ ತರಬೇತಿ ವಿಮಾನ

    – ಪ್ರಾಣಾಪಾಯದಿಂದ ಪೈಲಟ್ ಪಾರು

    ಭೋಪಾಲ್: ತರಬೇತಿ ಲಘು ವಿಮಾನ ಮಧ್ಯಪ್ರದೇಶದ ಸಾಗರ ಜಿಲ್ಲೆಯ ಠಾಣಾ ಎಂಬಲ್ಲಿ ಪತನವಾಗಿದೆ. ಚೈಮ್ಸ್ ಏವಿಯೇಷನ್ ಅಕಾಡೆಮಿಗೆ ಸೇರಿದ ಲಘು ವಿಮಾನ ರನ್ ವೇನಿಂದ ಹೊರಗೆ ಲ್ಯಾಂಡ್ ಆಗಿದ್ದರಿಂದ ಈ ಅವಘಡ ಸಂಭವಿಸಿದೆ.

    ಓರ್ವ ಪೈಲಟ್ ಸಾಮರ್ಥ್ಯ  ಇರೋ ವಿಮಾನ ಇದಾಗಿದ್ದು, ಟ್ರೈನಿ ಇರ್ಶಿಕಾ ಶರ್ಮಾ ಸುರಕ್ಷಿತವಾಗಿದ್ದಾರೆ. ಶನಿವಾರ ಮಧ್ಯಾಹ್ನ ವಿಮಾನ ಟೇಕಾಫ್ ಆಗುವ ವೇಳೆ ಈ ಅವಘಡ ಸಂಭವಿಸಿದೆ. ಟೇಕಾಫ್ ವೇಳೆ ಟ್ರೈನಿಯ ನಿಯಂತ್ರಣ ಕಳೆದುಕೊಂಡಿದ್ದರಿಂದ ರನ್ ನಿಂದ ಹೊರ ಬಂದು ಮುನ್ನುಗಿ ಬಂದು, ತಗ್ಗಿಗೆ ಇಳಿದು ಗಿಡಗಂಟೆಯಲ್ಲಿ ನಿಂತಿದೆ.

    ಅವಘಡದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಮತ್ತು ವಿಮಾನಕ್ಕೂ ಹೆಚ್ಚಿನ ಹಾನಿ ಆಗಿಲ್ಲ. ಟ್ರೈನಿ ಪೈಲಟ್‍ಗೆ ಸಣ್ಣ ಪ್ರಮಾಣದ ಗಾಯಗಳಾಗಿದ್ದು, ಚಿಕಿತ್ಸೆ ಕೊಡಿಸಲಾಗಿದೆ. ರನ್ ವೇ ಪಕ್ಕದಲ್ಲಿ ಪೊದೆ, ಗಿಡ-ಗಂಟೆಗಳಲ್ಲಿ ವಿಮಾನ ಸಿಲುಕಿದ್ದರಿಂದಲೇ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಇದನ್ನೂ ಓದಿ: ಎಣ್ಣೆ ಬೇಕು ಎಣ್ಣೆ, ಬಾರ್ ಬಂದ್ ಮಾಡ್ಬೇಡಿ: ಬಿಜೆಪಿ ಮುಖಂಡನ ಪ್ರತಿಭಟನೆ

    ಇನ್ನೂ ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ನಾಗರಿಕ ವಿಮಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಅವಘಡದ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಪ್ರಾಣಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಅಧಿಕಾರಿಗಳು ತೆರಳಿದ್ದಾರೆ. ಈ ಬಗ್ಗೆ ತನಿಖೆ ನಡೆಸಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

  • ತರಬೇತಿ ವಿಮಾನ ಪತನ- ಇಬ್ಬರು ಪೈಲಟ್ ಸಾವು

    ತರಬೇತಿ ವಿಮಾನ ಪತನ- ಇಬ್ಬರು ಪೈಲಟ್ ಸಾವು

    ಹೈದರಾಬಾದ್: ತೆಲಂಗಾಣದ ವಿಕಾರಬಾದ್ ಜಿಲ್ಲೆಯ ಸುಲ್ತಾನಪುರ ಗ್ರಾಮದ ಹೊಲದಲ್ಲಿ ತರಬೇತಿ ವಿಮಾನವೊಂದು ಪತನಗೊಂಡು ಇಬ್ಬರು ವಿದ್ಯಾರ್ಥಿ ಪೈಲಟ್‍ಗಳು ಮೃತಪಟ್ಟಿದ್ದಾರೆ.

    ಹೈದರಾಬಾದ್‍ನ ಏವಿಯೇಷನ್ ಅಕಾಡೆಮಿಯ ವಿದ್ಯಾರ್ಥಿಗಳಾದ ಪ್ರಕಾಶ್ ವಿಶಾಲ್ ಹಾಗೂ ಅಮಾನ್‍ಪ್ರೀತ್ ಕೌರ್ ಮೃತರು ಎಂದು ಗುರುತಿಸಲಾಗಿದೆ. ಸೆಸ್ನಾ ವಿಮಾನವು ಹೈದರಾಬಾದ್‍ನ ಬೇಗಂಪೆಟ್ ವಿಮಾನ ನಿಲ್ದಾಣದಿಂದ 100 ಕಿ.ಮೀ ದೂರದಲ್ಲಿ ಪತ್ತೆಯಾಗಿದೆ. ಅದೃಷ್ಟವಶಾತ್ ಕೃಷಿ ಭೂಮಿಯಲ್ಲಿಯೇ ವಿಮಾನ ಪತನಗೊಂಡಿದ್ದರಿಂದ ಭಾರೀ ಅನಾಹುತ ತಪ್ಪಿದೆ.

    ತರಬೇತಿ ನಿರತ ವಿಮಾನವು ಬೇಗಂಪೇಟ್ ಸ್ಟೇಷನ್‍ನಿಂದ 11.55ರ ವೇಳೆಗೆ ಸಂಪರ್ಕ ಕಡಿತಗೊಂಡಿತ್ತು. ಬಳಿಕ ಸ್ಥಳೀಯರು ವಿಮಾನ ಪತನವಾಗಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ ಪೊಲೀಸರು, ಪರಿಶೀಲನೆ ನಡೆಸಿದ್ದಾರೆ.

    ಈ ಸಂಬಂಧ ಹೈದರಾಬಾದ್‍ನ ರಾಜೀವ್ ಗಾಂಧಿ ಏವಿಯೇಷನ್ ಅಕಾಡೆಮಿಯ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ವಿದ್ಯಾರ್ಥಿ ಪೈಲಟ್‍ಗಳ ಮೃತದೇಹನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

    ವಿದ್ಯಾರ್ಥಿ ಪೈಲಟ್‍ಗಳಿಗೆ ತರಬೇತಿ ನೀಡಲು ಸೆಸ್ನಾ ವಿಮಾನಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. 2018ರ ನವೆಂಬರ್ ನಲ್ಲಿ, ವಿದ್ಯಾರ್ಥಿ ಪೈಲಟ್ ಏವಿಯೇಷನ್ ಅಕಾಡೆಮಿಯ ಸೆಸ್ನಾ ವಿಮಾನದಲ್ಲಿ ಹಾರಾಟ ನಡೆಸಿದ್ದರು. ಈ ವೇಳೆ ಕಾರ್ಯವಿಧಾನದಲ್ಲಿನ ತೊಂದರೆಗಳನ್ನು ಗಮನಿಸಿ ತಕ್ಷಣವೇ ವಿಮಾನವನ್ನು ತುರ್ತು ಲ್ಯಾಂಡಿಂಗ್ ಮಾಡಿದ್ದರು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿರಲಿಲ್ಲ.

  • ಮಹಾರಾಷ್ಟ್ರದಲ್ಲಿ ತರಬೇತಿ ವಿಮಾನ ಪತನ

    ಮಹಾರಾಷ್ಟ್ರದಲ್ಲಿ ತರಬೇತಿ ವಿಮಾನ ಪತನ

    ಮುಂಬೈ: ತರಬೇತಿ ವಿಮಾನವೊಂದು ಪುಣೆಯ ಇಂದಪುರದಲ್ಲಿ ಪತನಗೊಂಡಿದೆ.

    ಕಾರ್ವರ್ ಏವಿಯೇಷನ್ (ಪೈಲಟ್ ತರಬೇತಿ ಕೇಂದ್ರ) ಸಂಸ್ಥೆಗೆ ಒಳಪಟ್ಟ ವಿಮಾನ ಇದಾಗಿದ್ದು, ತರಬೇತುದಾರ ಪೈಲಟ್ ಹಾರಾಟ ನಡೆಸುತ್ತಿದ್ದರು. ವಿಮಾನ ಪತನವಾಗುತ್ತಿದ್ದಂತೆ ಸ್ಥಳೀಯರು ಘಟನಾ ಸ್ಥಳಕ್ಕೆ ಆಗಮಿಸಿ ಗಾಯಗೊಂಡಿದ್ದ ಪೈಲಟ್ ನನ್ನು ರಕ್ಷಿಸಿದ್ದಾರೆ. ಗಾಯಾಳು ಪೈಲಟ್ ನನ್ನು ಬಾರಮತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಮಾನ ಪತನಕ್ಕೆ ಕಾರಣ ತಿಳಿದು ಬಂದಿಲ್ಲ.

    ಫೆಬ್ರವರಿ 1ರಂದು ಬೆಂಗಳೂರಿನ ಹೆಚ್.ಎ.ಎಲ್. ಬಳಿ ತಾಂತ್ರಿಕ ದೋಷದಿಂದ ವಾಯುಪಡೆಯ ಮಿರಾಜ್-2000 ಯುದ್ಧ ವಿಮಾನ ಪತನಗೊಂಡು ಇಬ್ಬರು ಪೈಲಟ್‍ಗಳು ಮೃತಪಟ್ಟಿದ್ದರು. ಪ್ರಾಯೋಗಿಕ ಹಾರಾಟ ವೇಳೆ ಈ ಅವಘಡ ಸಂಭವಿಸಿದ್ದು, ರನ್‍ವೇಯಲ್ಲಿ ಹಾರಾಟ ನಡೆಸಿದ್ದ ವಿಮಾನ ಟೇಕಾಫ್ ಆಗಿದ್ದರೆ ವಸತಿ ಹೆಚ್ಚಾಗಿರುವ ಪ್ರದೇಶದಲ್ಲಿ ಬೀಳುವ ಸಾಧ್ಯತೆ ಇತ್ತು. ಆದರೆ ಇದನ್ನು ಮನಗಂಡ ಪೈಲಟ್‍ಗಳು ವಿಮಾನ ಎತ್ತರಕ್ಕೆ ಟೇಕಾಫ್ ಮಾಡದಿರಲು ನಿರ್ಧರಿಸಿ ಹೊರ ಬರಲು ಪ್ರಯತ್ನಿಸಿದ್ದರು.

    ಅಂತಿಮ ಕ್ಷಣದಲ್ಲಿ ತಮ್ಮ ಪ್ರಾಣ ಉಳಿಸಿಕೊಳ್ಳುವ ಪ್ರಯತ್ನ ನಡೆಸಿದ್ದ ಪೈಲಟ್ ಗಳು ಪ್ಯಾರಚೂಟ್ ಬಳಸಿ ಹಾರಲು ಯತ್ನಿಸಿದ್ದರು. ಆದರೆ ಆ ವೇಳೆಗೆ ವಿಮಾನ ಸ್ಫೋಟಗೊಂಡಿತ್ತು. ಪರಿಣಾಮ ಸಿದ್ದಾರ್ಥ್ ನೇಗಿ (31), ಸಮೀರ್ ಅಬ್ರೋಲ್(33) ಹುತಾತ್ಮರಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv