Tag: ತಥಾಗತ ರಾಯ್

  • ನಾಯಿ ಜೊತೆ ಕೈಲಾಶ್ ವಿಜಯವರ್ಗಿಯಾ ಫೋಟೋ ಕೊಲಾಜ್ – ವಿವಾದ ಸೃಷ್ಟಿಸಿದ ತಥಾಗತ ರಾಯ್

    ನಾಯಿ ಜೊತೆ ಕೈಲಾಶ್ ವಿಜಯವರ್ಗಿಯಾ ಫೋಟೋ ಕೊಲಾಜ್ – ವಿವಾದ ಸೃಷ್ಟಿಸಿದ ತಥಾಗತ ರಾಯ್

    ಅಗರ್ತಲಾ: ತ್ರಿಪುರಾದ ಮಾಜಿ ಗವರ್ನರ್ ತಥಾಗತ ರಾಯ್ ನಾಯಿ ಫೋಟೋ ಜೊತೆಗೆ ಬಿಜೆಪಿಯ ಪಶ್ಚಿಮ ಬಂಗಾಳದ ಉಸ್ತುವಾರಿ ಕೈಲಾಶ್ ವಿಜಯವರ್ಗಿಯಾ ಫೋಟೋವನ್ನು ಕೊಲಾಜ್ ಮಾಡಿ ಟ್ವೀಟ್ ಮಾಡುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.

    ಫೋಟೋ ಜೊತೆಗೆ, ಮತ್ತೆ ಪಶ್ಚಿಮ ಬಂಗಾಳದಲ್ಲಿ ವೊಡಾಫೋನ್ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಹಲವಾರು ವರ್ಷಗಳ ಹಿಂದೆ ವೊಡಾಫೋನ್ ತನ್ನ ಕಂಪನಿಯ ಜಾಹೀರಾತಿನಲ್ಲಿ ಪಗ್‍ಗಳನ್ನು ಬಳಸಲಾಗಿತ್ತು.

    ಚುನಾವಣಾ ಸೋಲಿನ ಹೊರತಾಗಿಯೂ ಕೈಲಾಶ್ ವಿಜಯವರ್ಗಿಯಾ ಇನ್ನೂ ಬಿಜೆಪಿ ಬಂಗಾಳದ ಉಸ್ತುವಾರಿಯಾಗಿದ್ದಾರೆ ಎಂಬ ನೆಟ್ಟಿಗರೊಬ್ಬರ ಟ್ವೀಟ್‍ಗೆ ಪ್ರತಿಕ್ರಿಯೆಯಾಗಿ ತಥಾಗತ ರಾಯ್ ಈ ಪೋಸ್ಟ್ ಅನ್ನು ಮಾಡಿದ್ದಾರೆ. ಇದನ್ನೂ ಓದಿ: 5 ಕೋಟಿ ಮೌಲ್ಯದ ತಿಮಿಂಗಿಲದ ವಾಂತಿ ವಶ – ಇಬ್ಬರ ಬಂಧನ

    “ಕೈಲಾಶ್ ವಿಜಯವರ್ಗಿಯಾ ಅವರನ್ನು ಯಾರೂ ಉಲ್ಲೇಖಿಸಿಲ್ಲ. ಆದರೆ ಉನ್ನತ ನಾಯಕರೊಂದಿಗೆ ಅವರಿಗಿರುವ ನಿಕಟ ಬಾಂಧವ್ಯ ಬಹುಶಃ ಅವರನ್ನು ಸ್ಥಾನದಲ್ಲಿಯೇ ಉಳಿಸುತ್ತಿದೆ. ಕುತೂಹಲಕಾರಿ ವಿಚಾರವೆಂದರೆ, ಅವರು ಇನ್ನೂ ಬಿಜೆಪಿ ಬಂಗಾಳದ ಉಸ್ತುವಾರಿಯಾಗಿದ್ದಾರೆ. ಈ ಬಗ್ಗೆ ಬಿಜೆಪಿ ಕೊಲ್ಕತ್ತಾದಲ್ಲಿ ಸ್ಪಷ್ಟವಾದ ಮಾಹಿತಿಯಿಲ್ಲ,” ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.

    ಈ ವರ್ಷದ ಆರಂಭದಲ್ಲಿ ನಡೆದ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ ಭರ್ಜರಿ ಗೆಲುವು ಸಾಧಿಸಿತು, 294 ಸ್ಥಾನಗಳಲ್ಲಿ 213 ಸ್ಥಾನಗಳನ್ನು ಗಳಿಸಿತು ಮತ್ತು ಬಿಜೆಪಿಯನ್ನು 77ಕ್ಕೆ ಹಿಂದಿಕ್ಕಿತು. ಇದನ್ನೂ ಓದಿ: ಪ್ರತಿಭಟನಾ ಸ್ಥಳದಲ್ಲಿಯೇ ದೀಪಾವಳಿ ಆಚರಿಸಲಿದ್ದಾರೆ: ರಾಕೇಶ್ ಟಿಕಾಯತ್

    ಈ ಚುನಾವಣೆ ಸೋಲಿಗೆ ರಾಜ್ಯ ಪಕ್ಷದ ಅಧ್ಯಕ್ಷ ದಿಲೀಪ್ ಘೋಷ್ ಮತ್ತು ಪಕ್ಷದ ಕೇಂದ್ರ ವೀಕ್ಷಕರಾದ ಕೈಲಾಶ್ ವಿಜಯವರ್ಗಿಯಾ, ಶಿವಪ್ರಕಾಶ್ ಮತ್ತು ಅರವಿಂದ್ ಮೆನನ್ ಕಾರಣ ಎಂದು ತಥಾಗತ ರಾಯ್ ಆರೋಪಿಸಿದ್ದಾರೆ.