ಬೇಸಿಗೆ ಬಂದತೆಂದರೆ ಬಹುತೇಕ ನಟ ನಟಿಯರು ಮಾಲ್ಡೀವ್ಸ್ ಎನ್ನುವ ಭೂಮಿ ಮೇಲಿನ ಸ್ವರ್ಗಕ್ಕೆ ಹಾರುತ್ತಾರೆ. ಈ ಸ್ವರ್ಗಕ್ಕೆ ಕರೆಯಿಸಿಕೊಳ್ಳುವುದಕ್ಕಾಗಿಯೇ ಮಾಲ್ಡೀವ್ಸ್ ನ ಅನೇಕ ಏಜನ್ಸಿಗಳು ಸಿಲಿಬ್ರಿಟಿಗಳಿಗೆ ಗಾಳ ಹಾಕುತ್ತವೆ. ಒಂದಷ್ಟು ನಿಬಂಧನೆಗಳೊಂದಿಗೆ ಒಪ್ಪಂದವಾದರೆ, ವಾಲ್ಡೀವ್ಸ್ ನ ಸ್ವರ್ಗಗದಲ್ಲಿ ಕೆಲ ದಿನಗಳ ಕಾಲ ಉಚಿತವಾಗಿ ಕಳೆಯಬೇಕು.

ಒಪ್ಪಂದಗಳೇನು ಭಾರೀ ಕಠಿಣವಾದವುಗಳು ಅಲ್ಲ, ನಟಿಯರು ಕಡ್ಡಾಯವಾಗಿ ಬಿಕಿನಿ ಧರಿಸಬೇಕು ಮತ್ತು ಆ ವಿಡಿಯೋ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಬೇಕು. ತಾವು ಯಾವ ಸ್ಥಳದಲ್ಲಿ ಇದ್ದೇವೆ ಎನ್ನುವುದು ಸ್ಪಷ್ಟವಾಗಿ ನಮೂದಿಸಿರಬೇಕು. ಇದು ಪ್ರವಾಸಿ ಸ್ಥಳಗಳನ್ನು ಆಕರ್ಷಿಸಲು ಮಾಲ್ಡೀವ್ಸ್ ಮಾಡಿಕೊಂಡಿರುವ ವಿಶೇಷ ಪ್ಯಾಕೇಜ್. ಇದನ್ನೂ ಓದಿ : ತೂಫಾನಿಗೆ ಸೋಷಿಯಲ್ ಮೀಡಿಯಾ ಗಡಗಡ: ಪೂಜೆಗೆ ಬಂದ ಯಶ್ ಅಭಿಮಾನಿಗಳು
View this post on Instagram
ಅಂತಹದ್ದೇ ಭೂಮಿ ಮೇಲಿನ ಸ್ವರ್ಗದಲ್ಲಿ ಆನಂದವಾಗಿ ಬಿಕಿನಿ ತೊಟ್ಟು ಕ್ಯಾಮೆರಾಗೆ ಫೋಸ್ ಕೊಟ್ಟಿದ್ದಾರೆ ಮಿಲ್ಕಿ ಬ್ಯೂಟಿ ತಮನ್ನಾ. ಬೀಚ್ ಬಳಿ ಬಿಕಿನಿ ತೊಟ್ಟು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಅಲ್ಲದೇ ಕ್ಯಾಟ್ ವಾಕ್ ಎನ್ನುವಂತೆ ಮೆಲ್ಲನೆ ಕೆಲವು ಹೆಜ್ಜೆಗಳನ್ನು ಇಟ್ಟು ಪಡ್ಡೆಗಳ ಕಣ್ಣಿಗೆ ಹಬ್ಬವಾಗಿದ್ದಾರೆ. ಇದನ್ನೂ ಓದಿ : ಅಮೆರಿಕಾದಲ್ಲಿ ಅಪ್ಪು ಬರ್ತಡೇ, ಪುನೀತ್ ರಾಜ್ ಕುಮಾರ್ ಮಗಳೇ ಅತಿಥಿ

ಈ ವಿಡಿಯೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಮಿಲ್ಕಿ ಅಭಿಮಾನಿಗಳು ಫಿದಾ ಆಗಿದ್ದಾರೆ. ನಿಮಗೆ ಬಿಕಿನಿ ಒಪ್ಪುತ್ತದೆ, ಮೊದಲಿನಗಿಂತಲೂ ಸಖತ್ತಾಗಿ ಕಾಣಿಸುತ್ತಿರಿ ಎಂದು ಕಾಮೆಂಡ್ ಮಾಡಿದ್ದಾರೆ. ಇದನ್ನೂ ಓದಿ : ಕನ್ನಡದ ‘ದಸರಾ’ ವರ್ಸಸ್ ತೆಲುಗಿನ ‘ದಸರಾ’: ಯಾರಿಗೆ ಸಿಗತ್ತೆ ದಸರಾ ಟೈಟಲ್?

ಈಗಷ್ಟೇ ಬಾಲಿವುಡ್ ನ ಸಿನಿಮಾದ ಶೂಟಿಂಗ್ ಮುಗಿಸಿಕೊಂಡು ರಜೆ ಕಳೆಯಲು ಮಾಲ್ಡೀವ್ಸ್ಗೆ ಹಾರಿರುವ ತಮ್ಮನ್ನಾ ಕೆಲ ದಿನಗಳ ಕಾಲ ಫ್ರೆಂಡ್ಸ್ ಜತೆ ಅಲ್ಲಿಯೇ ತಂಗಲಿದ್ದಾರೆ. ನಂತರ ಮತ್ತೆ ಶೂಟಿಂಗ್ ನಲ್ಲಿ ಅವರು ಪಾಲ್ಗೊಳ್ಳಲಿದ್ದಾರಂತೆ.





