Tag: ತಮ್ಮಯ್ಯ

  • ಬಿಜೆಪಿಯಿಂದ 100 ಕೋಟಿ | ಈವರೆಗೂ ನನ್ನನ್ನ ಯಾರು ಸಂಪರ್ಕ ಮಾಡಿಲ್ಲ – ಶಾಸಕ ತಮ್ಮಯ್ಯ ಸ್ಪಷ್ಟನೆ

    ಬಿಜೆಪಿಯಿಂದ 100 ಕೋಟಿ | ಈವರೆಗೂ ನನ್ನನ್ನ ಯಾರು ಸಂಪರ್ಕ ಮಾಡಿಲ್ಲ – ಶಾಸಕ ತಮ್ಮಯ್ಯ ಸ್ಪಷ್ಟನೆ

    ಚಿಕ್ಕಮಗಳೂರು: ಈವರೆಗೂ ನನ್ನನ್ನ ಯಾರು ಆ ರೀತಿ ಸಂಪರ್ಕ ಮಾಡಿಲ್ಲ ಎಂದು ಕಾಂಗ್ರೆಸ್ ಶಾಸಕ ರವಿ ಗಣಿಗ ಆಫರ್ ಆರೋಪಕ್ಕೆ ಚಿಕ್ಕಮಗಳೂರು (Chikkamagaluru) ಶಾಸಕ ತಮ್ಮಯ್ಯ ಸ್ಪಷ್ಟನೆ ನೀಡಿದ್ದಾರೆ.

    ರವಿ ಗಣಿಗ ಹೇಳಿಕೆಗೆ ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಶಾಸಕ ತಮ್ಮಯ್ಯ ಮಾತನಾಡಿ, ನನಗೆ ಈವರೆಗೂ ಯಾರೂ ಸಂಪರ್ಕ ಮಾಡಿಲ್ಲ. ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಶಾಸಕನಾಗಿದ್ದೇನೆ. ಸಿದ್ದರಾಮಯ್ಯ (Siddaramaih), ಖರ್ಗೆ, ಡಿಕೆಶಿ ನೇತೃತ್ವದಲ್ಲಿ 5 ವರ್ಷ ಸರ್ಕಾರ ಆಳಲು ಜನ ನನ್ನನ್ನು ಗೆಲ್ಲಿಸಿದ್ದಾರೆ. ರವಿ ಗಣಿಗ ಏನು ಮಾತಾಡಿದ್ದಾರೆ ಅದರ ಬಗ್ಗೆ ನನಗೆ ಮಾಹಿತಿ ಇಲ್ಲ. ಇದರಲ್ಲಿ ನನ್ನ ಹೆಸರು ಏಕೆ ಬಂತು ಎಂದು ನನಗೆ ಗೊತ್ತಿಲ್ಲ. ಈವರೆಗೂ ನನ್ನನ್ನ ಯಾರು ಆ ರೀತಿ ಸಂಪರ್ಕ ಮಾಡಲಿಲ್ಲ. ನಾನು 18 ವರ್ಷ ಬಿಜೆಪಿಯಲ್ಲಿ ಇದ್ದೆ. ಬಿಜೆಪಿಯವರು ಸಿಕ್ಕಿದಾಗ ಆತ್ಮೀಯವಾಗಿ ಮಾತನಾಡುತ್ತಾರೆ ಅಷ್ಟೇ ಬಿಟ್ರೆ ಬೇರೆ ಯಾರೂ ನನ್ನನ್ನು ಸಂಪರ್ಕ ಮಾಡಲಿಲ್ಲ. ಅವರನ್ನೇ ಕೇಳಬೇಕು ಎಂದು ಹೇಳಿದರು. ಇದನ್ನೂ ಓದಿ: ದನ ಮೇಯಿಸಲು ಹೋಗಿ ಹಳ್ಳದಲ್ಲಿ ಕೊಚ್ಚಿ ಹೋದ ಬಾಲಕರು – ಓರ್ವನ ಶವ ಪತ್ತೆ

    ಗಣಿಗ ರವಿ ಹೇಳಿದ್ದೇನು?
    ಸರ್ಕಾರ ಕೆಡವಲು ಬಿಜೆಪಿಯಿಂದ (BJP) 50 ಕೋಟಿ ಅಲ್ಲ 100 ಕೋಟಿ ರೂ. ಆಫರ್ ನೀಡಿದ್ದಾರೆ. ಇದಕ್ಕೂ ಮುನ್ನ ಬಿಜೆಪಿಯಿಂದ ಕಾಂಗ್ರೆಸ್ ಶಾಸಕರಿಗೆ 50 ಕೋಟಿ ಆಫರ್ ನೀಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು. ಬಿಜೆಪಿಯನ್ನು ಇಬ್ಬರು ಕಾಂಗ್ರೆಸ್ ಶಾಸಕರು ಸಂಪರ್ಕಿಸಿದ್ದಾರೆ. ಶೀಘ್ರದಲ್ಲೇ ಆಪರೇಷನ್ ಕಮಲದ ಸಾಕ್ಷಿ ಬಿಡುಗಡೆ ಮಾಡುತ್ತೇನೆ. ಬಿಜೆಪಿ-ಜೆಡಿಎಸ್ ಸರ್ಕಾರ ಬೀಳಿಸುವ ತವಕದಲ್ಲಿದ್ದಾರೆ. ಕಾಂಗ್ರೆಸ್‌ನ 50 ಶಾಸಕರಿಗೆ ಆಮಿಷ ಒಡ್ಡಲಾಗಿದೆ. ಕಾಂಗ್ರೆಸ್ ಶಾಸಕರು 50 ಕೋಟಿ ರೂ.ಗೆ ಬಗ್ಗಿಲ್ಲ ಎಂದು ಶಾಸಕರಿಗೆ ತಲಾ 100 ಕೋಟಿ ಆಫರ್ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಕೌಟುಂಬಿಕ ಜಗಳ- ಅತ್ತಿಗೆಯ ಕುತ್ತಿಗೆಗೆ ಚಾಕು ಇರಿದು ಕೊಲೆಗೈದ ಮೈದುನ

    ಕಳೆದ ಸರ್ಕಾರದಲ್ಲಿ ಲೂಟಿ ಮಾಡಿರುವ ಹಣದಿಂದ ಕಾಂಗ್ರೆಸ್ ಸರ್ಕಾರ ಕೆಡವಲು ಬಿಜೆಪಿ ಪ್ಲಾನ್ ಮಾಡಿದೆ. ಕೆಲವರು ಪೆನ್‌ಡ್ರೈವ್ ತೋರಿಸಿ ರಿವಿಲ್ ಮಾಡಿಲ್ಲ, ನಾವು ತೋರಿಸಿದರೆ ಖಂಡಿತ ರಿವಿಲ್ ಮಾಡುತ್ತೇವೆ. ನಮ್ಮ ಬಳಿ ಆಪರೇಷನ್ ಕಮಲಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳಿವೆ. ಕಿತ್ತೂರು ಶಾಸಕ ಬಾಬು, ಚಿಕ್ಕಮಗಳೂರು ಶಾಸಕ ತಮ್ಮಯ್ಯರನ್ನ ಯಾಕೆ ಸಂಪರ್ಕಿಸಿದ್ದರು? ಯಾವ್ಯಾವ ಹೋಟೆಲ್, ಏರ್‌ಪೋರ್ಟ್, ಗೆಸ್ಟ್ ಹೌಸ್‌ನಲ್ಲಿ ಸಂಪರ್ಕಿಸಿದ್ದಾರೆ ಎಂಬ ಮಾಹಿತಿ ಇದೆ. ಈ ಬಗ್ಗೆ ಆಡಿಯೋ, ವಿಡಿಯೋ, ಸಿಡಿ, ಪೆನ್‌ಡ್ರೈವ್ ಸೇರಿದಂತೆ ಮುಂದುವರಿದು ಐ ಕ್ಲೌಡ್ ಕೂಡ ಇದೆ ಎಂದರು. ಇದನ್ನೂ ಓದಿ: ಬಿಜೆಪಿಯಿಂದ 50 ಕೋಟಿ ಅಲ್ಲ 100 ಕೋಟಿ ರೂ. ಆಫರ್ : ಗಣಿಗ ರವಿ

    ನಮ್ಮ ಶಾಸಕರನ್ನ ಎಲ್ಲೆಲ್ಲಿ ಸಂಪರ್ಕಿಸಿದ್ದರು? ಏನೇನು ಆಫರ್ ಮಾಡಿದ್ದರು? ಎನ್ನುವುದನ್ನು ಶೀಘ್ರದಲ್ಲೇ ಮಾಧ್ಯಮಗಳ ಮೂಲಕ ದಾಖಲೆ ಬಿಡುಗಡೆ ಮಾಡುತ್ತೇವೆ. ಸರ್ಕಾರ ಕೆಡವಲು ಪ್ರಯತ್ನಿಸದವರು ಈ ಬಗ್ಗೆ ತನಿಖೆ ಮಾಡಿಸಿ ಎನ್ನುತ್ತಾರೆ. ಪ್ರಯತ್ನದಲ್ಲಿರುವವರು ಯಾರು ತನಿಖೆ ಮಾಡಿಸಿ ಎನ್ನುವುದಿಲ್ಲ. ನಮ್ಮ ಶಾಸಕರರು ಬಿಜೆಪಿ ಆಮಿಷಗಳಿಗೆ ಬಲಿಯಾಗಲ್ಲ. ನಾವೆಲ್ಲಾ ಒಗ್ಗಟ್ಟಾಗಿದ್ದೇವೆ, ಸರ್ಕಾರವೂ ಸ್ಥಿರವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ರಷ್ಯಾ ಮೇಲೆ ಕ್ಷಿಪಣಿ ದಾಳಿಗೆ ಅಮೆರಿಕ ಒಪ್ಪಿಗೆ – ಉಕ್ರೇನ್‌ಗೆ ಜೋ ಬೈಡನ್‌ ಬಲ

  • ಆಕಾಶದಲ್ಲಿ ಜಾಗ ಸಿಕ್ಕಿಲ್ಲ, ಸಿಕ್ಕಿದ್ರೆ ಅಲ್ಲೂ ಭ್ರಷ್ಟಚಾರ ಮಾಡುತ್ತಿದ್ದರು: ಸಿ.ಟಿ.ರವಿ ವಿರುದ್ಧ ತಮ್ಮಯ್ಯ ವಾಗ್ದಾಳಿ

    ಆಕಾಶದಲ್ಲಿ ಜಾಗ ಸಿಕ್ಕಿಲ್ಲ, ಸಿಕ್ಕಿದ್ರೆ ಅಲ್ಲೂ ಭ್ರಷ್ಟಚಾರ ಮಾಡುತ್ತಿದ್ದರು: ಸಿ.ಟಿ.ರವಿ ವಿರುದ್ಧ ತಮ್ಮಯ್ಯ ವಾಗ್ದಾಳಿ

    ಚಿಕ್ಕಮಗಳೂರು: ಶಾಸಕ ಸಿ.ಟಿ.ರವಿ (C.T.Ravi) ಭ್ರಷ್ಟಾಚಾರದ (Corruption) ಪಿತಾಮಹ. ಅವರಿಗೆ ಆಕಾಶದಲ್ಲಿ ಜಾಗ ಸಿಕ್ಕಿಲ್ಲ. ಸಿಕ್ಕಿದ್ದರೆ ಅಲ್ಲೂ ಭ್ರಷ್ಟಾಚಾರ ಮಾಡುತ್ತಿದ್ದರು ಎಂದು ಚಿಕ್ಕಮಗಳೂರು (Chikkamagaluru) ತಾಲೂಕು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ತಮ್ಮಯ್ಯ (H.D.Tammaiah) ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಟಿ.ರವಿ ಇತ್ತೀಚಿಗೆ ದೆಹಲಿಯಲ್ಲಿ (Delhi) ರಾಜ್ಯದ ರೈತ ಹೆಣ್ಣು ಮಕ್ಕಳಿಗೆ ಅವಮಾನವಾಗುವ ರೀತಿ ಹೇಳಿಕೆ ನೀಡಿರುವುದನ್ನು ಖಂಡಿಸುತ್ತೇನೆ. ಶಾಸಕರು ಈ ಕೂಡಲೇ ದೇಶ ಹಾಗೂ ರಾಜ್ಯದ ರೈತ ಕುಟುಂಬದ ಹೆಣ್ಣು ಮಕ್ಕಳನ್ನು ಕ್ಷಮೆ ಕೇಳಬೇಕು. ಇಲ್ಲವಾದರೆ ರೈತ ಮಹಿಳೆಯರನ್ನೊಳಗೊಂಡು ಶಾಸಕರ ವಿರುದ್ಧ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: 2018ರ ಚುನಾವಣೆಯಲ್ಲಿ ಪ್ರಬಲ ಪೈಪೋಟಿ ಒಡ್ಡಿದ್ದ ಅಭ್ಯರ್ಥಿಯ ಜಾತಿ ಪ್ರಮಾಣಪತ್ರ ರದ್ದು 

    ನಗರದ ಎಂ.ಜಿ.ರಸ್ತೆಯ ಫುಟ್‌ಪಾತ್‌ನಲ್ಲಿ ಮತ್ತೆ ಇಂಟರ್ ಲಾಕ್ ಕೆಲಸ ಮಾಡುತ್ತಿದ್ದಾರೆ. ಇದು ಹೊಸ ಬಿಲ್ ಅಥವಾ ದುರಸ್ತಿ ಬಿಲ್ ಗೊತ್ತಿಲ್ಲ. ಇನ್ನೂ ಬಿಲ್ ಆಗಿಲ್ಲ. ಜನ ಶಾಸಕರ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ. ಯಾವ ಬಿಲ್ ಮಾಡುತ್ತಾರೆ ನೋಡೋಣ. ನಗರದ ಐ.ಜಿ. ರಸ್ತೆ ಕಾಮಗಾರಿ ಬಗ್ಗೆಯೂ ಎಲ್ಲಾ ಮಾಹಿತಿ ಗೊತ್ತಿದೆ. ಇದನ್ನ ಪ್ರಶ್ನೆ ಮಾಡಲು ಎಲ್ಲರಿಗೂ ಭಯವಿದೆ ಎಂದರು. ಇದನ್ನೂ ಓದಿ: DMK ಸರ್ಕಾರಕ್ಕೆ ಹಿನ್ನಡೆ – ತಮಿಳುನಾಡಿನಲ್ಲಿ RSSಗೆ ರ‍್ಯಾಲಿ ಅನುಮತಿ

    ಯುಪಿಎ ಅಧಿಕಾರದಲ್ಲಿ ಇದ್ದಾಗ ಸಿ.ಟಿ.ರವಿಯವರಷ್ಟು ವಾಕ್ಚಾತುರ್ಯದಿಂದ ಎಲ್ಲರನ್ನೂ ಆಕರ್ಷಿಸುತ್ತಿದ್ದವರು ಬೇರೆ ಯಾರೂ ಇರಲಿಲ್ಲ. ಆಕಾಶದ ಮೇಲೂ ಭ್ರಷ್ಟಾಚಾರ ಎಂದು ಹೇಳುತ್ತಿದ್ದರು. ಈಗ ನೀವು ಮಾಡುತ್ತಿರುವುದು ಏನು ಸ್ವಾಮಿ ಎಂದು ಪ್ರಶ್ನಿಸಿದ್ದಾರೆ. ನೀವು ಕೆರೆ ಅಗೆದು ಕೆರೆ ಆಳದಲ್ಲೂ ಭ್ರಷ್ಟಾಚಾರ ಮಾಡುತ್ತಿದ್ದೀರಿ. ನಿಮಗೆ ಆಕಾಶದಲ್ಲಿ ಜಾಗ ಸಿಕ್ಕಿಲ್ಲ. ಸಿಕ್ಕಿದ್ದರೆ ಅಲ್ಲೂ ಭ್ರಷ್ಟಾಚಾರ ಮಾಡುತ್ತಿದ್ದೀರಿ. ತಾಲೂಕಿನ ಕೆಲ ಭಾಗದಲ್ಲಿ ಸಿ.ಟಿ.ರವಿ ಅವರ ಬಾವ ಹೋಗಿ ರಾತ್ರಿ ಆಶ್ವಾಸನೆ ಕೊಡುತ್ತಾರೆ. ಬೆಳಗ್ಗೆ ಕಾಮಗಾರಿ ಆರಂಭಗೊಳ್ಳುತ್ತದೆ. ಇದು ಹೇಗೆ ಸಾಧ್ಯ? ಜಿಲ್ಲಾಧಿಕಾರಿ ಇತ್ತ ಗಮನ ಹರಿಸಬೇಕು. ಡಿಸಿ-ಎಸ್ಪಿ ದಕ್ಷರಿದ್ದಾರೆ. ಆಡಳಿತ ಪಕ್ಷದ ಪರ ಕೆಲಸ ಮಾಡಬೇಡಿ. ಸರ್ಕಾರ ಶಾಶ್ವತವಲ್ಲ. ಒಂದು ತಿಂಗಳಲ್ಲಿ ಹೊಸ ಸರ್ಕಾರ ಬರುತ್ತದೆ. ನೀವು ದುರ್ಬಳಕೆಗೆ ಒಳಗಾಗಬೇಡಿ. ನಿಮ್ಮ ಕೆಲಸ ನೀವು ಮಾಡಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಚುನಾವಣಾ ರಾಜಕಾರಣಕ್ಕೆ ಈಶ್ವರಪ್ಪ ಗುಡ್‍ಬೈ 

    ಸಿ.ಟಿ.ರವಿ ಸೋಲಿನ ಭೀತಿಯಿಂದ ಹಣ, ಹೆಂಡ, ಸೀರೆ ಸೇರಿದಂತೆ ಮತ್ತಿತ್ತರ ವಸ್ತುಗಳನ್ನು ಹಂಚುವ ಮೂಲಕ ವಾಮಾ ಮಾರ್ಗದಲ್ಲಿ ಚುನಾವಣೆ (Election) ಎದುರಿಸಲು ಮುಂದಾಗಿದ್ದಾರೆ. ಕಳೆದ 20 ವರ್ಷಗಳಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿದ್ದಾರೆ. ಅದರ ಆಧಾರದ ಮೇಲೆ ಈಗ ಮತ ಕೇಳಬಹುದಿತ್ತು. ಅದನ್ನು ಬಿಟ್ಟು ಸೋಲಿನ ಭೀತಿಯಿಂದ ಮತದಾರರಿಗೆ ಹಣದ ಆಮಿಷ ತೋರಿಸಿ ಮತ ಸೆಳೆಯುವ ತಂತ್ರಗಾರಿಕೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಇದನ್ನೂ ಓದಿ: ಪಕ್ಷೇತರನಿಗೆ ಬಿದ್ದ ಅನಿರೀಕ್ಷಿತ ಮತ ಸಿದ್ದು ಪಾಲಿಗೆ ವರವಾಯ್ತು! 

    ನಗರದ ಎಂ.ಜಿ.ರಸ್ತೆ, ಮಾರ್ಕೆಟ್ ರಸ್ತೆ ಹಾಗೂ ಐ.ಜಿ ರಸ್ತೆಗಳ ಅಭಿವೃದ್ಧಿ ಹೆಸರಿನಲ್ಲಿ ಕಳಪೆ ಕಾಮಗಾರಿ ನಡೆಸಿರುವ ಬಗ್ಗೆ ಸಾರ್ವಜನಿಕರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಇದರ ಆಧಾರದಲ್ಲಿ ಕಾಮಗಾರಿ ಬಗ್ಗೆ ತನಿಖೆ ನಡೆಯುತ್ತಿದ್ದು, ಇದು ಮುಕ್ತಾಯವಾಗುವ ಮುನ್ನವೇ ಎಂ.ಜಿ.ರಸ್ತೆಯಲ್ಲಿ ಮರುಕಾಮಗಾರಿ ನಡೆಸುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಐ.ಜಿ ರಸ್ತೆ ಫುಟ್‌ಪಾತ್ ಸಂಪೂರ್ಣ ಕಳಪೆ ಕಾಮಗಾರಿಯಾಗಿದೆ. ಈ ಬಗ್ಗೆ ಪ್ರಶ್ನೆ ಮಾಡುವವರೇ ಇಲ್ಲದಂತಾಗಿದೆ. ಬಿಳೆಕಲ್ಲು, ಕುರುವಂಗಿ ರಸ್ತೆಗೆ ಡಾಂಬರೀಕರಣ ಆಗಿ ಮೂರು ತಿಂಗಳಾಗಿದ್ದು, ಕಳಪೆ ಕಾಮಗಾರಿಯಿಂದಾಗಿ ಸದರಿ ರಸ್ತೆಯಲ್ಲಿ ಡಾಂಬರ್ ಹುಡುಕಬೇಕಾಗಿದೆ ಎಂದರು. ಇದನ್ನೂ ಓದಿ: ಸರ್ಕಾರದ ಒಳ ಮೀಸಲಾತಿ ವಿರುದ್ಧ ಹೋರಾಟ: ಸಿ.ಎಸ್‌.ದ್ವಾರಕನಾಥ್‌