Tag: ತಜ್ಞರು

  • ಕೊರೊನಾ ಶೀಘ್ರ ಗುಣಮುಖಕ್ಕೆ ಸೂರ್ಯರಶ್ಮಿಗೆ ಮೈ ಒಡ್ಡಿ: ತಜ್ಞರ ಅಭಿಪ್ರಾಯ

    ಕೊರೊನಾ ಶೀಘ್ರ ಗುಣಮುಖಕ್ಕೆ ಸೂರ್ಯರಶ್ಮಿಗೆ ಮೈ ಒಡ್ಡಿ: ತಜ್ಞರ ಅಭಿಪ್ರಾಯ

    – ಕೊರೊನಾ ವಿರುದ್ಧ ಹೋರಾಟಲು ದೇಹಕ್ಕೆ ವಿಟಮಿನ್ ಡಿ ಅತ್ಯಗತ್ಯ
    – ಬೆಳ್ಳಂಬೆಳಗ್ಗೆ ಸೂರ್ಯನ ದರ್ಶನದಿಂದ ದೇಹಕ್ಕೆ ವಿಟಮಿನ್ ಡಿ ಲಭ್ಯ

    ಬೆಂಗಳೂರು: ವಿಶ್ವವನ್ನು ಕಾಡುತ್ತಿರುವ ಕೊರೊನಾ ಮಹಾಮಾರಿ ವಿರುದ್ಧ ಹೋರಾಡಲು ಹಲವು ತಜ್ಞರು ಲಸಿಕೆ ಕಂಡು ಹಿಡಿಯುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಇತ್ತ ಕೊರೊನಾ ದಿನದಿಂದ ದಿನಕ್ಕೆ ತನ್ನ ಕಬಂಧಬಾಹುಗಳನ್ನು ಚಾಚಿಕೊಳ್ಳುತ್ತಿರುವುದು ಬಹುದೊಡ್ಡ ಸವಾಲಾಗಿದೆ. ಲಾಕ್‍ಡೌನ್, ಸಾಮಾಜಿಕ ಅಂತರ, ಶುಚಿತ್ವ ಕುರಿತು ಜಾಗೃತಿ ಮೂಡಿಸಿದರು ಕೊರೊನಾ ನಿಯಂತ್ರಣ ಮಾತ್ರ ಕಷ್ಟಸಾಧ್ಯವಾಗಿದೆ. ಕೊರೊನಾ ಸೋಂಕಿಗೆ ತುತ್ತಾಗಿರುವವರಿಗೆ ಚಿಕಿತ್ಸೆ ನೀಡುವುದು ಕೂಡ ವೈದ್ಯ ಲೋಕಕ್ಕೆ ಸವಾಲಾಗಿದೆ. ಪರಿಣಾಮ ಮಾನವನ ದೇಹದಲ್ಲಿನ ರೋಗ ನಿರೋಧ ಶಕ್ತಿ ಹೆಚ್ಚಿಸುವ ಮೂಲಕ ಕೊರೊನಾ ವಿರುದ್ಧ ಹೋರಾಟ ನಡೆಸಲು ತಜ್ಞರು ಸಲಹೆ ನೀಡಿದ್ದಾರೆ.

    ಕೊರೊನಾ ಸೋಂಕು ವ್ಯಕ್ತಿಯ ದೇಹಕ್ಕೆ ಪ್ರವೇಶಿಸುತ್ತಿದಂತೆ ಆತನ ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುತ್ತದೆ. ಈ ಹಿನ್ನೆಲೆಯಲ್ಲಿ ಕೊರೊನಾದಿಂದ ಗುಣಮುಖರಾಗಲು ವ್ಯಕ್ತಿಯ ದೇಹಕ್ಕೆ ವಿಟಮಿನ್ ಡಿ ಅಗತ್ಯವಿರುತ್ತದೆ. ವಿಟಮಿನ್ ಡಿ ವ್ಯಕ್ತಿಯ ರೋಗಿ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ನಾವು ಸೇವಿಸುವ ಮೊಟ್ಟೆ, ಮೀನು, ಮಶ್ರೂಮ್‍ನಲ್ಲಿ ಸಿಗುವ ವಿಟಮಿನ್ ಡಿ ದೇಹಕ್ಕೆ ಸಾಲುವುದಿಲ್ಲ. ಆದ್ದರಿಂದ ಬೆಳಂಬೆಳಗ್ಗೆ ಸೂರ್ಯರಶ್ಮಿಗೆ ಮೈ ಒಡ್ಡುವ ಪರಿಪಾಟ ಬೆಳೆಸಿಕೊಂಡರೆ ಕೊರೊನಾ ವಿರುದ್ಧ ಸಮರ ಸಾರಲು ವಿಟಮಿನ್ ಡಿ ದೇಹಕ್ಕೆ ಲಭ್ಯವಾಗುತ್ತೆ ಎಂಬುವುದು ಬಯೋ ವಿಜ್ಞಾನಿ ದಿವ್ಯಾ ಚಂದ್ರಧರ್ ಅವರ ಅಭಿಪ್ರಾಯವಾಗಿದೆ.

    ಕೊರೊನಾ ವೈರಸ್‍ನಿಂದ ದೂರ ಉಳಿಯಲು ಸೂರ್ಯನ ದರ್ಶನ ಮಾಡಿದರೆ ಉತ್ತಮ. ಕೊರೊನಾ ವೈರಸ್ ಪ್ರಭಾವವನ್ನು ಕಡಿಮೆಗೊಳಿಸುವ ಅದ್ಭುತ ಶಕ್ತಿ ಸೂರ್ಯ ಕಿರಣದಲ್ಲಿದೆ. ನಿತ್ಯ ಹದಿನೈದು ನಿಮಿಷ ಸೂರ್ಯನ ಎದುರು ನಿಂತರೆ ಸಾಕು ವ್ಯಕ್ತಿಯ ದೇಹ ಕೊರೊನಾ ವಿರುದ್ಧ ಸಮರ ಸಾರಲು ಸಜ್ಜಾಗುತ್ತೆ. ಹೀಗಾಗಿ ಕೋವಿಡ್ 19 ಸಂಕಟದ ಸಮಯದಲ್ಲಿ ಸೂರ್ಯನ ರಶ್ಮಿಗೆ ಮೈ ಒಡ್ಡುವ ಅಭ್ಯಾಸವನ್ನು ಮಾಡಿಕೊಳ್ಳಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.

    ವಿಟಮಿನ್ ಡಿ ಮೀನು, ಚೀಸ್, ಮೊಟ್ಟೆ, ಮೊಸರು, ಮಶ್ರೂಮ್‍ನಲ್ಲಿ ವಿಟಮಿನ್ ಡಿ ಲಭ್ಯವಿದ್ದರೂ ಅಗತ್ಯ ಪ್ರಮಾಣದಲ್ಲಿ ಸಾಕಾಗುವುದಿಲ್ಲ. ಪರಿಣಾಮ ಸೂರ್ಯನ ಕಿರಣಗಳಿಗೆ ಮೈ ಒಡ್ಡುವುದರಿಂದ ದೇಹಕ್ಕೆ ಅಗತ್ಯವಿರೋ ಶೇ.90 ರಷ್ಟು ವಿಟಮಿನ್ ಡಿ ಲಭ್ಯವಾಗುತ್ತದೆ. ಈ ವಿಟಮಿನ್ ಡಿ ದೇಹದಲ್ಲಿ ಆ್ಯಂಟಿ ಮೈಕ್ರೊಬಿಯಲ್ ಪೆಪ್ಪೈಡ್ಸ್ ಉತ್ಪಾದಿಸುತ್ತದೆ. ಇದು ಉಸಿರಾಟದ ಸೋಂಕಿನ ಸಮಸ್ಯೆ ವಿರುದ್ಧ ಹೋರಾಟ ಮಾಡುತ್ತದೆ. ಅಲ್ಲದೇ ದೇಹದ ಬಿಳಿ ರಕ್ತ ಕಣಗಳಿಗೆ ಹೊಸ ಚೈತನ್ಯ ನೀಡಿ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದಿದ್ದಾರೆ.

    ಇತ್ತೀಚೆಗೆ ಹಾರ್ವರ್ಡ್ ವಿಶ್ವವಿದ್ಯಾಲಯ ವಿಶ್ವದ ವಿವಿಧ ದೇಶಗಳ ಜನರ ದೇಹದಲ್ಲಿನ ವಿಟಮಿನ್ ಡಿ ಪ್ರಮಾಣದ ಕುರಿತು ಸಮೀಕ್ಷೆ ನಡೆಸಿತ್ತು. ಇದರಲ್ಲಿ ಕಡಿಮೆ ವಿಟಮಿನ್ ಡಿ ಹೊಂದಿದ್ದ ದೇಶದ ಪ್ರಜೆಗಳು ಸೋಂಕಿಗೆ ಹೆಚ್ಚು ಬಲಿಯಾಗಿರುವುದು ಸ್ಪಷ್ಟವಾಗಿತ್ತು. ಅಲ್ಲದೇ ಅಂತಹ ದೇಶಗಳಲ್ಲಿ ವೈರಸ್ ಸೋಂಕಿನ ಸಂಖ್ಯೆಯೂ ಹೆಚ್ಚಿತ್ತು. ಆದರೆ ಭಾರತದಲ್ಲಿ ಸೂರ್ಯನ ಕಿರಣಗಳು ಹೆಚ್ಚು ಲಭ್ಯವಾಗುವ ಅವಕಾಶವಿರುವುದರಿಂದ ಸೂರ್ಯನ ಕಿರಣಗಳಿಗೆ ದೇಹ ಒಡ್ಡುವುದರಿಂದ ವಿಟಮಿನ್ ಡಿ ಲಭಿಸುತ್ತದೆ. ಸಾಮಾಜಿಕ ಅಂತರ ಪಾಲನೆ, ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಸುವುದರೊಂದಿಗೆ ಪ್ರತಿದಿನ ಬೆಳಗ್ಗೆ 6:30 ರಿಂದ 8:30ರ ಅವಧಿಯಲ್ಲಿ ಸೂರ್ಯನಿಗೆ ಮೈ ಒಡ್ಡುವುದು ಕೊರೊನಾ ವಿರುದ್ಧದ ಹೋರಾಟಕ್ಕೆ ಸಹಕಾರಿ ಎಂದು ವಿವರಿಸಿದ್ದಾರೆ.

  • ಕರ್ನಾಟಕಕ್ಕೆ ಮೂರು ತಿಂಗಳು ಆಪತ್ತು- ತಜ್ಞರಿಂದ ಸ್ಫೋಟಕ ಸೀಕ್ರೆಟ್ ರಿವೀಲ್

    ಕರ್ನಾಟಕಕ್ಕೆ ಮೂರು ತಿಂಗಳು ಆಪತ್ತು- ತಜ್ಞರಿಂದ ಸ್ಫೋಟಕ ಸೀಕ್ರೆಟ್ ರಿವೀಲ್

    ಬೆಂಗಳೂರು: ಕರ್ನಾಟಕಕ್ಕೆ ಮೂರು ತಿಂಗಳು ಕಾದಿದೆ ‘ಮಹಾ’ ಆಪತ್ತು ಕಾದಿದೆ ಎಂಬ ಸ್ಫೋಟಕ ಸತ್ಯವೊಂದು ತಜ್ಞರಿಂದ ಬಹಿರಂಗವಾಗಿದೆ.

    ಶ್ರಮಿಕ್ ಟ್ರೈನ್, ಅಂತರ್ ರಾಜ್ಯ ಬಸ್ ಸೇವೆ ಇನ್ನೂ ಒಂದು ತಿಂಗಳು ಬೇಡ. ಅದರಲ್ಲೂ ಮಹಾರಾಷ್ಟ್ರಕ್ಕಂತೂ ಬಸ್ ಸೇವೆ ಬೇಡವೇ ಬೇಡ. ಒಂದು ವೇಳೆ ಕರೆತಂದರೂ ಕೊರೊನಾ ಟೆಸ್ಟ್ ಕಡ್ಡಾಯ ಮಾಡಿ. ಹಾಗೆಯೇ ಹೆಚ್ಚಿನ ಜನರನ್ನ ಒಟ್ಟಿಗೆ ಕ್ವಾರಂಟೈನ್ ಮಾಡಬೇಡಿ ಎಂದು ತಜ್ಞರು ಸರ್ಕಾರ ಹಾಗೂ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಸರ್ಕಾರಕ್ಕೆ ತಜ್ಞರು ಎಚ್ಚರಿಕೆ ಕೊಟ್ಟಿದ್ಯಾಕೆ?
    ನಾನಾ ರಾಜ್ಯಗಳಿಂದ ಕರ್ನಾಟಕಕ್ಕೆ ಬರಲು 1.69 ಲಕ್ಷ ಜನ ಸೇವಾ ಸಿಂಧುವಿನಡಿ ನೋಂದಣಿ ಮಾಡಿಕೊಂಡಿದ್ದಾರೆ. 1.69 ಲಕ್ಷ ಜನರಲ್ಲಿ 43 ಸಾವಿರಕ್ಕೂ ಅಧಿಕ ಮಂದಿ ಮಹಾರಾಷ್ಟ್ರದಿಂದ ಬರುವವರಾಗಿದ್ದಾರೆ.

    ಸರ್ಕಾರ ತಾತ್ಕಾಲಿಕವಾಗಿ ಮೇ 31ರ ವರೆಗೆ ಮಹಾರಾಷ್ಟ್ರದಿಂದ ಬರಲು ನೋ ಎಂಟ್ರಿ ಅಂದಿದೆ. ಆದರೆ ಈಗಾಗಲೇ ಸೋಮವಾರದವರೆಗೆ ಸೇವಾ ಸಿಂಧುವಿನಡಿ ನೋಂದಣಿ ಮಾಡಿಕೊಂಡವರಿಗೆ ಎಂಟ್ರಿಗೆ ಅನುವು ಮಾಡಿದೆ. ಅಂದರೆ ಒಂದು ಮಾಹಿತಿಯ ಪ್ರಕಾರ 43 ಸಾವಿರ ಜನ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರಲು ನೊಂದಾಣಿ ಮಾಡಿದ್ದಾರೆ. ಅಷ್ಟೂ ಜನರಿಗೆ ಅವಕಾಶ ಕೊಟ್ಟರೆ ರಾಜ್ಯಕ್ಕೆ ಕಂಟಕ ಕಟ್ಟಿಟ್ಟ ಬುತ್ತಿಯಾಗಲಿದೆ.

    ಈಗಾಗಲೇ ಮಂಡ್ಯದ ಕೆ.ಆರ್ ಪೇಟೆಯಲ್ಲಿ ಬರೋಬ್ಬರಿ ಐದು ಸಾವಿರ ಕ್ವಾರಂಟೈನ್ ಬೆಡ್ ರೆಡಿಯಾಗಿದೆ. ಅಂದರೆ ಕರ್ನಾಟಕ ಅತಿ ಹೆಚ್ಚು ನಿಗಾ ವಹಿಸಿ ಹೆಚ್ಚಿನ ಪ್ರತ್ಯೇಕ ಬೆಡ್ ಗಳ ವ್ಯವಸ್ಥೆ ಮಾಡಬೇಕು. ಬೇರೆ ರಾಜ್ಯದವರನ್ನು ಕ್ವಾರಂಟೈನ್ ಮಾಡಿದಂತೆ ಹೆಚ್ಚಿನ ಜನ್ರನ್ನು ಒಟ್ಟಿಗೆ ಹಾಕಿ ಕ್ವಾರಂಟೈನ್ ಮಾಡದಂತೆ ಸೂಚನೆ ನೀಡಲಾಗಿದೆ.

    ಕರ್ನಾಟಕಕ್ಕೆ ಈಗಾಗಲೇ ಮುಂಬೈ ಮಹಾರಾಷ್ಟ್ರದಿಂದ ಬೆಟ್ಟ ಗುಡ್ಡ ಹತ್ತಿ ಹೈವೇ ತಪ್ಪಿಸಿ ಕಳ್ಳದಾರಿಯಲ್ಲಿ ಅನೇಕರು ಬಂದಾಗಿದೆ. ಇವರ ಲೆಕ್ಕ ಇನ್ನೂ ಸಿಕ್ಕಿಲ್ಲ. ಇವರು ಕೊರೊನಾ ಹಂಚಿದರೆ ಇನ್ನೂ ಮೂರು ತಿಂಗಳು ರಾಜ್ಯಕ್ಕೆ ಅಪಾಯ ಕಾದಿದೆ. ಜೂನ್ ವೇಳೆ ಇನ್ನಷ್ಟು ಲಾಕ್ ಡೌನ್ ಸಡಿಲಿಕೆಯಾಗುತ್ತೆ. ಮತ್ತೆ ಮಹಾರಾಷ್ಟ್ರ-ಕರ್ನಾಟಕದ ಮಧ್ಯೆ ಓಡಾಟ ಶುರುವಾಗುತ್ತೆ. ಆಗ ಇನ್ನೂ ಹೆಚ್ಚಿನ ಪ್ರಕರಣಗಳು ವರದಿಯಾಗಲಿವೆ.

    ಶ್ರಮಿಕ್ ಟ್ರೈನ್ ಸೇರಿದಂತೆ ಅಂತರ್ ರಾಜ್ಯ ಬಸ್ ಕೂಡ ಒಂದು ತಿಂಗಳು ಮಹಾರಾಷ್ಟ್ರಕ್ಕೆ ಬೇಡವೇ ಬೇಡ ಎಂದು ತಜ್ಞರು ಸಲಹೆ ನೀಡಿದ್ದಾರೆ. ಇನ್ಮುಂದೆ ಏಕಾಏಕಿ ಕರೆದುಕೊಂಡು ಬರಬೇಡಿ. ಒಬ್ಬರಿಗೆ ಕೊರೊನಾ ಇದ್ದರೂ ಇಡೀ ಬಸ್ಸಿನ ಪ್ರಯಾಣಿಕರಿಗೆ ಹಬ್ಬುತ್ತೆ. ಅಲ್ಲದೆ ಅನ್ಯ ರಾಜ್ಯದಿಂದ ಇಲ್ಲಿಗೆ ಕರೆದುಕೊಂಡು ಬರುವ ಮೊದಲು ಕೊರೊನಾ ಚೆಕ್ ಮಾಡಿಸುವಂತೆ ಕಡ್ಡಾಯ ಸೂಚನೆಗೆ ತಜ್ಞರು ಶಿಫಾರಸು ಮಾಡಿದ್ದಾರೆ.

  • ಬೆಂಗ್ಳೂರಿಗರೇ ಎಚ್ಚರ- ಮೇ ಅಂತ್ಯಕ್ಕೆ ಹೆಚ್ಚಾಗಲಿದೆ ಕೊರೊನಾ ಅಬ್ಬರ

    ಬೆಂಗ್ಳೂರಿಗರೇ ಎಚ್ಚರ- ಮೇ ಅಂತ್ಯಕ್ಕೆ ಹೆಚ್ಚಾಗಲಿದೆ ಕೊರೊನಾ ಅಬ್ಬರ

    – ಕೊರೊನಾ ಕಂಟ್ರೋಲ್‍ಗೆ ‘ಪ್ಲ್ಯಾನ್ ಬಿ’ ಸೂತ್ರ

    ಬೆಂಗಳೂರು: ಭಾರತದಲ್ಲಿ ಜೂನ್, ಜುಲೈ ಅಂತ್ಯಕ್ಕೆ ಕೊರೊನಾ ಇನ್ನಿಲ್ಲದಂತೆ ಬಾಧಿಸಲಿದೆ ಅಂತ ಎಚ್ಚರಿಸಲಾಗಿದೆ. ಆದರೆ ಬೆಂಗಳೂರಿಗೆ ಮಾತ್ರ ಮೇ ತಿಂಗಳೇ ಕಂಟಕವಾಗಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

    ಮುಂದಿನ ವಾರ ಬೆಂಗಳೂರಿನಲ್ಲಿ ಮತ್ತಷ್ಟು ಕೊರೊನಾ ಹೆಚ್ಚಳವಾಗಲಿದ್ದು, ಮೇ ಅಂತ್ಯಕ್ಕೆ 5 ಸಾವಿರ ಪ್ರಕರಣ ಪತ್ತೆಯಾಗಬಹುದು ಅಂತ ತಜ್ಞರು ಎಚ್ಚರಿಕೆ ಕೊಟ್ಟಿದ್ದಾರೆ. ಲಾಕ್‍ಡೌನ್ ಸಡಿಲಿಕೆ ಆಗಿ ನಾಲ್ಕು ದಿನದಲ್ಲಿ ಅಂತಹ ಕಂಟಕ ಬೆಂಗಳೂರಿಗೆ ಎದುರಾಗಿಲ್ಲ. ಆದರೆ ಮುಂದಿನ ವಾರ ಹೈ ರಿಸ್ಕ್ ಎದುರಾಗಲಿದೆ ಅಂತ ತಜ್ಞರು ಹೇಳಿದ್ದಾರೆ.

    ಬೆಂಗಳೂರಿಗೆ ಹೈ ಅಲರ್ಟ್ ನೀಡಿದ ತಜ್ಞರು ಕೊರೊನಾ ಕಂಟ್ರೋಲ್‍ಗೆ ‘ಪ್ಲಾನ್ ಬಿ’ ಸೂತ್ರ ರೆಡಿ ಮಾಡುವಂತೆ ಸಲಹೆ ನೀಡಿದ್ದಾರೆ. ಸೋಂಕು ಪೀಡಿತ ದೇಶದಿಂದ ಬರುವವರ ಮೇಲೆ ಹದ್ದಿನ ಕಣ್ಣು ಇಡಲು ಸೂಚಿಸಿದ್ದಾರೆ.

    ‘ಪ್ಲ್ಯಾನ್ ಬಿ’ ಸೂತ್ರ:
    ಮೊದಲಿಗೆ ಎಲ್ಲಾ ವಾರ್ಡ್ ಗಳಲ್ಲಿ ಮತ್ತಷ್ಟು ತಂಡ ರಚನೆ ಮಾಡಿ. ಗ್ರೀನ್ ಝೋನ್ ಅಂತ ನಿರ್ಲಕ್ಷ್ಯ ಮಾಡಬೇಡಿ. ನಿರಂತರ ಹೆಲ್ತ್ ಸ್ಕ್ರೀನಿಂಗ್ ಇರಲಿ ಎಂದಿದ್ದಾರೆ. ಮುಖ್ಯವಾಗಿ ಸಿಸಿಟಿವಿ ಅಳವಡಿಸಿ, ಸಿಕ್ಕಸಿಕ್ಕಲ್ಲಿ ಉಗುಳುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಿ. ಜೊತೆಗೆ ಸ್ವಚ್ಛ ಬೆಂಗಳೂರಿನತ್ತ ಗಮನ ಹರಿಸಿ ಅಂತ ಸಲಹೆ ನೀಡಿದ್ದಾರೆ. ಬಿಬಿಎಂಪಿ ವಿಪತ್ತು ನಿರ್ವಹಣ ಕೋಶ ಸದ್ಬಳಕೆ ಮಾಡಿ ಕಾರ್ಮಿಕರು, ದುರ್ಬಲರು, ಗರ್ಭಿಣಿಯರು, ವಯಸ್ಸಾದವರ ಡೇಟಾ ಬೇಸ್ ರೆಡಿ ಇಟ್ಟುಕೊಳ್ಳಿ ಎಂದಿದ್ದಾರೆ.

    ಜೊತೆಗೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಬಲಪಡಿಸಿ, ಜನ ಖಾಸಗಿ ಆಸ್ಪತ್ರೆಗಳತ್ತ ಹೆಚ್ಚು ಹೋಗದಂತೆ ಗಮನ ಹರಿಸಿ. ವಾರ್ಡ್ ಮಟ್ಟದಲ್ಲಿ ಆರೋಗ್ಯ ಮೇಲ್ವಿಚಾರಣೆಗೆ ಟೀಮ್ ರಚಿಸಿ, ಇಂತಿಷ್ಟು ಮನೆಯ ಸರ್ವೆ ಕಾರ್ಯವನ್ನು ನಿಗದಿ ಪಡಿಸಿ. ಯಾಕೆಂದರೆ ಲಾಕ್‍ಡೌನ್ ಸಡಿಲಿಕೆ ಎಫೆಕ್ಟ್ ಗೊತ್ತಾಗಲು ಇನ್ನೊಂದು ವಾರ ಕಾಯಬೇಕು ಎಂದಿದ್ದಾರೆ.

    ಬೆಂಗಳೂರು ಜಿಲ್ಲಾಡಳಿತ ಹೊರ ಜಿಲ್ಲೆಯಿಂದ ಬರುವವರ ಕೈಗೆ ಸೀಲ್ ಹಾಕಿ, ಹೋಮ್ ಕ್ವಾರಂಟೈನ್ ಮಾಡಿ ಅಂತ ಸೂಚಿಸಿದ್ದಾರೆ.

  • ಚೀನಾದಲ್ಲಿ ಪತ್ತೆಯಾಯ್ತು 2,500 ವರ್ಷ ಹಿಂದಿನ ಮೊಟ್ಟೆಗಳು!

    ಚೀನಾದಲ್ಲಿ ಪತ್ತೆಯಾಯ್ತು 2,500 ವರ್ಷ ಹಿಂದಿನ ಮೊಟ್ಟೆಗಳು!

    ಬೀಜಿಂಗ್: ಪುರಾತತ್ವ ಶಾಸ್ತ್ರಜ್ಞರ ತಂಡವೊಂದು ಪೂರ್ವ ಚೀನಾದ ಶಾಂಗ್‍ಕ್ಸಿಂಗ್ ನಗರದಲ್ಲಿ ಸುಮಾರು 2,500 ವರ್ಷಗಳ ಹಿಂದಿನ ಮಣ್ಣಿನ ಮಡಿಕೆಯೊಳಗೆ ಇರಿಸಿದ ಸುಮಾರು 20 ಮೊಟ್ಟೆಗಳನ್ನು ಪತ್ತೆ ಮಾಡಿದ್ದಾರೆ.

    ಚೀನಾದ ಶಾಂಗ್‍ಕ್ಸಿಂಗ್ ನಗರದಲ್ಲಿ ನ್ಯನ್ಜಿಂಗ್ ಪುರಾತತ್ವ ಸಂಸ್ಥೆ ಹಾಗೂ ಲಿಯಾಂಗ್ ಮ್ಯೂಸಿಯಂನ ತಜ್ಞರ ತಂಡ ಉತ್ಖನನ ಮಾಡಿ ಸಂಶೋದನೆ ನಡೆಸುತ್ತಿದ್ದರು. ಈ ವೇಳೆ ಮೊಟ್ಟೆಗಳು ಪತ್ತೆಯಾಗಿದೆ. ತಜ್ಞರ ಪ್ರಕಾರ ಸುಮಾರು 2,500 ವರ್ಷಗಳ ಹಿಂದೆಯಿದ್ದ ಮಾನವರು ಈ ಮೊಟ್ಟೆಗಳನ್ನು ಮಡಿಕೆಯಲ್ಲಿ ಕೂಡಿಟ್ಟು ಮಣ್ಣಿನೊಳಗೆ ಹೂತಿಟ್ಟಿದ್ದರು. ಮಡಿಕೆಯಲ್ಲಿ ಕ್ಯಾಲ್ಶಿಯಮ್ ಅಂಶ ಅಧಿಕವಾಗಿದ್ದ ಕಾರಣಕ್ಕೆ ಈ ಮೊಟ್ಟೆಗಳು ಒಡೆಯದೇ, ಮೊಟ್ಟೆಗಳ ಮೇಲಿನ ಪದರ ಹಸಿರು ಮತ್ತು ನೀಲಿ ಬಣ್ಣಕ್ಕೆ ತಿರುಗಿದೆ ಎಂದು ತಿಳಿಸಿದ್ದಾರೆ.

    ಹಿಂದಿನ ಕಾಲದಲ್ಲಿ ಮನುಷ್ಯ ಸಾವನ್ನಪ್ಪಿದರೇ ಆತನಿಗೆ ಸಂಬಂಧ ಪಟ್ಟ ವಸ್ತುಗಳನ್ನು ಮಣ್ಣಿನಲ್ಲಿ ಹೂತಿಡುತ್ತಿದ್ದರು. ಹಾಗೆಯೇ ಮೊಟ್ಟೆಗಳು ಪತ್ತೆಯಾದ ಸ್ಥಳದ ಮಾಲೀಕ ಸತ್ತ ನಂತರ ಆತನ ಆತ್ಮ ಮತ್ತೆ ಕಾಡಬಾರದು ಎಂಬ ಕಾರಣಕ್ಕೆ ಆತ ಬಳಕೆ ಮಾಡುತ್ತಿದ್ದ ವಸ್ತುಗಳ ಸಮೇತ ಆತನನ್ನು ಹೂಳಿರಬಹುದು ಎಂದು ಉತ್ಖನನ ನಡೆಸಿದ ತಜ್ಞರು ಊಹಿಸಿದ್ದಾರೆ. ಅಲ್ಲದೆ ಈ ಸ್ಥಳದಲ್ಲಿ ದೊರಕಿರುವ ಮೊಟ್ಟೆ ಹಾಗೂ ಇತರೇ ಪುರಾತನ ವಸ್ತುಗಳನ್ನು ಪರೀಕ್ಷೆಗಾಗಿ ಲ್ಯಾಬ್‍ಗೆ ಕಳುಹಿಸಲಾಗಿದೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ.

  • ಒಂದು ಕಿಮೀ ದೂರದ ಟಾರ್ಗೆಟ್ ಉರುಳಿಸುವ `ಸ್ಟಾರ್ ವಾರ್ಸ್ ಗನ್’ – ಚೀನಾ ಸೈನ್ಯಕ್ಕೆ ಹೊಸ ಆಸ್ತ್ರ

    ಒಂದು ಕಿಮೀ ದೂರದ ಟಾರ್ಗೆಟ್ ಉರುಳಿಸುವ `ಸ್ಟಾರ್ ವಾರ್ಸ್ ಗನ್’ – ಚೀನಾ ಸೈನ್ಯಕ್ಕೆ ಹೊಸ ಆಸ್ತ್ರ

    ಬಿಜೀಂಗ್: ಹಾಲಿವುಡ್ ನ ಸ್ಟಾರ್ ವಾರ್ಸ್ ಸಿನಿಮಾ ಶ್ರೇಣಿಯಲ್ಲಿ ಕಾಣಿಸಿಕೊಂಡಿರುವ ಕಾಲ್ಪಿನಿಕ ಗನ್ ಗೆ ಚೀನಾ ನೈಜ ರೂಪು ನೀಡಲು ಸಿದ್ಧತೆ ನಡೆಸಿದ್ದು, ಸುಮಾರು ಒಂದು ಕಿಮೀ ದೂರದ ಟಾರ್ಗೆಟ್ ಅನ್ನು ಹೊಡೆದುರುಳಿಸಬಲ್ಲ ಸುಧಾರಿತ ಗನ್ ಅಭಿವೃದ್ಧಿ ಪಡಿಸುತ್ತಿದೆ ಎಂದು ವರದಿಯಾಗಿದೆ.

    ಮಾನವ ದೇಹಕ್ಕೆ ಅತ್ಯಂತ ಮಾರಣಾಂತಿಕ ಲೇಸರ್ ಕಿರಣವನ್ನು ಬಳಸಿಕೊಂಡು ಗನ್ ಅಭಿವೃದ್ಧಿ ಪಡಿಸುತ್ತಿದೆ. ಈ ಕುರಿತು ಸೌತ್ ಚೈನಾ ಮಾರ್ನಿಂಗ್ ಪತ್ರಿಕೆ ವರದಿ ಮಾಡಿದ್ದು, ಝಡ್‍ಕೆಝೆಎಂ-500 ಹೆಸರಿನ ಗನ್ ಅಭಿವೃದ್ಧಿ ಪಡಿಸುತ್ತಿರುವುದಾಗಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

    ಸದ್ಯ ವಿಜ್ಞಾನಿಗಳು ಅಭಿವೃದ್ಧಿ ಪಡಿಸುತ್ತಿರುವ ಗನ್ 3 ಕೆಜಿ ತೂಕ ಹೊಂದಿರಲಿದ್ದು, ಎಕೆ47 ಗನ್ ಮಾದರಿಯನ್ನು ಹೊಂದಿರುತ್ತದೆ. ಗನ್ ಸಾಮಥ್ರ್ಯ ಬರಿ ಕಣ್ಣಿಗೆ ಕಾಣದಷ್ಟು ಶಕ್ತಿಯನ್ನು ಹೊಂದಿರಲಿದ್ದು, ಎದುರಾಳಿ ದೇಹದ ಸೀಳುವಂತಹ ಶಕ್ತಿಯನ್ನು ಹೊಂದಿರುತ್ತದೆ. ಗನ್ ರಿಚಾರ್ಜ್ ಮಾಡಲು ಲಿಥಿಯಂ ಬ್ಯಾಟರಿ ಪವರ್ ಕೂಡ ನೀಡಲಾಗುತ್ತಿದ್ದು, 2 ಸೆಕೆಂಡ್ ಗೆ 1 ಸಾವಿರದಷ್ಟು ಲೇಸರ್ ಕಿರಣಗಳನ್ನು ಉಗುಳುವ ಸಾಮಥ್ರ್ಯ ಹೊಂದಿರುತ್ತದೆ. ಅಲ್ಲದೇ ಇದನ್ನು ಕಾರು, ಬೋಟ್ ಮತ್ತು ವಿಮಾನಗಳಲ್ಲಿ ಅಳವಡಿಸಿ ಕಾರ್ಯಾಚರಣೆ ನಡೆಸಬಹುದಾಗಿದೆ.

    ಸದ್ಯ ಈ ಗನ್ ಗಳನ್ನು ಅಭಿವೃದ್ಧಿ ಪಡಿಸಿದ ಬಳಿಕ ಭಯೋತ್ಪಾದನ ಚಟುವಟಿಕೆ ನಡೆಸುವವರ ವಿರುದ್ಧ ಬಳಕೆ ಮಾಡಲು ಚೀನಾ ನಿರ್ಧರಿಸಿದ್ದು, ಗನ್ ಗಳ ಮೊದಲ ಸರಣಿಯನ್ನು ಬಿಡುಗಡೆಗೆ ಸಿದ್ಧಪಡಿಸಲಾಗುತ್ತಿದೆ. ಒಂದೊಮ್ಮೆ ಈ ಪ್ರಯೋಗ ಯಶಸ್ವಿಯಾದರೆ ಚೀನಾ ಅಗಾಧ ಪ್ರಮಾಣದ ಲಾಭ ಪಡೆಯಬಹುದಾಗಿದೆ. ಸದ್ಯ ಒಂದು ಗನ್‍ಬೆಲೆ 10 ಲಕ್ಷ ರೂ. ಆಗಬಹುದು ಎಂದು ಅಂದಾಜಿಸಲಾಗಿದೆ.

  • ಚಿಕನ್ ಪ್ರಿಯರೇ, ನೀವು ಕೋಳಿ ಮಾಂಸ ತಿನ್ನೋ ಮೊದಲು ಈ ಸ್ಟೋರಿ ಓದಿ

    ಚಿಕನ್ ಪ್ರಿಯರೇ, ನೀವು ಕೋಳಿ ಮಾಂಸ ತಿನ್ನೋ ಮೊದಲು ಈ ಸ್ಟೋರಿ ಓದಿ

    ನವದೆಹಲಿ: ಚಿಕನ್ ಪ್ರಿಯರೇ, ನೀವು ತಿನ್ನುವ ಕೋಳಿ ಮಾಂಸ ತುಂಬಾ ಅಪಾಯಕಾರಿ ಎಂದು ಸಂಶೋಧನಾ ವರದಿಯೊಂದು ತಿಳಿಸಿದೆ.

    ಕೋಳಿಯಿಂದ ತಯಾರಿಸುವ ಬಿರಿಯಾನಿ, ಕಬಾಬ್, ಮಾಂಸ ಎಲ್ಲವು ತುಂಬಾ ಡೇಂಜರ್ ಆಗಿವೆ. ಕೋಳಿಗಳ ಬೆಳವಣಿಗೆ ಬೇಗವಾಗಬೇಕೆಂದು ಅವುಗಳಿಗೆ ಕಾಲಿಸ್ಟಿನ್ ಎಂಬ ಆ್ಯಂಟಿಬಯಾಟಿಕ್ಸ್ ಔಷಧವನ್ನು ನೀಡಲಾಗುತ್ತದೆ. ಆದ್ದರಿಂದ ಕೋಳಿ ಮಾಂಸ ಸೇವಿಸುವುದರಿಂದ ನಮ್ಮ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ವರದಿ ತಿಳಿಸಿದೆ.

    ಏನಿದು ವರದಿ?
    `ದಿ ಬ್ಯೂರೋ ಆಫ್ ಇನ್ವೆಸ್ಟಿಗೇಟಿವ್ ಜರ್ನಲಿಸಂ’ ಎಂದು ಸಂಸ್ಥೆಯೊಂದು ಭಾರತದಲ್ಲಿ ಕೋಳಿ ಉದ್ಯಮದ ಕುರಿತು ತನಿಖೆ ನಡೆಸಿ ವರದಿಯೊಂದನ್ನು ಸಿದ್ಧ ಪಡಿಸಿದೆ. ಅದರ ಪ್ರಕಾರ ಕೋಳಿಗಳು ತ್ವರಿತ ಗತಿಯಲ್ಲಿ ಬೆಳೆಯಲಿ, ಅಧಿಕ ಲಾಭ ತಂದುಕೊಡಲಿ ಎಂಬ ಉದ್ದೇಶದಿಂದ ಅವುಗಳಿ ಕಾಲಿಸ್ಟಿನ್ ಔಷಧಿ ಕೊಡಲಾಗುತ್ತದೆ.

    ಕಾಲಿಸ್ಟಿನ್ ನನ್ನು ನ್ಯುಮೋನಿಯಾ ಮತ್ತು ಇತರೆ ಸೋಂಕು ರೋಗಗಳಿಗೆ ಚಿಕಿತ್ಸೆ ಕೊಡಲು ಬಳಸುವ ಔಷಧವಾಗಿದೆ. ಬೇರೆ ಯಾವ ಔಷಧದಿಂದ ರೋಗ ಗುಣವಾಗದು ಎಂದು ತಿಳಿದು ಬಂದಾಗ ಈ ಔಷಧವನ್ನು ನೀಡುತ್ತಾರೆ. ಆದ್ದರಿಂದ ಈ ಔಷಧವನ್ನು ಕಾಯಿಲೆ ಬಂದಾಗ ಮಾತ್ರ ಉಪಯೋಗಿಸಬೇಕು. ಕೋಳಿಗಳು ವೇಗವಾಗಿ ಬೆಳೆಯಲು ಈ ಔಷಧಿ ಕೊಡುವುದರಿಂದ ಅವುಗಳನ್ನು ತಿನ್ನುವ ನಮಗೂ ಕೂಡ ಆರೋಗ್ಯದಲ್ಲಿ ತೀವ್ರ ಪರಿಣಾಮ ಬೀರುತ್ತದೆ.

    ತಜ್ಞರು ಹೇಳೋದು ಏನು?
    ಈ ಔಷಧಿಯನ್ನು ತುಂಬಾ ಗಂಭೀರವಾದ ಅನಾರೋಗ್ಯಸ್ಥರಿಗೆ ಮಾತ್ರ ಉಪಯೋಗಿಸುತ್ತಾರೆ. ಆದರೆ ಬೇರೆ ಸಂದರ್ಭದಲ್ಲಿ ಅದನ್ನು ಬಳಸಿದರೆ ಅದು ವಿಷವಾಗಿ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಆ ಔಷಧಿಯನ್ನು ದೇಶಾದ್ಯಂತ ಕೋಳಿಗಳಿಗಾಗಿ ರಫ್ತು ಮಾಡಲಾಗುತ್ತದೆ. ಅದನ್ನು ಮೊದಲು ತಡೆಗಟ್ಟಬೇಕು ಎಂದು ತಜ್ಞರು ಹೇಳಿದ್ದಾರೆ.