Tag: ತನುಶ್ರೀ ದತ್ತಾ

  • ಬಾಲಿವುಡ್ ಮಾಫಿಯಾ ನನ್ನನ್ನು ಬೆಳೆಯಲು ಬಿಡಲಿಲ್ಲ ಎಂದ ನಟಿ ತನುಶ್ರೀ ದತ್ತ

    ಬಾಲಿವುಡ್ ಮಾಫಿಯಾ ನನ್ನನ್ನು ಬೆಳೆಯಲು ಬಿಡಲಿಲ್ಲ ಎಂದ ನಟಿ ತನುಶ್ರೀ ದತ್ತ

    ಬಿಟೌನ್ ನಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ಪದೇ ಪದೇ ಸಾಬೀತಾಗುತ್ತಿದೆ. ಈ ಹಿಂದೆ ಮೀಟೂ ಆರೋಪ ಮಾಡಿ ಬಾಲಿವುಡ್ ನಲ್ಲಿ ಭಾರೀ ಬಿರುಗಾಳಿ ಎಬ್ಬಿಸಿದ್ದ ತನುಶ್ರೀ ದತ್ತ, ಇದೀಗ ಮತ್ತೊಮ್ಮೆ ಗುಡುಗಿದ್ದಾಳೆ. ಮೀಟೂ ಆರೋಪ ಮಾಡಿದ್ದಕ್ಕೆ ತನಗಾದ ಅನ್ಯಾಯವನ್ನು ಮತ್ತೆ ತೆರೆದಿಟ್ಟಿದ್ದಾರೆ. ಈ ಆರೋಪದಿಂದ ಅವರು ಪಡೆದುಕೊಂಡಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು ಎಂದು ಮನದಾಳವನ್ನು ಬಿಚ್ಚಿಟ್ಟಿದ್ದಾರೆ.

    ತನುಶ್ರೀ ದತ್ತ ಮೊದಲ ಬಾರಿಗೆ ಬಾಲಿವುಡ್ ನಲ್ಲಿ ಮೀಟೂ ಬಿರುಗಾಳಿಯನ್ನು ಎಬ್ಬಿಸಿದ ನಟಿ. ಬಾಲಿವುಡ್ ನ ಅನೇಕ ಕಲಾವಿದರ ಮತ್ತು ತಂತ್ರಜ್ಞರ ಬಣ್ಣ ಬಯಲು ಮಾಡಿದ್ದರು. ಈ ಕುರಿತು ಅವರು ಕಾನೂನು ಕ್ರಮಕ್ಕೂ ಮುಂದಾದರು. ಆರೋಪ ಪ್ರತ್ಯಾರೋಪಗಳು ನಡೆದು ಆನಂತರ ಅನೇಕರು ಇವರಿಗೆ ಕಿರುಕುಳ ನೀಡಿದರಂತೆ. ಬಾಲಿವುಡ್ ನಲ್ಲಿ ಬೆಳೆಯಲಿಕ್ಕೆ ಬಿಡಲಿಲ್ಲವಂತೆ. ಬಾಲಿವುಡ್ ಮಾಫಿಯಾ ತಮ್ಮ ವೃತ್ತಿ ಬದುಕನ್ನೇ ಕತ್ತಲಿನಲ್ಲಿ ಇಟ್ಟಿತ್ತು ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಆಮೀರ್ ಖಾನ್ ಮನೆಯ ಔತಣ ಕೂಟದಲ್ಲಿ ಧನುಷ್‌ ನಟನೆಯ ಹಾಲಿವುಡ್ ಚಿತ್ರತಂಡ

    ಬಾಲಿವುಡ್ ಮಾಫಿಯಾದಿಂದ ಬಿಡಿಸಿಕೊಳ್ಳುವುದು ಅಷ್ಟೊಂದು ಸುಲಭವಲ್ಲ. ಅವರು ಹೇಳಿದಂತೆ ಕೇಳಿದರೆ, ಯಾರು ಬೇಕಾದರೂ ಸ್ಟಾರ್ ನಟಿಯರು ಆಗಬಹುದು ಎಂದು ಕೆಲವರನ್ನು ಮತ್ತೆ ಟೀಕಿಸಿದ್ದಾರೆ. ಆದರೆ, ಯಾವ ಮಾಫಿಯಾಗೂ ನಾನು ತಲೆಬಾಗದೇ ಇರುವ ಕಾರಣಕ್ಕಾಗಿ ನಾನಾ ರೀತಿಯ ಕಿರುಕುಳವನ್ನು ಅನುಭವಿಸಬೇಕಾಯಿತು ಎಂದು ಹೇಳಿದ್ದಾರೆ ತನುಶ್ರೀ ದತ್ತ. ಇವತ್ತಿಗೂ ಅವರು ಮೀಟು ಪ್ರಕರಣದಿಂದಾಗಿ ಸಂಕಟಗಳನ್ನು ಅನುಭವಿಸುವುದು ತಪ್ಪಿಲ್ಲ ಎಂದಿದ್ದಾರೆ ತನುಶ್ರೀ.

    Live Tv
    [brid partner=56869869 player=32851 video=960834 autoplay=true]

  • ಬಾಲಿವುಡ್ ನಟಿ ತನುಶ್ರೀ ದತ್ತಾ ಕಾರು ಅಪಘಾತ: ಗಾಯದ ಕಾಲು ತೋರಿದ ನಟಿ

    ಬಾಲಿವುಡ್ ನಟಿ ತನುಶ್ರೀ ದತ್ತಾ ಕಾರು ಅಪಘಾತ: ಗಾಯದ ಕಾಲು ತೋರಿದ ನಟಿ

    ಮೀಟೂ ಪ್ರಕರಣದ ನಂತರ ದೇಶದಾದ್ಯಂತ ಸುದ್ದಿ ಮಾಡಿದ ಬಾಲಿವುಡ್ ತಾರೆ ತನುಶ್ರೀ ದತ್ತಾ ಅವರ ಕಾರು ಅಪಘಾತವಾಗಿದೆ. ಈ ಘಟನೆಯಿಂದಾಗಿ ಅವರ ಕಾಲಿಗೆ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಅವರು ಪಾರಾಗಿದ್ದಾರೆ. ಈ ಕುರಿತು ಅವರು ಸೋಷಿಯಲ್ ಮೀಡಿಯಾದಲ್ಲೂ ಬರೆದುಕೊಂಡಿದ್ದಾರೆ. ಇದನ್ನೂ ಓದಿ : ಬೆಳ್ಳಿತೆರೆಯಲ್ಲಿ ಕಾಯಕಯೋಗಿ ಬಸವಣ್ಣ: ಯಾರೆಲ್ಲ ಪಾತ್ರ ಮಾಡಿದ್ದಾರೆ ಗೊತ್ತಾ?

    ತನುಶ್ರೀ ಅವರು ಉಜ್ಜಯಿನಿಯ ಮಹಾಕಾಲ್ ದೇವಸ್ಥಾನಕ್ಕೆ ಹೊರಟಿದ್ದರು ದಾರಿ ಮಧ್ಯೆ ಕಾರಿನ ಬ್ರೇಕ್ ಫೇಲ್ ಆಗಿದೆ. ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಕಾರು ಅಪಘಾತಕ್ಕೀಡಾಗಿದೆ. ಹೀಗಾಗಿ ಅವರ ಕಾಲಿಗೆ ಅನೇಕ ಗಾಯಗಳು ಆಗಿವೆ. ಆದರೂ, ದತ್ತಾ ದೇವರ ದರ್ಶನವನ್ನು ತಪ್ಪಿಸಿಲ್ಲ. ಆ ನೋವಿನಲ್ಲೇ ದೇವರ ದರ್ಶನ ಪಡೆದಿದ್ದಾರಂತೆ. ಇದನ್ನೂ ಓದಿ : ಚಲಿಸುವ ಬೋಟ್ ನಲ್ಲಿ ಚೆಲುವೆ ರಾಧಿಕಾ ಕುಮಾರಸ್ವಾಮಿ

    ಮಹಾಕಲ್ ದೇವಸ್ಥಾನಕ್ಕೆ ಹೋಗುವುದು ನನ್ನ ಸಂಕಲ್ಪವಾಗಿತ್ತು. ಹೀಗಾಗಿ ಕಾರು ಅಪಘಾತವಾದರೂ, ನಾನು ದೇವರ ದರ್ಶನವನ್ನು ತಪ್ಪಿಸಲಿಲ್ಲ. ನೋವಿನಿಂದ ಕೂಡಿದ ಕಾಲುಗಳಿಂದಲೇ ದೇವಸ್ಥಾನಕ್ಕೆ ಹೋದೆ. ದೇವರ ದರ್ಶನ ಮಾಡಿದೆ. ಆ ದೇವರ ಅನುಗ್ರಹದಿಂದಾಗಿ ನನಗೆ ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಅವರು ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಗ್ರ್ಯಾಮಿ ಅವಾರ್ಡ್ ಮ್ಯೂಸಿಕ್ ಕೇಳಿದಾಗ ಬಹಳ ಖುಷಿ ಆಯ್ತು: ಸಿಎಂ ಬೊಮ್ಮಾಯಿ

    ದತ್ತಾ ಅವರು ಈ ಸುದ್ದಿಯನ್ನು ಪೋಸ್ಟ್ ಮಾಡುತ್ತಿದ್ದಂತೆಯೇ ಅಭಿಮಾನಿಗಳು ಅವರಿಗೆ ಹಾರೈಸಿದ್ದಾರೆ. ಶೀಘ್ರದಲ್ಲೇ ನಿಮ್ಮ ಕಾಲಿನ ನೋವು ಕಳೆದು ಹೋಗಲಿ ಎಂದು ಪ್ರಾರ್ಥಿಸಿದ್ದಾರೆ. ಅವರ ದೈವಭಕ್ತಿಯ ಕುರಿತಾಗಿಯೂ ಹಲವರು ಕೊಂಡಾಡಿದ್ದಾರೆ.

  • ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ ನಟಿ ತನುಶ್ರೀ ದತ್ತಾ

    ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ ನಟಿ ತನುಶ್ರೀ ದತ್ತಾ

    ಮುಂಬೈ: ಬಾಲಿವುಡ್ ನಟ ನಾನಾ ಪಾಟೇಕರ್ ಮೇಲೆ ನಟಿ ತನುಶ್ರೀ ದತ್ತಾ ಮೀಟೂ ಅಭಿಯಾನದಡಿ ಹಾಕಿದ್ದ ಲೈಂಗಿಕ ಕಿರುಕುಳದ ಪ್ರಕರಣವನ್ನು ಪೊಲೀಸರು ಬಿ-ಸಮರಿ ದಾಖಲಿಸಿದ್ದರು. ಈ ಕೇಸ್ ಕ್ಲೋಸ್ ಮಾಡಿದ್ದಕ್ಕೆ ನಟಿ ತನುಶ್ರೀ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

    ಈ ಬಗ್ಗೆ ಮಾಧ್ಯಮವೊಂದಕ್ಕೆ ಮಾತನಾಡಿದ ತನುಶ್ರೀ ದತ್ತಾ ಅವರ ವಕೀಲ ನಿತಿನ್ ಸತ್ಪುತೆ, ಸಮರಿ ರಿಪೋರ್ಟ್ ಬಗ್ಗೆ ನಮಗೆ ಓಸ್ವಿವರ್ ಪೊಲೀಸ್ ಠಾಣೆಯಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಪೊಲೀಸರು ಬಿ ಅಥವಾ ಸಿ ಸಮರಿ ದಾಖಲಿಸಿಕೊಂಡರೆ ಅದು ಅಂತಿಮವಾಗುವುದಿಲ್ಲ. ಇದನ್ನು ನಾವು ನ್ಯಾಯಲಯದಲ್ಲಿ ನಿರಾಕರಿಸಬಹುದು. ಕೋರ್ಟ್‍ನಲ್ಲಿ ವಿಚಾರಣೆ ನಡೆದ ಮೇಲೆ ನ್ಯಾಯಾಲಯ ನಿರ್ಧಾರ ಮಾಡಿದರೆ, ಪೊಲೀಸರು ಮತ್ತೆ ಈ ಪ್ರಕರಣದ ಬಗ್ಗೆ ತನಿಖೆ ನಡೆಸಬೇಕು ಎಂದು ಹೇಳಿದ್ದಾರೆ.

    ನಾನಾ ಪಾಟೇಕರ್ ಅವರನ್ನು ರಕ್ಷಿಸಲು ಪೊಲೀಸರು ಅಜಾಗರೂಕತೆ ತೋರಿದ್ದಾರೆ. ಅನೇಕ ಸಾಕ್ಷಿಗಳು ಇದ್ದರೂ ಸಹ ಅವರು ತಮ್ಮ ಹೇಳಿಕೆಯಲ್ಲಿ ಅದನ್ನು ದಾಖಲಿಸಲಿಲ್ಲ. ಶೈನಿ ಶೆಟ್ಟಿ ಹೇಳಿಯನ್ನು ಭಾಗಶಃ ದಾಖಲಿಸಿಕೊಂಡಿದ್ದಾರೆ. ಪೊಲೀಸರು ಸರಿಯಾಗಿ ವಿಚಾರಣೆ ನಡೆಸಲಿಲ್ಲ. ಹಾಗಾಗಿ ನಾವು ಸಮರಿ ರಿಪೋರ್ಟ್ ತಿರಸ್ಕರಿಸುತ್ತಿದ್ದೇವೆ. ನಾವು ಬಾಂಬೈ ಹೈ ಕೋರ್ಟ್‍ನಲ್ಲಿ ರಿಟ್ ಪೆಟಿಶನ್ ದಾಖಲಿಸುತ್ತೇವೆ. ಅಲ್ಲದೆ ಈ ಪ್ರಕರಣವನ್ನು ಸಿಐಡಿ ಅಥವಾ ಬೇರೆ ಕ್ರೈಂ ಬ್ರ್ಯಾಂಚ್‍ಗೆ ವರ್ಗಾಯಿಸಲು ಹೇಳಿದ್ದೇವೆ ಎಂದು ವಕೀಲ ನಿತಿನ್ ತಿಳಿಸಿದ್ದಾರೆ.

    ಏನಿದು ಪ್ರಕರಣ?
    ಕಳೆದ ವರ್ಷ ನಟಿ ತನುಶ್ರೀ ದತ್ತಾ, ನಾನಾ ಪಾಟೇಕರ್ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿ ದೂರು ದಾಖಲಿಸಿದ್ದರು. ಆದರೆ ಪೊಲೀಸರು ಈ ಸಂಬಂಧ ನಾನಾ ಪಾಟೇಕರ್ ವಿರುದ್ಧ ಯಾವುದೇ ಆಧಾರ ಸಿಗದ ಹಿನ್ನೆಲೆ ಪ್ರಕರಣವನ್ನು ಕೈಬಿಟ್ಟಿದ್ದರು. ಈ ಮೂಲಕ ಭಾರತದಲ್ಲಿನ ಮೊದಲ ಮೀಟೂ ಪ್ರಕರಣ ಸೋಲು ಕಂಡಿತ್ತು.

    ಕಳೆದ ವರ್ಷ ತನುಶ್ರೀ ದತ್ತಾ ನಟ ನಾನಾ ಪಾಟೇಕರ್ ವಿರುದ್ಧ ತಮ್ಮ ಚಿತ್ರ `ಹಾರ್ನ್ ಓಕೆ ಪ್ಲೀಸ್’ನ ವಿಶೇಷ ಹಾಡಿನ ಶೂಟಿಂಗ್ ವೇಳೆ ಲೈಂಗಿಕ ಕಿರುಕುಳ ನೀಡಿದ್ದರು ಆರೋಪಿಸಿದ್ದರು. ಡ್ಯಾನ್ಸ್ ಮಾಡುವ ವೇಳೆ ನನಗೆ ಮುಜುಗರವಾಗುವಂತ ಸ್ಟೆಪ್ಸ್‍ಗಳನ್ನು ಹಾಕಲು ಒತ್ತಾಯಿಸುತ್ತಿದ್ದರು ಎಂದು ಮೀಟೂ ಅಭಿಯಾನದ ಅಡಿಯಲ್ಲಿ ಆರೋಪಿಸಿ, ದೂರು ನೀಡಿದ್ದರು. ಅಲ್ಲದೆ ಈ ರೀತಿ ಕಿರುಕುಳ ಕೊಟ್ಟಿದ್ದಕ್ಕೆ ನಾನಾ ಪಾಟೇಕರ್ ಅವರ ಮಾತುಗಳನ್ನು ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಅವರು ಕೂಡ ಕೇಳಿರಲಿಲ್ಲ. ಬಳಿಕ ತನುಶ್ರೀ ಅವರು ಚಿತ್ರದಿಂದ ಹೊರನಡೆದಿದ್ದರು. ಬಳಿಕ ರಾಖಿ ಸಾವಂತ್ ಆ ಹಾಡಿಗೆ ನಾನಾ ಪಾಟೇಕರ್ ಜೊತೆ ಹೆಜ್ಜೆ ಹಾಕಿದ್ದರು.

  • ತನುಶ್ರೀ ಸಲಿಂಗಕಾಮಿ, ನನ್ನ ಮೇಲೆ ಸಾಕಷ್ಟು ಬಾರಿ ಅತ್ಯಾಚಾರವೆಸಗಿದ್ದಾಳೆ: ಖ್ಯಾತ ನಟಿ ಆರೋಪ

    ತನುಶ್ರೀ ಸಲಿಂಗಕಾಮಿ, ನನ್ನ ಮೇಲೆ ಸಾಕಷ್ಟು ಬಾರಿ ಅತ್ಯಾಚಾರವೆಸಗಿದ್ದಾಳೆ: ಖ್ಯಾತ ನಟಿ ಆರೋಪ

    ಮುಂಬೈ: ಬಾಲಿವುಡ್ ನಟಿ ತನುಶ್ರೀ ದತ್ತ ಹಾಗೂ ನಟ ನಾನಾ ಪಾಟೇಕರ್ ವಿವಾದದ ಮಧ್ಯೆ ಈಗ ಹಾಟ್ ಬೆಡಗಿ ರಾಖಿ ಸಾವಂತ್ ಎಂಟ್ರಿ ಕೊಟ್ಟಿದ್ದು, ತನುಶ್ರೀ ದತ್ತ ಸಲಿಂಗಕಾಮಿ, ಆಕೆ ನನ್ನ ಮೇಲೆ ಸಾಕಷ್ಟು ಬಾರಿ ಅತ್ಯಾಚಾರ ನಡೆಸಿದ್ದಾರೆ ಎನ್ನುವ ಮೂಲಕ ಹೊಸದೊಂದು ಬಾಂಬ್ ಸಿಡಿಸಿದ್ದಾರೆ.

    ರಾಖಿ ಸಾವಂತ್ ಮೊದಲು ತನುಶ್ರೀ ದತ್ತಾ ಅವರನ್ನು ನಿಂದಿಸಿ ನಂತರ ಅವರು ಸುಳ್ಳು ಹೇಳುತ್ತಿದ್ದಾರೆ. ತನು ಬಾಲಿವುಡ್ ಹಾಳು ಮಾಡಲು ಪ್ರಯತ್ನಿಸುತ್ತಿದ್ದಾಳೆ ಎಂದು ಆರೋಪಿಸಿದ್ದರು. ಆದರೆ ಈಗ ರಾಖಿ ಸುದ್ದಿಗೋಷ್ಠಿ ನಡೆಸಿ, ತನು ಒಳಗೆ ಒಬ್ಬ ಪುರುಷನಿದ್ದಾನೆ. ಆಕೆ ನನ್ನ ಮೇಲೆ ಸಾಕಷ್ಟು ಬಾರಿ ಅತ್ಯಾಚಾರವೆಸೆಗಿದ್ದಾಳೆ. ಅಲ್ಲದೇ ನನ್ನನ್ನು ರೇವ್ ಪಾರ್ಟಿಗೂ ಕರೆಯುತ್ತಿದ್ದಳು. ನನಗೆ ಇದನ್ನು ಹೇಳುವುದ್ದಕ್ಕೆ ತುಂಬಾ ನಾಚಿಕೆ ಆಗುತ್ತಿದೆ ಹಾಗೂ ದುಃಖವಾಗುತ್ತಿದೆ. 12 ವರ್ಷಗಳ ಹಿಂದೆ ನನ್ನನ್ನು ಅತ್ಯಾಚಾರ ಮಾಡಿದ್ದಾರೆ. ಒಬ್ಬಳು ಯುವತಿಯಾಗಿ ನಾನು ಈ ರೀತಿ ಹೇಳುವುದು ಸರಿಯಲ್ಲ. ಆದರೆ ನನಗೆ ಇಂದು ಹೇಳಲು ನಾಚಿಕೆಯಾಗುತ್ತಿದೆ ಎಂದು ರಾಖಿ ಗಂಭೀರ ಆರೋಪ ಮಾಡಿದ್ದಾರೆ.

    ನನ್ನ ಕಣ್ಣಿನಲ್ಲಿ ಕಣ್ಣೀರು ಇದೆ. ನನ್ನ ಹೃದಯ ನುಚ್ಚು ನೂರಾಗಿದೆ. ನನ್ನ ಮನಸ್ಸಿಗೆ ಇದರಿಂದ ತುಂಬಾ ತೊಂದರೆಯಾಗುತ್ತಿದೆ. ಇದುವರೆಗೂ ನಾನು ಈ ಪ್ರಕರಣದ ಬಗ್ಗೆ ಎಲ್ಲಿಯೂ ಹೇಳಿಕೊಂಡಿಲ್ಲ. ಆದರೆ ಬಾಲಿವುಡ್ ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ. ಒಬ್ಬಳು ಯುವತಿ ಗಂಗಾ ನದಿಯಲ್ಲಿ ಕೈತೊಳೆಯುತ್ತಿದ್ದಾಳೆ. ಓಡುತ್ತಿರುವ ರೈಲನ್ನು ಹಿಡಿಯುವ ಪ್ರಯತ್ನ ಮಾಡುತ್ತಿದ್ದಾಳೆ ಎಂದು ಹೇಳಿದರು.

    ನನಗೆ ಈ ಘಟನೆಯಿಂದ ತುಂಬಾ ದುಃಖವಾಗಿದೆ. ಹಾಗಾಗಿ ನನ್ನ ಮೇಲೆ ಅತ್ಯಾಚಾರವಾಗಿರುವ ವಿಷಯವನ್ನು ಹೇಳಿಕೊಂಡಿದ್ದೇನೆ. ನನ್ನ ಮೇಲೆ ಒಂದು ಬಾರಿ ಅಲ್ಲ ಸಾಕಷ್ಟು ಬಾರಿ ಅತ್ಯಾಚಾರ ನಡೆದಿದೆ. ನನಗೆ ಅವರ ಹೆಸರು ಹೇಳಲು ಭಯವಾಗುತ್ತಿದೆ. ಏಕೆಂದರೆ ನನಗೆ ಕೊಲೆ ಬೆದರಿಕೆ ಕೂಡ ಬರುತ್ತಿದೆ. ಅಲ್ಲದೇ ಗ್ಯಾಂಗ್ ರೇಪ್ ಮಾಡುವುದಾಗಿಯೂ ಬೆದರಿಕೆ ನೀಡುತ್ತಿದ್ದಾರೆ. ನಾನು ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ ಎಂದರು.

    ಬಾಲಿವುಡ್‍ನಲ್ಲಿ ಇಷ್ಟು ದಿನ ಮೀಟೂ ನಡೆಯುತ್ತಿತ್ತು. ಈಗ ಶೀಟೂ ನಡೆಯಬೇಕು. ತನು ನನ್ನ ಮೇಲೆ ಸಾಕಷ್ಟು ಬಾರಿ ಅತ್ಯಾಚಾರ ಮಾಡಿದ್ದಾರೆ. ಆದರೆ ಜನರು ಒಂದು ಹುಡುಗಿ ಮತ್ತೊಂದು ಹುಡುಗಿಯನ್ನು ಹೇಗೆ ಅತ್ಯಾಚಾರ ಮಾಡಲು ಸಾಧ್ಯ ಎಂದು ಪ್ರಶ್ನಿಸುತ್ತಿದ್ದಾರೆ. ಈಗ ಐಪಿಸಿ ಸೆಕ್ಷನ್ 377 ಅನ್ನು ಸುಪ್ರೀಂ ಕೋರ್ಟ್ ಕಾನೂನು ಬದ್ಧಗೊಳಿಸಿದೆ. ಈಗ ಹೀಟೂ ಹೀ ಹಾಗೂ ಶೀಟೂ ಶೀ ನಡೆಯುತ್ತಿದೆ ಎಂದು ತಿಳಿಸಿದರು.

    ತನು ಹುಡುಗ ಆಗಿರುವ ಕಾರಣ ಆಕೆ ತನ್ನ ತಲೆ ಕೂದಲನ್ನು ತೆಗೆದಿದ್ದಳು. ತನು ಒಬ್ಬ ಹುಡುಗಿ ಅಲ್ಲ ಹುಡುಗ. ಒಳಗಿನಿಂದ ಆಕೆ ಸಂಪೂರ್ಣ ಹುಡುಗ. 12 ವರ್ಷಗಳ ಹಿಂದೆ ತನು ನನ್ನ ಆತ್ಮೀಯ ಸ್ನೇಹಿತಳಾಗಿದ್ದಳು. ಅಲ್ಲದೇ ರೇವ್ ಪಾರ್ಟಿಗೂ ಕರೆದುಕೊಂಡು ಹೋಗುತ್ತಿದ್ದಳು ಎಂದು ರಾಖಿ ಸಾವಂತ್ ಪತ್ರಿಕಾಗೋಷ್ಠಿ ನಡೆಸಿ ಹೊಸ ಬಾಂಬ್ ಸಿಡಿಸುವ ಮೂಲಕ ಬಾಲಿವುಡ್ ನಲ್ಲಿ ಹೊಸ ವಿವಾದವನ್ನು ಶುರು ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv