Tag: ತಮಕೂರು

  • ತುಮಕೂರು ಸಿದ್ದಗಂಗಾ ಮಠದಲ್ಲಿ ಚಿರತೆ ಪ್ರತ್ಯಕ್ಷ

    ತುಮಕೂರು ಸಿದ್ದಗಂಗಾ ಮಠದಲ್ಲಿ ಚಿರತೆ ಪ್ರತ್ಯಕ್ಷ

    ತುಮಕೂರು: ಸಿದ್ದಗಂಗಾ ಮಠದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ತುಮಕೂರಿನ (Tumakuru) ಕ್ಯಾತಸಂದ್ರದಲ್ಲಿ ಇರುವ ಸಿದ್ದಗಂಗಾ ಹಳೆಮಠದ (Siddaganga Mutt) ಆವರಣದಲ್ಲಿ ಚಿರತೆ ಕಾಣಿಸಿದೆ.

    ಶನಿವಾರ ಮಧ್ಯರಾತ್ರಿ 11:30ರ ವೇಳೆಗೆ ಚಿರತೆ ಆವರಣದಲ್ಲಿ ಓಡಾಡಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಠದ ಸ್ಮೃತಿ ವನದ ಬಳಿ ಚಿರತೆ ಕಾಣಿಸಿಕೊಂಡಿದ್ದು  ಆವರಣದಲ್ಲಿದ್ದ ನಾಯಿಯೊಂದು ಬೊಗಳಿದ ನಂತರ ಅಲ್ಲಿಂದ ಓಡಿ ಹೋಗಿದೆ.

    ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ಮಠದ ಸಿಬ್ಬಂದಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಓಡಾಡಿದ ಸ್ಥಳ ಪರಿಶೀಲಿಸಿದ ನಂತರ ಸೆರೆಗೆ ಬೋನು ಅಳವಡಿಸಿದ್ದಾರೆ.

    ನಾಯಿ ಬೇಟೆಯಾಡಲು ಚಿರತೆ ಬಂದಿರುವ ಶಂಕೆ ವ್ಯಕ್ತವಾಗಿದೆ. ಈ ಭಾಗದಲ್ಲಿಆಗಾಗ ಚಿರತೆ, ಕರಡಿಗಳು ಗ್ರಾಮಗಳಿಗೆ ಬರುತ್ತಿರುತ್ತವೆ.

    ಶನಿವಾರ ಬೆಳಗಿನ ಜಾವ ಸಪ್ತಗಿರಿ ಬಡಾವಣೆಯ ಟಿ.ಪಿ.ಕೈಲಾಸಂ ರಸ್ತೆಯಲ್ಲಿ ಚಿರತೆ ಸಂಚಾರ ನಡೆಸಿತ್ತು. ಹತ್ತಿರದ ಮನೆಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಚಿರತೆ ಓಡಾಡಿರುವ ದೃಶ್ಯ ಸೆರೆಯಾಗಿತ್ತು.

  • ವಿಕೃತ ಮನಸ್ಸಿನವರಿಗೆ RSS ಅರ್ಥವಾಗಲ್ಲ- ಖೂಬಾ

    ವಿಕೃತ ಮನಸ್ಸಿನವರಿಗೆ RSS ಅರ್ಥವಾಗಲ್ಲ- ಖೂಬಾ

    – ಕಾಂಗ್ರೆಸ್ ಎಲ್ಲಾ ನಾಟಕಗಳನ್ನು ಬಿಡಬೇಕು

    ತುಮಕೂರು: ವಿಕೃತ ಮನಸ್ಸಿನವರಿಗೆ ಆರ್‌ಎಸ್‌ಎಸ್‌ ಅರ್ಥವಾಗುವುದಿಲ್ಲ. ಆರ್‌ಎಸ್‌ಎಸ್‌ ವಿರುದ್ಧ ಪ್ರತಿಪಕ್ಷಗಳು ಮಾಡುತ್ತಿರುವ ಆರೋಪವನ್ನು ಕೇಂದ್ರ ಸಚಿವ ಭಗವಂತ್ ಖೂಬಾ ಖಂಡಿಸಿದ್ದಾರೆ.

    ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಒಂದು ವಿಕೃತ ಮಾನಸಿಕತೆಯ ವರ್ಗ ಇದೆ. ಅವರು ಆರ್‍ಎಸ್‍ಎಸ್‍ನ್ನು ಸರಿಯಾಗಿ ಅರ್ಥಮಾಡಿಕೊಂಡಿಲ್ಲ. ಜಾತಿ ಓಲೈಕೆಗಾಗಿ ಕಳೆದ 70 ವರ್ಷಗಳಿಂದ ತುಷ್ಟಿಕರಣದ ರಾಜಕಾರಣ ಮಾಡುತ್ತಾ ಬಂದಿದ್ದಾರೆ. ಆರ್‌ಎಸ್‌ಎಸ್‌ ವಿರುದ್ಧ ಹೇಳಿಕೆ ಕೊಡುವ ಮುನ್ನ ಒಂದು ಬಾರಿ ಶಾಖೆಗೆ ಹೋಗಿ ಬರಬೇಕು. ದೇಶ ಭಕ್ತಿ, ಶಿಸ್ತು ಅದರಲ್ಲಿ ಕಲಿಸಲಾಗುತ್ತದೆ. ಸಮಾಜದಲ್ಲಿ ಎಲ್ಲರನ್ನೂ ಒಗ್ಗೂಡಿಸಿ ಭಾರತವನ್ನು ವಿಶ್ವಗುರು ಮಾಡುವ ಸಂಸ್ಕಾರ ಅದರಲ್ಲಿ ಕಲಿಸಲಾಗುತ್ತದೆ ಎಂದರು.

    Bhagwanth khuba Bidar MP

    ಜಮ್ಮು ಕಾಶ್ಮೀರದಲ್ಲಿ ಉಗ್ರರ ದಾಳಿ ಕುರಿತು ಪ್ರತಿ ಕ್ರಿಯೆ ನೀಡಿದ ಅವರು, ಕಳೆದ ಐದಾರು ವರ್ಷದಿಂದ ಜಮ್ಮು ಕಾಶ್ಮೀರದಲ್ಲಿ ಉಗ್ರ ಚಟುವಟಿಕೆ ನಿಯಂತ್ರಣದಲ್ಲಿದೆ. ನಾಲ್ಕೈದು ದಿನದಿಂದ ನಡೆಯುತ್ತಿರುವ ಘಟನೆಗೆ ಕೇಂದ್ರ ಸರ್ಕಾರ ಹೆಡೆಮುರಿ ಕಟ್ಟುವ ಕೆಲಸ ಮಾಡುತ್ತಿದೆ ಎಂದರು. ಇದನ್ನೂ ಓದಿ: ಕೈ ನಾಯಕರಿಂದ್ಲೇ ಡೀಲ್ ರಹಸ್ಯ ಬಯಲು – ಡಿಕೆಶಿಗೆ ಬಿಜೆಪಿ ತಿರುಗೇಟು

     

    ವಾರಣಾಸಿಯಲ್ಲಿ ಪ್ರಿಯಾಂಕಾ ವಾದ್ರಾ ಮಂತ್ರಪಠಣ ಮಾಡಿದ ವಿಚಾರವಾಗಿ ಪ್ರಿಯಾಂಕಾ ವಾದ್ರಾಗೆ ಮಂತ್ರ ಬರುತ್ತಾ? ಆ ಕುಟುಂಬದವರು ಕೇವಲ ಚುನಾವಣೆ ಸಂದರ್ಭದಲ್ಲಿ ಹಿಂದು ಆಗೋದು, ಮುಸ್ಲಿಂರನ್ನು ಓಲೈಕೆ ಮಾಡಲು ಅವರ ಟೋಪಿ ಹಾಕಿಕೊಳ್ಳೋದು, ಆಗಾಗ ಕ್ರಿಶ್ಚಿಯನ್ ಆಗೋದು, ಈ ಎಲ್ಲಾ ನಾಟಕಗಳನ್ನು ಅವರು ಬಿಡಬೇಕು. ನಿಮ್ಮ ಜಾತಿ ಯಾವೋದು ಅದರಲ್ಲಿ ಭಕ್ತಿ ಇಡಿ, ಆದರೆ ಇಂಥಹ ಡೋಂಗಿತನ ಬಿಡಬೇಕು ಎಂದು ಕಾಂಗ್ರೆಸ್ ವಿರುದ್ಧವಾಗಿ ವಾಗ್ದಾಳಿ ನಡೆಸಿದರು.

  • ನಕಲಿ ಪರೀಕ್ಷೆ ಬರೆದವರು ಆತ್ಮಾವಲೋಕನ ಮಾಡಿಕೊಳ್ಳಬೇಕು: ರೇಣುಕಾಚಾರ್ಯ ಟಾಂಗ್

    ನಕಲಿ ಪರೀಕ್ಷೆ ಬರೆದವರು ಆತ್ಮಾವಲೋಕನ ಮಾಡಿಕೊಳ್ಳಬೇಕು: ರೇಣುಕಾಚಾರ್ಯ ಟಾಂಗ್

    ತುಮಕೂರು: ನಕಲಿ ಪರೀಕ್ಷೆ ಬರೆದವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಸಚಿವ ಯೋಗೇಶ್ವರ್‌ಗೆ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ‘ಬಾಬಾ ಕಾ ಡಾಬಾ’ ಖ್ಯಾತಿಯ ಕಾಂತಾ ಪ್ರಸಾದ್ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?

    ತುಮಕೂರಿನ ಸಿದ್ದಗಂಗಾ ಮಠಕ್ಕೆ ಬೇಟಿ ಕೊಟ್ಟು ಮಾಧ್ಯಮದವರೊಂದಿಗೆ ಮಾತನಾಡಿದವರು, ಇನ್ನೂ ಎರಡು ವರ್ಷಗಳ ಕಾಲ ಯಡಿಯೂರಪ್ಪ ಸಿಎಂ ಆಗಿ ಮುಂದುವರೆಯುತ್ತಾರೆ. ಇದರಲ್ಲಿ ಯಾವುದೇ ರೀತಿಯ ಅನುಮಾನ ಬೇಡ. ಆದರೆ ಯಾರೋ ದೆಹಲಿಗೆ ಹೋಗಿ ಪರೀಕ್ಷೆ ಬರೆದು ಬಂದಿದ್ದೆನೇ, ಫಲಿತಾಂಶಕ್ಕಾಗಿ ಕಾಯುತಿದ್ದೇನೆ ಅಂತಾರೆ. ಅಂಥವರು ನಕಲಿ ಪರೀಕ್ಷೆ ಬರೆದವರು ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಸಚಿವ ಸಿಪಿ ಯೋಗೇಶ್ವರ್‌ಗೆ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ನಮ್ಮ ಪಕ್ಷ ಅಧಿಕಾರಕ್ಕೆ ಬರಲ್ಲ: ಎಸ್.ಆರ್.ಶ್ರೀನಿವಾಸ್

    ಯೋಗೇಶ್ವರ್ ಅವರದ್ದು ನಕಲಿ ಪರೀಕ್ಷೆಯಾಗಿದ್ದು, ಅವರ ಪರಿಕ್ಷೆ ಹಣೆಬರಹ ಅವರಿಗೆ ಗೊತ್ತಿದೆ. ಆದರೆ ಹೈಕಮಾಂಡ್ ಯಡಿಯೂರಪ್ಪ ಮಾಡಿದ ಒಳ್ಳೆ ಕೆಲಸ ಬಗ್ಗೆ ಹೆಚ್ಚಿನ ಅಂಕ ನೀಡಿದ್ದಾರೆ. ಮುಂದಿನ ಚುನಾವಣಾ ಯಡಿಯೂರಪ್ಪ ನೇತೃತ್ವದಲ್ಲೇ ನಡೆಯಲಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸೋಮವಾರ ಬೆಳಗ್ಗೆ 6 ಗಂಟೆಯಿಂದ ಮೈಸೂರಿಗೆ ಬಸ್ ಸಂಚಾರ ಆರಂಭ

    ಈಗಾಗಲೇ ರಾಜ್ಯವಸ್ತುವಾರಿ ಅರುಣ್ ಸಿಂಗ್ ಬಂದು ಚರ್ಚೆ ನಡೆಸಿ ಸಿಎಂ ಬದಲಾವಣೆ ಮಾತೇ ಇಲ್ಲ ಅಂದಿದ್ದಾರೆ. ಸೂರ್ಯ ಚಂದ್ರ ಇರೋದು ಎಷ್ಟು ಸತ್ಯನೋ ಯಡಿಯೂರಪ್ಪ ಸಿಎಂ ಹಾದಿಯಲ್ಲಿ ಮುಂದುವರೆಯೋದು ಅಷ್ಟೇ ಸತ್ಯ ಎಂದು ಎಂ.ಪಿ.ರೇಣುಕಾಚಾರ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  •  ‘ಎಲ್ಲ ಅವ್ರೆ ಸ್ವಾಮಿ, ಗಿಜಿಗಿಜಿ ಅಂತಾರೆ’- ಕೊರೊನಾ ಸೋಂಕಿತರ ಬಗ್ಗೆ ಸೋಮಣ್ಣ ನಿರ್ಲಕ್ಷ್ಯದ ಮಾತು

     ‘ಎಲ್ಲ ಅವ್ರೆ ಸ್ವಾಮಿ, ಗಿಜಿಗಿಜಿ ಅಂತಾರೆ’- ಕೊರೊನಾ ಸೋಂಕಿತರ ಬಗ್ಗೆ ಸೋಮಣ್ಣ ನಿರ್ಲಕ್ಷ್ಯದ ಮಾತು

    ತುಮಕೂರು: ಬೆಂಗಳೂರು ಕೋವಿಡ್ ಕೇಂದ್ರಗಳಲ್ಲಿ ಎಲ್ಲ ಅವ್ರೆ ಸ್ವಾಮಿ, ಏನ್ ಮಾಡೋದು, ಎಲ್ಲಿ ನೋಡಿದರೂ ಗಿಜಿಗಿಜಿ ಅಂತಾರೆ ಎಂದು ಕೊರೊನಾ ರೋಗಿಗಳ ಕುರಿತು ಸಚಿವ ವಿ.ಸೋಮಣ್ಣ ನಿರ್ಲಕ್ಷ್ಯವಾಗಿ ಮಾತಾಡಿದ್ದಾರೆ. ಇದಕ್ಕೆ ಮಾಜಿ ಸಚಿವ ಸೊಗಡು ಶಿವಣ್ಣ `ಕುರಿಮಂದೆ ಇದ್ದಂಗೆ ಇದ್ದಾರೆ ಸ್ವಾಮೀಜಿ, ಎಲ್ಲಿ ನೋಡಿದರೂ ಅವರೇ’ ಎಂದು ಸಚಿವರ ಮಾತಿಗೆ ದನಿಗೂಡಿಸಿದ್ದಾರೆ.

    ಇಂದು ಬೆಳಗ್ಗೆ ಸಿದ್ದಗಂಗಾ ಮಠಕ್ಕೆ ಸಚಿವ ವಿ.ಸೋಮಣ್ಣ ಭೇಟಿ ನೀಡಿ ಸಿದ್ದಲಿಂಗ ಸ್ವಾಮೀಜಿಯವರ ಜೊತೆ ಮಾತನಾಡಿದ್ದಾರೆ. ಈ ವೇಳೆ ಬೆಂಗಳೂರಿನಲ್ಲಿ ಕೋವಿಡ್ ವಿಚಾರವಾಗಿ ತಾನು ಕೈಗೊಂಡಿರುವ ಕಾರ್ಯಗಳನ್ನು ವಿವರಿಸಿದ್ದಾರೆ. ಆ ಸಂದರ್ಭದಲ್ಲಿ ಈ ಮೇಲಿನ ನಿರ್ಲಕ್ಷ್ಯದ ಮಾತು ಆಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

    ಬೆಂಗಳೂರಿನ 53 ವಾರ್ಡ್‍ಗಳಲ್ಲಿ 26 ಕಡೆ ಕೋವಿಡ್ ಆಸ್ಪತ್ರೆಗಳನ್ನು ತೆರೆದಿದ್ದೇನೆ. ದಿನದ 24 ಗಂಟೆ ಸಹಾಯವಾಣಿ, ಅಂಬುಲೆನ್ಸ್, ಒಂದು ಆಕ್ಸಿಜನ್ ಇದ್ದು ಎಲ್ಲಾ ಸೌಲಭ್ಯ ಒದಗಿಸಲಾಗಿದೆ ಎಂದು ಹೇಳಿದ್ದಾರೆ. ಆಗ ಮಾಜಿ ಸಚಿವ ಸೊಗಡು ಶಿವಣ್ಣ ಕುರಿಮಂದೆ ಇದ್ದಂಗೆ ಇದ್ದಾರೆ ಸ್ವಾಮೀಜಿ ಎಂದಿದ್ದಾರೆ. ಇದರಿಂದ ಉತ್ತೇಜನಗೊಂಡ ಸಚಿವ ಸೋಮಣ್ಣ `ಎಲ್ಲಾ ಅವ್ರೆ ಏನ್ ಮಾಡೋದು, ಗಿಜಿಗಿಜಿ ಅಂತಾರೆ ಸ್ವಾಮೀಜಿ’ ಎಂದು ಹೇಳಿದ್ದಾರೆ.

    ಅಂಬುಲೆನ್ಸ್ ನವರು ಕೋವಿಡ್ ಸೋಂಕಿತರನ್ನು ಕರೆತರಲು 3000 ರೂಪಾಯಿ ಕೊಟ್ರೆ ಹೋಗೋದು. ಇಲ್ಲದಿದ್ದರೆ ಹೋಗೋದೇ ಇಲ್ಲ ಎಂದು ಸಚಿವ ಸೋಮಣ್ಣ ಅಸಹಾಯಕತೆ ವ್ಯಕ್ತಪಡಿಡಿದ್ದಾರೆ. ಪ್ರತಿ ವಾರ್ಡ್‍ನಲ್ಲಿರುವ ಕೌಂಟರ್ ಗೆ ಆಶಾ ಕಾರ್ಯಕರ್ತೆಯರನ್ನು ನೇಮಕ ಮಾಡಿದ್ದೇನೆ. ಅವರು ಆಯಾ ವಾರ್ಡ್‍ನಷ್ಟೇ ನೋಡಿಕೊಳ್ಳುತ್ತಾರೆ. ಹೀಗಾಗಿ ಸೋಂಕು ಕಂಟ್ರೋಲ್‍ಗೆ ಬರುತ್ತಿದೆ ಎಂದು ಸ್ವಾಮೀಜಿಗೆ ಸೋಮಣ್ಣ ವಿವರಿಸಿದ್ದಾರೆ.

    ಸೋಮವಾರ ಮಾಜಿ ಸಚಿವ ಜಾರ್ಜ್, ಕಾಂಗ್ರೆಸ್ ಮುಖಂಡ ಹ್ಯಾರಿಸ್ ಮತ್ತು ಶಾಸಕ ರಿಜ್ವನ್ ಅರ್ಷದ್, ಶ್ರೀನಿವಾಸಮೂರ್ತಿ ಅವರ ಜೊತೆ ಮಾತುಕತೆ ನಡೆಸಿದ್ದೇನೆ. ಸೋಂಕು ನಿಯಂತ್ರಣದ ಸಂಬಂಧ ಚರ್ಚೆಸಿದ್ದೇನೆ ಎಂದೂ ಸಹ ಸೋಮಣ್ಣ ಹೇಳಿದ್ದಾರೆ.

  • ವಿಡಿಯೋ ಕಾಲ್ ಮೂಲಕ ಮೃತದೇಹ ತೋರಿಸಿ ಅಂತ್ಯಸಂಸ್ಕಾರ

    ವಿಡಿಯೋ ಕಾಲ್ ಮೂಲಕ ಮೃತದೇಹ ತೋರಿಸಿ ಅಂತ್ಯಸಂಸ್ಕಾರ

    ತುಮಕೂರು: ಲಾಕ್‍ಡೌನ್‍ನಿಂದಾಗಿ ಸಂಬಂಧಿಕರು ಮೃತಪಟ್ಟರೂ ಅಂತ್ಯಸಂಸ್ಕಾರ ಮಾಡಲು ಹೋಗದ ಪರಿಸ್ಥಿತಿ ಇದೆ. ಈ ರೀತಿ ಇರುವಾಗ ದೂರದ ಊರಿನಲ್ಲಿದ್ದ ಸಂಬಂಧಿಕರು ಮೃತಪಟ್ಟ ತಮ್ಮ ಸಂಬಂಧಿಯೊಬ್ಬರ ಅಂತ್ಯಸಂಸ್ಕಾರವನ್ನು ವಿಡಿಯೋ ಕಾಲ್ ಮೂಲಕ ನೋಡಿ ದೂರದಿಂದಲೇ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

    ಅಂದಹಾಗೆ ಈ ಘಟನೆ ನಡೆದದ್ದು ತುಮಕೂರು ನಗರದಲ್ಲಿ. ಪಶ್ಚಿಮ ಬಂಗಾಳ ಮೂಲದ ವ್ಯಕ್ತಿ ಕನೈದಾಸ್ ಮೃತಪಟ್ಟಿದ್ದ. ತುಮಕೂರಿನ ಎಂ.ಜಿ ರಸ್ತೆಯಲ್ಲಿ ಕರವಸ್ತ್ರ ಮಾರಿಕೊಂಡು ಜೀವನ ನಡೆಸುತ್ತಿದ್ದ ಕನೈದಾಸ್‍ಗೆ ಏಪ್ರಿಲ್ 2ರಂದು ಹೃದಯಾಘಾತ ಸಂಭವಿಸಿತ್ತು. ಕನೈದಾಸ್ ಸ್ನೇಹಿತರು ಆತನನ್ನು ಆಸ್ಪತ್ರೆಗೆ ಸೇರಿಸಿದ್ದರು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.

    ಸದ್ಯ ಲಾಕ್‍ಡೌನ್ ಇರುವ ಕಾರಣ ಮೃತ ಶರೀರವನ್ನು ಪಶ್ಚಿಮ ಬಂಗಾಳಕ್ಕೆ ತೆಗೆದುಕೊಂಡು ಹೋಗಲು ಸಾಧ್ಯವಾಗಿರಲಿಲ್ಲ. ಈ ಕಾರಣದಿಂದ ಕುಟುಂಬಸ್ಥರ ಮನವಿ ಮೇರೆಗೆ ಇಲ್ಲಿಯೇ ಅಂತ್ಯಸಂಸ್ಕಾರ ನಡೆದಿದೆ. ಆದರೆ ಅಂತ್ಯಸಂಸ್ಕಾರಕ್ಕೆ ಆತನ ಸಂಬಂಧಿಕರು ಬಂದಿರಲಿಲ್ಲ. ಹಾಗಾಗಿ ವಾಟ್ಸಪ್ ಮೂಲಕ ವಿಡಿಯೋ ಕಾಲ್ ಮಾಡಿ ಸಂಬಂಧಿಕರು ಮೃತದೇಹವನ್ನು ವೀಕ್ಷಣೆ ಮಾಡಿದ್ದಾರೆ.

  • ಕಾಂಗ್ರೆಸ್ ನಾಯಕ ರಾಜಣ್ಣಗೆ ವಿಚಾರಣೆಗೆ ಹಾಜರಾಗುವಂತೆ ಇಡಿ ಸಮನ್ಸ್

    ಕಾಂಗ್ರೆಸ್ ನಾಯಕ ರಾಜಣ್ಣಗೆ ವಿಚಾರಣೆಗೆ ಹಾಜರಾಗುವಂತೆ ಇಡಿ ಸಮನ್ಸ್

    ತುಮಕೂರು: ಸೆಪ್ಟೆಂಬರ್ 24 ರಂದು ಕೊರಿಯರ್ ನಲ್ಲಿ ನನಗೆ ಜಾರಿ ನಿರ್ದೇಶನಾಲಯದಿಂದ ನೋಟಿಸ್ ಬಂದಿದೆ. ಅಕ್ಟೋಬರ್ 8 ರಂದು ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ ಎಂದು ಮಾಜಿ ಶಾಸಕ ಕೆ.ಎನ್ ರಾಜಣ್ಣ ಹೇಳಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಮವಾರ ಇಡಿ ಸಹಾಯಕ ನಿರ್ದೇಶಕರು ದೂರವಾಣಿ ಕರೆ ಮಾಡಿ 8 ರಂದು ದಸರಾ ಇರುವುದರಿಂದ ರಾತ್ರಿ 8ಕ್ಕೆ ಬರಲು ಹೇಳಿದರು. ನಂತರ ಇಮೇಲ್ ಮಾಡಿದ್ದು, 9 ರಂದು ಬರಲು ಸೂಚಿಸಿದ್ದಾರೆ. ಯಾವ ಕೇಸು, ಯಾವ ದಾಖಲೆ ಎನ್ನೋದು ನನಗೆ ಮಾಹಿತಿ ಇಲ್ಲ ಎಂದು ಹೇಳಿದರು.

    ನನ್ನ ಪ್ರಕಾರ ನಾವು ಲಕ್ಷ್ಮಿ ಹೆಬ್ಬಾಳ್ಕರ್ ಒಡೆತನದ ಹರ್ಷ ಶುಗರ್ಸ್ ಕಂಪನಿಗೆ ಸಾಥ್ ಕೊಟ್ಟಿದ್ದೇವೆ. ಆ ಹಿನ್ನೆಲೆಯಲ್ಲಿ ಸಮನ್ಸ್ ನೀಡಿರಬಹುದು. ಅಪೆಕ್ಸ್ ಬ್ಯಾಂಕ್ ಆಡಿಯಲ್ಲಿ ಬರುವ ಕೆಲ ಬ್ಯಾಂಕ್‍ಗಳು ಸೇರಿಕೊಂಡು ಅವರಿಗೆ ಸುಮಾರು 300 ಕೋಟಿಯಷ್ಟು ಸಾಲ ನೀಡಿದ್ದೇವೆ. ಆದರಲ್ಲಿ ನಮ್ಮ ತುಮಕೂರು ಡಿಸಿಸಿ ಬ್ಯಾಂಕಿನಿಂದ ಹರ್ಷ ಶುಗರ್ಸ್ ಗೆ 25 ಕೋಟಿ ರೂ. ಸಾಲ ಕೊಟ್ಟಿದ್ದೇವೆ. ಈ ಹಿನ್ನೆಲೆಯಲ್ಲಿ ನೋಟಿಸ್ ಬಂದಿರಬಹುದು. ಇದರ ಬಗ್ಗೆ ನನಗೆ ಸರಿಯಾಗಿ ಗೊತ್ತಿಲ್ಲ ಎಂದು ತಿಳಿಸಿದರು.

    ಇದೇ ವೇಳೆ ಮಧುಗಿರಿ ಜಿಲ್ಲೆ ಮಾಡುವಂತೆ ಸಿಎಂಗೆ ಪತ್ರ ಬರೆದಿದ್ದ ಜಿ.ಪರಮೇಶ್ವರ್ ಟಾಂಗ್ ಕೊಟ್ಟ ರಾಜಣ್ಣ, ಅವರು ಡಿಸಿಎಂ ಆಗಿದ್ದಾಗ ಯಾಕೆ ಮಧುಗಿರಿ ಜಿಲ್ಲೆ ಮಾಡಲಿಲ್ಲ. ಡಿಸಿಎಂ ಆಗಿ, ಜಿಲ್ಲಾ ಉಸ್ತುವಾರಿಯಾಗಿದ್ದರು. ಕಾಂಗ್ರೆಸ್‍ನಲ್ಲಿ ನಂಬರ್ ಒನ್ ಮುಖಂಡರಾಗಿದ್ದರು. ಎಲ್ಲಾ ಅಧಿಕಾರ ಇದ್ದಾಗ ಮಾಡದೇ ಇದ್ದವರು ಈಗ ಜಿಲ್ಲೆ ಮಾಡಿ ಎನ್ನಲು ಅವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿ ಕಿಡಿಕಾರಿದರು.

    ನಾನು ಚುನಾವಣಾ ಪ್ರಣಾಳಿಕೆಯಲ್ಲಿ ಮಧುಗಿರಿ ಜಿಲ್ಲೆ ಮಾಡುವ ಪ್ರಸ್ತಾಪ ಮಾಡಿದ್ದೆ. ಪಿಡಬ್ಲ್ಯುಡಿ ವಿಭಾಗ, ಆರ್‍ಟಿಓ ಎಲ್ಲ ಇದೆ. ಶೈಕ್ಷಣಿಕ ಜಿಲ್ಲೆ ಆಗಿದೆ. ಎಸ್‍ಪಿ ಮತ್ತು ಡಿಸಿ ಕಚೇರಿ ಹೊರತುಪಡಿಸಿದರೆ ಮಧುಗಿರಿಯಲ್ಲಿ ಜಿಲ್ಲಾ ಮಟ್ಟದ ಎಲ್ಲಾ ಕಚೇರಿಗಳಿವೆ. ಆ ಮನುಷ್ಯನೇ ತೀರ್ಮಾನ ತೆಗೆದುಕೊಳ್ಳುವಾಗ ಮಾಡಲಿಲ್ಲ. ಈಗ ತಾನು ಏನೋ ಮಾಡೋಕೆ ಹೊರಟಿದ್ದೇನೆ ಎಂದು ತೋರಿಸಿಕೊಳ್ಳಲು ಪತ್ರ ಬರೆದಿದ್ದಾರೆ. ಮಧುಗಿರಿ ಜಿಲ್ಲೆ ಮಾಡಲು ನಾನೂ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿದ್ದೆನೆ. ಸೆಪ್ಟೆಂಬರ್ 9 ರಂದು ಭೇಟಿಯಾಗಿ ಮುಖ್ಯಮಂತಿ ಅವರನ್ನು ಳಿಗೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.

  • ಜೆಡಿಎಸ್ ಗೆಲ್ಲೋದು ಮೂರು ಸೀಟ್: ಮಾಜಿ ಕಾಂಗ್ರೆಸ್ ಶಾಸಕ

    ಜೆಡಿಎಸ್ ಗೆಲ್ಲೋದು ಮೂರು ಸೀಟ್: ಮಾಜಿ ಕಾಂಗ್ರೆಸ್ ಶಾಸಕ

    -ಕಣ್ಣೀರಿಗೆ ದೇವೇಗೌಡರ ಕುಟುಂಬ ಹೆಸರುವಾಸಿ
    -ದೇವೇಗೌಡರಿಂದ ಒಕ್ಕಲಿಗರಿಗೆ ಮೋಸ

    ತುಮಕೂರು: ಜೆಡಿಎಸ್ ಪಕ್ಷಕ್ಕೆ ಎಷ್ಟೇ ಸೀಟ್ ಗಳನ್ನು ಬಿಟ್ಟುಕೊಟ್ಟರು ಅವರು ಮೂರು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸುತ್ತಾರೆ. ಒಂದು ವೇಳೆ ಮೂರಕ್ಕಿಂತ ಹೆಚ್ಚಿನ ಸ್ಥಾನಗಳಲ್ಲಿ ಗೆದ್ದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ ಸವಾಲು ಹಾಕಿದ್ದಾರೆ.

    ಸೀಟು ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್ ಇನ್ನು ನಿರ್ಣಯ ತೆಗೆದುಕೊಂಡಿಲ್ಲ. ಮಾರ್ಚ್ 16ರಂದು ಎಲ್ಲವು ಅಂತಿಮವಾಗಲಿದ್ದು, ಹಾಲಿ ಸಂಸದರ ಕ್ಷೇತ್ರವನ್ನು ತ್ಯಾಗ ಮಾಡಲ್ಲ ಎಂದು ಹೈಕಮಾಂಡ್ ಗೆ ಹೇಳಿದ್ದೇವೆ. ಹೀಗಾಗಿ ಕಾರ್ಯಕರ್ತರು ಯಾವುದೇ ಊಹಾಪೋಹಗಳ ಸುದ್ದಿಗೆ ಕಿವಿಗೊಡಬಾರದು. ಮಂಡ್ಯ ಮತ್ತು ಹಾಸನದಲ್ಲಿ ಜೆಡಿಎಸ್ ಗೆಲುವು ಸುಲಭವಾಗಿಲ್ಲ. ನಾವೇನು ಸನ್ಯಾಸಿಗಳಲ್ಲ, ನಮ್ಮ ಅನಿಸಿಕೆಗಳನ್ನ ಕಾರ್ಯಗತ ಮಾಡಲು ಏನೆಲ್ಲಾ ಮಾಡಬೇಕು ಅದನ್ನೆಲ್ಲಾ ಮಾಡುತ್ತಿದ್ದೇವೆ ಎಂದು ಹೇಳುವ ಮೂಲಕ ಜೆಡಿಎಸ್ ಸೋಲಿಸಲು ರಣತಂತ್ರ ರೂಪಿಸ್ತಿನಿ ಎಂದು ಪರೋಕ್ಷವಾಗಿ ತಿಳಿಸಿದರು.

    ಸಂಸದ ಮುದ್ದಹನುಮೇಗೌಡರಿಗೆ ಟಿಕೆಟ್ ತಪ್ಪಿದರ ಕುರಿತು ಮಾತನಾಡಿದ ರಾಜಣ್ಣ, ಇಲ್ಲಿ ಜೆಡಿಎಸ್ ಗೆ ಟಿಕೆಟ್ ಕೊಟ್ಟರೆ, ನಾನು ಪಕ್ಷೇತರವಾಗಿಯಾದರೂ ಸ್ಪರ್ಧೆ ಮಾಡುತ್ತೇನೆ. ಕಾಂಗ್ರೆಸ್ ಉಳುವಿಗಾಗಿ ನನ್ನ ಸ್ಪರ್ಧೆಯೇ ಹೊರತು ಜೆಡಿಎಸ್ ವಿರುದ್ಧ ಅಲ್ಲ. ಜೆಡಿಎಸ್ ಅವರನ್ನ ಹೀಗೆ ಬಿಟ್ಟರೆ ರಾಜ್ಯದಲ್ಲಿ ಕಾಂಗ್ರೆಸ್ ಪೂರ್ಣ ನಿರ್ನಾಮ ಅಗಲಿದೆ. ಹಾಗಾಗಿ ಕಾಂಗ್ರೆಸ್ ಉಳಿಸಲು ಏನು ಮಾಡಬೇಕು ಅದನ್ನು ಮಾಡಲು ಸಿದ್ಧನಿದ್ದೇನೆ ಎಂದು ಜೆಡಿಎಸ್ ವಿರುದ್ಧ ಗುಡುಗಿದರು.

    ಮುದ್ದಹನುಮೇಗೌಡ ಒಕ್ಕಲಿಗರ ಚಾಂಪಿಯನ್ ಎಂದು ಕರೆಸಿಕೊಳ್ಳುತ್ತಾರೆ. ಮುದ್ದಹನುಮೇಗೌಡ ಒಕ್ಕಲಿಗರಲ್ವಾ ಎಂದು ಪ್ರಶ್ನೆ ಮಾಡಿದ ರಾಜಣ್ಣ ಎಲ್ಲ ಗೊತ್ತಿದ್ದರೂ ತುಮಕೂರು ಟಿಕೆಟ್ ಕೇಳುತ್ತಿದ್ದಾರೆ. ಇದು ಒಕ್ಕಲಿಗರಿಗೆ ಮಾಡುವ ಮೋಸವಾಗಿದೆ. ಈ ಮೊದಲು ರಾಜಕೀಯದಲ್ಲಿ ದೇವೇಗೌಡರಿಗೆ ಒಳ್ಳೆಯ ಹೆಸರಿತ್ತು. ಮೊಮ್ಮಕ್ಕಳ ರಾಜಕೀಯ ಜೀವನಕ್ಕಾಗಿ ತಮ್ಮ ಹೆಸರನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಕಣ್ಣೀರು ಹಾಕಲು ದೇವೇಗೌಡರ ಕುಟುಂಬ ಹೆಸರುವಾಸಿಯಾಗಿದ್ದು, ಈ ಬಾರಿಯ ಚುನಾವಣೆಯಲ್ಲಿಯೂ ಅದನ್ನೇ ಬಂಡವಾಳ ಮಾಡಿಕೊಂಡು ಮತ ಕೇಳುತ್ತಿದ್ದಾರೆ ಎಂದು ವ್ಯಂಗ್ಯ ಮಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಫೋಟೋಗೆ ಅಶ್ಲೀಲ ಪದ ಬಳಸಿ ಫೇಸ್ಬುಕ್ ಗೆ ಪೋಸ್ಟ್- ಲಕ್ಷ ಲಕ್ಷ ಡಿಮ್ಯಾಂಡ್ ಇಟ್ಟಿದ್ದ ವ್ಯಕ್ತಿಗೆ ಸಖತ್ ಗೂಸಾ

    ಫೋಟೋಗೆ ಅಶ್ಲೀಲ ಪದ ಬಳಸಿ ಫೇಸ್ಬುಕ್ ಗೆ ಪೋಸ್ಟ್- ಲಕ್ಷ ಲಕ್ಷ ಡಿಮ್ಯಾಂಡ್ ಇಟ್ಟಿದ್ದ ವ್ಯಕ್ತಿಗೆ ಸಖತ್ ಗೂಸಾ

    ತುಮಕೂರು: ವಿವಾಹಿತ ಮಹಿಳೆಗೆ ಫೇಸ್ಬುಕ್ ನಲ್ಲಿ ಲೈಂಗಿಕ ಕಿರುಕುಳ ನೀಡಿದ್ದ ವ್ಯಕ್ತಿಯೋರ್ವನನ್ನು ಸಾರ್ವಜನಿಕರು ಹಿಡಿದು ಗೂಸಾ ಕೊಟ್ಟ ಘಟನೆ ತುಮಕೂರು ನಗರದ ಭೀಮಸಂದ್ರದಲ್ಲಿ ನಡೆದಿದೆ.

    ನೆಲಮಂಗಲ ಮೂಲದ ಮೋಹನ್ ಗೂಸಾ ತಿಂದ ವ್ಯಕ್ತಿ. ಈತ ಫೇಸ್ಬುಕ್ ನಲ್ಲಿ ಭೀಮಸಂದ್ರದ ಮಹಿಳೆಯನ್ನ ಪರಿಚಯ ಮಾಡಿಕೊಂಡು ಬಳಿಕ ಅವರ ಫೋಟೋಗೆ ಅಶ್ಲೀಲ ಪದಗಳನ್ನು ಬಳಸಿ ಪೋಸ್ಟ್ ಮಾಡಿದ್ದಾನೆ. ನಂತರ ಆ ಫೋಟೋ ತೋರಿಸಿ ಬ್ಲಾಕ್ ಮೇಲ್ ಮಾಡಿದ್ದಾನೆ. ಜೊತೆಗೆ ಮಹಿಳೆಯ ಸಹೋದರ ಮಂಜುನಾಥ್ ಮತ್ತು ಕುಟುಂಬದವರಿಗೆ ಕಳೆದ ಆರು ತಿಂಗಳಿನಿಂದ ಕರೆಮಾಡಿ ಮಾನಸಿಕವಾಗಿ ಹಿಂಸೆ ನೀಡಿದ್ದಲ್ಲದೆ, 5 ಲಕ್ಷ, 15 ಲಕ್ಷ ಹಣ ನೀಡುವಂತೆ ಡಿಮ್ಯಾಂಡ್ ಕೂಡ ಮಾಡಿದ್ದಾನೆ ಎಂಬುವುದಾಗಿ ತಿಳಿದುಬಂದಿದೆ.

    ಮೋಹನ್ ವರ್ತನೆಯಿಂದ ಬೇಸತ್ತಿದ್ದ ಮಹಿಳೆಯ ಪೋಷಕರು 6-7 ತಿಂಗಳಿನಿಂದ ಮೋಹನನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ಆದರೆ ಕಿಲಾಡಿ ಮೋಹನ ಅವರಿಗೆ ಚಳ್ಳೆಹಣ್ಣು ತಿನ್ನಿಸಿ ಓಡಾಡುತ್ತಿದ್ದನು. ಆದ್ರೆ ಇಂದು ಬೆಳಗ್ಗೆ ಮಹಿಳೆಯ ಸಹೋದರ ಮಂಜುನಾಥನ ಕೈಗೆ ಅಚಾನಕ್ಕಾಗಿ ಮೋಹನ್ ಭೀಮಸಂದ್ರದ ಬಳಿ ಯಾವುದೋ ಮದುವೆ ಮನೆಗೆ ಬಂದವನು ಸಿಕ್ಕಿಬಿದ್ದಿದ್ದಾನೆ.

    ಕೂಡಲೇ ಮಂಜುನಾಥ್ ಮೋಹನ್ ನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈತ ಕಾರು ಚಾಲಕನ ಕೆಲಸ ಮಾಡುತ್ತಿರೋದಾಗಿ ತಿಳಿದುಬಂದಿದೆ. ಜೊತೆಗೆ ನಾನು ಫೇಸ್ಬುಕ್ ನಲ್ಲಿ ಮಹಿಳೆಯ ಫೋಟೋ ಪೋಸ್ಟ್ ಮಾಡಿದ್ದು ನಿಜ ಎಂಬುದಾಗಿ ಆರೋಪಿ ಮೋಹನ್ ಮಾಧ್ಯಮಗಳ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.

    https://www.youtube.com/watch?v=sPePsZEFJ48

     

  • ವಿಡಿಯೋ: ಗೊರವನಹಳ್ಳಿ ಮಹಾಲಕ್ಷ್ಮಿ ದೇವಾಲಯದಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ

    ವಿಡಿಯೋ: ಗೊರವನಹಳ್ಳಿ ಮಹಾಲಕ್ಷ್ಮಿ ದೇವಾಲಯದಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ

    ತುಮಕೂರು: ಶ್ರಾವಣ ಮಾಸ ಎಂದರೆ ಹಬ್ಬಗಳ ಮಾಸ. ಹೆಣ್ಣು ಮಕ್ಕಳಿಗಂತೂ ಪ್ರಿಯವಾದ ಮಾಸ. ಪ್ರತಿಯೊಂದು ಹಬ್ಬದಲ್ಲೂ ಚೆನ್ನಾಗಿ ಅಲಂಕಾರ ಮಾಡಿಕೊಂಡು ಸಡಗರ ಸಂಭ್ರಮದಿಂದ ಖುಷಿಪಡುತ್ತಾರೆ. ಈ ಎಲ್ಲಾ ಹಬ್ಬಗಳಲ್ಲಿ ವರಮಹಾಲಕ್ಷ್ಮಿ ಹಬ್ಬ ಎಂದರೆ ಎಲ್ಲರಿಗೂ ಬಹಳ ಪ್ರಿಯವಾದುದು.

    ಪ್ರತಿ ವರ್ಷ ಪೌರ್ಣಮಿಯ ಸಮೀಪದ ಶ್ರಾವಣ ಮಾಸದ ಮೊದಲನೇ ಶುಕ್ರವಾರ ಬರುವ ಈ ವರಲಕ್ಷ್ಮಿ ವ್ರತವನ್ನು ಎಲ್ಲಾ ಮುತ್ತೈದೆಯರು ಭಕ್ತಿ ಶ್ರದ್ಧೆಯಿಂದ ಆಚರಿಸುತ್ತಾರೆ. ಭವಿಷ್ಯೋತ್ತರ ಪುರಾಣದ ಪ್ರಕಾರ, ಲಕ್ಷ್ಮಿಯು ಕ್ಷೀರ ಸಾಗರದಿಂದ ಅವತಾರ ತಾಳಿದಳೆಂದು ಹೇಳಲಾಗುತ್ತದೆ.

    ಹೌದು, ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ತುಮಕೂರು ಜಿಲ್ಲೆಯ ಶ್ರೀಕ್ಷೇತ್ರ ಗೊರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯ ನೇರವೇರಿಸಲಾಯಿತು. ಬೆಳಗ್ಗೆ 6 ಗಂಟೆಯಿಂದಲೇ ವಿವಿಧ ಪೂಜಾ ಕೈಂಕರ್ಯಗಳು ಆರಂಭವಾಗಿದೆ.

    ಪಂಚಾಮೃತಾಭಿಷೇಕ, ಕುಂಕುಮಾರ್ಚನೆ ಸೇರಿದಂತೆ ಹಲವು ಪೂಜಾ ವಿಧಿವಿಧಾನಗಳು ನಡೆಯಿತು. ಹಬ್ಬದ ಅಂಗವಾಗಿ ಮಹಾಲಕ್ಷ್ಮಿ ದೇವರಿಗೆ ವೀಶೇಷ ಹೂವಿನ ಅಲಂಕಾರ ಮಾಡಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಬಂದು ಶ್ರೀದೇವರಿಗೆ ಪೂಜೆ ಸಲ್ಲಿಸಿ ಕೃಪೆಗೆ ಪಾತ್ರರಾಗುತ್ತಿದ್ದಾರೆ.