Tag: ತಬ್ಲಿಘಿಗಳು

  • ಬೆಂಗಳೂರು ಸ್ಲಂಗಳಿಗೆ ಕೊರೊನಾ ಹಂಚಿದ್ದು ತಬ್ಲಿಘಿಗಳು: ಶೋಭಾ ಕರಂದ್ಲಾಜೆ

    ಬೆಂಗಳೂರು ಸ್ಲಂಗಳಿಗೆ ಕೊರೊನಾ ಹಂಚಿದ್ದು ತಬ್ಲಿಘಿಗಳು: ಶೋಭಾ ಕರಂದ್ಲಾಜೆ

    ಉಡುಪಿ: ದೆಹಲಿ ಮತ್ತು ಮಹಾರಾಷ್ಟ್ರದಿಂದ ಇಡೀ ದೇಶಕ್ಕೆ ಕೊರೊನಾ ಹಬ್ಬಿದೆ. ಬೆಂಗಳೂರು ಸ್ಲಂಗಳಿಗೆ ತಬ್ಲಿಘಿಗಳು ಉದ್ದೇಶ ಪೂರ್ವಕವಾಗಿ ಸೋಂಕು ಪಸರಿಸಿದರು ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

    ಶೋಭಾ ಕರಂದ್ಲಾಜೆ ಮೋದಿ ಸರ್ಕಾರ ಆರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರದ ಸಾಧನೆಗಳನ್ನು ಹೇಳಿದರು. ಈ ಸಂದರ್ಭದಲ್ಲಿ ಕೊರೊನಾ ಬಗ್ಗೆ ಮಾತನಾಡಿ, ಪಾದರಾಯಣಪುರ, ಸಿದ್ಧಿಕ್ ಲೇಔಟ್‍ನಲ್ಲಿ ಉದ್ದೇಶ ಪೂರ್ವಕವಾಗಿ ಸೋಂಕು ಹಂಚಿದರು. ತಬ್ಲಿಘಿ ನಡತೆ ನೋಡಿದರೆ ಉದ್ದೇಶ ಪೂರ್ವಕವಾಗಿ ಕೊಟ್ಟಂತೆ ಕಾಣಿಸುತ್ತದೆ. ಅವರು ಉಡಾಫೆಯಿಂದ ಹಂಚಿದರೋ ನನಗೆ ಗೊತ್ತಿಲ್ಲ ಎಂದರು.

    ದೇಶದಲ್ಲಿ ಕೊರೊನಾ ಹಂಚಲು ತಬ್ಲಿಘಿಗಳಿಂದ ವ್ಯವಸ್ಥಿತ ಷಡ್ಯಂತ್ರ ನಡೆದಂತಿದೆ. ಈ ಬಗ್ಗೆ ಸೂಕ್ತ ತನಿಖೆ ಆಗಬೇಕು. ರಾಜ್ಯ ಮತ್ತು ಕೇಂದ್ರ ಸರಕಾರವನ್ನು ನಾನೇ ಆಗ್ರಹಿಸುತ್ತೇನೆ. ಇಲ್ಲಿನ ಅನ್ನ ತಿಂದವರು ರೋಗ ಹಬ್ಬಿಸಿದರೆ, ನಿಮಗೆ ಕ್ಷಮೆ ಇಲ್ಲ. ಕುಮ್ಮಕ್ಕು ಕೊಡುವ ಜನಪ್ರತಿನಿಧಿ, ಅಧಿಕಾರಿಗಳ ಮೇಲೆ ಕೂಡ ಕ್ರಮ ಆಗಲಿ ಎಂದರು.

     

  • ತಬ್ಲಿಘಿಗಳ ಸಂಪರ್ಕದಿಂದ ಕ್ವಾರಂಟೈನ್‍ನಲ್ಲಿದ್ದ ವ್ಯಕ್ತಿ ಸಾವು – ಕೋಟೆನಾಡಿನ ಜನರಲ್ಲಿ ಹೆಚ್ಚಿದ ಆತಂಕ

    ತಬ್ಲಿಘಿಗಳ ಸಂಪರ್ಕದಿಂದ ಕ್ವಾರಂಟೈನ್‍ನಲ್ಲಿದ್ದ ವ್ಯಕ್ತಿ ಸಾವು – ಕೋಟೆನಾಡಿನ ಜನರಲ್ಲಿ ಹೆಚ್ಚಿದ ಆತಂಕ

    ಚಿತ್ರದುರ್ಗ: ಗುಜರಾತ್‍ನಿಂದ ಆಗಮಿಸಿದ್ದ ತಬ್ಲಿಘಿಗಳ ಜೊತೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಹಿನ್ನೆಲೆಯಲ್ಲಿ ಕ್ವಾರಂಟೈನ್ ಮಾಡಲಾಗಿದ್ದ 55 ವರ್ಷದ ವ್ಯಕ್ತಿ ಚಿತ್ರದುರ್ಗದಲ್ಲಿ ಸಾವನ್ನಪ್ಪಿದ್ದಾರೆ.

    ಮೇ 5ರಂದು ಗುಜರಾತ್‍ನ ಅಹಮದಾಬಾದ್‍ನಿಂದ ಚಿತ್ರದುರ್ಗಕ್ಕೆ ಬಂದಿದ್ದ 15 ಜನ ತಬ್ಲಿಘಿಗಳಲ್ಲಿ 6 ಮಂದಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿತ್ತು. ಈ ಸೋಂಕಿತರಿಗೆ ಊಟ ನೀಡಲು ಮೃತ ವ್ಯಕ್ತಿ ಬರುತ್ತಿದ್ದರು. ಈ ಹಿನ್ನೆಲೆ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದರೆಂದು ಪರಿಗಣಿಸಿ ಅವರನ್ನು ನಗರದ ಹಾಸ್ಟೆಲ್‍ನಲ್ಲಿ ಕಳೆದ 8 ದಿನಗಳಿಂದ ಕ್ವಾರಂಟೈನ್ ಮಾಡಲಾಗಿತ್ತು.

    ಹಲವು ದಿನಗಳಿಂದ ಎದೆನೋವು ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಈ 55 ವರ್ಷದ ವ್ಯಕ್ತಿಗೆ ಕ್ವಾರಂಟೈನ್‍ನಲ್ಲಿರುವಾಗ ಅಗತ್ಯ ಚಿಕಿತ್ಸೆ ಸಿಕ್ಕಿರಲಿಲ್ಲ. ಅಲ್ಲದೇ ಶನಿವಾರ ರಾತ್ರಿ ಸಹ ಎದೆ ನೋವು ಕಾಣಿಸಿಕೊಂಡಿದ್ದು, ಬೆಳಗಿನ ಜಾವ ಅವರನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯವಷ್ಟರಲ್ಲಿ ಸಾವನ್ನಪ್ಪಿದ್ದಾರೆಂದು ಹೇಳಲಾಗುತ್ತಿದೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ಚಿತ್ರದುರ್ಗ ಟಿಹೆಚ್‍ಓ ತುಳಸಿ ರಂಗನಾಥ್ ಅವರು, ಇಂದು ಸಾವನ್ನಪ್ಪಿರುವ ವ್ಯಕ್ತಿಗೆ ಕೊರೊನಾ ಸೋಂಕು ಇರಲಿಲ್ಲ. ಅವರ ವರದಿ ಸಹ ನೆಗೆಟಿವ್ ಬಂದಿದ್ದು, 14 ದಿನಗಳ ಕ್ವಾರಂಟೈನ್ ಮುಗಿಸುವ ಉದ್ದೇಶದಿಂದ ಹಾಸ್ಟೆಲ್ ನಲ್ಲಿದ್ದರು. ಅವರಿಗೆ ಡಯಾಬಿಟಿಸ್, ಬಿಪಿ ಸಹ ಇತ್ತು. ಶನಿವಾರ ಜಿಲ್ಲಾಸ್ಪತ್ರೆಗೆ ಕರೆದೊಯ್ದು ವೈದ್ಯರಿಂದ ಸೂಕ್ತ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಇಂದು ಬೆಳಗಿನ ಜಾವ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.

    ಅವರಿಗೆ ಕೊರೊನಾ ಲಕ್ಷಣಗಳು ಇಲ್ಲದ ಹಿನ್ನೆಲೆಯಲ್ಲಿ ಈಗಾಗಲೇ ಅವರ ಕುಟುಂಬಸ್ಥರಿಗೆ ಮೃತ ದೇಹವನ್ನು ಹಸ್ತಂತರಿಸಲಾಗಿದೆ. ಅವರ ಸಂಪ್ರದಾಯ, ವಿಧಿ ವಿಧಾನಗಳ ಪ್ರಕಾರ ಮೃತರ ಅಂತ್ಯಸಂಸ್ಕಾರ ನೆರವೇರಲಿದೆ. ಒಂದು ವೇಳೆ ಅವರಲ್ಲಿ ಸೋಂಕು ಪತ್ತೆಯಾಗಿದ್ದರೆ ಆರೋಗ್ಯ ಇಲಾಖೆ ತಂಡವೇ ಎಲ್ಲಾ ವಿಧಿ ವಿಧಾನಗಳನ್ನು ನೆರವೇರಿಸುತ್ತಿತ್ತು ಎಂದು ಟಿಹೆಚ್‍ಓ ಸ್ಪಷ್ಟಪಡಿಸಿದ್ದಾರೆ.

    ಸಾವನ್ನಪ್ಪಿರುವ ವ್ಯಕ್ತಿಯನ್ನು ಚಿತ್ರದುರ್ಗ ನಗರದ ಖಾಸಗಿ ಅಂಗಡಿಯ ಮಾಲಿಕರೆಂದು ಗುರುತಿಸಲಾಗಿದ್ದು, ಜೆಸಿಆರ್ ಬಡಾವಣೆಯಲ್ಲಿ ವಾಸವಾಗಿದ್ದರು ಎಂದು ತಿಳಿದು ಬಂದಿದೆ. ಆದರೆ ತಬ್ಲಿಘಿಗಳ ಪ್ರಾಥಾಮಿಕ ಸಂಪರ್ಕದಲ್ಲಿದ್ದ ವ್ಯಕ್ತಿ ಸಾವಿನಿಂದಾಗಿ ಚಿತ್ರದುರ್ಗದ ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಿದ್ದು, ಲಾಕ್‍ಡೌನ್ ಸಡಿಲಿಕೆಯೇ ಬೇಡವೆಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

  • ತಬ್ಲಿಘಿಗಳಿಂದ ಶಿವಮೊಗ್ಗಕ್ಕೂ ವಕ್ಕರಿಸಿದ ಕೊರೊನಾ – 8 ಸೋಂಕಿತ ಪ್ರಕರಣ ಪತ್ತೆ

    ತಬ್ಲಿಘಿಗಳಿಂದ ಶಿವಮೊಗ್ಗಕ್ಕೂ ವಕ್ಕರಿಸಿದ ಕೊರೊನಾ – 8 ಸೋಂಕಿತ ಪ್ರಕರಣ ಪತ್ತೆ

    – ಜಿಲ್ಲೆಯ ಜನರು ಎಚ್ಚರಿಕೆ ತಪ್ಪಬೇಡಿ ಎಂದ ಈಶ್ವರಪ್ಪ

    ಶಿವಮೊಗ್ಗ: ಇಷ್ಟು ದಿನ ಗ್ರೀನ್ ಝೋನ್‍ನಲ್ಲಿದ್ದ ಶಿವಮೊಗ್ಗ ಜಿಲ್ಲೆ ಈಗ ರೆಡ್ ಝೋನ್‍ಗೆ ಬಂದಿದ್ದು, ಗುಜರಾತ್‍ನ ಅಹಮದಾಬಾದ್‍ನಿಂದ ಜಿಲ್ಲೆಗೆ ವಾಪಸ್ ಬಂದಿದ್ದ 9 ಮಂದಿ ತಬ್ಲಿಘಿಗರಲ್ಲಿ 8 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

    ಇಷ್ಟು ದಿನ ಜಿಲ್ಲಾಡಳಿತ, ತಾಲೂಕಾಡಳಿತ ಹಾಗೂ ಗ್ರಾಮ ಪಂಚಾಯ್ತಿ ಸಿಬ್ಬಂದಿ ಜಿಲ್ಲೆಯಲ್ಲಿ ಕೊರೊನಾ ವೈರಸ್ ಪ್ರಕರಣಗಳು ವರದಿಯಾಗದಂತೆ ಎಚ್ಚರಿಕೆ ವಹಿಸಿದ್ದರು. ಆದರೆ ಈಗ ಹೊರ ರಾಜ್ಯದಿಂದ ಜಿಲ್ಲೆಗೆ ವಾಪಸ್ ಬಂದಿರುವ ಮಂದಿಯಿಂದ ಜಿಲ್ಲೆಯಲ್ಲಿ ಕೊರೊನಾ ಭೀತಿ ಆರಂಭವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಈಶ್ವರಪ್ಪನವರು ಜಿಲ್ಲೆಯಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ವರದಿಯಾಗಿದೆ. ಹೀಗಾಗಿ ಜಿಲ್ಲೆಯ ಜನರು ಎಚ್ಚರಿಕೆ ತಪ್ಪಬಾರದು. ಸಾಮಾಜಿಕ ಅಂತರ ಕಾಯ್ದುಕೊಂಡು ಸುರಕ್ಷಿತವಾಗಿರಿ ಎಂದು ಎಚ್ಚರಿಸಿದ್ದಾರೆ.

    289 ಮಂದಿ ಹೊರ ರಾಜ್ಯಗಳಿಂದ ಜಿಲ್ಲೆಗೆ ವಾಪಸ್ ಬಂದಿದ್ದಾರೆ. ಅವರೆಲ್ಲರನ್ನೂ ಕ್ವಾರಂಟೈನ್‍ನಲ್ಲಿ ಇಡಲಾಗಿದೆ. ಕೊರೊನಾ ದೃಢಪಟ್ಟ 8 ಸೋಂಕಿತರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕ್ವಾರಂಟೈನ್‍ನಲ್ಲಿ ಇರುವ ಉಳಿದವರನ್ನು ಬೇರೆ ಬೇರೆ ಜಾಗದಲ್ಲಿ ಇರಿಸಲಾಗಿದೆ. ಅಹಮ್ಮದಾಬಾದ್‍ನಿಂದ ಬಂದವರಿಂದ ಈ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಜನರು ಜಿಲ್ಲಾಡಳಿತದ ಸಲಹೆ, ನಿಯಮವನ್ನು ಪಾಲಿಸಿ ಸಹಕರಿಸಿ ಎಂದು ಸಚಿವರು ಹೇಳಿದ್ದಾರೆ.

    ಸೋಂಕಿತರ ವಿವರ:
    ರೋಗಿ 808: ಶಿವಮೊಗ್ಗದ ಶಿಕಾರಿಪುರದ 65 ವರ್ಷದ ವೃದ್ಧ. ಅಹಮದಾಬಾದ್, ಗುಜರಾತ್‍ಗೆ ಪ್ರಯಾಣಿಸಿದ್ದರು.
    ರೋಗಿ 809: ಶಿವಮೊಗ್ಗದ ಶಿಕಾರಿಪುರದ 65 ವರ್ಷದ ವೃದ್ಧ. ಅಹಮದಾಬಾದ್, ಗುಜರಾತ್‍ಗೆ ಪ್ರಯಾಣಿಸಿದ್ದರು.
    ರೋಗಿ-810: ಶಿವಮೊಗ್ಗ ಶಿಕಾರಿಪುರದ 18 ವರ್ಷದ ಯುವಕ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ.
    ರೋಗಿ-811: ಶಿವಮೊಗ್ಗ ಶಿಕಾರಿಪುರದ 56 ವರ್ಷದ ಪುರುಷ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ.
    ರೋಗಿ-812: ಶಿವಮೊಗ್ಗ ಶಿಕಾರಿಪುರದ 43 ವರ್ಷದ ಪುರುಷ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ.
    ರೋಗಿ-813: ಶಿವಮೊಗ್ಗ ಶಿಕಾರಿಪುರದ 25 ವರ್ಷದ ಯುವಕ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ.
    ರೋಗಿ-814: ಶಿವಮೊಗ್ಗ ತೀರ್ಥಹಳ್ಳಿಯ 27 ವರ್ಷದ ಯುವಕ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ.
    ರೋಗಿ-815: ಶಿವಮೊಗ್ಗ ಶಿಕಾರಿಪುರದ 20 ವರ್ಷದ ಯುವಕ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ.

  • ತಬ್ಲಿಘಿಗಳ ನೆಗೆಟಿವ್ ವರದಿ ಬಗ್ಗೆ ಡಿಸಿ ಅನುಮಾನ- ನಕಲಿ ದಾಖಲೆ ಸೃಷ್ಟಿ ಸಾಧ್ಯತೆ

    ತಬ್ಲಿಘಿಗಳ ನೆಗೆಟಿವ್ ವರದಿ ಬಗ್ಗೆ ಡಿಸಿ ಅನುಮಾನ- ನಕಲಿ ದಾಖಲೆ ಸೃಷ್ಟಿ ಸಾಧ್ಯತೆ

    ತುಮಕೂರು: ಗುಜರಾತಿನಿಂದ ಬಂದ ತಬ್ಲಿಘಿಗಳ ನೆಗೆಟಿವ್ ವರದಿ ಬಗ್ಗೆ ತುಮಕೂರು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಅನುಮಾನ ವ್ಯಕ್ತಪಡಿಸಿದ್ದು, ನಕಲಿ ದಾಖಲೆ ಸೃಷ್ಟಿಸಿ ರಾಜ್ಯಕ್ಕೆ ಪ್ರವೇಶಿಸಿದ್ದಾರಾ ಎಂಬ ಅನುಮಾನವನ್ನು ಹೊರ ಹಾಕಿದ್ದಾರೆ.

    ಗುಜರಾತ್‍ನ ಅಹಮದಾಬಾದ್ ನಿಂದ ಬಂದ ತಬ್ಲಿಘಿಗಳ ಬಳಿ ಕೊರೊನಾ ನೆಗೆಟಿವ್ ಡಾಕ್ಯುಮೆಂಟ್ ಇತ್ತಾ ಅಥವಾ ನಕಲಿ ದಾಖಲೆ ಸೃಷ್ಟಿಸಿ ರಾಜ್ಯಕ್ಕೆ ಎಂಟ್ರಿ ಕೊಟ್ಟಿದ್ದಾರಾ ಎಂಬ ಚರ್ಚೆ ಇದೀಗ ನಡೆಯುತ್ತಿದೆ. ಈ ಕುರಿತು ಸ್ವತಃ ಜಿಲ್ಲಾಧಿಕಾರಿಗಳೇ ಅನುಮಾನ ವ್ಯಕ್ತಪಡಿಸಿದ್ದು, ಮಾಹಿತಿ ಕಲೆ ಹಾಕುತ್ತಿದ್ದಾರೆ.

    ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ರಾಕೇಶ್ ಕುಮಾರ್, ಅಹಮದಾಬಾದ್ ನಿಂದ ಬಂದವರು ನಕಲಿ ದಾಖಲೆ ಹೊಂದಿರುವ ಸಾಧ್ಯತೆ ಇದೆ. ಈ ಕುರಿತು ಪರಿಶೀಲನೆ ನಡೆಯುತ್ತಿದೆ. ಅಹಮದಾಬಾದ್ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ. 13 ಜನರಲ್ಲಿ 3 ಜನರಿಗೆ ಸೋಂಕು ತಗುಲಿರುವುದು ದೃಢವಾಗಿದೆ. ಈ ಮಾಹಿತಿಯನ್ನು ಅಹಮದಾಬಾದ್ ನ ಕಲೆಕ್ಟರ್ ಗೂ ಕಳುಹಿಸಲಾಗಿದೆ. ರಾಜ್ಯ ಸರ್ಕಾರಕ್ಕೂ ಇವರ ಮಾಹಿತಿ ಕಳುಹಿಸಿದ್ದೇವೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅಹಮದಾಬಾದ್ ಕಲೆಕ್ಟರ್ ನಿಂದ ತರಿಸಿಕೊಳ್ಳಲಾಗುತ್ತಿದೆ. ತಬ್ಲಿಘಿಗಳು ನೀಡಿದ ಮಾಹಿತಿ ತಪ್ಪಿದಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

    ಪಾವಗಡದಲ್ಲಿ ಹೋಮ್ ಕ್ವಾರಂಟೈನ್ ನಲ್ಲಿದ್ದ ರಾಜ್ಯದ 13 ಜನರ ವರದಿ ನೆಗೆಟಿವ್ ಎಂದು ಹೇಳಲಾಗಿತ್ತು. ಇವರಿಗೆ ಅಹಮದಾಬಾದ್ ನಲ್ಲೇ ಪರೀಕ್ಷೆ ಮಾಡಿದ ವರದಿ ಇತ್ತು. ಈಗ ಕರ್ನಾಟಕದಲ್ಲಿ ಪರೀಕ್ಷೆ ಮಾಡಿದಾಗ ಮೂವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಹೀಗಾಗಿ ನಕಲಿ ದಾಖಲೆ ಸೃಸ್ಟಿಸಿ ಇಲ್ಲಿಗೆ ಬಂದಿದ್ದಾರಾ ಎಂಬ ಅನುಮಾನ ವ್ಯಕ್ತವಾಗಿದೆ. ಈ ಮೂಲಕ ತುಮಕೂರು ಜಿಲ್ಲಾಧಿಕಾರಿ ಮಹತ್ವದ ಸುಳಿವು ನೀಡಿದ್ದಾರೆ.

    ತುಮಕೂರಿನಲ್ಲಿ ಶನಿವಾರ ನಾಲ್ಕು ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು 11 ಪ್ರಕರಣಗಳು ದೃಢಪಟ್ಟಿವೆ. ಅಹಮದಾಬಾದ್‍ನಿಂದ ಒಟ್ಟು 33 ಜನ ಚಿತ್ರದುರ್ಗ ಹಾಗೂ ತುಮಕೂರಿಗೆ ಆಗಮಿಸಿದ್ದಾರೆ. ಇವರೆಲ್ಲರನ್ನೂ ಟ್ವಾರಂಟೈನ್ ಮಾಡಲಾಗಿದೆ.

  • ಗ್ರೀನ್ ಝೋನ್ ಚಿತ್ರದುರ್ಗದಲ್ಲಿ ಮೂವರು ತಬ್ಲಿಘಿಗಳಿಗೆ ಕೊರೊನಾ

    ಗ್ರೀನ್ ಝೋನ್ ಚಿತ್ರದುರ್ಗದಲ್ಲಿ ಮೂವರು ತಬ್ಲಿಘಿಗಳಿಗೆ ಕೊರೊನಾ

    – ಅಹಮದಾಬಾದ್‍ನಲ್ಲಿ ನೆಗೆಟಿವ್, ರಾಜ್ಯದಲ್ಲಿ ಪಾಸಿಟಿವ್

    ಚಿತ್ರದುರ್ಗ: ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಕೊರೊನಾ ವಲಯಗಳ ಪಟ್ಟಿಯಲ್ಲಿ ಗ್ರೀನ್ ಝೋನ್‍ನಲ್ಲಿದ್ದ ಚಿತ್ರದುರ್ಗದಲ್ಲಿ ಮೂವರು ತಬ್ಲಿಘಿಗಳಿಗೆ ಸೋಂಕು ದೃಢಪಟ್ಟಿದೆ. ಇದರಿಂದಾಗಿ ಜಿಲ್ಲೆಯ ಜನರಲ್ಲಿ ಆತಂಕ ಶುರುವಾಗಿದೆ.

    ಗುಜರಾತ್‍ನ ಅಹಮದಾಬಾದ್‍ನಿಂದ ಮೇ 5ರಂದು ಜಿಲ್ಲೆಗೆ ಬಂದಿದ್ದ 15 ಜನ ತಬ್ಲಿಘಿಗಳ ಪೈಕಿ ಮೂವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಸದ್ಯ ಅವರನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ಕೊಡಲಾಗುತ್ತಿದೆ.

    ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿರುವ ಡಿಎಚ್‍ಓ ಡಾ.ಪಾಲಾಕ್ಷ, ಗುಜರಾತ್‍ನಿಂದ ಬಂದಿದ್ದ ಮೂವರು ತಬ್ಲಿಘಿಗಳಿಗೆ ಸೋಂಕು ಪತ್ತೆಯಾಗಿದೆ. ಉಳಿದಂತೆ 12 ಜನರ ರಿಪೋರ್ಟ್ ನೆಗೆಟಿವ್ ಬಂದಿದೆ. ಈಗಾಗಲೇ ಸೋಂಕಿತರನ್ನು ಪ್ರತ್ಯೇಕವಾಗಿರಸಲಾಗಿದೆ. ಜೊತೆಗೆ ಎಸ್‍ಜೆಎಂ ಸರ್ಕಲ್‍ನಲ್ಲಿರುವ ಸರ್ಕಾರಿ ಹಾಸ್ಟಲ್ ಪ್ರದೇಶವನ್ನು ಸೀಲ್‍ಡೌನ್ ಮಾಡಲು ಸಿದ್ಧತೆ ನಡೆಸಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ಚಿತ್ರದುರ್ಗ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ಇಂದು ಮೂವರಿಗೆ ಕೊರೊನಾ ದೃಢಪಟ್ಟಿದೆ. ಮುಂದಿನ ದಿನಗಳಲ್ಲಿ ಎಷ್ಟು ಜನರಿಗೆ ತಗಲುತ್ತದೆ ಎನ್ನುವ ಆತಂಕ ಹೆಚ್ಚಾಗಿದೆ. ಕಟ್ಟುನಿಟ್ಟಿನ ನಿಯಮ ಪಾಲನೆ ಮೂಲಕ ಜಿಲ್ಲೆ ಗ್ರೀನ್ ಝೋನ್‍ನಲ್ಲಿತ್ತು. ಆದರೆ ಈಗ ಅಹಮದಾಬಾದ್‍ನಿಂದ ಬಂದ ತಬ್ಲಿಘಿಗಳಿಂದ ಆತಂಕ ಶುರುವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಕೊರೊನಾ ಹರಡದಂತೆ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.

    ಈ ಹಿಂದೆ ಏನಾಗಿತ್ತು?:
    ಗುಜರಾತ್‍ನ ಅಹಮದಾಬಾದ್‍ನಲ್ಲಿ ಮಾರ್ಚ್ 8ರಂದು ನಡೆದ ತಬ್ಲಿಘಿ ಸಭೆಗೆ ಜಿಲ್ಲೆಯ 15 ಜನರು ತೆರಳಿದ್ದರು. ಆದರೆ ಲಾಕ್‍ಡೌನ್ ನಿಂದಾಗಿ ಅಹಮದಾಬಾದ್‍ನಲ್ಲಿ ಉಳಿದ್ದ ಅವರು ಲಾಕ್‍ಡೌನ್ ಸಡಿಲಿಕೆಯಿಂದಾಗಿ ಮೇ 4ರಂದು ಗುಜರಾತಿನಿಂದ ಪ್ರಯಾಣ ಬೆಳೆಸಿ ಮೇ 5ರಂದು ಅವರ ಸ್ವಗ್ರಾಮಗಳಿಗೆ ತೆರಳಲು ಚಿತ್ರದುರ್ಗಕ್ಕೆ ಆಗಮಿಸಿದ್ದರು. ಇದರಿಂದ ಎಚ್ಚೆತ್ತ ಜಿಲ್ಲೆಯ ಪೊಲೀಸರು ಚಿತ್ರದುರ್ಗ ತಾಲೂಕಿನ ಬೊಗಳೇರಹಟ್ಟಿ ಚೆಕ್ ಪೋಸ್ಟ್ ಬಳಿ ಅವರನ್ನು ತಡೆದು ಪರಿಶೀಲನೆ ನಡೆಸಿದ್ದರು. ಅವರೊಂದಿಗೆ ತಮಕೂರಿನ 18 ಜನ ತಬ್ಲಿಘಿಗಳು ಕೂಡ ಇದ್ದರು. ಹೀಗಾಗಿ ಅವರನ್ನು ತುಮಕೂರಿಗೆ ಕಳುಹಿಸಿ, ಜಿಲ್ಲೆಯ 15 ಜನರನ್ನು ಮಾತ್ರ  ಎಸ್‍ಜೆಎಂ ಸರ್ಕಲ್‍ನಲ್ಲಿರುವ ಸರ್ಕಾರಿ ಹಾಸ್ಟಲ್‍ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.

  • ಗ್ರೀನ್ ಝೋನ್ ಚಿತ್ರದುರ್ಗಕ್ಕೆ ಬಂದ ತಬ್ಲಿಘಿಗಳು

    ಗ್ರೀನ್ ಝೋನ್ ಚಿತ್ರದುರ್ಗಕ್ಕೆ ಬಂದ ತಬ್ಲಿಘಿಗಳು

    ಚಿತ್ರದುರ್ಗ: ಕೊರೊನಾ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳದೆ ಗ್ರೀನ್ ಝೋನ್‍ನಲ್ಲಿರು ಚಿತ್ರದುರ್ಗಕ್ಕೆ ತಬ್ಲಿಘಿಗಳು ವಾಪಸ್ ಆಗಿದ್ದಾರೆ.

    ಭಾರತದಲ್ಲಿ ಕೊರೊನಾ ಶುರುವಾದಾಗ ವಿದೇಶಕ್ಕೆ ತೆರಳಿದ್ದ ಚಿತ್ರದುರ್ಗ ಮೂಲದ ಓರ್ವ ಮಹಿಳೆಗೆ ಕೊರೊನಾ ಪಾಸಿಟಿವ್ ಬಂದಿದ್ದದಿಂದ ಜಿಲ್ಲೆಯ ಜನರು ಆತಂಕಕ್ಕೆ ಒಳಗಾಗಿದ್ದರು. ಮಹಿಳೆ ಗುಣಮುಖರಾಗಿ ಮನೆ ಸೇರಿದ ಬಳಿಕ ನಿಟ್ಟುಸಿರು ಬಿಟ್ಟಿದ್ದರು. ಅಲ್ಲಿಂದ ಇಲ್ಲಿಯವರೆಗೂ ಜಿಲ್ಲೆಯಲ್ಲಿ ಯಾರಿಗೂ ಸೋಂಕು ಕಾಣಿಸಿಕೊಳ್ಳದೆ ಗ್ರೀನ್ ಝೋನ್‍ನಲ್ಲಿದೆ. ಆದರೆ ಮಂಗಳವಾರ ಗುಜರಾತ್‍ನಿಂದ ಬಂದಿರುವ 33ಜನ ತಬ್ಲಿಘಿಗಳು ಬಂದಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ಚಿತ್ರದುರ್ಗ ಡಿಎಚ್‍ಓ ಡಾ.ಪಾಲಾಕ್ಷ ಅವರು, ಅದೃಷ್ಟವಶಾತ್ ಅವರೆಲ್ಲರೂ ಸಹ ಈಗಾಗಲೇ ಗುಜರಾತ್‍ನಲ್ಲಿ ತಪಾಸಣೆಗೊಳಪಟ್ಟಿದ್ದು, 30 ದಿನಗಳ ಕ್ವಾರಂಟೈನ್ ಸಹ ಮುಗಿಸಿದ್ದಾರೆ. ಆದರೂ ಅವರನ್ನು ಮುಂಜಾಗ್ರತಾಕ್ರಮವಾಗಿ ಚಿತ್ರದುರ್ಗದ ಸರ್ಕಾರಿ ಹಾಸ್ಟೆಲ್‍ನಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಹಾಗೆಯೇ ಮತ್ತೊಮ್ಮೆ ಅವರನ್ನು ಕೊರೊನಾ ಟೆಸ್ಟ್ ಗೆ ಒಳಪಡಿಸುವುದರ ಜೊತೆಗೆ ಅವರ ಮೇಲೆ ಒಂದು ವಾರಗಳ ಕಾಲ ನಿಗಾ ವಹಿಸಲಾಗುವುದು ಎಂದು ತಿಳಿಸಿದ್ದಾರೆ.

    ಚಿತ್ರದುರ್ಗಕ್ಕೆ ವಾಪಸ್ ಆಗಿರುವ ತಬ್ಲಿಘಿಗಳೆಲ್ಲರೂ ಚಿತ್ರದುರ್ಗ, ತುಮಕೂರು ಮೂಲದವರಾಗಿದ್ದು, ಅವರಲ್ಲಿ ಚಿತ್ರದುರ್ಗದ 15 ಜನ ಹಾಗೂ ತುಮಕೂರಿನ 18 ಜನ ತಬ್ಲಿಗಿಗಳು ಒಂದೇ ಬಸ್‍ನಲ್ಲಿ ವಾಪಸ್ ಆಗಿದ್ದಾರೆ. ಅವರು ಗುಜರಾತ್‍ನ ಅಹಮದಾಬಾದ್‍ನಲ್ಲಿ ಮಾರ್ಚ್ 8ರಂದು ನಡೆದ ತಬ್ಲಿಘಿ ಸಭೆಗೆ ತೆರಳಿದ್ದರು. ಲಾಕ್‍ಡೌನ್ ಸಡಿಲಿಕೆಯಿಂದಾಗಿ ಸೋಮವಾರ ಗುಜರಾತಿನಿಂದ ಪ್ರಯಾಣ ಬೆಳೆಸಿ ಇಂದು ಅವರ ಸ್ವಗ್ರಾಮಗಳಿಗೆ ತೆರಳಲು ಆಗಮಿಸಿದ್ದಾರೆ. ಆದರೆ ಎಚ್ಚೆತ್ತ ಜಿಲ್ಲೆಯ ಪೊಲೀಸರು ಚಿತ್ರದುರ್ಗ ತಾಲೂಕಿನ ಬೊಗಳೇರಹಟ್ಟಿ ಚೆಕ್ ಪೋಸ್ಟ್ ಬಳಿ ಅವರನ್ನು ತಡೆದು ಪರಿಶೀಲನೆ ನಡೆಸಿದ್ದಾರೆ. ಹೀಗಾಗಿ ಕೋಟೆನಾಡಿನ ಮಂದಿ ಆತಂಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯಾಧಿಕಾರಿ ಮನವಿ ಮಾಡಿದ್ದಾರೆ.

    ಜಿಲ್ಲಾ ಆರೋಗ್ಯಾಧಿಕಾರಿಗಳು ಕೂಡ ಚಿತ್ರದುರ್ಗದ 15 ಜನರನ್ನು ಮಾತ್ರ ಇಲ್ಲಿ ಕ್ವಾರಂಟೈನ್ ಮಾಡಿದ್ದು, 18 ಜನರನ್ನು ತುಮಕೂರಿಗೆ ಕಳಿಸಿದ್ದಾರೆ. ಆದರೆ ಈವರೆಗೆ ನಿರಾತಂಕವಾಗಿ ಯಾವುದೇ ಭಯವಿಲ್ಲದೇ ನಿರ್ಭಯವಾಗಿ ಓಡಾಡುತ್ತಿದ್ದ ಚಿತ್ರದುರ್ಗದ ಜನರು ತಬ್ಲಿಘಿಗಳ ಆಗಮನದಿಂದ ಮತ್ತೆ ಚಿಂತಾಕ್ರಾಂತರಾಗಿದ್ದಾರೆ.

  • ಕ್ವಾರಂಟೈನ್ ಕೋಣೆ ಮುಂದೆಯೇ ಮಲವಿಸರ್ಜಿಸಿ ವಿಕೃತಿ – ತಬ್ಲಿಘಿಗಳ ವಿರುದ್ಧ ಕೇಸ್

    ಕ್ವಾರಂಟೈನ್ ಕೋಣೆ ಮುಂದೆಯೇ ಮಲವಿಸರ್ಜಿಸಿ ವಿಕೃತಿ – ತಬ್ಲಿಘಿಗಳ ವಿರುದ್ಧ ಕೇಸ್

    ನವದೆಹಲಿ: ಕೊರೊನಾ ಕ್ವಾರಂಟೈನ್ ಕೋಣೆಯ ಮುಂದೆಯೇ ದೆಹಲಿ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ ಇಬ್ಬರು ತಬ್ಲಿಘಿಗಳು ಕ್ವಾರಂಟೈನ್ ಕೊಠಡಿಯ ಮುಂದೆಯೇ ಮಲವಿಸರ್ಜನೆ ಮಾಡಿ ವಿಕೃತಿ ಮರೆದಿರುವಂತಹ ಘಟನೆ ನರೇಲಾ ಕ್ವಾರಂಟೈನ್ ಕೇಂದ್ರದಲ್ಲಿ ನಡೆದಿದೆ.

    ಈ ಬಗ್ಗೆ ಮಾಹಿತಿ ನೀಡಿರುವ ದೆಹಲಿ ಪೊಲೀಸರು, ಕ್ವಾರಂಟೈನ್ ಕೋಣೆಯ ಮುಂದೆ ಮುಲವಿಸರ್ಜನೆ ಮಾಡಿದ ಇಬ್ಬರ ಮೇಲೆ ದೂರು ದಾಖಲಾಗಿದೆ. ಈ ಇಬ್ಬರು ಆರೋಪಿಗಳು ಉತ್ತರ ಪ್ರದೇಶದ ಬರಾಬಂಕಿ ನಿವಾಸಿಗಳಾಗಿದ್ದು, ಕಳೆದ ತಿಂಗಳು ದೆಹಲಿಯ ನಿಜಾಮುದ್ದೀನ್‍ನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದರು ಎಂದು ಮಾಹಿತಿ ನೀಡಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಕ್ವಾರಂಟೈನ್ ಸೆಂಟರ್‍ನ ಸಿಬ್ಬಂದಿ ಅವರು ಕ್ವಾರಂಟೈನ್ ಕೋಣೆ 212 ಮುಂದೆಯೇ ಮಲವಿಸರ್ಜನೆ ಮಾಡಿದ್ದಾರೆ. ಈ ಬಗ್ಗೆ ನಾವು ಪೊಲೀಸರಿಗೆ ಮಾಹಿತಿ ನೀಡಿದ್ದೇವು. ಅವರ ಈ ಕೃತ್ಯದಿಂದ ನಮಗೆ ಅಸಹ್ಯವಾಗಿದೆ. ಇಲ್ಲಿರುವ ಕೆಲ ಕೊರೊನಾ ಶಂಕಿತರು ಆರೋಗ್ಯ ಇಲಾಖೆ ಮತ್ತು ಸರ್ಕಾರ ನೀಡುತ್ತಿರುವ ಕೊರೊನಾ ನಿಯಂತ್ರಿಸಲು ತೆಗೆದುಕೊಂಡ ಕ್ರಮಗಳನ್ನು ಪಾಲಿಸುತ್ತಿಲ್ಲ ಎಂದು ದೂರಿದ್ದಾರೆ.

    ಇವರು ನಾವು ಹೇಳಿದ್ದನ್ನು ಕೇಳುತ್ತಿಲ್ಲ. ಸರ್ಕಾರದ ನಿಯಮದಂತೆ ನಡೆಯುತ್ತಿಲ್ಲ. ಇದರಿಂದ ಇವರ ಜೀವಕ್ಕೂ ಅಪಾಯವಿದೆ. ಅವರ ಜೊತೆಗೆ ಬೇರೆಯವರ ಮತ್ತು ನಮ್ಮ ಪ್ರಾಣವನ್ನು ಅಪಾಯಕ್ಕೆ ತಳ್ಳುವ ಕೆಲಸ ಮಾಡುತ್ತಿದ್ದಾರೆ ಎಂದು ಆಸ್ಪತ್ರೆ ಸಿಬ್ಬಂದಿ ಆರೋಪ ಮಾಡಿದ್ದಾರೆ. ಪೊಲೀಸರು ಈಗ ಇಬ್ಬರ ಮೇಲೆ ಕೇಸ್ ದಾಖಲಿಸಿದ್ದಾರೆ.

    ಇಲ್ಲಿಯವರೆಗೆ ಮಾರ್ಚ್‍ನಲ್ಲಿ ನಡೆದ ದೆಹಲಿ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದವರ ಪೈಕಿ 400ಕ್ಕೂ ಹೆಚ್ಚು ಮಂದಿ ಕೊರೊನಾ ಪೀಡಿತರಾಗಿದ್ದಾರೆ. ಜೊತೆಗೆ 15 ಸಾವನ್ನಪ್ಪಿದ್ದಾರೆ. ಕಳೆದ ಮಾರ್ಚ್ ತಿಂಗಳು ದೆಹಲಿ ನಿಜಾಮುದ್ದೀನ್‍ನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ದೇಶದ ನಾನಾ ಭಾಗದಿಂದ ಸರಿ ಸುಮಾರು 9,000 ಜನರು ಭಾಗವಹಿಸಿದ್ದರು. ದೆಹಲಿ, ತಮಿಳುನಾಡು ಕರ್ನಾಟಕ, ಸೇರಿದಂತೆ ಹಲವಾರು ರಾಜ್ಯಗಳಿಂದ ಈ ಧಾರ್ಮಿಕ ಸಭೆಗೆ ಬಂದಿದ್ದರು.

    ದೇಶದ 4 ಸಾವಿರಕ್ಕೂ ಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣಗಳ ಪೈಕಿ 1,445 ತಬ್ಲಿಘಿ ಕಾರ್ಯಕ್ರಮದಿಂದಲೇ ದಾಖಲಾಗಿದೆ. ತಬ್ಲಿಘಿಗಳು ಮತ್ತು ಅವರ ಸಂಪರ್ಕಕ್ಕೆ ಬಂದವರನ್ನು ಸೇರಿದಂತೆ ಒಟ್ಟು 26 ಸಾವಿರ ಮಂದಿಯನ್ನು ಕ್ವಾರಂಟೈನ್ ನಲ್ಲಿ ಇಡಲಾಗಿದೆ.