Tag: ತಬ್ಲಿಘಿ

  • ತಬ್ಲಿಘಿ ಸಭೆಗೆ ತೆರಳಿದ್ದವರು ದಯವಿಟ್ಟು ಕ್ವಾರಂಟೈನ್‌ನಲ್ಲಿರಿ: ಮಾಜಿ ಡಿಸಿಎಂ ಮನವಿ

    ತಬ್ಲಿಘಿ ಸಭೆಗೆ ತೆರಳಿದ್ದವರು ದಯವಿಟ್ಟು ಕ್ವಾರಂಟೈನ್‌ನಲ್ಲಿರಿ: ಮಾಜಿ ಡಿಸಿಎಂ ಮನವಿ

    ತುಮಕೂರು: ತಬ್ಲಿಘಿ ಸಭೆಗೆ ತೆರಳಿದ್ದವರಿಗೆ ಕ್ವಾರಂಟೈನ್ ನಲ್ಲಿರುವಂತೆ ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಮನವಿ ಮಾಡಿದ್ದಾರೆ.

    ತುಮಕೂರು ಕಾಂಗ್ರೆಸ್ ಹೆಲ್ಪ್ ಲೈನ್ ಲೋಕಾರ್ಪಣೆ ಬಳಿಕ ಮಾತನಾಡಿದ ಅವರು, ಮುಸ್ಲಿಮರು ಯಾರು ತಬ್ಲಿಘಿ ಸಭೆ ಹೋಗಿದ್ದೀರೋ ಅವರು ತಕ್ಷಣ ಹೆಲ್ತ್ ಆಫೀಸರನ್ನು ಸಂಪರ್ಕ ಮಾಡುವಂತೆ ಸಲಹೆ ನೀಡಿದ್ದಾರೆ.

    ಆರೋಗ್ಯ ಅಧಿಕಾರಿಗಳು ನಿಮ್ಮ ರಕ್ತದ ಸ್ಯಾಂಪಲ್ ಪಡೆದು ಹಾಸನ ಅಥವಾ ಬೆಂಗಳೂರಿಗೆ ಕಳಿಸ್ತಾರೆ. ಅದಕ್ಕಾಗಿ ಯಾವುದೇ ಆತಂಕಪಡಬಾರದು ಎಂದರು.

    ಮೈನಾರಿಟಿ ಸ್ನೇಹಿತರು ಹೋಗಬಾರದಾಗಿತ್ತು, ಸಭೆ ಮಾಡಬಾರದಾಗಿತ್ತು ಅನ್ನೊದೆಲ್ಲಾ ಈಗ ಬೇಡ. ದೆಹಲಿ ಸರ್ಕಾರ ಅನುಮತಿ ಇಲ್ಲದ ಸಭೆ ಮಾಡಿದ್ದರೆ ಅವರು ಕಾನೂನು ಕ್ರಮ ಕೈಗೊಳ್ತಾರೆ. ಆ ತಲೆ ನೋವು ನಮಗೆ ಬೇಡ ಎಂದು ಅಲ್ಪಸಂಖ್ಯಾತರ ಪರ ಬ್ಯಾಟ್ ಬೀಸಿದರು.

    ಯಾರು ನಮ್ಮ ಜಿಲ್ಲೆಗೆ ಬಂದಿದ್ದಾರೆ ಅವರು ಮಾಹಿತಿಕೊಡದೇ ಇದ್ದರೆ ತಪ್ಪಾಗುತ್ತೆ. ದಯವಿಟ್ಟು ನೀವು ಮಾಹಿತಿ ಕೊಟ್ಟು ಐಸೋಲೇಷನ್ ಆಗಬೇಕು. ರೋಗದ ಲಕ್ಷಣ ಕಂಡು ಬಂದ್ರೆ ತಕ್ಷಣ ಆರೋಗ್ಯಾಧಿಕಾರಿ ಭೇಟಿ ಮಾಡುವಂತೆ ಇದೇ ವೇಳೆ ತಿಳಿಸಿದರು.

  • ದೇಶದಲ್ಲಿ 24 ಗಂಟೆಯಲ್ಲಿ ಕೊರೊನಾಗೆ 30 ಮಂದಿ ಬಲಿ- 693 ಜನರಿಗೆ ಸೋಂಕು ದೃಢ

    ದೇಶದಲ್ಲಿ 24 ಗಂಟೆಯಲ್ಲಿ ಕೊರೊನಾಗೆ 30 ಮಂದಿ ಬಲಿ- 693 ಜನರಿಗೆ ಸೋಂಕು ದೃಢ

    – ಸೋಂಕಿತರ ಸಂಖ್ಯೆ 4500ಕ್ಕೆ ಏರಿಕೆ
    – 25 ಸಾವಿರ ಜಮಾತ್ ಸಭೆ ಸಂಪರ್ಕಿತರ ಕ್ವಾರಂಟೈನ್

    ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಮತ್ತಷ್ಟು ತೀವ್ರವಾಗಿದೆ. ಸೋಂಕಿತರ ಸಂಖ್ಯೆ 4502ಕ್ಕೆ ಏರಿದ್ದು, ಸಾವಿನ ಸಂಖ್ಯೆ 129 ಆಗಿದೆ.

    ದೇಶದಲ್ಲಿ ಒಂದೇ ದಿನ 693 ಮಂದಿಗೆ ಸೋಂಕು ದೃಢವಾಗಿದ್ದು, 24 ಗಂಟೆಯಲ್ಲಿ 30 ಮಂದಿ ಸಾವನ್ನಪ್ಪಿದ್ದಾರೆ. 291 ಜನ ಸೋಂಕಿನಿಂದ ಗುಣ ಮುಖರಾಗಿದ್ದಾರೆ. 1,445 ಕೇಸ್‍ಗಳು ಜಮಾತ್‍ಗೆ ಸಂಬಂಧಿಸಿದ್ದು, ತಬ್ಲಿಘಿಗಳು ಮತ್ತು ಅವರ ಸಂಪರ್ಕದಲ್ಲಿರುವ 25,500 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಜೊತೆಗೆ 1,750 ತಬ್ಲಿಘಿ ಕಾರ್ಯಕರ್ತರನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ ಅಂತ ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

    ಕೊರೊನಾಗೆ ಬಲಿಯಾದವರ ಪೈಕಿ ಶೇ.63ರಷ್ಟು 60 ವರ್ಷ ಮೇಲ್ಪಟ್ಟವರೇ ಆಗಿದ್ದಾರೆ. ಸೋಂಕಿತರ ಪೈಕಿ ಶೇ.76 ರಷ್ಟು ಪುರುಷರು, ಶೇ.24 ರಷ್ಟು ಮಹಿಳೆಯರು ಇದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ವಿವರ ನೀಡಿದೆ.

    ಇದೇ ವೇಳೆ 5 ಲಕ್ಷ ರ‍್ಯಾಪಿಡ್ ಟೆಸ್ಟ್ ಕಿಟ್‍ಗಳಿಗೆ ಆರ್ಡರ್ ಮಾಡಲಾಗಿದ್ದು, 2.5 ಲಕ್ಷ ಕಿಟ್‍ಗಳು ಈ ತಿಂಗಳಲ್ಲಿ ಬರಲಿವೆ ಅಂತ ಐಸಿಎಂಆರ್ ಹೇಳಿದೆ. ಮುಂಬೈನ ವೋಕ್ಹಾರ್ಡ್ ಆಸ್ಪತ್ರೆಯ 26 ನರ್ಸ್ ಗಳು, ಮೂವರು ವೈದ್ಯರಿಗೆ ಕೊರೊನಾ ಸೋಂಕಾಗಿದ್ದು, ಆಸ್ಪತ್ರೆಯನ್ನೇ ಬಂದ್ ಮಾಡಲಾಗಿದೆ.

    ಯಾವ ರಾಜ್ಯದಲ್ಲಿ ಎಷ್ಟು ಸೋಂಕಿತರು?
    ಮಹಾರಾಷ್ಟ್ರ        781 (33 ಏರಿಕೆ)
    ತಮಿಳುನಾಡು     621 (50 ಏರಿಕೆ)
    ದೆಹಲಿ                523 (23 ಏರಿಕೆ)
    ಕೇರಳ               327 (13 ಏರಿಕೆ)
    ಉತ್ತರ ಪ್ರದೇಶ   305 (27 ಏರಿಕೆ)

    ಈ ಮಧ್ಯೆ ಸೆಲೆಬ್ರಿಟಿಗಳು, ರಾಜಕೀಯ ಗಣ್ಯರ ವಲಯದಲ್ಲಿ ತೀವ್ರ ಆತಂಕ ಸೃಷ್ಟಿಸಿದ್ದ ಬಾಲಿವುಡ್ ಗಾಯಕಿ ಕನ್ನಿಕಾ ಕಪೂರ್, ಕೊರೊನಾ ಸೋಂಕಿನಿಂದ ಚೇತರಿಕೆ ಕಂಡಿದ್ದು ಡಿಸ್ಚಾರ್ಜ್ ಆಗಿದ್ದಾರೆ. 6ನೇ ಬಾರಿ ನಡೆಸಿದ ಪರೀಕ್ಷೆಯಲ್ಲಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ.

  • ದೆಹಲಿಗೆ ಹೋಗಿದ್ದ ಹಾವೇರಿಯ 12 ಜನರ ವರದಿ ನೆಗೆಟಿವ್

    ದೆಹಲಿಗೆ ಹೋಗಿದ್ದ ಹಾವೇರಿಯ 12 ಜನರ ವರದಿ ನೆಗೆಟಿವ್

    ಹಾವೇರಿ: ಪತ್ತೆಯಾದ ಕೊರೊನಾ ಪ್ರಕರಣಗಳಲ್ಲಿ ದೆಹಲಿಯ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದವರ ಸಂಖ್ಯೆಯೇ ಹೆಚ್ಚಿದ್ದು, ಹೀಗಾಗಿ ದೆಹಲಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದವರ ಕುರಿತು ದೇಶದೆಲ್ಲೆಡೆ ಭಯ ಶುರುವಾಗಿದೆ. ಹಾವೇರಿ ಜಿಲ್ಲೆಯ 12 ಜನ ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇವರ ವರದಿ ನೆಗೆಟಿವ್ ಬಂದಿದೆ. ಹೀಗಾಗಿ ಜಿಲ್ಲೆಯ ಜನತೆ ನಿಟ್ಟುಸಿರು ಬಿಡುವಂತಾಗಿದೆ.

    ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ದೆಹಲಿಗೆ ಹೋಗಿ ಬಂದಿದ್ದ ಜಿಲ್ಲೆಯ 12 ಜನರ ಗಂಟಲು ದ್ರವ ಹಾಗೂ ರಕ್ತದ ಮಾದರಿಯನ್ನು ಆರೋಗ್ಯ ಇಲಾಖೆ ಶನಿವಾರ ಶಿವಮೊಗ್ಗ ಲ್ಯಾಬ್‍ಗೆ ಕಳುಹಿಸಿತ್ತು. ನಿನ್ನೆ ಕಳುಹಿಸಿದ್ದ ಹನ್ನೆರಡು ಜನರ ವರದಿ ಆರೋಗ್ಯ ಇಲಾಖೆ ಕೈ ಸೇರಿದ್ದು, ಎಲ್ಲವೂ ನೆಗಟಿವ್ ಆಗಿದೆ.

    ಹನ್ನೆರಡು ಜನರಲ್ಲಿ ಹಿಂದೂ, ಮುಸ್ಲಿಂ ಎರಡೂ ಸಮುದಾಯದ ಜನರಿದ್ದು, ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಇಲಾಖೆ 12 ಜನರ ಸ್ಯಾಂಪಲ್ಸ್ ಗಳನ್ನ ಶಿವಮೊಗ್ಗ ಲ್ಯಾಬ್ ಗೆ ಕಳಿಸಿತ್ತು. ಹನ್ನೆರಡು ಜನರ ವರದಿಯೂ ನೆಗಟಿವ್ ಬಂದಿದೆ.

  • ನಾವು ಹೇಳಿದ ಸೌಲಭ್ಯ ಕೊಡ್ಲಿಲ್ಲ ಅಂದ್ರೆ ನಿಮ್ಗೆ ಕೊರೊನಾ ಹಬ್ಬಿಸ್ತೀವಿ –  ಬ್ರಿಮ್ಸ್ ಸಿಬ್ಬಂದಿಗೆ ತಬ್ಲಿಘಿಗಳ ಬೆದರಿಕೆ

    ನಾವು ಹೇಳಿದ ಸೌಲಭ್ಯ ಕೊಡ್ಲಿಲ್ಲ ಅಂದ್ರೆ ನಿಮ್ಗೆ ಕೊರೊನಾ ಹಬ್ಬಿಸ್ತೀವಿ –  ಬ್ರಿಮ್ಸ್ ಸಿಬ್ಬಂದಿಗೆ ತಬ್ಲಿಘಿಗಳ ಬೆದರಿಕೆ

    ಬೀದರ್: ದೆಹಲಿಯ ಧಾರ್ಮಿಕ ಕಾರ್ಯಕ್ರಮದಲ್ಲಿ ಗಿಯಾಗಿದ್ದವರು ಉತ್ತರ ಪ್ರದೇಶದ ಐಸೋಲೇಷನ್ ವಾರ್ಡ್‍ಗಳಲ್ಲಿ ಉದ್ಧಟತನ ತೋರಿದ್ದಂತೆಯೇ ರಾಜ್ಯದಲ್ಲೂ ನಡೆದುಕೊಳ್ಳುತ್ತಿದ್ದಾರೆ. ಬೀದರಿನ ಬ್ರೀಮ್ಸ್ ಐಸೋಲೇಷನ್ ವಾರ್ಡ್‍ನಲ್ಲಿರುವ 10 ಜನ ತಬ್ಲಿಘಿ ಸೋಂಕಿತರು, ಮನೆ ಊಟ-ಹೈಫೈ ಕೊಠಡಿ ಬೇಕು ಅಂತ ಕಿರಿಕಿರಿ ಮಾಡುತ್ತಿದ್ದಾರೆ.
    ನಾವು ಹೇಳುವ ಸೌಲಭ್ಯ ಕೊಡ್ಲಿಲ್ಲ ಅಂದ್ರೆ ವೈದ್ಯರು, ಸಿಬ್ಬಂದಿಗೆ ಕೊರೊನಾ ಹಬ್ಬಿಸುತ್ತೇವೆ ಎಂದು ಬೆದರಿಕೆ ಹಾಕ್ತಿದ್ದಾರೆ. ಈ ಜಮಾತ್ ದೂರ್ತರ ವರ್ತನೆಯಿಂದ ವೈದ್ಯ-ಸಿಬ್ಬಂದಿ ಹೈರಾಣಾಗಿ ಹೋಗಿದ್ದಾರೆ.
    ಈ ಬಗ್ಗೆ, ಬೀದರ್ ಆರೋಗ್ಯಾಧಿಕಾರಿ ವಿ.ಜಿ. ರೆಡ್ಡಿ ಅವರು ಪಬ್ಲಿಕ್‍ಟಿವಿ ಜೊತೆ ಮಾತನಾಡಿ ಸೋಂಕು ಹರಡುವ ಸಾಧ್ಯತೆಯಿಂದಾಗಿ ಮನೆಯಿಂದ ಊಟ ನೀಡಲು ಸಾಧ್ಯವಿಲ್ಲ. ಎಲ್ಲರಿಗೂ ಆಸ್ಪತ್ರೆಯ ಊಟವನ್ನೇ ನೀಡಲಾಗುತ್ತಿದೆ ಎಂದು ಹೇಳಿದ್ದೇವೆ. ಅಷ್ಟೇ ಅಲ್ಲದೇ ನಮ್ಮ ವೈದ್ಯಕೀಯ ಸಿಬ್ಬಂದಿಗೂ ತಾಳ್ಮೆಯಿಂದ ವರ್ತಿಸುವಂತೆ ಸೂಚಿಸಿದ್ದೇವೆ ಎಂದು ತಿಳಿಸಿದ್ದಾರೆ.  ಇದನ್ನೂ ಓದಿ:  ಮತ್ತೆ ತಬ್ಲಿಘಿಗಳ ಹುಚ್ಚಾಟ – ಗಾಜಿಯಾಬಾದ್ ಬಳಿಕ ಕಾನ್ಪುರ, ಲಕ್ನೋದಿಂದ ದೂರು