Tag: ತಮಿಳುನಾಡಿ

  • ತಮಿಳುನಾಡಿಗೆ ನೀರು ಬಿಡುಗಡೆ ಭಾರೀ ಪ್ರಮಾಣದಲ್ಲಿ ಹೆಚ್ಚಳ

    ತಮಿಳುನಾಡಿಗೆ ನೀರು ಬಿಡುಗಡೆ ಭಾರೀ ಪ್ರಮಾಣದಲ್ಲಿ ಹೆಚ್ಚಳ

    ಮಂಡ್ಯ: ತಮಿಳುನಾಡಿಗೆ (Tamil Nadu) ನೀರು ಬಿಡುಗಡೆ ಪ್ರಮಾಣದಲ್ಲಿ ಭಾರೀ ಹೆಚ್ಚಳ ಮಾಡಲಾಗಿದೆ. ದಿನದಿಂದ ದಿನಕ್ಕೆ ತಮಿಳುನಾಡಿಗೆ ನೀರು ಬಿಡುಗಡೆ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.

    ಸೋಮವಾರ ಕೆಆರ್‌ಎಸ್ ಡ್ಯಾಂನಿಂದ (KRS Dam) ತಮಿಳುನಾಡಿಗೆ 4,105 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ನಿನ್ನೆ (ಭಾನುವಾರ) 3,838 ಕ್ಯೂಸೆಕ್ ಹಾಗೂ ಮೊನ್ನೆ (ಶನಿವಾರ) 2,973 ಕ್ಯೂಸೆಕ್ ನೀರು ಹರಿಸಲಾಗಿತ್ತು. ಇಂದು ಏಕಾಏಕಿ 4,105 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ನಾಲೆ ಹಾಗೂ ತಮಿಳುನಾಡಿಗೆ ಸೇರಿ ಕೆಆರ್‌ಎಸ್ ಡ್ಯಾಂನಿಂದ 6,716 ಕ್ಯೂಸೆಕ್ ಹೊರ ಹರಿವು ಇದೆ.

    ಅತ್ತ ಕಬಿನಿ ಜಲಾಶಯದಿಂದಲೂ ತಮಿಳುನಾಡಿಗೆ ನೀರನ್ನು ಹರಿಸಲಾಗುತ್ತಿದೆ. ಕಬಿನಿಯಿಂದ 2,500 ಕ್ಯೂಸೆಕ್ ನೀರು ತಮಿಳುನಾಡಿಗೆ ಹೋದರೆ, ಕೆಆರ್‌ಎಸ್ ಹಾಗೂ ಹಾಗೂ ಕಬಿನಿಯಿಂದ ನದಿ ಮೂಲಕ ತಮಿಳುನಾಡಿಗೆ 6,605 ನೀರು ಬಿಡುಗಡೆಯಾಗುತ್ತಿದೆ. ಇದನ್ನೂ ಓದಿ: ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯಾದ್ಯಂತ ಏಕಕಾಲಕ್ಕೆ ಜನತಾ ದರ್ಶನ

    ಕೆಆರ್‌ಎಸ್ ಅಣೆಕಟ್ಟು ನೀರಿನ ಮಟ್ಟ:
    ಗರಿಷ್ಟ ಮಟ್ಟ : 124.80 ಅಡಿಗಳು
    ಇಂದಿನ ಮಟ್ಟ : 96.70 ಅಡಿಗಳು
    ಗರಿಷ್ಠ ಸಂಗ್ರಹ : 49.452 ಟಿಎಂಸಿ
    ಇಂದಿನ ಸಂಗ್ರಹ : 20.334 ಟಿಎಂಸಿ
    ಒಳಹರಿವು : 5,993 ಕ್ಯೂಸೆಕ್
    ಹೊರಹರಿವು : 6,716 ಕ್ಯೂಸೆಕ್  ಇದನ್ನೂ ಓದಿ: ನಾವು ಮಾತ್ರ ನಿಮ್ಮ ಕಣ್ಣಿಗೆ ಕಾಣೋದಾ – ಕಾವೇರಿ ಹೋರಾಟದ ಬಗ್ಗೆ ಮೌನ ಮುರಿದ ನಟ ದರ್ಶನ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಬಿನಿಯಿಂದ ತಮಿಳುನಾಡಿಗೆ ರಾತ್ರೋರಾತ್ರಿ ನೀರು ಬಿಡುಗಡೆ

    ಕಬಿನಿಯಿಂದ ತಮಿಳುನಾಡಿಗೆ ರಾತ್ರೋರಾತ್ರಿ ನೀರು ಬಿಡುಗಡೆ

    ಮೈಸೂರು: ಒಂದೆಡೆ ಪತನದಂಚಿನಲ್ಲಿ ದೋಸ್ತಿ ಸರ್ಕಾರವಿದೆ. ಇತ್ತ ಅಧಿಕಾರಿಗಳು ತಮಗೆ ಬೇಕಾದಂತೆ ದರ್ಬಾರ್ ಮಾಡುತ್ತಿದ್ದು, ರಾತ್ರೋರಾತ್ರಿ ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ.

    ಕಬಿನಿ ಜಲಾಶಯದಿಂದ ನಮ್ಮ ರೈತರಿಗೆ ನೀರು ಬಿಡದೆ ತಮಿಳುನಾಡಿಗೆ ಅಧಿಕಾರಿಗಳು ನೀರು ಬಿಡುಗಡೆ ಮಾಡಿದ್ದಾರೆ. ಖಾಸಗಿ ಕಂಪನಿಯ ಗೇಟ್ ಮೂಲಕ ತಮಿಳುನಾಡಿಗೆ ನೀರನ್ನು ಬಿಡುಗಡೆ ಮಾಡಲಾಗಿದೆ. ಹೀಗಾಗಿ ಅಕ್ರಮವಾಗಿ ನೀರು ಬಿಟ್ಟಿದ್ದಾರೆಂದು ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಕಬಿನಿ ಜಲಾಶಯದಲ್ಲಿ ಗರಿಷ್ಠ ಮಟ್ಟ ತಲುಪುವ ಮುನ್ನ ತಮಿಳುನಾಡಿಗೆ ನೀರನ್ನು ಬಿಡಲಾಗಿದೆ. ರಾತ್ರಿಯಿಂದ ಸುಮಾರು 3 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರನ್ನು ಅಧಿಕಾರಿಗಳು ಬಿಟ್ಟಿದ್ದಾರೆ. ಕಬಿನಿ ಜಲಾಶಯದ ಗರಿಷ್ಠ ಮಟ್ಟ ತಲುಪಲು ಇನ್ನೂ 14 ಅಡಿ ಬಾಕಿ ಇದೆ. ಶುಕ್ರವಾರ 70 ಅಡಿ ಇದ್ದ ನೀರಿನ ಮಟ್ಟ ಈಗ 69 ಅಡಿಗೆ ಕುಸಿದಿದೆ. ಹೀಗಾಗಿ ಒಂದೇ ದಿನದಲ್ಲಿ ಕಬಿನಿ ಜಲಾಶಯದಲ್ಲಿ 1 ಅಡಿ ನೀರು ಕುಸಿದಿದೆ.

  • ರಾಜ್ಯದ ಗಡಿಭಾಗವನ್ನು ತಲುಪಿತು 108 ಅಡಿ ಎತ್ತರದ ವಿಷ್ಣುವಿನ ಪ್ರತಿಮೆ

    ರಾಜ್ಯದ ಗಡಿಭಾಗವನ್ನು ತಲುಪಿತು 108 ಅಡಿ ಎತ್ತರದ ವಿಷ್ಣುವಿನ ಪ್ರತಿಮೆ

    ಆನೇಕಲ್: ಈಜಿಪುರ ಗ್ರಾಮದಲ್ಲಿ ಸ್ಥಾಪನೆಯಾಗಲಿರುವ 108 ಅಡಿ ಎತ್ತರದ ವಿಶ್ವರೂಪಿ ವಿಷ್ಣುವಿನ ಪ್ರತಿಮೆ ರಾಜ್ಯದ ಗಡಿ ಭಾಗವನ್ನು ತಲುಪಿದೆ.

    ಬೆಂಗಳೂರಿನ ಈಜಿಪುರ ಗ್ರಾಮದಲ್ಲಿ ಶ್ರೀ ಕೋದಂಡರಾಮಸ್ವಾಮಿ ಟ್ರಸ್ಟ್ 108 ಅಡಿ ಎತ್ತರದ ವಿಶ್ವರೂಪಿ ವಿಷ್ಣುವಿನ ವಿಗ್ರಹ ಪ್ರತಿಷ್ಠಾಪನೆ ಮಾಡಲು ಸಿದ್ಧತೆ ನಡೆಸುತ್ತಿದೆ. ಇಂದು ಆ ವಿಗ್ರಹ ತಮಿಳುನಾಡು ಗಡಿ ಆನೇಕಲ್ ತಾಲೂಕಿನ ಅತ್ತಿಬೆಲೆಗೆ ಬಂದು ತಲುಪಿದೆ. ಬಹಳ ಕಷ್ಟದ ದಾರಿಯಲ್ಲೂ ತಿರುವಣ್ಣಾಮಲೈ ಸಮೀಪದ ವಂದವಾಸಿಯಿಂದ ವಿಗ್ರಹ ರಾಜ್ಯಕ್ಕೆ ಬಂದಿದ್ದು ಜನರು ಅದ್ಧೂರಿಯಾಗಿ ಸ್ವಾಗತ ಮಾಡಿದ್ದಾರೆ.

    ಈ ಬೃಹತ್ ವಿಗ್ರಹ ಸ್ಥಾಪಿಸಲು 2009 ರಲ್ಲಿ ತೀರ್ಮಾನಿಸಲಾಗಿದ್ದು ಅಂದಿನಿಂದ ವಿಗ್ರಹದ ಕಲ್ಲಿಗಾಗಿ ಹುಡುಕಾಟ ನಡೆಸಲಾಗಿತ್ತು. ಕನಕಪುರದ ಸಾತನೂರಿನ ಕ್ವಾರಿಯಲ್ಲಿ ಹುಡುಕಿದರೂ ವಿಗ್ರಹಕ್ಕೆ ಬಂಡೆ ಸಿಕ್ಕಿರಲಿಲ್ಲ. ಕೊನೆಗೆ ತಮಿಳುನಾಡಿನ ತಿರುವಣ್ಣಾಮಲೈ ಸಮೀಪದ ವಂದವಾಸಿಯಲ್ಲಿ ವಿಗ್ರಹಕ್ಕೆ ಕಲ್ಲು ದೊರೆತಿದ್ದು 2009 ರಿಂದ ಕಲ್ಲನ್ನು ಹೊರತೆಗೆಯುವ ಕೆಲಸ ನಡೆದಿತ್ತು. ನಂತರ 108 ಆಡಿಯ ಏಕಶಿಲಾ ವಿಶ್ವರೂಪಿ ವಿಷ್ಣುವಿನ ವಿಗ್ರಹ ತಯಾರಾಗಿ ರಾಜ್ಯಕ್ಕೆ ಸಾಗಿಸುವ ನಡುವೆ ಕೆಲವರು ರಸ್ತೆಯಲ್ಲಿ ಬೃಹತ್ ಶಿಲೆ ಸಾಗಿಸದಂತೆ ಕೋರ್ಟ್ ಮೊರೆ ಹೋಗಿದ್ದರು. ಆದರೆ ತಮಿಳುನಾಡು ಸರ್ಕಾರದ ಸಹಾಯದಿಂದ ಆ ಎಲ್ಲ ಅಡೆತಡೆಗಳನ್ನು ದಾಟಿ ಇಂದು ರಾಜ್ಯದ ಗಡಿಗೆ ವಿಗ್ರಹ ಬಂದಿದೆ.

    ಈ ಬಗ್ಗೆ ಮಾತನಾಡಿರುವ ಶ್ರೀಕೋದಂಡರಾಮಸ್ವಾಮಿ ಟ್ರಸ್ಟ್ ಅಧ್ಯಕ್ಷ ಡಾ.ಸದಾನಂದ, ವಿಗ್ರಹ ತರುವ ದಾರಿಯುದ್ದಕ್ಕೂ ಅನೇಕ ಅಡೆತಡೆಗಳು ಇದ್ದು ಅವೆಲ್ಲವನ್ನೂ ದಾಟಿ ಇಂದು ರಾಜ್ಯಕ್ಕೆ ವಿಗ್ರಹ ಬಂದಿರುವುದು ನಮಗೆ ಸಂತೋಷವಾಗಿದೆ. ಇನ್ನೂ ದಾರಿಯುದ್ದಕ್ಕೂ ಅನೇಕ ಸೇತುವೆಗಳಿದ್ದು ಅವುಗಳಿಗೆ ಪರ್ಯಾಯವಾಗಿ ರಸ್ತೆ ನಿರ್ಮಾಣ ಮಾಡಿ ಕಳೆದ 6 ತಿಂಗಳ ಸತತ ಪ್ರಯತ್ನದಿಂದ ವಿಗ್ರಹ ಇಂದು ರಾಜ್ಯದ ಗಡಿ ಮುಟ್ಟಿದೆ. ಇನ್ನು ವಿಗ್ರಹದ ಕೆತ್ತನೆ ಕೆಲಸ ಬಾಕಿಯಿದ್ದು ಕೇವಲ ಒಂದು ಮುಖ ಮಾತ್ರ ಇದೀಗ ಕೆತ್ತಲಾಗಿದೆ. ವಿಶ್ವರೂಪಿ ವಿಷ್ಣುವಿನ ದಶಾವತಾರ ಈ ಶಿಲೆಯಲ್ಲಿ ಮೂಡಲಿದ್ದು ಈಜಿಪುರ ಕೆಲವೇ ದಿನಗಳಲ್ಲಿ ಪ್ರವಾಸಿ ತಾಣವಾಗಲಿದೆ ಎಂದು ಹೇಳಿದ್ದಾರೆ.

    ಒಟ್ಟಿನಲ್ಲಿ ಅನೇಕ ಅಡೆತಡೆಗಳ ನಡುವೆ ವಿಷ್ಣು ಶಿಲೆ ರಾಜ್ಯಕ್ಕೆ ಆಗಮಿಸಿದ್ದು ಅತ್ತಿಬೆಲೆಯಲ್ಲಿ ನೂರಾರು ಜನ ಭಕ್ತರು ಸೇರಿ ಪೂಜೆ ಸಲ್ಲಿಸಿ ಈಜಿಪುರಕ್ಕೆ ಕಳುಹಿಸಿಕೊಟ್ಟಿದ್ದಾರೆ. ವಿಶ್ವರೂಪಿ ವಿಷ್ಣುವಿನ ವಿಗ್ರಹವನ್ನು ರಾಜ್ಯಕ್ಕೆ ತರಲು ಸಹಕರಿಸಿದ ತಮಿಳುನಾಡು ಸರ್ಕಾರ ಅಲ್ಲಿನ ಪೊಲೀಸರಿಗೆ ಮತ್ತು ಸಾರ್ವಜನಿಕರಿಗೆ ಶ್ರೀಕೋದಂಡರಾಮಸ್ವಾಮಿ ಟ್ರಸ್ಟಿನ ಪದಾಧಿಕಾರಿಗಳು ಕೃತಜ್ಞತೆ ತಿಳಿಸಿದ್ದಾರೆ.