Tag: ತಬ್ಲೀಘಿ

  • ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ- ಆಸ್ತಿ ಮುಟ್ಟುಗೋಲು ಹಾಕಿ, 5 ವರ್ಷ ಜೈಲಲ್ಲಿಡಿ: ಶೋಭಾ ಕರಂದ್ಲಾಜೆ

    ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ- ಆಸ್ತಿ ಮುಟ್ಟುಗೋಲು ಹಾಕಿ, 5 ವರ್ಷ ಜೈಲಲ್ಲಿಡಿ: ಶೋಭಾ ಕರಂದ್ಲಾಜೆ

    – ದುರಹಂಕಾರಿಗಳು, ದೇಶದ್ರೋಹಿಗಳಿಂದ ಹಲ್ಲೆ

    ಚಿಕ್ಕಮಗಳೂರು: ಮತಾಂಧ ಶಕ್ತಿಗಳು, ದುರಹಂಕಾರಿಗಳು, ದೇಶದ್ರೋಹಿಗಳು ಕೊರೊನ ವಾರಿವರ್ಸ್ ಮೇಲೆ ಹಲ್ಲೆ ನಡೆಸಿದ್ದು, ಅವರ ವಿರುದ್ಧ ಗೂಂಡಾ ಕಾಯ್ದೆ ಕೇಸ್ ದಾಖಲಿಸಿ, ಐದು ವರ್ಷ ಜೈಲಿನಲ್ಲಿಡಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ.

    ನಗರದ ಜಿಲ್ಲಾಸ್ಪತ್ರೆಯಲ್ಲಿ ಹಲ್ಲೆಗೊಳಗಾಗಿದ್ದ ಪೌರಕಾರ್ಮಿಕರನ್ನು ಭೇಟಿ ಮಾಡಿದ ಶೋಭಾ, ಹಲ್ಲೆಗೊಳಗಾದವರ ಆರೋಗ್ಯ ವಿಚಾರಿಸಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಇತ್ತೀಚೆಗೆ ಬೆಂಗಳೂರು, ಇಂದು ಚಿಕ್ಕಮಗಳೂರು ಹೀಗೆ ಒಂದರ ಮೇಲೆ ಒಂದರಂತೆ ಕೊರೊನಾ ವಾರಿವರ್ಸ್ ಮೇಲೆ ಹಲ್ಲೆ ನಡೆಯುತ್ತಲೇ ಇದೆ. ಹಲ್ಲೆ ಮಾಡಿದವರು ಐದು ವರ್ಷ ಜೈಲಿನಿಂದ ಹೊರಬರದಂತೆ ಸರ್ಕಾರ ಕ್ರಮಕೈಗೊಳ್ಳಬೇಕು ಹಲ್ಲೆ ಮಾಡಿದವರ ಸಂಪೂರ್ಣ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಆಗ್ರಹಿಸಿದರು.

    ಕೊರೊನಾದಿಂದ ಸಾವನ್ನಪ್ಪಿದವರ ಶವ ಸಂಸ್ಕಾರದಲ್ಲಿ ಜಮೀರ್ ಅಹಮದ್ ಭಾಗಿಯಾಗಿದ್ದಾರೆ. ತಕ್ಷಣ ಅವರನ್ನು ಕ್ವಾರೆಂಟೈನ್‍ನಲ್ಲಿ ಇಡಬೇಕು. ಆಶಾ ಕಾರ್ಯಕರ್ತೆಯರ ಮೇಲಿನ ಹಲ್ಲೆಯನ್ನೂ ಅವರು ಸಮರ್ಥಿಸಿಕೊಂಡಿದ್ದಾರೆ. ಅವರನ್ನು ಗೃಹಬಂಧನದಲ್ಲಿಡಬೇಕು, ಹಲ್ಲೆ ಮಾಡಿದವರ ಮೇಲೆ ಯಾವ ಪ್ರಕರಣ ಹಾಕುತ್ತಾರೋ, ಪ್ರಚೋದಿಸಿದವರ ಮೇಲೂ ಅದೇ ಕೇಸ್ ಹಾಕಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

    ಬೆಂಗಳೂರು, ಮಂಡ್ಯ, ಗದಗ ಬೆಳಗಾವಿಯಲ್ಲಿ ತಬ್ಲೀಘಿಗೆ ಹೋದವರು ಇದ್ದಾರೆ, ಬೆಳಗಾವಿಯಲ್ಲಿ 70 ಜನ ನೇರವಾಗಿ ಅಲ್ಲಿಗೆ ಹೋದವರು ಸಿಕ್ಕಿದ್ದಾರೆ. ಅವರು ನಮ್ಮ ದೇಶದ ಪ್ರಜೆಗಳಂತೆ ನಡೆದುಕೊಳ್ಳುತ್ತಿಲ್ಲ. ಕೊರೊನಾವನ್ನು ಉಳಿದವರಿಗೂ ಹಬ್ಬಿಸಬೇಕು ಎನ್ನುವ ವ್ಯವಸ್ಥಿತ ಪಿತೂರಿ ನಡೆಸಿದ್ದಾರೆ, ಇದು ಜಿಹಾದಿ, ಭಯೋತ್ಪಾದಕರ ಮುಂದುವರೆದ ಭಾಗ. ಹಲವಾರು ಜನ ಕ್ವಾರಂಟೈನ್‍ಗೆ ಬಂದಿಲ್ಲ, ಆಸ್ಪತ್ರೆಗೂ ಹೋಗಿಲ್ಲ, ಪೊಲೀಸರಿಗೂ ಮಾಹಿತಿ ನೀಡಿಲ್ಲ ಹಾಗಾಗಿ ಸರ್ಕಾರ ಜಾಗೃತವಹಿಸಿ ಅವರೆನ್ನೆಲ್ಲ ಕ್ವಾರಂಟೈನ್‍ನಲ್ಲಿ ಇಡಬೇಕು ಎಂದರು.

  • ಈರುಳ್ಳಿ ವ್ಯಾಪಾರಿ ಸೇರಿ ಕುಟುಂಬಸ್ಥರಿಗೆ ಕೊರೊನಾ- ಗ್ರಾಹಕರಲ್ಲಿ ಆತಂಕ

    ಈರುಳ್ಳಿ ವ್ಯಾಪಾರಿ ಸೇರಿ ಕುಟುಂಬಸ್ಥರಿಗೆ ಕೊರೊನಾ- ಗ್ರಾಹಕರಲ್ಲಿ ಆತಂಕ

    ಬೆಳಗಾವಿ: ಈರುಳ್ಳಿ ವ್ಯಾಪಾರಿ ಸೇರಿದಂತೆ ಆತನ ಕುಟುಂಬದ ನಾಲ್ವರು ಸದಸ್ಯರಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದ್ದು, ಆತನ ಬಳಿ ಈರುಳ್ಳಿ ಖರೀದಿಸಿದ ಗ್ರಾಹಕರಿಗೆ ಕೊರೊನಾ ಆತಂಕ ಇದೀಗ ಎದುರಾಗಿದೆ.

    ಬೆಳಗಾವಿಯ ಹಿರೇಬಾಗೇವಾಡಿ ಗ್ರಾಮ ಹಾಗೂ ಜಿಲ್ಲೆಯಾದ್ಯಂತ ಆತಂಕ ತೀವ್ರಗೊಂಡಿದ್ದು, ಸೋಂಕಿತ ಸಂಖ್ಯೆ 128 ಸೇರಿದಂತೆ ತಂದೆ, ತಾಯಿ ಹಾಗೂ ಸಹೋದರನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಪೇಷಂಟ್ ನಂ. 128 ದೆಹಲಿಯ ನಿಜಾಮುದ್ದೀನ್‍ನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗಿಯಾಗಿದ್ದರು. ನಂತರ ಉತ್ತರ ಪ್ರದೇಶದ ಚೇಕಡಾ ಗ್ರಾಮದಲ್ಲಿ ಸಹ ಧಾರ್ಮಿಕ ಪ್ರಚಾರ ನಡೆಸಿ, ಮಾರ್ಚ್ 22 ರಂದು ಬೆಳಗಾವಿಯ ಹಿರೇಬಾಗೇವಾಡಿ ಗ್ರಾಮಕ್ಕೆ ಆಗಮಿದ್ದಾರೆ.

    ಗ್ರಾಮಕ್ಕೆ ಮರಳಿದ ನಂತರ ಈರುಳ್ಳಿ ವ್ಯಾಪರದಲ್ಲಿ ತೊಡಗಿದ್ದು, ಪಾರಿಶ್ವಾಡ, ಹಿರೇಬಾಗೇವಾಡಿ, ಬಡಾಲ್ ಅಂಕಲಗಿ ಸಂತೆ ಸೇರಿದಂತೆ ವಿವಿಧೆಡೆ ವ್ಯಾಪಾರದಲ್ಲಿ ಭಾಗಿಯಾಗಿದ್ದಾರೆ. ತಂದೆ ಹಾಗೂ ಮಕ್ಕಳಿಬ್ಬರು ಈರುಳ್ಳಿ ವ್ಯಾಪರ ಮಾಡುತ್ತಾರೆ. ಈ ಮೂರು ಗ್ರಾಮಗಳಲ್ಲಿ ನಡೆಯುವ ಸಂತೆಗೆ 10ಕ್ಕೂ ಹೆಚ್ಚು ಗ್ರಾಮಗಳ ಜನ ಭಾಗಿಯಾಗುತ್ತಾರೆ. ಸದ್ಯ ಸೋಂಕಿತ ಕುಟುಂಬ ಬಳಿ ಯಾರೆಲ್ಲ ಈರುಳ್ಳಿ ಖರೀಸಿದ್ದಾರೆ, ಅವರೆಲ್ಲ ಆಂತಕದಲ್ಲಿದ್ದಾರೆ. ನಮಗೂ ಎಲ್ಲಿ ಸೋಂಕು ತಗುಲಿದೆಯೋ ಎಂಬ ದುಗುಡದಲ್ಲಿದ್ದಾರೆ.