Tag: ತಜ್ಞರ ಸಮಿತಿ

  • ಕೊರೊನಾ 4ನೇ ಅಲೆ ಕಂಟ್ರೋಲ್‌ಗೆ ತಜ್ಞರ ವರದಿ ಕೇಳಿದ ಸರ್ಕಾರ

    ಕೊರೊನಾ 4ನೇ ಅಲೆ ಕಂಟ್ರೋಲ್‌ಗೆ ತಜ್ಞರ ವರದಿ ಕೇಳಿದ ಸರ್ಕಾರ

    ಬೆಂಗಳೂರು: ಕೊರೊನಾ 4ನೇ ಅಲೆಯ ಭೀತಿ ರಾಜ್ಯದಲ್ಲಿ ಪ್ರಾರಂಭವಾಗಿದೆ. ನಿಧಾನಗತಿಯಲ್ಲಿ ಕೊರೊನಾ ಕೇಸ್ ಹೆಚ್ಚಳ ಆಗುತ್ತಿದೆ. ಕೊರೊನಾ 4ನೇ ಅಲೆಯ ಭೀತಿಯ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಸರ್ಕಾರ, ನಾಲ್ಕನೇ ಅಲೆ ತಡೆಗೆ ತಾಂತ್ರಿಕ ಸಲಹಾ ಸಮಿತಿಯಿಂದ ವರದಿ ನೀಡುವಂತೆ ಸೂಚನೆ ನೀಡಿದೆ.

    ನಿನ್ನೆಯಷ್ಟೆ ದೇಶದ ಪ್ರಧಾನಿ ನರೇಂದ್ರ ಮೋದಿಯವರ ಜೊತೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆದಿತ್ತು. ಸಭೆಯಲ್ಲಿ ಅನಗತ್ಯವಾಗಿ ಯಾವುದೇ ನಿರ್ಬಂಧ ಹಾಕಬೇಡಿ ಅಂತ ಪ್ರಧಾನಿಗಳು ಸೂಚನೆ ನೀಡಿದ್ದರು. ಟೆಸ್ಟಿಂಗ್, ಟ್ರೇಸಿಂಗ್, ಟ್ರಿಟ್‌ಮೆಂಟ್ ಸೂತ್ರ ಅನುಷ್ಠಾನ ಮಾಡಿ ಅಂತ ಸಲಹೆ ಕೊಟ್ಟಿದ್ದರು. ಪ್ರಧಾನಿಗಳ ಸಲಹೆ ಮೇರೆಗೆ ರಾಜ್ಯ ಸರ್ಕಾರವೂ ಕೂಡಾ ಯಾವುದೇ ಟಫ್ ರೂಲ್ಸ್ ಜಾರಿ ಮಾಡದೇ ಕೆಲವೊಂದು ನಿರ್ಧಾರಗಳನ್ನ ಮಾತ್ರ ಘೋಷಣೆ ಮಾಡಿದೆ. ಇದನ್ನೂ ಓದಿ: 24 ಗಂಟೆಯಲ್ಲಿ 3,303 ಮಂದಿಗೆ ಸೋಂಕು – ಹೆಚ್ಚಿದ ಪಾಸಿಟಿವಿಟಿ ದರ

    VIDHAN SHOUDHA

    ಮಾಸ್ಕ್ ಕಡ್ಡಾಯ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಕೆಲ ಪ್ರಾರಂಭಿಕ ನಿಯಮಗಳನ್ನು ಸರ್ಕಾರ ಜಾರಿ ಮಾಡಿದೆ. ಅದನ್ನ ಹೊರತುಪಡಿಸಿ ಕೆಲವು ಕ್ರಮಗಳನ್ನು ಸರ್ಕಾರ ಜಾರಿ ಮಾಡಿದೆ.

    ರಾಜ್ಯದಲ್ಲಿ ಜೂನ್ ವೇಳೆಗೆ 4ನೇ ಅಲೆ ಬರುವ ನಿರೀಕ್ಷೆ ಇದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಸರ್ಕಾರ ಸಿದ್ದವಾಗಿದೆ. ಈ ಹಿನ್ನೆಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ವರದಿ ನೀಡುವಂತೆ ತಾಂತ್ರಿಕ ಸಲಹಾ ಸಮಿತಿಗೆ ಸರ್ಕಾರ ಸೂಚನೆ ನೀಡಿದೆ. ರಾಜ್ಯಕ್ಕೆ 4ನೇ ಅಲೆ ವೈಜ್ಞಾನಿಕವಾಗಿ ಯಾವಾಗ ಪ್ರಾರಂಭ ಆಗಬಹುದು. ನಾಲ್ಕನೇ ಅಲೆ ಅಂತ್ಯ ಯಾವಾಗ ಆಗಬಹುದು? ಅನ್ನೋ ಮಾಹಿತಿ ನೀಡಲು ತಜ್ಞರಿಗೆ ಮನವಿ ಮಾಡಲಾಗಿದೆ. 4ನೇ ಅಲೆಯ ತೀವ್ರತೆ ಹೇಗೆ ಇರಲಿದೆ? ಬೇರೆ ಬೇರೆ ದೇಶಗಳು, ರಾಜ್ಯಗಳ ವರದಿ ಪರಾಮರ್ಶಿಸಿ ವರದಿ ನೀಡುವಂತೆ ಸರ್ಕಾರ ಸೂಚನೆ ನೀಡಿದೆ. ಇದನ್ನೂ ಓದಿ: ಬೇಸಿಗೆಯಲ್ಲಿ ಕುಡಿಯಲು ಮಾತ್ರ ನೀರು ಕೊಡ್ತೀವಿ, ಬೆಳೆಗಳಿಗೆ ಕೊಡಲು ಆಗಲ್ಲ: ಗೋವಿಂದ್ ಕಾರಜೋಳ

    COVID HIKE 2

    4ನೇ ಅಲೆ ನಿಯಂತ್ರಣಕ್ಕೆ ಪ್ರಾರಂಭಿಕ ಹಂತಗಳಲ್ಲಿ ಯಾವ ನಿಯಮಗಳನ್ನ ಅನುಷ್ಠಾನ ಮಾಡಬೇಕು. ಸಾವು-ನೋವು, ಕೋವಿಡ್ ಹರಡುವಿಕೆಯ ವೇಗ, ಚಿಕಿತ್ಸಾ ವಿಧಾನಗಳ ಬಗ್ಗೆ ವರದಿ ನೀಡುವಂತೆ ಸೂಚನೆ ನೀಡಲಾಗಿದೆ. 4ನೇ ಅಲೆ ಯಾವ ವಯೋಮಾನದವರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಅದನ್ನ ನಿಯಂತ್ರಣ ಮಾಡೋದು ಹೇಗೆ? ಅಂತರರಾಜ್ಯ ಗಡಿಗಳು, ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ಯಾವ ನಿಯಮ ಜಾರಿ ಮಾಡಬೇಕು. ಬೆಂಗಳೂರಿನಲ್ಲಿ ಕೊರೊ‌ನಾ ಹಾಟ್‌ಸ್ಪಾಟ್ ತಡೆಗೆ ಯಾವ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಜಿಲ್ಲೆಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಮೊದಲ ಹಂತದ ನಿಯಮಗಳು ಹೇಗೆ ಜಾರಿ ಮಾಡಬೇಕು. ಮಾಲ್, ಮಾರುಕಟ್ಟೆ, ಸಮಾರಂಭಗಳು, ಜಾತ್ರೆ, ಹಬ್ಬಗಳು, ಪ್ರಾರ್ಥನಾ ಮಂದಿರಗಳು, ಸಿನಿಮಾ ಹಾಲ್‌ಗಳು, ಕ್ರೀಡಾ ಸಂಕೀರ್ಣಗಳಲ್ಲಿ ಯಾವ ನಿಯಮ ಜಾರಿ ಮಾಡಬೇಕು ಅನ್ನೋ ಮಾಹಿತಿಯನ್ನು ಸರ್ಕಾರ ಕೇಳಿದೆ.

    ಹೊಟೇಲ್, ಬಾರ್, ಪಬ್, ದೇವಾಲಯ, ಮಸೀದಿ, ಚರ್ಚ್, ಪ್ರಾರ್ಥನಾ ಮಂದಿರಗಳಿಗೆ ಯಾವ ನಿಯಮ ಜಾರಿ ಮಾಡಬೇಕು. ಸಾರ್ವಜನಿಕ ಸಾರಿಗೆಗಳಲ್ಲಿ ಯಾವ ನಿಯಮಗಳು ಜಾರಿ ಮಾಡಬೇಕು ಅನ್ನೋ ಮಾಹಿತಿ. ಶಾಲಾ-ಕಾಲೇಜುಗಳಲ್ಲಿ ಕೊರೊನಾ ಕಂಟ್ರೋಲ್‌ಗೆ ಯಾವ ನಿಯಮ ಅನುಷ್ಠಾನ ಮಾಡಬೇಕು ಅನ್ನೋ ವರದಿ ಕೊಡುವಂತೆ ತಜ್ಞರಿಗೆ ಸರ್ಕಾರದ ಸೂಚನೆ‌ ನೀಡಿದೆ.

  • ಸರ್ಕಾರದ ಸಮಿತಿಯನ್ನು ವಿರೋಧ ಮಾಡಿದವರನ್ನ ಬಹಿಷ್ಕಾರ ಹಾಕ್ತೀವಿ: ವಿನಯ ಕುಲಕರ್ಣಿ

    ಸರ್ಕಾರದ ಸಮಿತಿಯನ್ನು ವಿರೋಧ ಮಾಡಿದವರನ್ನ ಬಹಿಷ್ಕಾರ ಹಾಕ್ತೀವಿ: ವಿನಯ ಕುಲಕರ್ಣಿ

    ಧಾರವಾಡ: ಸರ್ಕಾರ ಲಿಂಗಾಯತ ಪ್ರತ್ಯೇಕ ಧರ್ಮ ರಚನೆ ಮಾಡಲು ನೇಮಿಸಿರುವ ಸಮಿತಿಯನ್ನು ವಿರೋಧ ಮಾಡಿದವರನ್ನು ಬಹಿಷ್ಕಾರ ಹಾಕುತ್ತೇವೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ವಿನಯ ಕುಲಕರ್ಣಿ ತಿಳಿಸಿದ್ದಾರೆ.

    ಧಾರವಾಡದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರ ರಚನೆ ಮಾಡಿದ ಸಮಿತಿಗೆ ವೀರಶೈವರು ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ ಯಾಕೆ? ಈ ರೀತಿ ಯಾವುದೇ ಕಾರಣವಿಲ್ಲದೆ ವಿರೋಧ ಮಾಡಿದರೆ ಅವರನ್ನು ಬಹಿಷ್ಕಾರ ಹಾಕುವ ಕಾರ್ಯವನ್ನು ಮಾಡಬೇಕಾಗುತ್ತದೆ ಎಂದರು.

    ನಾವು ಅವರ ಕುರ್ಚಿಗೆ ಏನು ಕೈ ಹಾಕಿಲ್ಲ, ಅವರ ಕುರ್ಚಿ ಅವರೇ ಇಟ್ಟುಕೊಳ್ಳಲಿ. ಆದರೆ ಅವರಿಗೆ ಸಮಾಜದ ಬಗ್ಗೆ ಏನಾದರೂ ಕಳಕಳಿ ಇದೆಯಾ ಎಂದು ಪ್ರಶ್ನಿಸಿದರು. ಮೀಸಲಾತಿ ಸಿಗದೇ ನಮ್ಮ ಜನರು ಒದ್ದಾಡುತ್ತಿದ್ದಾರೆ. ಸಮಾಜದ ಬಡ ಮಕ್ಕಳಿಗಾಗಿ ನಾವು ಹೋರಾಟ ಮಾಡುತ್ತೇವೆ ಎಂದು ಹೇಳಿದರು.

    ಗದಗದಲ್ಲಿ ನಡೆಸುತ್ತಿರುವ ವೀರಶೈವ ಸಮಾವೇಶಕ್ಕೆ ನಮ್ಮ ವಿರೋಧವಿಲ್ಲ. ಸಮಾವೇಶ ಅಥವಾ ಅಡ್ಡ ಪಲ್ಲಕ್ಕಿ ಮಾಡಿದರೂ ವಿರೋಧವಿಲ್ಲ. ಆದರೆ ನಮ್ಮ ಹೋರಾಟಕ್ಕೆ ಅವರು ಅಡ್ಡ ಬರುತ್ತಿದ್ದಾರೆ. ಆದರೆ ವೀರಶೈವರು ಬೇರೆ ಮೀಸಲಾತಿ ಕೇಳಿದರೆ ನಾವು ವಿರೋಧ ಮಾಡಲ್ಲ ಎಂದು ಹೇಳಿದರು. ಇದನ್ನೂ ಓದಿ: ಸಿಎಂ ತ್ರೀ ಈಡಿಯಟ್ಸ್ ಗಳನ್ನು ತಯಾರು ಮಾಡಿದ್ದಾರೆ- ಅವರಿಂದ ಧರ್ಮ ಒಡೆಯಲು ಸಾಧ್ಯವಿಲ್ಲ: ಆಂದೋಲ ಶ್ರೀ

    ಪ್ರತ್ಯೇಕ ಲಿಂಗಾಯತ ಧರ್ಮದ ಸ್ಥಾಪನೆ ಮಾಡುವ ಸಲುವಾಗಿ ಸರ್ಕಾರ 7 ಜನರ ತಜ್ಞರ ಸಮಿತಿ ರಚನೆ ಮಾಡಿದೆ. ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದಲ್ಲಿ ಹಿರಿಯ ಪತ್ರಕರ್ತ ದ್ವಾರಕನಾಥ್, ರಾಜಕೀಯ ವಿಶ್ಲೇಷಕ ಮುಜಾಫರ್ ಅಸಾದಿ, ಪತ್ರಕರ್ತ ಸರ್ಜ್ಯೂ ಕಾಟ್ಕರ್, ಸಾಹಿತಿ ಎಸ್.ಜಿ. ಸಿದ್ದರಾಮಯ್ಯ, ಪುರುಷೋತ್ತಮ ಬಿಳಿಮಲೆ, ರಾಮಕೃಷ್ಣ ಮರಾಠೆ ತಜ್ಞರ ಸಮಿತಿಯ ಸದಸ್ಯರಾಗಿದ್ದಾರೆ.

    ಒಂದು ತಿಂಗಳಲ್ಲಿ ವರದಿ ನೀಡುವಂತೆ ತಜ್ಞರ ಸಮಿತಿಗೆ ಸೂಚಿಸಿದ್ದು, ತಜ್ಞರ ಸಮಿತಿ ವರದಿ ಬಳಿಕ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ಶಿಫಾರಸ್ಸು ಮಾಡುವ ಕುರಿತು ನಿರ್ಧಾರವಾಗಲಿದೆ. ಇದನ್ನೂ ಓದಿ:  ಲಿಂಗಾಯತರಿಗೆ ಸಿಗುತ್ತಂತೆ ಅಲ್ಪಸಂಖ್ಯಾತ ಸ್ಥಾನಮಾನ!

  • ಲಿಂಗಾಯತರಿಗೆ ಸಿಗುತ್ತಂತೆ ಅಲ್ಪಸಂಖ್ಯಾತ ಸ್ಥಾನಮಾನ!

    ಲಿಂಗಾಯತರಿಗೆ ಸಿಗುತ್ತಂತೆ ಅಲ್ಪಸಂಖ್ಯಾತ ಸ್ಥಾನಮಾನ!

    ಬೆಂಗಳೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸ್ತಿದ್ದಂತೆಯೇ ರಾಜಕೀಯ ಪಕ್ಷಗಳ ಚದುರಂಗದಾಟದ ಮತ್ತೊಂದು ಮೆಟ್ಟಿಲು ಏರಿದೆ. ಕನ್ನಡಧ್ವಜ, ಟಿಪ್ಪು ಜಯಂತಿ, ಹನುಮ ಜಯಂತಿ ವಿಷಯಗಳಾಗಿ ನಡೆದ ರಾಜಕೀಯ ವಿದ್ಯಮಾನಗಳಲ್ಲಿ ಈಗ ಮತ್ತೆ ಮಹದಾಯಿ ಹೋರಾಟದ ಬಿಸಿಯೇರಿದೆ. ಇದರ ಮಧ್ಯೆಯೇ ಲಿಂಗಾಯತ ವಿವಾದ ಮಹತ್ವದ ತಿರುವು ಪಡೆಯುವ ಸಾಧ್ಯತೆ ಇದೆ.

    ಹುಬ್ಬಳ್ಳಿಯಲ್ಲಿ ಗುರುವಾರ ನಡೆದ ಬಿಜೆಪಿಯ ರ‍್ಯಾಲಿಯ ವೇಳೆ ಉತ್ತರಪ್ರದೇಶ ಸಿಎಂ ಆದಿತ್ಯನಾಥ್ ಅವರು ಮೂರು ಸಾವಿರ ಮಠಕ್ಕೆ ಭೇಟಿ ನೀಡಿದ್ದರು. ಸಿಎಂ ಯೋಗಿ ಅವರ ಈ ಭೇಟಿಯು ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರವಾಗಿ ಇದು ಮೋದಿಯ ಲೆಕ್ಕಾಚಾರ ಅನ್ನುವ ಮಾತು ಕೇಳಿ ಬಂದಿತ್ತು. ಆದರೆ, ಬಿಜೆಪಿ ನಾಯಕರ ಲೆಕ್ಕಚಾರಕ್ಕೆ ತಿರುಗೇಟು ನೀಡಲು ಸಿದ್ಧರಾಗಿರುವ ಸಿಎಂ ಸಿದ್ದರಾಮಯ್ಯ, ಲಿಂಗಾಯತರಿಗೆ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ನೀಡಲು ಪ್ಲಾನ್ ಮಾಡಿದ್ದಾರೆ.

    ಪ್ರತ್ಯೇಕ ಲಿಂಗಾಯತ ಧರ್ಮದ ಸ್ಥಾಪನೆ ಮಾಡುವ ಸಲುವಾಗಿ ಸರ್ಕಾರ 7 ಜನರ ತಜ್ಞರ ಸಮಿತಿ ರಚನೆ ಮಾಡಿದೆ. ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದಲ್ಲಿ ಹಿರಿಯ ಪತ್ರಕರ್ತ ದ್ವಾರಕನಾಥ್, ರಾಜಕೀಯ ವಿಶ್ಲೇಷಕ ಮುಜಾಫರ್ ಅಸಾದಿ, ಪತ್ರಕರ್ತ ಸಜ್ರ್ಯೂ ಕಾಟ್ಕರ್, ಸಾಹಿತಿ ಎಸ್.ಜಿ. ಸಿದ್ದರಾಮಯ್ಯ, ಪುರುಷೋತ್ತಮ ಬಿಳಿಮಲೆ, ರಾಮಕೃಷ್ಣ ಮರಾಠೆ ತಜ್ಞರ ಸಮಿತಿಯ ಸದಸ್ಯರಾಗಿದ್ದಾರೆ.

    ಒಂದು ತಿಂಗಳಲ್ಲಿ ವರದಿ ನೀಡುವಂತೆ ತಜ್ಞರ ಸಮಿತಿಗೆ ಸೂಚಿಸಿದ್ದು, ತಜ್ಞರ ಸಮಿತಿ ವರದಿ ಬಳಿಕ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ಶಿಫಾರಸ್ಸು ಮಾಡುವ ಕುರಿತು ನಿರ್ಧಾರವಾಗಲಿದೆ.