Tag: ತಮಿಳು ನಟಿ

  • ರಾಯಚೂರಿನಲ್ಲಿ `ಮಹಾನಟಿʼ – ಪುನೀತ್‌ ನನ್ನ ನೆಚ್ಚಿನ ನಟ ಅಂದ್ರು ಕೀರ್ತಿ ಸುರೇಶ್‌

    ರಾಯಚೂರಿನಲ್ಲಿ `ಮಹಾನಟಿʼ – ಪುನೀತ್‌ ನನ್ನ ನೆಚ್ಚಿನ ನಟ ಅಂದ್ರು ಕೀರ್ತಿ ಸುರೇಶ್‌

    – ಒಳ್ಳೆ ಆಫರ್‌ ಬಂದ್ರೆ ಕನ್ನಡ ಸಿನಿಮಾಕ್ಕೂ ಸೈ ಎಂದ ನಟಿ

    ರಾಯಚೂರು: ಕರ್ನಾಟಕದಲ್ಲಿ ಪುನೀತ್ ರಾಜಕುಮಾರ್ (Puneeth Rajkumar) ನನ್ನ ನೆಚ್ಚಿನ ನಟ. ನಾನು ಈ ಹಿಂದೆ ಡಾ.ರಾಜ್‌ಕುಮಾರ ಅವರನ್ನ ಭೇಟಿ ಮಾಡಿದ್ದೆ, ನನ್ನ ತಾಯಿ ಅವರೊಂದಿಗೆ ನಟಿಸಿದ್ದರು ಅಂತ ಬಹುಭಾಷಾ ನಟಿ ಕೀರ್ತಿ ಸುರೇಶ್ (Keerthy Suresh) ಹೇಳಿದ್ದಾರೆ.

    ರಾಯಚೂರಿನಲ್ಲಿ (Raichur) ಶಾಪಿಂಗ್ ಮಾಲ್‌ವೊಂದರ ಉದ್ಘಾಟನೆಗೆ ನಟಿ ಆಗಮಿಸಿದ್ದರು. ಈ ವೇಳೆ ಮಾತನಾಡಿ ಕನ್ನಡ ಸಿನಿಮಾಗಳಲ್ಲಿ ನಟಿಸುವ ಇಂಗಿತ ವ್ಯಕ್ತಪಡಿಸಿದರು. ಒಳ್ಳೆಯ ಆಫರ್, ಉತ್ತಮ ಸ್ಕ್ರಿಪ್ಟ್ ಬಂದ್ರೆ ಖಂಡಿತ ಕನ್ನಡ ಸಿನಿಮಾದಲ್ಲಿ ನಟಿಸುತ್ತೇನೆ ಅಂತ ಹೇಳಿದ್ರು. ಇದನ್ನೂ ಓದಿ: ನಟಿಗೆ 14.2 ಕೆಜಿ ಚಿನ್ನ ದುಬೈನಲ್ಲಿ ಸಿಕ್ಕಿದ್ದು ಹೇಗೆ? – ರನ್ಯಾಗೆ DRIಯಿಂದ ಡ್ರಿಲ್‌

    ಇನ್ನೂ ಈಗಷ್ಟೇ ವೈವಾಹಿಕ ಜೀವನ ಆರಂಭವಾಗಿದೆ, ತುಂಬಾ ಚೆನ್ನಾಗಿ ಸಾಗುತ್ತಿದೆ ಅಂತ ತಿಳಿಸಿದರು. ಸದ್ಯ ತೆಲುಗು ಹಾಗೂ ತಮಿಳು ಸಿನೆಮಾಗಳಲ್ಲಿ ನಟಿಸುತ್ತಿದ್ದು, ಇನ್ನೂ ಕೆಲ ಸಿನೆಮಾಗಳಲ್ಲಿ ನಟಿಸುವ ಬಗ್ಗೆ ಮಾತುಕತೆ ನಡೆದಿದೆ ಅಂತ ಕೀರ್ತಿ ಸುರೇಶ್ ತಿಳಿಸಿದರು. ಇದನ್ನೂ ಓದಿ: ಮುಸ್ಲಿಂ ಲೀಗ್ ಬಜೆಟ್.. ಜಿನ್ನಾ ಆತ್ಮವೇ ಸಿದ್ದರಾಮಯ್ಯಗೆ ಪ್ರಚೋದನೆ ಕೊಟ್ಟಿರಬಹುದು: ಸಿ.ಟಿ.ರವಿ 

  • ಬೆಡ್‍ನಲ್ಲೇ ಮಲ, ಮೂತ್ರ ವಿಸರ್ಜನೆ – ಆರೋಗ್ಯದ ಬಗ್ಗೆ ನಟಿ ಯಶಿಕಾ ಆನಂದ್ ಅಪ್ಡೇಟ್

    ಬೆಡ್‍ನಲ್ಲೇ ಮಲ, ಮೂತ್ರ ವಿಸರ್ಜನೆ – ಆರೋಗ್ಯದ ಬಗ್ಗೆ ನಟಿ ಯಶಿಕಾ ಆನಂದ್ ಅಪ್ಡೇಟ್

    ಚೆನ್ನೈ: ಇತ್ತೀಚೆಗಷ್ಟೇ ಕಾರು ಅಪಘಾತಕ್ಕೀಡಾಗಿ ಗೆಳತಿಯನ್ನು ಕಳೆದುಕೊಂಡು ಆಸ್ಪತ್ರೆಗೆ ದಾಖಲಾಗಿರುವ ತಮಿಳು ನಟಿ ಯಶಿಕಾ ಆನಂದ್ ತಮ್ಮ ಆರೋಗ್ಯದ ಬಗ್ಗೆ ಅಪ್ಡೇಟ್ ಕೊಟ್ಟಿದ್ದಾರೆ.

    ತಮ್ಮ ಆರೋಗ್ಯದ ಬಗ್ಗೆ ಇನ್ ಸ್ಟಾ ಖಾತೆಯಲ್ಲಿ ಪತ್ರ ಪೋಸ್ಟ್ ಮಾಡಿರುವ ನಟಿ, ನನಗೆ ಎದ್ದು ನಡೆಯಲು ಸಾಧ್ಯವಾಗುತ್ತಿಲ್ಲ. ಇನ್ನೂ ಸುಮಾರು 5 ತಿಂಗಳ ಕಾಲ ವಿಶ್ರಾಂತಿ ಪಡೆದುಕೊಳ್ಳುವ ಅನಿವಾರ್ಯತೆ ಇದೆ. ಮಲಗಿದ್ದಲ್ಲೇ ಮಲ-ಮೂತ್ರ ವಿರ್ಜನೆಯಾಗುತ್ತಿದೆ ಎಂದು ತಿಳಿಸಿದ್ದಾರೆ.

    ಇನ್ ಸ್ಟಾ ಖಾತೆಯಲ್ಲಿ ಏನಿದೆ..?
    ನನ್ನ ಪೆಲ್ವಿಕ್ ಮೂಳೆಯಲ್ಲಿ ಅನೇಕ ಮುರಿತಗಳಾಗಿವೆ. ಹಾಗೆಯೇ ಬಲಗಾಲಿಗೂ ಗಂಭೀರ ಗಾಯಗಳಾಗಿವೆ. ಮುಂದಿನ 5 ತಿಂಗಳ ಕಾಲ ಎದ್ದೇಳಲು ಹಾಗೂ ನಡೆದಾಡಲು ಸಾಧ್ಯವಿಲ್ಲ. ಸದ್ಯ ಮಲಗಿದ್ದಲ್ಲೇ ಇದ್ದು, ಅಲ್ಲಿಯೇ ಮಲ-ಮೂತ್ರ ವಿಸರ್ಜನೆಯಾಗುತ್ತಿದೆ. ಬಲ, ಎಡ ಹೀಗೆ ಯಾವುದೇ ಭಾಗಕ್ಕೂ ತಿರುಗಲೂ ಆಗುತ್ತಿಲ್ಲ. ಹೀಗೆ ಹಲವು ದಿನಗಳಿಂದ ಒಂದೇ ರಿಯಾಗಿ ಮಲಗುತ್ತಿದ್ದೇನೆ. ಬೆನ್ನಿನ ಭಾಗಕ್ಕೂ ಗಂಭೀರ ಗಾಯಗಳಾಗಿವೆ. ನನ್ನ ಮುಖದ ಭಾಗಕ್ಕೆ ಯಾವುದೇ ರೀತಿಯ ಗಾಯಗಳಾಗದಿರುವುದೇ ನನ್ನ ಅದೃಷ್ಟ. ಆದರೆ ಇದು ನನಗೆ ಪುನರ್ಜನ್ಮವಾಗಿದೆ. ಇದನ್ನೂ ಓದಿ: ನಮ್ಮಲ್ಲಿ ಪರ, ವಿರೋಧಿ ಬಣಗಳಿಲ್ಲ, ಸಂಪುಟ ರಚನೆ ವೇಳೆ ಅಸಮಾಧಾನ ಸಹಜ- ನಳಿನ್

    ಘಟನೆಯ ಬಳಿಕ ಮಾನಸಿಕ ಹಾಗೂ ದೈಹಿಕವಾಗಿ ಗಾಯಗೊಂಡಿದ್ದೇನೆ. ದೇವರು ನನಗೆ ಶಿಕ್ಷೆ ನೀಡಿದ್ದಾನೆ. ಆದರೆ ಘಟನೆಯಲ್ಲಿ ನಾನು ಕಳೆದುಕೊಂಡಿರುವ ನೋವಿಗಿಂತ ಇದೇನೂ ದೊಡ್ಡದಲ್ಲ ಎಂದು ಯಶಿಕಾ ಬರೆದುಕೊಂಡಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿರುವ ಐಶಿಕಾ ಅವರಿಗೆ ಸರ್ಜರಿ ಯಶಸ್ವಿಯಾಗಿದ್ದು, ಆಗಸ್ಟ್ 3 ರಂದು ಐಸಿಯುವಿನಿಂದ ಜನರಲ್ ವಾರ್ಡ್‍ಗೆ ಸ್ಥಳಾಂತರ ಮಾಡಲಾಗಿದೆ. ಇದನ್ನೂ ಓದಿ: ದೇವರು, ರೈತರ ಹೆಸರಿನಲ್ಲಿ ಸಚಿವರ ಪ್ರಮಾಣವಚನ – ಗಮನ ಸೆಳೆದ ಅಂಶಗಳು

    ಜುಲೈ 24ರ ನಸುಕಿನ ಜಾವ ಚೆನ್ನೈನ ಈಸ್ಟ್ ಕೋಸ್ಟ್ ರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ ಐಶಿಕಾ ಗಂಭೀರವಾಗಿ ಗಾಯಗೊಂಡರೆ ಅವರ ಆಪ್ತ ಸ್ನೇಹಿತೆ ವೆಲ್ಲಿಚೆಟ್ಟಿ ಭವಾನಿ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಕಾರಿನಲ್ಲಿದ್ದ ಇನ್ನಿಬ್ಬರು ಸ್ನೇಹಿತರು ಸಣ್ಣಪುಟ್ಟ ಗಾಯಗೊಂಡು ಬಚಾವ್ ಆಗಿದ್ದರು.

  • ಮಗುವಿನ ಜೊತೆ ಮಗುವಾದ ನಯನತಾರಾ- ವಿಡಿಯೋ ವೈರಲ್

    ಮಗುವಿನ ಜೊತೆ ಮಗುವಾದ ನಯನತಾರಾ- ವಿಡಿಯೋ ವೈರಲ್

    ಬೆಂಗಳೂರು: 2018ರ ಲೇಡಿ ಸುಪರ್ ಸ್ಟಾರ್ ಖ್ಯಾತಿಯ ಬಹುಭಾಷಾ ನಟಿ ನಯನತಾರಾ ಮಗುವಿನೊಂದಿಗೆ ಮಗುವಾಗಿ ಕಾಲ ಕಳೆದಿದ್ದು ಈ ವಿಡಿಯೋ ಸಖತ್ ವೈರಲ್ ಆಗಿದೆ.

    ಅಜೆರ್ಬೈಜಾನ್ ಎಸ್‍ಕೆ 13 ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದು, ಅಲ್ಲಿಗೆ ಬಂದಿದ್ದ ಪುಟ್ಟ ಬಾಲಕಿಯ ಜೊತೆಗೆ ನಯನತಾರಾ ಮಕ್ಕಳಂತೆ ಕಾಲಕಳೆದಿದ್ದಾರೆ. ಈ ವಿಡಿಯೋವನ್ನು ತಮ್ಮ ಟ್ವೀಟರ್ ಮೂಲಕ ಹಂಚಿಕೊಂಡಿದ್ದು, ಶನಿವಾರ ಸಂಜೆ 7 ಗಂಟೆ ಸುಮಾರಿಗೆ 80 ಸಾವಿರಕ್ಕೂ ಹೆಚ್ಚು ಜನ ನೋಡಿದ್ದಾರೆ. ಈ ವಿಡಿಯೋ 2,435 ರೀ ಟ್ವೀಟ್ ಆಗಿದ್ದು, 20,978 ಜನರು ಲೈಕ್ ಮಾಡಿದ್ದಾರೆ.

    ವಿಡಿಯೋದಲ್ಲಿ ಏನಿದೆ?:
    ಮುದ್ದಾದ ಬಾಲಕಿಯೊಬ್ಬಳು ನಯನತಾರಾ ಪಕ್ಕದಲ್ಲಿ ನಿಂತಿರುತ್ತಾಳೆ. ಬಾಲಕಿಯ ಎತ್ತರಕ್ಕೆ ಸರಿಹೋಗುವಂತೆ ಕುಳಿತ ನಟಿ ನಯನತಾರಾ ಆಕೆಯ ಜೊತೆಗೆ ಆಟವಾಡುತ್ತಾರೆ. ಬಾಲಕಿ ಕೂಡ ಅಷ್ಟೇ ಮುದ್ದು ಮುದ್ದಾಗಿ ಕ್ಯಾಮೆರಾ ಕಣ್ಣಿಗೆ ಪೋಸ್ ಕೊಡುತ್ತಾಳೆ. ಬಳಿಕ ನಗುತ್ತಾ ನಯನತಾರಾ ಕೆನ್ನೆ ಸವರಿ ನಗೆಯನ್ನು ಬೀರುತ್ತಾಳೆ. ಈ ದೃಶ್ಯವನ್ನು ಸ್ಥಳದಲ್ಲಿದ್ದ ಅನೇಕರು ತಮ್ಮ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ತಮಿಳು ನಟಿ ಪ್ರಿಯಾಂಕ ಆತ್ಮಹತ್ಯೆಗೆ ಶರಣು!

    ತಮಿಳು ನಟಿ ಪ್ರಿಯಾಂಕ ಆತ್ಮಹತ್ಯೆಗೆ ಶರಣು!

    ಚೆನ್ನೈ: ತಮಿಳಿನ ಫೇಮಸ್ ನಟಿ ಪ್ರಿಯಾಂಕ ರವರು ಬುಧವಾರ ಅವರ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಬುಧವಾರ ಬೆಳಗ್ಗೆ ಆತ್ಮಹತ್ಯೆಗೆ ಶರಣಾಗಿದ್ದು, ಮನೆಯ ಕೆಲಸದವಳು ಬಾಗಿಲು ಬಡಿದರೂ ತೆಗೆಯುವುದಿಲ್ಲ. ಹಾಗಾಗಿ ಕಿಟಕಿಯಲ್ಲಿ ನೋಡಿದಾಗ ನಟಿ ಪ್ರಿಯಾಂಕರವರ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಕಂಡಿದೆ. ಕೂಡಲೇ ಕೆಲಸದವಳು ನೆರೆಹೊರೆಯವರಿಗೆ ತಿಳಿಸಿದಾಗ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಪ್ರಿಯಾಂಕರವರು ತಮಿಳು ಟಿವಿ ಯಲ್ಲಿ ಪ್ರಸಾರವಾಗುವ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದು, ಸದ್ಯಕ್ಕೆ ‘ವಂಶಂ’ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದರು. ಅದರಲ್ಲಿ ಬಾಹುಬಲಿ ಖ್ಯಾತಿಯ ನಟಿ ರಮ್ಯಾ ಕೃಷ್ಣನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

    ಆತ್ಮಹತ್ಯೆ ಮಾಡಿಕೊಳ್ಳಲು ಸಾಂಸರಿಕ ಕಲಹ ಕಾರಣವೆಂದು ದೂರು ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ. ಅವರು ಆತ್ಮಹತ್ಯೆಗೆ ಶರಣಾದ ವೇಳೆ ಪತಿ ಬಾಲಾ ಸ್ಥಳದಲ್ಲಿ ಇರಲಿಲ್ಲ. ಅವರಿಬ್ಬರಿಗೂ ಮೂರು ವರ್ಷಗಳ ಹಿಂದೆಯೇ ಮದುವೆಯಾಗಿದ್ದು, ಇಬ್ಬರ ನಡುವೆ ಆಗಾಗ ಕಲಹಗಳು ನಡೆಯುತ್ತಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.