Tag: ತರಣ್ ಆದರ್ಶ್

  • ‘ದಿ ಕಾಶ್ಮೀರ್ ಫೈಲ್ಸ್’ ಈವರೆಗೂ ಗಳಿಸಿದ್ದು 234.03 ಕೋಟಿ : ಹೇಗೆಲ್ಲ ಲೆಕ್ಕಾಚಾರ

    ‘ದಿ ಕಾಶ್ಮೀರ್ ಫೈಲ್ಸ್’ ಈವರೆಗೂ ಗಳಿಸಿದ್ದು 234.03 ಕೋಟಿ : ಹೇಗೆಲ್ಲ ಲೆಕ್ಕಾಚಾರ

    ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಬಾಲಿವುಡ್ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ದಾಖಲೆ ಮಾಡುತ್ತಲೇ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಅತೀ ಕಡಿಮೆ ಅವಧಿಯಲ್ಲಿ ಮತ್ತು ಕಡಿಮೆ ಬಜೆಟ್ ನ ಚಿತ್ರಗಳ ಬಾಕ್ಸ್ ಆಫೀಸ್ ವಿಚಾರದಲ್ಲಿ ದಾಖಲೆ ಬರೆದಿದೆ. ಕೇವಲ ಮೂರೇ ಮೂರು ವಾರಕ್ಕೆ ಇದರ ಗಳಿಕೆ 234.03 ಕೋಟಿ ಎಂದು ಅಂದಾಜಿಸಲಾಗಿದೆ. ಇಂಥದ್ದೊಂದು ಚಿತ್ರ ಈ ಪ್ರಮಾಣದಲ್ಲಿ ಹಣ ಮಾಡಿದ್ದು ಇದೇ ಮೊದಲು ಎನ್ನುತ್ತಾರೆ ಬಿ’ಟೌನ್ ಹಣಕಾಸು ಪಂಡಿತರು.


    ‘ದಿ ಕಾಶ್ಮೀರ್ ಫೈಲ್ಸ್’ ರಿಲೀಸ್ ಆದಾಗಿಂದ ಸಿನಿಮಾ ನಟ ನಟಿಯರು, ತಂತ್ರಜ್ಞರು ಮತ್ತು ರಾಜಕಾರಣಿಗಳು ಕೂಡ ಈ ಸಿನಿಮಾಗೆ ಬೆಂಬಲವಾಗಿ ನಿಂತಿದ್ದು, ಕೋಟಿ ಕೋಟಿ ಗಳಿಕೆಗೆ ಸಹಾಯ ಮಾಡಿದೆ. ಅಲ್ಲದೇ ಚಿತ್ರಕ್ಕಾಗಿ ಭಾರತ ಸರ್ಕಾರವು ಹಲವು ರಿಯಾಯಿತಿಗಳನ್ನು ಕೊಟ್ಟಿದ್ದು, ಸಿನಿಮಾ ನೋಡುವಂತೆ ಜನರಲ್ಲಿ ಪ್ರೋತ್ಸಾಹದ ಮಾತುಗಳನ್ನಾಡಿದೆ. ಇದೆಲ್ಲದ ಪರಿಣಾಮವಾಗಿ ಮೂರು ವಾರಕ್ಕೆ ಈ ಸಿನಿಮಾ 234.03 ಕೋಟಿ ಗಳಿಸಿ ಸಿನಿಮಾ ತಯಾರಕರಿಗೆ ಹುಮ್ಮಸ್ಸು ಹೆಚ್ಚಿಸಿದೆ. ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ರಿಯಲ್ ಸ್ಟೋರಿ : ಅಕ್ಕಿ ಡ್ರಮ್ ನಲ್ಲಿ ಕೊಲ್ಲಲ್ಪಟ್ಟ ನಿಜವಾದ ಕಾಶ್ಮೀರಿ ಪಂಡಿತ ಇವರು

    ಭಾರತೀಯ ಚಲನಚಿತ್ರ ವಿಮರ್ಶಕ ಮತ್ತು ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ‘ದಿ ಕಾಶ್ಮೀರ್ ಫೈಲ್ಸ್’ ಪೋಸ್ಟರ್ ಅನ್ನು ಟ್ವೀಟ್ ಮಾಡಿದ್ದು, ಕಾಶ್ಮೀರ್ ಫೈಲ್ಸ್ ಮೂರನೇ ವಾರದ ಕಲೆಕ್ಷನ್ ಬರೆದುಕೊಂಡಿದ್ದಾರೆ. ಈ ಟ್ವೀಟ್‌ನಲ್ಲಿ ಕಾಶ್ಮೀರ್ ಫೈಲ್ಸ್ ಮೂರನೇ ವಾರದಲ್ಲಿ ಶುಕ್ರ 4.50 ಕೋಟಿ, ಶನಿ 7.60 ಕೋಟಿ, ಭಾನುವಾರ 8.75 ಕೋಟಿ, ಸೋಮ 3.10 ಕೋಟಿ, ಮಂಗಳವಾರ 2.75 ಕೋಟಿ. ಗಳಿಸಿದೆ. ಒಟ್ಟು ಕಾಶ್ಮೀರ್ ಫೈಲ್ಸ್ ಈ ವಾರ 234.03 ಕೋಟಿ ಗಳಿಸಿದೆ ಎಂದು ಬರೆದುಕೊಂಡಿದ್ದಾರೆ. ಇದು ಭಾರತದ ಆಲ್ ಟೈಮ್ ಬ್ಲಾಕ್ಬಸ್ಟರ್ ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    ಈ ಟ್ವೀಟ್ ನೋಡಿದ ಅಭಿಮಾನಿಗಳು, ಕೊನೆಗೂ ಚಿತ್ರದ ಪೋಸ್ಟರ್ ಬಂದಿದೆ. 2ನೇ ಭಾನುವಾರದವರೆಗೆ ಸಿನಿಮಾ ಸಾಗುತ್ತಿದ್ದ ರೀತಿ… 2ನೇ ಸೋಮವಾರದ ನಂತರ ಕೊಂಚ ಕುಸಿಯಿತು. ಬಿಡುಗಡೆಗೂ ಮುನ್ನವೇ ಊಹೆಗೂ ಮೀರುವಂತೆ ಈ ಸಿನಿಮಾ ಪ್ರಚಾರವಾಗಿತ್ತು. ಅದೇ ರೀತಿ ಕಲೆಕ್ಷನ್ ಆಗುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ರಣಬೀರ್ ಕಪೂರ್‌ಗೆ ಪತ್ನಿ ಆಗ್ತಾರಾ ನ್ಯಾಷಿನಲ್ ಕ್ರಶ್ ರಶ್ಮಿಕಾ ಮಂದಣ್ಣ?

  • ಅಮೆರಿಕದಲ್ಲೂ ಸ.ಹಿ.ಪ್ರಾ.ಶಾ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್- ಯುಎಸ್‍ನಲ್ಲಿ ಚಿತ್ರ ಗಳಿಸಿದ್ದು ಎಷ್ಟು?

    ಅಮೆರಿಕದಲ್ಲೂ ಸ.ಹಿ.ಪ್ರಾ.ಶಾ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್- ಯುಎಸ್‍ನಲ್ಲಿ ಚಿತ್ರ ಗಳಿಸಿದ್ದು ಎಷ್ಟು?

    ಬೆಂಗಳೂರು: ರಿಷಬ್ ಶೆಟ್ಟಿ ನಿರ್ದೇಶಿಸಿದ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈಗ ಈ ಚಿತ್ರ ಕರ್ನಾಟಕ ಮಾತ್ರವಲ್ಲದೇ ಅಮೆರಿಕದಲ್ಲೂ ಯಶಸ್ವಿ ಕಾಣುತ್ತಿದೆ.

    ಚಲನಚಿತ್ರ ಮಾರುಕಟ್ಟೆ ವಿಶ್ಲೇಷಕ ತರಣ್ ಆದರ್ಶ್ ಅವರು ಚಿತ್ರದ ಬಗ್ಗೆ ಟ್ವೀಟ್ ಮಾಡಿ “ಕನ್ನಡ ಚಿತ್ರ ಅಮೆರಿಕಾದಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣುತ್ತಿರುವುದನ್ನು ನೋಡಿ ಖುಷಿಯಾಗುತ್ತಿದೆ. ಅಮೆರಿಕದ ಕೆಲವು ಚಿತ್ರಮಂದಿರದಲ್ಲಿ ಈ ಚಿತ್ರ ಬಿಡುಗಡೆಯಾಗಿದೆ. ಈ ಚಿತ್ರ ಟೈಟಲ್ ಹಾಗೂ ಸ್ಕೋರ್ಸ್ ನಿಂದಲೇ ಸೆ. 29ರ ವರೆಗೂ ಯುಎಸ್ ಬಾಕ್ಸ್ ಆಫೀಸ್‍ನಲ್ಲಿ 85,509 ಡಾಲರ್(62.04 ಲಕ್ಷ ರೂ.) ಕಲೆಕ್ಷನ್ ಆಗಿದೆ” ಎಂದು ಟ್ವೀಟ್ ಮಾಡಿದ್ದಾರೆ.

    “ನಿಮ್ಮ ಈ ಟ್ವೀಟ್ ನಮಗೆ ತುಂಬಾ ಪ್ರೇರಣೆ ನೀಡಿದೆ. ನಿಮ್ಮ ಅಪ್‍ಡೇಟ್‍ಗೆ ಧನ್ಯವಾದಗಳು” ಎಂದು ಬರೆದು ನಿರ್ದೇಶಕ ಎಂದು ರಿಷಬ್ ಶೆಟ್ಟಿ ತರಣ್ ಅದರ್ಶ್ ಅವರ ಟ್ವೀಟ್ ನ್ನು ರೀ-ಟ್ವೀಟ್ ಮಾಡಿದ್ದಾರೆ.

    ಸದ್ಯ ರಿಷಬ್ ಶೆಟ್ಟಿ ನಿರ್ದೇಶನದ ಈ ಚಿತ್ರ ಒಂದು ಹೊಸ ದಾಖಲೆ ಬರೆದಿದೆ. ಮೊಟ್ಟ ಮೊದಲ ಬಾರಿಗೆ ಅಂಡಮಾನ್ ಹಾಗೂ ನಿಕೋಬಾರ್ ನಲ್ಲಿ ಈ ಚಿತ್ರ ಪ್ರದರ್ಶನವಾಗಿ ದಾಖಲೆ ಬರೆದಿದೆ. ಕರ್ನಾಟಕದಲ್ಲಿ ಈ ಚಿತ್ರ ಯಶಸ್ಸು ಕಂಡು ಬೇರೆ ರಾಜ್ಯ ಹಾಗೂ ಬೇರೆ ದೇಶದಲ್ಲಿ ಯಶಸ್ಸು ಕಂಡಿದೆ. ಸೆ. 29 ಹಾಗೂ 30 ರಂದು ಫೋರ್ಟ್‍ಬ್ಲೇರ್ ನ ದಿವ್ಯಂ ಟಾಕೀಸಿನಲ್ಲಿ ಈ ಚಿತ್ರ ಬಿಡುಗಡೆ ಆಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv