Tag: ತಮಿಳು ಧಾರಾವಾಹಿ

  • ತಮಿಳು ಕಿರುತೆರೆಯತ್ತ `ಪಾರು’ ಖ್ಯಾತಿಯ ಮೋಕ್ಷಿತಾ ಪೈ

    ತಮಿಳು ಕಿರುತೆರೆಯತ್ತ `ಪಾರು’ ಖ್ಯಾತಿಯ ಮೋಕ್ಷಿತಾ ಪೈ

    ನ್ನಡ ಕಿರುತೆರೆಯ ಬ್ಯೂಟಿ ಪಾರು ಮೋಕ್ಷಿತಾ ಪೈ ತಮ್ಮ ವೃತ್ತಿ ಬದುಕಿನಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ. ಇದೀಗ `ಪಾರು’ ಸೀರಿಯಲ್ ನಾಯಕಿ ಮೋಕ್ಷಿತಾ ಪೈ ತಮಿಳು ಕಿರುತೆರೆಯತ್ತ ಮುಖ ಮಾಡಿದ್ದಾರೆ.ನಟಿಯಾಗಬೇಕು ಎಂಬ ಕನಸು ಕಾಣದ ಮಧ್ಯಮ ವರ್ಗದ ಹುಡುಗಿ ಮೋಕ್ಷಿತಾ ಪೈ, ತಮಗೆ ಸಿಕ್ಕ `ಪಾರು’ ಧಾರಾವಾಹಿ ಅವಕಾಶವನ್ನ ಸರಿಯಾಗಿ ಸದುಪಯೋಗಪಡಿಸಿಕೊಂಡು ಕನ್ನಡಿಗರ ಮನದಲ್ಲಿ ಗಟ್ಟಿ ಸ್ಥಾನ ಗಿಟ್ಟಿಸಿಕೊಂಡರು. ಅಂದಿನಿಂದ ಇಂದಿನವರೆಗೂ ಟಿವಿ ಪರದೆಯಲ್ಲಿ ತಮ್ಮ ಅಭಿಮಾನಿಗಳಿಗೆ ಮೋಡಿ ಮಾಡುತ್ತಲೇ ಬಂದಿದ್ದಾರೆ. ಇದೀಗ ತಮ್ಮ ವೃತ್ತಿ ಜೀವನದಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ. ತಮಿಳು ಕಿರುತೆರೆಯಲ್ಲಿ ಮಿಂಚಲು ಪಾರು ರೆಡಿಯಾಗಿದ್ದಾರೆ.

    `ಮೀನಾಕ್ಷಿ ಪೊಣ್ಣು’ ಧಾರಾವಾಹಿಯಲ್ಲಿ ಮೋಕ್ಷಿತಾ ಪೈ ಅವರಿಗೆ ಪ್ರಮುಖ ಪಾತ್ರ ಲಭಿಸಿದೆ. ಸೀರಿಯಲ್‌ನಲ್ಲಿ ರೆಬೆಲ್ ಹುಡುಗಿಯ ಪಾತ್ರದಲ್ಲಿ ಮೋಕ್ಷಿತಾ ಪೈ ಕಾಣಿಸಿಕೊಳ್ಳಲಿದ್ದಾರೆ. ಮೀನಾಕ್ಷಿಯ ಎರಡನೇ ಪುತ್ರಿಯಾಗಿ ಶಕ್ತಿ ಪಾತ್ರದಲ್ಲಿ ಮೋಕ್ಷಿತಾ ಪೈ ಅಭಿನಯಿಸಲಿದ್ದಾರೆ. ಸದ್ಯದಲ್ಲಿಯೇ ತಮಿಳಿನ ಖಾಸಗಿ ವಾಹಿನಿಯಲ್ಲಿ `ಮೀನಾಕ್ಷಿ ಪೊಣ್ಣು’ ಧಾರಾವಾಹಿ ಪ್ರಸಾರವಾಗಲಿದೆ. ಈ ಧಾರಾವಾಹಿಯ ಮತ್ತೊಂದು ಪ್ಲಸ್ ಪಾಯಿಂಟ್ ಅಂದ್ರೆ ಕನ್ನಡ ಮತ್ತು ತಮಿಳಿನಲ್ಲಿ ಈಗಾಗಲೇ ಗಮನ ಸೆಳೆದಿರುವ ಹಿರಿಯ ನಟಿ ಅರ್ಚನಾ ಮೋಕ್ಷಿತಾ ಅವರ ತಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ:ಇಸ್ಮಾರ್ಟ್ ಜೋಡಿಗೆ ಜೊತೆಯಾಗಲಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್

    ಕನ್ನಡದ `ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯ ರೀಮೇಕ್ ಈ `ಮೀನಾಕ್ಷಿ ಪೊಣ್ಣು’ ಧಾರಾವಾಹಿಯಾಗಿದೆ. ಮುಗ್ಧ ಹುಡುಗಿ ಪಾರು ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಮೋಕ್ಷಿತಾ ತಮಿಳಿನಲ್ಲಿ ಸಖತ್ ರಗಡ್ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸೀರಿಯಲ್ ಕಥೆ ಕೇಳಿದ ಕೂಡಲೇ ಈ ಪ್ರಾಜೆಕ್ಟ್ ತಾನು ಮಾಡಲೇಬೇಕು ಎಂದು ಖುಷಿಯಿಂದ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

    ಇನ್ನು ಮುಗ್ಧ ಪಾರುಗೂ ರಗಡ್ ಶಕ್ತಿ ಪಾತ್ರಕ್ಕೂ ಸಿಕ್ಕಾಪಟ್ಟೆ ವ್ಯತ್ಯಾಸವಿದ್ದು, ನೆಚ್ಚಿನ ನಟಿ ಪಾರು ಅವರ ಹೊಸ ಅವತಾರ ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ. ಸೀರಿಯಲ್ ಜತೆ ಸಾಕಷ್ಟು ಸಿನಿಮಾಗಳು ನಟಿಯ ಕೈಯಲ್ಲಿದೆ. ಇನ್ನು ತಮಿಳು ಕಿರುತೆರೆಯಲ್ಲಿ ಮೋಕ್ಷಿತಾ ಹೇಗೆಲ್ಲಾ ಕಮಾಲ್ ಮಾಡಬಹುದು ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]