Tag: ತಮಿಳು ನಟ

  • ಹೊಸ ಚಿತ್ರ ಘೋಷಿಸಿದ ರವಿ ಮೋಹನ್ – `ಬ್ರೋಕೋಡ್’ ಮೂಲಕ ನಿರ್ಮಾಣ ರಂಗಕ್ಕಿಳಿದ ತಮಿಳು ನಟ

    ಹೊಸ ಚಿತ್ರ ಘೋಷಿಸಿದ ರವಿ ಮೋಹನ್ – `ಬ್ರೋಕೋಡ್’ ಮೂಲಕ ನಿರ್ಮಾಣ ರಂಗಕ್ಕಿಳಿದ ತಮಿಳು ನಟ

    ಮಿಳು ಚಿತ್ರರಂಗದ ಪ್ರತಿಭಾನ್ವಿತ ನಟ ರವಿ ಮೋಹನ್ (Ravi Mohan) ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಬ್ರೋಕೋಡ್ (Bro Code) ಎಂಬ ಚಿತ್ರ ಅನೌನ್ಸ್ ಮಾಡಿರುವ ಅವರೀಗ, ನಿರ್ಮಾಣದ ಜವಾಬ್ದಾರಿ ಕೂಡ ಹೊತ್ತುಕೊಂಡಿದ್ದಾರೆ.

    ಇತ್ತೀಚೆಗಷ್ಟೇ ತಮ್ಮದೇ ನಿರ್ಮಾಣ ಸಂಸ್ಥೆ ಬಗ್ಗೆ ಮಾಹಿತಿ ನೀಡಿದ್ದ ರವಿ ಮೋಹನ್, ಆ ಸಂಸ್ಥೆಯ ಚೊಚ್ಚಲ ಚಿತ್ರ ಯಾವುದು ಎಂಬ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. ರವಿ ಮೋಹನ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಬ್ರೋಕೋಡ್‌ಗೆ ಅವರೇ ನಾಯಕ ನಟನಾಗಿ ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ: ನಾಳೆ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಬಾಹ್ಯಾಕಾಶ ಯಾತ್ರೆ

    ಡಿಕ್ಕಿಲೂನಾ ಮತ್ತು ವಡಕ್ಕುಪಟ್ಟಿ ರಾಮಸಾಮಿ ಚಿತ್ರದ ನಿರ್ದೇಶಕ ಕಾರ್ತಿಕ್ ಯೋಗಿ `ಬ್ರೋಕೋಡ್’ ಸಿನಿಮಾಗೆ ಆಕ್ಷನ್ ಕಟ್ ಹೇಳಲಿದ್ದಾರೆ. ರವಿ ಮೋಹನ್ ಜೊತೆಗೆ ಎಸ್.ಜೆ ಸೂರ್ಯ ಹಾಗೂ ನಾಲ್ವರು ಪ್ರಮುಖ ನಟಿಯರು ಈ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಆ ನಾಲ್ವರು ನಟಿಯರು ಯಾರೆಂದು ಚಿತ್ರತಂಡ ಇನ್ನೂ ರಿವೀಲ್ ಮಾಡಿಲ್ಲ. ಪೊರ್ ತೋಝಿಲ್ ಚಿತ್ರದ ಮೂಲಕ ಹೆಸರುವಾಸಿಯಾದ ಕಲೈಸೆಲ್ವನ್ ಶಿವಾಜಿ ಅವರ ಛಾಯಾಗ್ರಹಣ ಈ ಚಿತ್ರಕ್ಕೆ ಇರಲಿದೆ. ಇದನ್ನೂ ಓದಿ: ಕಮಲ್‌ ಹಾಸನ್‌ಗೆ ಮತ್ತೆ ಶಾಕ್‌ – ತುರ್ತು ವಿಚಾರಣೆ ನಡೆಸಲ್ಲ ಎಂದ ಸುಪ್ರೀಂ ಕೋರ್ಟ್‌

    ಅನಿಮಲ್ ಮತ್ತು ಅರ್ಜುನ್ ರೆಡ್ಡಿಯಂತಹ ಹಿಟ್ ಸಾಂಗ್‌ಗಳ ಸಂಗೀತ ನಿರ್ದೇಶಕ ಹರ್ಷವರ್ಧನ್ ಮ್ಯೂಸಿಕ್, ಪ್ರದೀಪ್ ಇ. ರಾಘವ್ ಸಂಕಲನ, ಎ. ರಾಜೇಶ್ ಕಲಾ ನಿರ್ದೇಶನದಲ್ಲಿ `ಬ್ರೋಕೋಡ್’ ಸಿನಿಮಾ ಮೂಡಿಬರಲಿದೆ. ಇದೊಂದು ಪಕ್ಕ ಫ್ಯಾಮಿಲಿ ಎಂಟರ್‌ಟೈನಿಂಗ್ ಜೊತೆಗೆ ಕಾಮಿಡಿ ಜಾನರ್ ಕಥೆಯನ್ನು ಒಳಗೊಂಡಿದೆ. ಇದನ್ನೂ ಓದಿ: ಸಿದ್ದು ಸಂಪುಟಕ್ಕೆ ನಡೆಯುತ್ತಾ ಮೇಜರ್‌ ಸರ್ಜರಿ? – 10 ಸಚಿವರಿಗೆ ಕೊಕ್‌ ಸಾಧ್ಯತೆ

    `ಬ್ರೋಕೋಡ್’ ಸಿನಿಮಾದ ಕುರಿತು ಮಾತನಾಡಿದ ನಿರ್ದೇಶಕ ಕಾರ್ತಿಕ್ ಯೋಗಿ, ನಾನು ರವಿ ಮೋಹನ್ ಅವರಿಗೆ ಕಥೆಯನ್ನು ಹೇಳಿದಾಗ, ಅವರು ಅದನ್ನು ಸಂಪೂರ್ಣವಾಗಿ ಆನಂದಿಸಿದರು. ಅಲ್ಲದೇ ತಕ್ಷಣವೇ ಅದನ್ನು ನಿರ್ಮಿಸಲು ಮುಂದೆ ಬಂದರು ಎಂದು ಹೇಳಿದ್ದಾರೆ. ಇದನ್ನೂ ಓದಿ: Nelamangala | 2 ಸ್ಕೂಲ್ ಬಸ್‌ಗಳ ನಡುವೆ ಅಪಘಾತ – ಮಕ್ಕಳಿಗೆ ಸಣ್ಣಪುಟ್ಟ ಗಾಯ

    ಈ ಸಿನಿಮಾದ ಚಿತ್ರೀಕರಣವು ಸೆಪ್ಟೆಂಬರ್‌ನಲ್ಲಿ ಪ್ರಾರಂಭವಾಗಲಿದೆ. ಇನ್ನೂ, ರವಿ ಮೋಹನ್ ಅವರು ಸುಧಾ ಕೊಂಗರ ನಿರ್ದೇಶನದ ಪರಾಶಕ್ತಿ ಮತ್ತು ಗಣೇಶ್ ಕೆ.ಬಾಬು ನಿರ್ದೇಶನದ ಕರಾಟೆ ಬಾಬು ಚಿತ್ರಗಳಲ್ಲಿಯೂ ನಟಿಸುತ್ತಿದ್ದಾರೆ. ಇದೀಗ ಅವರು ಮತ್ತೊಂದು ಸಿನಿಮಾ ಘೋಷಣೆ ಮಾಡಿರುವುದು ಅವರ ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ.

  • 400ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಖ್ಯಾತ ನಟ ಡೆಲ್ಲಿ ಗಣೇಶ್ ನಿಧನ

    400ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಖ್ಯಾತ ನಟ ಡೆಲ್ಲಿ ಗಣೇಶ್ ನಿಧನ

    ಚಿತ್ರರಂಗಕ್ಕೆ ಮತ್ತೊಂದು ಶಾಕಿಂಗ್ ನ್ಯೂಸ್ ಸಿಕ್ಕಿದೆ. ಕಾಲಿವುಡ್‌ನ (Kollywood) ಖ್ಯಾತ ನಟ ಡೆಲ್ಲಿ ಗಣೇಶ್ (Delhi Ganesh) ನಿಧನರಾಗಿದ್ದಾರೆ. ದೀರ್ಘಕಾಲದಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಅವರು ನಿನ್ನೆ (ನ.9) ತಮ್ಮ 80ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.

    ತಮಿಳು‌ ನಟ ಗಣೇಶ್ ಅವರ ಸಾವನ್ನು ಪುತ್ರ ಮಹದೇವನ್ ಅಧಿಕೃತವಾಗಿ ಮಾಧ್ಯಮಕ್ಕೆ ತಿಳಿಸಿದ್ದಾರೆ. ನಮ್ಮ ತಂದೆ ದೆಹಲಿ ಗಣೇಶ್ ನವೆಂಬರ್ 9 ರಂದು ರಾತ್ರಿ 11 ಗಂಟೆಗೆ ನಿಧನರಾದರು ಎಂದು ತಿಳಿಸಿದ್ದಾರೆ. ದೆಹಲಿ ಗಣೇಶ್ ಸುಮಾರು 400ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಕಮಲ್ ಹಾಸನ್ ಅವರ ಇಂಡಿಯನ್ 2 ದೆಹಲಿ ಗಣೇಶ್ ಅವರ ಕೊನೆಯ ಚಿತ್ರವಾಗಿತ್ತು. ಇದನ್ನೂ ಓದಿ: ಸೈಕ್ಯಾಡೆಲಿಕ್ ಥ್ರಿಲ್ಲರ್ `ಅಂಶು’ಗೀಗ ಸೆನ್ಸಾರ್ ಸರ್ಟಿಫಿಕೆಟ್ ಸಿಕ್ಕ ಖುಷಿ!

    1976 ರಲ್ಲಿ ಬಾಲಚಂದರ್ ಅವರ ‘ಪತ್ತಿನ ಪ್ರವೇಶಂ’ ಚಿತ್ರದ ಮೂಲಕ ವೃತ್ತಿಜೀವನ ಪ್ರಾರಂಭಿಸಿದರು. ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿ 400ಕ್ಕೂ ಹೆಚ್ಚು ಚಿತ್ರಗಳಲ್ಲಿ ಗಣೇಶ್ ಕೆಲಸ ಮಾಡಿದ್ದರು.

  • `ಮನೆ ಒಳಗೆ ಬಿಟ್ಟುಕೊಳ್ತಿಲ್ಲ ಪತ್ನಿ’..ಪೊಲೀಸರ ಮೊರೆ ಹೋದ ಜಯಂ ರವಿ

    `ಮನೆ ಒಳಗೆ ಬಿಟ್ಟುಕೊಳ್ತಿಲ್ಲ ಪತ್ನಿ’..ಪೊಲೀಸರ ಮೊರೆ ಹೋದ ಜಯಂ ರವಿ

    ತಮಿಳು ನಟ ಜಯಂ ರವಿ (Jayam Ravi) ಪತ್ನಿ ಆರತಿ ಜೊತೆಗಿನ ವಿವಾಹ ವಿಚ್ಛೇದನ (Divorce) ಘೋಷಣೆ ಬೆನ್ನಲ್ಲೇ ಸಂಸಾರ ಗಲಾಟೆ ಬೀದಿಗೆ ಬಂದಿದೆ. ಪತ್ನಿ ಆರತಿ ಜೊತೆ 15 ವರ್ಷಗಳ ದಾಂಪತ್ಯ ಜೀವನ ಅಂತ್ಯಗೊಳಿಸಿದ್ದಾಗಿ ಜಯಂ ರವಿ ಘೋಷಿಸಿದ್ದರು. ಬಳಿಕ ಆರತಿ ಕೂಡ ಸೋಶಿಯಲ್ ಮೀಡಿಯಾದಲ್ಲೇ ಪೋಸ್ಟ್ ಮಾಡಿ ಜಯಂ ರವಿ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದ್ದಾಗಿ ಹೇಳಿ ಪತಿಯ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಜಯಂ ರವಿ ತಮ್ಮ ಪತ್ನಿ ವಿರುದ್ಧವೇ ಪೊಲೀಸರಿಗೆ ದೂರು ದಾಖಲಿಸಿದ್ದಾರೆ.

    ಚೆನೈನಲ್ಲಿ (Chennai) ಪತ್ನಿ ಹಾಗೂ ಇಬ್ಬರು ಮಕ್ಕಳ ಜೊತೆ ವಾಸವಿದ್ದ ಜಯಂರವಿ ಸಂಸಾರ ತಾಪತ್ರಯ ಈಗ ಮುರಾಬಟ್ಟೆಯಾಗಿದೆ. ಕಾರಣ ಪತಿ ವಿಚ್ಛೇದನ ಘೋಷಿಸಿದ ಬಳಿಕ ಪತ್ನಿ ಆರತಿ ಪತಿಯನ್ನ ಮನೆಯೊಳಗೆ ಬಿಟ್ಟುಕೊಳ್ಳುತ್ತಿಲ್ಲವಂತೆ, ಕಾರು, ಬೈಕ್ ಹಾಗೂ ಬಟ್ಟೆಗಳು ಜೊತೆಗೆ ಕೆಲವು ಬೆಲೆ ಬಾಳುವ ವಸ್ತುಗಳು ಮನೆಯಲ್ಲೇ ಇರುವ ಕಾರಣ ಮನೆಯೊಳಗೆ ಬರಲು ಜಯಂ ರವಿ ಯತ್ನಿಸಿದ್ದಾರೆ. ಆದರೆ ಪತಿ ನಿರ್ಧಾರದಿಂದ ಅಸಮಾಧಾನಗೊಂಡಿದ್ದ ಆರತಿ ಪತಿಗೆ ಮನೆಗೆ ಬರಲು ಅನುಮತಿ ನೀಡಲಿಲ್ಲ. ಈ ಕಾರಣಕ್ಕೆ ಜಯಂ ರವಿ ನಿವಾಸವಿರುವ ಜಾಗದ ವ್ಯಾಪ್ತಿಗೆ ಬರುವ ಹತ್ತಿರದ ಪೊಲೀಸ್ ಠಾಣೆಯಲ್ಲಿ ಪತ್ನಿ ವಿರುದ್ಧ ದೂರು ದಾಖಲಿಸಿ ಮನೆಯೊಳಗೆ ಪ್ರವೇಶ ಪಡೆಯಲು ಅನುಮತಿ ಕೋರಿದ್ದಾರೆ. ನಾಲ್ಕು ಗೋಡೆ ಮಧ್ಯೆ ಇದ್ದ ಜಗಳ ಈಗ ಜಗಜ್ಜಾಹೀರಾಗಿದೆ.ಇದನ್ನೂ ಓದಿ: ರಂಗೀಲಾ ಬೆಡಗಿ ಊರ್ಮಿಳಾ ವಿಚ್ಛೇದನ !

    ಓರ್ವ ಸಿಂಗರ್ ಜೊತೆ ಜಯಂ ರವಿ ಹೆಸರು ಥಳುಕು ಹಾಕಿಕೊಂಡಿತ್ತು. ಆಕೆಯೊಂದಿಗೆ ಜಯಂ ರವಿ ಗೋವಾದಲ್ಲಿ ಇದ್ದರಂತೆ. ಈ ವಿಚಾರ ತಿಳಿದು ಪತ್ನಿ ಆರತಿ ಗೋವಾಕ್ಕೆ ತೆರಳಿ ರೆಸಾರ್ಟ್ನಲ್ಲಿ ರಾದ್ಧಾಂತ ಮಾಡಿದ್ದರಂತೆ, ಬಳಿಕ ಪತ್ನಿ ಸುಮ್ಮನಿದ್ದರೆ ಜಯಂ ರವಿ ಅಲ್ಲಿಂದಲೇ ವಿಚ್ಛೇದನ ಘೋಷಿಸಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಕೋಪಗೊಂಡ ಆರತಿ ಪತ್ನಿಯನ್ನ ಮನೆಗೆ ಬಿಟ್ಟುಕೊಳ್ತಿಲ್ಲ. ಹೀಗಾಗಿ ತಮ್ಮ ವಸ್ತುಗಳನ್ನ ಕೊಡಿಸುವಂತೆ ಜಯಂ ರವಿ ಈಗ ಕೋರ್ಟ್ ಮೊರೆಹೋಗಬೇಕಾದ ಸ್ಥಿತಿ ಎದುರಾಗಿದೆ. ಇನ್ನು ಇವರಿಬ್ಬರ ವಿಚ್ಚೇದನ ಗಲಾಟೆ ಅದೆಷ್ಟು ವರ್ಷಗಳು ಮುಂದುವರೆಯುತ್ತದೆಯೋ!

  • ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ ಅಧ್ಯಕ್ಷರಾಗಿ ಮಾಧವನ್‌ ನಾಮನಿರ್ದೇಶನ

    ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ ಅಧ್ಯಕ್ಷರಾಗಿ ಮಾಧವನ್‌ ನಾಮನಿರ್ದೇಶನ

    ಇತ್ತೀಚೆಗಷ್ಟೇ ʻರಾಕೆಟ್ರಿʼ ಚಲನಚಿತ್ರದ ರಾಷ್ಟ್ರಪ್ರಶಸ್ತಿ ಗೆದ್ದಿರುವ ತಮಿಳುನಟ ಆರ್.ಮಾಧವನ್ (R Madhavan) ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ (FTII) ಅಧ್ಯಕ್ಷರಾಗಿ ಮತ್ತು ಆಡಳಿತ ಮಂಡಳಿಯ ಅಧ್ಯಕ್ಷರಾಗಿ ನಾಮನಿರ್ದೇಶನಗೊಂಡಿದ್ದಾರೆ.

    ಕೇಂದ್ರ ಸಚಿವ ಅನುರಾಗ್ ಠಾಕೂರ್ (Anurag Thakur) ಅವರು ಈ ಮಾಹಿತಿಯನ್ನ ಟ್ವಿಟ್ಟರ್‌ (X) ಖಾತೆಯಲ್ಲಿ ಹಂಚಿಕೊಂಡಿದ್ದು, ಮಾಧವನ್‌ ಅವರಿಗೆ ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ. ಇದಕ್ಕೆ‌ ಟ್ವೀಟ್‌ ಮೂಲಕವೇ ಪ್ರತಿಕ್ರಿಯಿಸಿರುವ ಮಾಧವನ್‌, ತಮ್ಮ ಶುಭ ಹಾರೈಕೆಗಳಿಗಾಗಿ ತುಂಬಾ ಧನ್ಯವಾದಗಳು ಅನುರಾಗ್‌ ಠಾಕೂರ್‌ ಜೀ. ಎಲ್ಲಾ ನಿರೀಕ್ಷೆಗಳನ್ನು ಪೂರೈಸಲು ನಾನು ಕೈಲಾದಷ್ಟು ಸೇವೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 69th National Film Award 2023: ಅತ್ಯುತ್ತಮ ಸಿನಿಮಾ, ರಾಕೆಟ್ರಿ ದಿ ನಂಬಿ ಎಫೆಕ್ಟ್

    ಇತ್ತೀಚೆಗಷ್ಟೇ ಆರ್‌. ಮಾಧವನ್‌ ನಟಿಸಿ, ನಿರ್ದೇಶನ ಮಾಡಿದ್ದ ʻರಾಕೆಟ್ರಿ – ದಿ ನಂಬಿ ಎಫೆಕ್ಟ್ʼ (Rocketry The Nambi Effect) ಚಿತ್ರ ಅತ್ಯುತ್ತಮ ಸಿನಿಮಾ ವಿಭಾಗದಲ್ಲಿ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದುಕೊಂಡಿತ್ತು. ಇದನ್ನೂ ಓದಿ: ‘ರಾಕೆಟ್ರಿ’ ಸಿನಿಮಾದಲ್ಲಿ ಇಸ್ರೊಗೆ ಕಳಂಕ ತರುವಂತಹ ಸುಳ್ಳುಗಳನ್ನು ಹೇಳಲಾಗಿದೆ: ಮಾಜಿ ವಿಜ್ಞಾನಿಗಳ ಆರೋಪ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಖ್ಯಾತ ತಮಿಳು ಹಾಸ್ಯ ನಟ ಮಯಿಲ್‌ಸಾಮಿ ಹಠಾತ್ ನಿಧನ

    ಖ್ಯಾತ ತಮಿಳು ಹಾಸ್ಯ ನಟ ಮಯಿಲ್‌ಸಾಮಿ ಹಠಾತ್ ನಿಧನ

    ಚೆನ್ನೈ: ತಮಿಳಿನ (Tamil) ಖ್ಯಾತ ಹಾಸ್ಯ ನಟ (Comedian) ಆರ್ ಮಯಿಲ್‌ಸಾಮಿ (Mayilsamy) (57) ಅವರು ಭಾನುವಾರ ಮುಂಜಾನೆ ಹಠಾತ್ತನೆ ನಿಧನ ಹೊಂದಿದ್ದಾರೆ.

    ವರದಿಗಳ ಪ್ರಕಾರ ಮಯಿಲ್‌ಸಾಮಿ ಅವರಿಗೆ ಶನಿವಾರ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದ್ದು, ಅವರನ್ನು ಕುಟುಂಬಸ್ಥರು ಪೋರೂರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅವರು ಮಾರ್ಗದ ಮಧ್ಯೆಯೇ ಕೊನೆಯುಸಿರೆಳೆದಿದ್ದು, ಬಳಿಕ ಆಸ್ಪತ್ರೆಯಲ್ಲಿ ಅವರು ನಿಧನರಾಗಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಇದನ್ನೂ ಓದಿ: ನಟ ನಂದಮೂರಿ ತಾರಕ ರತ್ನ ಇನ್ನಿಲ್ಲ

    ಮಯಿಲ್‌ಸಾಮಿ ಅವರು ಹಲವಾರು ತಮಿಳು ಚಲನಚಿತ್ರಗಳಲ್ಲಿ ಹಾಸ್ಯ ಮತ್ತು ಅನೇಕ ಪಾತ್ರಗಳಲ್ಲಿ ನಟಿಸಿದ್ದಾರೆ. ಅವರು ಸ್ಟ್ಯಾಂಡ್ ಅಪ್ ಹಾಸ್ಯನಟ, ನಿರೂಪಕ, ರಂಗಭೂಮಿ ಕಲಾವಿದರಾಗಿಯೂ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು.

    ಹಾಸ್ಯ ಕಾರ್ಯಕ್ರಮವೊಂದರ ನಿರೂಪಕ ಹಾಗೂ ತೀರ್ಪುಗಾರರಾಗಿ ಮೊದಲ ಬಾರಿಗೆ ಅವರು ದೂರದರ್ಶನಗಳಲ್ಲಿ ಕಾಣಿಸಿಕೊಂಡಿದ್ದರು. ಬಳಿಕ 1984ಲ್ಲಿ ಬಿಡುಗಡೆಯಾದ ನಿರ್ಮಾಪಕ ಹಾಗೂ ನಟ ಕೆ ಭಾಗ್ಯರಾಜ್ ಅವರ ಚಿತ್ರ ಧವನಿ ಕನವುಗಲ್ ಮೂಲಕ ಹಾಸ್ಯ ನಟರಾಗಿ ತಮಿಳು ಚಲನಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಇದನ್ನೂ ಓದಿ: ಅಂಗಾಂಗ ದಾನ ಮಾಡಿದ ಅಭಿಮಾನಿ ಕುಟುಂಬಕ್ಕೆ ಧ್ರುವ ಸರ್ಜಾ ನೆರವು

    ಇದೀಗ ಮಯಿಲ್‌ಸಾಮಿ ಹಠಾತ್ ನಿಧನಕ್ಕೆ ತಮಿಳು ಚಿತ್ರರಂಗ ಸೇರಿದಂತೆ ಅನೇಕರು ಆಘಾತ ವ್ಯಕ್ತಪಡಿಸಿದ್ದಾರೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಾನು ಯಾವಾಗಲೂ ಶಕ್ತಿಧಾಮದ ಸ್ವಯಂ ಸೇವಕ: ವಿಶಾಲ್‌

    ನಾನು ಯಾವಾಗಲೂ ಶಕ್ತಿಧಾಮದ ಸ್ವಯಂ ಸೇವಕ: ವಿಶಾಲ್‌

    ಮೈಸೂರು: ನಾನು ಯಾವಾಗಲೂ ಶಕ್ತಿಧಾಮದ ಸ್ವಯಂ ಸೇವಕನಾಗಿರುತ್ತೇನೆ. ಅದಕ್ಕೆ ರಾಜ್ ಕುಟುಂಬದವರು ಅನುಮತಿ ನೀಡಿ ತಮಿಳು ನಟ(Actor) ವಿಶಾಲ್‌(Vishal) ಮನವಿ ಮಾಡಿದರು.

    ಶಕ್ತಿಧಾಮ(Shaktidhama) ಭೇಟಿ ಬಳಿಕ ಮಾತನಾಡಿದ ಅವರು, ಶಕ್ತಿಧಾಮ ನನಗೆ ದೇವಸ್ಥಾನದ ಅನುಭವ ನೀಡಿತ್ತು. ದೇವಸ್ಥಾನಕ್ಕೆ ಹೋದರೆ ಒಂದು ದೇವರ ದರ್ಶನ ಪಡೆಯಬಹುದು. ಇಲ್ಲಿ ಒಂದೊಂದು ಮಕ್ಕಳಲ್ಲೂ ಒಂದೊಂದು ದೇವರನ್ನು ನೋಡಿದೆ. ಮಕ್ಕಳು ತುಂಬಾ ಲವ ಲವಿಕೆಯಿಂದ ಇದ್ದಾರೆ ಎಂದು ಸಂತೋಷ ವ್ಯಕ್ತಪಡಿಸಿದರು.

    ಪುನೀತ್ ರಾಜ್ ಕುಮಾರ್ ಹಾಗೂ ಗೀತಮ್ಮ ಅವರದ್ದು ಅತ್ಯುತ್ತಮವಾದ ಕೆಲಸವಾಗಿದೆ. ಈ ಬಗ್ಗೆ ಶಿವಕುಮಾರ್ ಜೊತೆ ಮಾತನಾಡಿದ್ದೇನೆ. ರಾಜ್ ಕುಟುಂಬದ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ. ಮಕ್ಕಳ ಜೊತೆ ನಾನು ಮಾತನಾಡಿದೆ. ಮಕ್ಕಳು ಡ್ಯಾನ್ಸ್ ಮಾಡಿದರು, ಆಟವಾಡಿದ್ರು ತುಂಬಾ ಉತ್ಸಾಹದಿಂದ ಇದ್ದಾರೆ. ಇಲ್ಲಿರುವ ಮಕ್ಕಳಿಗೆ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಈ ಹಿಂದೆ ಪುನೀತ್‌ ರಾಜ್‌ಕುಮಾರ್‌ ಅವರ ಅಕಾಲಿಕ ನಿಧನದ ಸಂದರ್ಭದಲ್ಲಿ ಮಾತನಾಡಿದ್ದ ವಿಶಾಲ್‌, ಪುನೀತ್ ರಾಜ್​​ಕುಮಾರ್(Puneet Rajkumar) ಓದಿಸುತ್ತಿದ್ದ ಮಕ್ಕಳ ವಿದ್ಯಾಭ್ಯಾಸದ ಹೊಣೆ ಹೊರುವೆ. 1800 ಮಕ್ಕಳ ಜವಾಬ್ದಾರಿ ನನ್ನದು ಎಂದು ಘೋಷಣೆ ಮಾಡಿದ್ದರು. ಇದನ್ನೂ ಓದಿ: ಕಾರು ಆಕ್ಸಿಡೆಂಟ್ ಮೂಲಕ ಅನಿರುದ್ಧಗೆ ಗುಡ್ ಬೈ ಹೇಳಿದ ಜೊತೆ ಜೊತೆಯಲಿ ಟೀಮ್

    Live Tv
    [brid partner=56869869 player=32851 video=960834 autoplay=true]

  • ಇಸ್ಲಾಂಗೆ ಮತಾಂತರ ಆದ್ರಾ ಸ್ಟಾರ್ ನಟ ವಿಶಾಲ್: ಏನಿದು ಇನ್ಶ್ಯಾ ಅಲ್ಲಾಹ್?

    ಇಸ್ಲಾಂಗೆ ಮತಾಂತರ ಆದ್ರಾ ಸ್ಟಾರ್ ನಟ ವಿಶಾಲ್: ಏನಿದು ಇನ್ಶ್ಯಾ ಅಲ್ಲಾಹ್?

    ಮಿಳಿನ ಖ್ಯಾತ ನಟ ವಿಶಾಲ್ ದೇವರ ಬಗ್ಗೆ ಅಪಾರ ನಂಬಿಕೆವುಳ್ಳವರು. ಅವರು ಯಾವ ಜಾತಿಯರು ಎಂದು ಈವರೆಗೂ ಅಭಿಮಾನಿಗಳು ಕೇಳದೇ ಆರಾಧಿಸುತ್ತಾ ಬಂದಿದ್ದಾರೆ. ಸದ್ಯ ವಿಶಾಲ್ ಮಾಡಿರುವ ಒಂದು ಟ್ವಿಟ್ ನಿಂದಾಗಿ ವಿಶಾಲ್ ಯಾವ ಧರ್ಮದವರು ಎಂದು ಹುಡುಕುತ್ತಿದ್ದಾರೆ ನೆಟ್ಟಿಗರು. ಇದನ್ನೂ ಓದಿ : ತಾಳಿಕಟ್ಟಿ ಹೆಂಡತಿಯನ್ನು ಎತ್ತಿಕೊಂಡ ರಣಬೀರ್ ಕಪೂರ್

    ವಿಶಾಲ್ ಅವರ ಸಹೋದರಿ ಐಶು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಖುಷಿಯನ್ನು ಅಭಿಮಾನಿಗಳ ಜತೆ ಹಂಚಿಕೊಂಡಿರುವ ಅವರು, ‘ನಾನು ಮತ್ತೆ ಅಂಕಲ್ ಆಗಿರುವೆ. ಮತ್ತೊಮ್ಮೆ ಅಂಕಲ್ ಆಗಿರುವುದು ಸಂಭ್ರಮ ತಂದಿದೆ. ನನ್ನ ಸಹೋದರಿ ಐಶು ಅವರು ರಾಜಕುಮಾರಿಗೆ ಜನ್ಮ ನೀಡಿದ್ದಾರೆ. ಮಗುವಿಗೆ ಮತ್ತು ಸಹೋದರಿಗೂ ಶುಭ ಹಾರೈಸಿ. ಇಬ್ಬರಿಗೂ ಇನ್ಶ್ಯಾ ಅಲ್ಲಾಹ್ ನ ಆಶೀರ್ವಾದವಿರಲಿ’ ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ. ‘ಇನ್ಶ್ಯಾ ಅಲ್ಲಾಹ್’ ಎಂಬ ಪದವೇ ಇದೀಗ ಚರ್ಚೆಗೆ ಕಾರಣವಾಗಿದೆ. ಇದನ್ನೂ ಓದಿ: ‘BOSS’ ಪಟ್ಟ ಅಲಂಕರಿಸಿದ ಯಶ್ : ಟ್ವಿಟರ್ ಟ್ರೆಂಡಿಂಗ್ ನಲ್ಲಿ #YASHBOSS

    ಅಲ್ಲಾಹ್ ದೇವರ ಆಶೀರ್ವಾದ ಕೋರಿರುವ ವಿಶಾಲ್ ಹಾಗಾದರೆ, ಇಸ್ಲಾಂಗೆ ಮತಾಂತರ ಆಗಿದ್ದಾರಾ ಎಂದು ನೆಟ್ಟಿಗರು ಹಲವು ರೀತಿಯಲ್ಲಿ ಪ್ರಶ್ನೆ ಮಾಡಿದ್ದಾರೆ. ಅಷ್ಟಕ್ಕೂ ಇಂಥದ್ದೊಂದು ಪದವನ್ನು ಅವರು ಹಾಕಿರುವುದಾದರೂ ಏತಕ್ಕೆ ಎನ್ನುವ ಚರ್ಚೆ ಕೂಡ ತಮಿಳು ನಾಡಿನಲ್ಲಿ ನಡೆದಿದೆ. ಅದಕ್ಕೆ ವಿಶಾಲ್ ಯಾವುದೇ ರೀತಿಯಲ್ಲಿ ಪ್ರತಿಕ್ರಿಯೆ ಕೊಡಲು ಹೋಗಿಲ್ಲ.

    ಸಮಾಜಮುಖಿ ಕಾರ್ಯಗಳಿಂದಾಗಿ ವಿಶಾಲ್ ಎಲ್ಲರ ಪ್ರೀತಿಯ ನಟರಾಗಿ ಉಳಿದುಕೊಂಡಿದ್ದಾರೆ. ಕನ್ನಡದ ಹೆಮ್ಮೆಯ ನಟ ಪುನೀತ್ ರಾಜ್ ಕುಮಾರ್ ನಿಧನರಾದಾಗ, ಅಪ್ಪು ನೋಡಿಕೊಳ್ಳುತ್ತಿದ್ದ ಅಷ್ಟೂ ಮಕ್ಕಳನ್ನು ದತ್ತು ಪಡೆದುಕೊಂಡು ಓದಿಸುತ್ತೇನೆ ಎಂದು ಹೇಳಿದ್ದರು. ಈ ನಡೆ ಭಾರೀ ಮೆಚ್ಚುಗೆಗೆ ಪಾತ್ರವಾಗಿತ್ತು. ಅಲ್ಲದೇ, ಪುನೀತ್ ಅವರ ಹೆಸರಿನಲ್ಲಿ ಅವರು ಗಿಡಗಳನ್ನು ನೆಟ್ಟು, ಪುನೀತ್ ಅಭಿಮಾನಿಗಳು ಪ್ರೀತಿಗೂ ವಿಶಾಲ್ ಪಾತ್ರರಾಗಿದ್ದರು. ಇದನ್ನೂ ಓದಿ:ಬೀಸ್ಟ್ ಸಿನಿಮಾಕ್ಕೆ ಸೆಡ್ಡು ಹೊಡೆದ ಕೆಜಿಎಫ್-2 – ಕೇರಳ, ತಮಿಳುನಾಡಿನಲ್ಲೂ ರಾಕಿಭಾಯ್ ಹವಾ

    ಸದ್ಯ ವಿಶಾಲ್ ಅವರು ಲಾಠಿ ಎಂಬ ಹೆಸರಿನಲ್ಲಿ ಸಿನಿಮಾ ಮಾಡಿದ್ದಾರೆ. ಇದೊಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಸುನೈನಾ ಅವರು ವಿಶಾಲ್ ಗೆ ನಾಯಕಿಯಾಗಿ ನಟಿಸಿದ್ದಾರೆ. ರಮಣ ಮತ್ತು ನಂದು ಈ ಸಿನಿಮಾವನ್ನು ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ.

  • ತಮಿಳು ನಟ ವಿಜಯಕಾಂತ್ ಆರೋಗ್ಯದಲ್ಲಿ ಏರುಪೇರು – ಆಸ್ಪತ್ರೆಗೆ ದಾಖಲು

    ತಮಿಳು ನಟ ವಿಜಯಕಾಂತ್ ಆರೋಗ್ಯದಲ್ಲಿ ಏರುಪೇರು – ಆಸ್ಪತ್ರೆಗೆ ದಾಖಲು

    ಚೆನ್ನೈ: ದೇಸಿಯ ಮುರಪೊಕ್ಕು ದ್ರಾವಿಡ ಕಳಗಂ(ಡಿಎಂಡಿಕೆ) ಸಂಸ್ಥಾಪಕ ಹಾಗೂ ನಟ ವಿಜಯಕಾಂತ್ ಉಸಿರಾಟದ ಸಮಸ್ಯೆಯಿಂದ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಬುಧವಾರ ಮೇ 19 ವಿಜಯಕಾಂತ್‍ರವರಿಗೆ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿದ್ದು, ಬೆಳಗ್ಗಿನ ಜಾವ ಸುಮಾರು 3 ಗಂಟೆ ಸುಮಾರಿಗೆ ಚೆನ್ನೈನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ. ಕಳೆದ ವರ್ಷವು ಅವರು ಹಲವು ಆರೋಗ್ಯ ಸಮಸ್ಯೆಗಳಿಂದ ಹೊಂದಿದ್ದರು.

    ವೈದ್ಯರ ತಂಡ ಇದೀ ವಿಜಯಕಾಂತ್‍ರವರ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸುತ್ತಿದ್ದಾರೆ. ಅವರ ಪಕ್ಷದ ಸದಸ್ಯರು ವಿಜಯಕಾಂತ್‍ರವರು ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಒಂದೆರಡು ದಿನಗಳಲ್ಲಿ ಡಿಸ್ಚಾರ್ಜ್ ಆಗುವ ನಿರೀಕ್ಷೆಯಿದೆ. ಆಸ್ಪತ್ರೆಯವರಿಂದ ಹೆಚ್ಚಿನ ಮಾಹಿತಿಗಾಗಿ ಕಾಯುತ್ತಿದ್ದೇವೆ ಎಂದು ತಿಳಿಸಿದ್ದಾರೆ.

    2020ರಲ್ಲಿ ವಿಜಯಕಾಂತ್‍ರವರು ಕೋವಿಡ್ ಸೋಂಕಿನಿಂದ ಬಳಲಿದ್ದರು. ಚೆನ್ನೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು ಹಾಗೂ ಚಿಕಿತ್ಸೆ ಪಡೆದ ಕೆಲವು ದಿನಗಳ ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು.

  • ಸೂಪರ್ ಸ್ಟಾರ್ ರಜನೀಕಾಂತ್ ಜೊತೆ ನಟಿಸಿದ್ದ ನಿತೀಶ್ ವೀರಾ ಕೊರೊನಾಗೆ ಬಲಿ

    ಸೂಪರ್ ಸ್ಟಾರ್ ರಜನೀಕಾಂತ್ ಜೊತೆ ನಟಿಸಿದ್ದ ನಿತೀಶ್ ವೀರಾ ಕೊರೊನಾಗೆ ಬಲಿ

    ಚೆನ್ನೈ: ಅಸುರನ್ ಖ್ಯಾತಿಯ ತಮಿಳು ನಟ ನಿತೀಶ್ ವೀರಾ ಕೊರೊನಾ ವೈರಸ್ ಸೋಂಕಿಗೆ ಬಲಿಯಾಗಿದ್ದಾರೆ.

    ನಿತೀಶ್ ವೀರಾ(45) ನಿಧನರಾಗಿದ್ದಾರೆ. ನಟ ನಿತೀಶ್ ವೀರಾಗೆ ಕೆಲವೇ ದಿನಗಳ ಹಿಂದೆಯಷ್ಟೇ ಕೋವಿಡ್-19 ಪಾಸಿಟಿವ್ ದೃಢಪಟ್ಟಿತ್ತು. ಚೆನ್ನೈ ಆಸ್ಪತ್ರೆಯಲ್ಲಿ ದಾಖಲಾಗಿ ನಿತೀಶ್ ವೀರಾ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ನಿತೀಶ್ ವೀರಾ ಸಾವನ್ನಪ್ಪಿದ್ದಾರೆ.

    ಕಳೆದ 20 ವರ್ಷಗಳಿಂದ ಕಾಲಿವುಡ್‍ನಲ್ಲಿ ನಟ ನಿತೀಶ್ ವೀರಾ ಸಕ್ರಿಯರಾಗಿದ್ದಾರೆ. ವಲ್ಲರಸು, ಪುದುಪೇಟೈ, ಪೇರರಸು, ನೇಟ್ರು ಇಂಡ್ರು ಮುಂತಾದ ಚಿತ್ರಗಳಲ್ಲಿ ಸಣ್ಣ-ಪುಟ್ಟ ಪಾತ್ರಗಳನ್ನು ನಟ ನಿತೀಶ್ ವೀರಾ ನಿಭಾಯಿಸಿದ್ದರು.

    ನಿತೀಶ್ ವೀರಾಗೆ ಹೆಸರು ತಂದುಕೊಟ್ಟಿದ್ದು ಕಾಲಾ ಚಿತ್ರ. ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕಾಲಾ ಚಿತ್ರದಲ್ಲಿ ಕಾತಿರಾವಣ್ ಪಾತ್ರದಿಂದ ನಿತೀಶ್ ವೀರಾ ಕಾಲಿವುಡ್‍ನಲ್ಲಿ ಗುರುತಿಸಿಕೊಂಡರು. ಬಳಿಕ ಅಸುರನ್ ಚಿತ್ರದಲ್ಲೂ ಪಾಂಡಿಯನ್ ಆಗಿ ಅಭಿನಯಿಸಿದ ನಿತೀಶ್ ವೀರಾ ಜನರ ಮನ ಗೆದ್ದಿದ್ದರು.

    ನಿತೀಶ್ ವೀರಾ ನಿಧನಕ್ಕೆ ಕಾಲಿವುಡ್ ಕಂಬನಿ ಮಿಡಿದಿದೆ. ತಮಿಳು ನಟ ವಿಷ್ಣು ವಿಶಾಲ್, ನಟಿ ಸಾಕ್ಷಿ ಅಗರ್‍ವಾಲ್ ಮುಂತಾದವರು ನಿತೀಶ್ ವೀರಾ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ

  • ಶಿವಮೊಗ್ಗ ಜೈಲಿನಿಂದ ಕೈಬೀಸಿದ ನಟ ವಿಜಯ್

    ಶಿವಮೊಗ್ಗ ಜೈಲಿನಿಂದ ಕೈಬೀಸಿದ ನಟ ವಿಜಯ್

    ಶಿವಮೊಗ್ಗ: ತಮಿಳಿನ ಖ್ಯಾತ ನಟ ಇಳಯ ದಳಪತಿ ವಿಜಯ್ ಕಳೆದ ಒಂದು ವಾರದಿಂದ ಸಿನಿಮಾ ಚಿತ್ರೀಕರಣಕ್ಕಾಗಿ ಶಿವಮೊಗ್ಗ ಜೈಲಿನಲ್ಲಿದ್ದಾರೆ. ಶಿವಮೊಗ್ಗದ ಹಳೆ ಜೈಲಿನಲ್ಲಿ ದಳಪತಿ 64 ಚಿತ್ರ ಲೋಕೇಶ್ ಕನಗರಾಜ್ ನಿರ್ದೇಶನದಲ್ಲಿ ಮೂಡಿ ಬರುತ್ತಿದ್ದು, ಸಿನಿಮಾ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಇಡೀ ಚಿತ್ರತಂಡ ಶಿವಮೊಗ್ಗ ಜೈಲಿನಲ್ಲಿ ಬೀಡುಬಿಟ್ಟಿದೆ.

    ಕಳೆದ ಒಂದು ವಾರದಿಂದ ಶಿವಮೊಗ್ಗ ಜೈಲಿನಲ್ಲಿ ಇರುವ ವಿಜಯ್ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಶಿವಮೊಗ್ಗದ ಜೈಲು ಆವರಣದಲ್ಲಿ ಚಿತ್ರೀಕರಣ ನಡೆಯುತ್ತಿದ್ದರೆ, ಇತ್ತ ಗೇಟ್ ಮುಂದೆ ಅಭಿಮಾನಿಗಳು ವಿಜಯ್ ನೋಡಲೆಂದು ಕಾಯುತ್ತ ನಿಂತಿರುತ್ತಾರೆ. ನಟ ವಿಜಯ್ ತಂಗಿರುವ ಹೋಟೆಲ್ ಮುಂಭಾಗದಲ್ಲಿ ಅಭಿಮಾನಿಗಳು ಜಮಾಯಿಸುತ್ತಿದ್ದಾರೆ. ಚಿತ್ರೀಕರಣ ಮುಗಿಸಿ ವಿಜಯ್ ತಂಗಿರುವ ಹೋಟೆಲ್‍ಗೆ ಹೋಗುವಾಗ ಮತ್ತು ಚಿತ್ರೀಕರಣಕ್ಕೆಂದು ಜೈಲಿಗೆ ಆಗಮಿಸುವಾಗ ಅಭಿಮಾನಿಗಳು ಅವರ ಕಾರನ್ನು ಸುತ್ತುವರಿದು, ವಿಜಯ್ ಪರ ಜೈಕಾರ ಕೂಗುತ್ತಿದ್ದಾರೆ.

    ಕಳೆದ ಒಂದು ವಾರದಿಂದ ವಿಜಯ್ ನೋಡಲು ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ದಳಪತಿ ಕೊನೆಗೂ ದರ್ಶನ ನೀಡಿದ್ದಾರೆ. ವಿಜಯ್ ನೋಡಲೆಂದು ಬಂದಿದ್ದ ಅಭಿಮಾನಿಗಳು ಹೋಟೆಲ್ ಮುಂಭಾಗ ನೆರೆದಿದ್ದರು. ಹೋಟೆಲ್‍ಗೆ ಆಗಮಿಸುವಾಗ ಕಾರಿನಿಂದ ಇಳಿದು ಹೊರ ಬಂದ ವಿಜಯ್ ಅಭಿಮಾನಿಗಳತ್ತ ಕೈ ಬೀಸಿ ದರ್ಶನ ನೀಡುವ ಮೂಲಕ ಸಂತೋಷಪಡಿಸಿದ್ದಾರೆ. ಒಂದು ತಿಂಗಳ ಕಾಲ ದಳಪತಿ ’64’ ಸಿನಿಮಾ ಶಿವಮೊಗ್ಗದಲ್ಲಿ ಚಿತ್ರೀಕರಣ ನಡೆಯಲಿದೆ.