Tag: ತಮಿಳು ಸಿನಿಮಾ

  • ತಮಿಳು ಚಿತ್ರರಂಗದಲ್ಲಿ ಮಿಂಚಿದ ಕನ್ನಡತಿ ಸಂಹಿತಾ ವಿನ್ಯಾ

    ತಮಿಳು ಚಿತ್ರರಂಗದಲ್ಲಿ ಮಿಂಚಿದ ಕನ್ನಡತಿ ಸಂಹಿತಾ ವಿನ್ಯಾ

    ನ್ನಡ ಅಲ್ಲದೇ ಪಕ್ಕದ ತಮಿಳು, ತೆಲುಗು ಚಿತ್ರರಂಗದಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ನಟಿ ಎಂದರೆ ಸಂಹಿತಾ ವಿನ್ಯಾ. 75ಕ್ಕೂ ಹೆಚ್ಚು ರಾಷ್ಟ್ರೀಯ, ಅಂತಾರಾಷ್ಟ್ರೀಯ ಫ್ಯಾಷನ್ ಷೋಗಳಲ್ಲಿ ಭಾಗವಹಿಸಿ, ಸೂಪರ್ ಮಾಡೆಲ್ ಎನಿಸಿಕೊಂಡಿರುವ ಸಂಹಿತಾ ವಿನ್ಯಾ ಇದೀಗ ತಮಿಳಲ್ಲಿ ಜೀವಾ ಸಹೋದರ ಜತಿನ್ ರಮೇಶ್ ಜತೆಗೂ ನಟಿಸುತ್ತಿದ್ದಾರೆ.

    ಇದಲ್ಲದೇ ದೊಡ್ಡ ಮಟ್ಟದಲ್ಲಿ ತಯಾರಾಗುತ್ತಿರುವ ತಮಿಳಿನ ಹಿಡನ್ ಕ್ಯಾಮೆರಾ ಚಿತ್ರದಲ್ಲಿ ಸಂಹಿತಾ ನಾಯಕಿಯಾಗಿ ನಟಿಸುತ್ತಿದ್ದು, ಆ ಚಿತ್ರದ ಕೆಲಸ ಕೇರಳದಲ್ಲಿ ನಡೆಯುತ್ತಿದೆ. ಕಳೆದ ಹಲವಾರು ವರ್ಷಗಳಿಂದ ಸಾಕಷ್ಟು ಚಿತ್ರಗಳಲ್ಲಿ ನಟಿಸುತ್ತ ಬಂದಿರುವ ಸಂಹಿತಾ ಅಭಿನಯದ ‘ಸೀತಮ್ಮ ಬಂದಳು ಸಿರಿಮಲ್ಲಿಗೆ ತೊಟ್ಟು’ ಚಿತ್ರ ಬಿಡುಗಡೆಯಾದಾಗ ಅಭಿಮಾನಿಗಳು ಕಟೌಟ್ ನಿಲ್ಲಿಸುವ ಮೂಲಕ ಹೊಸ ಟ್ರೆಂಡ್ ಸೃಷ್ಟಿಸಿದ್ದರು.

    ಸಂಹಿತಾ ವಿನ್ಯಾ ಅಭಿನಯದ ಅಭಿನಯದ ಮಿಕ್ಸಿಂಗ್ ಪ್ರೀತಿ,’ಮೆಜೆಸ್ಟಿಕ್ -2′, ಆಯುಧ, ಜಿಎಸ್‌ಟಿ. ಸ್ವಾಭಿಮಾನಿ, ಯಾಕೋ ಬೇಜಾರು, ವಿದೂಷಕ ಮುಂತಾದ ಚಿತ್ರಗಳು ರಿಲೀಸ್‌ಗೆ ರೆಡಿ ಇವೆ. ಮತ್ತೊಂದು ತಮಿಳು ಚಿತ್ರ ಮಿಕ್ಸಿಂಗ್ ಕಾದಲ್ ಬಿಡುಗಡೆಗೆ ರೆಡಿಯಿದೆ.

    ಅಮೃತಘಳಿಗೆ, ಲಂಗೋಟಿ ಮ್ಯಾನ್ ಅಲ್ಲದೇ ತೆಲುಗಿನ ಯು ಆರ್ ಮೈ ಹೀರೋ ಚಿತ್ರದಲ್ಲೂ ಸಂಹಿತಾ ವಿನ್ಯಾ ನಾಯಕಿಯಾಗಿ ನಟಿಸಿದ್ದಾರೆ. ಹಾಲು ತುಪ್ಪ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಸಂಹಿತಾ ವಿನ್ಯಾ, ಅಮೃತ ಘಳಿಗೆ, ವಿಷ್ಣು ಸರ್ಕಲ್, ನಸಾಬ್, ಮಿಕ್ಸಿಂಗ್ ಪ್ರೀತಿ, ಸ್ವಾಭಿಮಾನಿ ಅಲ್ಲದೇ ತೆಲುಗು, ತಮಿಳು ಸೇರಿದಂತೆ 18ಕ್ಕೂ ಹೆಚ್ಚು ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಇದೀಗ ಪಕ್ಕದ ತಮಿಳು, ತೆಲುಗು ಚಿತ್ರರಂಗದಲ್ಲೂ ಸಹ ಸಖತ್ ಮಿಂಚುತ್ತಿದ್ದಾರೆ. ಅಚ್ಚಕನ್ನಡದ ಪ್ರತಿಭೆಯಾದ ಸಂಹಿತಾ ವಿನ್ಯಾ, ಇದೀಗ ಸೌತ್ ಫಿಲಂ ಇಂಡಸ್ಟ್ರಿಯಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ.

  • ಅಜಿತ್ ಸಿನಿ ಪಯಣಕ್ಕೆ 33 ವರ್ಷ: ಫ್ಯಾನ್ಸ್ ಸಂಭ್ರಮ

    ಅಜಿತ್ ಸಿನಿ ಪಯಣಕ್ಕೆ 33 ವರ್ಷ: ಫ್ಯಾನ್ಸ್ ಸಂಭ್ರಮ

    ಕಾಲಿವುಡ್‌ನ ನಟ ತಲಾ ಅಜಿತ್ (Ajit Kumar) ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 33 ವರ್ಷಗಳು ತುಂಬಿವೆ. ಈ 33 ವರ್ಷಗಳ ಸುದೀರ್ಘ ಪಯಣದಲ್ಲಿ ಅಜಿತ್‌ಕುಮಾರ್ 63 ಸಿನಿಮಾಗಳನ್ನ ಮಾಡಿದ್ದಾರೆ. ಅವರ ಮುಂಬರುವ ಸಿನಿಮಾ 64ನೇ ಸಿನಿಮಾಗೆ ಸದ್ದಿಲ್ಲದೇ ತಯಾರಿ ಕೂಡಾ ನಡೆಯುತ್ತಿದೆ. 1993ರಲ್ಲಿ ತೆರೆಕಂಡ ಅಮರಾವತಿ ಸಿನಿಮಾ ಮೂಲಕ ತಮಿಳು ಚಿತ್ರರಂಗಕ್ಕೆ ಸ್ಪುರದ್ರೂಪಿ ನಾಯಕನಟನಾಗಿ ಎಂಟ್ರಿಕೊಟ್ಟಿದ್ದಾರೆ ನಟ ಅಜಿತ್.

    `ಅಮರಾವತಿ’ ಸಿನಿಮಾಗಿಂತಲೂ ಮೊದಲೇ ಬಾಲ ಕಲಾವಿದರಾಗಿ `ಎನ್ ವೀಡು ಎನ್ ಕನವರ್’ ಸಿನಿಮಾದಲ್ಲಿ ನಟಿಸಿದ್ದ ಅಜಿತ್ ಕುಮಾರ್ ಶಾಲಾ ವಿದ್ಯಾರ್ಥಿ ಪಾತ್ರದಲ್ಲಿ ನಟಿಸಿ ಗಮನ ಸೆಳೆದಿದ್ದರು. ಅದಾದ ಮೂರುವರ್ಷಗಳ ಬಳಿಕ `ಅಮರಾವತಿ’ ಸಿನಿಮಾ ಮೂಲಕ ಪಾದಾರ್ಪಣೆ ಮಾಡಿ, ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನ ನೀಡಿದವರು. ನಾಯಕ ನಟರಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಅಜಿತ್ ಅವರಿಗೆ 33ನೇ ವರ್ಷದ ಸಂಭ್ರಮ. ಈ ಕ್ಷಣವನ್ನ ಅವರ ಅಭಿಮಾನಿಗಳು ಹ್ಯಾಶ್‌ಟ್ಯಾಗ್ ಬಳಸಿ `#33 ಇಯರ್ಸ್‌ ಆಫ್ ಅಜಿತಿಸಂ’ ಅಂತಾ ಸಂಭ್ರಮ ಪಡುತ್ತಿದ್ದಾರೆ. ಇದನ್ನೂ ಓದಿ: ಶ್ರೀದೇವಿಗೆ ಪ್ರಪೋಸ್ ಮಾಡಬೇಕಿದ್ದ ರಜನಿಕಾಂತ್ – ತಡೆದಿದ್ದು ಯಾವ ಪವರ್?

    ಇದೇ ವರ್ಷ ತೆರೆಕಂಡ `ಗುಡ್ ಬ್ಯಾಡ್ ಅಗ್ಲಿ’ ಸಿನಿಮಾದ ನಿರ್ದೇಶಕ ಅಧಿಕ್ ರವಿಚಂದ್ರನ್ ಜೊತೆ ಮತ್ತೆ ಸಿನಿಮಾ ಮಾಡಲು ಎಲ್ಲಾ ತಯಾರಿ ನಡೆಯುತ್ತಿದೆ. ಈ ಸಿನಿಮಾಗೆ ಇನ್ನೂ ಶೀರ್ಷಿಕೆ ಇಟ್ಟಿಲ್ಲ. ಎಕೆ64 ಅನ್ನೋ ವರ್ಕಿಂಗ್ ಟೈಟಲ್‌ನಲ್ಲಿ ಅಜಿತ್ ಮುಂದಿನ ಸಿನಿಮಾ ಅನೌನ್ಸ್ ಮಾಡಲಾಗಿದೆ. ಅಜಿತ್ ಇತ್ತೀಚೆಗೆ ಸಿನಿಮಾಗಿಂತ ಕಾರ್ ರೇಸ್‌ನಲ್ಲೇ ಜಾಸ್ತಿ ಸಮಯ ಕಳೆಯುತ್ತಿದ್ದಾರೆ. ಕಾರ್ ರೇಸ್ ಜೊತೆಗೆ ಸಿನಿಮಾಗೂ ಟೈಮ್ ಕೊಡಲಿದ್ದಾರೆ ಅಜಿತ್.

  • ತಮಿಳಿನ ಜನಪ್ರಿಯ ಹಾಸ್ಯನಟ ಮಧನ್ ಬಾಬ್ ನಿಧನ

    ತಮಿಳಿನ ಜನಪ್ರಿಯ ಹಾಸ್ಯನಟ ಮಧನ್ ಬಾಬ್ ನಿಧನ

    ತಮಿಳು ಚಿತ್ರರಂಗದ ಜನಪ್ರಿಯ ಹಾಸ್ಯ ನಟ ಮಧನ್ ಬಾಬ್ (71) (Madhan Bob) ಶನಿವಾರ ರಾತ್ರಿ ನಿಧನರಾಗಿದ್ದಾರೆ.

    ಕ್ಯಾನ್ಸರ್‌ನಿಂದ (Cancer) ಬಳಲುತ್ತಿದ್ದ ನಟ ಶನಿವಾರ ಸಂಜೆ ಅಡ್ಯಾರ್‌ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. 1984ರಲ್ಲಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ನಟ ಮಧನ್‌ ಬಾಬ್‌, ಕಮಲ್ ಹಾಸನ್, ರಜನಿಕಾಂತ್, ಅಜಿತ್ ಕುಮಾರ್‌, ಸೂರ್ಯ ಮತ್ತು ವಿಜಯ್ ಅವರಂತಹ ಸ್ಟಾರ್‌ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಹಾಸ್ಯ, ಖಳನಾಯಕ ಸೇರಿದಂತೆ ಪ್ರಮುಖ ಪಾತ್ರಗಳಲ್ಲಿ ನಟಿಸಿ ಜನರನ್ನ ರಂಜಿಸಿದ್ದರು. ಇದನ್ನೂ ಓದಿ: ಅಶ್ಲೀಲ ಮೆಸೇಜ್ ಮಾಡಿದ್ದ ಮೂವರು ಅರೆಸ್ಟ್ – ಬೆಂಗ್ಳೂರು ಪೊಲೀಸರ ಕಾರ್ಯಕ್ಕೆ ನಟಿ ರಮ್ಯಾ ಮೆಚ್ಚುಗೆ

    ಚಲನಚಿತ್ರೋದ್ಯಮದಲ್ಲಿ ಅವರ ಸುದೀರ್ಘ ವೃತ್ತಿಜೀವನದಲ್ಲಿ, ಅವರು 150ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ತಮಿಳು ಮಾತ್ರವಲ್ಲದೆ ಮಲಯಾಳಂ, ಹಿಂದಿ ಮತ್ತು ತೆಲುಗು ಚಿತ್ರಗಳಲ್ಲಿಯೂ ನಟಿಸಿದ್ದಾರೆ. ತಮಿಳಿನ ತೆನಾಲಿ ಚಿತ್ರದಲ್ಲಿ ಡೈಮಂಡ್ ಬಾಬು, ಫ್ರೆಂಡ್ಸ್ ಚಿತ್ರದಲ್ಲಿ ಮ್ಯಾನೇಜರ್ ಸುಂದರೇಶನ್‌ ಪಾತ್ರಗಳು ಪ್ರೇಕ್ಷಕರನ್ನ ನಕ್ಕು ನಲಿಸಿದ್ದವು. ಇದನ್ನೂ ಓದಿ: ಕೂಲಿ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ `ಎ’ ಸರ್ಟಿಫಿಕೇಟ್

    ಕಳೆದ ಕೆಲ ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಲ್ಲದ ಮಧನ್ ಬಾಬು ಅವರು 71ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ನಟನ ನಿಧನಕ್ಕೆ ಇಡೀ ಚಿತ್ರರಂಗ ಕಂಬನಿ ಮಿಡಿದಿದೆ. ಇದನ್ನೂ ಓದಿ: ಮಲಯಾಳಂ ನಟ ಕಲಾಭವನ್ ನವಾಸ್ ಹೋಟೆಲ್ ರೂಮ್‌ನಲ್ಲಿ ಶವವಾಗಿ ಪತ್ತೆ – ಹೃದಯಾಘಾತ ಶಂಕೆ

  • ಶೂಟಿಂಗ್ ವೇಳೆ ಯಡವಟ್ಟು: SUVಯಲ್ಲಿ ಸ್ಟಂಟ್ ವೇಳೆ ಅವಘಡ – ತಮಿಳುನಾಡಿನ ಸ್ಟಂಟ್‌ಮೆನ್ ಸಾವು

    ಶೂಟಿಂಗ್ ವೇಳೆ ಯಡವಟ್ಟು: SUVಯಲ್ಲಿ ಸ್ಟಂಟ್ ವೇಳೆ ಅವಘಡ – ತಮಿಳುನಾಡಿನ ಸ್ಟಂಟ್‌ಮೆನ್ ಸಾವು

    ಚೆನ್ನೈ: `ವೆಟ್ಟುವಮ್‌’ ತಮಿಳು ಸಿನಿಮಾ ಶೂಟಿಂಗ್ ವೇಳೆ ಕಾರಿನಲ್ಲಿ ಸ್ಟಂಟ್ ಮಾಡುವಾಗ ಸ್ಟಂಟ್‌ಮ್ಯಾನ್ ಒಬ್ಬರು ಸಾವಿಗೀಡಾಗಿರುವ ಘಟನೆ ನಡೆದಿದೆ.

    ಕಾಲಿವುಡ್‌ನ ಸಾಹಸ ಕಲಾವಿದ ಮೋಹನ್ ರಾಜು ಮೃತ ಸ್ಟಂಟ್‌ಮ್ಯಾನ್.ಇದನ್ನೂ ಓದಿ: ISSನಿಂದ ಅನ್‌ಡಾಕಿಂಗ್ ಯಶಸ್ವಿ: ಭುವಿಯತ್ತ ಶುಕ್ಲಾ, ಮಂಗಳವಾರ ಮಧ್ಯಾಹ್ನ ಕ್ಯಾಲಿಫೋರ್ನಿಯಾ ತೀರಕ್ಕೆ ವಾಪಸ್

    ಪಾ ರಂಜಿತ್ ನಿರ್ದೇಶನದಲ್ಲಿ ತಮಿಳು ನಟ ಆರ್ಯ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ವೆಟ್ಟುವಮ್‌ ಸಿನಿಮಾ ಶೂಟಿಂಗ್ ವೇಳೆ ಈ ಅವಘಡ ಸಂಭವಿಸಿದೆ. ಜನಪ್ರಿಯ ಸ್ಟಂಟ್‌ಮ್ಯಾನ್ ರಾಜು ಅವರು ಜು.13ರಂದು ಶೂಟಿಂಗ್ ಸೆಟ್‌ನಲ್ಲಿ ಎಸ್‌ಯುವಿ ಕಾರು ಸ್ಟಂಟ್ ಮಾಡುತ್ತಿದ್ದರು. ಈ ವೇಳೆ ಕಾರು ಪಲ್ಟಿಯಾಗಿ ಸಾವನ್ನಪ್ಪಿದ್ದಾರೆ. ಅತೀ ವೇಗದ ಚಾಲನೆಯಿಂದ ಅಪಘಾತವಾಗಿದೆ ಎಂದು ಮೂಲಗಳು ತಿಳಿಸಿವೆ.

    ಕಾರು ಪಲ್ಟಿಯಾಗುವ ಅವಘಡದ ವಿಡಿಯೋ ಅಲ್ಲಿಯೇ ಇದ್ದ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಅವರು ಎಸ್‌ಯುವಿ ಕಾರನ್ನು ಓಡಿಸುತ್ತಾ, ರ‍್ಯಾಂಪ್ ಮೇಲೆ ಹೋಗುತ್ತಾರೆ. ಅಲ್ಲಿ ಕಾರು ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಬಳಿಕ ಅವರು ತೀವ್ರವಾಗಿ ಗಾಯಗೊಂಡಿದ್ದು, ಅಂಬುಲೆನ್ಸ್‌ನಲ್ಲಿ  ಕರೆದುಕೊಂಡು ಹೋಗುತ್ತಿರುವುದು ಕಂಡು ಬಂದಿದೆ.

    ಈ ಕುರಿತು ನಟ ವಿಶಾಲ್ ಮಾಹಿತಿ ಹಂಚಿಕೊಂಡಿದ್ದು, ಸಾವನ್ನಪ್ಪಿರುವುದಾಗಿ ದೃಢಪಡಿಸಿದ್ದಾರೆ. ರಾಜು ಅವರು ಕಳೆದ ಹಲವು ವರ್ಷಗಳಿಂದ ನನಗೆ ಪರಿಚಯ, ಆದರೆ ಇಂದು ಅವರು ನಮ್ಮ ಜೊತೆ ಇಲ್ಲ ಎನ್ನುವುದು ನಿಜಕ್ಕೂ ಅರಗಿಸಿಕೊಳ್ಳಲು ಕಷ್ಟ. ನನ್ನ ಹಲವು ಸಿನಿಮಾಗಳಲ್ಲಿ ಅಪಾಯಕಾರಿ ಸ್ಟಂಟ್‌ಗಳನ್ನು ಮಾಡಿದ್ದಾರೆ ಹಾಗೂ ಅವರು ತುಂಬಾ ಧೈರ್ಯಶಾಲಿ ವ್ಯಕ್ತಿ ಎಂದು ತಿಳಿಸಿದ್ದಾರೆ.

    ಈ ಚಿತ್ರವು 2021ರ ತಮಿಳು ಸಿನಿಮಾ `ಸರ್ಪಟ್ಟ ಪರಂಬರೈ’ ಚಿತ್ರದ ಮುಂದುವರಿದ ಭಾಗ ಎನ್ನಲಾಗಿದ್ದು, 2026ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.ಇದನ್ನೂ ಓದಿ: ಮುಂಬೈ ಏರ್‌ಪೋರ್ಟ್‌ನಲ್ಲಿ ಆಕಾಸ ಏರ್ ವಿಮಾನಕ್ಕೆ ಟ್ರಕ್‌ ಡಿಕ್ಕಿ

  • ತಲಾ ಅಜಿತ್ ನ್ಯೂ ಲುಕ್ ವೈರಲ್ – ಬಾಲ್ಡ್ ಲುಕ್ ಯಾಕೆ ಗೊತ್ತಾ..?

    ತಲಾ ಅಜಿತ್ ನ್ಯೂ ಲುಕ್ ವೈರಲ್ – ಬಾಲ್ಡ್ ಲುಕ್ ಯಾಕೆ ಗೊತ್ತಾ..?

    ಕಾಲಿವುಡ್‌ನ ನಟ ಅಜಿತ್‌ಕುಮಾರ್ (Ajit Kumar) ಒಂದು ಕಡೆ ಸಿನಿಮಾ, ಮತ್ತೊಂದು ಕಡೆ ಕಾರ್ ರೇಸಿಂಗ್‌ನಲ್ಲಿ ತೊಡಗಿಕೊಂಡಿದ್ದಾರೆ. ಇದೇ ವರ್ಷ ಅಜಿತ್‌ಕುಮಾರ್ ನಟನೆಯ ಎರಡು ಸಿನಿಮಾಗಳು ತೆರೆಕಂಡಿವೆ. ವಿದಾಮುಯರ್ಚಿ ಹಾಗೂ ಗುಡ್ ಬ್ಯಾಡ್ ಅಗ್ಲಿ ಸಿನಿಮಾಗಳು ತೆರೆಕಂಡು ಅಷ್ಟಕ್ಕಷ್ಟೇ ಪ್ರತಿಕ್ರಿಯೆ ಪಡೆದುಕೊಂಡಿವೆ. ಇದರ ಮಧ್ಯೆ ಈ ವರ್ಷ ಪದ್ಮಶ್ರೀ ಗರಿಯನ್ನ ಮುಡಿಗೇರಿಸಿಕೊಂಡಿದ್ದಾರೆ.

    ತಲಾ ಅಜಿತ್ ಅಂತಲೇ ಅಭಿಮಾನಿಗಳಿಂದ ಕರೆಸಿಕೊಳ್ಳುವ ಸಹಜ ಹಾಗೂ ಮನೋಜ್ಞ ಅಭಿನಯದಿಂದಲೇ ಅಪಾರ ಅಭಿಮಾನಿ ಬಳಗ ಹೊಂದಿರುವ ನಟ ಅಜಿತ್‌ಕುಮಾರ್. ಇದೇ ವರ್ಷವೇ ಎರಡು ಕಾರ್ ರೇಸ್‌ನಲ್ಲಿ ಭಾಗಿಯಾಗಿ ಎರಡನೇ ಸ್ಥಾನ ಗಿಟ್ಟಿಸಿಕೊಂಡಿದ್ದರು. ಈ ಮೂಲಕ ಕೇವಲ ಸಿನಿಮಾ ಅಭಿಮಾನಿಗಳು ಮಾತ್ರವಲ್ಲದೇ ಸ್ಪರ್ಧಾ ಜಗತ್ತಿನಲ್ಲೂ ಅಜಿತ್‌ಗೆ ಅಭಿಮಾನಿ ಬಳಗವಿದೆ. ಇದನ್ನೂ ಓದಿ: ವಿಜಯ್ ಜೊತೆ ಲವ್ ವದಂತಿಗೆ ತ್ರಿಷಾ ಕೆಂಡ – ಹೊಲಸು ಮನಸ್ಥಿತಿಯ ಜನ ಎಂದ ನಟಿ

    ಇದೀಗ ಅಜಿತ್ ತಮ್ಮ ವಿಶೇಷ ನೋಟದಿಂದ ಭಾರೀ ಸುದ್ದಿಯಾಗ್ತಿದ್ದಾರೆ. ಹೌದು, ಇತ್ತೀಚೆಗೆ ತಮ್ಮ ಹೊಸ ಲುಕ್ ಕಂಡು ಫ್ಯಾನ್ಸ್ ಕೊಂಚ ಗೊಂದಲಕ್ಕೀಡಾಗಿದ್ದಾರೆ. ಒಂದು ಕಡೆ ಅಜಿತ್ ನಟನೆಯ ಎಕೆ64 ಸಿನಿಮಾಗೆ ತಯಾರಿ ನಡೆಯುತ್ತಿದೆ. ಮತ್ತೊಂದೆಡೆ ಕಾರ್ ರೇಸ್‌ಗೂ ತಯಾರಿ ನಡೆಸಿದ್ದಾರೆ. ಈ ವೇಳೆ ಶಾರ್ಟ್ ಹೇರ್‌ಸ್ಟೈಲ್ ಇರುವ ಫೋಟೋ ವೈರಲ್ ಆಗಿದೆ.

    ಈ ಹೇರ್‌ಸ್ಟೈಲ್ ನೋಡಿ ಜಾಲತಾಣದಲ್ಲಿ ಫ್ಯಾನ್ಸ್ ಕಮೆಂಟ್ ಮೇಲೆ ಕಮೆಂಟ್ ಮಾಡ್ತಿದ್ದಾರೆ. ಕಂಪ್ಲೀಟ್ ರೇಸ್‌ನಲ್ಲೇ ತೊಡಗಿಕೊಳ್ತಾರಾ ನಮ್ಮ ಹೀರೋ ಎಂದು ಕೆಲವರು ಎಂದರೆ.. ಮತ್ತೆ ಕೆಲವರು ಇಲ್ಲ ಇದು ಅವ್ರ ಮುಂದಿನ ಸಿನಿಮಾದ ಹೇರ್‌ಸ್ಟೈಲ್ ಎಂದು ಕಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಹಂಸಲೇಖ, ರವಿಚಂದ್ರನ್ `ಯಾ’ ಸಾಹಿತ್ಯದ ಹಿಟ್ ಸೀಕ್ರೆಟ್..!

  • ಮಾದಕ ವಸ್ತು ಸೇವನೆ ಆರೋಪ – ಹೆಸರಾಂತ ತಮಿಳು ನಟ ಶ್ರೀಕಾಂತ್ ಅರೆಸ್ಟ್

    ಮಾದಕ ವಸ್ತು ಸೇವನೆ ಆರೋಪ – ಹೆಸರಾಂತ ತಮಿಳು ನಟ ಶ್ರೀಕಾಂತ್ ಅರೆಸ್ಟ್

    ರೋಜಾ ಕೂಟಂ, ಮನಸೆಲ್ಲಂ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿರುವ ತಮಿಳು ಹಾಗೂ ತೆಲುಗು ನಟ ಶ್ರೀಕಾಂತ್ (Tamil Actor Srikanth) ಅವರನ್ನು ಡ್ರಗ್ಸ್ ಕೇಸ್ (drug abuse case) ಅಡಿ ಬಂಧಿಸಲಾಗಿದೆ. ಬೆಳಗ್ಗೆಯಷ್ಟೇ ವಿಚಾರಣೆಗಾಗಿ ಚೆನ್ನೈ ಪೊಲೀಸರು ಶ್ರೀಕಾಂತ್ ಅಲಿಯಾಸ್ ಶ್ರೀರಾಮ್‌ನನ್ನು ವಶಕ್ಕೆ ಪಡೆದಿದ್ದರು. ಶ್ರೀಕಾಂತ್ ಡ್ರಗ್ಸ್ ಸೇವನೆ ಧೃಡಪಟ್ಟಿರುವುದರಿಂದ ಬಂಧಿಸಲಾಗಿದೆ ಎನ್ನುವ ಮಾಹಿತಿ ಇದೆ.

    ಡ್ರಗ್ಸ್ ಸೇವೆನೆ ಪತ್ತೆ ಹಚ್ಚುವುದಕ್ಕಾಗಿ ನುಂಗಂಬಾಕ್ಕಂ ಪೊಲೀಸರು (Nungambakkam police) ಶ್ರೀಕಾಂತ್ ರನ್ನು ಕರೆತಂದು, ಅವರ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದರು. ಸದ್ಯ ರಕ್ತದ ಪರೀಕ್ಷೆಯ ವರದಿ ಬಂದಿದ್ದು, ಶ್ರೀಕಾಂತ್ ಡ್ರಗ್ಸ್ ಸೇವಿಸಿರುವುದು ಪತ್ತೆಯಾಗಿದೆ. ಜೊತೆಗೆ ಡ್ರಗ್ಸ್ ವ್ಯವಹಾರವನ್ನೂ ಮಾಡಿದ್ದು ಬೆಳಕಿಗೆ ಬಂದಿದೆ. ಹಾಗಾಗಿ ಎನ್ ಡಿಪಿಎಸ್ ಕಾಯ್ದೆ ಅಡಿ ಶ್ರೀಕಾಂತ್ ಅವರನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ.

    ಎಐಎಇಎಂಕೆಯ ಐಟಿ ವಿಭಾಗದ ಮಾಜಿ ಸದಸ್ಯ ಪ್ರಸಾದ್ ಎಂಬಾತನನ್ನು ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಅನ್ನುವ ಕಾರಣಕ್ಕೆ ಬಂಧಿಸಲಾಗಿತ್ತು. ಇದನ್ನೂ ಓದಿ: ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದಾರೆ ನಟ ಸಲ್ಮಾನ್ ಖಾನ್

    ಆತ ಡ್ರಗ್ಸ್ ಅನ್ನು ಶ್ರೀಕಾಂತ್‌ಗೆ ಸಪ್ಲೈ ಮಾಡಿದ್ದಾಗಿ ಹೇಳಿಕೊಂಡಿದ್ದ. ನಂತರ ಶ್ರೀಕಾಂತ್ ರನ್ನು ಪೊಲೀಸರು ವಿಚಾರಣೆಗೆ ಕರೆತಂದಿದ್ದರು. ಪ್ರತಿ ಗ್ರಾಂಗೆ ಶ್ರೀಕಾಂತ್ ಹನ್ನೆರಡು ಸಾವಿರದ ದರದಂತೆ 40 ಬಾರಿ ಕೊಕೇನ್ ಖರೀದಿಸಿರುವುದು ಪತ್ತೆಯಾಗಿದೆ. ಇದನ್ನೂ ಓದಿ: ಸರ್ದಾರ್ ಜಿ 3 ಸಿನಿಮಾ ವಿರುದ್ಧ ಭುಗಿಲೆದ್ದ ಆಕ್ರೋಶ

  • ಜಯಂ ರವಿ ಜೊತೆ ಬೋಲ್ಡ್ ಆಗಿ ಕಾಣಿಸ್ಕೊಂಡ ವದಂತಿ ಗೆಳತಿ ಕೆನೀಶಾ

    ಜಯಂ ರವಿ ಜೊತೆ ಬೋಲ್ಡ್ ಆಗಿ ಕಾಣಿಸ್ಕೊಂಡ ವದಂತಿ ಗೆಳತಿ ಕೆನೀಶಾ

    ಮಿಳು ನಟ ಜಯಂ ರವಿ (Jayam Ravi) ಅಲಿಯಾಸ್ ರವಿಮೋಹನ್ ವಿಚ್ಛೇದನ ಘೋಷಿಸಿದ ಬಳಿಕ ಗಾಯಕಿ ಕೆನೀಶಾ (Kenishaa) ಜೊತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗೇ ಇಬ್ಬರ ನಡುವಿನ ವದಂತಿ ಹೆಚ್ಚಾಗುತ್ತಿದೆ. ಈಗ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಜಯಂ ರವಿ ಕೆನೀಶಾ ಆಲ್ಬಂ ಸಕ್ಸಸ್ ಪಾರ್ಟಿ ಕೊಟ್ಟಿದ್ದಾರೆ. ಕೆನೀಶಾ ಫ್ರಾನ್ಸಿಸ್ ಜೊತೆ ಜಯಂ ರವಿ ಬಿಂದಾಸ್ ಆಗಿರುವ ಫೋಟೋ ವೈರಲ್ ಆಗಿದೆ.

    ಕೆನೀಶಾ ಹಾಡಿರುವ (ಅಂಡ್ರುಂ ಇಡ್ರುಂ) ನಯಾ ಆಲ್ಬಂ ರಿಲೀಸ್ ಆಗಿದೆ. ವೀಡಿಯೋ ಕೊನೆಯಲ್ಲಿ ಜಯಂ ರವಿ ಎಂಟ್ರಿ ಇಬ್ಬರ ನಡುವಿಗೆ ಗಾಸಿಪ್‌ಗೆ ತುಪ್ಪ ಸುರಿದಂತಿತ್ತು. ಮ್ಯೂಸಿಕ್ ಆಲ್ಬಂ ರಿಲೀಸ್ ಬೆನ್ನಲ್ಲೇ ಈಗ ಚೆನೈನಲ್ಲಿ ಕೆನೀಶಾ, ಆಕೆಯ ಮ್ಯೂಸಿಕ್ ಟೀಮ್ ಹಾಗೂ ರವಿಮೋಹನ್ ಪಾರ್ಟಿ ಮಾಡಿದ್ದಾರೆ. ಪಾರ್ಟಿಯ ಫೋಟೋಗಳು ವೈರಲ್ ಆಗಿದೆ. ಕೆನೀಶಾ ಹಾಗೂ ಜಯಂ ರವಿ ಪರಸ್ಪರ ಭಾರೀ ಆಪ್ತತೆಯಿಂದ ಪಬ್‌ನಲ್ಲಿ ಸಕ್ಸಸ್ ಪಾರ್ಟಿ ಮಾಡಿದ್ದಾರೆ. ಇದನ್ನೂ ಓದಿ: ಇದೇ ವಾರ ಮುಗಿಯಲಿದೆ ದರ್ಶನ್ ಡೆವಿಲ್ ಶೂಟಿಂಗ್ !

    ರವಿ ಜೀವನದಲ್ಲಿ ಕೆನೀಶಾ ಪ್ರವೇಶ ಆಗಿದ್ದಕ್ಕೆ ಏಕಪಕ್ಷೀಯವಾಗಿ ರವಿ ತಮಗೆ ವಿಚ್ಛೇದನ ಘೋಷಿಸಿದ್ದಾರೆ ಎಂದು ರವಿ ಪತ್ನಿ ಆರತಿ ಆರೋಪ ಮಾಡಿದ್ದರು. ಬಳಿಕ ನಾಲ್ಕು ಗೋಡೆ ಮಧ್ಯೆ ನಡೆಯುತ್ತಿದ್ದ ಜಗಳ ಬೀದಿಗೆ ಬಂದಿತ್ತು. ಇಂದಿಗೂ ಪತ್ನಿ ಆರತಿ ಜೊತೆ ನಟ ರವಿಯ ವಿಚ್ಛೇದನವಾಗಿಲ್ಲ. ಅದಾಗಲೇ ರವಿ ಬಹಿರಂಗವಾಗಿ ಕೆನೀಶಾ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ.

    ನಟ ಜಯಂ ರವಿ ಪತ್ನಿ ಆರತಿ ಜೊತೆ 15 ವರ್ಷಗಳ ಸಂಸಾರ ನಡೆಸಿ ಇತ್ತೀಚೆಗಷ್ಟೇ ಡಿವೋರ್ಸ್ ಘೋಷಣೆ ಮಾಡಿದ್ದರು. ರವಿಗೆ ಕೆನೀಶಾ ಜೊತೆ ಸಂಬಂಧ ಇರೋದಕ್ಕೆ ಡಿವೋರ್ಸ್‌ಗೆ ಒತ್ತಾಯಿಸುತ್ತಿದ್ದಾರೆ ಅನ್ನೋದಾಗಿ ಆರತಿ ಹೇಳಿದ್ದರು. ಇದೀಗ ಆರತಿ ಆರೋಪದಂತೆ ರವಿ ಕೆನೀಶಾ ಸ್ನೇಹದ ಬಾರ್ಡರ್ ಮೀರಿ ಆಪ್ತರಾಗಿರುವಂತಿದೆ. ಖ್ಯಾತ ನಟನಾಗಿರುವ ರವಿ ಕೆನೀಶಾಗಾಗಿ ಮ್ಯೂಸಿಕ್ ಆಲ್ಬಂನಲ್ಲಿ ಕಾಣಿಸ್ಕೊಂಡಿದ್ದೂ ಕೂಡ ಅವರ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಆದರೆ ಕೆನೀಶಾ ಜೊತೆಗೆ ಯಾವುದೇ ಸಂಬಂಧವನ್ನೂ ರವಿ ಇದುವರೆಗೂ ಘೋಷಿಸಿಲ್ಲ. ಇದನ್ನೂ ಓದಿ: ವಿಜಯ್ ದಳಪತಿ ಹುಟ್ಟುಹಬ್ಬದ ದಿನವೇ ಫ್ಯಾನ್ಸ್‌ಗೆ ಭರ್ಜರಿ ಗಿಫ್ಟ್

  • ವಿಜಯ್ ದಳಪತಿ ಹುಟ್ಟುಹಬ್ಬದ ದಿನವೇ ಫ್ಯಾನ್ಸ್‌ಗೆ ಭರ್ಜರಿ ಗಿಫ್ಟ್

    ವಿಜಯ್ ದಳಪತಿ ಹುಟ್ಟುಹಬ್ಬದ ದಿನವೇ ಫ್ಯಾನ್ಸ್‌ಗೆ ಭರ್ಜರಿ ಗಿಫ್ಟ್

    ಕಾಲಿವುಡ್‌ನ ನಟ ವಿಜಯ್ ದಳಪತಿಗೆ (Vijay Thalapathy) ಇಂದು (ಜೂನ್-22) ಹುಟ್ಟುಹಬ್ಬದ ಸಂಭ್ರಮ. 51ನೇ ವಸಂತಕ್ಕೆ ಕಾಲಿಟ್ಟಿರುವ ನಟ ವಿಜಯ್ ದಳಪತಿ ತಮ್ಮ ಕೊನೆಯ ಸಿನಿಮಾ ʻಜನ ನಾಯಗನ್ʼ ಫಸ್ಟ್ ಲುಕ್ ಟೀಸರ್ (Jana Nayagan Teaser) ರಿಲೀಸ್ ಆಗಿದೆ. ವಿಜಯ್ ದಳಪತಿ ಖಾಕಿ ತೊಟ್ಟು ಕೊಡುವ ಎಂಟ್ರಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

    ವಿಜಯ್ ದಳಪತಿ ಜನ ನಾಯಗನ್ ಸಿನಿಮಾ ಮೂಲಕ ತಮ್ಮ ಸಿನಿಮಾ ಕೆರಿಯರ್‌ಗೆ ಬ್ರೇಕ್ ತೆಗೆದುಕೊಳ್ತಿದ್ದಾರೆ. ನಂತರ ರಾಜಕೀಯದಲ್ಲೇ ತಮ್ಮನ್ನ ತೊಡಗಿಸಿಕೊಳ್ಳಲು ನಿರ್ಧಾರ ಮಾಡಿದ್ದಾರೆ. 2026ರ ಚುನಾವಣೆಗೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ತಮಿಳಗ ವೆಟ್ರಿ ಕಳಗಂ ಪಾರ್ಟಿ ಮೂಲಕ ಜನಸೇವೆಗೆ ಇಳಿಯಲು ಸಕಲ ಸಿದ್ಧತೆಯ ಜೊತೆಗೆ ಕೊನೆಯ ಸಿನಿಮಾ ಮೇಲೂ ಗಮನಹರಿಸಿದ್ದಾರೆ.

    ಜನ ನಾಯಗನ್ ಸಿನಿಮಾಗೆ ಎಚ್.ವಿನೋದ್ ನಿರ್ದೇಶನ ಮಾಡಿದ್ದಾರೆ. ವಿಜಯ್ ದಳಪತಿಗೆ ನಾಯಕಿಯಾಗಿ ಪೂಜಾ ಹೆಗ್ಡೆ ತೆರೆಹಂಚಿಕೊಂಡಿದ್ದಾರೆ. ಅನಿರುದ್ಧ್ ಮ್ಯೂಸಿಕಲ್ ಮ್ಯಾಜಿಕ್ ಈ ಚಿತ್ರಕ್ಕಿರಲಿದೆ. ಬಾಬಿ ಡಿಯೋಲ್, ಗೌತಮ್ ವಾಸುದೇವ್ ಮೆನನ್, ಮಮಿತಾ ಬೈಜು, ಪ್ರಕಾಶ್ ರಾಜ್ ಮುಂತಾದವ್ರು ಚಿತ್ರದ ತಾರಾಗಣದಲ್ಲಿದ್ದಾರೆ.

    ವಿಜಯ್ ದಳಪತಿ ನಟನೆಯ 69ನೇ ಸಿನಿಮಾ ಇದಾಗಿದ್ದು, ಜನ ನಾಯಗನ್ ಸಿನಿಮಾ 2026ರ ಜನವರಿ 09 ರಂದು ತೆರೆಗೆ ಬರಲಿದೆ. ಬರುವ ವರ್ಷ ಸಂಕ್ರಾಂತಿ ವಿಜಯ್ ಅಭಿಮಾನಿಗಳಿಗೆ ಡಬಲ್ ಧಮಾಕಾ ಸೃಷ್ಟಿಸಲಿದೆ. ಕೆವಿಎನ್ ನಿರ್ಮಾಣ ಸಂಸ್ಥೆ ಚಿತ್ರಕ್ಕೆ ಬಂಡವಾಳ ಹೂಡಿದೆ. ಒಟ್ಟಿನಲ್ಲಿ ತಮ್ಮ ಹುಟ್ಟುಹಬ್ಬದ ದಿನ ಅಭಿಮಾನಿಗಳ ಸಂಭ್ರಮ ದುಪ್ಪಟ್ಟು ಮಾಡಿದ್ದಾರೆ ವಿಜಯ್.

  • ನಟ ಸೂರ್ಯ ಜೊತೆಗೆ ಬಿಗ್‌ ಬಜೆಟ್‌ ಸಿನಿಮಾಗೆ ಕಮಲ್‌ ಪ್ಲ್ಯಾನ್‌

    ನಟ ಸೂರ್ಯ ಜೊತೆಗೆ ಬಿಗ್‌ ಬಜೆಟ್‌ ಸಿನಿಮಾಗೆ ಕಮಲ್‌ ಪ್ಲ್ಯಾನ್‌

    ನಾಯಕನಲ್ಲದೇ ನಿರ್ಮಾಪಕನಾಗಿಯೂ ಕೆಲಸ ಮಾಡ್ತಿರೋ ಕಮಲ್‌ ಹಾಸನ್‌ (Kamal Haasan) ಈಗ ನಟ ರಾಕ್ಷಸ ಸೂರ್ಯ (Surya) ಜೊತೆಗೆ ಬಿಗ್‌ ಬಜೆಟ್‌ ಸಿನಿಮಾವೊಂದಕ್ಕೆ ಪ್ಲ್ಯಾನ್‌ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

    ಯೆಸ್‌… ಕಳೆದ ವರ್ಷ ಕಮಲ್‌ ತಮ್ಮ ರಾಜ್‌ಕಮಲ್ ಫಿಲ್ಮ್ ಇಂಟರ್‌ನ್ಯಾಷನಲ್ ಬ್ಯಾನರ್ ಅಡಿ ʻಅಮರನ್‌ʼ (Amaran) ಚಿತ್ರ ನಿರ್ಮಿಸಿದ್ದರು. ಶಿವಕಾರ್ತಿಕೇಯನ್‌, ಸಾಯಿ ಪಲ್ಲವಿ ನಟನೆಯ ಹಾಗೂ ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶನದ ಈ ಚಿತ್ರ ಸಕ್ಸಸ್‌ ಕಂಡಿತ್ತು. ಆ ಬಳಿಕ ಇದೇ ಬ್ಯಾನರ್‌ ಅಡಿಯಲ್ಲಿ ಮದ್ರಾಸ್ ಟಾಕೀಸ್ ನಿರ್ಮಿಸಿದ ಥಗ್‌ ಲೈಫ್‌ ಸಿನಿಮಾ ಇತ್ತೀಚೆಗಷ್ಟೇ ತೆರೆ ಕಂಡಿತ್ತು. ಆದ್ರೆ ಕರ್ನಾಟಕದಲ್ಲಿ ಈ ಚಿತ್ರಕ್ಕೆ ನಿಷೇಧ ಹೇರಿರೋದ್ರಿಂದ ಈ ಚಿತ್ರದ ಗಳಿಕೆಯೂ ಕುಸಿದಿದೆ. ಈ ಬೆನ್ನಲ್ಲೇ ಕಮಲ್‌ ಪ್ರಸಿದ್ಧ ಸ್ಟಂಟ್‌ ಮಾಸ್ಟರ್‌ ಅನ್ಬರಿವು ಚಿತ್ರದಲ್ಲಿ ನಾಯಕ ನಟನಾಗಿ ನಟಿಸಲು ತಯಾರಿ ನಡೆಸುತ್ತಿದ್ದಾರೆ. ಇದರ ನಡುವೆಯೇ ಮತ್ತೊಂದು ಬಿಗ್‌ ಬಜೆಟ್‌ ಸಿನಿಮಾ ನಿರ್ಮಾಣಕ್ಕೆ ಪ್ಲ್ಯಾನ್‌ ಮಾಡಿಕೊಂಡಿದ್ದಾರೆ ಅನ್ನೋದು ಗೊತ್ತಾಗಿದೆ. ಇದನ್ನೂ ಓದಿ: ಕಮಲ್‌ ಹಾಸನ್‌ಗೆ ಮತ್ತೆ ಶಾಕ್‌ – ತುರ್ತು ವಿಚಾರಣೆ ನಡೆಸಲ್ಲ ಎಂದ ಸುಪ್ರೀಂ ಕೋರ್ಟ್‌

    ಸದ್ಯ ಚಿತ್ರಕ್ಕೆ ಇನ್ನೂ ಟೈಟಲ್‌ ಫಿಕ್ಸ್‌ ಆಗಿಲ್ಲ, ಆದ್ರೆ ಯು. ಅರುಣ್‌ಕುಮಾರ್‌ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ಅರುಣ್‌ ಕುಮಾರ್‌ ಈಗಾಗಲೇ ನಿರ್ದೇಶಿಸಿರುವ ಸಿದ್ಧಾರ್ಥ್‌ ಅಭಿನಯದ ʻಚಿತ್ತʼ, ವಿಕ್ರಮ್‌ ನಟನೆಯ ʻವೀರ ಧೀರ ಸೂರನ್‌ʼ ಚಿತ್ರಗಳು ಬ್ಲಾಕ್‌ ಬಸ್ಟರ್‌ ಹಿಟ್‌ ಆಗಿವೆ. ಇದೀಗ ಕಮಲ್‌ ನಿರ್ಮಾಣ ಸಂಸ್ಥೆಯ ಚಿತ್ರಕ್ಕೆ ಆಕ್ಷನ್‌ ಕಟ್ ಹೇಳಲು ಸಜ್ಜಾಗುತ್ತಿದ್ದಾರೆ. ಈ ಚಿತ್ರಕ್ಕೆ ನಟ ಸೂರ್ಯ ನಾಯಕನಾಗಿ ನಟಿಸಲಿದ್ದು, ಬಿಗ್‌ ಬಜೆಟ್‌ ಸಿನಿಮಾ ಇದಾಗಿರಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಬಾಲಯ್ಯ ಜನ್ಮದಿನಕ್ಕೆ `ಅಖಂಡ-2′ ಟೀಸರ್ ರಿಲೀಸ್ – ಮಾಸ್ ಅವತಾರದಲ್ಲಿ ಅಬ್ಬರಿಸಿದ ನಂದಮೂರಿ ಬಾಲಕೃಷ್ಣ

    2022ರಲ್ಲಿ ತೆರೆಕಂಡ ʻವಿಕ್ರಮ್‌ʼ ಸಿನಿಮಾ ಭಾರೀ ಹಿಟ್‌ ಆಗಿದ್ದು, ಇದರ ಭಾಗ-2 ಪ್ರಕ್ರಿಯೆ ನಡೆಯುತ್ತಿದೆ. ಈ ಸಿನಿಮಾದಲ್ಲಿ ಕಮಲ್‌ ನಾಯಕನಾಗಿ ನಟಿಸಿದ್ದು, ಸೂರ್ಯ ವಿಲನ್‌ ಆಗಿ ಕಾಣಿಸಿಕೊಂಡಿದ್ದರು. ಅಲ್ಲದೇ ಭಾಗ-2ನಲ್ಲಿ ಸೂರ್ಯ ಅವರ ಪಾತ್ರದ ಬಗ್ಗೆ ಭಾರೀ ಕುತೂಹಲ ಕೆರಳಿಸಿದೆ. ಇದನ್ನೂ ಓದಿ: ಹೊಸ ಚಿತ್ರ ಘೋಷಿಸಿದ ರವಿ ಮೋಹನ್ – `ಬ್ರೋಕೋಡ್’ ಮೂಲಕ ನಿರ್ಮಾಣ ರಂಗಕ್ಕಿಳಿದ ತಮಿಳು ನಟ

  • ಕ್ಷಮೆ ಕೇಳದಿದ್ದರೆ ಕರ್ನಾಟಕದಲ್ಲಿ ಕಮಲ್ ಹಾಸನ್ ಚಿತ್ರಗಳನ್ನ ನಿರ್ಬಂಧಿಸಿ: ಶಿವರಾಜ್ ತಂಗಡಗಿ ಪತ್ರ

    ಕ್ಷಮೆ ಕೇಳದಿದ್ದರೆ ಕರ್ನಾಟಕದಲ್ಲಿ ಕಮಲ್ ಹಾಸನ್ ಚಿತ್ರಗಳನ್ನ ನಿರ್ಬಂಧಿಸಿ: ಶಿವರಾಜ್ ತಂಗಡಗಿ ಪತ್ರ

    ಬೆಂಗಳೂರು: ನಟ ಕಮಲ್ ಹಾಸನ್ (Kamal Haasan) ಅವರು ಕನ್ನಡಿಗರ ಕ್ಷಮೆಯಾಚಿಸದಿದ್ದಲ್ಲಿ ಅವರು ನಟಿಸುವ ಚಲನಚಿತ್ರಗಳಿಗೆ ಕರ್ನಾಟಕದಲ್ಲಿ ನಿರ್ಬಂಧ ವಿಧಿಸಬೇಕು ಅಂತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ಎಸ್‌ ತಂಗಡಗಿ (Shivaraj Tangadagi) ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದಾರೆ.

    ಸಚಿವರ ಪತ್ರದಲ್ಲಿ ಏನಿದೆ?
    ತಮಿಳು ಚಿತ್ರರಂಗದ ನಟ ಕಮಲ್ ಹಾಸನ್ ಅವರು ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ ಕನ್ನಡ ಭಾಷೆಯ (Kannada Language) ಕುರಿತಾಗಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಅವರು ಕನ್ನಡ ಭಾಷೆಯ ಕುರಿತಾಗಿ ಮಾತನಾಡಿರುವುದು ಕನ್ನಡಿಗರಿಗೆ ಹಾಗೂ ನನಗೆ ತೀವ್ರ ನೋವಾಗಿದೆ. ಮತ್ತು ಕನ್ನಡಿಗರ ಭಾವನೆಗಳಿಗೆ ಧಕ್ಕೆಯುಂಟಾಗಿದೆ.

    ಕಮಲ್ ಹಾಸನ್ ಅವರು ಓರ್ವ ಹಿರಿಯ ನಟರಾಗಿ ಕನ್ನಡ ಭಾಷೆಯ ಹಲವು ಚಿತ್ರಗಳಲ್ಲಿ ನಟಿಸಿ ಕನ್ನಡ ಭಾಷೆಯ ಬಗೆ, ತಿಳಿದವರಾಗಿದ್ದು, ಈ ರೀತಿ ಮಾತನಾಡಿರುವುದು ಅವರಿಗೆ ಶೋಭೆ ತರುವಂತದ್ದಲ್ಲ. ಕನ್ನಡದ ನೆಲ, ಜಲ ಹಾಗೂ ಭಾಷೆ ವಿಚಾರದಲ್ಲಿ ಯಾರೇ, ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರೂ ಅವರಿಂದ ಇಂತಹ ಹೇಳಿಕೆಗಳನ್ನು ಸಹಿಸಲು ಸಾಧ್ಯವಿಲ್ಲ. ಆದ್ದರಿಂದ ಕಮಲ್ ಹಾಸನ್ ಅವರು ಕೂಡಲೇ ಕನ್ನಡಿಗರ ಕ್ಷಮೆಯಾಚಿಸಬೇಕು.

    ಕಮಲ್ ಹಾಸನ್ ಅವರು ರಾಜ್ಯದ ಜನರು/ ಕನ್ನಡಿಗರ ಕ್ಷಮೆಯಾಚಿಸದಿದ್ದಲ್ಲಿ ಅವರು ನಟಿಸಿರುವ ಚಲನ ಚಿತ್ರಗಳಿಗೆ ಕರ್ನಾಟಕದಲ್ಲಿ ಕೂಡಲೇ ನಿರ್ಬಂಧ ವಿಧಿಸಬೇಕೆಂದು ಈ ಮೂಲಕ ತಿಳಿಸುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.