Tag: ತರಬೇತಿ ಕೇಂದ್ರ

  • ಯುಗಾದಿ ಬಳಿಕ ಜಟ್ಕಾ ಕಟ್‍ಗೆ ಸ್ಪೆಷಲ್ ಕ್ಲಾಸ್..!

    ಯುಗಾದಿ ಬಳಿಕ ಜಟ್ಕಾ ಕಟ್‍ಗೆ ಸ್ಪೆಷಲ್ ಕ್ಲಾಸ್..!

    ಬೆಂಗಳೂರು: ಜಟ್ಕಾ-ಹಲಾಲ್ ದಂಗಲ್ ಜೋರಾಗಿದೆ. ಹಲಾಲ್ ಬಿಟ್ಟಕಿ. ಜಟ್ಕಾ ಜಮಾಯಿಸಿ ಅಂತಾ ಹಿಂದೂ ಸಂಘಟನೆಯವರು ಭರ್ಜರಿ ಕ್ಯಾಂಪೇನ್ ಮಾಡುತ್ತಿದ್ದಾರೆ. ಮಾತ್ರವಲ್ಲ ಜಟ್ಕಾ ಕಟ್‍ಗೆ ಟ್ರೈನಿಂಗ್ ಕೂಡ ಕೊಡೋಕೆ ಪ್ಲಾನ್ ಮಾಡಿದ್ದಾರೆ.

    ರಾಜ್ಯದಲ್ಲಿ ಒಂದೆಡೆ ಯುಗಾದಿ. ಎಣ್ಣೆ ಸ್ನಾನದ ಸಿದ್ಧತೆ ಜೋರಾಗಿದ್ರೆ, ಮತ್ತೊಂದೆಡೆ ಹಲಾಲ್ ಕಟ್ ಮತ್ತು ಜಟ್ಕಾ ಕಟ್ ದಂಗಲ್ ಕೂಡ ತಾರಕಕ್ಕೇರಿದೆ. ಯುಗಾದಿ ಹೊಸತೊಡಕು ವೇಳೆ ಭರ್ಜರಿ ವ್ಯಾಪಾರ ನಿರೀಕ್ಷೆಯಲ್ಲಿದ್ದ ಮುಸ್ಲಿಂ ವ್ಯಾಪಾರಿಗಳಿಗೆ ಜಟ್ಕಾ ದಂಗಲ್ ಶಾಕ್ ನೀಡಿದೆ. ಹಲಾಲ್ ವರ್ಸಸ್ ಜಟ್ಕಾ ದಂಗಲ್ ಜೋರಾಗ್ತಿದ್ದಂತೆ ಜಟ್ಕಾ ಬಾಡಿಗೆ ಫುಲ್ ಡಿಮಾಂಡ್ ಶುರುವಾಗಿದೆ. ಯುಗಾದಿ ಬಳಿಕವೂ ಜಟ್ಕಾ ಕಟ್ ಅಭಿಯಾನವನ್ನು ಮುಂದುವರಿಸಲು ಹಿಂದೂ ಸಂಘಟನೆಗಳು ಪ್ಲಾನ್ ಮಾಡಿವೆ.

    ಬೆಂಗಳೂರಿನಲ್ಲಿ ಹಲಾಲ್ ವರ್ಸಸ್ ಜಟ್ಕಾ ಫೈಟ್ ಜೋರಾಗಿದೆ. ಇದರ ಮಧ್ಯೆ ಜಟ್ಕಾ ಕಟ್ ಸ್ಪೆಷಲ್ ಕ್ಲಾಸ್‍ಗೂ ಚಿಂತನೆ ನಡೆದಿದೆ. ಯುಗಾದಿಯ ಬಳಿಕ ಜಟ್ಕಾ ಕಟ್ ಮಾಡುವ ವಿಧಾನ ತಿಳಿಸಿಕೊಡಲು ಸ್ಪೆಷಲ್ ತರಬೇತಿ ಕ್ಲಾಸ್ ತೆರೆಯಲು ನಿರ್ಧರಿಸಲಾಗಿದೆ. ಯಾಕಂದ್ರೆ ಅನೇಕ ಮಾರಾಟಗಾರರಿಗೆ ಜಟ್ಕಾ ಕಟ್ ವಿಧಾನದ ಬಗ್ಗೆ ಮಾಹಿತಿ ಇಲ್ಲ. ಹೀಗಾಗಿ ಈ ವಿಧಾನದ ಬಗ್ಗೆ ತಿಳಿಸಿಕೊಡಲು ಜಟ್ಕಾ ಕಟ್ ಕ್ಲಾಸ್ ಒಪನ್‍ಗೆ ಹಿಂದವಿ ಮಾರ್ಟ್ ನಿರ್ಧರಿಸಲಾಗಿದ್ದು, ಶೀಘ್ರದಲ್ಲಿಯೇ ತರಬೇತಿ ಆರಂಭವಾಗಲಿದೆ. ಇದನ್ನೂ ಓದಿ: ಚಂಡೀಗಢವು ಜಂಟಿ ರಾಜಧಾನಿಯಾಗಿಯೇ ಉಳಿಯುತ್ತೆ: ಹರಿಯಾಣ ಸಿಎಂ

    ಹೊಸತೊಡಕಿಗೆ ಹಿಂದವೀ ಮಟನ್ ಮಾರ್ಟ್ ಆಫರ್: ಹಲಾಲ್ ಬಾಯ್ಕಾಟ್ ಅಭಿಯಾನಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದು, ಜಟ್ಕಾ ಮಟನ್ ಶಾಪ್‍ಗಳಿಂದಲೂ ರಿಯಾಯ್ತಿ ನೀಡಿದ್ದಾರೆ. ಹಲಾಲ್ ಬದಲು ಜಟ್ಕಾ ಮಟನ್ ಖರೀದಿಸುವ ಗ್ರಾಹಕರು ಹೈಪರ್ ಆಪ್ ಮೂಲಕ ಆರ್ಡರ್ ಮಾಡಿದ್ರೆ 20% ಡಿಸ್ಕೌಂಟ್ ನೀಡೋದಾಗಿ ಹಿಂದವೀ ಮಟನ್ ಮಾರ್ಟ್ ಯುಗಾದಿ ಆಫರ್ ನೀಡಿದೆ. ಒಂದು ಕೆಜಿ ಮಾಂಸಕ್ಕೆ 600 ರೂ. ನಿಗದಿ ಮಾಡಿದ್ದು, ಏಪ್ರಿಲ್ 2 ರಿಂದ ಏಪ್ರಿಲ್ 30ರವರೆಗೆ ಈ ಆಫರ್ ಇರಲಿದೆ. ಈ ಮೂಲಕ ಹಲಾಲ್ ಕಟ್‍ಗೆ ಸೆಡ್ಡು ಹೊಡೆಯಲು ಪ್ಲಾನ್ ಮಾಡಿದೆ. ಇದನ್ನೂ ಓದಿ: ಐಪಿಎಸ್ ಸೇವೆಗೆ ಭಾಸ್ಕರ್ ರಾವ್ ಗುಡ್ ಬೈ

    ಒಟ್ಟಾರೆ ಯುಗಾದಿ ಹಬ್ಬದ ಬಳಿಕವೂ ಹಲಾಲ್ ವರ್ಸಸ್ ಜಟ್ಕಾ ಕಟ್ ದಂಗಲ್ ಮುಂದುವರಿಯುವ ಎಲ್ಲಾ ಲಕ್ಷಣಗಳಿವೆ. ಇದರ ಜೊತೆ ಈ ಗಲಾಟೆ ಪೊಲೀಸ್ ಕಮೀಷನರ್ ಮತ್ತು ಹೈಕೋರ್ಟ್ ಅಂಗಳಕ್ಕೆ ಹೋಗಿದೆ. ಹೀಗಾಗಿ ಹಿಂದೂ ಸಂಘಟನೆಗಳ ಪ್ಲಾನ್ ಎಷ್ಟರ ಮಟ್ಟಿಗೆ ವರ್ಕೌಟ್ ಆಗಲಿದೆ ಅನ್ನೋದನ್ನ ಕಾದುನೋಡಬೇಕಿದೆ.

  • ಒಂದೂವರೆ ತಿಂಗಳ ಹಿಂದೆ ಸೇನೆಗೆ ಆಯ್ಕೆ – ತರಬೇತಿ ಹಂತದಲ್ಲಿಯೇ ಸಾವು

    ಒಂದೂವರೆ ತಿಂಗಳ ಹಿಂದೆ ಸೇನೆಗೆ ಆಯ್ಕೆ – ತರಬೇತಿ ಹಂತದಲ್ಲಿಯೇ ಸಾವು

    ಧಾರವಾಡ: ಈಗಷ್ಟೇ ಒಂದೂವರೆ ತಿಂಗಳ ಹಿಂದೆ ಭಾರತೀಯ ಸೇನೆಗೆ ಆಯ್ಕೆಯಾಗಿದ್ದ, ಧಾರವಾಡದ ಯುವ ಯೋಧ ತರಬೇತಿ ಹಂತದಲ್ಲಿ ನಡೆದ ಅವಘಡದಿಂದ ಸಾವನ್ನಪ್ಪಿದ್ದಾರೆ.

    ಮಹಾರಾಷ್ಟ್ರದ ನಾಗಪುರದ ಸೇನಾ ಕ್ಯಾಂಪ್‍ನಲ್ಲಿ ತರಬೇತಿ ಪಡೆಯುತ್ತಿದ್ದ, ಧಾರವಾಡ ತಾಲೂಕಿನ ನಿಗದಿ ಗ್ರಾಮದ 20 ವರ್ಷದ ಮಹೇಶ್ ಶಿಂಗನಹಳ್ಳಿ ಸಾವನ್ನಪ್ಪಿದ್ದಾರೆ. ತರಬೇತಿ ವೇಳೆ ತಲೆಗೆ ಗಂಭೀರ ಗಾಯವಾದ ಹಿನ್ನೆಲೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

    ಒಂದೂವರೆ ತಿಂಗಳ ಹಿಂದಷ್ಟೇ ಸೇನೆಗೆ ಆಯ್ಕೆಯಾಗಿ ನಾಗಪುರಕ್ಕೆ ಹೋಗಿದ್ದರು. ಕರ್ತವ್ಯಕ್ಕೆ ಹಾಜರಾಗುವ ಮುಂಚೆಯೇ ಶವವಾಗಿ ತವರಿಗೆ ಆಗಮಿಸುತ್ತಿದ್ದು, ಇಡೀ ಗ್ರಾಮದಲ್ಲಿ ಸೂತಕದ ಛಾಯೆ ಮೂಡಿದೆ. ಇಂದು ಸ್ವಗ್ರಾಮ ನಿಗದಿಗೆ ಮಹೇಶ್ ಪಾರ್ಥಿವ ಶರೀರ ಆಗಮಿಸಲಿದೆ.